Headlines

nagaraj11081993

ಅರೆಬೆತ್ತಲೆ ಪ್ರತಿಭಟನೆಗೆ ಖರ್ಗೆ ಸಮರ್ಥನೆ: ದೇಶದ ಹಿತಕ್ಕಾಗಿ ಪ್ರೊಟೆಸ್ಟ್​​​​ ಎಂದ AICC ಅಧ್ಯಕ್ಷ – Kannada News | Mallikarjun Kharge Defends Youth Congress Protest at AI Summit: Condemns Arrests

ಮಲ್ಲಿಕಾರ್ಜುನ ಖರ್ಗೆImage Credit source: Tv9 Kannada ಬೆಂಗಳೂರು, ಫೆಬ್ರವರಿ 24: ದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯ (AI Impact Summit) ಸಭಾಂಗಣದೊಳಗೆ ಶರ್ಟ್ ಬಿಚ್ಚಿ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯರ್ತರ ನಡೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಯೂತ್​ ಕಾಂಗ್ರೆಸ್​ ಮುಖಂಡರ ಬಂಧನವನ್ನು ಖಂಡಿಸುತ್ತೇನೆ ಎಂದಿರುವ ಖರ್ಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಸಹಜ. ದೇಶದ ಹಿತಕ್ಕಾಗಿ ಇಂತಹ ಪ್ರೊಟೆಸ್ಟ್​​ಗಳು ಆಗುತ್ತವೆ ಎಂದು ಹೇಳಿದ್ದಾರೆ. ಯೂತ್​​ ಕಾಂಗ್ರೆಸ್​​ ಕಾರ್ಯಕರ್ತರ…

Read More

ಯಶ್ ‘ಟಾಕ್ಸಿಕ್’ ಕಲೆಕ್ಷನ್ ಪ್ಲ್ಯಾನ್ ಹೇಗಿದೆ? ವಾರಕ್ಕೆ ಎಷ್ಟಾಗುತ್ತದೆ ಗಳಿಕೆ? – Kannada News | Yash starrer Toxic movie Box office prediction here is the calculation

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆ ಹಕ್ಕು ಮಾರಾಟ, ಡಿಜಿಟಲ್ ಹಕ್ಕು ಮಾರಾಟ ಇನ್ನಿತರೆಗಳನ್ನು ಇತ್ತೀಚೆಗಷ್ಟೆ ಚಿತ್ರತಂಡ ಮುಗಿಸಿದೆ. ‘ಟಾಕ್ಸಿಕ್’ ಸಿನಿಮಾದ ಪ್ರಚಾರಕ್ಕಾಗಿ ಯಶ್ ಇನ್ನೂ ಹೊರಬಂದಿಲ್ಲ ಆದರೂ ಸಹ ಈಗಾಗಲೇ ‘ಟಾಕ್ಸಿಕ್’ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ. ಪ್ರಚಾರವನ್ನು ಇನ್ನೂ ಆರಂಭಿಸದಿದ್ದರೂ ಸಹ ಸಿನಿಮಾದ ಯಶಸ್ಸಿಗೆ ದೊಡ್ಡ ಯೋಜನೆಯನ್ನೇ ಯಶ್ ಹಾಕಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಕೇವಲ ಒಂದು…

Read More

ಗಂಗಾರತಿ ಮೂಲಕ ನದಿ ತಿರುವು ಯೋಜನೆ ವಿರುದ್ಧ ಸತ್ಯಾಗ್ರಹ; ವಿಶಿಷ್ಟ ಕರೆ ನೀಡಿದ ಸ್ವರ್ಣವಲ್ಲಿ ಶ್ರೀಗಳು – Kannada News | Uttara Kannada River Diversion Project Swarnavalli Mutt Leads Gangarati Protest To Save Rivers

ಉತ್ತರ ಕನ್ನಡ ಜಿಲ್ಲೆಗೆ ಸದ್ಯ ನದಿ ತಿರುವು ಯೋಜನೆಯ ಭೂತ ಕಾಡುತ್ತಿದೆ. ಇಲ್ಲಿ ಹರಿಯುವ ವಿವಿಧ ನದಿ ಹಾಗೂ ಹಳ್ಳಗಳಿಗೆ ಡ್ಯಾಮ್ ಕಟ್ಟಿ, ಉತ್ತರ ಕರ್ನಾಟಕದ ಕಡೆಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಇದಾಗಿದೆ. ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಸುರಿಯಲು ಸರ್ಕಾರ ಮುಂದಾಗಿದೆ. ಇದರಿಂದ ಪಶ್ಚಿಮಘಟ್ಟದ ನಾಶ ಖಚಿತ ಎಂಬ ಅಭಿಪ್ರಾಯ ತಜ್ಞರದ್ದು. ಆದಾಗ್ಯೂ ನಾವು ಯೋಜನೆ ಮಾಡಿಯೇ ತಿರುತ್ತೇವೆ ಎಂಬ ಹುಂಬುತನ ರಾಜಕಾಣಿಗಳದ್ದು. ಜನವರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಯೋಜನೆ ವಿರುದ್ಧ…

Read More

Ranji Trophy final: ಫೈನಲ್ ಪಂದ್ಯ ಡ್ರಾ ಆದರೆ ಯಾರು ಚಾಂಪಿಯನ್? – Kannada News | If ranji final is draw who will win

ರಣಜಿ ಟೂರ್ನಿಯ 91ನೇ ಸೀಸನ್​ನ ಫೈನಲ್​ ಪಂದ್ಯ ಶುರುವಾಗಿದೆ. ಹುಬ್ಬಳ್ಳಿಯ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ಈ ಬಾರಿಯ ಫೈನಲ್​ನಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಜಮ್ಮು-ಕಾಶ್ಮೀರ ತಂಡದ ನಾಯಕ ಪರಸ್ ಡೋಗ್ರಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಮೊದಲ ಇನಿಂಗ್ಸ್ ಆಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಭೋಜನಾ ವಿರಾಮದ ವೇಳೆಗೆ 34 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 104 ರನ್​ ಕಲೆಹಾಕಿದೆ. ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿರುವ ಕಾಶ್ಮೀರಿ ಪಡೆ ಮೊದಲ ಇನಿಂಗ್ಸ್​ನಲ್ಲಿ ಬೃಹತ್…

Read More

ಬಲ್ಡೋಟಾ ಕಾರ್ಖಾನೆ ವಿರುದ್ಧ ಸಿಡಿದ ರೈತರು: ಸರ್ಕಾರದ ಶವಯಾತ್ರೆ, ಜನಪ್ರತಿನಿಧಿಗಳಿಗೆ ತರಾಟೆ – Kannada News | Baldota Factory Expansion Sparks Large Scale Farmer Protest in Koppal

ಬೃಹತ್​​ ಪ್ರತಿಭಟನೆImage Credit source: Tv9 Kannada ಕೊಪ್ಪಳ, ಫೆಬ್ರವರಿ 24: ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆಯ ವಿಸ್ತರಣೆಯನ್ನು ವಿರೋಧಿಸಿ ರೈತರು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಕಾರ್ಖಾನೆಯಿಂದ ಹೊರಬರುವ ಹೊಗೆ ಮತ್ತು ಧೂಳಿನಿಂದಾಗಿ ತಮ್ಮ ಬೆಳೆಗಳು ಹಾಳಾಗುತ್ತಿವೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗವಿಮಠದ ಆವರಣದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದೆ. ರೈತರ ಆಕ್ರೋಶ ಹಾಲಿವರ್ತಿ ಪ್ರದೇಶದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಕಡಲೆ, ಮೆಕ್ಕೆಜೋಳ, ಜೋಳ ಸೇರಿದಂತೆ…

Read More

NCERT: ಎಂಟನೇ ತರಗತಿಯ ಹೊಸ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ – Kannada News | NCERT Class 8 Textbook Flags Judicial Corruption and Case Backlog as Key Issues

ನವದೆಹಲಿ, ಫೆಬ್ರವರಿ 24: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸೋಮವಾರ 8 ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪುಸ್ತಕವನ್ನು ಬಿಡುಗಡೆ ಮಾಡಿದೆ. ಹೊಸ ಪುಸ್ತಕವು ನ್ಯಾಯಾಂಗ(Judiciary)ದ ಪಾತ್ರವನ್ನು ವಿವರಿಸುವ, ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಮತ್ತು ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳಂತಹ ಸವಾಲುಗಳನ್ನು ಪರಿಹರಿಸುವ ಹೊಸ ವಿಭಾಗವನ್ನು ಒಳಗೊಂಡಿದೆ. ಈ ವಿಷಯಗಳನ್ನು ಹಳೆಯ ಪುಸ್ತಕದಲ್ಲಿ ನೇರವಾಗಿ ಉಲ್ಲೇಖಿಸದ ಕಾರಣ ಈ ಬದಲಾವಣೆಯು ಮಹತ್ವದ್ದಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ…

Read More

Video: ಶಾಲೆ ಬಿಟ್ಟೊಡನೆ ಪುಸ್ತಕವನ್ನು ಚರಂಡಿಗೆ ಎಸೆದು ಹೋದ ಪುಟಾಣಿ – Kannada News | The little girl who threw the book into the drain and danced away

ಈಗಿನ ಮಕ್ಕಳಿಗೂ (children) ಕೂಡ ಶಾಲೆಗೆ ಹೋಗೋದು, ಓದೋದು, ಹೋಮ್ ವರ್ಕ್ (home work) ಮಾಡುವುದೆಂದರೆ ದೊಡ್ಡ ತಲೆ ನೋವು. ಅದರಲ್ಲೂ ಈಗಿನ ಕಾಲದ ಮಕ್ಕಳಿಗೆ ಮುದ್ದು ಜಾಸ್ತಿ. ಮಕ್ಕಳು ಹೋಮ್ ವರ್ಕ್ ಮಾಡಲ್ಲ ಎಂದು ಹಠ ಹಿಡಿದರೆ ಅಮ್ಮನೇ ಹೋಮ್ ವರ್ಕ್ ಮಾಡಿಸಿಕೊಡುವಷ್ಟು ಮುದ್ದು ಹೆಚ್ಚಾಗಿದೆ. ಆದರೆ ಈ ವಿಡಿಯೋ ನೋಡಿದ ಮೇಲೆ ಈ ಪುಟಾಣಿಗೆ ಎಷ್ಟು ಟೆನ್ಶನ್ ಇದೆ ಎಂದು ತಿಳಿಯುತ್ತೆ. ಹೌದು, ಶಾಲೆಯಿಂದ ಮನೆಗೆ ಹೊರಟ ಪುಟಾಣಿಯೂ ಬ್ಯಾಗ್‌ನಲ್ಲಿದ್ದ ಪುಸ್ತಕ ತೆಗೆದು ಚರಂಡಿಗೆ…

Read More

Exam Tips: ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ? ಶಿಕ್ಷಣ ತಜ್ಞರ ಸಲಹೆ ಇಲ್ಲಿದೆ – Kannada News | Dr Gururaj Karajagis Simple Tips for Exam Time Management and Focused Study

ಖ್ಯಾತ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿಯವರು ಟಿವಿ9ನ ವಿಶೇಷ ಪಾಡ್‌ಕಾಸ್ಟ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಸಮಯ ನಿರ್ವಹಣೆ ಮತ್ತು ಗೊಂದಲ ನಿವಾರಣೆ ಕುರಿತು ಸಲಹೆ ನೀಡಿದ್ದಾರೆ. ವಿದ್ಯಾರ್ಥಿಗಳು ಅನೇಕ ವಿಷಯಗಳನ್ನು ಕಲಿಯಲು ಪ್ರಯತ್ನಿಸಿ ಗೊಂದಲಕ್ಕೊಳಗಾಗುವುದನ್ನು ತಪ್ಪಿಸಲು, ಒಂದೇ ವಿಷಯದ ಮೇಲೆ ಆಳವಾಗಿ ಗಮನ ಹರಿಸುವಂತೆ ಅವರು ಸೂಚಿಸಿದ್ದಾರೆ. ಪರೀಕ್ಷಾ ಸಮಯದಲ್ಲಿ ಉತ್ತರಗಳನ್ನು ಬರೆಯುವಾಗ ಸಮಯದ ಕೊರತೆ ಎದುರಾಗುವುದನ್ನು ತಪ್ಪಿಸಲು, ಅಂಕಗಳಿಗೆ ಅನುಗುಣವಾಗಿ ಉತ್ತರಗಳ ಉದ್ದವನ್ನು ನಿರ್ಧರಿಸಲು ಸಲಹೆ ನೀಡಲಾಗಿದೆ. ಹೆಚ್ಚಿನ ಉತ್ತರ ಬರೆಯುವುದರಿಂದ ಸಮಯ ವ್ಯರ್ಥವಾಗುತ್ತದೆ ಮತ್ತು ಇತರ…

Read More

ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಲ್ಲಿರುವ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ? – Kannada News | Inactive EPF accounts with balance of certain amount to get direct refund to bank account

ನವದೆಹಲಿ, ಫೆಬ್ರುವರಿ 24: ಇಪಿಎಫ್​ಒದಲ್ಲಿ (EPFO) ನಿಷ್ಕ್ರಿಯವಾಗಿರುವ ಪಿಎಫ್ ಅಕೌಂಟ್​ಗಳ ಸಂಖ್ಯೆ ಬಹಳ ಇದೆ. ಹೊಸ ಪಿಎಫ್ ಖಾತೆಗೆ ವರ್ಗಾವಣೆ ಆಗದ, ಹಾಗೂ ಮೂರು ವರ್ಷಗಳಿಂದ ಪ್ರೀಮಿಯಮ್ ಸಂದಾಯ ಆಗದೇ ಇರುವ ಖಾತೆಗಳು ಇನ್ಯಾಕ್ಟಿವ್ ಎನಿಸುತ್ತವೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಮಹತ್ವದ ತೀರ್ಮಾನ ಕೈಗೊಂಡಿದ್ದು, ಒಂದು ಸಾವಿರ ರೂವರೆಗೆ ಬ್ಯಾಲನ್ಸ್ ಇರುವ ನಿಷ್ಕ್ರಿಯ ಇಪಿಎಫ್ ಖಾತೆಯಲ್ಲಿರುವ ಹಣವನ್ನು ನೇರವಾಗಿ ರೀಫಂಡ್ ಮಾಡಲಿದೆ. ಸರ್ಕಾರದ ಈ ಆಲೋಚನೆ ಉಪಯುಕ್ತವೆನಿಸಬಹುದು. ಒಂದು ಸಾವಿರ ರೂವರೆಗೆ ಬ್ಯಾಲನ್ಸ್…

Read More

ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು! ಸಿಸಿ ಕ್ಯಾಮಾರದಲ್ಲಿ ದೃಶ್ಯ ಸೆರೆ – Kannada News | Wild Elephants Enter Mayaganahalli, CCTV Captures Movement

ರಾಮನಗರ, ಫೆಬ್ರವರಿ 24: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಗ್ರಾಮದ ಬಳಿ ನಾಲ್ಕು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದೆ. ತಡರಾತ್ರಿ ಸಮಯದಲ್ಲಿ ಕಾಡಿನಿಂದ ನಾಡಿಗೆ ಬಂದ ಗಜಪಡೆ ಗ್ರಾಮದಲ್ಲಿ ಸಂಚರಿಸುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಗೊಂಡಿವೆ. ಈ ಆನೆಗಳ ಹಿಂಡು ಬನ್ನೇರಘಟ್ಟ ಅರಣ್ಯ ಪ್ರದೇಶದಿಂದ ಗ್ರಾಮ ಭಾಗಕ್ಕೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮದಲ್ಲಿ ಹಾದುಹೋಗಿದ ಆನೆಗಳು ಹಾನಿ ಉಂಟುಮಾಡುವ ಸಾಧ್ಯತೆ ಇರುವುದರಿಂದ ರೈತರು ಆತಂಕದಲ್ಲಿದ್ದಾರೆ. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್…

Read More