All posts by nagaraj11081993

ಸಾಲ ತೀರಿಸಲು ಕೆನರಾ, HDFC ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನ: ಸೈರನ್ ಸದ್ದಿಗೆ ಬೆದರಿ ಓಡಿದ್ದ ಕಳ್ಳ ಈಗ ಪೊಲೀಸ್ ವಶಕ್ಕೆ! – Kannada News | Bengaluru Crime: Hasan Saab Busted in Seshadripuram for Failed Bank ATM Heist

ಬೆಂಗಳೂರು, ಫೆ.24: ಶನಿವಾರ ಬೆಳಗಿನ ಜಾವ ಶೇಷಾದ್ರಿಪುರಂನಲ್ಲಿರುವ ಕೆನರಾ ಬ್ಯಾಂಕ್ ಮತ್ತು ಕಬ್ಬನ್ ಪೇಟೆಯ ಹೆಚ್.ಡಿ.ಎಫ್.ಸಿ (HDFC) ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನಸಿದ್ದ ಆರೋಪಿಯನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶೇಷಾದ್ರಿಪುರಂ ನಿವಾಸಿ ಹಸನ್ ಸಾಬ್ ಎಂದು ಗುರುತಿಸಲಾಗಿದೆ. ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಹಸನ್ ಸಾಬ್, ಶೇಷಾದ್ರಿಪುರಂನ ಕೆನರಾ ಬ್ಯಾಂಕ್‌ನ ಗ್ರಿಲ್ ಕಟ್ ಮಾಡಿ ಒಳಗೆ ನುಗ್ಗಿದ್ದನು. ಆದರೆ, ಬ್ಯಾಂಕ್‌ನಲ್ಲಿದ್ದ ಸೆಕ್ಯೂರಿಟಿ ಸೈರನ್ ಮೊಳಗಿದೆ ಗಾಬರಿಗೊಂಡು ಏನನ್ನೂ ಕಡಿಯಲಾಗದೆ ಅಲ್ಲಿಂದ ಓಡಿಹೋಗಿದ್ದನು.

ಇದರ ನಂತರ ಆರೋಪಿಯು ಕಬ್ಬನ್‌ಪೇಟೆಯಲ್ಲಿರುವ ಹೆಚ್.ಡಿ.ಎಫ್.ಸಿ ಬ್ಯಾಂಕ್ ಎಟಿಎಂನಲ್ಲೂ ಕಳ್ಳತನ ಮಾಡಿದ್ದಾನೆ ತನಿಖೆಯಿಂದ ತನಿಖೆಗೆ ಯತ್ನಿಸಿದ್ದ. ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ದಾಖಲೆಗಳ ಆಧಾರದ ಮೇಲೆ ಶೇಷಾದ್ರಿಪುರಂ ಪೊಲೀಸರು ಹಸನ್ ಸಾಬ್ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ, “ತನ್ನ ಮೇಲಿರುವ ಸಾಲವನ್ನು ತೀರಿಸಲು ಬೇರೆ ದಾರಿ ಕಾಣದೆ ಈ ಕಳ್ಳತನಕ್ಕೆ ಕೈ ಹಾಕಿದ್ದೆ” ಎಂದು ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಬೆಡ್​​​​​ ರೂಮ್​​ನಲ್ಲಿ ಹೆಂಡತಿ ಜತೆ ಮತ್ತೊಬ್ಬ ಗಂಡಸನ್ನು ನೋಡಿ ಪ್ರಜ್ಞೆ ತಪ್ಪಿದ ಪತಿ: ಕ್ಷಮಿಸು ಎಂದು ಗೋಳಾಡಿದ ಪತ್ನಿ

ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ, ಈ ಹಿಂದೆ ಬೇರೆ ಯಾವುದಾದರೂ ಕೃತ್ಯಗಳಲ್ಲಿ ಭಾಗವಹಿಸಿದ್ದಾನೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ವರದಿ: ಪ್ರದೀಪ್​​​​​ ಟಿವಿ9 ಬೆಂಗಳೂರು

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ranji Trophy Final: ಕರ್ನಾಟಕ ವಿರುದ್ಧ ಭರ್ಜರಿ ಶತಕ ಸಿಡಿಸಿದ ಶುಭಂ ಪುಂಡೀರ್ – Kannada News | Shubham Pundir’s Historic Ranji Final Century Powers J&K vs Karnataka in Hubballi

ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ಪರ 27 ವರ್ಷದ ಶುಭಂ ಪುಂಡೀರ್ ಅಜೇಯ ಶತಕ ಬಾರಿಸಿ ತಂಡವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ದಿದ್ದಾರೆ. ಶುಭಂ ಪುಂಡೀರ್ 186 ನೇ ಎಸೆತದಲ್ಲಿ ಬೃಹತ್ ಸಿಕ್ಸರ್‌ ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿ ಇತಿಹಾಸ ನಿರ್ಮಿಸಿದರು. ಇದೀಗ ಶುಭಂ ರಣಜಿ ಟ್ರೋಫಿ ಫೈನಲ್‌ನಲ್ಲಿ ಶತಕ ಗಳಿಸಿದ ಜಮ್ಮು ಮತ್ತು ಕಾಶ್ಮೀರದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶುಭಂ ಪುಂಡಿರ್ 186 ಎಸೆತಗಳಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ ಶತಕ ಪೂರೈಸಿದರು. ಇದು ರಣಜಿ ಟ್ರೋಫಿ ನಾಕೌಟ್ ಪಂದ್ಯದಲ್ಲಿ ಅವರ ಮೊದಲ ಶತಕ ಮತ್ತು ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಅವರ ನಾಲ್ಕನೇ ಶತಕವಾಗಿದೆ. ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಶುಭಂ ಪುಂಡಿರ್ ಅವರ ಬ್ಯಾಟ್ ಈ ಹಿಂದೆ ಮೌನವಾಗಿತ್ತು ಎಂಬುದನ್ನು ಗಮನಿಸಬೇಕಾದ ಸಂಗತಿ. ಆ ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 40 ರನ್‌ ಬಾರಿಸಿದ್ದರು. ಆದಾಗ್ಯೂ, ಫೈನಲ್‌ನಂತಹ ಭವ್ಯ ವೇದಿಕೆಯಲ್ಲಿ ಶತಕ ಗಳಿಸುವ ಮೂಲಕ, ಶುಭಂ ಪುಂಡಿರ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಪ್ರಸ್ತುತ ರಣಜಿ ಟ್ರೋಫಿ ಆವೃತ್ತಿಯಲ್ಲಿ ಇದು ಅವರ ಎರಡನೇ ಶತಕವಾಗಿದೆ.

ಶುಭಂ ಪುಂಡೀರ್ ಅವರ ಶತಕದಿಂದಾಗಿ, ಜಮ್ಮು ಮತ್ತು ಕಾಶ್ಮೀರ ತಂಡವು ಕರ್ನಾಟಕ ವಿರುದ್ಧದ ಫೈನಲ್‌ನಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 284 ರನ್ ಗಳಿಸಿದೆ. ಶುಭಂ ಪುಂಡೀರ್ ಮೊದಲ ದಿನ 117 ರನ್ ಗಳಿಸಿ ಅಜೇಯರಾಗಿ ಉಳಿದರೆ, ಅವರ ಜೊತೆಗೆ, ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಅಬ್ದುಲ್ ಸಮದ್ 52 ರನ್ ಗಳಿಸಿ ಅಜೇಯರಾಗಿದ್ದಾರೆ. ಆದ್ದರಿಂದ, ಜಮ್ಮು ಮತ್ತು ಕಾಶ್ಮೀರ ತಂಡವು ಎರಡನೇ ದಿನವೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಡ್​​​​​ ರೂಮ್​​ನಲ್ಲಿ ಹೆಂಡತಿ ಜತೆ ಮತ್ತೊಬ್ಬ ಗಂಡಸನ್ನು ನೋಡಿ ಪ್ರಜ್ಞೆ ತಪ್ಪಿದ ಪತಿ: ಕ್ಷಮಿಸು ಎಂದು ಗೋಳಾಡಿದ ಪತ್ನಿ – Kannada News | Viral Video: Man Faints Seeing Wife with Another; Emotional Trauma and Health Risks

ತನ್ನ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ತನ್ನದೇ ಮನೆಯಲ್ಲಿ ಇರುವುದನ್ನು ಕಂಡು 37 ವರ್ಷದ ವ್ಯಕ್ತಿಯೊಬ್ಬರು ತೀವ್ರ ಆಘಾತದಿಂದ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಹೇಳಲಾಗಿರುವ ವಿಡಿಯೋವೊಂದು ಎಕ್ಸ್​​​​ ಖಾತೆಯಲ್ಲಿ ವೈರಲ್​ ಆಗಿದೆ. ಪತಿಯು ಕೆಲಸ ಮುಗಿಸಿ ಮನೆಗೆ ಮರಳಿದಾಗ ತನ್ನ 25 ವರ್ಷದ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಇರುವುದನ್ನು ಕಂಡಿದ್ದಾನೆ ಎಂದು ಹೇಳಲಾಗಿದೆ. ಅತಿಯಾದ ಮಾನಸಿಕ ಒತ್ತಡ ಮತ್ತು ಭಾವನಾತ್ಮಕ ನೋವಿನಿಂದಾಗಿ ಆತನ ರಕ್ತದೊತ್ತಡದಲ್ಲಿ ಏರುಪೇರಾಗಿ, ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಗಂಡ ಬಿದ್ದಿರುವುದನ್ನು ಕಂಡು ಹೆಂಡತಿ ನನ್ನನ್ನು ಕ್ಷಮಿಸು ಎಂದು ಗೋಳಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇನ್ನು ಈ ಘಟನೆ ಎಲ್ಲಿ ನಡೆದಿದೆ ಎಂದು ತಿಳಿದಿಲ್ಲ. ಭಾಷೆಯನ್ನು ನೋಡಿದಾಗ ಇದು ಉತ್ತರ ಭಾರತದ ಘಟನೆ ಎಂದು ತಿಳಿಯುತ್ತದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಂಬ್ ಬೆದರಿಕೆ ಬಳಿಕ ಅಧಿಕೃತ ನಿವಾಸದಿಂದ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಸ್ಥಳಾಂತರ – Kannada News | Australian Prime Minister Anthony Albanese evacuated from his official residence after bomb threat

ನವದೆಹಲಿ, ಫೆಬ್ರವರಿ 24: ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಇಂದು ರಾತ್ರಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ (Anthony Albanese) ಅವರನ್ನು ಅವರ ಅಧಿಕೃತ ನಿವಾಸವಾದ ಕ್ಯಾನ್‌ಬೆರಾದಿಂದ ಸ್ಥಳಾಂತರಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾಗ 62 ವರ್ಷದ ಪ್ರಧಾನಿ ಅಲ್ಬನೀಸ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಯಿತು. ಅವರ ಅಧಿಕೃತ ನಿವಾಸದಲ್ಲಿ ಶೋಧ ಪೂರ್ಣಗೊಂಡ ನಂತರ ಅವರು ಮತ್ತೆ ತಮ್ಮ ನಿವಾಸಕ್ಕೆ ಹಿಂತಿರುಗಿದರು.

ಸಂಸತ್ ಭವನದ ಬಳಿ ಇರುವ ಪ್ರಧಾನಿ ನಿವಾಸದ ಬಳಿ ನಡೆದಿರುವ ಭದ್ರತಾ ಬೆದರಿಕೆಯ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಆಸ್ಟ್ರೇಲಿಯಾದ ಫೆಡರಲ್ ಪೊಲೀಸ್ ವಕ್ತಾರರು ದೃಢಪಡಿಸಿದ್ದಾರೆ. “ಸಂಪೂರ್ಣ ಶೋಧ ನಡೆಸಲಾಯಿತು. ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ. ಸಾರ್ವಜನಿಕ ಸುರಕ್ಷತೆಗೆ ಯಾವುದೇ ಬೆದರಿಕೆ ಇಲ್ಲ. ಸೂಕ್ತ ಸಮಯದಲ್ಲಿ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗುವುದು” ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಇದನ್ನೂ ಓದಿ: “ನೀನು ಭಾರತದ ನಾಯಿ”: ಆಸ್ಟ್ರೇಲಿಯಾದಲ್ಲಿ ಜನಾಂಗೀಯವಾಗಿ ನಿಂದಿಸಿ, ಭಾರತ ಮೂಲದ ವ್ಯಕ್ತಿ ಮೇಲೆ ಹಲ್ಲೆ

ಇಂದು ಬೆಳಗ್ಗೆ ಅಲ್ಬನೀಸ್ ತಮ್ಮ ನಿವಾಸದಲ್ಲಿ ಪತ್ರಕರ್ತರೊಬ್ಬರೊಂದಿಗೆ 1 ಗಂಟೆಯ ಸಂದರ್ಶನವನ್ನು ರೆಕಾರ್ಡ್ ಮಾಡಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಬಾಂಬ್ ಬೆದರಿಕೆ ಬಂದಿತ್ತು. ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮತ್ತು ಹಲವಾರು ಫೆಡರಲ್ ಸಂಸದರು ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಭದ್ರತಾ ಬೆದರಿಕೆಗಳನ್ನು ಎದುರಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕಾರ್ ರೇಸ್ ಎಂಜಾಯ್ ಮಾಡಿದ ಕಿಚ್ಚ ಸುದೀಪ್; ಹೇಗಿತ್ತು ಹೊಸ ಅನುಭವ? – Kannada News | Kichchas Kings Bengaluru owner Sudeep talks about Indian Racing Festival

ಇಂಡಿಯನ್ ರೇಸಿಂಗ್ ಫೆಸ್ಟಿವಲ್ (Indian Racing Festival) ಗೋವಾದಲ್ಲಿ ತನ್ನ ಚೊಚ್ಚಲ ಆವೃತ್ತಿಯನ್ನು ಆಯೋಜಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಗೋವಾ ರಾಜ್ಯ ಹೈ-ಆಕ್ಟೇನ್ ಫಾರ್ಮುಲಾ ಸ್ಟ್ರೀಟ್ ರೇಸ್ ವೀಕೆಂಡ್​ಗೆ ಸಾಕ್ಷಿಯಾಗಿದೆ. ಇದರಲ್ಲಿ ನಟ ಕಿಚ್ಚ ಸುದೀಪ್ ಅವರ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ (Kichchas Kings Bengaluru) ತಂಡ ಕೂಡ ಭಾಗಿಯಾಗಿದೆ. ‘ಇದು ಒಳ್ಳೆಯ ಅನುಭವ. ನಾವು ಮನೆಯಲ್ಲಿ ಕುಳಿತು ರೇಸ್ ನೋಡೋದಕ್ಕೂ ಇಲ್ಲಿ ಬಂದು ನೋಡೋದಕ್ಕೂ ಬಹಳ ವ್ಯತ್ಯಾಸ ಇದೆ. ನಮ್ಮ ತಂಡ ಬಹಳ ಚೆನ್ನಾಗಿ ಮಾಡಿದರು. ಅದರ ಬಗ್ಗೆ ನನಗೆ ತುಂಬ ಖುಷಿ ಇದೆ. ನನಗೆ ರೇಸಿಂಗ್ ಹೊಸದು. ಟೀಮ್ ತೆಗೆದುಕೊಳ್ಳುವಾಗ ನನಗೆ ಹೆಚ್ಚು ಮಾಹಿತಿ ಇರಲಿಲ್ಲ. ಈಗ ನಾನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ. ಇಲ್ಲಿ ತಯಾರಿ ಬಹಳ ಚೆನ್ನಾಗಿ ಮಾಡಿದ್ದಾರೆ’ ಎಂದು ಸುದೀಪ್ (Sudeep) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅನೈತಿಕ ಸಂಬಂಧ ಗುಟ್ಟು ರಟ್ಟು: ಒಂದೇ ಅವಾಜ್​​​ಗೆ ಯುವಕ ದುರಂತ ಸಾವು, ಆಗಿದ್ದೇನು? – Kannada News | A Youth Commits Suicide after threats from Man over extramarital affair with Woman at Tumakuru

ತುಮಕೂರು (ಫೆಬ್ರವರಿ .24): ವ್ಯಕ್ತಿಯೋರ್ವನ ಅಕ್ರಮ ಸಂಬಂಧದ (extramarital affair) ವಿಚಾರವನ್ನು ಆತನ ಹೆಂಡತಿಗೆ ತಿಳಿಸಿ ನ್ಯಾಯ ಕೊಡಿಸಲು ಹೋದ ಯುವಕನೊಬ್ಬ ದುರಂತ ಸಾವು ಕಂಡಿರುವ ದಾರುಣ ಘಟನೆ ತುಮಕೂರು (Tumakuru) ತಾಲೂಕಿನ ರಾಮೇನಹಳ್ಳಿಯಲ್ಲಿ ನಡೆದಿದೆ. ಹೌದು…ಚೇತನ್ ಎನ್ನುವ ಯುವಕ ನಾಗರಾಜ್ ಎನ್ನುವಾತನ ಮಹಿಳೆಯೊಂದಿಗಿನ ಅಕ್ರಮ ಸಂಬಂಧವನ್ನು ಆತನ ಹೆಂಡ್ತಿಗೆ ತಿಳಿಸಿದ್ದು, ಈ ವಿಚಾರವಾಗಿ ನಾಗರಾಜ್, ಚೇತನ್​​​ ಜತೆ ಗಲಾಟೆ ಮಾಡಿದ್ದಾನೆ. ಅಲ್ಲದೇ ಬೆದರಿಕೆ ಸಹ ಹಾಕಿದ್ದ. ಇದರಿಂದ ಮನನೊಂದ ಚೇತನ್​, ತನ್ನ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ತನ್ನ ಸಾವಿಗೆ ನಾಗರಾಜ್ ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅಕ್ರಮ ಸಂಬಂಧದ ಬಗ್ಗೆ ಆತನ ಪತ್ನಿ ಸುಮಾಗೆ ಮಾಹಿತಿ ನೀಡಿದ್ದ. ಕಟ್ಟೆ ನಾಗರಾಜು ಮತ್ತೋರ್ವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿಚಾರವನ್ನು ಚೇತನ್, ಸುಮಾಗೆ ತಿಳಿಸಿದ್ದರಿಂದ, ದಂಪತಿಗಳ ನಡುವೆ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿತ್ತು. ಈ ವೇಳೆ ಸುಮಾ, ಚೇತನ್ ತನಗೆ ಈ ವಿಚಾರ ತಿಳಿಸಿದ್ದಾಗಿ ಗಂಡನಿಗೆ ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ನಾಗರಾಜ್, ಚೇತನ್ ಮೇಲೆ ಜಗಳ ಮಾಡಿದ್ದಾನೆ. ಅಲ್ಲದೇ ಪ್ರಾಣ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ಹೆದರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದ್ರೆ, ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿರುವ ಚೇತನ್, ತನ್ನ ಸಾವಿಗೆ ಕಟ್ಟೆ ನಾಗರಾಜು ಎಂದು ಹೇಳಿದ್ದಾನೆ.

ಇದನ್ನೂ ಓದಿ: ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

ಮೊದಲು ಹೆಬ್ಬೂರು ಠಾಣೆ ಪೊಲೀಸರು ಆತ್ಮಹತ್ಯೆ ಎಂದು ದೂರು ದಾಖಲಿಸಿಕೊಂಡಿದ್ದರು. ಆದ್ರೆ, ಚೇತನ್​​ ಮೊಬೈಲ್ ನಲ್ಲಿದ್ದ ವಿಡಿಯೋ ನೋಡಿದ ತಂದೆ ಕೂಡಲೇ ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಎಫ್​​​ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಚೇತನ್​​ ವಿಡಿಯೋನಲ್ಲಿ ಹೇಳಿದ್ದ ನಾಗರಾಜನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

NITI Aayog: ನೀತಿ ಆಯೋಗ್​ಗೆ ಹಂಗಾಮಿ ಸಿಇಒ ಆಗಿ ನಿಧಿ ಛಿಬ್ಬರ್ ನೇಮಕ – Kannada News | IAS officer Nidhi Chhibber appointed as interim CEO of NITI Aayog

ನವದೆಹಲಿ, ಫೆಬ್ರುವರಿ 24: ನೀತಿ ಆಯೋಗ್​ಗೆ ಹಂಗಾಮಿ ಸಿಇಒ ಆಗಿ ಹಿರಿಯ ಐಎಎಸ್ ಅಧಿಕಾರಿ ನಿಧಿ ಛಿಬ್ಬರ್ (Nidhi Chhibber) ಅವರನ್ನು ಸರ್ಕಾರ ನೇಮಕ ಮಾಡಿದೆ. ಹಾಲಿ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರ ವಿಸ್ತೃತ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮುಂದಿನ ಸಿಇಒ ನೇಮಕವಾಗುವವರೆಗೂ ಹಂಗಾಮಿ ಸ್ಥಾನಕ್ಕೆ ನಿಧಿ ಅವರನ್ನು ಕೂರಿಸಲಾಗಿದೆ.

ನಿಧಿ ಛಿಬ್ಬರ್ ಅವರು ನೀತಿ ಆಯೋಗ್​ನಲ್ಲಿ ಅಭಿವೃದ್ಧಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕಚೇರಿಯಲ್ಲಿ ಮಹಾನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಸೇವೆಯ ಜೊತೆಗೆ ಹೆಚ್ಚುವರಿಯಾಗಿ ಸಿಇಒ ಹೊಣೆಗಾರಿಕೆಯನ್ನು ಅವರಿಗೆ ವಹಿಸಲಾಗಿದೆ. ಇವರ ನೇಮಕಾತಿ ಆದೇಶವನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ನೀಡಿದೆ.

ನಿಧಿ ಛಿಬ್ಬರ್ ಅವರು ನೀತಿ ಆಯೋಗ್​ನ ಸಿಇಒ ಸ್ಥಾನವನ್ನು ನಿಭಾಯಿಸಲಿರುವ ಎರಡನೇ ಮಹಿಳೆಯಾಗಿದ್ದಾರೆ. 2015ರಲ್ಲಿ ರಚನೆಯಾದ ನೀತಿ ಆಯೋಗ್​ನ ಮೊದಲ ಸಿಇಒ ಸ್ಥಾನಕ್ಕೆ ಸಿಂಧುಶ್ರೀ ಖುಲ್ಲರ್ ಅವರನ್ನು ನೇಮಕ ಮಾಡಲಾಗಿತ್ತು. ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ನೀತಿ ಆಯೋಗ್​ನ ನಾಲ್ಕನೇ ಸಿಇಒ ಆಗಿದ್ದಾರೆ.

ಇದನ್ನೂ ಓದಿ: ಡಿಸೆಂಬರ್ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.1 ಹಿಗ್ಗಿರುವ ಸಾಧ್ಯತೆ: ಎಸ್​ಬಿಐ ವರದಿಯಲ್ಲಿ ಅಂದಾಜು

ನೀತಿ ಆಯೋಗ್​ನ ಸಿಇಒಗಳಿವರು…

  1. ಸಿಂಧುಶ್ರೀ ಖುಲ್ಲರ್: 2015-16
  2. ಅಮಿತಾಭ್ ಕಾಂತ್: 2016-22
  3. ಪರಮೇಶ್ವರನ್ ಅಯ್ಯರ್: 2022-23
  4. ಬಿ.ವಿ.ಆರ್. ಸುಬ್ರಹ್ಮಣ್ಯಂ: 2023-26

ನೀತಿ ಆಯೋಗ್​ನ ಸಿಇಒ ಸ್ಥಾನ ಒಂದು ವರ್ಷದ ಅವಧಿಯದ್ದಿರುತ್ತದೆ. ಸುಬ್ರಹ್ಮಣ್ಯಂ ಅವರ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿತ್ತು. ಅದು ಫೆಬ್ರುವರಿ 24ಕ್ಕೆ ಮುಗಿದಿದೆ. ಅವರ ಅವಧಿಯನ್ನು ಮತ್ತಷ್ಟು ವಿಸ್ತರಿಸಲಾಗಿಲ್ಲ.

ಇದನ್ನೂ ಓದಿ: ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?

ಏನಿದು ನೀತಿ ಆಯೋಗ್?

ಇದು ಸರ್ಕಾರದ ಅತ್ಯುನ್ನತ ಮಟ್ಟದ ಚಿಂತನಾ ವೇದಿಕೆ. ಸರ್ಕಾರದ ಆರ್ಥಿಕ ನೀತಿ ವಿಚಾರದಲ್ಲಿ ಸಲಹೆ ನೀಡುವ ಗುಂಪಿದು. ಈ ಹಿಂದೆ ಇದ್ದ ಯೋಜನಾ ಆಯೋಗವನ್ನು ರದ್ದು ಮಾಡಿ ಈ ಸರ್ಕಾರ ನೀತಿ ಆಯೋಗ್ ರಚಿಸಿದೆ. ಈ ನೀತಿ ಆಯೋಗ್​ಗೆ ಪ್ರಧಾನಿಗಳು ಛೇರ್ಮನ್ ಆಗಿರುತ್ತಾರೆ. ಸದ್ಯ ವೈಸ್ ಛೇರ್ಮನ್ ಆಗಿ ಸುಮನ್ ಕೆ ಬೆರಿ ಅವರಿದ್ದಾರೆ. ಡಾ. ವಿ.ಕೆ. ಸಾರಸ್ವತ್, ಡಾ. ವಿ.ಕೆ. ಪೌಲ್, ಡಾ. ರಾಜೀವ್ ಗೌಬಾ, ರಮೇಶ್ ಚಂದ್ ಮತ್ತು ಅರವಿಂದ್ ವಿರ್ಮಾನಿ ಅವರು ನೀತಿ ಆಯೋಗ್​ನ ಪೂರ್ಣ ಸದಸ್ಯರಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

T20 World Cup: ತಂಡವನ್ನು ತೊರೆದು ಇದ್ದಕ್ಕಿದ್ದಂತೆ ಮನೆಗೆ ಮರಳಿದ ರಿಂಕು ಸಿಂಗ್ – Kannada News | Rinku Singh Exits T20 World Cup 2026: Family Emergency Hits Team India Ahead of Zimbabwe Clash

2026 ರ ಟಿ20 ವಿಶ್ವಕಪ್​ನ ಗುಂಪು ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಅಜೇಯ ತಂಡವಾಗಿ ಎಂಟ್ರಿಕೊಟ್ಟಿದ್ದ ಆತಿಥೇಯ ಟೀಂ ಇಂಡಿಯಾ, ಈ ಸುತ್ತಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲುಕಂಡಿದೆ. ಹೀಗಾಗಿ ಸೆಮಿಫೈನಲ್​ಗೇರಬೇಕೆಂದರೆ ಭಾರತ ತಂಡ ಉಳಿದಿರುವ ಎರಡೂ ಪಂದ್ಯಗಳಲ್ಲಿ ದೊಡ್ಡ ಗೆಲುವು ದಾಖಲಿಸಬೇಕಿದೆ.

ಹೀಗಾಗಿ ಜಿಂಬಾಬ್ವೆ ವಿರುದ್ಧದ ತನ್ನ ಎರಡನೇ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಳ್ಳುವ ಗುರಿಯೊಂದಿಗೆ ತಯಾರಿ ನಡೆಸುತ್ತಿದ್ದ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ರಿಂಕು ಸಿಂಗ್ ಅನಿರೀಕ್ಷಿತವಾಗಿ ತಂಡವನ್ನು ತೊರೆದು ತವರಿಗೆ ಮರಳಿದ್ದಾರೆ. ಕುಟುಂಬದ ತುರ್ತು ಪರಿಸ್ಥಿತಿ ಕಾರಣ ರಿಂಕು ಸಿಂಗ್ ಮನೆಗೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ.

ಟೀ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಚೆನ್ನೈನಲ್ಲಿ ಆಡಬೇಕಿತ್ತು. ಹೀಗಾಗಿ ರಿಂಕು ತಂಡದೊಂದಿಗೆ ಚೆನ್ನೈನಲ್ಲಿದ್ದರು. ಆದರೆ ರಿಂಕು ಸಿಂಗ್ ಅವರ ತಂದೆಯ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಗ್ರೇಟರ್ ನೋಯ್ಡಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಅವರನ್ನು ವೆಂಟಿಲೇಟರ್​ನಲ್ಲಿ ಇಡಲಾಗಿದೆ ಎಂದು ವರದಿಯಾಗಿದೆ.

ಹೀಗಾಗಿ ತಂದೆಯ ಅನಾರೋಗ್ಯದ ಕಾರಣ ಹಠಾತ್ತನೆ ಮನೆಗೆ ಮರಳಿದ ರಿಂಕು ಸಿಂಗ್ ಮಂಗಳವಾರ ಟೀಮ್ ಇಂಡಿಯಾದ ಅಭ್ಯಾಸ ಅವಧಿಗೆ ಗೈರುಹಾಜರಾಗಿದ್ದರು. ಫೆಬ್ರವರಿ 26 ರಂದು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆಗಳು ಕಡಿಮೆ ಎಂತಲೂ ವರದಿಯಾಗಿದೆ.

2026 ರ ಟಿ20 ವಿಶ್ವಕಪ್‌ನಲ್ಲಿ ರಿಂಕು ಸಿಂಗ್ ಅವರ ಬ್ಯಾಟಿಂಗ್ ಪ್ರದರ್ಶನ ಅಷ್ಟೇನೂ ಪ್ರಭಾವಶಾಲಿಯಾಗಿಲ್ಲ. ಅವರು ಫೀಲ್ಡಿಂಗ್‌ನಲ್ಲಿ ಪ್ರಭಾವ ಬೀರಿದ್ದರೂ, ಐದು ಪಂದ್ಯಗಳಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 24 ರನ್‌ ಮಾತ್ರ ಗಳಿಸಿದ್ದಾರೆ, ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 11 ರನ್‌ಗಳು. ಬೌಲಿಂಗ್​ನಲ್ಲಿ ಕೇವಲ ಒಂದು ಓವರ್ ಎಸೆದಿರುವ ರಿಂಕು 9 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.

Published On – 8:52 pm, Tue, 24 February 26

Source link

ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ: ಬಡತನ ಮೆಟ್ಟಿ ಜಡ್ಜ್ ಆದ ಮಗಳು – Kannada News | Bengaluru Auto Driver daughter Nagini Selected as civil court Judge

ತಂದೆ ಲಕ್ಷ್ಮಣ್, ಮಗಳು ನಾಗಿಣಿ, ತಾಯಿ ಮಂಜುಳಾ

ಬೆಂಗಳೂರು, (ಫೆಬ್ರವರಿ 24): ಆಕೆ ಬಡ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗಳು. ಆದ್ರೆ ಆಕೆಯ ಸಾಧನೆಗೆ ಬಡತನ ತೊಡಕಾಗಲಿಲ್ಲ. ಹಗಲಿರುಳು ಶದ್ಧೆಯಿಂದ ಓದಿ ನ್ಯಾಯಾಧೀಶೆ ಆಗುವ ಮೂಲಕ ಪೋಷಕರ ಕನಸು ನನಸು ಮಾಡಿದ್ದಾಳೆ. ಹೌದು…ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲ್ಲೂಕಿನ ತಿರುಪಾಳ್ಯ ಎಂಬ ಪುಟ್ಟ ಹಳ್ಳಿಯ ಹೆಣ್ಣುಮಗಳು ನಾಗಿಣಿ ಎಲ್, ಇಂದು ಸಿವಿಲ್ ನ್ಯಾಯಾಧೀಶೆಯಾಗಿ (Judge) ಆಯ್ಕೆಯಾಗುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ಆಟೋ ಚಾಲಕನ ಮಗಳಾಗಿ ಬೆಳೆದು, ಹೂವು ಮಾರುತ್ತಲೇ ಓದಿ, ಇಂದು ನ್ಯಾಯದ ಸೀಟಿನಲ್ಲಿ ಕುಳಿತುಕೊಳ್ಳಲು ಸಜ್ಜಾಗಿರುವುದು ಕೇವಲ ಒಂದು ಕುಟುಂಬದ ಯಶಸ್ಸಲ್ಲ, ಬದಲಿಗೆ ಹೋರಾಟದ ಹಾದಿಯಲ್ಲಿರುವ ಕೋಟ್ಯಂತರ ಯುವಜನತೆಗೆ ಮಾದರಿಯಾಗಿದ್ದಾರೆ.

ಬಡತನ ಮೆಟ್ಟಿ ನಿಂತ ನಾಗಿಣಿ

ನಾಗಿಣಿ ಅವರ ತಂದೆ ಲಕ್ಷ್ಮಣ್ ದಿನವಿಡೀ ಆಟೋ ಚಾಲನೆ ಮಾಡಿ ಬರುವ ಆದಾಯದಲ್ಲಿ ಸಂಸಾರ ನಡೆಸುತ್ತಿದ್ದರೆ, ತಾಯಿ ಮಂಜುಳಾ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದರು. ಮನೆಯಲ್ಲಿ ಬಡತನ ತಾಂಡವವಾಡುತ್ತಿದ್ದರೂ, ಮಗಳ ವಿದ್ಯಾಭ್ಯಾಸಕ್ಕೆ ಪೋಷಕರು ಎಂದೂ ಅಡ್ಡಿಯಾಗಲಿಲ್ಲ. ನಾಗಿಣಿ ಕೂಡ ಬಾಲ್ಯದಿಂದಲೇ ತಾಯಿಗೆ ಹೂವಿನ ವ್ಯಾಪಾರದಲ್ಲಿ ನೆರವಾಗುತ್ತಿದ್ದರು. ಒಂದು ಕೈಯಲ್ಲಿ ಹೂವಿನ ಮಾರು ಇರುತ್ತಿದ್ದರೆ, ಕಣ್ಣುಗಳು ಪುಸ್ತಕದ ಸಾಲುಗಳ ಮೇಲೆ ಇರುತ್ತಿದ್ದವು. 1ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿಯೇ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತಂದೆ ಆಟೋ ಡ್ರೈವರ್, ತಾಯಿ ಹೂವಿನ ವ್ಯಾಪಾರಿ ಆದರೂ ಬಡತನವನ್ನ ಮೆಟ್ಟಿ ನಿಂತು ನಾಗಿಣಿ ಅವರು ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದ ಚಿತ್ರದುರ್ಗದ ಆಟೋ ಚಾಲಕನ ಮಗಳೀಗ ನ್ಯಾಯಾಧೀಶೆ !

ತಂದೆ-ತಾಯಿ ಫುಲ್ ಖುಷ್

ಚಿಕ್ಕಂದಿನಿಂದಲೂ ಓದಿನಲ್ಲಿ ಸದಾ ಮುಂದೆ ಇದ್ದ ನಾಗಿಣಿ , ಬೆಳಗ್ಗೆ ಅಮ್ಮ ಕಟ್ಟಿ ಕೊಟ್ಟ ಹೂವನ್ನು ಮಾರಾಟ ಮಾಡಿ ಶಾಲೆಗೆ ಹೋಗುತ್ತಿದ್ದಳು. ವಕೀಲೆಯಾಗಿ ವೃತ್ತಿ ಆರಂಭಿಸಿದ ಬಳಿಕವು ಹಗಲಿರುಳು ಓದುತ್ತಿದ್ದರು. ಮಗಳು ಶ್ರಮಪಟ್ಟಿದ್ದಕ್ಕೆ ಈಗ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಖುಷಿಯಾಗಿದೆ ಎಂದು ತಾಯಿ ಮಂಜುಳಾ ಸಂತಸ ಹಂಚಿಕೊಂಡಿದ್ದಾರೆ.

ಇನ್ನು ಬಡತನವಿದ್ದರೂ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎಂದು ನಿತ್ಯ ಆಟೋ ಚಾಲಕನಾಗಿ ದುಡಿಯುತ್ತಿದ್ದೇನೆ. ಅದರ ಜೊತೆ ಬೆಳಗ್ಗೆ ಮತ್ತು ಸಂಜೆ ಮಗಳನ್ನು ಶಾಲೆ ಮತ್ತು ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದೆ. ನಮ್ಮ ಕಷ್ಟ ಅರಿತಿದ್ದ ಮಗಳು ಸಹ ಹಗಲಿರುಳು ಕಷ್ಟಪಟ್ಟು ಓದಿ ಇಂದು ಇಡೀ ಊರಿನ ಜನತೆ ಹೆಮ್ಮೆಪಡುವ ರೀತಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾಳೆ. ಮೊದಲಿಂದಲೂ ಚೆನ್ನಾಗಿ ಓದುತ್ತಿದ್ದಳು. ಮಗಳು ನಮ್ಮ ಶ್ರಮಕ್ಕೆ ತಕ್ಕಂತೆ ಓದಿ ನಮ್ಮ ಕನಸು ನನಸು ಮಾಡಿದ್ದಾಳೆ. ಮಗಳ ಸಾಧನೆ ನನಗೆ ಖುಷಿ ತಂದಿದೆ. ನ್ಯಾಯಾಧೀಶೆಯಾಗಿ ನೊಂದವರಿಗೆ ದನಿಯಾಗಲಿ ಎಂದು ತಂದೆ ಲಕ್ಷ್ಮಣ್ ಮಗಳಿಗೆ  ಕಿವಿಮಾತು ಹೇಳಿ ಶುಭ ಹಾರೈಸಿದ್ದಾರೆ.

ಒಟ್ಟಿನಲ್ಲಿ ಇತ್ತೀಚೆಗೆ ಯುವ ಸಮೂಹ ದುಷ್ಟ ಚಟಗಳಿಗೆ ದಾಸರಾಗಿ ಕಾಲೇಜು ದಿನಗಳಲ್ಲಿಯೇ ಹಾದಿ ತಪ್ಪುತ್ತಿದ್ದಾರೆ. ಆದ್ರೆ ಚಿಕ್ಕ ವಯಸ್ಸಿನಲ್ಲಿಯೇ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ನಾಗಿಣಿ, ಯುವ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಆ ತಪ್ಪು ಮಾಡಿದ ನಂತರ ಜಾತಕ ಸರಿಯಿಲ್ಲವೆಂದು ಮದುವೆ ಬೇಡವೆನ್ನುವಂತಿಲ್ಲ; ಹೈಕೋರ್ಟ್​ ತೀರ್ಪು – Kannada News | Refusing Marriage After physical relationship Due to Kundali Mismatch Is Offense Says Delhi High Court

ನವದೆಹಲಿ, ಫೆಬ್ರವರಿ 24: ಮದುವೆಯ ಭರವಸೆ ನೀಡಿ, ಲೈಂಗಿಕ ಸಂಬಂಧ ಹೊಂದಿ, ನಂತರ ಜಾತಿ ಕೂಡಿಬರುವುದಿಲ್ಲ ಎಂದು ಮದುವೆಯನ್ನು ರದ್ದುಗೊಳಿಸುವುದು ಅಪರಾಧ ಎಂದು ದೆಹಲಿ ಹೈಕೋರ್ಟ್ (Delhi High Court) ಹೇಳಿದೆ. ಜಾತಕ ಹೊಂದಾಣಿಕೆಯ ಆಧಾರದ ಮೇಲೆ ನಂತರ ಮದುವೆಯಾಗಲು ನಿರಾಕರಿಸುವುದು, ನಿರಂತರ ಲೈಂಗಿಕ ಸಂಬಂಧದ ನಂತರ ಮದುವೆ ಬೇಡ ಎನ್ನುವುದು ಕಾನೂನು ರೀತಿಯಲ್ಲಿಯೂ ಅಪರಾಧ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಮತ್ತು ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 69ರ ಅಡಿಯಲ್ಲಿ ಪ್ರಕರಣ ದಾಖಲಿಸಲಾದ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಫೆಬ್ರವರಿ 17ರಂದು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಡ್ರಗ್ಸ್, ಅತ್ಯಾಚಾರ, ಮತಾಂತರ; ಭೋಪಾಲ್​​ನ ಅಕ್ಕ-ತಂಗಿಯರ ಲೈಂಗಿಕ ಜಾಲ ಪತ್ತೆ

ನ್ಯಾಯಾಲಯವು ಕೇವಲ ಸಮ್ಮತಿಯನ್ನಷ್ಟೇ ಅಲ್ಲ, ನಡವಳಿಕೆಯನ್ನು ಕೂಡ ಪರಿಶೀಲಿಸುತ್ತದೆ. ಆರೋಪಿಯ ನಡವಳಿಕೆಯನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲಾಗಿದೆ. ದೂರುದಾರರು ತನಗೆ ವಿವಾಹದ ಪುನರಾವರ್ತಿತ ಭರವಸೆಗಳನ್ನು ನೀಡಿ ದೀರ್ಘಕಾಲದಿಂದ ಲೈಂಗಿಕ ಸಂಬಂಧವನ್ನು ಹೊಂದಿದ್ದಾರೆ ಎಂದು ಆರೋಪಿಸಿರುವುದನ್ನು ಕೋರ್ಟ್ ಗಮನಿಸಿದೆ. ಆದರೆ, ಅಂತಿಮವಾಗಿ ಜಾತಕ ಹೊಂದಾಣಿಕೆಯಿಲ್ಲದ ಕಾರಣದಿಂದ ಮದುವೆಯನ್ನು ನಿರಾಕರಿಸಲಾಯಿತು. ಈ ಬಗ್ಗೆ ಮೊದಲೇ ಯೋಚಿಸಬೇಕಾಗಿತ್ತು. ಸುಳ್ಳು ಭರವಸೆ ನೀಡಿ ತನ್ನ ಕಾಮತೃಷೆ ತೀರಿಸಿಕೊಂಡು ಜಾತಕದ ನೆಪ ನೀಡುವುದು ಅಪರಾಧ ಎಂದು ಕೋರ್ಟ್ ಹೇಳಿದೆ.

ಆರೋಪಿ ದೂರುದಾರ ಯುವತಿಗೆ ತಮ್ಮ ಜಾತಕ ಹೊಂದಿಕೆಯಾಗುತ್ತವೆ ಮತ್ತು ಸದ್ಯದಲ್ಲೇ ಮದುವೆಯಾಗೋಣ ಎಂದು ಹೇಳಿದ್ದ ವಾಟ್ಸಾಪ್ ಚಾಟ್‌ಗಳನ್ನು ಹೈಕೋರ್ಟ್ ಗಮನಿಸಿದೆ. ಅದರಲ್ಲಿ “ಕಲ್ ಹಿ ಶಾದಿ ಕರ್ ರಹೇ ಹೈ ಹಮ್” (ನಾಳೆಯೇ ನಾವು ಮದುವೆಯಾಗೋಣ) ಎಂಬ ಸಂದೇಶವೂ ಸೇರಿತ್ತು.

ಇದನ್ನೂ ಓದಿ: ಜಾತಕದಲ್ಲಿ ದೋಷವಿದೆ ಎಂದು ಯುವತಿ ಮೇಲೆ ಅರ್ಚಕ ಮಸಲತ್ತು: ಸಮಸ್ಯೆ ನಿವಾರಣೆ ನೆಪದಲ್ಲಿ ಅತ್ಯಾಚಾರ

ಒಂದುವೇಳೆ, ಆರೋಪಿ ಮತ್ತು ಅವನ ಕುಟುಂಬಕ್ಕೆ ಜಾತಕ ಹೊಂದಾಣಿಕೆಯೇ ಮುಖ್ಯವಾಗಿದ್ದರೆ ಅದನ್ನು ಪ್ರಾರಂಭದಲ್ಲಿಯೇ ಪರಿಶೀಲಿಸಬೇಕಾಗಿತ್ತು ಎಂದು ನ್ಯಾಯಾಲಯ ಒತ್ತಿಹೇಳಿತು. ಹಲವು ವರ್ಷಗಳ ಭರವಸೆಗಳ ನಂತರ ಜಾತಕದ ವಿಷಯ ಮುಂದೆ ತಂದು ಮದುವೆ ಬೇಡ ಎಂದಿರುವುದು ಸರಿಯಲ್ಲ. ಇದು ಸುಳ್ಳು ಅಥವಾ ಮೋಸಗೊಳಿಸುವ ಭರವಸೆಯ ಆಧಾರದ ಮೇಲೆ ಲೈಂಗಿಕ ಸಂಬಂಧಗಳಿಗೆ ಒಪ್ಪಿಗೆಯನ್ನು ಪಡೆಯಲಾಗಿದೆಯೇ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆರೋಪಿಗೆ ಜಾಮೀನು ನಿರಾಕರಿಸಲಾಗಿದೆ ಎಂದು ನ್ಯಾಯಮೂರ್ತಿ ಶರ್ಮಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link