All posts by nagaraj11081993

ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್ ಪತ್ತೆ: ಮುಂದೇನಾಯ್ತು? – Kannada News | Gun Found In Bengaluru sheep selling merchant, Two Arrested By CCB

ಬೆಂಗಳೂರು, (ಫೆಬ್ರವರಿ 27): ಕುರಿ ವ್ಯಾಪಾರ (sheep selling merchant) ಮಾಡಿಕೊಂಡಿದ್ದ ವ್ಯಕ್ತಿ ಬಳಿ ಪಿಸ್ತೂಲ್ ಪತ್ತೆಯಾಗಿದೆ. ಕುರಿ ವ್ಯಾಪಾರ ಮಾಡಿಕೊಂಡಿದ್ದ ಬೆಂಗಳೂರಿನ (Bengaluru) ಸೈಯದ್ ಮಸೂದ್ ಎನ್ನುವಾತ ಪಿಸ್ತೂಲ್ ಇಟ್ಟುಕೊಂಡಿದ್ದ. ಈ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲಿಸಿ ಸೈಯದ್ ಮಸೂದ್ ಹಾಗೂ ಜಾವೇದ್ ಆಲಂ ಎನ್ನುವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಭೋಪಾಲ್ ಮೂಲದ ವ್ಯಕ್ತಿಯಿಂದ ಪಿಸ್ತೂಲ್ ತರಿಸಿಕೊಂಡಿರುವುದಾಗಿ ಮಸೂದ್ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಸಿಸಿಬಿ, ಬಂಧಿತರಿಂದ 0.32 MM ಪಿಸ್ತೂಲ್, 50 ಜೀವಂತ ಗುಂಡುಗಳು ವಶಕ್ಕೆ ಪಡೆದುಕೊಂಡಿದ್ದು, ಆದ್ರೆ, ಮಸೂದ್ ಯಾವ ಕಾರಣಕ್ಕೆ ಗನ್ ತರಿಸಿಕೊಂಡಿದ್ದ ಎಂಬ ಬಗ್ಗೆ ತನಿಖೆ ಮುಂದುವರೆಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಬಕಾರಿ ನೀತಿ ಪ್ರಕರಣ; ಕೇಜ್ರಿವಾಲ್, ಸಿಸೋಡಿಯಾ ವಿಚಾರದಲ್ಲಿ ಕಾನೂನು ಏನು ಹೇಳುತ್ತದೆ? – Kannada News | Arvind Kejriwal Sisodia and others discharged in liquor policy case How it is different from acquittal

ನವದೆಹಲಿ, ಫೆಬ್ರವರಿ 27: ನವದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಮನೀಶ್ ಸಿಸೋಡಿಯಾ ದೋಷಮುಕ್ತರೆಂದು ಘೋಷಿಸಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ ಹೆಸರಿಸಿದ್ದ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ತೆಲಂಗಾಣದ ರಾಜಕಾರಣಿ ಕೆ. ಕವಿತಾ ಮತ್ತು ಎಎಪಿ ನಾಯಕರಾದ ವಿಜಯ್ ನಾಯರ್ ಸೇರಿದಂತೆ ಎಲ್ಲಾ 23 ಜನರನ್ನು ವಿಶೇಷ ನ್ಯಾಯಾಧೀಶ ಜಿತೇಂದರ್ ಸಿಂಗ್ ದೋಷಮುಕ್ತಗೊಳಿಸಿದ್ದಾರೆ.

ಅಬಕಾರಿ ನೀತಿಯ ಹಿಂದೆ ಯಾವುದೇ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶ ಇರಲಿಲ್ಲ. ಸಿಬಿಐ ಸಾಕ್ಷಿಗಳಿಗಿಂತ ಊಹೆಯ ಆಧಾರದ ಮೇಲೆ ಅವರ ಮೇಲೆ ಪಿತೂರಿಯನ್ನು ನಿರ್ಮಿಸಲು ಪ್ರಯತ್ನಿಸಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಇತರರನ್ನು ಸಂಪೂರ್ಣವಾಗಿ ‘ಮುಕ್ತಗೊಳಿಸಲಾಗಿದೆ’ ಎಂಬ ಪದ ಬಳಸಿದೆ. ಆದರೆ, ಅವರನ್ನು “ಖುಲಾಸೆಗೊಳಿಸಲಾಗಿಲ್ಲ” ಎಂಬುದು ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ: Delhi Excise Policy Case: ದೆಹಲಿ ಮದ್ಯ ನೀತಿ ಪ್ರಕರಣ, ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಖುಲಾಸೆ

ಡಿಸ್ಚಾರ್ಜ್ಡ್​ ಅಥವಾ ಮುಕ್ತಗೊಳಿಸಲಾಗಿದೆ ಎಂದರೆ ಕೇವಲ ಅಪರಾಧ ಅಥವಾ ಅವರ ನಿರಪರಾಧದ ಮೇಲಿನ ತೀರ್ಪನ್ನು ಸೂಚಿಸುವುದಿಲ್ಲ. ಅದು ವಿಚಾರಣೆಯ ಸಂಪೂರ್ಣ ಮುಕ್ತಾಯವಾಗಿದೆ ಎಂದರ್ಥ. ಈ ಬಗ್ಗೆ ವಿವರಿಸಿರುವ ಸುಪ್ರೀಂ ಕೋರ್ಟ್ ವಕೀಲ ಅನಸ್ ತನ್ವೀರ್, “ಪ್ರಾಥಮಿಕ ಪ್ರಕರಣವನ್ನು ನಿರೂಪಿಸಲು ಸಾಕಷ್ಟು ಪುರಾವೆಗಳಿಲ್ಲದ ಕಾರಣದಿಂದ ಆರೋಪಗಳನ್ನು ಹೊತ್ತಿರುವ ವ್ಯಕ್ತಿಯನ್ನು ಬಿಡುಗಡೆ ಮಾಡಬಹುದು” ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಯಾವುದಾದರೂ ಒಂದು ಪ್ರಕರಣ ದಾಖಲಿಸುವಾಗ 4 ಹಂತಗಳಿರುತ್ತವೆ. ಮೊದಲನೆಯದು ಎಫ್‌ಐಆರ್ ಅಥವಾ ದೂರು ದಾಖಲಿಸುವುದು, ಪೊಲೀಸ್ ಅಥವಾ ತನಿಖಾ ಸಂಸ್ಥೆಯು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸುವುದು, ಆರೋಪಗಳು ಸತ್ಯವಾಗಿದೆಯೇ ಎಂದು ನಿರ್ಧರಿಸಲು ನ್ಯಾಯಾಲಯವು ಚಾರ್ಜ್‌ಶೀಟ್ ಪರಿಶೀಲಿಸುತ್ತದೆ, ವಿಚಾರಣೆಗೆ ಆರೋಪಗಳನ್ನು ರೂಪಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತದೆ. ನಂತರ ವಿಚಾರಣೆಯನ್ನು ನಡೆಸಲಾಗುತ್ತದೆ. ಈ ವಿಚಾರಣೆ ಮುಗಿದ ಬಳಿಕ ಶಿಕ್ಷೆ ಅಥವಾ ಖುಲಾಸೆಯ ತೀರ್ಪು ಪ್ರಕಟವಾಗುತ್ತದೆ.

ಇದನ್ನೂ ಓದಿ: ಚಂಡೀಗಢದಲ್ಲಿ 2 ಎಕರೆ ಜಾಗದಲ್ಲಿ ಅರವಿಂದ್ ಕೇಜ್ರಿವಾಲ್ ಹೊಸ ‘ಶೀಷ್ ಮಹಲ್’ ನಿರ್ಮಾಣ; ಬಿಜೆಪಿ ಆರೋಪ

ಅರವಿಂದ್ ಕೇಜ್ರಿವಾಲ್ ಪ್ರಕರಣದಲ್ಲಿ, ನ್ಯಾಯಾಲಯವು ಮೂರನೇ ಹಂತದಲ್ಲಿಯೇ ವಿಚಾರಣೆಯನ್ನು ನಿಲ್ಲಿಸಿದೆ. ಅಂದರೆ ವಿಚಾರಣೆಗೆ ಚೌಕಟ್ಟನ್ನು ನಿರ್ಮಿಸಲು ಅಗತ್ಯವಾದ ಯಾವುದೇ ಆರೋಪಗಳು ಕಂಡುಬಂದಿಲ್ಲ. ಹೊಸ ಪುರಾವೆಗಳು ಸಿಕ್ಕಿದರೆ ಅಥವಾ ಉನ್ನತ ನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸಲು ಅದು ಆಧಾರಗಳನ್ನು ಹೊಂದಿದ್ದರೆ, ಬಿಡುಗಡೆ ಅಥವಾ ಮುಕ್ತವಾದರೂ ಆರೋಪಗಳನ್ನು ಮರು ಸಲ್ಲಿಸಲು ಅವಕಾಶವಿರುತ್ತದೆ. ಇದು ಖುಲಾಸೆ ಮತ್ತು ಮುಕ್ತಗೊಳಿಸುವಿಕೆಗೂ ಇರುವ ವ್ಯತ್ಯಾಸ.

ಇಂದು ದೆಹಲಿ ಕೋರ್ಟ್ ಕೇಜ್ರಿವಾಲ್ ಅವರನ್ನು ಆರೋಪದಿಂದ ಮುಕ್ತಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪರಿಷ್ಕರಣಾ ಅರ್ಜಿಯ ಮೂಲಕ ರೌಸ್ ಅವೆನ್ಯೂ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲು ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಲು ನಿರ್ಧರಿಸಿದೆ. ಸಿಬಿಐ ಆಗಸ್ಟ್ 2022ರಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಸಾಕ್ಷ್ಯಗಳ ನಾಶ ಹಾಗೆಯೇ ಭ್ರಷ್ಟಾಚಾರ ತಡೆ ಕಾಯ್ದೆಯನ್ನು ಒಳಗೊಂಡ ಕಾನೂನು ವಿಭಾಗಗಳ ಅಡಿಯಲ್ಲಿ ತನ್ನ ಪ್ರಕರಣವನ್ನು ದಾಖಲಿಸಿತು. ಒಟ್ಟು 3 ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದ್ದು, ಎರಡನೆಯದರಲ್ಲಿ ಕೇಜ್ರಿವಾಲ್ ಅವರನ್ನು ನಿರ್ದಿಷ್ಟವಾಗಿ ಹೆಸರಿಸಲಾಗಿದೆ.

ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರತ್ಯೇಕ ಪ್ರಕರಣವನ್ನು ಮುಂದುವರಿಸುತ್ತಿದೆ. ಇದು ಮುಖ್ಯ ಪ್ರಕರಣಕ್ಕೆ ಸಂಬಂಧಿಸಿದ ಹವಾಲಾ ವರ್ಗಾವಣೆ ಮತ್ತು ಶೆಲ್ ಕಂಪನಿಗಳ ತನಿಖೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ಎರಡೂ ಪ್ರಕರಣಗಳಲ್ಲಿ ಜಾಮೀನು ನೀಡುವ ಮೊದಲು ಕೇಜ್ರಿವಾಲ್ ಅವರನ್ನು ಮಾರ್ಚ್ 2024ರಲ್ಲಿ ಇಡಿ ಮತ್ತು ನಂತರ ಸಿಬಿಐ ಬಂಧಿಸಿತು. ಅವರು 5 ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Super Hit Review: ಗಿಲ್ಲಿ ‘ಸೂಪರ್ ಹಿಟ್’ ಜರ್ನಿಗೆ ಕಾಮಿಡಿ ಕಲಾವಿದರ ಸಾಥ್ – Kannada News | Super Hit Kannada Movie review Gilli Nata new film comedy plot

ಸೂಪರ್ ಹಿಟ್

UA

  • Time – 135 Minutes
  • Released – February 27, 2026
  • Language – Kannada
  • Genre – Comedy, Crime, Mystery

Cast – ಗಿಲ್ಲಿ ನಟ, ಗೌರವ್ ಶೆಟ್ಟಿ, ಶ್ವೇತಾ ವಿ, ಸಾಧು ಕೋಕಿಲ, ಗೋವಿಂದೇಗೌಡ, ಪ್ರಮೋದ್​ ಶೆಟ್ಟಿ, ಟೆನ್ನಿಸ್ ಕೃಷ್ಣ ಮುಂತಾದವರು.

Director – ವಿಜಯಾನಂದ್

ಗಿಲ್ಲಿ ನಟ (Gilli Nata) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಸ್ಪರ್ಧಿಸುವುದಕ್ಕೂ ಮುನ್ನವೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆ ಪೈಕಿ ‘ಸೂಪರ್ ಹಿಟ್’ ಸಿನಿಮಾ ಮೇಲೆ ಅವರ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿತ್ತು. ಈ ವಾರ (ಫೆಬ್ರವರಿ 27) ಬಿಡುಗಡೆ ಆಗಿರುವ ‘ಸೂಪರ್ ಹಿಟ್’ (Super Hit) ಸಿನಿಮಾದಲ್ಲಿ ಅವರ ಜೊತೆ ಗೌರವ್ ಶೆಟ್ಟಿ, ಸಾಧು ಕೋಕಿಲ, ಶ್ವೇತಾ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ವಿಜಯಾನಂದ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಉಮೇಶ್ ಜಿ. ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ಗಿಲ್ಲಿ ನಟ ಇದ್ದಲ್ಲಿ ನಗುವಿಗೆ ಕೊರತೆ ಇಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಜೊತೆ ಸಾಧು ಕೋಕಿಲ, ಗೌರವ್ ಶೆಟ್ಟಿ, ಗೋವಿಂದೇಗೌಡ, ಪ್ರಮೋದ್ ಶೆಟ್ಟಿ, ಟೆನ್ನಿಸ್ ಕೃಷ್ಣ, ಗಿರೀಶ್ ಶಿವಣ್ಣ ಅವರಂತಹ ಕಲಾವಿದರು ಸೇರಿಕೊಂಡರೆ ನಿರೀಕ್ಷೆ ಜಾಸ್ತಿ ಆಗುತ್ತದೆ. ‘ಸೂಪರ್ ಹಿಟ್’ ಸಿನಿಮಾದಲ್ಲಿ ಈ ಎಲ್ಲ ಕಲಾವಿದರ ಸಂಗಮ ಆಗಿದೆ. ಪ್ರೇಕ್ಷಕರನ್ನು ನಗಿಸುವ ಸಲುವಾಗಿ ನಿರ್ದೇಶಕ ವಿಜಯಾನಂದ್ ಅವರು ಒಂದು ಫನ್ನಿ ಕಹಾನಿಯನ್ನು ತೆರೆಗೆ ತಂದಿದ್ದಾರೆ.

‘ಸೂಪರ್ ಹಿಟ್’ ಸಿನಿಮಾದ ಕಥೆ ಈ ರೀತಿ ಇದೆ. ಬೇರೆ ಬೇರೆ ಸಂಕಷ್ಟಗಳಿಗೆ ಸಿಲುಕಿಕೊಂಡಿರುವ ಕೆಲವು ಪಾತ್ರಗಳು ಆಕಸ್ಮಿಕವಾಗಿ ಒಂದೆಡೆ ಸೇರಿಕೊಳ್ಳುತ್ತವೆ. ತಮ್ಮ ತಮ್ಮ ಹಿನ್ನೆಲೆಯ ಬಗ್ಗೆ ಸುಳ್ಳು ಹೇಳಿಕೊಂಡು ಒಬ್ಬರನ್ನೊಬ್ಬರು ಯಾಮಾರಿಸುತ್ತಾರೆ. ಅಲ್ಲಿಂದ ಅವರ ಜರ್ನಿ ಶುರು ಆಗುತ್ತದೆ. ಆ ಜರ್ನಿಯ ನಡುವೆ ಎಲ್ಲರ ಮುಖವಾಡ ಕಳಚುತ್ತದೆ. ಈ ಕಥೆಯಲ್ಲಿ ಕಳ್ಳರು, ಪೊಲೀಸರು, ಕೊಲೆಗಾರರು, ಸಾಲಗಾರರು, ಮೋಸಗಾರರು, ಅಮಾಯಕರು.. ಹೀಗೆ ಎಲ್ಲರೂ ಇದ್ದಾರೆ. ಎಲ್ಲರ ಪರಿಸ್ಥಿತಿ ಗಂಭೀರವಾಗಿದ್ದರೂ ಕೂಡ ಅದನ್ನು ಹಾಸ್ಯದ ದಾಟಿಯಲ್ಲಿ ತೋರಿಸಲಾಗಿದೆ.

ಗಿಲ್ಲಿ ನಟಿಸಿದ ಸಿನಿಮಾ ಎಂಬ ಕಾರಣದಿಂದ ಪ್ರೇಕ್ಷಕರು ಭರಪೂರ ನಗು ನಿರೀಕ್ಷೆ ಮಾಡುವುದು ಸಹಜ. ಆದರೆ ಈ ಸಿನಿಮಾದ ಮೊದಲಾರ್ಧದಲ್ಲಿ ಸ್ವಲ್ಪ ನಗುವಿನ ಕೊರತೆ ಕಾಣಿಸುತ್ತದೆ. ಡೈಲಾಗ್​ಗಳ ಮೂಲಕ ನಗಿಸುವ ಪ್ರಯತ್ನ ಅಷ್ಟು ಫಲ ನೀಡಿಲ್ಲ. ಇನ್ನೂ ಏನೋ ಬೇಕಿತ್ತು ಎಂಬ ಭಾವ ಮೂಡುತ್ತದೆ. ಅಲ್ಲದೇ, ಕಥೆ ತೆರೆದುಕೊಳ್ಳಲು ಹೆಚ್ಚು ಸಮಯ ಹಿಡಿಯುವುದರಿಂದ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಆಗುತ್ತದೆ.

ಆದರೆ, ದ್ವಿತಿಯಾರ್ಧ ವೇಗ ಪಡೆದುಕೊಂಡಿದೆ. ಮಧ್ಯಂತರದ ನಂತರ ಈ ಸಿನಿಮಾ ಎತ್ತ ಸಾಗುತ್ತಿದೆ ಎಂಬುದರ ಅಂದಾಜು ಪ್ರೇಕ್ಷಕರಿಗೆ ಸಿಗುತ್ತದೆ. ಹಾಗಾಗಿ ಪಟಪಟನೆ ನೋಡಿಸಿಕೊಂಡು ಹೋಗುತ್ತದೆ. ಪಾತ್ರಗಳ ಸಂಕಟ ಹೆಚ್ಚಿದಂತೆಲ್ಲ ಪ್ರೇಕ್ಷಕರಿಗೆ ಫನ್ ಹೆಚ್ಚುತ್ತದೆ. ಕ್ಲೈಮ್ಯಾಕ್ಸ್​ನ ಕೋರ್ಟ್ ದೃಶ್ಯಗಳಲ್ಲಿ ಕೂಡ ಕಾಮಿಡಿ ಕಚಗುಳಿ ಇದೆ. ಬೇರೆಲ್ಲ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುವ ನಟ ಡ್ರ್ಯಾಗನ್ ಮಂಜು ಈ ಸಿನಿಮಾದಲ್ಲಿ ಜಡ್ಜ್ ಪಾತ್ರದ ಮೂಲಕ ನಗಿಸುತ್ತಾರೆ.

ಇದನ್ನೂ ಓದಿ: ಬಿಗ್ ಬಾಸ್ ಬಳಿಕ ಮುಂದಿನ ಪ್ರಾಜೆಕ್ಟ್ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಗಿಲ್ಲಿ ನಟ

ಗೀತರಚನಕಾರ ನಾಗೇಂದ್ರ ಪ್ರಸಾದ್ ಅವರು ‘ಸೂಪರ್ ಹಿಟ್’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಸಂಗೀತ, ಸಾಹಿತ್ಯದ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ. ಕಾಮಿಡಿ, ಥ್ರಿಲ್ಲರ್ ಜೊತೆಗೆ ಇದೊಂದು ಜರ್ನಿ ಸಿನಿಮಾ ಕೂಡ ಹೌದು. ಊರೂರು ಸುತ್ತುವ ಪಾತ್ರಗಳು ಹಲವು ಕಥೆಗಳನ್ನು ಹೇಳುತ್ತಾ, ಕ್ಲೈಮ್ಯಾಕ್ಸ್​​ನಲ್ಲಿ ಒಟ್ಟಿಗೆ ಸಂಧಿಸುತ್ತವೆ. ಭಾರಿ ನಿರೀಕ್ಷೆ ಇಲ್ಲದೇ, ಹೆಚ್ಚೇನೂ ಲಾಜಿಕ್ ಹುಡುಕದೇ ಕಾಮಿಡಿ ಬಯಸುವವರು ‘ಸೂಪರ್ ಹಿಟ್’ ಸಿನಿಮಾ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಪರ ಭಕ್ತರ ಸಭೆ, ಜಿಲ್ಲಾಡಳಿತಕ್ಕೆ 2 ದಿನ ಡೆಡ್​​ಲೈನ್ – Kannada News | Devotes two Deadline to Yadgir district administration for Take back pocso Case Against mallikarjun mutya

ಯಾದಗಿರಿ, (ಫೆಬ್ರವರಿ 27): ಬಾಲಕಿ ಜೊತೆ ಅನುಚಿತ ವರ್ತನೆ ತೋರಿದ ಪ್ರಕರಣದಲ್ಲಿ ಯಾದಗಿರಿಯ (Yadgir) ಮಹಲ್ ರೋಜಾ ಮಠದ ಸ್ವಯಂ ಘೋಷಿತ ದೇವಮಾನ ಮಲ್ಲಿಕಾರ್ಜುನ ಮುತ್ಯಾಗೆ (mallikarjun mutya) ಬಂಧನ ಭೀತಿ ಎದುರಾಗಿದೆ. ವಿಚಾರಣೆಗೆ ಹಾಜರಾಗುವಂತೆ ಯಾದಗಿರಿ ಪೊಲೀಸರು ನೋಟಿಸ್ ನೀಡಿದರೂ ಮುತ್ಯಾನ ಸುಳಿವಿಲ್ಲ. ಇಂದು (ಫೆಬ್ರವರಿ 27) ಬೆಳಗ್ಗೆಮುತ್ಯಾ ಹಾಜರಾಗಲಿದ್ದಾನೆ ಎಂದು ಹೇಳಲಾಗಿತ್ತು. ಆದರೆ, ಮುತ್ಯಾ ಮಾತ್ರ ಪತ್ತೆ ಇಲ್ಲ. ಬದಲಾಗಿ ಪೋಕ್ಸೋ ಕೇಸ್ ರದ್ದು ಕೋರಿ ಮುತ್ಯಾ ಹೈಕೋರ್ಟ್ ಮೊರೆ ಹೋಗಿದ್ದಾನೆ. ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದು, ಸೋಮವಾರ ವಿಚಾರಣೆ ನಡೆಯಲಿದೆ.ಪೋಷಕರೇ ದೂರು ನೀಡಿಲ್ಲ, ಆದ್ರೂ ಎಫ್​ಐಆರ್ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದೆಡೆ ಸ್ವಯಂ ಘೋಷಿತ ದೇವಮಾನ ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್ ದಾಖಲಿಸಿರೋದು ಭಕ್ತರನ್ನು ಕೆರಳಿಸಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲ್ ರೋಜಾ ಮಠದ ಆವರಣದಲ್ಲಿ ಭಕ್ತರು ಮಹತ್ವದ ಸಭೆ ನಡೆಸಿದ್ದು, ಮುಂದಿನ‌ ಕಾನೂನು ಹೋರಾಟ ಸೇರಿ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿದರು. ಅಲ್ಲದೇ ಇದೇ ವೇಳೆ ಕೇಸ್ ವಾಪಸ್ ತೆಗೆದುಕೊಳ್ಳಲು ಯಾದಗಿರಿ ಜಿಲ್ಲಾಡಳಿತಕ್ಕೆ ಎರಡು ದಿನಗಳ ಗಡುವು ನೀಡಿದ್ದಾರೆ.

ಸಭೆ ಬಳಿಕ ಮಾತನಾಡಿದ ಬಿಜೆಪಿ ನಾಯಕಿ ಲಲಿತಾ, ಆ ಅಪ್ರಾಪ್ತೆ ಮತ್ತು ಪೋಷಕರು ದೂರು ನೀಡದೇ ಇದ್ದರೂ ಎಫ್ ಐ ಆರ್ ದಾಖಲಿಸಿದ್ದಾರೆ. ಕೂಡಲೆ ಪ್ರಕರಣವನ್ನ ರದ್ದು ಮಾಡಬೇಕು. ಇಲ್ಲದೇ ಜಿಲ್ಲೆಯಾಧ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತೆ‌. ಎಸ್ಪಿ,ಡಿಸಿ ಕಚೇರಿ ಎದುರು ದೊಡ್ಡ ಮಟ್ಟದ ಹೋರಾಟ ಮಾಡುತ್ತೆವೆ. ಮೊದಲು ಕೌನ್ಸಲಿಂಗ್ ಮಾಡಬೇಕಿತ್ತು. ಆ ಅಪ್ರಾಪ್ತೆಯ ಹೇಳಿಕೆ ಪಡೆಯದೇ ಎಫ್ ಐ ಆರ್ ದಾಖಲಿಸಿದ್ದಾರೆ. ಜಿಲ್ಲಾಡಳಿತ ಈ ಕೇಸ್ ನಲ್ಲಿ ಎಡವಿದೆ. ಹೀಗಾಗಿ ತಕ್ಷಣವೇ ಮಲ್ಲಿಕಾರ್ಜುನ ಮುತ್ಯಾ ಮೇಲೆ ದಾಖಲಾಗಿರೋ ಕೇಸ್ ಅನ್ನು ರದ್ದು ಮಾಡಬೇಕು. ಜಿಲ್ಲಾಡಳಿತಕ್ಕೆ ಎರಡು ದಿನಗಳ ಗಡುವು ನೀಡುತ್ತೆವೆ. ಎರಡೂ ದಿನಗಳಲ್ಲಿ ಕೇಸ್ ರದ್ದು ಮಾಡದೇ ಹೋದ್ರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ನೋಡಿ: ಪೋಕ್ಸೋ ಕೇಸ್​​:ತಲೆಮರೆಸಿಕೊಂಡಿರುವ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್

Source link

Video: ಟ್ರಿಪ್‌ಗೆ ಹೊರಟ ಯುವತಿ ವಿಮಾನ ಹತ್ತುತ್ತಿದ್ದಂತೆ ರಜೆ ಕ್ಯಾನ್ಸಲ್ ಮಾಡಿದ ಬಾಸ್ – Kannada News | Boss cancels Gen Z employee’s vacation, video goes viral

ರೆಸ್ಟ್ ಇಲ್ಲದೇ ದುಡಿಯುವ ಉದ್ಯೋಗಿಗಳಿಗೆ (employees) ಒಂದೇ ಒಂದು ದಿನ ಕೊಟ್ಟರೆ ಸಾಕು ಎನ್ನುವಂತಾಗಿರುತ್ತದೆ. ರಜೆ ಸಿಕ್ಕೊಡನೆ ಟ್ರಿಪ್ ಮಾಡ್ತಾರೆ. ರಜೆಯ ವಿಚಾರವಾಗಿ ಜೆನ್ ಝೆಡ್ ತಲೆಮಾರಿನ ಯುವತಿಯ ಪೋಸ್ಟ್ ವೈರಲ್ ಆಗಿದೆ. ಹೌದು, ರಜೆ ಎಂದು ಟ್ರಿಪ್‌ಗೆ ಹೊರಟ ಯುವತಿಯೂ ವಿಮಾನ ಹತ್ತುವಷ್ಟರಲ್ಲಿ ಬಾಸ್ ರಜೆ ಕ್ಯಾನ್ಸಲ್ ಎಂಬ ಸಂದೇಶ ಕಳುಹಿಸಿ ಶಾಕ್ ನೀಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಘರ್ ಕೆ ಕಲೇಶ್ (Gharkekalesh) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಜೆನ್ ಜಿ ಉದ್ಯೋಗಿಯೂ ರಜೆ ಕ್ಯಾನ್ಸಲ್ ಆದ ಬಗ್ಗೆ ವಿವರಿಸಿರುವುದನ್ನು ಕಾಣಬಹುದು. ರಜೆಯಂದು ವಿಯೆಟ್ನಾಂಗೆ ಹೊರಟ ಸಿಮ್ರಾನ್‌ಳ ಬಾಸ್ ನಿರ್ಣಾಯಕ ಕೆಲಸಕ್ಕಾಗಿ ರಜೆಯನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಿದರು. ಹೀಗಾಗಿ ಈ ಉದ್ಯೋಗಿ ನಾನು ಕಂಪನಿಗಾಗಿ ಅಲ್ಲ, ಮುಕ್ತವಾಗಿ ಬದುಕಲು ಕೆಲಸ ಮಾಡುತ್ತೇನೆ. ಯೋಜನೆಯನ್ನು ರದ್ದುಗೊಳಿಸುತ್ತೇನೆ. ಆದರೆ ನನ್ನ ಲ್ಯಾಪ್‌ಟಾಪ್ 10 ದಿನಗಳವರೆಗೆ ಆಫ್ ಆಗಿರುತ್ತದೆ ಎಂದು ಹೇಳಿರುವುದನ್ನು ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಜೆನ್ ಝೆಡ್ ಉದ್ಯೋಗಿ ಸಿಮ್ರಾನ್ ತನ್ನ ಈ ಟ್ರಿಪ್ ಪ್ಲ್ಯಾನ್ ಬಗ್ಗೆ ವಾರಗಳ ಮೊದಲೇ ತನ್ನ ಮ್ಯಾನೇಜರ್‌ಗೆ ತಿಳಿಸಿದ್ದೆ. ಆದರೆ ಸಮಯದಲ್ಲಿ ಯಾವುದೇ ಆಕ್ಷೇಪಣೆ ವ್ಯಕ್ತವಾಗಿರಲಿಲ್ಲ. ವಿಮಾನ ನಿಲ್ದಾಣದಲ್ಲಿದ್ದಾಗ, ತುರ್ತು ನಿಯೋಜನೆಯ ಅಗತ್ಯತೆಯಿಂದಾಗಿ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ರು. ಇದು ನಿಜವಾದ ಸಂವಹನ ವೈಫಲ್ಯ. ನೌಕರರ ವೈಯಕ್ತಿಕ ಸಮಯದ ಬಗ್ಗೆ ಕಂಪನಿಯ ಬಾಸ್‌ಗಳಿಗೆ ಇರದ ಗೌರವದ ಕೊರತೆಯನ್ನು ತೋರಿಸುತ್ತದೆ. ಕೆಲಸದಲ್ಲಿ ತುರ್ತು ಪರಿಸ್ಥಿತಿಗಳು ಸಂಭವಿಸಿದ್ರೂ, ಅವು ವೈಯಕ್ತಿಕ ಬದ್ಧತೆಗಳನ್ನು ಪದೇ ಪದೇ ಮೀರಬಾರದು. ತನ್ನ ವೈಯಕ್ತಿಕ ಜೀವನ ಹಾಗೂ ಪ್ರಯಾಣವನ್ನು ಆನಂದಿಸುವುದಕ್ಕಾಗಿ ತಾನು ಕೆಲಸ ಮಾಡುತ್ತೇನೆ. ಕೊನೆಯ ಕ್ಷಣದ ಬೇಡಿಕೆಗಳಿಗೆ ನೌಕರರು ಯಾವಾಗಲೂ ಲಭ್ಯವಿರಬೇಕು ಎಂಬ ನಿಯಮಗಳನ್ನು ನಾನು ಒಪ್ಪುವುದಿಲ್ಲ ಹೀಗಾಗಿ ಬಾಸ್‌ ಏನು ಬೇಕಾದರೂ ಮಾಡಲಿ ಐ ಡೋಂಟ್ ಕೇರ್ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 38 ಲಕ್ಷ ರೂ ಆಫರ್, ದುಬೈನಲ್ಲಿ ತಿಂಗಳಿಗೆ 5 ಲಕ್ಷ ರೂ ಸಂಬಳ; ವೃತ್ತಿ ಆಯ್ಕೆಯ ಬಗ್ಗೆ ಸಲಹೆ ಕೇಳಿದ ಟೆಕ್ಕಿ

ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ವೈಯುಕ್ತಿಕ ಜೀವನಕ್ಕಿಂತ ಮುಖ್ಯ ದುಡಿಮೆನಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಬಾಸ್ ಗಳ ಈ ವರ್ತನೆಗಳು ಅತೀರೇಕ ಅನಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ನಡವಳಿಕೆ ಸ್ವೀಕಾರಾರ್ಹವೇ? ಎಂದು ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನಾರ್ದನ ರೆಡ್ಡಿಗೆ ಮತ್ತೆ ‘ಗಣಿ’ ಉರುಳು? ಮಾಜಿ ಸಚಿವನಿಂದ 884 ಕೋಟಿ ನಷ್ಟ ವಸೂಲಿ? – Kannada News | Janardhan Reddy Faces New Recovery Demand of 884 Crore Over Illegal Mining

ಬಳ್ಳಾರಿ, ಫೆಬ್ರವರಿ 27: ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿಬಿಐ ವಿಶೇಷ ನ್ಯಾಯಾಲಯದಲ್ಕಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ನಡೆಸಿರೋದು ಸಾಬೀತಾಗಿದ್ದು, ಅಕ್ರಮವಾಗಿ 29 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಸಾಗಾಟ‌ದ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ 884 ಕೋಟಿ ನಷ್ಟ ಮಾಡಿದ್ದಾರೆ. ಹೀಗಾಗಿ ಆ ಹಣವನ್ನು ಅವರಿಂದ ವಸೂಲಿ ಮಾಡುವಂತೆ ಟಪಾಲ್ ಗಣೇಶ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರದ ಹಿನ್ನೆಲೆಯಲ್ಲಿ ಸರ್ಕಾರ ವರದಿ ತರಿಸಿಕೊಳ್ಳಲು ಮುಂದಾಗಿದೆ. ಸಂಡೂರು ಕ್ಲಸ್ಟರ್‌ನಲ್ಲಿ ರೆಡ್ಡಿ ನಡೆಸಿರುವ ಗಣಿಗಾರಿಕೆ ಕುರಿತು ವರದಿ ನೀಡಲು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿ, ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಂತರಾಷ್ಟ್ರೀಯ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಹೊಂಬಾಳೆ, ಹೊಸ ಸಾಹಸ – Kannada News | Hombale Films started overseas distribution of movies

ಹೊಂಬಾಳೆ ಫಿಲಮ್ಸ್ (Hombale Films) ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ದೊಡ್ಡ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾ ಮೂಲಕ ಅಭೂತಪೂರ್ವ ಗೆಲುವು ಕಂಡ ಹೊಂಬಾಳೆ ಫಿಲಮ್ಸ್ ಆ ನಂತರವೂ ಸಹ ‘ಸಲಾರ್’, ‘ಕಾಂತಾರ’, ‘ಕಾಂತಾರ ಚಾಪ್ಟರ್ 1’ ಇನ್ನೂ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದು, ಪ್ರಭಾಸ್ ಜೊತೆಗೆ ಐದು ಸಿನಿಮಾಗಳ ಮುಂಗಡ ಒಪ್ಪಂದವನ್ನು ಸಹ ಮಾಡಿಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈಗಾಗಲೇ ಹೆಸರು ಮಾಡಿರುವ ಹೊಂಬಾಳೆ ಇದೀಗ ಸಾಗರದಾಟಿ ಹೊರ ದೇಶಕ್ಕೆ ತನ್ನ ಉದ್ಯಮ ವಿಸ್ತರಿಸಲು ಮುಂದಾಗಿದೆ.

ಹೊಂಬಾಳೆ ಫಿಲಮ್ಸ್ ಇದೀಗ ವಿದೇಶದಲ್ಲಿ ಸಿನಿಮಾ ವಿತರಣೆಗೆ ಮುಂದಾಗಿದೆ. ಈ ಬಗ್ಗೆ ಟ್ವಿಟ್ಟರ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಹೊಂಬಾಳೆ, ಇನ್ನು ಮುಂದೆ ತಾವು ಓವರಸೀಸ್ ಡಿಸ್ಟ್ರಿಬ್ಯೂಷನ್ (ವಿದೇಶದಲ್ಲಿ ಸಿನಿಮಾ ವಿತರಣೆ) ಮಾಡುವುದಾಗಿ ಘೋಷಿಸಿದೆ. ‘ಸಿನಿಮಾ ಎನ್ನುವುದು ಅಂತರವನ್ನೂ ಮೀರಿ ಹೃದಯಗಳನ್ನು ಬೆಸೆಯುವ ಶಕ್ತಿ. ಭಾರತದಿಂದ ಜಗತ್ತಿನವರೆಗೆ, ನಮ್ಮ ಕಥೆಗಳು ದಿಕ್ಕು-ದಿಗಂತಗಳನ್ನೂ ದಾಟಿ ಸಾಗುತ್ತವೆ. ಅತೀವ ಕೃತಜ್ಞತೆ ಮತ್ತು ಸಂಭ್ರಮದೊಂದಿಗೆ, ಭಾರತೀಯ ಸಿನಿಮಾದ ಚೈತನ್ಯವನ್ನು ಗಡಿಗಳ ಆಚೆಗೆ, ವಿವಿಧ ಚಿತ್ರೋದ್ಯಮಗಳಿಗೆ ಮತ್ತು ಪ್ರತಿಯೊಬ್ಬರ ಹೃದಯಕ್ಕೆ ತಲುಪಿಸಲು ‘ಹೊಂಬಾಳೆ ಫಿಲ್ಮ್ಸ್’ ಈಗ ವಿದೇಶಿ ವಿತರಣಾ (Overseas Distribution) ಕ್ಷೇತ್ರಕ್ಕೆ ಹೆಜ್ಜೆ ಇಡುತ್ತಿದೆ. ಇನ್ನಷ್ಟು ವಿವರಗಳಿಗಾಗಿ ಅಥವಾ ಇದರಲ್ಲಿ ಯಾವುದಾದರೂ ನಿರ್ದಿಷ್ಟ ಪದ ಬದಲಾವಣೆ ಬೇಕಿದ್ದಲ್ಲಿ ಕೇಳಬಹುದು. ನಾನಿಲ್ಲಿ ಸಹಾಯಕ್ಕೆ ಸಿದ್ಧ’ ಎಂದು ಹೊಂಬಾಳೆ ಹೇಳಿದೆ.

ಇದನ್ನೂ ಓದಿ:2025ರ ಟಾಪ್ ಐದು ಸಿನಿಮಾಗಳ ಪಟ್ಟಿಯಲ್ಲಿ ಹೊಂಬಾಳೆಯ ಎರಡು ಚಿತ್ರಗಳಿಗೆ ಸ್ಥಾನ

ಇತ್ತೀಚೆಗಿನ ವರ್ಷಗಳಲ್ಲಿ ಭಾರತೀಯ ಸಿನಿಮಾಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಆದರೆ ವಿದೇಶದಲ್ಲಿ ಸರಿಯಾದ ವಿತರಣೆ ವ್ಯವಸ್ಥೆ ಇಲ್ಲ. ಒಮ್ಮೊಮ್ಮೆ ಸಿನಿಮಾಗಳ ನಿರ್ಮಾಪಕರೇ ವಿದೇಶಗಳಿಗೆ ಹೋಗಿ ಸಿನಿಮಾಗಳನ್ನು ವಿತರಣೆ ಮಾಡಿದ್ದೂ ಸಹ ಇದೆ. ಈ ಸಮಸ್ಯೆ ಗುರುತಿಸಿದಂತಿರುವ ಹೊಂಬಾಳೆ ವಿದೇಶಗಳಲ್ಲಿ ಸಿನಿಮಾ ವಿತರಣೆಗೆ ಮುಂದಾಗಿದೆ. ಭಾರತದಲ್ಲಿ ಒಳ್ಳೆಯ ಸಿನಿಮಾ ವಿತರಣೆ ನೆಟ್​​ವರ್ಕ್ ಹೊಂದಿರುವ ಹೊಂಬಾಳೆ ಇದೀಗ ವಿದೇಶದಲ್ಲಿ ಅದೇ ಮಾದರಿಯ ನೆಟ್​​ವರ್ಕ್ ಸ್ಥಾಪನೆಗೆ ಮುಂದಾಗಿದೆ.

ಸಿನಿಮಾ ನಿರ್ಮಾಣದ ವಿಷಯಕ್ಕೆ ಬರುವುದಾದರೆ ಹೊಂಬಾಳೆ ಮುಂದಿನ ದಿನಗಳಲ್ಲಿ ‘ಸಲಾರ್ 2’ ಸಿನಿಮಾ ನಿರ್ಮಾಣ ಮಾಡಲಿದೆ. ಅದಾದ ಬಳಿಕ ಪ್ರಶಾಂತ್ ವರ್ಮಾ ನಿರ್ದೇಶಿಸಿ ಪ್ರಭಾಸ್ ನಟಿಸಲಿರುವ ಇನ್ನೊಂದು ಸಿನಿಮಾಕ್ಕೆ ಬಂಡವಾಳ ಹೂಡಲಿದೆ. ‘ರಿಚರ್ಡ್ ಆಂಟೊನಿ’ ಬಹಳ ಹಿಂದೆಯೇ ಘೋಷಿಸಿದ್ದು, ಆ ಸಿನಿಮಾ ಶೀಘ್ರವೇ ಶೂಟಿಂಗ್ ಆರಂಭಿಸಲಿದೆ. ‘ಕಾಂತಾರ ಚಾಪ್ಟರ್ 2’ ಸಿನಿಮಾ ಸಹ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಇನ್ನು ‘ಕೆಜಿಎಫ್ 3’ ಸಹ ಲೈನಪ್​​ನಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ 5.24 ಕೋಟಿ ರೂ ಮೌಲ್ಯದ ಡ್ರಗ್ಸ್, ಗಾಂಜಾ ಜಪ್ತಿ: ಮಹಿಳೆಯರಿಬ್ಬರು ಸೇರಿ 16 ಆರೋಪಿಗಳ ಬಂಧನ – Kannada News | Bengaluru Drug Bust: 5.24 Cr Worth Drugs and Ganja Seized, 16 Peddlers Arrested

ಜಪ್ತಿ ಮಾಡಲಾದ ಡ್ರಗ್ಸ್​Image Credit source: tv9 kannada

ಬೆಂಗಳೂರು, ಫೆಬ್ರವರಿ 27: ವಿವಿಧ ಡ್ರಗ್ಸ್ ಪ್ರಕರಣಗಳಲ್ಲಿ (Drugs Case) ಇಬ್ಬರು ಮಹಿಳೆಯರು ಸೇರಿ ಒಟ್ಟು 16 ಪೆಡ್ಲರ್​ಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಹಾಗೂ ನಗರದ ವಿವಿಧ ಠಾಣೆಗಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವಿದೇಶಿ ಪ್ರಜೆಗಳು ಸೇರಿದಂತೆ ಹೊರ ರಾಜ್ಯದ 8 ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಜೊತೆಗೆ ನಗರದಲ್ಲಿ 5.24 ಕೋಟಿ ರೂ ಮೌಲ್ಯದ ಡ್ರಗ್ಸ್, ಮೂರು ಸಾವಿರ ಎಂಡಿಎಂ ಮಾತ್ರೆಗಳು ಮತ್ತು ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ನೈಜೀರಿಯಾ ಪ್ರಜೆಯ ಡ್ರಗ್ಸ್ ಡಿಲೀಂಗ್​​ಗೆ ಸಾಥ್ ಕೊಡುತ್ತಿದ್ದ ಕಿಲಾಡಿ ಲೇಡಿಯ ಬಂಧನ

ಇನ್ನು ನೈಜೀರಿಯಾ ಪ್ರಜೆಯ ಡ್ರಗ್ಸ್ ಡಿಲೀಂಗ್​​ಗೆ ಸಾಥ್ ಕೊಡುತ್ತಿದ್ದ ಕಿಲಾಡಿ ಲೇಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಭಾಷಿಣಿ ಬಂಧಿತ ಮಹಿಳೆ. ಬಾಗಲೂರು ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇರಳ ಪೊಲೀಸರ ಭರ್ಜರಿ ಕಾರ್ಯಾಚರಣೆ: 1 ಕೋಟಿ ರೂ ಮೌಲ್ಯದ ಡ್ರಗ್ಸ್ ಸೀಜ್, ಪೆಡ್ಲರ್ ಅರೆಸ್ಟ್

ಬಂಧಿತ ಸುಭಾಷಿಣಿ, ನೈಜೀರಿಯನ್​​ ಪ್ರಜೆಯೊಬ್ಬನ ಜೊತೆ ಸೇರಿ ಡ್ರಗ್ಸ್ ಡಿಲೀಂಗ್​​​ ಮಾಡುತ್ತಿದ್ದಳು. ವಿದೇಶಿ ಪ್ರಜೆ ನೈಜೀರಿಯಾದಿಂದ ಡ್ರಗ್ಸ್​ ತರಿಸಿಕೊಂಡು ಸುಭಾಷಿಣಿ ಮನೆಯಲ್ಲಿ ಶೇಖರಿಸಿಟ್ಟಿದ್ದ. ಆತ ಸೂಚಿಸಿದ್ದ ವಿಳಾಸ, ಗ್ರಾಹಕರಿಗೆ ಸುಭಾಷಿಣಿ ತಲುಪಿಸುತ್ತಿದ್ದಳು.

ವಿದೇಶಿ ಡ್ರಗ್ ಪೆಡ್ಲರ್ ಪರಾರಿ

ಇನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಬಂಧಿತಳಿಂದ 2 ಕೋಟಿ ರೂ ಮೌಲ್ಯದ 300 ಎಕ್ಸ್ ಟೆಸಿ ಮಾತ್ರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಾರಿಯಾಗಿರುವ ವಿದೇಶಿ ಡ್ರಗ್ ಪೆಡ್ಲರ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟಲ್ಲಿ ಭರ್ಜರಿ ಕಾರ್ಯಾಚರಣೆ: ಬ್ಯಾಂಕಾಕ್, ಹಾಂಕಾಂಗ್​ನಿಂದ ಬರ್ತಿದ್ದ ಅಪಾರ ಪ್ರಮಾಣದ ಡ್ರಗ್ಸ್ ವಶ

ಇನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಕೋಟಿಗಟ್ಟಲೇ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ಸೀಜ್ ಮಾಡಿ ಪೆಡ್ಲರ್​ಗಳನ್ನು ಲಾಕ್​ ಮಾಡಿದ್ದರು. ಬಂಧಿತರಲ್ಲಿ ಬಹುಪಾಲು ನೆರೆ ರಾಜ್ಯದವರು ಸೇರಿ ವಿದೇಶಿಗರನ್ನು ಕಂಬಿಹಿಂದೆ ತಳ್ಳಿದ್ದರು. ಅಮೃತಹಳ್ಳಿ, ಹೆಬ್ಬಗೋಡಿ, ಶೇಷಾದ್ರಿಪುರಂ, ಜೆಬಿ ನಗರ, ಮಹಾಲಕ್ಷ್ಮೀ ಲೇಔಟ್, ಗೋವಿಂದರಾಜ್ ಠಾಣಾ ವ್ಯಾಪ್ತಿಗಳಲ್ಲಿ ಪೆಡ್ಲರ್​ಗಳನ್ನು ಲಾಕ್ ಮಾಡಿ ಬರೋಬ್ಬರಿ 20 ಕೋಟಿ ರೂ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು ಸೀಜ್​ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಾನು ಕೆಲಸ ಮಾಡಿದ ಆಫೀಸಿಗೇ 91 ಲಕ್ಷ ರೂ. ಕನ್ನ! ಆರೋಪಿ ಕ್ಯಾಶಿಯರ್ ಅಂದರ್ – Kannada News | Cashier And His Friends Arrested For Stealing Rs 91 Lakh From Builders Office In Bengaluru

ಬೆಂಗಳೂರು, ಫೆಬ್ರವರಿ 27: ಸದಾಶಿವನಗರದಲ್ಲಿರುವ ಬಿಲ್ಡರ್ ನರಸಿಂಹ ಅವರ ಕಚೇರಿಯಲ್ಲಿ ನಡೆದ 91.76 ಲಕ್ಷ ರೂಪಾಯಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಚೇರಿಯ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಧನಂಜಯ್ ಮತ್ತು ಅವನ ಸ್ನೇಹಿತ ಪ್ರವೀಣ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪೊಲೀಸರ ತನಿಖೆಯಿಂದಾಗಿ ಆರೋಪಿಗಳನ್ನು ಬಂಧಿಸಲಾಗಿದ್ದು, ಕಳ್ಳತನವಾದ ಒಟ್ಟು 91,76,000 ರೂಪಾಯಿಗಳ ಪೈಕಿ 81,66,000 ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ. ಇನ್ನೂ ಇಬ್ಬರು ಆರೋಪಿಗಳು ಪತ್ತೆಯಾಗಬೇಕಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ತಾಂತ್ರಿಕ ಆಧಾರಗಳ ಮೇಲೆ ತನಿಖೆ ನಡೆಸಿ, ಬಹುಬೇಗ ಹಣವನ್ನು ವಸೂಲಿ ಮಾಡಿದ ಸದಾಶಿವನಗರ ಪೊಲೀಸರ ತಂಡದ ಕಾರ್ಯಕ್ಕೆ ಸೀಮಂತ್ ಕುಮಾರ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಡುರಸ್ತೆಯಲ್ಲಿ ಇಬ್ಬರು ಕಾಲೇಜು ಹುಡುಗಿಯರಿಗೆ ಲಿಪ್​​​ ಕಿಸ್ ಮಾಡಿದ ಯುವಕ, ವಿಡಿಯೋ ವೈರಲ್ – Kannada News | School Uniform Controversy: Viral Video Sparks Discipline Debate

ಶಾಲಾ-ಕಾಲೇಜುಗಳು ಜ್ಞಾನದ ದೇಗುಲಗಳು ಮತ್ತು ಶಿಸ್ತಿನ ತಳಹದಿ ಎಂಬ ನಂಬಿಕೆ ಇದೆ. ಆದರೆ ಇದೀಗ ವೈರಲ್​​ ಆಗಿರುವ ವಿಡಿಯೋದಲ್ಲಿ ಇಬ್ಬರು ಕಾಲೇಜು ಹುಡುಗಿಯರು ಮತ್ತು ಒಬ್ಬ ಹುಡುಗ ಸಮವಸ್ತ್ರದಲ್ಲೇ ಪರಸ್ಪರ ಅಪ್ಪಿಕೊಂಡು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಸಮವಸ್ತ್ರ ಧರಿಸಿಯೇ ಸಿನೆಮಾ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಕೇವಲ ‘ಲೈಕ್ಸ್’ ಮತ್ತು ‘ಶೇರ್’ಗಳಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ ಎನ್ನಲಾಗಿದೆ. ಶಾಲೆಗಳು ಮಕ್ಕಳ ವ್ಯಕ್ತಿತ್ವ ರೂಪಿಸುವ ಮತ್ತು ಉತ್ತಮ ಭವಿಷ್ಯ ಕಟ್ಟಿಕೊಡುವ ಜಾಗ. ಸಮವಸ್ತ್ರ ಧರಿಸಿದಾಗ ಆ ಶಾಲೆಯ ಗೌರವವನ್ನು ಕಾಪಾಡುವುದು ವಿದ್ಯಾರ್ಥಿಗಳ ಜವಾಬ್ದಾರಿಯಲ್ಲವೇ? ಎಂಬುದು ಅನೇಕರ ಪ್ರಶ್ನೆ. ಶಾಲಾ ಸಮವಸ್ತ್ರವು ಸಮಾನತೆ ಮತ್ತು ಶಿಸ್ತಿನ ಸಂಕೇತ. ಅಂತಹ ಸಮವಸ್ತ್ರದಲ್ಲೇ ಇಂತಹ ವರ್ತನೆಗಳು ಶಾಲಾ ಮರ್ಯಾದೆಗೆ ಕುಂದು ತರುತ್ತವೆ ಎಂಬ ವಾದ ಕೇಳಿಬರುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link