All posts by nagaraj11081993

ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್; ಗಂಡು ಮಗುವಿಗೆ ಜನ್ಮ ನೀಡಿದ ನಟಿ

ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್; ಗಂಡು ಮಗುವಿಗೆ ಜನ್ಮ ನೀಡಿದ ನಟಿ

ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹೂಜಾ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಸೋನಂ ಎರಡನೇ ಬಾರಿಗೆ ತಾಯಿ ಆಗಿದ್ದಾರೆ. ಅವರಿಗೆ ಗಂಡು ಮಗು ಜನಿಸಿದೆ. ಮಾರ್​ಚ್​ 29ರಂದು ಮಗು ಜನಿಸಿದೆ. ಈ ಬಗ್ಗೆ ಇನ್​​ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೋನಂ ಕಪೂರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಸೋನಂ ಕುಟುಂಬ ಮತ್ತಷ್ಟು ವಿಸ್ತೃತವಾಗಿದೆ.

ಸೋನಂ ಕಪೂರ್ ಅವರು ಇನ್​​ಸ್ಟಾಗ್ರಾಮ್ ಅಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ನಮ್ಮ ಕುಟುಂಬ ಹಿರಿದಾಗಿದೆ. ಅವನ ಆಗಮನದಿಂದ ನಮ್ಮ ಹೃದಯದಲ್ಲಿ ಸಂತಸ ಹೆಚ್ಚಿದೆ. ವಾಯು ತನ್ನ ಚಿಕ್ಕ ಸಹೋದರನನ್ನು ಸ್ವಾಗತಿಸಲು ಖುಷಿಯಾಗಿದ್ದಾನೆ. ನಮ್ಮ ಮನೆಯ ಸಂತೋಷ ಹೆಚ್ಚಿದೆ. ಈಗ ಕುಟುಂಬ ನಾಲ್ಕು ಜನರಿಗೆ ಬಡ್ತಿ ಪಡೆದಿದೆ. ಹೊಸ ಅಧ್ಯಾಯವನ್ನು ಪ್ರಾರಂಭಿಸಲು ನಾವು ಕೃತಜ್ಞರಾಗಿರುತ್ತೇವೆ. ಪ್ರೀತಿಯಿಂದ, ಸೋನಮ್, ಆನಂದ್ ಮತ್ತು ವಾಯು’ ಎಂದು ಅವರು ಬರೆದುಕೊಂಡಿದ್ದಾರೆ.

ಸೋನಂ ಕಪೂರ್ ಅವರಿಗೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ‘ಸೋನಾ ಹಾಗೂ ಆನಂದ್​​ಗೆ ಅಭಿನಂದನೆ’ ಎಂದು ಕರೀನಾ ಕಪೂರ್ ಕಮೆಂಟ್ ಮಾಡಿದ್ದಾರೆ. ಹುಮಾ ಖುರೇಷಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾರ್ಟ್ ಎಮೋಜಿ ಹಾಕಿದ್ದಾರೆ.

ಇದನ್ನೂ ಓದಿ: ಎರಡನೇ ಬಾರಿಗೆತಾಯಿ ಆಗ್ತಿದ್ದಾರೆ ಸೋನಂ ಕಪೂರ್; ಸೀಮಂತ ಶಾಸ್ತ್ರದ ಫೋಟೋ ವೈರಲ್

2025ರ ನವೆಂಬರ್ ಅಲ್ಲಿ ಸೋನಂ ಕಪೂರ್ ಅವರು ಪ್ರೆಗ್ನೆನ್ಸಿ ಬಗ್ಗೆ ಘೋಷಣೆ ಮಾಡಿದ್ದರು. ‘ತಾಯಿ’ ಎಂದು ಅವರು ಕ್ಯಾಪ್ಶನ್ ನೀಡಿದ್ದರು. 2018ರಲ್ಲಿ ಆನಂದ್ ಜೊತೆ ಸೋನಂ ಕಪೂರ್ ವಿವಾಹ ನಡೆಯಿತು. 2022ರಲ್ಲಿ ಗಂಡು ಮಗು ಜನಿಸಿತು. ಇದಕ್ಕೆ ‘ವಾಯು’ ಎಂದು ಹೆಸರು ಇಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೋಹಿತ್ ಶರ್ಮಾರ ‘ದುರಾದೃಷ್ಟ’ಕ್ಕೆ ಬ್ರೇಕ್ ಹಾಕಿದ ಹಾರ್ದಿಕ್ ಪಾಂಡ್ಯ

IPL 2026: ಬರೋಬ್ಬರಿ 13 ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್​ನಲ್ಲಿ ಮೊದಲ ಮ್ಯಾಚ್ ಗೆದ್ದಿದೆ. ಅಂದರೆ ಕಳೆದ ಹದಿಮೂರು ವರ್ಷಗಳಲ್ಲಿ ಮುಂಬೈ ಪಡೆ ತನ್ನ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರಲಿಲ್ಲ. ಇಂತಹದೊಂದು ಅನ್​ಲಕ್ಕಿ ಓಪನಿಂಗ್​​ಗೆ ನಾಂದಿಯಾಡಿದ್ದು ಮಾಜಿ ನಾಯಕ ರೋಹಿತ್ ಶರ್ಮಾ ಎಂಬುದು ವಿಶೇಷ.

ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಬಾರಿ ಮೊದಲ ಮ್ಯಾಚ್​ ಗೆದ್ದಿದ್ದು 2012 ರಲ್ಲಿ. ಅದು ಸಹ ಹರ್ಭಜನ್ ಸಿಂಗ್ ನಾಯಕತ್ವದಲ್ಲಿ. ಇದಾದ ಬಳಿಕ 2013 ರಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದರು. ಇತ್ತ ಹಿಟ್​ಮ್ಯಾನ್ ನಾಯಕನಾದ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಒಮ್ಮೆಯೂ ಮೊದಲ ಮ್ಯಾಚ್​ನಲ್ಲಿ ಗೆಲುವು ದಾಖಲಿಸಿರಲಿಲ್ಲ ಎಂಬುದು ವಿಶೇಷ.

ಇನ್ನು ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾದರೂ ಮುಂಬೈ ಇಂಡಿಯನ್ಸ್ ತಂಡ ಎರಡು ಸೀಸನ್​ಗಳಲ್ಲಿ ಮೊದಲ ಮ್ಯಾಚ್​ನಲ್ಲಿ ಮುಗ್ಗರಿಸಿದ್ದರು. ಆದರೆ ಮೂರನೇ ಸೀಸನ್​ನಲ್ಲಿ ರೋಹಿತ್ ಶರ್ಮಾ ಶುರು ಮಾಡಿದ್ದ ದುರಾದೃಷ್ಟಕ್ಕೆ ಬ್ರೇಕ್ ಹಾಕುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾಗಿದ್ದಾರೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿತು.

ಈ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 19.1 ಓವರ್​ಗಳಲ್ಲಿ 224 ರನ್ ಬಾರಿಸಿ 6 ವಿಕೆಟ್​ಗಳ ಜಯ ಸಾಧಿಸಿದೆ. ಈ ಮೂಲಕ 2012ರ ಬಳಿಕ ಮುಂಬೈ ಇಂಡಿಯನ್ಸ್​ ತಂಡವು ಐಪಿಎಲ್​ನ ಮೊದಲ ಪಂದ್ಯದಲ್ಲೇ ಗೆಲುವಿನ ನಗೆ ಬೀರಿದೆ.

ಸೋತರೂ ಕಪ್ ಗೆದ್ದಿದ್ದ ಮುಂಬೈ ಪಡೆ:

ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೊದಲ ಪಂದ್ಯದಲ್ಲಿ ಸೋತರೂ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವುದು ವಿಶೇಷ. ಅಂದರೆ ಮೊದಲ ಮ್ಯಾಚ್​ನಲ್ಲಿ ಮುಗ್ಗರಿಸಿದರೂ ಮುಂಬೈ ಪಡೆ ಪ್ರಚಂಡ ಪ್ರದರ್ಶನ ನೀಡುತ್ತಾ ಬಂದಿದೆ.

ಇದನ್ನೂ ಓದಿ: VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ

ಈ ಮೂಲಕ 2013, 2015, 2017, 2019 ಮತ್ತು 2020 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮೊದಲ ಮ್ಯಾಚ್​ನಲ್ಲೇ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ. ಈ ಶುಭಾರಂಭದೊಂದಿಗೆ ಮುಂಬೈ ಪಡೆ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಲಿದೆಯಾ ಕಾದು ನೋಡಬೇಕಿದೆ.

 

Source link

Bengaluru Air Quality: ಉಡುಪಿ, ಮಂಗಳೂರಿನ ವಾಯುಗುಣಮಟ್ಟದಲ್ಲಿ ಸುಧಾರಣೆ

ಬೆಂಗಳೂರು, ಮಾರ್ಚ್​ 30: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏರ್ ಕ್ವಾಲಿಟಿಯಲ್ಲಿ  (Bengaluru Air Quality) ಏರುಪೇರಾಗುತ್ತಲೇ ಇದೆ. ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ. ಆದರೆ ಇಂದು ಬೆಂಗಳೂರಿನ ಏರ್ ಕ್ವಾಲಿಟಿ ತಕ್ಕಮಟ್ಟಿಗೆ ಸುಧಾರಣೆ ಕಂಡಿದೆ. 150ಕ್ಕಿಂತ ಜಾಸ್ತಿಯಿದ್ದ AQI ಕಡುಮೆಯಾಗಿದ್ದರೂ, ಇನ್ನೂ ಗುಣಮಟ್ಟ ಅನಾರೋಗ್ಯಕರವಾಗಿಯೇ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 152ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –152
  • ಮಂಗಳೂರು-126
  • ಮೈಸೂರು –152
  • ಬೆಳಗಾವಿ – 130
  • ಕಲಬುರ್ಗಿ-126
  • ಶಿವಮೊಗ್ಗ – 122
  • ಬಳ್ಳಾರಿ – 146
  • ಹುಬ್ಬಳ್ಳಿ- 118
  • ಉಡುಪಿ –134
  • ವಿಜಯಪುರ –90

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಒಮ್ಮೆ ತಿಳೀಲಿಲ್ಲ ಅಂದ, ಮತ್ತೊಮ್ಮೆ ಮೈಮೇಲೆ ದೆವ್ವ ಬಂದಿತ್ತು ಅಂದ, ಇಂಡಿಗೋ ವಿಮಾನದಲ್ಲಿ 2 ಬಾರಿ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕ

ವಾರಾಣಸಿ, ಮಾರ್ಚ್​ 30: ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ(IndiGo)  ವಿಮಾನದಲ್ಲಿ ಪ್ರಯಾಣಿಕನೊಬ್ಬ ಎರಡು ಬಾರಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ತೆರೆಯಲು ಯತ್ನಿಸಿರುವ ಘಟನೆ ನಡೆದಿದೆ. ಒಮ್ಮೆ ವಿಮಾನ ಸಿಬ್ಬಂದಿ ಕೇಳಿದಾಗ ತಿಳೀಲಿಲ್ಲ ಅಂದ, ಮತ್ತೊಮ್ಮೆ ಮೈಮೇಲೆ ದೆವ್ವ ಬಂದಿತ್ತು ಎಂದು ಹೇಳಿದ್ದಾನೆ.6E-185 ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಹಾರಾಟದ ಸಮಯದಲ್ಲಿ ಎರಡು ಬಾರಿ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ.

ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ, ಪ್ರಯಾಣಿಕನನ್ನು ಭದ್ರತಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಯಿತು. ವರದಿಗಳ ಪ್ರಕಾರ, ವಿಮಾನ ಟೇಕ್ ಆಫ್ ಆದ ಸುಮಾರು 15 ನಿಮಿಷಗಳ ನಂತರ ಅದ್ನಾನ್ ಎಂಬ ವ್ಯಕ್ತಿ ಮೊದಲು ತುರ್ತು ಬಾಗಿಲನ್ನು ತಿದ್ದಲು ಪ್ರಯತ್ನಿಸಿದ್ದ. ಕ್ಯಾಬಿನ್ ಸಿಬ್ಬಂದಿ ತಕ್ಷಣ ಅವನನ್ನು ತಡೆದು ಎಚ್ಚರಿಸಿದ್ದರು, ನಂತರ ಅವನು ಸ್ವಲ್ಪ ಸಮಯದವರೆಗೆ ಶಾಂತನಾಗಿದ್ದ.

ಆದರೆ ರಾತ್ರಿ 10.20 ರ ಸುಮಾರಿಗೆ, ವಿಮಾನವು ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಅರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತು ಸುಮಾರು 500 ಅಡಿ ಎತ್ತರದಲ್ಲಿ ಇಳಿಯುವ ಹಂತದಲ್ಲಿದ್ದಾಗ ಅದ್ನಾನ್ ಮತ್ತೆ ಎಕ್ಸಿಟ್ ಡೋರ್ ತೆರೆಯಲು ಪ್ರಯತ್ನಿಸಿದ್ದಾನೆ. ಸಿಬ್ಬಂದಿಯಿಂದ ಮಾಹಿತಿ ಪಡೆದ ನಂತರ, ಪೈಲಟ್ ಲ್ಯಾಂಡಿಂಗ್ ಅನ್ನು ಸ್ಥಗಿತಗೊಳಿಸಿದರು, ಸುತ್ತಾಟ ನಡೆಸಿದರು ಮತ್ತು ಬೆಳಗ್ಗೆ 10. 35 ಕ್ಕೆ ವಿಮಾನವನ್ನು ಮತ್ತೆ ಸುರಕ್ಷಿತವಾಗಿ ಇಳಿಸಿದ್ದಾರೆ.

ಮತ್ತಷ್ಟು ಓದಿ: ನಾಳೆಯಿಂದ ವಿಮಾನ ಪ್ರಯಾಣ ದುಬಾರಿ; ಇಂಧನದ ಬೆಲೆ ಹೆಚ್ಚಾಗಿದ್ದರಿಂದ ಟಿಕೆಟ್ ದರ ಏರಿಸಿದ ಇಂಡಿಗೋ

ಈ ಘಟನೆಯು ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಭಯವನ್ನುಂಟು ಮಾಡಿತ್ತು. ಆದರೆ ಎಲ್ಲರೂ ಸುರಕ್ಷಿತವಾಗಿ ಇಳಿಸಿದ್ದಕ್ಕಾಗಿ ಸಿಬ್ಬಂದಿಯನ್ನು ಶ್ಲಾಘಿಸಿದರು.ನಿಯಮಗಳ ಪ್ರಕಾರ, ಆರೋಪಿ ಪ್ರಯಾಣಿಕನನ್ನು ತಕ್ಷಣವೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಭದ್ರತಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಯಿತು. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ನಡೆಸಿದ ವಿಚಾರಣೆಯ ಸಮಯದಲ್ಲಿ, ಅದ್ನಾನ್ ಆರಂಭದಲ್ಲಿ ತಾನು ಏಕೆ ಹಾಗೆ ವರ್ತಿಸಿದೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾನೆ, ಬಳಿಕ ನಗೆ ದೆವ್ವ ಹಿಡಿದಿದೆ ಎಂದಿದ್ದಾನೆ.

ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ, ತಾನು ಗೋವಾದಲ್ಲಿ ರಜೆ ಮುಗಿಸಿ ಹಿಂತಿರುಗುತ್ತಿದ್ದೇನೆ.ತಾನು ಎಳೆದ ಹ್ಯಾಂಡಲ್ ತುರ್ತು ನಿರ್ಗಮನ ಬಾಗಿಲಿನದ್ದು ಎಂದು ತಿಳಿದಿರಲಿಲ್ಲ ಎಂದಿದ್ದಾರೆ. ನಮ್ಮ ತನಿಖೆ ಮುಂದುವರೆದಿದ್ದು, ಆರೋಪಿಯನ್ನು ಇನ್ನೂ ಪ್ರಶ್ನಿಸಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಉಗುರುಗಳಿಗೆ ಈ ಬಣ್ಣ ಹಚ್ಚಿದ್ರೆ ತೊಂದರೆ ತಪ್ಪಿದ್ದಲ್ಲ!

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಉಗುರಿಗೆ ಯಾವ ಬಣ್ಣ ಹಚ್ಚಿದ್ರೆ ತೊಂದರೆಯಾಗುತ್ತದೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಉಗುರುಗಳಿಗೆ ಬಣ್ಣ ಹಚ್ಚುವುದು ಸೌಂದರ್ಯದ ಒಂದು ಭಾಗವಾಗಿದ್ದು, ಇದನ್ನು ನೈಲ್ ಪಾಲಿಶ್ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಮತ್ತು ಸಾಮುದ್ರಿಕ ಶಾಸ್ತ್ರದ ಪ್ರಕಾರ, ಈ ಬಣ್ಣಗಳು ನಮ್ಮ ಮಾನಸಿಕ ಸ್ಥಿತಿ ಮತ್ತು ಶುಭ ಫಲಗಳ ಮೇಲೆ ಪರಿಣಾಮ ಬೀರುತ್ತವೆ.

ಕೆಂಪು ಬಣ್ಣವು ಮಂಗಳನ ಪ್ರತೀಕವಾಗಿದ್ದು, ಕೋಪ, ಆವೇಶ ಮತ್ತು ಅಹಂಕಾರವನ್ನು ಹೆಚ್ಚಿಸಬಹುದು. ಆದ್ದರಿಂದ, ತಿಳಿ ಕೆಂಪು ಬಣ್ಣಗಳನ್ನು ಬಳಸುವುದು ಉತ್ತಮ. ಹಳದಿ ಬಣ್ಣವು ಗುರುವಿನ ಪ್ರತೀಕವಾಗಿದ್ದು, ಶಾಂತಿ, ಸಹನೆ ಮತ್ತು ಜ್ಞಾನದ ಮನೋಭಾವವನ್ನು ಪ್ರಚೋದಿಸುತ್ತದೆ. ಇದು ವಿವಾಹಿತರು ಮತ್ತು ಅವಿವಾಹಿತರಿಗೆ ಶುಭಕರ. ಬಿಳಿ ಬಣ್ಣವು ಸ್ಪಷ್ಟತೆ ಮತ್ತು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಗುಲಾಬಿ ಬಣ್ಣವು ಶುಕ್ರನ ಪ್ರತೀಕವಾಗಿದ್ದು, ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಹಸಿರು ಬಣ್ಣವು ವ್ಯಾಪಾರ, ಶಿಕ್ಷಣ ಮತ್ತು ಸಂವಹನ ಕ್ಷೇತ್ರಗಳಲ್ಲಿ ಶುಭ ಫಲ ನೀಡುತ್ತದೆ ಎಂದು ಗುರೂಜಿ ಹೇಳಿದ್ದಾರೆ.

 

 

 

 

Source link

‘ಧುರಂಧರ್ 2’ ನಿರ್ದೇಶಕ ಆದಿತ್ಯ ಧಾರ್ ಹಾಗೂ ಪತ್ನಿ ಯಾಮಿ ಪೈಕಿ ಯಾರು ಹೆಚ್ಚು ಶ್ರೀಮಂತರು?

‘ಧುರಂಧರ್’ ನಿರ್ದೇಶಕ ಆದಿತ್ಯ ಧಾರ್ ಹೆಚ್ಚು ಚರ್ಚೆಯಲ್ಲಿರುವ ವ್ಯಕ್ತಿ. ‘ಧುರಂಧರ್’ ಹಾಗೂ ‘ಧುರಂಧರ್ 2’ ಚಿತ್ರಗಳ ಭಾರಿ ಯಶಸ್ಸಿನ ನಂತರ, ಆದಿತ್ಯ ಅವರ ಸಂಪತ್ತು ಎಷ್ಟು ಎಂಬ ಬಗ್ಗೆ ಚರ್ಚೆ ಆಗಿದೆ. ಅವರ ಪತ್ನಿ ಯಾಮಿ ಗೌತಮ್ ಮತ್ತು ಆದಿತ್ಯ ಅವರ ಒಟ್ಟು ಸಂಪತ್ತಿನ ಬಗ್ಗೆ ಇಲ್ಲಿದೆ ಮಾಹಿತ. ‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ ಎರಡೂ ಚಿತ್ರಗಳ ಭಾರಿ ಯಶಸ್ಸಿನ ನಂತರ ನಿರ್ದೇಶಕ ಆದಿತ್ಯ ಧಾರ್ ಜನಪ್ರಿಯತೆ ಹೆಚ್ಚಿದೆ. ಆದಿತ್ಯ ಈಗ ಬಾಲಿವುಡ್ ಅಲ್ಲಿ ಬೇಡಿಕೆಯ ನಿರ್ದೇಶಕ. ಅವರ ಸಂಪತ್ತು ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ. ಆದಿತ್ಯ ಅವರ ಪತ್ನಿ ಮತ್ತು ನಟಿ ಯಾಮಿ ಗೌತಮ್ ಕೂಡ ನಟನಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾರೆ. ಅವರು ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದರು.

ಒಂದು ವರದಿಯ ಪ್ರಕಾರ, ಆದಿತ್ಯ ಧಾರ್ ಮತ್ತು ಯಾಮಿ ಗೌತಮ್ ಅವರ ಒಟ್ಟು ಸಂಪತ್ತು 100 ರಿಂದ 125 ಕೋಟಿ ರೂ.ಗಳ ನಡುವೆ ಇದೆ. ಅವರಲ್ಲಿ ಯಾಮಿ ಅತಿ ಹೆಚ್ಚು ಆದಾಯ ಹೊಂದಿರುವವರು. ಯಾಮಿ 90 ಕೋಟಿ ರೂ.ಗಳಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ.

ಆದಿತ್ಯ ಧಾರ್ ಚಲನಚಿತ್ರ ನಿರ್ದೇಶನ ಮತ್ತು ಬರವಣಿಗೆಯಿಂದ ಗಳಿಸುತ್ತಾ ಇದ್ದಾರೆ. ಯಾಮಿ ನಟನೆ ಮತ್ತು ಜಾಹೀರಾತುಗಳಿಂದ ಸಂಪಾದಿಸುತ್ತಾರೆ. ಆದಿತ್ಯ ಒಂದು ಚಿತ್ರಕ್ಕೆ ಸುಮಾರು ಎಂಟರಿಂದ ಹತ್ತು ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ.

ಈ ಇಬ್ಬರನ್ನು ಬಾಲಿವುಡ್ ಉದ್ಯಮದಲ್ಲಿ ಪವರ್ ಕಪಲ್ ಎಂದು ಪರಿಗಣಿಸಲಾಗಿದೆ. ಈಗ, ‘ಧುರಂಧರ್ 2’ ಯಶಸ್ಸಿನ ನಂತರ, ಆದಿತ್ಯ ಅವರ ಸಂಪತ್ತು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಎರಡೂ ಚಿತ್ರಗಳು ಒಟ್ಟಿಗೆ 2000 ಕೋಟಿ ರೂ. ಗಳಿಸಿವೆ. ಎರಡನೇ ಭಾಗದ ಗಳಿಕೆ ಇನ್ನೂ ಮುಂದುವರೆದಿದೆ.

ಇದನ್ನೂ ಓದಿ:  ‘ಧುರಂಧರ್ 2’ ಯಶಸ್ಸು, ರಣ್ವೀರ್ ಸಿಂಗ್​​ಗೆ ಐದು ಕೋಟಿ ಮೌಲ್ಯದ ಕಾರು ಕೊಟ್ಟ ಆದಿತ್ಯ-ಗೌತಮಿ?

ಆದಿತ್ಯ ಧಾರ್ 1983 ರಲ್ಲಿ ದೆಹಲಿಯ ಕಾಶ್ಮೀರಿ ಪಂಡಿತ್ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಆದಿತ್ಯ ಅದೇ ನಗರದಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಕ್ರಿಕೆಟಿಗನಾಗುವುದು ಅವರ ಕನಸಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ

ಇಂಡಿಯನ್ ಪ್ರೀಮಿಯರ್ ಲೀಗ್​ನ ಎರಡನೇ ಪಂದ್ಯದ ವೇಳೆ ಟಾಸ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಈ ಗಂಭೀರ ಆರೋಪ ಮಾಡಿರುವುದು ಮತ್ಯಾರೂ ಅಲ್ಲ, ಐಪಿಎಲ್ ಅಭಿಮಾನಿಗಳು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ಕ್ಯಾಮೆರಾದಲ್ಲಿ ಟಾಸ್ ಕಾಯಿನ್ ತೋರಿಸದಿರುವುದೇ ಈ  ಆರೋಪಕ್ಕೆ ಮುಖ್ಯ ಕಾರಣ.

ಏಕೆಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ತಂಡ ಗೆಲ್ಲುವುದು ವಾಡಿಕೆ. ಅಂದರೆ ಇಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸುತ್ತದೆ. ಇತ್ತ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕಾಯಿನ್ ಅನ್ನು ದೂರಕ್ಕೆ ಚಿಮ್ಮಿಸಿದ್ದಾರೆ. ಹೀಗೆ ದೂರಕ್ಕೆ ಹೋಗಿ ಬಿದ್ದ ನಾಣ್ಯವನ್ನು ಕ್ಯಾಮೆರಾದಲ್ಲಿ ತೋರಿಸಲಾಗಿಲ್ಲ.

ನಾಣ್ಯ ಕೆಳಗೆ ಬೀಳುವ ಸರಿಯಾದ ಸಮಯದಲ್ಲಿ ಕ್ಯಾಮೆರಾ ಬೇರೆಡೆಗೆ ತಿರುಗಿತು. ಟಾಸ್ ಗೆದ್ದವರು ಯಾರು ಎಂಬುದು ಸ್ಪಷ್ಟವಾಗಿ ಕಾಣಿಸುವ ಮೊದಲೇ ರೆಫರಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದಿದೆ ಎಂದು ಘೋಷಿಸಿದರು.

ಇದರ ಬೆನ್ನಲ್ಲೇ  ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ “ಟಾಸ್ ಫಿಕ್ಸಿಂಗ್” ಆರೋಪ ಕೇಳಿ ಬಂದಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ವಿರುದ್ಧದವೇ ಇಂತಹದೊಂದು ಆರೋಪ ಕೇಳಿ ಬಂದಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

2024ರ ಐಪಿಎಲ್​ನಲ್ಲಿ ಆರ್​ಸಿಬಿ ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಹಾಕಿದಾಗ, ನಾಣ್ಯವು ಸ್ವಲ್ಪ ದೂರದಲ್ಲಿ ಬಿದ್ದಿತ್ತು. ನಾಣ್ಯವನ್ನು ನೋಡಿ ಮ್ಯಾಚ್ ರೆಫರಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದಿದೆ ಎಂದಿದ್ದರು. ಆದರೆ ಆ ನಾಣ್ಯವನ್ನು ವೀಕ್ಷಿಸಲು ಅಂದಿನ ಆರ್​ಸಿಬಿ ತಂಡದ ನಾಯಕನ ಫಾಫ್ ಡುಪ್ಲೆಸಿಸ್​ಗೆ ಅವಕಾಶ ನೀಡಿರಲಿಲ್ಲ.

ಇದಾದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮುಂದಿನ ಪಂದ್ಯದಲ್ಲಿ, ಫಾಫ್ ಡು ಪ್ಲೆಸಿಸ್ ಅವರು ಎಸ್​ಆರ್​ಹೆಚ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಸನ್ನೆಗಳ ಮೂಲಕ ಟಾಸ್ ಘಟನೆಯನ್ನು ವಿವರಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ಘಟನೆಯ ಬಳಿಕ ಐಪಿಎಲ್​ನಲ್ಲಿ ಟಾಸ್ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ತೋರಿಸಲಾರಂಭಿಸಿದ್ದರು. ಅಂದರೆ ಕಾಯಿನ್ ಬಿದ್ದ ಬಳಿಕ ಕ್ಯಾಮೆರಾದಲ್ಲಿ ಝೂಮ್ ಮಾಡಿ ತೋರಿಸಲಾಗುತ್ತಿತ್ತು. ಆದರೆ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯದ ವೇಳೆ ಕಾಯಿನ್ ತೋರಿಸಲಾಗಿಲ್ಲ. ಹೀಗಾಗಿಯೇ ಇದೀಗ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ಸೋಷಿಯಲ್ ಮೀಡಿಯಾದಲ್ಲಿ ಟಾಸ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 220 ರನ್​ ಕಲೆಹಾಕಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ಕೇವಲ 19.1 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

 

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಜೋರಾಯ್ತು ವರುಣಾರ್ಭಟ! ರಾಜ್ಯದ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಮಾರ್ಚ್​ 30: ಭಾನುವಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ  (Weather Forecast)   ಸುರಿದಿದ್ದು, ಬಿಸಿಲ ಬೇಗೆ ಆರಿದಂತಾಗಿದೆ. ಇಂದೂ ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ, ಮೈಸೂರು, ಕೋಲಾರ ಮತ್ತು ಹಾಸನ ಜಿಲ್ಲೆಗಳಲ್ಲಿ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ನಿನ್ನೆ ಸುರಿದ ಮಳೆಯ ವಿವರ

  • ಬೆಂಗಳೂರು ನಗರ – 18.8 ಮಿಮೀ
  • ಎಚ್‌ಎಎಲ್ ವಿಮಾನ ನಿಲ್ದಾಣ (HAL Airport) – 3.7 ಮಿಮೀ
  • ಬೆಂಗಳೂರು ಗ್ರಾಮಾಂತರ – 19.0 ಮಿಮೀ
  • ಚಿಂತಾಮಣಿ – 4.5 ಮಿಮೀ
  • ಗೋಣಿಕೊಪ್ಪಲ್ – 2.0 ಮಿಮೀ
  • ದೊಡ್ಡಬಳ್ಳಾಪುರ – 1.0 ಮಿಮೀ

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​? ​

ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಹಾವೇರಿ, ದಕ್ಷಿಣ ಕನ್ನಡ, ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಈ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ.

ಎಲ್ಲೆಲ್ಲಿ ಮಳೆ

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿದಂತೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರದಲ್ಲೂ ಗಾಳಿ ಮಳೆ ಜೋರಾಗಿರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಗಂಗಾವತಿಯಲ್ಲಿ ಸೈಕೋ ಕಳ್ಳನ ಹಾವಳಿ: ಮಹಿಳೆಯರ ಒಳ ಉಡುಪುಗಳೇ ಈತನ ಟಾರ್ಗೆಟ್!

ಕೊಪ್ಪಳ, ಮಾರ್ಚ್ 30: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಸಿಬಿಎಸ್ ಬಡಾವಣೆಯಲ್ಲಿ ವಿಚಿತ್ರ ಕಳ್ಳನೊಬ್ಬನ ಹಾವಳಿ ಶುರುವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ ವೇಳೆ ಮನೆಯ ಗೋಡೆ ಹಾರಿ ಬರುತ್ತಿರುವ ಈ ಖದೀಮ, ಮಹಿಳೆಯರ ಒಳ ಉಡುಪುಗಳನ್ನು ಮಾತ್ರ ಕಳ್ಳತನ ಮಾಡುತ್ತಿದ್ದಾನೆ. ಈತನ ವಿಕೃತ ಚೇಷ್ಟೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಮಹಿಳೆಯರಲ್ಲಿ ಆತಂಕ ಮೂಡಿಸಿದೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ಲೀಗ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಮುಂಬೈ ಇಂಡಿಯನ್ಸ್

Source link