ಭಾರತದ ಕಾನೂನು ಅನುಸರಿಸಲು ಆಗಲ್ಲವೆಂದರೆ ಇಲ್ಲಿಂದ ನಿರ್ಗಮಿಸಿ: ವಾಟ್ಸಾಪ್ ವಿರುದ್ಧ ಸುಪ್ರೀಂ ಎಚ್ಚರಿಕೆ – Kannada News | Supreme Court asks WhatsApp and Meta to exit India if they can’t obey Indian laws
ನವದೆಹಲಿ, ಫೆಬ್ರುವರಿ 3: ವಾಟ್ಸಾಪ್ನ ಗೌಪ್ಯತಾ ನೀತಿ (WhasApp Privacy Policy) ವಿಚಾರವಾಗಿ ಮೆಟಾ ಸಂಸ್ಥೆಯನ್ನು ಭಾರತದ ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ. ‘ನೀವು ಭಾರತೀಯ ಬಳಕೆದಾರರ ಗೌಪ್ಯತೆಯೊಂದಿಗೆ ಆಟವಾಡಬೇಡಿ. ನಮ್ಮ ಒಂದು ಡಿಜಿಟ್ ಡಾಟಾವನ್ನೂ ಪಡೆಯಲು ನಿಮಗೆ ಅವಕಾಶ ಕೊಡಲ್ಲ. ಗೌಪ್ಯತೆ ಉಳಿಸೋದಕ್ಕೆ ಆಗಲ್ಲ ಅಂದರೆ ಭಾರತದಿಂದ ನಿರ್ಗಮಿಸಿ’ ಎಂದು ವಾಟ್ಸಾಪ್ನ ಮಾತೃ ಸಂಸ್ಥೆಯಾದ ಮೆಟಾಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ (ಫೆ. 3) ತಪರಾಕಿ ಹಾಕಿದೆ. ವಾಟ್ಸಾಪ್ನ 2021ರ ಪ್ರೈವೆಸಿ ಪಾಲಿಸಿ ವಿಚಾರವಾಗಿ…