All posts by nagaraj11081993

ನಾನೇ ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು; ಮತ್ತೆ ಹಳೇ ರಾಗ ಹಾಡಿದ ಟ್ರಂಪ್, ಶೆಹಬಾಜ್ ಷರೀಫ್ ಗಪ್​ಚುಪ್ – Kannada News | Donald Trump Says 11 Jets Shot Down During India Pakistan Conflict Praises PM Modi

ವಾಷಿಂಗ್ಟನ್, ಫೆಬ್ರವರಿ 20: ಕಳೆದ ವರ್ಷ ಭಾರತ-ಪಾಕಿಸ್ತಾನ ದೇಶಗಳ ನಡುವಿನ ಉದ್ವಿಗ್ನತೆಯ ಸಮಯದಲ್ಲಿ 11 ದುಬಾರಿ ಜೆಟ್‌ಗಳನ್ನು ಹೊಡೆದುರುಳಿಸಲಾಯಿತು. ಆಗ ನಾನು ಎರಡೂ ದೇಶಗಳು ಯುದ್ಧ ನಿಲ್ಲಿಸದಿದ್ದರೆ ಶೇ. 200ರಷ್ಟು ಸುಂಕ ವಿಧಿಸುತ್ತೇನೆ ಎಂದು ಬೆದರಿಕೆ ಹಾಕಿದ್ದೆ. ಎರಡೂ ದೇಶಗಳ ನಡುವಿನ ಸಂಘರ್ಷ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದ್ದೆ ಎಂದು ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು “ಒಬ್ಬ ಮಹಾನ್ ವ್ಯಕ್ತಿ” ಎಂದು ಹೊಗಳಿದ್ದಾರೆ.

ಟ್ರಂಪ್ ಈ ಹೇಳಿಕೆ ನೀಡುವ ವೇಳೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಅಲ್ಲೇ ಇದ್ದರು. ಆದರೂ ಅವರು ಈ ಹೇಳಿಕೆಯನ್ನು ಅಲ್ಲಗಳೆಯಲಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಲಿದ್ದ ಯುದ್ಧವನ್ನು ನಿಲ್ಲಿಸಲು ನಾನು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿದ್ದೆ. ಯುದ್ಧಗಳು ಉಲ್ಬಣಗೊಳ್ಳುತ್ತಿದ್ದ ಸಮಯದಲ್ಲಿ ಎರಡೂ ದೇಶಗಳ ನಾಯಕರೊಂದಿಗೆ ನೇರವಾಗಿ ಮಾತನಾಡಿದ್ದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಈ ಹೇಳಿಕೆಯನ್ನು ಭಾರತ ಈ ಹಿಂದೆ ಸಾಕಷ್ಟು ಬಾರಿ ನಿರಾಕರಿಸಿದೆ.

ಇದನ್ನೂ ಓದಿ: ಹತ್ತು ದಿನ ಟೈಂ ಕೊಡ್ತೀನಿ, ಹೇಳಿದ್ದು ಕೇಳದೆ ಇದ್ರೆ ಯುದ್ಧ ಗ್ಯಾರಂಟಿ, ಇರಾನ್​ಗೆ ಗಡುವು ಕೊಟ್ಟ ಟ್ರಂಪ್

ಮೇ 2025ರಲ್ಲಿ ಭಾರತ-ಪಾಕ್ ಸಂಘರ್ಷದ ಸಮಯದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇರಲಿಲ್ಲ ಎಂದು ಭಾರತ ನಿರಂತರವಾಗಿ ಹೇಳುತ್ತಲೇ ಇದೆ. ಹಾಗೇ, ಭಾರತ ಎಷ್ಟು ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎಂಬ ಬಗ್ಗೆ ಭಾರತ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೂ ಟ್ರಂಪ್ 11 ದುಬಾರಿ ಜೆಟ್​ಗಳು ಪತನವಾಗಿವೆ ಎಂಬ ಹೇಳಿಕೆ ನೀಡಿದ್ದಾರೆ.

“ಆ ಯುದ್ಧವು ಬಿರುಸಾಗಿತ್ತು. ವಿಮಾನಗಳನ್ನು ಹೊಡೆದುರುಳಿಸಲಾಗುತ್ತಿತ್ತು. ನಾನು ಅವರಿಬ್ಬರೊಂದಿಗೂ ಫೋನ್ ಮಾತುಕತೆ ನಡೆಸಿದ್ದೆ. ನನಗೆ ಪ್ರಧಾನಿ ಮೋದಿ ಚೆನ್ನಾಗಿ ತಿಳಿದಿದ್ದರು. ಅವರು ಆತ್ಮೀಯವಾಗಿದ್ದರಿಂದ ಈ ಬಗ್ಗೆ ಮಾತನಾಡಿ ಮನವೊಲಿಸಿದ್ದೆ” ಎಂದು ಟ್ರಂಪ್ ಹೇಳಿದ್ದಾರೆ.

“ನಾನು ಅವರಿಗೆ ಕರೆ ಮಾಡಿ, ನೀವು ಈ ಸಂಘರ್ಷವನ್ನು ಇತ್ಯರ್ಥಪಡಿಸದಿದ್ದರೆ ನಾನು ನಿಮ್ಮಿಬ್ಬರೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ. ನೀವು ದಾಳಿ ಮುಂದುವರೆಸಿದರೆ ನಿಮ್ಮ ಎರಡೂ ದೇಶಗಳ ಮೇಲೆ ನಾನು ಶೇ. 200ರಷ್ಟು ಸುಂಕಗಳನ್ನು ವಿಧಿಸುತ್ತೇನೆ ಎಂದು ಹೇಳುವ ಮೂಲಕ ಎರಡೂ ದೇಶಗಳಿಗೆ ಗಂಭೀರ ಆರ್ಥಿಕ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದೆ. ಇದರಿಂದಲೇ ಅವರು ಒಪ್ಪಿಕೊಂಡರು” ಎಂದು ಟ್ರಂಪ್ ಹೇಳಿದ್ದಾರೆ. ಭಾರತದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡ ನಂತರವೂ ಟ್ರಂಪ್ ಅದೇ ಹಳೆಯ ಹೇಳಿಕೆ ನೀಡುತ್ತಿರುವುದು ಭಾರತದ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಟ್ರಂಪ್ ಮಾಡಿಕೊಂಡ ವ್ಯಾಪಾರ ಒಪ್ಪಂದದ 7 ಹೈಲೈಟ್ಸ್ ಇಲ್ಲಿವೆ

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಈ ಕದನವಿರಾಮದಲ್ಲಿ ಟ್ರಂಪ್ ಅವರ ಪಾತ್ರವನ್ನು ಸಾರ್ವಜನಿಕವಾಗಿ ಶ್ಲಾಘಿಸಿದ್ದಾರೆ. ಅವರ ಹಸ್ತಕ್ಷೇಪವನ್ನು ಸಮಯೋಚಿತ ಮತ್ತು ಪರಿಣಾಮಕಾರಿ ಎಂದು ಕರೆದಿದ್ದಾರೆ. ಆದರೆ ಭಾರತವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇರಲಿಲ್ಲ ಎಂದು ನಿರಾಕರಿಸಿದೆ. ಎರಡು ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMOs) ನಡುವಿನ ಮಾತುಕತೆಗಳ ಮೂಲಕ ದ್ವಿಪಕ್ಷೀಯವಾಗಿ ಯುದ್ಧವನ್ನು ನಿಲ್ಲಿಸಲಾಗಿದೆ ಎಂದು ಭಾರತ ಸಮರ್ಥಿಸಿಕೊಂಡಿದೆ.

2025ರ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರನ್ನು ಕೊಂದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಕಳೆದ ವರ್ಷ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:17 pm, Fri, 20 February 26

Source link

Ranji Trophy final 2026: ಫೈನಲ್​​ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ – Kannada News | Ranji Trophy final 2026: Karnataka squad Announced for final Match Against Jammu Kashmir at hubballi On feb 24

ಬರೋಬ್ಬರಿ 11 ವರ್ಷದ ಬಳಿಕ ಕರ್ನಾಟಕ (Karnataka) ಕ್ರಿಕೆಟ್ ತಂಡ ರಣಜಿ ಟ್ರೋಫಿ (Ranji Trophy) ಫೈನಲ್‌ ಪ್ರವೇಶಿಸಿದೆ. ಉತ್ತರಾಖಂಡ(Uttarakhand) ವಿರುದ್ಧದ ಸೆಮಿಫೈನಲ್​​ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಸಾಧಿಸಿದ್ದರಿಂದ ಕರ್ನಾಟಕ ಸುಲಭವಾಗಿ ಫೈನಲ್‌ ಪ್ರವೇಶಿಸಿದ್ದು,  ಫೆಬ್ರವರಿ 24 ರಿಂದ ಹುಬ್ಬಳ್ಳಿಯಲ್ಲಿ ನಡೆಯಲಿರುವ  ಫೈನಲ್‌ (Final) ಪಂದ್ಯದಲ್ಲಿ ಜಮ್ಮು ಕಾಶ್ಮೀರ (Jammu Kashmir) ತಂಡವನ್ನು ಎದುರಿಸಲಿದೆ. ಹೀಗಾಗಿ ಅಂತಿಮ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಟೀಂನಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಸೆಮಿಫೈನಲ್​​​ ಆಡಿದ ತಂಡವೇ ಫೈನಲ್​​​​​​​ ನಲ್ಲಿ ಕಣಕ್ಕಿಳಿಯಲಿದೆ.

ಫೈನಲ್​ ಮ್ಯಾಚ್​​​ಗೆ ಪ್ರಕಟಿಸಲಾದ 15 ಆಟಗಾರರ ತಂಡವನ್ನು ನೋಡಿದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಲಿಷ್ಠವಾಗಿದೆ. ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸಲಿದ್ದು, ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಬ್ಯಾಟ್ ಬೀಸಲಿದ್ದಾರೆ. ಹೀಗೆ ಸಾಲು ಸಾಲು ದಾಂಡಿಗರು ಇದ್ದಾರೆ.

ಇದನ್ನೂ ಓದಿ: Ranji Trophy 2025-26: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​​ ಪಂದ್ಯ; ರಾಜ್ ನಗರ ಸ್ಟೇಡಿಯಂ ಬಗ್ಗೆ ನಿಮಗೆಷ್ಟು ಗೊತ್ತು?

ಲಕ್ನೋನ ಎಕಾನ ಮೈದಾನದಲ್ಲಿ ಉತ್ತರಾಖಂಡದ ವಿರುದ್ಧದ ಸೆಮೀಸ್​​ನಲ್ಲಿ ಮೊದಲು ಬ್ಯಾಟಿಂಗ್​ಗಿಳಿದ ಕರ್ನಾಟಕ ತಂಡ ಡಾಮಿನೇಟಿಂಗ್​ ಪರ್ಫಾಮೆನ್ಸ್​ ನೀಡಿತು. ನಾಯಕ ದೇವದತ್​ ಪಡಿಕ್ಕಲ್​ ಡಬಲ್​ ಸೆಂಚುರಿ ಬಾರಿಸಿದ್ರೆ, ಕೆ.ಎಲ್​ ರಾಹುಲ್, ಸ್ಮರಣ್​ ರವಿಚಂದ್ರನ್ ಶತಜ ಸಿಡಿಸಿ ಮಿಂಚಿದ್ದರು. ಕೃತಿಕ್ ಕೃಷ್ಣ, ವಿದ್ಯಾದರ್​ ಪಾಟೀಲ್​ ಆಫ್​ ಸೆಂಚುರಿ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಹೀಗೆ ಕರ್ನಾಟಕ ಬ್ಯಾಟ್ಸ್​​ಮನ್​ಗಳು ಫಾರ್ಮ್​​ನಲ್ಲಿದ್ದು, ಫೈನಲ್​​​ನಲ್ಲೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.

ಇನ್ನು ಕರ್ನಾಟಕ ಬೌಲಿಂಗ್ ವಿಭಾಗದಲ್ಲೂ ಸಹ ಸ್ಟ್ರಾಂಗ್ ಆಗಿದೆ. ಸೆಮೀಸ್​​ನಲ್ಲಿ ವಿಧ್ಯಾದರ್​ ಪಾಟೀಲ್, ವೈಶಾಕ್ ವಿಜಯ್ ಕುಮಾರ್​ ಬಿರುಗಾಳಿಯ ದಾಳಿ ಸಂಘಟಿಸಿದ್ರೆ, ಶ್ರೇಯಸ್​ ಗೋಪಾಲ್ ಸ್ಪಿನ್ ಮ್ಯಾಜಿಕ್ ಮಾಡಿದ್ದರು. ಶಿಖರ್​​ ಶೆಟ್ಟಿ, ಪ್ರಸಿದ್ಧ್​​ ಕೃಷ್ಣ ಕೂಡ ಬ್ಯಾಟರ್ಸ್​ಗೆ ಕಾಟ ಕೊಟ್ಟಿದ್ದರು. ಇದರಿಂದ ಕನ್ನಡಿಗರ ಸಂಘಟಿತ ದಾಳಿಗೆ ಉತ್ತರಾಖಾಂಡ ಉಡೀಸ್​ ಆಯ್ತು. ಇದೇ ಪರ್ಫಾಮೆನ್ಸ್​ ಫೈನಲ್​​​ನಲ್ಲೂ ತೋರಿದರೆ ಕರ್ನಾಟಕ ಪ್ರಶಸ್ತಿಗೆ ಮುತ್ತಿಕ್ಕುವುದು  ಗ್ಯಾರಂಟಿ.

ಇದನ್ನೂ ಓದಿ: 11 ವರ್ಷಗಳ ಬಳಿಕ ಫೈನಲ್​ಗೇರಿದ ಕರ್ನಾಟಕ

ಕರ್ನಾಟಕ ತಂಡ: ದೇವದತ್ ಪಡಿಕ್ಕಲ್ (ನಾಯಕ), ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಕೆವಿ ಅನೀಶ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆಎಲ್ ಶ್ರೀಜಿತ್, ವಿಜಯಕುಮಾರ್ ವೈಶಾಕ್.

ಹುಬ್ಬಳ್ಳಿಯಲ್ಲಿ ಫೈನಲ್​ ಕದನ

ಈ ಸೀಸನ್​ನಲ್ಲಿ ಬೊಂಬಾಟ್​ ಪ್ರದರ್ಶನ ನೀಡಿದ ಕರ್ನಾಟಕ ತಂಡ ಬರೋಬ್ಬರಿ 11 ವರ್ಷಗಳ ಫೈನಲ್​​ಗೆ ಎಂಟ್ರಿ ಕೊಟ್ಟಿದೆ. ಅತ್ತ ರಣಜಿ ಟ್ರೋಫಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರ ತಂಡ ಫೈನಲ್​ಗೆ ಬಂದಿದೆ. ಕರ್ನಾಟಕ ತಂಡ 9ನೇ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ರೆ, ಜಮ್ಮು ಕಾಶ್ಮೀರ ಚೊಚ್ಚಲ ಟ್ರೋಫಿ ಗೆಲುವಿನ ಕನವರಿಕೆಯಲ್ಲಿದೆ. ಹೀಗಾಗಿ ಹುಬ್ಬಳ್ಳಿಯ ರಾಜ್​ನಗರ್​ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್​ ಕದನ ರೋಚಕತೆ ಪಡೆಯಲಿದೆ. ಇನ್ನು ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಪಕ್ಕಾ.

Published On – 6:11 pm, Fri, 20 February 26

Source link

ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು – Kannada News | Valsad Tragedy: Speeding Lorry Collides with Car, Seven Fatalities in Kaprada

ವಲ್ಸಾದ್, ಫೆ.20: ಗುಜರಾತ್‌ನ ವಲ್ಸಾದ್ ಜಿಲ್ಲೆಯ ಕಪ್ರಡಾ (Kaprada) ತಾಲ್ಲೂಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಅತಿ ವೇಗವಾಗಿ ಬಂದ ಸರಕು ಸಾಗಣೆ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಲು ಸೂಚಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಬಂಗಾಳದ SIR ಪ್ರಕ್ರಿಯೆಗೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಸುಪ್ರೀಂ ಕೋರ್ಟ್‌ ಆದೇಶ – Kannada News | Supreme court orders deployment of judicial officers to oversee west bengal sir claims

ನವದೆಹಲಿ, ಫೆಬ್ರವರಿ 20: ಪಶ್ಚಿಮ ಬಂಗಾಳದ SIR (West Bengal SIR) ಮೇಲ್ವಿಚಾರಣೆಗೆ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲು ಕೊಲ್ಕತ್ತಾ ಹೈಕೋರ್ಟ್​ಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಅಧಿಕಾರಿಗಳ ನಿಯೋಜನೆ ಕುರಿತು ಭಾರತದ ಚುನಾವಣಾ ಆಯೋಗ (ECI) ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಭಾರತದ ಸುಪ್ರೀಂ ಕೋರ್ಟ್ (SC) ಮಧ್ಯಪ್ರವೇಶಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ನೇತೃತ್ವದ ನ್ಯಾಯಪೀಠವು, ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮತ್ತು ತೆಗೆದುಹಾಕುವಿಕೆಗೆ ಸಂಬಂಧಿಸಿದ ಬಾಕಿ ಇರುವ ಆಕ್ಷೇಪಣೆಗಳನ್ನು ನಿರ್ಣಯಿಸಲು ಜಿಲ್ಲಾ ನ್ಯಾಯಾಧೀಶರು ಅಥವಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ಹಾಲಿ ಮತ್ತು ಮಾಜಿ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸುವಂತೆ ಕೊಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಸೂಚಿಸಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಎಸ್​ಐಆರ್​ಗೆ ಫೆ. 21ರವರೆಗೆ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್

ಹಾಗೇ, ಸುಪ್ರೀಂ ಕೋರ್ಟ್ ಬಂಗಾಳದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ರಾಜ್ಯ ಚುನಾವಣಾ ಆಯುಕ್ತರು ಕೊಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಭೇಟಿ ಮಾಡಲು ನಿರ್ದೇಶಿಸಿತು. ಫೆಬ್ರವರಿ 28ರೊಳಗೆ ಸಾಧ್ಯವಾದಷ್ಟು ಬೇಗ ಎಸ್‌ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಡ್ವೊಕೇಟ್ ಜನರಲ್ ಮತ್ತು ಸಾಲಿಸಿಟರ್ ಜನರಲ್ ಸಮ್ಮುಖದಲ್ಲಿ ಈ ಸಭೆ ನಡೆಯಲಿದೆ.

ರಾಜ್ಯ-ಸರ್ಕಾರ ಮತ್ತು ಸಾಂವಿಧಾನಿಕ ಸಂಸ್ಥೆಗಳ ನಡುವೆ ಭಿನ್ನಾಭಿಪ್ರಾಯ ಇರುವುದರಿಂದ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದೆ. ಮತದಾರರ ಪಟ್ಟಿಯಲ್ಲಿನ ತಾರ್ಕಿಕ ವ್ಯತ್ಯಾಸಗಳ ಕುರಿತಾದ ವಿವಾದಗಳನ್ನು ಆಲಿಸಲು ಜಿಲ್ಲಾ ಮಟ್ಟದ ನ್ಯಾಯಾಧೀಶರನ್ನು ನೇಮಿಸುವ ಮೂಲಕ, ಆಕ್ಷೇಪಣೆಗಳ ನ್ಯಾಯಯುತ, ಸಕಾಲಿಕ ಮತ್ತು ಕಾನೂನು ಆಧಾರಿತ ಪರಿಹಾರವನ್ನು ನೀಡುವ ಗುರಿಯನ್ನು ಸುಪ್ರೀಂ ಕೋರ್ಟ್ ಹೊಂದಿದೆ.

ಇದನ್ನೂ ಓದಿ: ಎಸ್​ಐಆರ್ ಒತ್ತಡದಿಂದ ಬಂಗಾಳದಲ್ಲಿ 150 ಜನ ಸಾವು; ಸುಪ್ರೀಂ ಕೋರ್ಟ್​ನಲ್ಲಿ ಮಮತಾ ಬ್ಯಾನರ್ಜಿ ವಾದ

ಚುನಾವಣಾ ವಿಷಯಗಳಲ್ಲಿ ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳದಂತಹ ರಾಜಕೀಯವಾಗಿ ಸೂಕ್ಷ್ಮ ರಾಜ್ಯದಲ್ಲಿ ಪಾರದರ್ಶಕ ತೀರ್ಪು ಕಾರ್ಯವಿಧಾನಗಳ ಮೇಲೆ ನ್ಯಾಯಾಂಗವು ಇರಿಸುವ ಪ್ರಾಮುಖ್ಯತೆಯನ್ನು ಈ ಆದೇಶವು ಒತ್ತಿಹೇಳುತ್ತದೆ. ಫೆಬ್ರವರಿ 21ರ ಕರಡು ಅಥವಾ ಅಂತಿಮ ಪ್ರಕಟಣೆ ದಿನಾಂಕವನ್ನು ನಿರ್ಣಾಯಕವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಖ ನೋಡಿದ್ರೆ ಸಾಕು ನಿಮಗಿರುವ ರೋಗ ಹೇಳುತ್ತೆ ಈ ಯಂತ್ರ! – Kannada News | Revolutionary AI Tools for Early Disease Diagnosis

Revolutionary AI Tools for Early Disease DiagnosisImage Credit source: Getty Images

ಇಲ್ಲಿಯವರೆಗೆ, ವೈದ್ಯರು ನಿಮ್ಮ ನಾಡಿಮಿಡಿತವನ್ನು ಪರೀಕ್ಷಿಸುವ ಮೂಲಕ ಅಥವಾ ವಿವಿಧ ರೀತಿಯ ಪರೀಕ್ಷೆಗಳನ್ನು ಮಾಡುವ ಮೂಲಕ ರೋಗಗಳನ್ನು ಪತ್ತೆಹಚ್ಚುತ್ತಿದ್ದರು, ಆದರೆ ಈಗ ತಂತ್ರಜ್ಞಾನವು ವೈದ್ಯಕೀಯ ಜಗತ್ತನ್ನೇ ಬದಲಾಯಿಸಲು ಪ್ರಾರಂಭಿಸಿದೆ. ಕೃತಕ ಬುದ್ಧಿಮತ್ತೆ ಅಥವಾ ಎಐ (AI Technology), ಈಗ ಆರೋಗ್ಯ ತಪಾಸಣೆಗಳಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ. ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ, ಕೇವಲ 30 ಸೆಕೆಂಡುಗಳಲ್ಲಿ ಮುಖವನ್ನು ಪರಿಶೀಲಿಸುವ ಮೂಲಕ ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ಸೂಚಿಸುವ ತಂತ್ರಜ್ಞಾನವನ್ನು ಪ್ರದರ್ಶಿಸಲಾಗಿದೆ. ಈ ವ್ಯವಸ್ಥೆಯು ಮುಖದ ಎಕ್ಸ್‌ಪ್ರೆಶನ್ ಅಂದರೆ ಭಾವನೆಗಳನ್ನು, ಚರ್ಮದ ಬಣ್ಣ ಮತ್ತು ಇತರ ಲಕ್ಷಣಗಳನ್ನು ಅಧ್ಯಯನ ಮಾಡಿ ನಿಮಗಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಡಾ. ಜನ್ ಆರೋಗ್ಯ ಕೇಂದ್ರದ ಯೋಜನಾ ವ್ಯವಸ್ಥಾಪಕ ದಿವ್ಯಾಂಶು ಅವರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು, ವಿಶೇಷ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನವು ರೋಗಿಗಳಿಗೆ ತಕ್ಷಣದ ಆರಂಭಿಕ ಆರೋಗ್ಯ ಸೂಚಕಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಸಕಾಲಿಕ ಪರೀಕ್ಷೆ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುತ್ತದೆ. ನೀವು ಈ ಪರದೆಯ ಮುಂದೆ ನಿಂತರೆ ಸಾಕು ಅದು ನಿಮ್ಮ ಮುಖವನ್ನು ನೋಡಿ ಸುಮಾರು 30 ಸೆಕೆಂಡುಗಳ ಬಳಿಕ ನಿಮ್ಮ ದೇಹದಲ್ಲಿರುವ ಆರೋಗ್ಯ ಸಮಸ್ಯೆಗಳನ್ನು ಮುಂದಿರುವ ಪರದೆಯ ಮೇಲೆ ಪ್ರದರ್ಶಿಸುತ್ತದೆ. ರಕ್ತದೊತ್ತಡ, ನಾಡಿ ಮಿಡಿತ, ನಾಳೀಯ ಬಿಗಿತ, ಹೃದಯ ಬಡಿತ, ಹಿಮೋಗ್ಲೋಬಿನ್, ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್‌ಗಳು, ಎಚ್ ಡಿ ಎಲ್ (HDL) ಕೊಲೆಸ್ಟ್ರಾಲ್, ಎಲ್ ಡಿ ಎಲ್ (LDL) ಕೊಲೆಸ್ಟ್ರಾಲ್, ಲಿಪೊಪ್ರೋಟೀನ್, ಒತ್ತಡದ ಮಟ್ಟ, ಮಧುಮೇಹ ಅಪಾಯ ಮತ್ತು ಕೊಬ್ಬಿನ ಮಟ್ಟಗಳ ಬಗ್ಗೆ ಮಾಹಿತಿ ನೀಡುತ್ತದೆ. ಇದರೊಂದಿಗೆ, ವಿವಿಧ ಕಾಯಿಲೆಗಳು ಯಾವ ಮಟ್ಟದಲ್ಲಿದೆ ಎಂಬುದರ ಬಗ್ಗೆಯೂ ಮಾಹಿತಿ ನೀಡುತ್ತದೆ.

ಇದನ್ನೂ ಓದಿ: ಹೊಟ್ಟೆ ಮತ್ತು ಕರುಳನ್ನು ಪರೀಕ್ಷಿಸಲು ಮಾತ್ರೆಯಂತಹ ವಿಭಿನ್ನ ಸಾಧನವನ್ನು ಕಂಡುಹಿಡಿದ ವಿಜ್ಞಾನಿಗಳು

ವರದಿಯ ನಂತರ ವೈದ್ಯರ ಸಲಹೆ:

ಸಾಮಾನ್ಯವಾಗಿ ವರದಿ ಬಂದ ತಕ್ಷಣ, ವೈದ್ಯರು ತಕ್ಷಣವೇ ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಈ ಪ್ರಶ್ನೆಗಳು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿರುತ್ತವೆ. ಅದರ ನಂತರ, ಅಗತ್ಯವಿದ್ದರೆ, ವೈದ್ಯರು ಕೆಲವು ಇತರ ಪರೀಕ್ಷೆಗಳನ್ನು ಮಾಡಲು ಸೂಚಿಸುತ್ತಾರೆ. ಮತ್ತೆ ಅಗತ್ಯವಿದ್ದರೆ, ಹೆಚ್ಚುವರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷಾ ವರದಿಯ ನಂತರ, ವೈದ್ಯರು ಪ್ರಿಸ್ಕ್ರಿಪ್ಷನ್ ಅನ್ನು ನೀಡುತ್ತಾರೆ, ಅದರ ಆಧಾರದ ಮೇಲೆ ನೀವು ಔಷಧಿಗಳನ್ನು ಖರೀದಿಸಬಹುದಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಐ, ಡೀಪ್​ಫೇಕ್ ಸ್ಟಾರ್ಟಪ್​ಗಳ ಸಿಇಒಗಳೊಂದಿಗೆ ಪ್ರಧಾನಿ ಮೋದಿ ಸಭೆ; ಓಪನ್​ಎಐ, ಆಂಥ್ರೋಪಿ ಸಿಇಒಗಳ ವೈಮನಸ್ಸು ಬಹಿರಂಗ? – Kannada News | PM Modi holds roundtable meeting with chiefs of Indian AI startups during AI Impact Summit

ನವದೆಹಲಿ, ಫೆಬ್ರುವರಿ 20: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತ್ ಮಂಟಪಂ ಬಳಿಯ ಸೇವಾ ತೀರ್ಥದಲ್ಲಿ ಉದಯೋನ್ಮುಖ ಎಐ ಮತ್ತು ಡೀಪ್​ಟೆಕ್ ಸ್ಟಾರ್ಟಪ್​ಗಳ ಸಂಸ್ಥಾಪಕರು ಮತ್ತು ಸಿಇಒಗಳೊಂದಿಗೆ ದುಂಡುಮೇಜಿನ ಸಭೆ ನಡೆಸಿದರು. ಪ್ರಮುಖ ಸೆಕ್ಟರ್​ಗಳಲ್ಲಿ ದೊಡ್ಡಮಟ್ಟದ ಸವಾಲುಗಳಿಗೆ ಪರಿಹಾರ ಹುಡುಕುತ್ತಿರುವ ಸ್ಟಾರ್ಟಪ್​ಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದವು. ಒಟ್ಟು 16 ಸ್ಟಾರ್ಟಪ್​ಗಳ ಸಿಇಒಗಳು ಪಾಲ್ಗೊಂಡಿದ್ದರು. ಸೈಬರ್ ಸೆಕ್ಯೂರಿಟಿ, ಎಥಿಕಲ್ ಎಐ, ಬಾಹ್ಯಾಕಾಶ, ಸಾಮಾಜಿಕ ಸಬಲೀಕರಣ ಇತ್ಯಾದಿ ಕ್ಷೇತ್ರಗಳಲ್ಲಿ ವಿವಿಧ ಎಐ ಪರಿಹಾರಗಳನ್ನು ಒದಗಿಸಲು ನಿರತವಾಗಿರುವ ಕಂಪನಿಗಳಿವು.

ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಈ ಸ್ಟಾರ್ಟಪ್​ಗಳ ಕಾರ್ಯವನ್ನು ಶ್ಲಾಘಿಸಿದರು. ಕೃಷಿ ಕ್ಷೇತ್ರದಲ್ಲಿ ಬೆಳೆ ಉತ್ಪನ್ನತೆ, ರಸಗೊಬ್ಬರ ಬಳಕೆಯನ್ನು ಪರಿವೀಕ್ಷಿಸುವುದು ಸೇರಿದಂತೆ ವಿವಿಧ ಕಾರ್ಯಗಳಿಗೆ ಎಐ ಅನ್ನು ಸರಿಯಾಗಿ ಬಳಸುವುದು ಹೇಗೆ ಎಂಬುದನ್ನು ಸಿಇಒಗಳ ಜೊತೆ ಪಿಎಂ ಚರ್ಚಿಸಿದರು. ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ಹೊಂದಲು ಸಾಧ್ಯವಾಗುವಂತೆ ಎಐ ಟೂಲ್​ಗಳನ್ನು ಅಭಿವೃದ್ಧಿಪಡಿಸುವಂತೆಯೂ ಪ್ರಧಾನಿಗಳು ಕರೆ ನೀಡಿದರು.

ಇದನ್ನೂ ಓದಿ: ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಏಪ್ರಿಲ್​ನಿಂದ ಚಾಲನೆ ಸಾಧ್ಯತೆ; ಓಮನ್, ಬ್ರಿಟನ್ ಒಪ್ಪಂದಗಳೂ ಏಪ್ರಿಲ್​ನಲ್ಲೇ?

ಎಬ್ರಿಡ್ಜ್, ಅದಾಲತ್ ಎಐ, ಬ್ರೈನ್​ಸೈಟ್​ಎಐ, ಕ್ರೆಡೋ ಎಐ, ಎಕಾ ಕೇರ್, ಗ್ಲೀನ್, ಇನ್ನೋಗಲ್, ಇನ್​ವಿಡಿಯೋ, ಮಿಕೋ, ಆರಿಜಿನ್, ಪ್ರೋಫೇಜ್, ರೇಸೆನ್, ರುಬ್ರಿಕ್, ಸ್ಯಾಟ್​ಶೂರ್, ಸೂಪರ್​ನೋವಾ, ಸೈಫಾ ಎಐ ಕಂಪನಿಗಳ ಸಿಇಒಗಳು ಮತ್ತು ಸಂಸ್ಥಾಪಕರು ಪಿಎಂ ಜೊತೆಗಿನ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು.

ಜಾಗತಿಕ ಎಐ ದೈತ್ಯರ ಮಧ್ಯೆ ಶೀತಲ ಸಮರ

ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಹಿಂದಿನ ದಿನ (ಗುರುವಾರ) ಗಮನ ಸೆಳೆದ ಮತ್ತೊಂದು ಸಂಗತಿ ಎಂದರೆ ಅದು ಓಪನ್​ಎಐ ಮತ್ತು ಆಂಥ್ರೋಪಿಕ್ ಕಂಪನಿಗಳ ಸಿಇಒಗಳ ವೈಮನಸ್ಸಿಗೆ ಸಾಕ್ಷ್ಯ ಸಿಕ್ಕಿದ್ದು. ಜಾಗತಿಕ ಎಐ ದಿಗ್ಗಜರು ಪಿಎಂ ಮೋದಿ ಜೊತೆ ವೇದಿಕೆ ಹಂಚಿಕೊಂಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಪ್ರಧಾನಿ ಮೋದಿ ಜೊತೆ ವೇದಿಕೆಯಲ್ಲಿ ಹತ್ತಾರು ಸಿಇಗಳು ನಿಂತಿದ್ದರು. ಮೋದಿ ಅಕ್ಕಪಕ್ಕದಲ್ಲಿ ಸುಂದರ್ ಪಿಚೈ ಮತ್ತು ಸ್ಯಾಮ್ ಆಲ್ಟ್​ಮ್ಯಾನ್ ಇದ್ದರು. ಅವರಿಬ್ಬರ ಆ ಎರಡು ಬದಿಗಳಲ್ಲಿ ಇತರರಿದ್ದರು. ಮೋದಿ ಅವರು ಒಗ್ಗಟ್ಟಿನ ಮಂತ್ರದಲ್ಲಿ ಪಿಚೈ ಮತ್ತು ಸ್ಯಾಮ್ ಅವರ ಕೈಗಳಲ್ಲಿ ಹಿಡಿದೆತ್ತಿದರು. ಎಲ್ಲರೂ ಕೂಡ ಪರಸ್ಪರ ಕೈ ಹಿಡಿದು ಮೇಲೆತ್ತಿದರು.

ಇದನ್ನೂ ಓದಿ: ಜಗತ್ತಿನ ಮುಂದೆ ಬೆತ್ತಲಾದ ಕಾಂಗ್ರೆಸ್; ಎಐ ಸಮಿಟ್​ನಲ್ಲಿ ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಹಲವರ ಅಸಮಾಧಾನ

ಈ ವೇಳೆ, ಸ್ಯಾಮ್ ಆಲ್ಟ್​ಮ್ಯಾನ್ ಅವರು ತಮ್ಮ ಎಡಬದಿಯಲ್ಲಿ ಇದ್ದ ಆಂಥ್ರೋಪಿಕ್ ಸಿಇಒ ಡೇರಿಯೋ ಅಮೋಡೇ ಅವರ ಕೈಹಿಡಿಯಲು ಹಿಂದೇಟು ಹಾಕಿದರು. ಪರಸ್ಪರ ಕೈ ಹಿಡಿಯದೇ ಅವರಿಬ್ಬರೂ ತಮ್ಮ ಕೈ ಮೇಲೆತ್ತಿದರು. ಪಿಎಂ ಮೋದಿ ಅಚಾನಕ್ಕಾಗಿ ಕೈಹಿಡಿದಿದ್ದರಿಂದ ತನಗೆ ಏನು ಮಾಡಬೇಕೆಂದು ತೋಚಲಿಲ್ಲ ಎಂದು ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ತಮ್ಮ ವರ್ತನೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಓಪನ್​ಎಐನಲ್ಲಿ ವೈಸ್​ಪ್ರೆಸಿಡೆಂಟ್​ಗಳಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳೇ ಸೇರಿ ಆಂಥ್ರೋಪಿಕ್ ಕಂಪನಿಯನ್ನು ಸ್ಥಾಪಿಸಿದ್ದಾರೆ. ಓಪನ್​ಎಐನ ನೀತಿಗಳನ್ನು ಆಂಥ್ರೋಪಿಕ್ ವಿರೋಧಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು – Kannada News | Mahesh Babu visited Bengaluru to see his AMB Cinemas that started in city

ಟಾಲಿವುಡ್ ಸೂಪರ್‌ ಸ್ಟಾರ್ ಮಹೇಶ್ ಬಾಬು (Mahesh Babu) ಇಂದು (ಫೆಬ್ರವರಿ 20, 2026) ಬೆಂಗಳೂರಿಗೆ ನೀಡಿದ್ದರು. ತಮ್ಮ ಒಡೆತನದ ನೂತನ ಮಲ್ಟಿಪ್ಲೆಕ್ಸ್ ‘ಎಎಂಬಿ ಸಿನಿಮಾಸ್ ಕಪಾಲಿ’ ಗೆ ಅವರು ಭೇಟಿ ನೀಡಿದ್ದು, ನೆಚ್ಚಿನ ನಟನನ್ನು ನೋಡಲು ಗಾಂಧಿನಗರದ ಚಿತ್ರಮಂದಿರದ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ದಕ್ಷಿಣ ಭಾರತದ ಮೊದಲ ‘ಡಾಲ್ಬಿ ಸಿನಿಮಾ’ ತಂತ್ರಜ್ಞಾನವನ್ನು ಹೊಂದಿರುವ ಈ ಚಿತ್ರಮಂದಿರದ ಕಾರ್ಯವೈಖರಿ ಮತ್ತು ಗುಣಮಟ್ಟವನ್ನು ಪರಿಶೀಲಿಸಲು ಮಹೇಶ್ ಬಾಬು ಇಂದು ಖುದ್ದಾಗಿ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ನೇರವಾಗಿ ಮಲ್ಟಿಪ್ಲೆಕ್ಸ್‌ಗೆ ಆಗಮಿಸಿದ ಅವರನ್ನು ನೋಡಲು ಕಿಕ್ಕಿರಿದು ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧನುಷ್ ಬಗ್ಗೆ ಮೊದಲ ಬಾರಿ ಅಸಲಿ ವಿಷಯ ಬಾಯಿಬಿಟ್ಟ ಮೃಣಾಲ್ ಠಾಕೂರ್ – Kannada News | Mrunal Thakur reveals why Dhanush attended Son of Sardaar 2 premiere show

ನಟಿ ಮೃಣಾಲ್ ಠಾಕೂರ್ ಅವರು ನಟ ಧನುಷ್ (Dhanush) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಅಷ್ಟೇ ಅಲ್ಲದೇ, ಈ ವರ್ಷ ಪ್ರೇಮಿಗಳ ದಿನದಂದು ಅವರಿಬ್ಬರು ಮದುವೆ ಆಗುತ್ತಾರೆ ಎಂಬ ವದಂತಿ ಕೂಡ ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ಇದರಿಂದಾಗಿ ಇಲ್ಲಸಲ್ಲದ ಗಾಸಿಪ್ ಹಬ್ಬಿಸುವವರ ಬಾಯಿಗೆ ಬೀಗ ಬಿದ್ದಂತೆ ಆಗಿದೆ. ಈಗ ಇದೇ ಮೊದಲ ಬಾರಿಗೆ ಮೃಣಾಲ್ ಠಾಕೂರ್ (Mrunal Thakur) ಅವರು ಧನುಷ್ ವಿಚಾರಕ್ಕೆ ಸಂಬಂಧಿಸಿದ ಒಂದು ಪ್ರಮುಖ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಗಾಸಿಪ್ ಶುರುವಾಗಲು ಕಾರಣವಾದ ಆ ಘಟನೆಯನ್ನು ಅವರೀಗ ನೆನಪಿಸಿಕೊಂಡಿದ್ದಾರೆ.

ಕಳೆದ ವರ್ಷ ಮೃಣಾಲ್ ಠಾಕೂರ್ ನಟನೆಯ ‘ಸನ್ ಆಫ್ ಸರ್ದಾರ್ 2’ ಸಿನಿಮಾ ಬಿಡುಗಡೆ ಆಯಿತು. ಆ ಸಿನಿಮಾದ ಪ್ರೀಮಿಯರ್ ಶೋಗೆ ಧನುಷ್ ಅವರು ಆಗಮಿಸಿದ್ದರು. ಆ ಚಿತ್ರಕ್ಕೂ ಧನುಷ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಹಾಗಿದ್ದರೂ ಕೂಡ ಅವರು ಹಾಜರಿ ಹಾಕಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಗಿತ್ತು. ಅಲ್ಲಿಂದಲೇ ಗಾಸಿಪ್ ಆರಂಭ ಆಗಿತ್ತು.

ಅಷ್ಟಕ್ಕೂ ಧನುಷ್ ಅವರು ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್ ಪ್ರದರ್ಶನಕ್ಕೆ ಬಂದಿದ್ದು ಯಾಕೆ ಎಂಬುದನ್ನು ಈಗ ಮೃಣಾಲ್ ಠಾಕೂರ್ ಅವರು ವಿವರಿಸಿದ್ದಾರೆ. ತಾವು ಧನುಷ್ ಅವರ ದೊಡ್ಡ ಅಭಿಮಾನಿ ಎಂದು ಮೃಣಾಲ್ ಠಾಕೂರ್ ಹೇಳಿದ್ದಾರೆ. ‘ಸನ್ ಆಫ್ ಸರ್ದಾರ್ 2’ ಪ್ರೀಮಿಯರ್ ಪ್ರದರ್ಶನಕ್ಕೆ ತಾವೇ ಆಹ್ವಾನಿಸಿದ್ದು ಎಂದು ಕೂಡ ತಿಳಿಸಿದ್ದಾರೆ.

‘ಧನುಷ್ ಅವರು ತೇರೆ ಇಷ್ಕ್ ಮೇ ಸಿನಿಮಾದ ಶೂಟಿಂಗ್​​ ಮಾಡುತ್ತಿದ್ದಾಗ ನಾನು ಹೋಗಿ ಅವರ ಬಳಿ ಮನವಿ ಮಾಡಿಕೊಂಡೆ. ಸರ್ ನೀವು ಸನ್ ಆಫ್ ಸರ್ದಾರ್ 2 ಚಿತ್ರದ ಪ್ರೀಮಿಯರ್ ಶೋಗೆ ಬರಬಹುದಾ ಅಂತ ಹೇಳಿದೆ. ಅವರು ಬರುತ್ತಾರೆ ಎಂಬುದು ನನಗೆ ತಿಳಿದಿರಲಿಲ್ಲ. ಅವರು ಬಂದೇಬಿಟ್ಟರು. ನನಗೆ ಬಹಳ ಸಂತೋಷ ಆಯಿತು. ಒಂದು ದಿನ ಅವರ ಜೊತೆ ಕೆಲಸ ಮಾಡಬೇಕು ಅಂತ ನಾನು ಬಯಸುತ್ತೇನೆ’ ಎಂದಿದ್ದಾರೆ ಮೃಣಾಲ್ ಠಾಕೂರ್.

ಇದನ್ನೂ ಓದಿ: ಧನುಷ್, ಮೃಣಾಲ್ ಠಾಕೂರ್ ನಡುವೆ ವಯಸ್ಸಿನ ಅಂತರ ಎಷ್ಟು?

ಧನುಷ್ ನಟನೆಯ ಸಿನಿಮಾಗಳನ್ನು ನೋಡಿ ಮೃಣಾಲ್ ಠಾಕೂರ್ ಅವರು ಫಿದಾ ಆಗಿದ್ದಾರೆ. ರಾಯನ್, ಮಾರಿ, ರಾಂಜಾನಾ, ಕ್ಯಾಪ್ಟನ್ ಮಿಲ್ಲರ್ ಸಿನಿಮಾಗಳನ್ನು ನೋಡಿ ಅವರಿಗೆ ತಾವು ಫ್ಯಾನ್ ಆಗಿರುವುದಾಗಿ ಮೃಣಾಲ್ ತಿಳಿಸಿದ್ದಾರೆ. ‘ಅರುಸನ್ ಸಿನಿಮಾವನ್ನು ನಾನು ಎಷ್ಟು ಬಾರಿ ಬೇಕಾದರೂ ನೋಡುತ್ತೇನೆ’ ಎಂದಿದ್ದಾರೆ ಮೃಣಾಲ್ ಠಾಕೂರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಿಷಬ್ ಶೆಟ್ಟಿಗಾಗಿ ಪ್ರಭಾಸ್ ಸಿನಿಮಾ ಕೈಬಿಟ್ಟರೆ ಯುವ ನಿರ್ದೇಶಕ – Kannada News | Prabhas and Prashanth Varma combination movie halted

ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು ಮಾತ್ರವಲ್ಲದೆ ಫ್ಲಾಪ್ ಸಹ ಆಗಿದೆ. ಇದಾದ ಬಳಿಕ ಪ್ರಭಾಸ್ ಎದುರು ಒಳ್ಳೆಯ ಸಿನಿಮಾಗಳ ಲೈನ್ ಅಪ್ ಇದೆ. ‘ಫೌಜಿ’, ‘ಸ್ಪಿರಿಟ್’ ‘ಕಲ್ಕಿ 2’ ಮತ್ತು ‘ಸಲಾರ್ 2’ ಸಿನಿಮಾಗಳಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಇವುಗಳ ಜೊತೆಗೆ ಒಂದು ಪೌರಾಣಿಕ ಕತೆ ಆಧರಿತ ಸೂಪರ್ ಹೀರೋ ಸಿನಿಮಾನಲ್ಲಿ ಪ್ರಭಾಸ್ ನಟಿಸಬೇಕಿತ್ತು. ಆದರೆ ಆ ಸಿನಿಮಾ ನಿಂತು ಹೋಗಿದೆ. ಅದಕ್ಕೆ ಪರೋಕ್ಷ ಕಾರಣ ರಿಷಬ್ ಶೆಟ್ಟಿ ಎನ್ನಲಾಗುತ್ತಿದೆ. ಅದು ಹೇಗೆ?

‘ಹನು ಮ್ಯಾನ್’ ಸಿನಿಮಾ ಮೂಲಕ ದೊಡ್ಡ ಹಿಟ್ ಕೊಟ್ಟಿರುವ ಪ್ರಭಾಸ್ ಅವರಿಗಾಗಿ ಸಿನಿಮಾ ಒಂದನ್ನು ನಿರ್ದೇಶಿಸಬೇಕಿತ್ತು. ಆ ಸಿನಿಮಾಕ್ಕೆ ‘ಬಕ‘ ಎಂದು ಹೆಸರು ಸಹ ಇಡಲಾಗಿತ್ತು. ಆದರೆ ಈಗ ಸಿನಿಮಾ ಸ್ಥಗಿತಗೊಂಡಿದೆ ಎಂಬ ಸುದ್ದಿ ಟಾಲಿವುಡ್​​ನಲ್ಲಿ ಹರಿದಾಡುತ್ತಿದೆ. ಪ್ರಶಾಂತ್ ಪ್ರಸ್ತುತ ಟಾಲಿವುಡ್​​ನ ಹಾಟ್ ನಿರ್ದೇಶಕರಲ್ಲಿ ಒಬ್ಬರಾಗಿದ್ದು, ಅವರು ಪ್ರಭಾಸ್ ಅಂಥಹಾ ಸೂಪರ್ ಸ್ಟಾರ್ ಜೊತೆಗೆ ಸೂಪರ್ ಹೀರೋ ಮಾದರಿಯ ಸಿನಿಮಾ ಮಾಡುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದರು ಆದರೆ ಸಿನಿಮಾ ನಿಂತು ಹೋಗಿರುವುದು ಪ್ರಭಾಸ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

‘ಬಕ’ ಸಿನಿಮಾ ನಿಂತು ಹೋದ ಬಗ್ಗೆ ಕೆಲವು ಭಿನ್ನ-ಭಿನ್ನ ರೀತಿಯ ಸುದ್ದಿಗಳು ಟಾಲಿವುಡ್​​ನಲ್ಲಿ ಹರಿದಾಡುತ್ತಿವೆ. ‘ಬಕ’ ಚಿತ್ರದ ಟೆಸ್ಟ್ ಶೂಟ್ ಇತ್ತೀಚೆಗೆ ನಡೆದಿದ್ದು, ಆದರೆ, ಸಿನಿಮಾದಲ್ಲಿನ ತಮ್ಮ ಲುಕ್ ಮತ್ತು ಒಟ್ಟಾರೆ ಸಿನಿಮಾದ ಲುಕ್ ಆಂಡ್ ಫೀಲ್ ಪ್ರಭಾಸ್ ಅವರಿಗೆ ಅತೃಪ್ತಿ ಉಂಟಾಗಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ ಅವರು ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಕಾರಣವೆಂದರೆ ಪ್ರಶಾಂತ್ ವರ್ಮಾ ಇದೀಗ ರಿಷಬ್ ಶೆಟ್ಟಿ ಜೊತೆಗೆ ‘ಜೈ ಹನುಮಾನ್’ ಸಿನಿಮಾ ಪ್ರಾರಂಭ ಮಾಡುತ್ತಿದ್ದು, ಆ ಸಿನಿಮಾದ ಮೇಲೆ ಹೆಚ್ಚು ಗಮನ ಹರಿಸಬೇಕಿರುವ ಕಾರಣ ಅವರೇ ‘ಬಕ’ ಸಿನಿಮಾ ಪ್ರಾಜೆಕ್ಟ್ ಅನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ದಿ ರಾಜಾ ಸಾಬ್: ಚಿತ್ರಮಂದಿರದಲ್ಲಿ ಪ್ರಭಾಸ್ ಸಿನಿಮಾ ಫ್ಲಾಪ್, ಒಟಿಟಿಯಲ್ಲಿ ಸೂಪರ್ ಹಿಟ್

ಪ್ರಶಾಂತ್ ವರ್ಮ ಅವರು ಪೌರಾಣಿಕ ಪಾತ್ರಗಳನ್ನು ಆಧರಿಸಿ ಕೆಲವು ಕತೆಗಳನ್ನು ರೆಡಿ ಮಾಡಿಕೊಂಡಿದ್ದು ಅವುಗಳನ್ನು ಸಿನಿಮಾ ಮಾಡಲು ಯೋಜನೆ ಹಾಕಿಕೊಂಡಿದ್ದರು. ಆದರೆ ಅವರ ಈ ಯೋಜನೆಗೆ ಒಂದರ ಮೇಲೊಂದು ಪೆಟ್ಟು ಬೀಳುತ್ತಲೇ ಇದೆ. ಈ ಹಿಂದೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರೊಂದಿಗೆ ಮಾಡಬೇಕಿದ್ದ ‘ರಾಕ್ಷಸ’ ಚಿತ್ರವು ಸೃಜನಶೀಲ ಭಿನ್ನಾಭಿಪ್ರಾಯಗಳಿಂದಾಗಿ ರದ್ದಾಗಿತ್ತು. ಇದಾದ ನಂತರ ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಜ್ಞ ಅವರ ಪದಾರ್ಪಣೆ ಚಿತ್ರದ ಬಗ್ಗೆಯೂ ಗೊಂದಲಗಳು ಏರ್ಪಟ್ಟಿದ್ದವು. ಈಗ ಪ್ರಭಾಸ್ ಅವರಂತಹ ಪ್ಯಾನ್-ಇಂಡಿಯಾ ಸ್ಟಾರ್ ಚಿತ್ರದಿಂದ ಹೊರಬಂದಿರುವುದು ಪ್ರಶಾಂತ್ ವರ್ಮ ಅವರ ವೃತ್ತಿಜೀವನಕ್ಕೆ ಸವಾಲಾಗಿ ಪರಿಣಮಿಸಿದೆ.

‘ಬಕ’ ಸಿನಿಮಾನಲ್ಲಿ ಪ್ರಭಾಸ್ ಅವರು ‘ಬಕಾಸುರ’ನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಇತ್ತು. ಪ್ರಶಾಂತ್ ವರ್ಮ ಅವರ ಕಲ್ಪನೆಯ ಪೌರಾಣಿಕ ಮತ್ತು ಆಧುನಿಕ ಸ್ಪರ್ಶದ ಈ ಕಥೆಯ ಮೇಲೆ ಅಭಿಮಾನಿಗಳು ಬಹಳ ನಂಬಿಕೆ ಇಟ್ಟಿದ್ದರು. ಆದರೆ ‘ಹನು-ಮಾನ್’ ನಿರ್ಮಾಪಕರ ಜೊತೆಗಿನ ಬಜೆಟ್ ಕಿರಿಕ್ ಮತ್ತು ಸರಣಿ ಪ್ರಾಜೆಕ್ಟ್‌ಗಳು ಕೈತಪ್ಪುತ್ತಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈ ಬೀದಿಗಳಲ್ಲಿ ಯಶ್ ಮುಖ ಮುಚ್ಚಿಕೊಂಡು ಓಡಾಡಿದ್ದಕ್ಕೆ ‘ಟಾಕ್ಸಿಕ್ ಟೀಸರ್​​ನಲ್ಲಿ ಸಿಕ್ತು ಉತ್ತರ – Kannada News | Yash’s ‘Toxic’ Teaser: New Looks and Mask Mystery Solved for Fans

‘ಟಾಕ್ಸಿಕ್’ ಸಿನಿಮಾ ಟೀಸರ್ ರಿಲೀಸ್ ಆಗಿ ಸೆನ್ಸೇಷನ್ ಸೃಷ್ಟಿಸಿದೆ. ಯಶ್ (Yash) ಅಭಿಮಾನಿಗಳು ಟೀಸರ್​​ನ ಬಹುವಾಗಿ ಇಷ್ಟಪಟ್ಟಿದ್ದಾರೆ. ಯಶ್ ಅವರು ವಿವಿಧ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಗಮನ ಸೆಳೆದಿದೆ. ಇದರಲ್ಲಿ ಯಶ್ ಅವರು ಯಂಗ್ ಲುಕ್​​ನಲ್ಲಿ ಕಾಣಿಸಿಕೊಂಡ ಲುಕ್ ಕೂಡ ಗಮನ ಸೆಳೆದಿದೆ. ಯಶ್ ಅವರು ಈ ಮೊದಲು ಮುಖವನ್ನು ಮುಚ್ಚಿಕೊಂಡು ಓಡಾಡಿದ್ದರು. ಅದು ಏಕೆ ಎಂಬ ಪ್ರಶ್ನೆ ಮೂಡಿತ್ತು. ಟಾಕ್ಸಿಕ್ ಟೀಸರ್ ಮೂಲಕ ಅದಕ್ಕೆ ಉತ್ತರ ಸಿಕ್ಕಂತೆ ಆಗಿದೆ.

ಕೆಲ ವಾರಗಳ ಹಿಂದೆ ಯಶ್ ಮುಂಬೈ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರು ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದರು. ಈ ವಿಡಿಯೋ ಗಮನ ಸೆಳೆಯಿತು. ಯಶ್ ಅವರು ಯಾವಾಗಲೂ ಹೀಗೆ ಕಾಣಿಸಿಕೊಂಡವರಲ್ಲ. ಅವರು ಈ ರೀತಿ ಮಾಡಿದ್ದೇಕೆ ಎಂಬ ಪ್ರಶ್ನೆ ಮೂಡಿತ್ತು. ಅವರು ಗಡ್ಡ ಹಾಗೂ ಕೂದಲಿಗೆ ಕತ್ತರಿ ಹಾಕಿರಬಹುದು ಎಂಬುದು ಅನೇಕರ ಊಹೆ ಆಗಿತ್ತು. ಆ ಊಹೆ ನಿಜವಾಗಿದೆ.

ಯಶ್ ಅವರು ಯಂಗ್ ವರ್ಷನ್ ಅಲ್ಲಿ ಕಾಣಿಸಿಕೊಳ್ಳುವ ಉದ್ದೇಶದಿಂದ ಗಡ್ಡ ಹಾಗೂ ತಲೆಕೂದಲು ಕತ್ತರಿಸಿದ್ದರು ಎಂಬುದು ಟೀಸರ್ ನೋಡಿದ ಬಳಿಕ ಪಕ್ಕಾ ಆಗಿದೆ. ಒಂದಷ್ಟು ಎಡಿಟ್​​ಗಳನ್ನು ಮಾಡಿ ಟೀಸರ್​​ನಲ್ಲಿ ಮತ್ತಷ್ಟು ಯಂಗ್ ಆಗಿ ಕಾಣುವಂತೆ ಮಾಡಲಾಗಿದೆ. ಇದು ಗಮನ ಸೆಳೆದಿದೆ.

ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಈ ಟೆಕ್ನಿಕ್​​ನ ಫಾಲೋ ಮಾಡುತ್ತಾರೆ. ಮುಂದಿನ ಸಿನಿಮಾದ ಲುಕ್ ರಿವೀಲ್ ಆಗಬಾರದು ಎಂಬ ಕಾರಣಕ್ಕೆ ಈ ರೀತಿಯಲ್ಲಿ ಮುಖಕ್ಕೆ ಬಟ್ಟೆ ಧರಿಸಿ ಓಡಾಡುತ್ತಾರೆ. ಯಶ್ ಕೂಡ ಇದೇ ತಂತ್ರ ಬಳಸಿದ್ದಾರೆ. ಯಶ್ ಅವರು ಸದ್ಯ ಯಾವ ಲುಕ್​​ನಲ್ಲಿ ಇದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಇದನ್ನೂ ಓದಿ: ‘ವಿಂಟೇಜ್ ಯಶ್ ಈಸ್ ಬ್ಯಾಕ್’; ‘ಟಾಕ್ಸಿಕ್ ಟೀಸರ್ ನೋಡಿ ಯಶ್ ಫ್ಯಾನ್ಸ್ ಖುಷ್

‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕೆವಿಎನ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಾ ಇದೆ. ಯಶ್ ಕೂಡ ಚಿತ್ರದ ನಿರ್ಮಾಪಕ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಮೊದಲಾದವರು ನಟಿಸಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link