Lunar Eclipse: ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ! – Kannada News | Lunar Eclipse 2026: No Restrictions at Raghavendra Swamy Mutt in Mantralayam; Darshan Allowed During Chandra Grahan
ರಾಯಚೂರು, ಮಾರ್ಚ್ 1: ವರ್ಷದ ಮೊದಲ ಚಂದ್ರಗ್ರಹಣ ಇದೇ ಮಾರ್ಚ್ 3ರಂದು ಸಂಭವಿಸಲಿದೆ. ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ ಧಾರ್ಮಿಕ ಕೇಂದ್ರಗಳು ಮತ್ತು ದೇವಸ್ಥಾನಗಳನ್ನು ಮುಚ್ಚಿ, ಧಾರ್ಮಿಕ ಕೈಂಕರ್ಯಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಆದರೆ, ಮಂತ್ರಾಲಯದ ರಾಯರ ಮಠ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಭಕ್ತರಿಗೆ ಯಾವುದೇ ನಿರ್ಬಂಧ ಅಥವಾ ನಿಷೇಧಗಳು ಇರುವುದಿಲ್ಲ ಎಂದು ತಿಳಿಸಿದೆ. ಚಂದ್ರಗ್ರಹಣದ ಸಂದರ್ಭದಲ್ಲಿಯೂ ಭಕ್ತರು ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆಯಬಹುದು. ಬೆಳಗಿನ ಸೂರ್ಯೋದಯದ ನಂತರ ಯಾವುದೇ ವಿಶೇಷ ಸೇವೆಗಳು, ರಾಯರ…