All posts by nagaraj11081993

Lunar Eclipse 2026: ಮಾ.03 ಚಂದ್ರಗ್ರಹಣ; ಧನಸ್ಸು ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ? – Kannada News | Lunar Eclipse 2026: Auspicious Effects for Sagittarius

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯವರು 2026ರಲ್ಲಿ ಸಂಭವಿಸಲಿರುವ ಗ್ರಸ್ತೋದಯ ಪಾಕ್ಷಿಕ ಕೇತುಗ್ರಸ್ತ ಚಂದ್ರಗ್ರಹಣವು ಧನಸ್ಸು ರಾಶಿಯವರ ಮೇಲೆ ಬೀರಲಿರುವ ಪ್ರಭಾವದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೂಲಾ, ಪೂರ್ವಾಷಾಢ, ಉತ್ತರಾಷಾಢ ನಕ್ಷತ್ರಗಳಿಗೆ ಸೇರಿದ ಧನಸ್ಸು ರಾಶಿಯವರಿಗೆ ಈ ಗ್ರಹಣವು ವಿಶೇಷವಾಗಿ ಶುಭಫಲಗಳನ್ನು ನೀಡಲಿದೆ. ಗ್ರಹಣವು ಒಂಬತ್ತನೇ ಮನೆಯಲ್ಲಿ, ಅಂದರೆ ಭಾಗ್ಯ ಸ್ಥಾನದಲ್ಲಿ ಸಂಭವಿಸುತ್ತಿರುವುದರಿಂದ, ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ನಿರೀಕ್ಷಿತ.

ಈ ಅವಧಿಯಲ್ಲಿ ಧನಸ್ಸು ರಾಶಿಯವರು ಆರ್ಥಿಕವಾಗಿ ಪ್ರಗತಿ ಸಾಧಿಸುವರು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಲಿದ್ದು, ಉತ್ತಮ ಫಲಿತಾಂಶಗಳು ದೊರೆಯಲಿವೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದು, ಹೊಸ ಕಾರ್ಯಗಳನ್ನು ಕೈಗೊಳ್ಳಲು ಉತ್ತೇಜನ ಸಿಗಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ, ಮಕ್ಕಳಿಂದ ಶುಭ, ಮತ್ತು ಸಂಗಾತಿಯ ವೃತ್ತಿಯಲ್ಲಿ ಬಡ್ತಿಯ ಯೋಗವಿದೆ. ಹೊಸ ವ್ಯಾಪಾರ ಮತ್ತು ಪೂರ್ವಿಕರ ಆಸ್ತಿ ವಿವಾದಗಳಲ್ಲಿ ಅನುಕೂಲಕರ ಫಲಿತಾಂಶಗಳು ದೊರೆಯಲಿವೆ. ಸಾಮಾಜಿಕವಾಗಿ ಕೀರ್ತಿ ಮತ್ತು ಪ್ರತಿಷ್ಠೆ ಹೆಚ್ಚಳವಾಗಲಿದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಉತ್ತಮ ಬದಲಾವಣೆಗಳು ಕಂಡುಬರಲಿವೆ.

ಶುಭಫಲಗಳನ್ನು ಹೆಚ್ಚಿಸಲು, ಧನಸ್ಸು ರಾಶಿಯವರು ನವಗ್ರಹಗಳ ಆರಾಧನೆ, ಚಂದ್ರ ಗಾಯತ್ರಿ ಮಂತ್ರ ಪಠಣ (‘ಕ್ಷೀರ ಪುತ್ರಾಯ ವಿದ್ಮಹೇ ಅಮೃತತ್ವಾಯ ಧೀಮಹಿ ತನ್ನೋಸ್ ಚಂದ್ರ ಪ್ರಚೋದಯಾತ್’) ಮತ್ತು ನಾಗದರ್ಶನ, ನಾಗರಕಲ್ಲುಗಳಿಗೆ ಗೆಜ್ಜೆ ವಸ್ತ್ರ ಅರ್ಪಿಸಿ ಮೂರು ಸುತ್ತು ಪ್ರದಕ್ಷಿಣೆ ಮಾಡುವಂತಹ ಪರಿಹಾರಗಳನ್ನು ಕೈಗೊಳ್ಳುವುದು ಉತ್ತಮ. ಈ ಗ್ರಹಣವು ಧನಸ್ಸು ರಾಶಿಯವರಿಗೆ ಭಾಗ್ಯೋದಯ ಕಾಲವಾಗಿದೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಸಕರ ಡಿನ್ನರ್ ಮೀಟಿಂಗ್ ಬಗ್ಗೆ ಮೌನ ಮುರಿದ ಡಿಕೆ ಶಿವಕುಮಾರ್: ಹೇಳಿದ್ದೇನು ನೋಡಿ! – Kannada News | DK Shivakumar Breaks Silence on MLAs’ Dinner Meeting: Here’s What the Karnataka DCM Said

ಬೆಂಗಳೂರು, ಫೆಬ್ರವರಿ 27: ಮಾಗಡಿ ಶಾಸಕ ಎಚ್​ಸಿ ಬಾಲಕೃಷ್ಣ ಜನ್ಮದಿನಾಚರಣೆಯ ನೆಪದಲ್ಲಿ ಗುರುವಾರ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗರು ಡಿನ್ನರ್ ಮೀಟಿಂಗ್ ಆಯೋಜಿಸಿದ್ದರ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇದು ಯಾವುದೇ ಶಕ್ತಿ ಪ್ರದರ್ಶನವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೆಲವರು ವಿಶ್ರಾಂತಿಗೆ, ಕೆಲವರು ವಿದೇಶ ಪ್ರಯಾಣಕ್ಕೆ, ಇನ್ನು ಕೆಲವರು ದೆಹಲಿಗೆ ತೆರಳುತ್ತಾರೆ. ಇವೆಲ್ಲ ಅವರವರ ವೈಯಕ್ತಿಕ ವಿಚಾರಗಳು, ಪಕ್ಷಕ್ಕೂ ಇವುಗಳಿಗೂ ಸಂಬಂಧವಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ಸಿಪಿ ಯೋಗೇಶ್ವರ್ ಮತ್ತು ಬಾಲಕೃಷ್ಣ ಅವರು ಡಿಸಿಎಂ ಡಿಕೆಶಿ ಸಿಎಂ ಆಗಬೇಕು ಎಂದು ಹೇಳಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ‘ಹೊಸ ಶಾಸಕರಿಗೆ ಮಂತ್ರಿಯಾಗುವ ಆಸೆ ಇರುವುದು ಸಹಜ. ನಾನು, ಪರಮೇಶ್ವರ, ಹೆಚ್.ಕೆ. ಪಾಟೀಲ್, ಮಹದೇವಪ್ಪ, ಸಿದ್ದರಾಮಯ್ಯ ಮುಂತಾದ ಹಿರಿಯ ನಾಯಕರು ಚಿಕ್ಕ ವಯಸ್ಸಿನಲ್ಲೇ ಮಂತ್ರಿಗಳಾಗಿದ್ದವರು. ಹೀಗಾಗಿ, ಹೊಸಬರಲ್ಲಿ ಮಂತ್ರಿ ಸ್ಥಾನದ ಆಕಾಂಕ್ಷೆಗಳಿರುತ್ತವೆ. ನಮ್ಮನ್ನೂ ಮಂತ್ರಿ ಮಾಡಿ ಎಂದು ಕೆಲವರು ಕೇಳುತ್ತಾರೆ. ಇದು ಸಹಜ’ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈಕೋರ್ಟ್​​ ಆದೇಶಕ್ಕೆ ಸುಪ್ರೀಂಕೋರ್ಟ್​​ ತಡೆಯಾಜ್ಞೆ: ಸುಬ್ಬಾರೆಡ್ಡಿ ಶಾಸಕ ಸ್ಥಾನಕ್ಕೆ ಮರುಜೀವ – Kannada News | Supreme Court Stays High Court Order; Subbareddy’s MLA Position Revived

ಎಸ್‌.ಎನ್‌. ಸುಬ್ಬಾರೆಡ್ಡಿImage Credit source: Google

ನವದೆಹಲಿ, ಫೆಬ್ರವರಿ 27: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್​​ ತಡೆಯಾಜ್ಞೆ ನೀಡಿದ್ದು, ಕಾಂಗ್ರೆಸ್​​ ನಾಯಕನಿಗೆ ತಾತ್ಕಾಲಿಕ ರಿಲೀಫ್​​ ನೀಡಿದೆ. ಆದಾಯ ಬಹಿರಂಗಪಡಿಸಿದರೆ ಸಾಕೇ, ವ್ಯವಹಾರವನ್ನೂ ಬಹಿರಂಗಪಡಿಸಬೇಕೇ ಎಂಬ ಬಗ್ಗೆ ವಿಚಾರಣೆ ಅಗತ್ಯವೆಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದು, 6 ವಾರದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಎದುರಾಳಿ ಅಭ್ಯರ್ಥಿಯಾಗಿದ್ದ  ಸಿ.ಮುನಿರಾಜುಗೆ ಸೂಚನೆ ನೀಡಿದೆ. ಸೆಪ್ಟೆಂಬರ್ ತಿಂಗಳಿಗೆ ನ್ಯಾಯಾಲಯ ವಿಚಾರಣೆ ಮುಂದೂಡಿದ್ದು, ಸುಪ್ರೀಂಕೋರ್ಟ್ ಈ ಆದೇಶದಿಂದ ಎಸ್.ಎನ್. ಸುಬ್ಬಾರೆಡ್ಡಿ ಶಾಸಕ ಸ್ಥಾನಕ್ಕೆ ಮತ್ತೆ ಜೀವ ಸಿಕ್ಕಿದೆ.

ಚುನಾವಣೆಯಲ್ಲಿ ಎಸ್‌.ಎನ್‌. ಸುಬ್ಬಾರೆಡ್ಡಿ ಸಲ್ಲಿಸಿದ್ದ ನಾಮಪತ್ರ ದೋಷದಿಂದ ಕೂಡಿದೆ. ಆಸ್ತಿ ಮಾಹಿತಿ ಮುಚ್ಚಿಟ್ಟು ಅವರು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದ ಸುಬ್ಬಾರೆಡ್ಡಿ, ಚುನಾವಣಾ ತಕರಾರು ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ ಅದನ್ನು ವಜಾ ಮಾಡಬೇಕೆಂದು ಮನವಿ ಮಾಡಿದ್ದರು. ಪರ ವಿರೋಧ ವಾದ ಆಲಿಸಿದ್ದ ಹೈಕೋರ್ಟ್ ಸುಬ್ಬಾರೆಡ್ಡಿ ಅರ್ಜಿಯನ್ನು ವಜಾ ಮಾಡಿದ್ದಲ್ಲದೆ, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಆದೇಶಿಸಿತ್ತು. ಹೀಗಿದ್ದರೂ  ಎದುರಾಳಿ ಅಭ್ಯರ್ಥಿಯಾಗಿದ್ದ ಸಿ.ಮುನಿರಾಜು ವಿಜಯಿ ಎಂದು ಕೋರ್ಟ್​​ ಘೋಷಿಸಿರಲಿಲ್ಲ.

ಇದನ್ನೂ ಓದಿ: ಕಾಂಗ್ರೆಸ್ MLA​ಗೆ ಬಿಗ್ ಶಾಕ್: ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ 6 ತಿಂಗಳೊಳಗಾಗಿ ತಡೆಯಾಜ್ಞೆ ನೀಡದಿದ್ದರೆ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆಸುವುದು ಅನಿವಾರ್ಯ ಎನ್ನುವ ಸ್ಥಿತಿ ಉದ್ಭವಿಸಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ್ದ ಸುಬ್ಬಾರೆಡ್ಡಿ ಇದು ದೊಡ್ಡ ಪ್ರಕರಣವೇನಲ್ಲ. ಸೋತಿರುವವರೆಲ್ಲರೂ ಈ ರೀತಿ ರಾಜಕೀಯ ದ್ವೇಷ ತೀರಿಸಿಕೊಳ್ಳಲು ಮುಂದಾದರೆ, ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಕಷ್ಟವಾಗುತ್ತದೆ ಎಂದಿದ್ದರು. ಅಲ್ಲದೆ ಹೈಕೋರ್ಟ್​​ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​​ ಮೊರೆ ಹೋಗಿದ್ದರು. ಈಗ ಸರ್ವೋಚ್ಛ ನ್ಯಾಯಾಲಯ ಹೈಕೋರ್ಟ್​​ ತೀರ್ಪಿಗೆ ತಡೆ ನೀಡಿರುವ ಹಿನ್ನೆಲೆ ಕಾಂಗ್ರೆಸ್​​ ನಾಯಕ ಸುಬ್ಬಾರೆಡ್ಡಿಗೆ ಕಾನೂನು ಹೋರಾಟದಲ್ಲಿ ಮೊದಲ ಗೆಲುವು ಸಿಕ್ಕಂತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:39 pm, Fri, 27 February 26

Source link

‘ಕವಳ’ ಸಿನಿಮಾ ಮುಹೂರ್ತ ಶುಭ ಹಾರೈಸಿದ ನಟ ರವಿಚಂದ್ರನ್ – Kannada News | Ravichandran best wishes to Kannada movie Kavala

‘ಕವಳ’ (Kavala) ಕನ್ನಡ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ನಡೆದಿದ್ದು ನಟ ರವಿಚಂದ್ರನ್ (Ravichandran) ಅವರು ಕ್ಲಾಪ್ ಮಾಡುವ ಮೂಲಕ ಸಿನಿಮಾಕ್ಕೆ ಶುಭ ಹಾರೈಸಿದರು. ತಮಿಳಿನ ಜನಪ್ರಿಯ ನಟ, ನಿರ್ದೇಶಕ ಸಮುದ್ರಕಿಣಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಆಕ್ಷನ್ ಸಿನಿಮಾ ಆಗಿದ್ದು, ಕವಳ ಹೆಸರಿನ ರೌಡಿಯ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ನಾಯಕನಾಗಿ ಸಂದೀಪ್ ನಾಗರಾಜ್ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣ ಆಗುತ್ತಿದೆ. ಸಿನಿಮಾವನ್ನುಶ್ರೀ ಜೈ ನಿರ್ದೇಶನ ಮಾಡುತ್ತಿದ್ದಾರೆ. ನಟ ರವಿಚಂದ್ರನ್ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

Lunar Eclipse 2026: ಮಾ.03ರ ಚಂದ್ರಗ್ರಹಣ; ವೃಶ್ಚಿಕ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ? – Kannada News | Lunar Eclipse 2026: Dr. Basavaraj Gurujis Astrological Forecast for Scorpio

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರ ಪ್ರಕಾರ, 2026ರಲ್ಲಿ ಸಂಭವಿಸಲಿರುವ ಗ್ರಸ್ತೋದಯ ಗ್ರಹಣವು ವೃಶ್ಚಿಕ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಈ ರಾಶಿಯ ಕರ್ಮ ಸ್ಥಾನವಾದ ಹತ್ತನೇ ಮನೆಯಲ್ಲಿ ಸಂಭವಿಸುತ್ತಿದ್ದು, ವಿಶಾಖಾ, ಅನುರಾಧಾ, ಮತ್ತು ಜೇಷ್ಠಾ ನಕ್ಷತ್ರದವರಿಗೆ ಇದು ಅನ್ವಯಿಸುತ್ತದೆ. ಗ್ರಹಣದ ಪ್ರಭಾವದಿಂದ ನಿಂತುಹೋಗಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ. ವೃತ್ತಿಯಲ್ಲಿ ಮಾರ್ಪಾಡು, ಬಡ್ತಿ, ಮತ್ತು ಹೆಚ್ಚುವರಿ ಜವಾಬ್ದಾರಿಗಳು ಲಭಿಸಲಿವೆ. ವಿದೇಶ ಪ್ರಯಾಣ, ಸಾರ್ವಜನಿಕ ಮನ್ನಣೆ, ಮತ್ತು ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗಲಿವೆ. ವ್ಯಾಪಾರಸ್ಥರಿಗೆ ಅನುಕೂಲವಾಗಿದ್ದು, ಪೋಷಕರ ಆರೋಗ್ಯ ಸುಧಾರಿಸುತ್ತದೆ. ಆಕಸ್ಮಿಕ ಪ್ರಯಾಣ, ವಾಹನ ಮತ್ತು ಭೂಮಿ ಖರೀದಿಯ ಯೋಗಗಳಿವೆ. ಖಾಸಗಿ ಉದ್ಯೋಗಸ್ಥರಿಗೆ, ವಿದ್ಯಾರ್ಥಿಗಳಿಗೆ ಹಾಗೂ ರೈತಾಪಿ ವರ್ಗದವರಿಗೆ ಶುಭಫಲಗಳು ದೊರೆಯಲಿವೆ. ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯ.

ಆದರೆ, ಚಂದ್ರನ ಪ್ರಭಾವದಿಂದ ಅತಿಯಾದ ಭಾವನಾತ್ಮಕ ಸನ್ನಿವೇಶಗಳು ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲಗಳು ಎದುರಾಗಬಹುದು. ಅಂತಹ ಸಂದರ್ಭಗಳಲ್ಲಿ ಇತರರ ಬೆಂಬಲ ಪಡೆಯುವುದು ಸೂಕ್ತ. ಶುಭಫಲಗಳನ್ನು ಹೆಚ್ಚಿಸಲು ಸುಬ್ರಹ್ಮಣ್ಯ ಅಥವಾ ನಾಗಾರಾಧನೆ ಮಾಡುವುದು, ನಾಗ ಸ್ತೋತ್ರಗಳನ್ನು ಪಠಿಸುವುದು ಮತ್ತು ಗ್ರಹಣ ನಂತರ ಅಕ್ಕಿ ಪಾಯಸ ದಾನ ಮಾಡುವುದು ಉತ್ತಮ ಎಂದು ಗುರೂಜಿ ಸಲಹೆ ನೀಡಿದ್ದಾರೆ.

 

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಬೆಂಗಳೂರಿನಲ್ಲಿ ಪಾಸ್​ಪೋರ್ಟ್ ದಾಖಲೆ​ ಪರಿಶೀಲನೆಗೆ ಹೊಸ ಮಾರ್ಗಸೂಚಿ – Kannada News | New Passport Verification Guidelines in Bengaluru: Body Worn Cameras Mandatory, Police Commissioner Issues Strict SOP

ಬೆಂಗಳೂರು, ಫೆಬ್ರವರಿ 27: ಪಾಸ್‌ಪೋರ್ಟ್ ದಾಖಲೆ ಪರಿಶೀಲನೆ (Passport Verification) ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಜನಸ್ನೇಹಿಯಾಗಿಸಲು ಬೆಂಗಳೂರು (Bangalore) ನಗರ ಪೊಲೀಸರಿಂದ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಅನುಸರಿಸಬೇಕಾದ ಕಟ್ಟುನಿಟ್ಟಿನ ನಿಯಮಗಳನ್ನು ಡಿಜಿ ಹಾಗೂ ಐಜಿಪಿ ಸೂಚನೆಯಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರಕಟಿಸಿದ್ದಾರೆ. ಹೊಸ ಮಾರ್ಗಸೂಚಿಯಂತೆ, ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಅಧಿಕಾರಿಗಳು ಬಾಡಿ-ವೋರ್ನ್ ಕ್ಯಾಮೆರಾ (Body Worn Camera) ಧರಿಸುವುದು ಕಡ್ಡಾಯವಾಗಿದೆ. ಪರಿಶೀಲನೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕರ ವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಪಾಸ್‌ಪೋರ್ಟ್ ಅರ್ಜಿದಾರರನ್ನು ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆಗೆ ಕರೆಸಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಬದಲಾಗಿ, ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಅರ್ಜಿದಾರರ ವಾಸಸ್ಥಳಕ್ಕೆ ಭೇಟಿ ನೀಡಬೇಕು. ಭೇಟಿ ಸಂದರ್ಭದಲ್ಲಿ ನೆರೆಹೊರೆಯವರಿಂದ ಅಗತ್ಯ ಮಾಹಿತಿ ಸಂಗ್ರಹಿಸುವುದೂ ಮಾರ್ಗಸೂಚಿಯ ಭಾಗವಾಗಿದೆ.

ಅರ್ಜಿದಾರರ ವಿಳಾಸಕ್ಕೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮುನ್ನ SMS ಅಥವಾ ದೂರವಾಣಿ ಕರೆ ಮೂಲಕ ಮಾಹಿತಿ ನೀಡಬೇಕು. ಯಾವುದೇ ರೀತಿಯ ಆಮಿಷ ಅಥವಾ ಹಣದ ನಿರೀಕ್ಷೆ ಇಡಬಾರದು. ಈ ಉದ್ದೇಶಕ್ಕಾಗಿ ಅರ್ಜಿದಾರರಿಗೆ ಕಿರುಕುಳ ನೀಡುವುದು, ವಿನಾಕಾರಣ ಅಲೆದಾಡಿಸುವುದು ಅಥವಾ ವರದಿ ಸಲ್ಲಿಕೆಯಲ್ಲಿ ವಿಳಂಬ ಮಾಡುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೂ ಅಂಡಾಣು ಮಾರಾಟ ದಂಧೆ? ಐವಿಎಫ್ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ನಿಗಾಕ್ಕೆ ಆರೋಗ್ಯ ಇಲಾಖೆ ಸೂಚನೆ

ಪ್ರತಿಕೂಲ ವರದಿ ಸಲ್ಲಿಸುವ ಸಂದರ್ಭದಲ್ಲಿ ಅಧಿಕಾರಿಗಳು ಸೂಕ್ತ ಮತ್ತು ಸ್ಪಷ್ಟವಾದ ಪುರಾವೆಗಳನ್ನು ಹೊಂದಿರಬೇಕು ಎಂದು ಸೂಚಿಸಲಾಗಿದೆ. ತರ್ಕಬದ್ಧ ಕಾರಣಗಳಿಲ್ಲದೆ ನಕಾರಾತ್ಮಕ ವರದಿ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಎಲ್ಲಾ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಂಬಂಧಿತ ಡಿಸಿಪಿ ವಾರಕ್ಕೊಮ್ಮೆ ವರದಿ ಸಲ್ಲಿಸಬೇಕಾಗಿದೆ. ಮಾರ್ಗಸೂಚಿ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದು ಕೆಸರು ಗದ್ದೆಯಲ್ಲ, ಹಾವೇರಿ-ಶಿರಸಿ ರಾಜ್ಯ ಹೆದ್ದಾರಿ!: ರಸ್ತೆ ದುಃಸ್ಥಿಗೆ ಜನ ಹೈರಾಣು – Kannada News | Haveri–Sirsi State Highway Turns Into Muddy Stretch After Untimely Rains; Commuters Struggle

ಹಾವೇರಿ, ಫೆಬ್ರವರಿ 27: ಜಿಲ್ಲೆಯಿಂದ ಶಿರಸಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟ ಪರಿಣಾಮ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದ ಶಿರಸಿಯ ಮಾರಿಕಾಂಬಾ ಜಾತ್ರೆಗೆ ತೆರಳುವ ಭಕ್ತರು ಪ್ರತಿನಿತ್ಯ ಪರದಾಟ ನಡೆಸಬೇಕಾದ ಸ್ಥಿತಿ ಉದ್ಭವವಾಗಿದೆ. ಕಳೆದ ಮೂರು ವರ್ಷಗಳಿಂದ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಹಾವೇರಿ ಜಿಲ್ಲೆಯ ಗಡಿ ದಾಟುತ್ತಿದ್ದಂತೆ 20 ಕಿಲೋ ಮೀಟರ್ ರಸ್ತೆಯಲ್ಲಿ ಜೀವದ ಹಂಗು ತೊರೆದು ವಾಹನ ಸವಾರರು ಸಂಚರಿಸಬೇಕಿದೆ. ಅಕಾಲಿಕವಾಗಿ ಸುರಿದ ಅ್ಪ ಮಳೆಗೇ ರಸ್ತೆ ಕೆಸರು ಗದ್ದೆಯಂತಾಗಿದ್ದು, ಬೈಕ್​​ ಸವಾರರು ಬಿದ್ದು ಒದ್ದಾಡಿರು ಪ್ರಸಂಗಗಳೂ ನಡೆದಿವೆ. ಈ ರಸ್ತೆಯಲ್ಲಿ ಸುಗಮವಾಗಿ ಸಂಚರಿಸಲು ಸಾಧ್ಯವಾಗದೆ, ಕೆಸರಲ್ಲಿ ಸಿಲುಕಿ ವಾಯನಗಳು ನಿಯಂತ್ರಣ ಕಳೆದುಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲಲ್ಲಿ ವೈರಲ್​​ ಆಗುತ್ತಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್; ಯೋಗೇಶ್​ಗೌಡ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನಿಂದ ಜಾಮೀನು – Kannada News | Vinay Kulkarni Bail: Supreme Court Grants Relief to Dharwad MLA in Yogesh Gowda Murder Case

ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್; ಯೋಗೇಶ್​ಗೌಡ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನಿಂದ ಜಾಮೀನು
Image Credit source: Supreme Court Website

ಧಾರವಾಡ, ಫೆಬ್ರವರಿ 27: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲುವಾಸದಲ್ಲಿದ್ದ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಸುಪ್ರೀಂಕೋರ್ಟ್ ಎರಡು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದು, ಸಧ್ಯ ಕುಲಕರ್ಣಿಗೆ ರಿಲೀಫ್ ಸಿಕ್ಕಿದೆ. ಕುಲಕರ್ಣಿ ಪರ ವಾದ ಮಂಡಿಸಿದ್ದ ವಕೀಲ ಶರಣಗೌಡ ಪಾಟೀಲ್ ಅವರ ತಂಡ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದೆ. ಶಾಸಕ ವಿನಯ್ ಕುಲಕರ್ಣಿ ಜಾಮೀನು ಪಡೆಯುವ ಮೂಲಕ ನ್ಯಾಯ ಪ್ರಕ್ರಿಯೆಯಲ್ಲಿ ಮುಂದಿನ ಹಂತಕ್ಕೆ ಸಾಗಿದ್ದಾರೆ.

(ಮಾಹಿತಿ ಅಪ್ಡೇಟ್ ಆಗುತ್ತಿದೆ)

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:08 pm, Fri, 27 February 26

Source link

ಸಿದ್ದರಾಮೇಶ್ವರ ಮಹಾಸಂಸ್ಥಾನದ ಸ್ವಾಮೀಜಿಗಳ ಮೇಲೆ ಹಲ್ಲೆ: ಆರೋಪಿ ಅರೆಸ್ಟ್​​ – Kannada News | Tumakuru: Siddarameshwara Matha Head Assaulted Over Temple Arch Dispute

ಹಲ್ಲೆಗೊಳಗಾದ ಸ್ವಾಮೀಜಿImage Credit source: Tv9 Kannada

ತುಮಕೂರು, ಫೆಬ್ರವರಿ 27: ಸಿದ್ಧರಾಮೇಶ್ವರ ದೇವಾಲಯದ ಗೋಪುರ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಗೋಡೆಕೆರೆಯ ಸಿದ್ದರಾಮೇಶ್ವರ ಮಹಾಸಂಸ್ಥಾನದ ಮಠಾಧಿಪತಿಗಳ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮೃತ್ಯುಂಜಯ ಸ್ವಾಮೀಜಿಗಳ ಮೇಲೆ ದಾಳಿ ಸಂಬಂಧ ಸ್ಥಳೀಯ ಹಾಗೂ ಮಠದಲ್ಲಿ ಸ್ವಾಮೀಜಿಗಳ ಜೊತೆ ಓಡಾಡಿಕೊಂಡಿದ್ದ ಸಿದ್ಧರಾಮಯ್ಯ ಎಂಬಾತನನ್ನು ಬಂಧಿಸಲಾಗಿದೆ. ಫೆಬ್ರವರಿ 11ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಳಿಗ್ಗೆ ಸುಮಾರು 5.30ರ ಹೊತ್ತಿಗೆ ಮೃತ್ಯುಂಜಯ ಸ್ವಾಮೀಜಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಿದ್ಧರಾಮಯ್ಯ, ನೀನು ಸಿದ್ಧರಾಮೇಶ್ವರ ದೇವಾಲಯದ ಗೋಪುರ ಮಾಡಲು ಬೀಡುತ್ತಿಲ್ಲ. ಗೋಪುರ ಮಾಡಲು ಅಡ್ಡಿ ಪಡುಸುತ್ತಿರುವ ನಿನ್ನ ಕೊಲೆ ಮಾಡಲು ಬಂದಿದ್ದೇನೆ ಎಂದು ಹೇಳಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಠದ ಬಾಲಕ ಸ್ವಾಮೀಜಿ ರಕ್ಷಣೆಗೆ ಬಂದಿದ್ದು, ಆರೋಪಿ ಆತನನ್ನೂ ಬಲವಾಗಿ ತಳ್ಳಿದ್ದಾನೆ. ಬಳಿಕ ಪ್ಲಾಸ್ಟಿಕ್​​ ಕುರ್ಚಿಯಿಂದ ಸ್ವಾಮೀಜಿ ಮೇಲೆ ದಾಳಿ ನಡೆಸಿದ್ದು, ಅವರನ್ನು ಎಳೆದುಕೊಂಡು ಹೋಗಿ ಗೇಟ್​​ ಹತ್ತಿರ ತಳ್ಳಿ ನಿನ್ನನ್ನು ಎಲ್ಲರೂ ನೋಡುವ ಹಾಗೆ ಸಾಯಿಸುತ್ತೇನೆ ಎಂದು ಹೇಳಿ ಕುತ್ತಿಗೆಗೆ ಕೈ ಹಾಕಿ ಹಿಸುಕಿದ್ದಾನೆ. ಈ ವೇಳೆ ಮಠದ ಬಾಲಕ ಕಿರುಚಾಡಿದ್ದು ಕೂಡಲೇ ಬಂದ ಮಠದ ಸಿಬ್ಬಂದಿ ಸ್ವಾಮೀಜಿಯವರನ್ನು ಆರೋಪಿ ಕೈಯಿಂದ ಬಿಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  ದಾವಣಗೆರೆ-ಬೆಂಗಳೂರು ಪ್ರಯಾಣಕ್ಕೆ ಎರಡೂವರೆ ಗಂಟೆ ಸಾಕು! ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಮುಂದಿನ ವರ್ಷ ಸಿದ್ಧ

ಘಟನೆಯಲ್ಲಿ ಸ್ವಾಮೀಜಿ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಗಾಯಗಳಾಗಿದ್ದು, ಅವರನ್ನು ಗ್ರಾಮಸ್ಥರ ಸಹಾಯದಿಂದ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಸಿದ್ದರಾಮಯ್ಯ ವಿರುದ್ಧ ಸ್ವಾಮೀಜಿ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಠದ ಸ್ವಾಮೀಜಿಯ ಮೇಲೆಯೇ ಹಲ್ಲೆ ನಡೆದಿರೋದು ಭಕ್ತರ ಆತಂಕಕ್ಕೆ ಕಾರಣವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜಿಮ್ ಸೇರಿದ ವಾರದಲ್ಲೇ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಹೃದಯಾಘಾತದಿಂದ ಸಾವು – Kannada News | Youth Heart Attack: Gym Workout Fatal in Palamaneru, Precautions Vital

ಚಿತ್ತೂರು, ಫೆ.27: ಆರೋಗ್ಯ ವೃದ್ಧಿಸಿಕೊಳ್ಳಲು ಜಿಮ್ ಸೇರಿದ್ದ ಯುವ ಅಧಿಕಾರಿಯೊಬ್ಬರು, ಸೇರಿದ ಕೇವಲ ಒಂದು ವಾರದಲ್ಲೇ ವ್ಯಾಯಾಮದ ವೇಳೆ ಸಾವನ್ನಪ್ಪಿರುವ ದಾರುಣ ಘಟನೆ ಪಲಮನೇರು ಎಂಬಲ್ಲಿ ನಡೆದಿದೆ. ಮೃತರನ್ನು ಚಿತ್ತೂರು ಜಿಲ್ಲೆಯ ಪಲಮನೇರು ಪಟ್ಟಣದ ಡಿಸಿಸಿ ಬ್ಯಾಂಕ್ (DCC Bank) ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ (Assistant Manager) ಕೆಲಸ ಮಾಡುತ್ತಿದ್ದ ವಿಶ್ವನಾಥ್ ಎಂದು ಗುರುತಿಸಲಾಗಿದೆ. ಪ್ರತಿ ದಿನದಂತೆ ಇಂದು ಬೆಳಿಗ್ಗೆ ವಿಶ್ವನಾಥ್ ಜಿಮ್‌ಗೆ ಹೋಗಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ತಕ್ಷಣವೇ ತಮ್ಮ ಸ್ನೇಹಿತನಿಗೆ ಫೋನ್ ಮಾಡಿ ಜಿಮ್ ಬಳಿ ಬರುವಂತೆ ತಿಳಿಸಿದ್ದಾರೆ. ಸ್ನೇಹಿತ ಬಂದ ನಂತರ ಅಲ್ಲಿಯೇ ಎಳನೀರು ಕುಡಿದು ತುಸು ಚೇತರಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಎಳನೀರು ಕುಡಿದ ಕೆಲವೇ ಕ್ಷಣಗಳಲ್ಲಿ ವಿಶ್ವನಾಥ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಆಸ್ಪತ್ರೆಗೆ ತರುವ ದಾರಿಯಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.ಜಿಮ್ ಸೇರಿ ಕೇವಲ ಏಳು ದಿನಗಳಲ್ಲಿ ಈ ಘಟನೆ ನಡೆದಿರುವುದು ಜಿಮ್ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಜಿಮ್ ಸೇರುವ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನೂ ಓದಲು ಇಲ್ಲಿ ಇಲ್ಲಿ ಕ್ಲಿಕ್ ಮಾಡಿ

Source link