Viral Video: ಮೇಕೆ ಮರಿಯನ್ನು ರಕ್ಷಿಸಲು ಬಾಲಕನಿಗೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಇಳಿಸಿದ್ರು – Kannada News | Child Lowered Into Deep Well to Save Trapped Goat in Bihar Village
ಚಂಪಾರಣ್, ಫೆಬ್ರವರಿ 27: ಬಿಹಾರ(Bihar)ದ ಮೀತಿಹಾರಿ ಜಿಲ್ಲೆಯ ಪಹರ್ಪುರ ಪ್ರದೇಶದ ಹಳ್ಳಿಯೊಂದರಲ್ಲಿ ಮೇಕೆಯ ಮರಿಯೊಂದು ಆಳವಾದ ಬಾವಿಗೆ ಬಿದ್ದಿತ್ತು. ಅದನ್ನು ರಕ್ಷಿಸಲು ಪುಟ್ಟ ಬಾಲಕನಿಗೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಆತನನ್ನು ಇಳಿಸಿರುವ ವಿಡಿಯೋ ವೈರಲ್ ಆಗಿದೆ. ಮೇಕೆ ಮರಿಯನ್ನು ರಕ್ಷಿಸಲು ಬಾಲಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ. ಅದು ತೆರೆದ ಬಾವಿಯಾಗಿದ್ದು, ಬಾವಿ ಬಳಿ ಆಟವಾಡುತ್ತಿದ್ದ ಮೇಕೆ ಮರಿ ಹೇಗೋ ಬಾವಿಗೆ ಬಿದ್ದಿತ್ತು. ಅದರ ಕಿರುಚಾಟ ಕೇಳಿ ಗ್ರಾಮಸ್ಥರೆಲ್ಲರೂ ಅಲ್ಲಿಗೆ ಬಂದಿದ್ದರು. ಬಾವಿಯ ಆಳವು…