ಮಹಿಳೆಯರ ಮೇಲೆ ಹರಿದ ಸರ್ಕಾರಿ ಬಸ್: ಓರ್ವ ಮಹಿಳೆಯ ಕಾಲು ಕಟ್, ಇಬ್ಬರಿಗೆ ಗಂಭೀರ ಗಾಯ! – Kannada News | KKRTC Driver Negligence Causes Horrific Accident at Gadag Bus Stand; 3 Women Critical
ಗದಗ,ಫೆ.24: ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯಕ್ಕೆ ಅಮಾಯಕ ಪ್ರಯಾಣಿಕರು ಬಲಿಯಾಗುತ್ತಿರುವ ಘಟನೆಗಳು ಮುಂದುವರಿದಿವೆ. ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (KKRTC) ಬಸ್ ಹರಿದು ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಯಚೂರು ವಿಭಾಗದ ಮಾಸ್ಕಿ ಡಿಪೋಗೆ ಸೇರಿದ ಬಸ್ ಚಾಲಕ, ನಿಲ್ದಾಣದ ಒಳಗೆ ಅತಿವೇಗವಾಗಿ ಬಸ್ ಚಾಲನೆ ಮಾಡಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯರ ಮೇಲೆ ಬಸ್ ಹರಿದಿದೆ. ಸುನಗ ಗ್ರಾಮದ ನಿವಾಸಿ ಶಾಂತವ್ವ…