All posts by nagaraj11081993

IPL 2026: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು

Source link

Video: ಗುಜರಾತ್​ನಲ್ಲಿ ದಲಿತರು, ಆದಿವಾಸಿಗಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ: ರಾಹುಲ್ ಗಾಂಧಿ

ಅಹಮದಾಬಾದ್, ಮಾರ್ಚ್​ 30: ಗುಜರಾತ್​ನಲ್ಲಿ ದಲಿತರು, ಆದಿವಾಸಿಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ ಎಂದು ಬಿಜೆಪಿ ಗುರಿಯಾಗಿಸಿಕೊಂಡು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಕ್ಕಾಗಿ ಧ್ವನಿ ಎತ್ತುವುದಾಗಿ ಪ್ರತಿಜ್ಞೆ ಮಾಡಿದರು. ಪ್ರಸ್ತುತ ಆಡಳಿತದಲ್ಲಿ ಈ ಸಮುದಾಯಗಳ ವಿರುದ್ಧ ತಾರತಮ್ಯ ಹೆಚ್ಚುತ್ತಿದೆ ಎಂದು ಭಾನುವಾರ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಇಂದಿಗೂ ಸಹ, ದಲಿತರು ಮತ್ತು ಆದಿವಾಸಿಗಳನ್ನು ಕ್ರೂರವಾಗಿ ಥಳಿಸಲಾಗುತ್ತಿರುವ ಘಟನೆಗಳು ನಡೆಯುತ್ತಲೇ ಇವೆ.ಆದಿವಾಸಿಗಳು ಬೆಸ್ಟ್ ಯೂನಿವರ್ಸಿಟಿಯಲ್ಲಿ ಓದಬೇಕು, ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಬೇಕು ಮತ್ತು ಸಿಇಒ ಆಗಬೇಕು ಎಂದು ನಾವು ಬಯಸುತ್ತೇವೆ. ಇದು ನಮ್ಮ ಹೋರಾಟ ಎಂದರು.

ಒಬ್ಬ ವ್ಯಕ್ತಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದ್ದು, ಅವರ ದೇಹದಾದ್ಯಂತ 19 ಮುರಿತಗಳು ಸಂಭವಿಸಿವೆ. ತಮ್ಮ ಹಕ್ಕುಗಳ ರಕ್ಷಣೆಗಾಗಿ ಧ್ವನಿ ಎತ್ತುವವರು ಹೆಚ್ಚಾಗಿ ಭಾರೀ ಬೆಲೆ ತೆರಬೇಕಾಗುತ್ತಿದೆ ಎಂದು ದೂರಿದರು. ಇವರ ಹೇಳಿಕೆಗೆ ನೆಟ್ಟಿಗರು ಸರಿಯಾಗಿ ಉತ್ತರ ನೀಡಿದ್ದಾರೆ. ಅಧಿಕಾರದಲ್ಲಿದ್ದರು, ಬುಡಕಟ್ಟು ಜನಾಂಗದವರಿಗೆ ಎಷ್ಟು ಪ್ರಾತಿನಿಧ್ಯ ನೀಡಿದ್ದರು? ಅವರ ಪ್ರದೇಶಗಳಲ್ಲಿ ನಕ್ಸಲಿಸಂ ಏಕೆ ಹೆಚ್ಚಾಯಿತು ಎಂದು ಪ್ರಶ್ನಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಐಪಿಎಲ್ ಸಂಭ್ರಮದ ನಡುವೆ ಕಳ್ಳರ ಕೈಚಳಕ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50ಕ್ಕೂ ಹೆಚ್ಚು ಮೊಬೈಲ್ ಫೋನ್ ಕಳವು

ಬೆಂಗಳೂರು, ಮಾ,30: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ವೇಳೆ ಅಭಿಮಾನಿಗಳಿಗೆ ಭಾರಿ ಶಾಕ್ ಎದುರಾಗಿದೆ. ಪಂದ್ಯದ ಸಂಭ್ರಮದಲ್ಲಿದ್ದ ಪ್ರೇಕ್ಷಕರ ಮೊಬೈಲ್ ಫೋನ್‌ಗಳನ್ನು ಗುರಿಯಾಗಿಸಿಕೊಂಡು ಸಂಘಟಿತ ಕಳ್ಳರ ತಂಡವೊಂದು ದೊಡ್ಡ ಮಟ್ಟದ ಕಳ್ಳತನ ಎಸಗಿದೆ. ಈ ಬಗ್ಗೆ ಮಹಿಳೆಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ಅಂದರೆ ಎಕ್ಸ್​​​ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕ್ರೀಡಾಂಗಣದ P3 ಸ್ಟ್ಯಾಂಡ್ ಒಂದರಲ್ಲೇ ಸುಮಾರು 50 ರಿಂದ 60 ಮೊಬೈಲ್ ಫೋನ್‌ಗಳು ಕಳ್ಳತನವಾಗಿವೆ ಎಂದು ವರದಿಯಾಗಿದೆ. ಸಂತ್ರಸ್ತ ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದು, “ಪಂದ್ಯದ ಮೊದಲ ಇನ್ನಿಂಗ್ಸ್ ವೇಳೆ ನನ್ನ ಪತಿ ನೀರು ತರಲು ಹೋದಾಗ ಅವರ ಫೋನ್ ಕಳುವಾಗಿದೆ. ನಮ್ಮಂತೆ ಹತ್ತಾರು ಜನರು ಅದೇ ಸಮಯದಲ್ಲಿ ತಮ್ಮ ಫೋನ್ ಕಳೆದುಕೊಂಡು ಕಂಗಾಲಾಗಿದ್ದರು” ಎಂದು ತಿಳಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಈ ಬಗ್ಗೆ ಕ್ರೀಡಾಂಗಣದಲ್ಲಿದ್ದ ಪೊಲೀಸರಿಗೆ ದೂರು ನೀಡಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ತೆರಳಿದಾಗ ಅಲ್ಲಿ ನೂರಾರು ಜನರು ಇದೇ ರೀತಿಯ ದೂರು ನೀಡಲು ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು 10 ರಿಂದ 12 ಅಪ್ರಾಪ್ತ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮಕ್ಕಳು ತಂಡದ ಜರ್ಸಿ ಧರಿಸಿ, ಕಾಂಪ್ಲಿಮೆಂಟರಿ ಟಿಕೆಟ್ ಹಿಡಿದು ಓಡಾಡುತ್ತಿದ್ದರು, ಇದು ದೊಡ್ಡ ಮಟ್ಟದ ಸಂಘಟಿತ ಜಾಲವಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೊದಲ ಗೆಲುವನ್ನು 11 ಮಂದಿಗೆ ಅರ್ಪಿಸಿದ RCB

ಎರಡನೇ ಇನ್ನಿಂಗ್ಸ್ ಆರಂಭವಾದಾಗ ಪ್ರೇಕ್ಷಕರು ಆಹಾರ ಮತ್ತು ಪಾನೀಯಕ್ಕಾಗಿ ಸೀಟು ಬಿಟ್ಟು ಎದ್ದ ಸಂದರ್ಭವನ್ನು ಕಳ್ಳರು ಸರಿಯಾಗಿ ಬಳಸಿಕೊಂಡಿದ್ದಾರೆ. ಇಷ್ಟು ದೊಡ್ಡ ಮಟ್ಟದ ಭದ್ರತೆ ಇರುವ ಸ್ಟೇಡಿಯಂನಲ್ಲಿ ಇಂತಹ ಘಟನೆ ನಡೆದಿರುವುದು ಬೆಂಗಳೂರು ಪೊಲೀಸರ ಮತ್ತು ಕ್ರೀಡಾಂಗಣದ ಭದ್ರತಾ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ಧಾರಾವಾಹಿ ಶೂಟಿಂಗ್ ವೇಳೆ ಸಮುದ್ರದಲ್ಲಿ ಮುಳುಗಿ ನಟನ ಸಾವು

ಸಿನಿಮಾ ಶೂಟಿಂಗ್ ವೇಳೆ ಸಂಭವಿಸುವ ಅವಘಡಗಳು ಕೆಲ ಕಲಾವಿದರ ಬದುಕನ್ನೇ ಬದಲಿಸಿಬಿಡುತ್ತವೆ. ಈಗ ಧಾರಾವಾಹಿ (Serial) ಶೂಟಿಂಗ್ ವೇಳೆ ಸಂಭವಿಸಿದ ಅವಘಡ ಎಲ್ಲರಿಗೂ ಶಾಕ್ ತರಿಸಿದೆ. ಬೆಂಗಾಲಿ ನಟ ರಾಹುಲ್ ಅರುಣೋದಯ್ ಬ್ಯಾನರ್ಜಿ ಅವರು ಭಾನುವಾರ (ಮಾರ್ಚ್ 29) ನಿಧನ ಹೊಂದಿದ್ದಾರೆ. ಸಮುದ್ರದಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಇದು ಬೆಂಗಾಲಿ ಚಿತ್ರರಂಗಕ್ಕೆ ಹಾಗೂ ಅಲ್ಲಿನ ಕಿರುತೆರೆ ಲೋಕಕ್ಕೆ ಶಾಕಿಂಗ್ ಎನಿಸಿದೆ. ರಾಹುಲ್ ಅವರಿಗೆ 43 ವರ್ಷ ವಯಸ್ಸಾಗಿತ್ತು.

‘ಭೋಲೆ ಬಾಬಾ ಪರ್ ಕರೆಗಾ’ ಹೆಸರಿನ ಧಾರಾವಾಹಿ ಶೂಟಿಂಗ್ ಪಶ್ಚಿಮ ಬಂಗಾಳದ ದಿಘಾದಲ್ಲಿ ನಡೆಯುತ್ತಿತ್ತು. ಮಧ್ಯಾಹ್ನದ ವೇಳೆ ಶೂಟ್ ಪೂರ್ಣಗೊಂಡಿದೆ. ಪ್ಯಾಕಪ್ ಆದ ಬಳಿಕ ರಾಹುಲ್ ಒಂಟಿಯಾಗಿ ತಲ್ಸಾರಿ ಸಮುದ್ರದ ಕಡೆ ತೆರಳಿದ್ದಾರೆ. ಆ ಬಳಿಕ ಅವರು ಕಾಣೆಯಾದರು. ಈ ಬಗ್ಗೆ ಚರ್ಚೆ ನಡೆಯಿತು. ಅವರ ಹುಡುಕಾಟ ಆರಂಭ ಆಯಿತು.

ರಾಹುಲ್ ಸಮುದ್ರದಲ್ಲಿ ಕಾಣಿಸಿದರು. ಅವರನ್ನು ಎತ್ತಲು ಅಲ್ಲಿದ್ದವರು ಪ್ರಯತ್ನಿಸಿದರು. ನಂತರ ಅವರನ್ನು ಹೊರಕ್ಕೆ ತಂದು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸಂಜೆ ವೇಳೆ ಅವರು ನಿಧನ ಹೊಂದಿದ್ದಾಗಿ ವೈದ್ಯರು ಘೋಷಿಸಿದರು. ನೀರಿನಲ್ಲಿ ಮುಳುಗಿದ್ದರಿಂದಲೇ ನಿಧನ ಹೊಂದಿದ್ದಾಗಿ ಪ್ರಾಥಮಿಕ ವರದಿಗಳು ಹೇಳಿವೆ.

ಇದನ್ನೂ ಓದಿ: ಒಂದೇ ಧಾರಾವಾಹಿಯಲ್ಲಿ ಅಮೃತಾ ರಾಮಮೂರ್ತಿ ಹಾಗೂ ಅಮೂಲ್ಯ ಗೌಡ

ಈ ವಿಷಯವಾಗಿ ರಾಹುಲ್ ಪತ್ನಿ ಪ್ರಿಯಾಂಕಾ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ಖಾಸಗಿತನಕ್ಕೆ ಗೌರವ ಕೊಡಿ ಎಂದು ಅವರು ಬೇಡಿಕೊಂಡಿದ್ದಾರೆ. 2008ರಲ್ಲಿ ಸೀರಿಯಲ್ ಸೆಟ್ ಅಲ್ಲಿ ಇಬ್ಬರೂ ಭೇಟಿ ಆದರು. ನಿಜ ಜೀವನದಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು. 2010ರಲ್ಲಿ ಇವರು ಮದುವೆ ಆದರು. 2017ರಲ್ಲಿ ಇವರು ಬೇರೆ ಆದರು. 2018ರಲ್ಲಿ ಡಿವೋರ್ಸ್​​ಗೆ ಅರ್ಜಿ ಸಲ್ಲಿಸಿದರು. ಅಚ್ಚರಿ ಎಂದರೆ 2023ರಲ್ಲಿ ಇಬ್ಬರೂ ಮತ್ತೆ ಒಂದಾದರು. ಈ ದಂಪತಿಗೆ ಸೊಹೊಜ್ ಹೆಸರಿನ ಮಗ ಇದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರಿ ಗಾತ್ರದ ಹಾವನ್ನು ನುಂಗುತ್ತಿದ್ದ ಮತ್ತೊಂದು ಹಾವು! ಉರಗ ರಕ್ಷಕರಿಂದ ರಕ್ಷಣೆ, ಮೈಜುಮ್ಮೆನ್ನಿಸುವ ವಿಡಿಯೋ ಇಲ್ಲಿದೆ ನೋಡಿ

ಕೋಲಾರ, ಮಾರ್ಚ್​ 30: ಕೋಲಾರ ಜಿಲ್ಲೆಯ ದೊಡ್ಡಹಸಾಳ ಗ್ರಾಮದ ಬಳಿ ಹಾವೊಂದು ಮತ್ತೊಂದು ಭಾರಿ ಗಾತ್ರದ ಹಾವನ್ನೇ ನುಂಗಲು ಯತ್ನಿಸಿದ ಅಪರೂಪದ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕ ನಾಗರಾಜ್, ಅತ್ಯಂತ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ. ಮತ್ತೊಂದು ಹಾವಿನ ಬಾಯಿಗೆ ಆಹಾರವಾಗುತ್ತಿದ್ದ ಹಾವನ್ನು ಸುರಕ್ಷಿತವಾಗಿ ಬಿಡಿಸುವಲ್ಲಿ ನಾಗರಾಜ್ ಯಶಸ್ವಿಯಾಗಿದ್ದಾರೆ. ಉರಗ ರಕ್ಷಕನ ಈ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Finn Allen: ತುಂಬಾ ವರ್ಷಗಳಿಂದ ಕಾಯುತ್ತಿದ್ದೆ, ಕೊನೆಗೂ ಚಾನ್ಸ್ ಸಿಕ್ತು!

ನ್ಯೂಝಿಲೆಂಡ್​ನ ಸ್ಫೋಟಕ ದಾಂಡಿಗ ಫಿನ್ ಅಲೆನ್ (Finn Allen) ಐಪಿಎಲ್​ನಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುವ ಮೂಲಕ ಅಲೆನ್ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಫಿನ್ ಅಲೆನ್, “ಈ ಕ್ಷಣಕ್ಕಾಗಿ ನಾನು ಬಹಳ ವರ್ಷಗಳಿಂದ ಕಾಯುತ್ತಿದ್ದೆ. ಕೊನೆಗೂ ವಿಶ್ವದ ಅತಿದೊಡ್ಡ ಟಿ20 ಟೂರ್ನಮೆಂಟ್‌ನಲ್ಲಿ ಆಡಲು ಅವಕಾಶ ಸಿಕ್ಕಿದೆ, ಇದು ನಿಜಕ್ಕೂ ಸಂತಸದ ಕ್ಷಣ” ಎಂದಿದ್ದಾರೆ.

ಅಂದಹಾಗೆ ಫಿನ್ ಅಲೆನ್ ಐಪಿಎಲ್​ಗೆ ಎಂಟ್ರಿ ಕೊಟ್ಟಿದ್ದು 2021 ರಲ್ಲಿ. 5 ವರ್ಷಗಳ ಹಿಂದೆಯೇ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅವಕಾಶ ಪಡೆದರೂ ಅವರಿಗೆ ಕಣಕ್ಕಿಳಿಯಲು ಚಾನ್ಸ್ ಸಿಕ್ಕಿರಲಿಲ್ಲ ಎಂಬುದೇ ಅಚ್ಚರಿ.

2021ರ ಐಪಿಎಲ್​ ಸೀಸನ್​ನಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಶ್ ಫಿಲಿಪೆ ಗಾಯಗೊಂಡಿದ್ದರು. ಅವರ ಬದಲಿಗೆ ಫಿನ್ ಅಲೆನ್ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು.

ಹೀಗೆ ಬದಲಿ ಆಟಗಾರನಾಗಿ ಐಪಿಎಲ್​ಗೆ ಎಂಟ್ರಿ ಕೊಟ್ಟಿದ್ದ ಫಿನ್ ಅಲೆನ್ ಮೂರು ವರ್ಷಗಳ ಕಾಲ ಬೆಂಚ್ ಕಾದಿದ್ದರು ಎಂದರೆ ನಂಬಲೇಬೇಕು. ಅಂದರೆ ಅಲೆನ್​ಗೆ ಒಂದೇ ಒಂದು ಪಂದ್ಯವಾಡಲು ಆರ್​ಸಿಬಿ ಅವಕಾಶ ನೀಡಿರಲಿಲ್ಲ. ಇದಾಗ್ಯೂ ಪ್ರತಿ ಸೀಸನ್​ನಲ್ಲೂ ಆರ್​ಸಿಬಿ ಫ್ರಾಂಚೈಸಿ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುತ್ತಿದ್ದರು.

ಆ 3 ವರ್ಷಗಳ ನಡುವೆ ಫಿನ್ ಅಲೆನ್ ನ್ಯೂಝಿಲೆಂಡ್ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡಿದ್ದರು. ವಿವಿಧ ಲೀಗ್​ಗಳಲ್ಲೂ ಅಬ್ಬರಿಸಿದ್ದರು. ಅಲ್ಲದೆ ಕಿವೀಸ್ ತಂಡದ ಆರಂಭಿಕನಾಗಿ ಸ್ಪೋಟಕ ಇನಿಂಗ್ಸ್ ಕೂಡ ಆಡಿದ್ದರು. ಇದಾಗ್ಯೂ ಐಪಿಎಲ್​ಗೆ ಬಂದರೆ ಬೆಂಚ್ ಕಾಯುವುದೇ ಬಂತು.

ಕುತೂಹಲಕಾರಿ ವಿಷಯ ಎಂದರೆ ಈ ಮೂರು ಸೀಸನ್​ಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 45 ಪಂದ್ಯಗಳನ್ನಾಡಿತ್ತು. ಅಂದರೆ ಫಿನ್ ಅಲೆನ್ ಬರೋಬ್ಬರಿ 45 ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಆದರೆ 2024 ರಲ್ಲಿ ಫಿನ್ ಅಲೆನ್ ಆರ್​ಸಿಬಿ ತಂಡದಿಂದ ಹೊರಬರುವ ಮೂಲಕ ಈ ಕಾಯುವಿಕೆಗೆ ಬ್ರೇಕ್ ಹಾಕಿದ್ದರು.

ಇದನ್ನೂ ಓದಿ: ಮೊದಲ ಗೆಲುವನ್ನು 11 ಮಂದಿಗೆ ಅರ್ಪಿಸಿದ RCB

ಇದೀಗ ಅಲೆನ್ ಕೊಲ್ಕತ್ತಾ ನೈಟ್ ರೈಡರ್ಡ್ ತಂಡಕ್ಕೆ ಆಯ್ಕೆಯಾದ ಮೊದಲ ವರ್ಷವೇ ಪಾದಾರ್ಪಣೆ ಮಾಡಲು ಅವಕಾಶ ಸಿಕ್ಕಿದೆ. ಅಲ್ಲದೆ ಚೊಚ್ಚಲ ಪಂದ್ಯದಲ್ಲೇ 17 ಎಸೆತಗಳಲ್ಲಿ 37 ರನ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

 

Source link

Video: ಕಾರಿಂದ ವಾಟರ್ ಬಲೂನ್ ಎಸೆದ ಬಾಲಕ, ನಿಯಂತ್ರಣ ತಪ್ಪಿ ಫ್ಲೈಓವರ್ ಗೋಡೆಗೆ ಡಿಕ್ಕಿ ಹೊಡೆದ ಬೈಕ್ ಸವಾರ

ನವದೆಹಲಿ, ಮಾರ್ಚ್​ 30: ಮಕ್ಕಳನ್ನು ಎಷ್ಟೇ ಮುದ್ದಿನಿಂದ ಬೆಳೆಸಿದರೂ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಕೂಡ ಕಲಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ. ಬಾಲಕನೊಬ್ಬ ಕಾರಿನಿಂದ ವಾಟರ್ ಬಲೂನ್ ಎಸೆದ ಪರಿಣಾಮ ಅದು ಬೈಕ್ ಸವಾರನಿಗೆ ತಾಕಿ, ಅವರು ಆಯತಪ್ಪಿ ಫ್ಲೈಓವರ್ ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಡಿಯೋವನ್ನು ಮೊದಲು ದಿವ್ಯಾ ಟಂಡನ್ ಅವರು ಶೇರ್ ಮಾಡಿದ್ದರು.

ಬಾಲಕ ಮಾಡಿದ ಒಂದು ತಪ್ಪಿನಿಂದ ಜೀವವೇ ಹೋಗುವ ಸಾಧ್ಯತೆ ಇತ್ತು. ಮಾರ್ಚ್ 27 ರಂದು ನಡೆದ ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಬಾಲಕಿಯ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ.ಅಪರಾಧ ಎಸಗಿದ ವಾಹನದ ಮೇಲೆ ಅಪಾಯಕಾರಿ ಚಾಲನೆ ಮತ್ತು ಕಾನೂನು ಉಲ್ಲಂಘನೆಗಾಗಿ ಮೋಟಾರ್‌ಸೈಕಲ್ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಐಪಿಎಲ್ ಕ್ರೇಜ್: ಪಂದ್ಯ ಮುಗಿದ 50 ನಿಮಿಷಗಳಲ್ಲಿ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 22,000 ಜನ ಪ್ರಯಾಣ!

ಬೆಂಗಳೂರು, ಮಾರ್ಚ್​ 30: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ (IPL 2026) ಉದ್ಘಾಟನಾ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳ ಸಾಗರವೇ ಹರಿದುಬಂದಿದ್ದು, ನಮ್ಮ ಮೆಟ್ರೋ (Namma Metro) ಕೂಡ ಸಾಕ್ಷಿಯಾಗಿದೆ. ಪಂದ್ಯದ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಕ್ಕೆ ನಾಗರಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಸಾಮಾನ್ಯ ದಿನಗಳಿಗಿಂತ ದ್ವಿಗುಣ ಪ್ರಮಾಣದಲ್ಲಿ ಪ್ರಯಾಣಿಕರು ಮೆಟ್ರೋ ಬಳಸಿದ್ದಾರೆ ಎಂದು ಬಿಎಂಆರ್​ಸಿಎಲ್ ಮೂಲಗಳು ತಿಳಿಸಿವೆ.

ಪಂದ್ಯ ಮುಗಿದ ಕೇವಲ 50 ನಿಮಿಷಗಳ ಅವಧಿಯಲ್ಲಿ ಸುಮಾರು 22,000 ಜನರು ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ನಿಲ್ದಾಣಗಳಿಂದ ಸುರಕ್ಷಿತವಾಗಿ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ತಪ್ಪಿಸಲು ಬಿಎಂಆರ್‌ಸಿಎಲ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿತ್ತು. ಮೆಜೆಸ್ಟಿಕ್ ಕಡೆಗೆ 13 ಹಾಗೂ ವೈಟ್‌ಫೀಲ್ಡ್ ಕಡೆಗೆ 9 ರೈಲುಗಳು ಸೇರಿದಂತೆ ಒಟ್ಟು 39 ರೌಂಡ್ ಟ್ರಿಪ್‌ಗಳನ್ನು ಕಾರ್ಯಾಚರಣೆ ಮಾಡಲಾಗಿದೆ.

ಹೆಚ್ಚುವರಿ ರೈಲುಗಳ ಸಂಚಾರ

ಪರ್ಪಲ್ ಲೈನ್‌ನಲ್ಲಿ 18, ಗ್ರೀನ್ ಲೈನ್‌ನಲ್ಲಿ 15 ಮತ್ತು ಯಲ್ಲೋ ಲೈನ್‌ನಲ್ಲಿ 6 ಹೆಚ್ಚುವರಿ ಸಂಚಾರಗಳನ್ನು ನಡೆಸುವ ಮೂಲಕ ಪ್ರಯಾಣಿಕರ ದಟ್ಟಣೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಪ್ರತಿ ಮೂರು ನಿಮಿಷಕ್ಕೊಮ್ಮೆ ರೈಲು ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಮುಂದಿನ ಪಂದ್ಯಗಳಿಗೂ ಇನ್ನಷ್ಟು ಸೌಲಭ್ಯಗಳನ್ನು ಹೆಚ್ಚಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಇದನ್ನೂ ಓದಿ: ಇಂದಿನಿಂದ ಐಪಿಎಲ್​, ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ತಡರಾತ್ರಿ 2 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚಾರ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆಯುವ ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಮೆಟ್ರೋರೈಲು ಸಂಚಾರದ ಅವಧಿಯನ್ನು ತಡರಾತ್ರಿ ವರೆಗೆ ವಿಸ್ತರಿಸುತ್ತಿದೆ. ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಕೊನೆಗೊಳ್ಳುತ್ತಿದ್ದ ರೈಲು ಸಂಚಾರವನ್ನು ಪಂದ್ಯ ಮುಗಿದ ನಂತರ ಸಾವಿರಾರು ಅಭಿಮಾನಿಗಳು ಏಕಕಾಲಕ್ಕೆ ನಿಲ್ದಾಣಕ್ಕೆ ಬರುವ ಹಿನ್ನೆಲೆಯಲ್ಲಿ ವಿಸ್ತರಿಸಲಾಗುತ್ತಿದೆ. ಐಪಿಎಲ್ ಉದ್ಘಾಟನಾ ಪಂದ್ಯದ ದಿನ ರಾತ್ರಿ 2 ಗಂಟೆ ವರೆಗೆ ಮೆಟ್ರೋ ಸಂಚಾರ ವಿಸ್ತರಣೆ ಮಾಡಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ಗೆಲುವನ್ನು 11 ಮಂದಿಗೆ ಅರ್ಪಿಸಿದ RCB

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡವನ್ನು ಬಗ್ಗು ಬಡಿದು ಆರ್​ಸಿಬಿ ಗೆಲುವಿನ ಖಾತೆ ತೆರೆದಿದೆ. “ಈ ಗೆಲುವನ್ನು ನಾವು ಕಳೆದುಕೊಂಡ ಆ 11 ಅಭಿಮಾನಿಗಳಿಗೆ ಅರ್ಪಿಸುತ್ತೇವೆ”  ಎಂದಿದ್ದಾರೆ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್.

2026ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ನಂತರ, ಭಾವುಕರಾದ ರಜತ್ ಪಾಟೀದಾರ್, ನಮ್ಮ ಈ ಗೆಲುವನ್ನು ನಮ್ಮನ್ನು ಅಗಲಿದ 11 ಮಂದಿ ಅಭಿಮಾನಿಗಳಿಗೆ ಅರ್ಪಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ (ಜೂನ್ 2025) ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಯ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು.

ಈ ಅಭಿಮಾನಿಗಳ ನೆನಪಿಗಾಗಿ ಆರ್​ಸಿಬಿ – ಎಸ್​ಆರ್​ಹೆಚ್ ನಡುವಣ ಪಂದ್ಯದ ಆರಂಭಕ್ಕೂ ಮುನ್ನ ಒಂದು ನಿಮಿಷ ಮೌನ ಆಚರಿಸಲಾಯಿತು. ಅಲ್ಲದೆ, ಕ್ರೀಡಾಂಗಣದ ನಾರ್ತ್ ಸ್ಟ್ಯಾಂಡ್‌ನಲ್ಲಿ 11 ಆಸನಗಳನ್ನು ಖಾಲಿ ಬಿಟ್ಟು, ಅವುಗಳಿಗೆ ಮೃತಪಟ್ಟ ಅಭಿಮಾನಿಗಳ ಹೆಸರಿರುವ ಬಿಳಿ ಜೆರ್ಸಿಗಳನ್ನು ಹಾಕಲಾಗಿತ್ತು.

ಇದೀಗ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಗೆಲುವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಗಲಿದ 11 ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.

RCBಯ 11 ಅಭಿಮಾನಿಗಳು:

ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಹೆಸರು ಈ ಕೆಳಗಿನಂತಿದೆ…
ಹೆಸರು ಊರು / ಜಿಲ್ಲೆ
ಪೂರ್ಣಚಂದ್ರ ಮಂಡ್ಯ
ದಿವ್ಯಾಂಶಿ ಬೆಂಗಳೂರು (ಕೆ.ಆರ್. ಪುರಂ)
ಶಿವಲಿಂಗು ಮೈಸೂರು
ಮನೋಜ್ ಕುಮಾರ್ ತುಮಕೂರು
ಭೂಮಿಕಾ ಹಾಸನ
ಚಿನ್ನಯ್ಯ ಬಳ್ಳಾರಿ
ಚಿನ್ಮಯಿ ಶಿವಮೊಗ್ಗ
ಪ್ರಜ್ವಲ್ ಜಿ ಬೆಂಗಳೂರು (ವಿಜಯನಗರ)
ಸಹನಾ ಚಿತ್ರದುರ್ಗ
ಅಕ್ಷತಾ ಪೈ ಮಂಗಳೂರು (ದಕ್ಷಿಣ ಕನ್ನಡ)
ಕಾಮಾಕ್ಷಿ ದೇವಿ ದಾವಣಗೆರೆ
ಇನ್ನು ಈ ಕಾಲ್ತುಳಿತದಲ್ಲಿ ಮೃತಪಟ್ಟ ಪ್ರತಿಯೊಬ್ಬ ಅಭಿಮಾನಿಯ ಕುಟುಂಬಕ್ಕೆ ಆರ್‌ಸಿಬಿ ಮ್ಯಾನೇಜ್‌ಮೆಂಟ್  ₹25 ಲಕ್ಷ ಆರ್ಥಿಕ ನೆರವನ್ನು ಘೋಷಿಸಿದೆ.
ಹಾಗೆಯೇ ಅಭಿಮಾನಿಗಳ ಸುರಕ್ಷತೆ, ಸಮುದಾಯ ಕಲ್ಯಾಣ ಮತ್ತು ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಲು ‘ಆರ್‌ಸಿಬಿ ಕೇರ್ಸ್’ (RCB CARES) ಎಂಬ ವಿಶೇಷ ಫೌಂಡೇಶನ್ ಸ್ಥಾಪಿಸಿದೆ.
ಇನ್ನು ಕಾಲ್ತುಳಿತದಲ್ಲಿ ಗಾಯಗೊಂಡ 50ಕ್ಕೂ ಹೆಚ್ಚು ಅಭಿಮಾನಿಗಳ ವೈದ್ಯಕೀಯ ವೆಚ್ಚ ಮತ್ತು ಚಿಕಿತ್ಸೆಗೂ ಈ ನಿಧಿಯ ಮೂಲಕ ಬೆಂಬಲ ನೀಡುವುದಾಗಿ ತಿಳಿಸಿತ್ತು.

Source link

ಗಿಲ್ಲಿ ಬಳಿ ಲವ್​ ಟಿಪ್ಸ್ ಕೇಳಿದ ಅಭಿಮಾನಿ; ನಟನ ಉತ್ತರ ಏನು?

ಗಿಲ್ಲಿ ನಟ ಅವರು ಗೌರಿ ಕಲ್ಯಾಣ ಧಾರಾವಾಹಿಯ ಸೀರಿಯಲ್ ಸಂತೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಅವರ ಬಳಿ ಅಭಿಮಾನಿಗಳು ಲವ್ ಟಿಪ್ಸ್ ಕೇಳಿದ್ದಾರೆ. ಇದಕ್ಕೆ ಗಿಲ್ಲಿ ನಟ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ನೀನು ನನ್ನ ಬಳಿ ಕೇಳಿದ್ದು ತಪ್ಪು’ ಎಂದು ನೇರವಾಗಿ ಹೇಳಿದ್ದಾರೆ. ಆ ಸಂದರ್ಭದ ಫನ್ ಟಾಕ್ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link