ಧರ್ಮಶಾಲಾದಲ್ಲಿ ನಿಲ್ಲದ ಮಳೆ; ಫಲಿತಾಂಶ ನಿರ್ಧರಿಸಲು ಕನಿಷ್ಠ ಎಷ್ಟು ಓವರ್ಗಳನ್ನು ಆಡಬೇಕು? – Kannada News | India vs Afghanistan ODI: Rain Delays Dharamshala Match; Check Rules for Minimum Overs, Refunds
ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯವನ್ನು ಇದುವರೆಗೂ ಆರಂಭಿಸಲು ಸಾಧ್ಯವಾಗಿಲ್ಲ.ಈ ಮೊದಲೇ ನಿಗದಿಪಡಿಸಿದಂತೆ ಪಂದ್ಯದ ಟಾಸ್ ಮಧ್ಯಾಹ್ನ 1ಗಂಟೆಗೆ ನಡೆಯಬೇಕಿತ್ತು. ನಂತರ ಪಂದ್ಯ 1:30ಕ್ಕೆ ಆರಂಭವಾಗಬೇಕಿತ್ತು. ಆದರೆ ಮಳೆ ಟಾಸ್ ನಡೆಸುವುದಕ್ಕೂ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಆಟಗಾರರು ಮತ್ತು ಅಭಿಮಾನಿಗಳು ಮಳೆ ನಿಲ್ಲುವುದಕ್ಕಾಗಿ ದೇವರಲ್ಲಿ ಮೊರೆ ಇಡುತ್ತಿದ್ದಾರೆ. ಅದೃಷ್ಟವಶಾತ್ ಮಳೆ ನಿಂತು ಪಂದ್ಯ ತಡವಾಗಿ ಆರಂಭವಾದರೆ ಪಂದ್ಯದ…