All posts by nagaraj11081993

Lunar Eclipse: ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ! – Kannada News | Lunar Eclipse 2026: No Restrictions at Raghavendra Swamy Mutt in Mantralayam; Darshan Allowed During Chandra Grahan

ರಾಯಚೂರು, ಮಾರ್ಚ್ 1: ವರ್ಷದ ಮೊದಲ ಚಂದ್ರಗ್ರಹಣ ಇದೇ ಮಾರ್ಚ್ 3ರಂದು ಸಂಭವಿಸಲಿದೆ. ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ ಧಾರ್ಮಿಕ ಕೇಂದ್ರಗಳು ಮತ್ತು ದೇವಸ್ಥಾನಗಳನ್ನು ಮುಚ್ಚಿ, ಧಾರ್ಮಿಕ ಕೈಂಕರ್ಯಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಆದರೆ, ಮಂತ್ರಾಲಯದ ರಾಯರ ಮಠ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಭಕ್ತರಿಗೆ ಯಾವುದೇ ನಿರ್ಬಂಧ ಅಥವಾ ನಿಷೇಧಗಳು ಇರುವುದಿಲ್ಲ ಎಂದು ತಿಳಿಸಿದೆ. ಚಂದ್ರಗ್ರಹಣದ ಸಂದರ್ಭದಲ್ಲಿಯೂ ಭಕ್ತರು ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆಯಬಹುದು. ಬೆಳಗಿನ ಸೂರ್ಯೋದಯದ ನಂತರ ಯಾವುದೇ ವಿಶೇಷ ಸೇವೆಗಳು, ರಾಯರ ಅಲಂಕಾರ ಅಥವಾ ವಿಶೇಷ ಪೂಜೆಗಳು ಇರುವುದಿಲ್ಲ. ಕೇವಲ ಜಲಾಭಿಷೇಕದ ಮೂಲಕ ರಾಯರನ್ನು ಅರ್ಪಿಸಲಾಗುತ್ತದೆ. ಭಕ್ತರು ಮಠದ ನಿಗದಿತ ಸಮಯದ ಅವಧಿಯಲ್ಲೇ ಎಂದಿನಂತೆ ರಾಯರ ದರ್ಶನ ಪಡೆಯಲು ಅವಕಾಶವಿದೆ. ಗ್ರಹಣದ ಅವಧಿಯಲ್ಲಿಯೂ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಗಿದೆ.

ಗ್ರಹಣ ಮುಗಿಯುವವರೆಗೆ ಯಾವುದೇ ಸಾಮಾನ್ಯ ಪ್ರಸಾದ ವಿತರಣೆ ಇರುವುದಿಲ್ಲ. ಬದಲಾಗಿ ತೀರ್ಥ ಪ್ರಸಾದವನ್ನು ಮಾತ್ರ ನೀಡಲಾಗುತ್ತದೆ. ಗ್ರಹಣದ ಸಂದರ್ಭದಲ್ಲಿ ವಿಶೇಷ ಹೋಮಗಳನ್ನು ಸಹ ಆಯೋಜಿಸಲಾಗಿದ್ದು, ಭಕ್ತರು ಅದರಲ್ಲಿ ಭಾಗವಹಿಸಬಹುದು ಎಂದು ಮಠದ ಆಡಳಿತ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಮರ್ಷಿಯಲ್ ಗ್ಯಾಸ್ ಬೆಲೆ ಸತತ ಮೂರನೇ ತಿಂಗಳು ಏರಿಕೆ; ಬೆಂಗಳೂರು ಮೊದಲಾದೆಡೆ ಹೊಸ ಎಲ್​ಪಿಜಿ ದರಗಳಿವು – Kannada News | LPG cooking gas prices revised, commercial lpg cylinder prices hiked for 4th time in 6 months

ನವದೆಹಲಿ, ಮಾರ್ಚ್ 1: ಕಮರ್ಷಿಯಲ್ ಎಲ್​ಪಿಜಿ ದರಗಳು (Commercial LPG prices) ಸತತ ಮೂರನೇ ತಿಂಗಳು ಏರಿಕೆ ಆಗಿವೆ. ಕಳೆದ ಆರು ತಿಂಗಳಲ್ಲಿ ನಾಲ್ಕನೇ ಬಾರಿ ಕಮರ್ಷಿಯಲ್ ಗ್ಯಾಸ್ ಬೆಲೆ ಹೆಚ್ಚಳ ಆಗಿದೆ. ತಿಂಗಳ ಮೊದಲ ದಿನವಾದ ಮಾರ್ಚ್ 1ರಂದು ಭಾರತದಲ್ಲಿ 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ದರಗಳು 28ರಿಂದ 31ರೂವರೆಗೆ ಏರಿವೆ. ದೆಹಲಿ, ಮುಂಬೈ ಮೊದಲಾದೆಡೆ ಇದರ ಬೆಲೆ 28 ರೂ ಹೆಚ್ಚಿದರೆ, ಕೋಲ್ಕತಾದಲ್ಲಿ 31 ರೂ ಹೆಚ್ಚಿದೆ. 47.5 ಕಿಲೋ ಕಮರ್ಷಿಯಲ್ ಎಲ್​ಪಿಜಿ ದರಗಳೂ ಕೂಡ ಭರ್ಜರಿ ಏರಿವೆ. ಆದರೆ, 14.2 ಕಿಲೋ ಹಾಗೂ 5 ಕಿಲೋ ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಯಥಾಸ್ಥಿತಿ ಮುಂದುವರಿದೆ.

ಬೆಂಗಳೂರಿನಲ್ಲಿ ಎಲ್​ಪಿಜಿ ದರಗಳು (ಮಾರ್ಚ್ 1ಕ್ಕೆ)

  • 14.2 ಕಿಲೋ ಗೃಹಬಳಕೆ ಎಲ್​ಪಿಜಿ ಸಿಲಿಂಡರ್: 855.50 ರೂ
  • 5 ಕಿಲೋ ಗೃಹಬಳಕೆ ಎಲ್​ಪಿಜಿ ಸಿಲಿಂಡರ್: 318.50 ರೂ
  • 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್: 1,842.50 ರೂ (28.50 ರೂ ಏರಿಕೆ)
  • 47.5 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್:

ಇದನ್ನೂ ಓದಿ: Gold Rate Today: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರಿನಲ್ಲಿ 19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಜನವರಿಯಲ್ಲಿ 110.50 ರೂ, ಫೆಬ್ರುವರಿಯಲ್ಲಿ 49.50 ರೂ ಏರಿತ್ತು. 47.5 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ ಫೆಬ್ರುವರಿಯಲ್ಲಿ 125 ರೂ ನಷ್ಟು ಏರಿ 4,532 ರೂ ಆಗಿತ್ತು. ಮಾರ್ಚ್ ತಿಂಗಳಲ್ಲಿ ಈ ಬೃಹತ್ ಸಿಲಿಂಡರ್ ಬೆಲೆ 4,600 ರೂ ದಾಟಿ ಹೋಗಿದೆ.

2025ರ ಏಪ್ರಿಲ್ 1ರಂದು 14.2 ಕಿಲೋ ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆ 50 ರೂ ಏರಿಕೆ ಆಗಿತ್ತು. ಅದಾದ ಬಳಿಕ ಮತ್ತೆಂದೂ ಇದರ ಬೆಲೆ ಏರಿಕೆ ಆಗಿಲ್ಲ. ಇನ್ನೊಂದೆಡೆ, ಈ ಹಣಕಾಸು ವರ್ಷದಲ್ಲಿ ಮೊದಲ ಆರು ತಿಂಗಳು ಸತತವಾಗಿ ಇಳಿಕೆ ಕಂಡಿದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆಗಳು ಕಳೆದ ಆರು ತಿಂಗಳಲ್ಲಿ ನಾಲ್ಕು ಬಾರಿ ಹೆಚ್ಚಳ ಕಂಡಿವೆ.

ಇದನ್ನೂ ಓದಿ: ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಭಾರತಕ್ಕೆ ಶಾಕ್​​: ಕಚ್ಚಾ ತೈಲ ದರ ಏರಿಕೆ ಸಾಧ್ಯತೆ?

ಈಗ ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧ ಶುರುವಾಗಿರುವುದರಿಂದ ಮುಂದಿನ ದಿನಗಳಲ್ಲಿ ಪೆಟ್ರೋಲ್, ಎಲ್​ಪಿಜಿ ಸೇರಿದಂತೆ ಪೆಟ್ರೋಲಿಯಂ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆ ಆಗುವ ಸಂಭವ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಟ ದುಷ್ಯಂತ್ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ ಸಿದ್ದರಾಮಯ್ಯ – Kannada News | CM Siddaramaiah attends Gatha Vaibhava actor Dushyanth wedding reception

ಇತ್ತೀಚೆಗೆ ಹಸೆಮಣೆ ಏರಿರುವ ನಟ ದುಷ್ಯಂತ್ ಮತ್ತು ರಚನಾ ಅವರು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದಾರೆ. ಸಿನಿಮಾ, ರಾಜಕೀಯ ಮುಂತಾದ ಕ್ಷೇತ್ರಗಳ ಅನೇಕ ಗಣ್ಯರು ಆಗಮಿಸಿದ್ದಾರೆ.

Source link

ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ – Kannada News | Alyssa Healy achieved this historic feat ODI Cricket

ಭಾರತ ಮಹಿಳಾ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ ಭರ್ಜರಿ ಶತಕ ಸಿಡಿಸಿದ್ದಾರೆ. ವಿಶೇಷ ಎಂದರೆ ಇದು ಹೀಲಿ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ. ಅಂದರೆ ವಿದಾಯ ಪಂದ್ಯದಲ್ಲಿ ಮೂರಂಕಿ ಮೊತ್ತಗಳಿಸುವ ಮೂಲಕ ಅಲಿಸಾ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಹೋಬರ್ಟ್​ನ ಓವಲ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಆರಂಭಿಕಗಳಾಗಿ ಕಣಕ್ಕಿಳಿದ ಅಲಿಸಾ ಹೀಲಿ 98 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 27 ಫೋರ್​ಗಳೊಂದಿಗೆ ಬರೋಬ್ಬರಿ 158 ರನ್​ ಸಿಡಿಸಿದ್ದಾರೆ.

ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ವಿದಾಯ ಪಂದ್ಯದಲ್ಲಿ ಗರಿಷ್ಠ ಸ್ಕೋರ್​ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಅಲಿಸಾ ಹೀಲಿ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಅಲಿಸಾ ಹೀಲಿ ಅವರ 158 ರನ್​ಗಳ ಕೊಡುಗೆಯೊಂದಿಗೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 50 ಓವರ್​ಗಳಲ್ಲಿ ಬರೋಬ್ಬರಿ 407 ರನ್​ ಕಲೆಹಾಕಿದೆ.

 

 

 

Source link

Lunar Eclipse: ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Chief Priest Dikshith on Lunar Eclipse: Gavi Gangadhareshwara Temples Rituals and Astrological Impact

ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದೆ. ಇದನ್ನು ಬ್ಲಡ್ ಮೂನ್ ಎಂದೂ ಕರೆಯಲಾಗುತ್ತದೆ. ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಅವರು ಈ ಚಂದ್ರಗ್ರಹಣದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವದ ಬಗ್ಗೆ ಮಾತನಾಡಿದ್ದಾರೆ.

ಗ್ರಹಣವು ಕೇವಲ 15-16 ನಿಮಿಷಗಳ ಕಾಲ ಗೋಚರಿಸಿದರೂ, ಅದರ ಪ್ರಭಾವವು ಇರುತ್ತದೆ. ಇದು ಸಿಂಹ ರಾಶಿಯ ಮೇಲೆ ನಿರ್ದಿಷ್ಟವಾಗಿ ಪ್ರಭಾವ ಬೀರಲಿದೆ, ಮತ್ತು ಎಲ್ಲ 12 ರಾಶಿಗಳು ಹಾಗೂ 27 ನಕ್ಷತ್ರಗಳ ಮೇಲೂ ಪರಿಣಾಮ ಬೀರುತ್ತದೆ. ಈ ದೋಷಗಳನ್ನು ನಿವಾರಿಸಲು ಬುಧವಾರ ಬೆಳಿಗ್ಗೆ ಈಶ್ವರನ ದೇವಾಲಯಕ್ಕೆ ಹೋಗಿ ಅಕ್ಕಿ, ಉದ್ದು ಮತ್ತು ಎಣ್ಣೆಯನ್ನು ಅರ್ಪಿಸಲು ದೀಕ್ಷಿತ್ ಸಲಹೆ ನೀಡಿದ್ದಾರೆ.

 

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Source link

ರಂಭಾಪುರಿ ಪೀಠಕ್ಕೆ ಭೇಟಿ ವೇಳೆ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ: ಡಿಕೆಶಿ ಮಾರ್ಮಿಕ ಮಾತು – Kannada News | Next CM DK Shivakumar Slogans Echo at Rambhapuri Peetha; Deputy CM Reacts, Says Work is Ours, Result is God’s

ಚಿಕ್ಕಮಗಳೂರು, ಮಾರ್ಚ್ 1: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಭಾನುವಾರ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ (Rambhapuri Peetha) ಭೇಟಿ ನೀಡಿ ಜಗದ್ಗುರು ರೇಣುಕಾಚಾರ್ಯ, ವೀರಭದ್ರೇಶ್ವರನ ದರ್ಶನ ಪಡೆದರು. ಇದೇ ವೇಳೆ, ಕರ್ನಾಟಕ ರಾಜಕೀಯ ಹಾಗೂ ಇರಾನ್, ಇಸ್ರೇಲ್ ಸಂಘರ್ಷದ ಬಗ್ಗೆಯೂ ಹಲವು ಮಹತ್ವದ ವಿಚಾರಗಳನ್ನು ಉಲ್ಲೇಖಿಸಿದರು. ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ, ರಂಭಾಪುರಿ ಪೀಠದ ಹೆಲಿಪ್ಯಾಡ್‌ನಲ್ಲಿ ಡಿಕೆ ಶಿವಕುಮಾರ್ ಆಗಮಿಸುತ್ತಿದ್ದಂತೆಯೇ ಕೆಲ ಬೆಂಬಲಿಗರು ‘‘ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ’’ ಎಂದು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಜನರನ್ನು ಹೆಲಿಕಾಪ್ಟರ್‌ ಸಮೀಪಕ್ಕೆ ಬಿಡಲಾಗಿದ್ದಕ್ಕೆ ಉಪ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿ, ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರ ವಿರುದ್ಧ ಗರಂ ಆದರು. ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಶ್ರಮ ನಮ್ಮದು, ಫಲ ದೇವರದ್ದು: ಡಿಕೆಶಿ ಮಾರ್ಮಿಕ ಮಾತು

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಯಾವಾಗಲೂ ಶ್ರಮ ನಮ್ಮದು, ಫಲ ದೇವರದ್ದು’ ಎಂದು ಮಾರ್ಮಿಕವಾಗಿ ಉತ್ತರಿಸಿದರು. ನಿಮ್ಮ ಶ್ರಮಕ್ಕೆ ಫಲ ಸಿಗುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಇಲ್ಲಿಗೆ ಬಂದಿದ್ದೇನೆ ಅಲ್ವಾ, ಮಾತನಾಡೋಣ’ ಎಂದು ಹೇಳಿ ನಕ್ಕರು.

ಅಂತರರಾಷ್ಟ್ರೀಯ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಇಸ್ರೇಲ್ ಹಾಗೂ ಅಮೆರಿಕಾ ಜಂಟಿ ದಾಳಿಯಿಂದ ಇರಾನ್‌ನಲ್ಲಿ ಉದ್ಭವಿಸಿರುವ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದರು. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಬೇಕು ಎಂಬುದು ರಂಭಾಪುರಿ ಶ್ರೀಗಳ ಆಶಯ ಎಂದು ಉಲ್ಲೇಖಿಸಿದರು. ಯುದ್ಧದಿಂದ ನಿರಪರಾಧಿಗಳು ಬಲಿಯಾಗುತ್ತಿರುವುದು ದುಃಖಕರ. ಶಾಲಾ ಮಕ್ಕಳೂ ಸಾವನ್ನಪ್ಪಿರುವ ಘಟನೆಗಳು ನೋವು ತಂದಿವೆ ಎಂದು ಹೇಳಿದರು.

ಮಧ್ಯಪ್ರಾಚ್ಯದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ಬದ್ಧ

ಇರಾನ್, ದುಬೈ ಸೇರಿದಂತೆ ಹಲವು ಕಡೆ ಕನ್ನಡಿಗರು ಸಿಲುಕಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಸಿಲುಕಿರುವವರನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಭೋಜೇಗೌಡ ಹಾಗೂ ಎ.ಸಿ. ಶ್ರೀನಿವಾಸ ಸೇರಿದಂತೆ ಅನೇಕರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದೇನೆ. ಕನ್ನಡಿಗರು ಆತಂಕಪಡಬೇಕಿಲ್ಲ. ನಾನು ಹಾಗೂ ಮುಖ್ಯಮಂತ್ರಿ ಸಂಪರ್ಕದಲ್ಲಿದ್ದೇವೆ ಎಂದು ಭರವಸೆ ನೀಡಿದರು.

ವಿದೇಶಾಂಗ ಇಲಾಖೆಯಿಂದ ಅಧಿಕೃತ ಮಾಹಿತಿ ಬಂದ ನಂತರವೇ ಕ್ರಮ ಕೈಗೊಳ್ಳಲು ಸಾಧ್ಯ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಹೆಲ್ಪ್‌ಲೈನ್ ಆರಂಭಿಸುವುದಕ್ಕೆ ನಿಯಮಾತ್ಮಕ ಅಡಚಣೆಗಳಿವೆ. ಆದರೂ ರಾಜ್ಯ ಸರ್ಕಾರದಿಂದ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!

ಕನ್ನಡ ಸಂಘಟನೆಗಳು ಕೂಡ ವಿದೇಶದಲ್ಲಿರುವವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಎಲ್ಲರೂ ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:04 pm, Sun, 1 March 26

Source link

‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು – Kannada News | Dhanveer Gowda talks about Hayagrriva movie release problem

ದರ್ಶನ್ ಜೊತೆ ಆಪ್ತವಾಗಿರುವ ನಟ ಧನ್ವೀರ್ ಗೌಡ ಅಭಿನಯದ ‘ಹಯಗ್ರೀವ’ (Hayagrriva) ಸಿನಿಮಾದ ಬಿಡುಗಡೆ ವೇಳೆ ತೊಂದರೆ ಉಂಟಾಯಿತು. ಆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಫೆಬ್ರವರಿ 27ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಸಂಜೆ ತನಕ ರಿಲೀಸ್ ಆಗಲೇ ಇಲ್ಲ. ಸಂಜೆ ಬಳಿಕ ಬಿಡುಗಡೆಗೆ ಅವಕಾಶ ಸಿಕ್ಕಿತು. ಆ ಬಗ್ಗೆ ಧನ್ವೀರ್ ಗೌಡ ಮಾತನಾಡಿದ್ದಾರೆ. ‘ಅಂಥವರನ್ನು ವಿರೋಧಿಗಳು ಅಂತ ಹೇಳಬಾರದು. ನಮಗೆ ಸಿಕ್ಕಾಪಟ್ಟೆ ಪ್ರೀತಿ ತೋರಿಸುವವರು. ನನ್ನ ಮೇಲೆ ಅವರಿಗೆ ಬಹಳ ಲವ್ ಆಗಿದೆ. ಅವರ ರೀತಿಯೇ ನಾವು ಕೂಡ ಪ್ರೀತಿ ತೋರಿಸುವ ಕಾಲ ಬಂದಾಗ ಆ ಭಗವಂತ ತೋರಿಸುತ್ತಾನೆ ಅಂತ ಕಾಯುತ್ತಿದ್ದೇವೆ’ ಎಂದು ಧನ್ವೀರ್ ಗೌಡ (Dhanveer Gowda) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು! – Kannada News | New Mahindra Electric Cars in DK Shivakumar House Bangalore! DCM Recently Bought Lexus LM 350h

ಬೆಂಗಳೂರು, ಮಾರ್ಚ್ 1: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುಟುಂಬ ಎಲೆಕ್ಟ್ರಿಕ್ ಕಾರು ಖರೀದಿಗೆ ಮುಂದಾಗಿದ್ದು, ಮಹೀಂದ್ರಾ ಕಂಪನಿಯ 3 ಕಾರುಗಳನ್ನು ಕಂಪನಿಯವರು ಬೆಂಗಳೂರಿನ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ನಿವಾಸಕ್ಕೆ ಕಳುಹಿಸಿಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಕಾರುಗಳ ವೀಕ್ಷಣೆ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಡಿಕೆ ಶಿವಕುಮಾರ್ 2 ಕೋಟಿ ರೂಪಾಯಿಯ ಹೊಸ Lexus LM 350h 7 ಸೀಟರ್ ಕಾರು ಖರೀದಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಟೋದಿಂದ ಬಿದ್ದ ವಿದ್ಯಾರ್ಥಿ ಮೇಲೆ ಹರಿದ ಬಸ್; ಯುವಕ ಸ್ಥಳದಲ್ಲೇ ಸಾವು! – Kannada News | Raichur Student Basavaraj Dies in Horrific Auto Bus Accident on Station Road

ಆಟೋದಿಂದ ಬಿದ್ದ ವಿದ್ಯಾರ್ಥಿ ಮೇಲೆ ಹರಿದ ಬಸ್; ಯುವಕ ಸ್ಥಳದಲ್ಲೇ ಸಾವು!

ರಾಯಚೂರು, ಮಾರ್ಚ್ 01: ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Accident) ಬಡ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ವೇಗದಲ್ಲಿದ್ದ ಆಟೋದಿಂದ ಕೆಳಕ್ಕೆ ಬಿದ್ದ ವಿದ್ಯಾರ್ಥಿ ಮೇಲೆ ಬಸ್ ಹರಿದಿದ್ದು, ಬಸವರಾಜ್ (21) ಎಂಬ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಭಯಾನಕ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೇಟರಿಂಗ್ ಕೆಲಸಕ್ಕೆ ಹೋಗುವಾಗ ಘಟನೆ

ಬಸವರಾಜ್ ಆಶಾಪುರ ರಸ್ತೆಯಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಸ್ನೇಹಿತರೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ. ಮುಖ್ಯರಸ್ತೆಯಲ್ಲಿ ನಿಂತಿದ್ದ ಮತ್ತೊಂದು ಆಟೋವನ್ನು ತಪ್ಪಿಸಲು ಚಾಲಕ ಏಕಾಏಕಿ ಕಟ್ ಹೊಡೆದ ವೇಳೆ ನಿಯಂತ್ರಣ ಕಳೆದುಕೊಂಡ ವಿದ್ಯಾರ್ಥಿ ಆಟೋದಿಂದ ಕೆಳಕ್ಕೆ ಬಿದ್ದಿದ್ದಾನೆ. ಇದೇ ಸಮಯದಲ್ಲಿ ಹಿಂಬದಿಯಿಂದ ಬರುತ್ತಿದ್ದ ಬಸ್ ಅವನ ಮೇಲೆ ಹರಿದಿದೆ. ಬಸ್ ಹರಿದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಬಸವರಾಜ್ ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸಾರಿಗೆ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಮೃತ ಬಸವರಾಜ್ ಎಸ್‌ಟಿ ಹಾಸ್ಟೆಲ್‌ನಲ್ಲಿ ವಾಸವಿದ್ದು, ಮನೆಯ ಕಡುಬಡತನದ ನಡುವೆಯೂ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದನು. ಖಾಲಿ ಸಮಯದಲ್ಲಿ ಕೇಟರಿಂಗ್ ಕೆಲಸ ಮಾಡಿ ದಿನಗೂಲಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೇಟರಿಂಗ್ ಕೆಲಸಕ್ಕೆ ತೆರಳುವಾಗ ಈ ದುರಂತ ಸಂಭವಿಸಿದೆ. ಪರಿಹಾರ ನೀಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Iran-America Conflict: ನಿಜವಾಗಿಯೂ ಅಮೆರಿಕ ಹೇಳಿದ್ದಕ್ಕೆ ಇರಾನ್ ಒಪ್ಪುತ್ತಿರಲಿಲ್ಲವೇ? ಅದಕ್ಕೆ ಈ ಯುದ್ಧ ಪ್ರಾರಂಭವಾಯಿತೇ? – Kannada News | Iran US Conflict: Inside the Failed Nuclear Negotiations and Escalating War

ಟೆಹ್ರಾನ್, ಮಾರ್ಚ್​ 01: ಇಸ್ರೇಲ್(Israel) ಹಾಗೂ ಅಮೆರಿಕವು ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿ, ಅದರ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಕೊಂದಿವೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆದ ಬಳಿಕ ಒಮಾನ್​​ನ ಸುಲ್ತಾನೇಟ್​​ನ ವಿದೇಶಾಂಗ ಸಚಿವಾಲಯದ ರಾಜತಾಂತ್ರಿಕ ಸಹಾಯಕರಾಗಿರುವ ಪೀಟರ್ ಎಕ್ಸ್​ ಖಾತೆಯಲ್ಲಿ ದಾಳಿಯ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಕುರಿತು ಮಾಹಿತಿ ಇಲ್ಲಿದೆ.

‘‘ ನನ್ನ ಕೆಲಸ ಲಾಜಿಸ್ಟಿಕ್ಸ್​, ಪರಿಸ್ಪರ ಕುಳಿತು ಮಾತನಾಡಲು ಸಾಧ್ಯವಾಗದ ಎರಡು ದೇಶಗಳು ಮಾತನಾಡಬೇಕಾದರೆ, ಕೊಠಡಿಗಳನ್ನು ಬುಕ್ ಮಾಡುವುದು ನನ್ನ ಕೆಲಸ. ಬ್ರೀಫಿಂಗ್ ದಾಖಲೆಗಳನ್ನು ಸಿದ್ಧಪಡಿಸುವುದು, ನೀರಿನ ಲೋಟಗಳನ್ನು ಸರಿಯಾದ ಅಂತರದಲ್ಲಿ ಇರಿಸುವುದು ನನ್ನ ಕೆಲಸ’’ ಎಂದು ಮಾತು ಆರಂಭಿಸಿದ್ದಾರೆ.

ಜನವರಿಯಿಂದ ಇರಾನ್​ನ ಅಣು ಕಾರ್ಯಕ್ರಮದ ಕುರಿತು ಅಮೆರಿಕ ಹಾಗೂ ಇರಾನ್ ನಡುವೆ ಪರೋಕ್ಷವಾದ ಮಾತುಕತೆಗೆ ಒಮಾನ್ ಮಧ್ಯವರ್ತಿಯಾಗಿತ್ತು. ಈ ಮಾತುಕತೆಗಳು ಮಸ್ಕಟ್ ಮತ್ತು ಜಿನೀವಾದಲ್ಲಿ ನಡೆದವು. ಅಮೆರಿಕನ್ನರು ಒಂದು ಕೊಠಡಿಯಲ್ಲಿ ಕುಳಿತಿದ್ದರು. ಇರಾನಿಯನ್ನರು ಇನ್ನೊಂದು ಕೊಠಡಿಯಲ್ಲಿ. ನಾನು ಅವರ ನಡುವೆ ನಡೆದು ಹೋಗುತ್ತಿದ್ದೆಮಾತುಕತೆ ದಿನಗಳಲ್ಲಿ ನಾನು ಸರಾಸರಿ ಹದಿನಾಲ್ಕು ಸಾವಿರ ಹೆಜ್ಜೆ ನಡೆದಿದ್ದೇನೆ ಎಂದು ನನ್ನ ಫಿಟ್‌ಬಿಟ್ ಹೇಳುತ್ತದೆ ಎಂದು ಪೀಟರ್ ಬರೆದಿದ್ದಾರೆ.

ರಾಯಲ್ ಓಪೆರಾ ಹೌಸ್‌ ಸಭಾಂಗಣದ ಎರಡು ಕೊಠಡಿಗಳ ನಡುವೆ ಇರುವ ಹಾಲ್‌ವೇ ನಲವತ್ತೇಳು ಮೀಟರ್ ಉದ್ದ, ಫೆಬ್ರವರಿಯಲ್ಲಿ ನಾನು ಅದನ್ನು ಎರಡು ನೂರು ಹನ್ನೆರಡು ಬಾರಿ ನಡೆದೆ. ಇದು ನನ್ನ ಹೃದಯ ಆರೋಗ್ಯಕ್ಕೆ ಒಳ್ಳೆಯದು. ಆದರೆ ನನ್ನ ಮೊಣಕಾಲುಗಳಿಗೆ ಕಡಿಮೆ ಅಷ್ಟು ಒಳ್ಳೆಯದಲ್ಲ, ಎರಡೂ ಕಡೆ ಶಾಂತಿ ಕಾಪಾಡಲು ಇದು ಅಗತ್ಯವಾಗಿತ್ತು ಎಂದಿದ್ದಾರೆ.

ಮತ್ತಷ್ಟು ಓದಿ: ಅಲಿ ಖಮೇನಿ ಕಥೆ ಮುಗಿತಾ?: ಇಸ್ರೇಲ್ ಮಾಧ್ಯಮಗಳ ಸಾವಿನ ವರದಿ ಬೆನ್ನಲ್ಲೇ ಇರಾನ್ ಸಚಿವರು ಹೇಳಿದ್ದೇನು?

ಫೆಬ್ರವರಿಯಲ್ಲಿ ಏನೋ ಸಾಧಿಸಿದ ಖುಷಿ ಇತ್ತು
ಇರಾನ್ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಶೂನ್ಯಕ್ಕೆ ಇಳಿಸಲು ಒಪ್ಪಿಗೆ ನೀಡಿತು, ಅದು ಕಡಿಮೆ ಸಂಗ್ರಹವಾಗಿರಲಿಲ್ಲ, ಶೂನ್ಯವೇ ಆಗಿತ್ತು. ಈಗಿರುವ ಸಂಗ್ರಹವನ್ನು ಕನಿಷ್ಠ ಮಟ್ಟಕ್ಕೆ ಮಿಶ್ರಣ ಮಾಡಿ, ಮರಳಿ ಬಳಸಲಾಗದ ಇಂಧನವಾಗಿ ಪರಿವರ್ತಿಸಲು ಒಪ್ಪಿತು.ಅಣುಬಾಂಬ್‌ಗಾಗಿ ಅಣುಪದಾರ್ಥವನ್ನು ಬಳಕೆ ಮಾಡುವುದಿಲ್ಲ ಎಂದೂ ಹೇಳಿತ್ತು.ನಾನು ಏಳು ವರ್ಷಗಳಿಂದ ರಾಜತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಒಂದು ದೇಶ ಇಷ್ಟು ಬೇಗ ಇಷ್ಟು ವಿಷಯಗಳಿಗೆ ಒಪ್ಪಿದುದನ್ನು ನಾನು ನೋಡಿಲ್ಲ ಎಂದು ಪೀಟರ್ ಹೇಳಿಕೊಂಡಿದ್ದಾರೆ.

14 ಪುಟಗಳ ಕರಡು ಒಪ್ಪಂದವನ್ನು ಅಂತಿಮಗೊಳಿಸಲಾಯಿತು ಮತ್ತು ಜಿನೀವಾದಲ್ಲಿ ಸಹಿ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಗಂಟೆಗಳ ನಂತರ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆಗಳ ವೇಗದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

ಎಕ್ಸ್​ ಪೋಸ್ಟ್​

ಫೆಬ್ರವರಿ 28 ರಂದು, ಪರಿಸ್ಥಿತಿ ನಾಟಕೀಯವಾಗಿ ಬದಲಾಯಿತು. ಇಸ್ರೇಲ್ ಜೊತೆ ಸಮನ್ವಯದೊಂದಿಗೆ ಇರಾನ್‌ನಲ್ಲಿ ಅಮೆರಿಕದ ಪ್ರಮುಖ ಯುದ್ಧ ಕಾರ್ಯಾಚರಣೆಗಳ ಆರಂಭವನ್ನು ಅಧ್ಯಕ್ಷ ಟ್ರಂಪ್ ಘೋಷಿಸಿದರು. ಅನೇಕ ನಗರಗಳಲ್ಲಿನ ಪರಮಾಣು ಸೌಲಭ್ಯಗಳು ಮತ್ತು ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳು ನಡೆದವು. ಮಾತುಕತೆಗಳ ಸಮಯದಲ್ಲಿ ರಿಯಾಯಿತಿಗಳನ್ನು ನೀಡಲಾಗಿತ್ತು ಎಂದು ವರದಿಯ ಹೊರತಾಗಿಯೂ, ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ನಿಲ್ಲಿಸುವ ಕರೆಗಳನ್ನು ತಿರಸ್ಕರಿಸಿದೆ ಎಂದು ಅಮೆರಿಕ ಹೇಳಿದೆ.

ಇರಾನ್‌ನ ಇಂಟರ್ನೆಟ್ ಸಂಪರ್ಕವು ದೇಶಾದ್ಯಂತ ಶೇ.4 ಕ್ಕೆ ಇಳಿಯಿತು, ಇಸ್ರೇಲ್ ತನ್ನ ವಾಯುಪ್ರದೇಶ ಮತ್ತು ಶಾಲೆಗಳನ್ನು ಮುಚ್ಚಿತು,ಇರಾನ್ ಕೊಲ್ಲಿಯಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಪ್ರತೀಕಾರದ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿತು.ಪ್ರಾದೇಶಿಕ ಉದ್ವಿಗ್ನತೆ ತೀವ್ರವಾಗಿ ಹೆಚ್ಚಾಯಿತು ಎಂದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link