All posts by nagaraj11081993

ಗಿಲ್ಲಿನ ಕಳ್ಳನ ರೀತಿ ಕರೆತಂದ ಪೊಲೀಸರು; ನಟನ ಡೈಲಾಗ್ ಕೇಳಿ ನಕ್ಕ ಆರಕ್ಷಕರು – Kannada News | Gilli’s Humorous Police Escort: Bigg Boss Winner’s Viral ‘Am I a Thief?’ Moment

ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ (Gilli Nata) ಅವರು ನಾನಾ ಕಡೆಗಳಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ. ಪ್ರತಿ ವೇದಿಕೆಯಲ್ಲೂ ಅವರಿಗೆ ರಾಜ ಮರ್ಯಾದೆ ಸಿಗುತ್ತಿದೆ. ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆಯುತ್ತಿದ್ದಾರೆ. ಈ ವಿಷಯ ಅವರ ಖುಷಿಗೆ ಕಾರಣ ಆಗಿದೆ. ಬಿಗ್ ಬಾಸ್ ವೀಕ್ಷಕರು ಕೂಡ ಗಿಲ್ಲಿ ಜನಪ್ರಿಯತೆ ಕಂಡು ನಿಬ್ಬರಗಾಗುತ್ತಿದ್ದಾರೆ. ಈಗ ಗಿಲ್ಲಿ ಹೋದಲ್ಲಿ ಬಂದಲ್ಲಿ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಈಗ ಗಿಲ್ಲಿ ಅವರ ಫನ್ ವಿಡಿಯೋ ವೈರಲ್ ಆಗಿದೆ.

ಗಿಲ್ಲಿ ನಟ ಅವರು ಹಲವು ರಿಯಾಲಿಟಿ ಶೋಗಳನ್ನು ನೀಡಿದವರು. ಇದರಿಂದ ಸ್ವಲ್ಪ ಜನಪ್ರಿಯತೆ ಅವರಿಗೆ ಸಿಕ್ಕಿತ್ತು. ಆದರೆ, ಬಿಗ್ ಬಾಸ್ ತಂದುಕೊಟ್ಟಷ್ಟು ಜನಪ್ರಿಯತೆ ಅವರಿಗೆ ಯಾವ ಶೋ ಕೂಡ ನೀಡಿಲ್ಲ. ಈ ಕಾರಣದಿಂದ ಬಿಗ್ ಬಾಸ್ ಶೋಗೆ ಅವರು ಚಿರಋಣಿ ಆಗಿದ್ದಾರೆ. ಇತ್ತೀಚೆಗೆ ಅವರು ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಈ ವೇಳೆ ಒಂದು ಫನ್ ಘಟನೆ ನಡೆದಿದೆ.

ಕಾರ್ಯಕ್ರಮ ಮುಗಿದ ಬಳಿಕ ಗಿಲ್ಲಿನ ಭೇಟಿ ಮಾಡಬೇಕು, ಗಿಲ್ಲಿ ಜೊತೆ ಮಾತನಾಡಬೇಕು, ಗಿಲ್ಲಿ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕು ಎಂದು ಅನೇಕರು ಮುತ್ತಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಗಿಲ್ಲಿಗೆ ತೊಂದರೆ ಆಗುತ್ತದೆ. ಆ ರೀತಿ ಆಗಬಾರದು ಎಂದೇ ಗಿಲ್ಲಿ ನಟ ಅವರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ.

ಗಿಲ್ಲಿನ ತೆಗೆದುಕೊಂಡು ಹೋಗುತ್ತಿದ್ದನ್ನು ನೋಡಿದ ಅನೇಕರಿಗೆ, ಪೊಲೀಸರು ಆರೋಪಿಯನ್ನು ಕರೆದುಕೊಂಡು ಹೋದಂತೆ ಕಾಣಿಸಿದೆ. ಗಿಲ್ಲಿ ಯಾರು ಎಂಬ ಗೊತ್ತಿಲ್ಲದ ವ್ಯಕ್ತಿ ಯಾರಾದರೂ ಇದ್ದಲ್ಲಿ ಅವರಿಗೆ ಈ ವಿಡಿಯೋ ಅದೇ ರೀತಿ ಕಾಣಿಸಲಿದೆ. ಗಿಲ್ಲಿ ಕೂಡ ‘ಸರ್, ನಾನೇನು ಕಳ್ಳನಾ?’ ಎಂದು ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೊಲೀಸರು ನಕ್ಕಿದ್ದಾರೆ.

ಇದನ್ನೂ ಓದಿ: ಗಿಲ್ಲಿ ನಟನಿಗೆ ಬಿಗ್ ಬಾಸ್​ನಿಂದ ಕಾರು ಸಿಗೋದು ಯಾವಾಗ? ಕೊನೆಗೂ ಸಿಕ್ತು ಉತ್ತರ

ಗಿಲ್ಲಿ ಅವಕಾಶ ಸಿಕ್ಕಾಗಲೆಲ್ಲ ಹಾಸ್ಯದ ಹೊಳೆ ಹರಿಸುತ್ತಾರೆ. ಪೊಲೀಸರು ಜೊತೆಯೂ ಅವರು ನಗೆ ಚಟಾಕಿ ಹಾರಿಸಿದ್ದಾರೆ. ಈ ಕಾರಣಕ್ಕೆ ಅವರು ಇಷ್ಟ ಆಗುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:41 am, Mon, 26 January 26

Source link

ಗಣರಾಜ್ಯೋತ್ಸವ: ಬೆಂಗಳೂರಿನಲ್ಲಿ ಟ್ರಾಫಿಕ್‌ ಅಲರ್ಟ್, ವಾಹನ ಸವಾರರೇ ಹೊರಡೋದಕ್ಕೂ ಮುನ್ನ ಈ ಮಾಹಿತಿ ತಿಳಿದಿರಿ – Kannada News | Republic Day 2026: Bengaluru Traffic Alert Issued Ahead of 77th Republic Day Parade

ಬೆಂಗಳೂರು, ಜನವರಿ 26: ಗಣರಾಜ್ಯೋತ್ಸವ (Republic Day 2026) ಪರೇಡ್‌ಗೆ ಕರ್ನಾಟಕ ಕೂಡ ಸಿದ್ಧವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್‌ ಪಡೆಗಳ ಪಥಸಂಚಲನಕ್ಕೆ ಮಾಣೆಕ್‌ ಶಾ ಪರೇಡ್‌ ಮೈದಾನ ಸಿದ್ಧವಾಗಿದೆ. ಬೆಳಗ್ಗೆ 8.30ರಿಂದ 10.30 ರವರೆಗೆ ಮಾಣೆಕ್‌ ಶಾ ಮೈದಾನದ ಸುತ್ತ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗಗಳನ್ನ ಕಲ್ಪಿಸಲಾಗಿದೆ.

ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಬೆಳಗ್ಗೆ 8.30ರಿಂದ 10.30ರವರೆಗೆ ಮಾಣೆಕ್ ಶಾ ಮೈದಾನದ ಸುತ್ತ ಸಂಚಾರ ನಿರ್ಬಂಧಿಸಲಾಗಿದೆ. ಕಬ್ಬನ್‌ ರಸ್ತೆ, ಕಾಮರಾಜ ರಸ್ತೆ, ಬಿಆರ್‌ವಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ. ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು ನಗರ ಸಂಚಾರಿ ಪೊಲೀಸರಿಂದ ಸೂಚಿಸಿದ್ದಾರೆ.

ಪರ್ಯಾಯ ಮಾರ್ಗಗಳು ಯಾವುವು?

ಇನ್ಫೆಂಟ್ರಿ ರಸ್ತೆಯಿಂದ ಮಣಿಪಾಲ್‌ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು, ಸಫೀನಾ ಪ್ಲಾಜಾದಲ್ಲಿ ಎಡತಿರುವು ಪಡೆದು, ಮೈನ್‌ಗಾರ್ಡ್‌ ರಸ್ತೆ, ಆಲೀಸ್‌ ಸರ್ಕಲ್, ಡಿಸ್ಸೆನ್ಸರಿ ರಸ್ತೆ, ಕಾಮರಾಜ ರಸ್ತೆ, ಡಿಕನ್ಸನ್‌ ರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು, ಕಬ್ಬನ್‌ ರಸ್ತೆಯ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬೇಕು.

ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ?

ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತ, ಶಿವಾಜಿನಗರ ಬಸ್ ನಿಲ್ದಾಣ, ಕಬ್ಬನ್ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್.ರಸ್ತೆ, ಕಬ್ಬನ್ ಜಂಕ್ಷನ್​​ವರೆಗೆ, ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ಪರೇಡ್‌ ಮೈದಾನದಲ್ಲಿ ಬಿಗಿ ಭದ್ರತೆ

ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಲರ್‌ ಕೋಡ್‌ಗಳ ಮೂಲಕ ಪಾಸ್‌ ವಿತರಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಗೇಟ್‌ ನಂಬರ್ 2ರಲ್ಲಿ ತುರ್ತು ಸೇವಾ ವಾಹನಗಳಿಗೆ ಮತ್ತು ಗೇಟ್‌ 4ರ ಬಳಿ ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ ನಡೆಯಲಿದೆ. ಬೆಳಗ್ಗೆ 9ಗಂಟೆಗೆ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್‌ ಧ್ವಜಾರೋಹಣ ಮಾಡಲಿದ್ದಾರೆ. ಧ್ವಜಾರೋಹಣ ಮಾಡಿದ ಬಳಿಕ ರಾಜ್ಯಪಾಲರು ಗೌರವ ವಂದನೆ ಸ್ವೀಕರಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. 1 ಸಾವಿರದ 400 ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಬಾರಿಯ ಪರೇಡ್‌ನಲ್ಲಿ ತಮಿಳುನಾಡು ಪೊಲೀಸರು ಕೂಡ ಭಾಗಿ ಆಗ್ತಿರುವುದು ವಿಶೇಷ. ಇದರ ಜೊತೆಗೆ ಪಥಸಂಚಲನದಲ್ಲಿ ಸೇನೆ, ಏರ್‌ಫೋರ್ಸ್, ಸಿಆರ್‌ಪಿಎಫ್‌ ಮಹಿಳಾ ಸಿಬ್ಬಂದಿ, ಸ್ಕೌಟ್ಸ್‌ ಮತ್ತು ಗೈಡ್ಸ್, ಎನ್‌ಸಿಸಿ, ಸೇವಾದಳ, ಶಾಲಾ ಮಕ್ಕಳು ಭಾಗಿಯಾಗಲಿದ್ದಾರೆ. ರಿಪಬ್ಲಿಕ್‌ ಡೇ ಪರೇಡ್‌ನಲ್ಲಿ ಒಟ್ಟು 1,100 ಜನ ಭಾಗವಹಿಸಲಿದ್ದಾರೆ.

ರಾಜ್ಯಪಾಲರ ಭಾಷಣದ ಬಗ್ಗೆ ಭಾರಿ ಕುತೂಹಲ

ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸುವ ರಾಜ್ಯಪಾಲರು ಭಾಷಣ ಮಾಡಬೇಕಿದೆ. ಇತ್ತೀಚೆಗೆ ಜಂಟಿ ಅಧಿವೇಶನ ಭಾಷಣದ ವಿವಾದದ ಬಳಿಕ ಸರ್ಕಾರ ರಾಜ್ಯಪಾಲರಿಗೆ ಭಾಷಣ ಸಿದ್ಧಪಡಿಸಿ ನೀಡಿದೆ. ಭಾಷಣದಲ್ಲಿ ಯಾವ ಅಂಶಗಳನ್ನ ಉಲ್ಲೇಖಿಸಲಾಗಿದೆ ಎಂಬ ಕುತೂಹಲವಿದೆ. ಸಿಎಂ ಸಿದ್ದರಾಮಯ್ಯ, ನಾವು ಬರೆದುಕೊಟ್ಟ ಭಾಷಣ ಓದುತ್ತಾರಾ ಇಲ್ವಾ ನಮಗೆ ಗೊತ್ತಿಲ್ಲ ಅಂತಾ ಹೇಳಿದ್ದಾರೆ.

ರಾಜ್ಯಪಾಲರ ಭಾಷಣ ಒಂದೆಡೆಯಾದರೆ, ಇನ್ನುಳಿದ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಗಣರಾಜ್ಯೋತ್ಸವ ಸಂಭ್ರಮ ನೆರವೇರಿಸಲಿದ್ದಾರೆ. ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬ್ಬರಿಸಿ ಬೊಬ್ಬಿರಿದರೂ ಅಭಿಷೇಕ್​ ಶರ್ಮಾಗೆ ಸಿಕ್ಕಿಲ್ಲ ಪಂದ್ಯ ಶ್ರೇಷ್ಠ ಪ್ರಶಸ್ತಿ..! – Kannada News | Instead of Abhishek Sharma, Jasprit Bumrah won the Player of the Match award

ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ (Abhishek Sharma) ಅಕ್ಷರಶಃ ಅಬ್ಬರಿಸಿದ್ದರು. ಈ ಅಬ್ಬರದೊಂದಿಗೆ ಅಭಿಷೇಕ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದರು.

Source link

ಕರ್ನಾಟಕ ಹವಾಮಾನ ವರದಿ: ಮೈಸೂರು ಸೇರಿ ಕೆಲ ಜಿಲ್ಲೆಗಳಲ್ಲಿ ಇಂದು ತುಂತುರು ಮಳೆಯ ಸಾಧ್ಯತೆ – Kannada News | Bengaluru temperature: Light rain in south areas of Karnataka, Dry weather elsewhere

ಮೈಸೂರು ಸೇರಿ ಕೆಲ ಜಿಲ್ಲೆಗಳಲ್ಲಿ ತುಂತುರು ಮಳೆಯ ಸಾಧ್ಯತೆ

ಬೆಂಗಳೂರು, ಜನವರಿ 26: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಚಳಿಯ (Weather Forecast) ಜೊತೆಗೆ ಒಣಹವೆಯ ವಾತಾವರಣವಿತ್ತು. ಆದರಿಂದು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದೂ ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ತುಂತುರು ಮಳೆ?

ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ ಸೇರಿ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣಹವೆ?

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಮಂಜು

ಇಂದು ನಗರದಲ್ಲಿ ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 17°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೇಶಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ: ಈ ಬಾರಿ ಇದೆ ಹಲವು ವಿಶೇಷ! ದೆಹಲಿಯಲ್ಲಿ ಬಿಗಿ ಭದ್ರತೆ – Kannada News | Republic Day 2026: India Celebrates 77th Republic Day with Special Highlights, Tight Security in New Delhi

ನವದೆಹಲಿ, ಜನವರಿ 26: ದೇಶದ ಸಂವಿಧಾನವನ್ನು ಅಂಗೀಕರಿಸಿದ ಸುದಿನ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಸೇನಾಬಲವನ್ನು ಜಗತ್ತಿಗೆ ಪ್ರದರ್ಶಿಸುವ ದಿನ ಮತ್ತೆ ಬಂದಿದೆ. ಗಣರಾಜ್ಯೋತ್ಸವ (Republic Day 2026) ದಿನದ ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ. 77ನೇ ಗಣರಾಜ್ಯೋತ್ಸವವನ್ನು ಶತಕೋಟಿ ಭಾರತಿಯರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಎಲ್ಲಾ ಶಾಲೆಗಳು, ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಗೌರವ ಸಮರ್ಪಿಸಲು ಅಣಿಯಾಗಿದ್ದಾರೆ. ನವದೆಹಲಿಯ ಕರ್ತವ್ಯಪಥ ಕೂಡ ಸಿದ್ಧವಾಗಿದೆ.

77ನೇ ಗಣರಾಜ್ಯೋತ್ಸವ: ಎಷ್ಟೊತ್ತಿಗೆ ಏನೇನು ಕಾರ್ಯಕ್ರಮ?

  • ಬೆಳಗ್ಗೆ 10:03 – ವಾರ್‌ ಮೆಮೋರಿಯಲ್‌ನತ್ತ ಪ್ರಧಾನಿ ಮೋದಿ ಪ್ರಯಾಣ
  • ಬೆಳಗ್ಗೆ 10:05- ನ್ಯಾಷನಲ್‌ ವಾರ್‌ ಮೆಮೋರಿಯಲ್‌ನಲ್ಲಿ ಪ್ರಧಾನಿ ನಮನ
  • ಬೆಳಗ್ಗೆ 10:22 – ಕರ್ತವ್ಯ ಪಥದಲ್ಲಿರುವ ಮುಖ್ಯವೇದಿಕೆಗೆ ಮೋದಿ ಆಗಮನ
  • ಬೆಳಗ್ಗೆ 10:25 – ವೇದಿಕೆಯತ್ತ ಉಪರಾಷ್ಟ್ರಪತಿ ರಾಧಾಕೃಷ್ಣನ್‌ ಆಗಮನ
  • ಬೆಳಗ್ಗೆ 10:25 – ಸ್ವಾಗತ ಸಂಗೀತದ ಮೂಲಕ ಗಣ್ಯರ ಬರಮಾಡಿಕೊಳ್ಳುವಿಕೆ
  • ಬೆಳಗ್ಗೆ 10:27 – ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯೊಂದಿಗೆ ರಾಷ್ಟ್ರಪತಿಗಳ ಆಗಮನ
  • ಬೆಳಗ್ಗೆ 10:30 – ರಾಷ್ಟ್ರಧ್ವಜಾರೋಹಣ, ರಾಷ್ಟ್ರಗೀತೆ & 21 ಕುಶಾಲತೋಪುಗಳ ಗೌರವ
  • ಬೆಳಗ್ಗೆ 10:31 – ಕರ್ತವ್ಯಪಥದಲ್ಲಿ ಭವ್ಯ ಗಣರಾಜ್ಯೋತ್ಸವ ಪರೇಡ್ ಅಧಿಕೃತ ಆರಂಭ
  • ಮಧ್ಯಾಹ್ನ 12:08 – ಗಣರಾಜ್ಯೋತ್ಸವ ಪರೇಡ್ ಪರೇಡ್ ಮುಕ್ತಾಯ

ಗಣರಾಜ್ಯೋತ್ಸವ ಅತಿಥಿ ಯಾರು?

ಈ ಬಾರಿಯ ಗಣರಾಜ್ಯೋತ್ಸವದ ಅತಿಥಿಯಾಗಿ ಯೂರೋಪಿಯನ್‌ ಕೌನ್ಸಿಲ್ ಅಧ್ಯ ಆಂಟೋನಿಯಾ ಕೋಸ್ಟಾ ಹಾಗೂ ಯೂರೋಪಿಯನ್‌ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್‌ ಡೆರ್‌ ಭಾಗಿಯಾಗಲಿದ್ದಾರೆ.

ವಂದೇಮಾತರಂ ಗೀತೆಗೆ 150ನೇ ವರ್ಷಾಚರಣೆ

ಈ ವರ್ಷದ ಗಣರಾಜ್ಯೋತ್ಸವವು ವಂದೇಮಾತರಂ ಗೀತೆಯ 150ನೇ ವರ್ಷ ಪೂರೈಸಿದ ಐತಿಹಾಸಿಕ ಕ್ಷಣಕ್ಕೂ ಸಾಕ್ಷಿಯಾಗಲಿದೆ. ಇನ್ನು, ಪಥಸಂಚಲನದಲ್ಲಿ ಭಾರತದ ಸಾಂಸ್ಕೃತಿಕ ಮತ್ತು ಸೇನಾಶಕ್ತಿ ಅನಾವರಣಗೊಳ್ಳಲಿದೆ.

ಗಣರಾಜ್ಯೋತ್ಸವ ಪಥಸಂಚಲನದ ವಿಶೇಷಗಳೇನು?

ಈ ಬಾರಿಯ ಪಥಸಂಚಲನದಲ್ಲಿ ಆಪರೇಷನ್‌ ಸಿಂಧೂರ್‌ ರಚನೆಯನ್ನು ವಾಯುಪಡೆ ಪ್ರದರ್ಶಿಸಲಿದೆ. ‘ಆಪರೇಷನ್ ಸಿಂಧೂರ್’ನಲ್ಲಿ ಭಾಗವಹಿಸಿದ್ದ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡಿ ವಾಯುಪಡೆಯ ಶಕ್ತಿ ತೋರಿಸಲಿದೆ. ಇದರಲ್ಲಿ ಎರಡು ರಫೇಲ್ ಜೆಟ್‌ಗಳು, ಎರಡು Su-30 ವಿಮಾನಗಳು, ಎರಡು MiG-29 ಯುದ್ಧ ವಿಮಾನಗಳು ಮತ್ತು ಒಂದು ಜಾಗ್ವಾರ್ ಯುದ್ಧ ವಿಮಾನ ಸೇರಿವೆ. ಪಥಸಂಚಲನದಲ್ಲಿ 30 ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ‘ಸ್ವಾತಂತ್ರ್ಯದ ಮಂತ್ರ, ವಂದೇ ಮಾತರಂ’ ಮತ್ತು ‘ಸಮೃದ್ಧಿಯ ಮಂತ್ರ, ಆತ್ಮನಿರ್ಭರ ಭಾರತ’ ಎಂಬುದು ಈ ಬಾರಿಯ ಮುಖ್ಯ ಥೀಮ್‌ಗಳಾಗಿವೆ. ಜೊತೆಗೆ 2,500 ಸಾಂಸ್ಕೃತಿಕ ಕಲಾವಿದರು ಕರ್ತವ್ಯ ಪಥದಲ್ಲಿ ವಂದೇ ಮಾತರಂ ಮತ್ತು ಸ್ವಾವಲಂಬಿ, ಅಭಿವೃದ್ಧಿ ಹೊಂದಿದ ಭಾರತದ ಪರಿಕಲ್ಪನೆಯ ಬಗ್ಗೆ ಪ್ರದರ್ಶನ ನೀಡಲಿದ್ದಾರೆ.

ಮೂವತ್ತು ಸ್ತಬ್ಧಚಿತ್ರಗಳ ಪೈಕಿ 17 ಸ್ತಬ್ಧಚಿತ್ರಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮತ್ತು 13 ಸ್ತಬ್ಧಚಿತ್ರಗಳು ಕೇಂದ್ರದ ವಿವಿಧ ಸಚಿವಾಲಯಗಳಿಂದ ಇರಲಿವೆ. ಭಾರತೀಯ ವಾಯುಪಡೆಯ ಮಾಜಿ ಸೈನಿಕರನ್ನು ಒಳಗೊಂಡ ವಿಶೇಷ ಸ್ತಬ್ಧಚಿತ್ರವೂ ಇದರಲ್ಲಿ ಪ್ರದರ್ಶಿಸಲಿವೆ.

ಸಾಂಪ್ರದಾಯಿಕ ಧ್ವಜಾರೋಹಣ, ರಾಷ್ಟ್ರಗೀತೆ ಮತ್ತು ಸ್ವದೇಶಿ 105 MM ಲೈಟ್ ಫೀಲ್ಡ್‌ ಗನ್‌ಗಳನ್ನು ಬಳಸಿ 21-ಸುತ್ತಿನ ಕುಶಾಲತೋಪು ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ವಿವಿಧ ಕ್ಷೇತ್ರಗಳಿಂದ ಬಂದ ಸುಮಾರು 10,000 ವಿಶೇಷ ಅತಿಥಿಗಳು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ವಿಶ್ವ ಅಥ್ಲೆಟಿಕ್ ಪ್ಯಾರಾ ಚಾಂಪಿಯನ್‌ಶಿಪ್ ವಿಜೇತರು, ಕೃಷಿಕರು, ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ, ಗಗನಯಾನ, ಚಂದ್ರಯಾನದಂತಹ ಇತ್ತೀಚಿನ ಇಸ್ರೋ ಯೋಜನೆಗಳಲ್ಲಿ ಭಾಗವಹಿಸಿದ ಅತ್ಯುತ್ತಮ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರು, ಹಾಗೂ ಹೈಡ್ರೋಜನ್ ಉತ್ಪಾದನೆಗೆ ಪ್ರೋತ್ಸಾಹಧನ ಪಡೆದ ಕಂಪನಿಗಳ ಮುಖ್ಯಸ್ಥರು, ಸಿಇಒಗಳನ್ನೂ ಗೌರವ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ದೆಹಲಿಯಲ್ಲಿ ಹೆಜ್ಜೆಹೆಜ್ಜೆಗೂ ಕಣ್ಗಾವಲು ಇರಿಸಲಾಗಿದೆ.

ದೆಹಲಿಯಲ್ಲಿ 7ಸುತ್ತಿನ ಕೋಟೆ ಭದ್ರತೆ

  • 1 ಸಾವಿರಕ್ಕೂ ಹೆಚ್ಚು ಹೈಡೆಫಿನಿಷನ್‌ ಸಿಸಿ ಕ್ಯಾಮರಾ ಅಳವಡಿಕೆ
  • AI ತಂತ್ರಜ್ಞಾನದ ಕಣ್ಗಾವಲು ಇರಿಸುವ ಲೈವ್‌ ಕ್ಯಾಮರಾಗಳು
  • ಮುಖಚಹರೆಗಳನ್ನು ಪತ್ತೆ ಮಾಡುವ ಅತ್ಯಾಧುನಿಕ ಕ್ಯಾಮರಾಗಳು
  • 30ಕ್ಕೂ ಹೆಚ್ಚು ಕಂಟ್ರೋಲ್‌ ರೂಂಗಳಿಂದ ಲೈವ್‌ ಮಾನಿಟರ್‌
  • ದೃಶ್ಯಾವಳಿಗಳ ಮೇಲೆ ನಿಗಾ ಇರಿಸಲು 150ಕ್ಕೂ ಹೆಚ್ಚು ಸಿಬ್ಬಂದಿ
  • ಭದ್ರತಾ ಪಡೆಗಳಿಗೆ AI ತಂತ್ರಜ್ಞಾನದ ಗ್ಲಾಸ್‌ಗಳನ್ನ ನೀಡಲಾಗಿದೆ
  • ಪಥಸಂಚಲನ ಮಾರ್ಗದಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸರು
  • ಗುಪ್ತಚರ ಸಿಬ್ಬಂದಿ ಸೇರಿದಂತೆ ಅರೆಸೇನಾಪಡೆ, ಸೇನಾಪಡೆ ಅಲರ್ಟ್

ದೆಹಲಿಯ ಪ್ರಮುಖ ರಸ್ತೆಗಳನ್ನ ಬ್ಲಾಕ್‌ ಮಾಡಲಾಗಿದ್ದು, ಹಲವು ಮಾರ್ಗಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಗಣರಾಜ್ಯೋತ್ಸವಕ್ಕೆ ರಾಷ್ಟ್ರ ರಾಜಧಾನಿ ಸಕಲ ರೀತಿಯಲ್ಲೂ ಸಜ್ಜಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:14 am, Mon, 26 January 26

Source link

ದಾಖಲೆ ವಿಶ್ವ ದಾಖಲೆ… ಟೀಮ್ ಇಂಡಿಯಾದ ವರ್ಲ್ಡ್​ ರೆಕಾರ್ಡ್ ಚೇಸಿಂಗ್

Source link

ಗಿಲ್ಲಿ ನಟನಿಗೆ ಬಿಗ್ ಬಾಸ್​ನಿಂದ ಕಾರು ಸಿಗೋದು ಯಾವಾಗ? ಕೊನೆಗೂ ಸಿಕ್ತು ಉತ್ತರ – Kannada News | When Will Bigg Boss Kannada 12 Winner Gilli Nataraja Get Car and Prize Money?

‘ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss) ಗಿಲ್ಲಿ ನಟ ಅವರು ಗೆದ್ದು ಒಂದು ವಾರ ಕಳೆದಿದೆ. ಆದಾಗ್ಯೂ ಅವರ ಬಗ್ಗೆ ನಡೆಯುತ್ತಿರುವ ಚರ್ಚೆಗಳು ನಿಂತಿಲ್ಲ. ಅನೇಕರು ಅವರನ್ನು ಹಾಡಿ ಹೊಗಳುತ್ತಿದ್ದಾರೆ. ವಿವಿಧ ಕಡೆಗಳಲ್ಲಿ ತೆರಳಿ ಗಿಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಅವರಿಗೆ ಈ ಬಾರಿ ಬಿಗ್ ಬಾಸ್ ವಿನ್ ಆಗಿದ್ದಕ್ಕೆ ಕಾರ್ ಕೊಡೋದಾಗಿ ಸುದೀಪ್ ಘೋಷಿಸಿದರು. ಆದರೆ, ಅದು ಗಿಲ್ಲಿಗೆ ಇಷ್ಟು ಬೇಗ ಕೈ ಸೇರೋದಿಲ್ಲ.

ಈ ಬಾರಿಯ ಬಿಗ್ ಬಾಸ್ ಅಲ್ಲಿ ಗಿಲ್ಲಿ ನಟ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಯಿತು. ಈ ಬಳಗವನ್ನು ಅವರು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬ ಕುತೂಹಲ ಮೂಡಿದೆ. ದೊಡ್ಡ ವೋಟ್ ಅಂತರದಲ್ಲಿ ಗಿಲ್ಲಿ ಗೆದ್ದಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿ ಮಾರುತಿ ಸುಜುಕಿ ಕಡೆಯಿಂದ ಗಿಲ್ಲಿಗೆ ವಿಕ್ಟೋರಿಸ್ ಕಾರು ಸಿಕ್ಕಿದೆ. ಆದರೆ, ಅದು ಸದ್ಯಕ್ಕೆ ಅವರ ಕೈ ಸೇರೋದಿಲ್ಲ.

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್​​ಗೂ ಮಾರುತಿ ಸುಜುಕಿ ಕಡೆಯಿಂದ ಬ್ರೇಜಾ ಕಾರು ಸಿಕ್ಕಿತ್ತು. ವೇದಿಕೆ ಮೇಲೆ ಅವರಿಗೆ ಕೀ ಮಾದರಿಯನ್ನು ಕೊಡಲಾಗಿತ್ತು. 2024ರ ಅಂತ್ಯಕ್ಕೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಕೊನೆಗೊಂಡಿತು. ಅವರಿಗೆ ಕಾರು ಸಿಕ್ಕಿದ್ದು ಅದೇ ವರ್ಷ ಆಗಸ್ಟ್​ ತಿಂಗಳಲ್ಲಿ. ಆ ಸಂದರ್ಭದಲ್ಲಿ ಕಾರ್ತಿಕ್ ಅವರು ವಿಡಿಯೋ ಹಂಚಿಕೊಂಡಿದ್ದರು. ಅಂದರೆ ಕಾರು ಸಿಗಲು ಅವರಿಗೆ ಸುಮಾರು 7-8 ತಿಂಗಳು ಬೇಕಾಯಿತು.

ಕಾರ್ತಿಕ್ ಮಹೇಶ್ ಅವರು ವಿವರಿಸಿದಂತೆ ‘ಬಿಗ್ ಬಾಸ್​’ ಕಾರು ಉಡುಗೊರೆ ಪ್ರಕ್ರಿಯೆ ತುಂಬಾನೇ ಸುದೀರ್ಘವಾದುದ್ದು. ಹೀಗಾಗಿ, ಕಾರು ಸಿಗೋದು ತಡವಾಗುತ್ತದೆ. ಗಿಲ್ಲಿಗೂ ಜುಲೈ ಅಥವಾ ಆಗಸ್ಟ್​ ತಿಂಗಳಲ್ಲಿ ಕಾರು ಸಿಗಬಹುದು ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ಬಿಗ್ ಬಾಸ್ ಮುಗಿದ ಏಳು ತಿಂಗಳ ಬಳಿಕ ಕಾರ್ತಿಕ್ ಮಹೇಶ್​ಗೆ ಸಿಕ್ತು ಕಾರು; ಇದರ ವಿಶೇಷತೆಗಳೇನು?

ಗಿಲ್ಲಿಗೆ ಸಿಗೋ 50 ಲಕ್ಷ ರೂಪಾಯಿ ಕೂಡ ತಕ್ಷಣಕ್ಕೆ ಸಿಗೋದಲ್ಲ. ಅದು ಕೂಡ ಖಾತೆಗೆ ಬೀಳಲು ಸ್ವಲ್ಪ ಸಮಯ ಬೇಕು. 50 ಲಕ್ಷದಲ್ಲಿ ತೆರಿಗೆ ಕಟ್ ಆಗಿ ಅವರಿಗೆ ಸಿಗೋದು ಕೇವಲ 35 ಲಕ್ಷ ರೂಪಾಯಿ ಮಾತ್ರ. ಸುದೀಪ್ ಕಡೆಯಿಂದ ಅವರಿಗೆ 10 ಲಕ್ಷ ರೂಪಾಯಿ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಈ ಮೂರು ರಾಶಿಯವರು ಕಪ್ಪು ಬಟ್ಟೆ ಧರಿಸಿದ್ರೆ ಕಷ್ಟಗಳು ತಪ್ಪಿದ್ದಲ್ಲ ! – Kannada News | Daily Devotional: Three Zodiac Signs Should Avoid Black Clothes Until Ugadi

ಬೆಂಗಳೂರು, ಜನವರಿ 26: ಬಣ್ಣಗಳು ಮತ್ತು ವಸ್ತ್ರಗಳು ನಮ್ಮ ಮನಸ್ಸು ಹಾಗೂ ಜೀವನದ ಮೇಲೆ ಗಣನೀಯ ಪ್ರಭಾವ ಬೀರುತ್ತವೆ. ಕೆಲವು ಬಣ್ಣಗಳು ಅದೃಷ್ಟ ತಂದರೆ, ಇನ್ನು ಕೆಲವು ದುರಾದೃಷ್ಟವನ್ನು ತರಬಹುದು. ಕಪ್ಪು ಬಣ್ಣವು ಶನಿಯ ಪ್ರತೀಕವಾಗಿದೆ. ಪ್ರತಿಯೊಂದು ಬಣ್ಣಕ್ಕೂ ತನ್ನದೇ ಆದ ಶಕ್ತಿ ಇರುತ್ತದೆ, ಅದು 12 ರಾಶಿಗಳ ಮೇಲೂ ಪ್ರಭಾವ ಬೀರುತ್ತದೆ. ಯುಗಾದಿಯ (ಮಾರ್ಚ್ 19) ತನಕ ಮೂರು ನಿರ್ದಿಷ್ಟ ರಾಶಿಚಕ್ರದವರಿಗೆ ಕಪ್ಪು ಬಟ್ಟೆಗಳನ್ನು ಧರಿಸುವುದು ಅಶುಭಕರವೆಂದು ಪರಿಗಣಿಸಲಾಗಿದೆ.

ಮೇಷ, ಕರ್ಕಾಟಕ, ಮತ್ತು ಕನ್ಯಾ ರಾಶಿಗಳಿಗೆ ಈ ಎಚ್ಚರಿಕೆ ಅನ್ವಯಿಸುತ್ತದೆ. ಮೇಷ ರಾಶಿಯವರಿಗೆ ಕಪ್ಪು ಬಟ್ಟೆ ಧರಿಸುವುದರಿಂದ ಸಂಕಲ್ಪಗಳು ಹಿನ್ನಡೆ ಅನುಭವಿಸಬಹುದು. ಕರ್ಕಾಟಕ ರಾಶಿಯವರಿಗೆ, ಚಂದ್ರನ ಪ್ರಭಾವದಿಂದ ಕಪ್ಪು ಬಣ್ಣವು ಮಾನಸಿಕ ಶಾಂತಿಗೆ ಭಂಗ ತರಬಹುದು. ಕನ್ಯಾ ರಾಶಿಯವರಿಗೆ ಕಪ್ಪು ವಸ್ತ್ರಗಳು ಮಾನಸಿಕವಾಗಿ ಫಲಿತಾಂಶಗಳನ್ನು ಕಡಿಮೆ ಮಾಡಬಹುದು, ಅಶಾಂತಿ ಮತ್ತು ವ್ಯಾಪಾರದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು ಎಂದು ನಂಬಲಾಗಿದೆ. ಇವೆಲ್ಲವೂ ನಂಬಿಕೆಯ ಆಧಾರದ ಮೇಲೆ ನೀಡಲಾದ ಸಲಹೆಗಳಾಗಿವೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

Horoscope Today 26 January: ಇಂದು ಈ ರಾಶಿಯವರಿಗೆ ಹಿತಶತ್ರುಗಳ ಕಾಟ!

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 26 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು 77ನೇ ಗಣರಾಜ್ಯೋತ್ಸವ ಹಾಗೂ ಭೀಷ್ಮಾಷ್ಟಮಿ, ಅಪ್ಪಯ್ಯ ದೀಕ್ಷಿತರ ಮತ್ತು ಸಂಗೊಳ್ಳಿ ರಾಯಣ್ಣನ ಪುಣ್ಯದಿನವಾಗಿದೆ. ಈ ವಿಶೇಷ ದಿನದಂದು ರವಿ ಮಕರ ರಾಶಿಯಲ್ಲಿ ಮತ್ತು ಚಂದ್ರ ಅಶ್ವಿನಿ ನಕ್ಷತ್ರದೊಂದಿಗೆ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ.

ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರಿಗೆ ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಸಂಬಂಧಗಳು ಮತ್ತು ಇತರೆ ಪ್ರಮುಖ ವಿಷಯಗಳ ಕುರಿತು ವಿವರವಾದ ಭವಿಷ್ಯವನ್ನು ನೀಡಿದ್ದಾರೆ. ಪ್ರತಿ ರಾಶಿಯವರು ಎದುರಿಸಬಹುದಾದ ಸವಾಲುಗಳು ಮತ್ತು ಪಡೆಯಬಹುದಾದ ಅವಕಾಶಗಳನ್ನು ವಿವರಿಸಲಾಗಿದೆ. ಅಲ್ಲದೆ, ಪ್ರತಿಯೊಂದು ರಾಶಿಯವರಿಗೆ ಅದೃಷ್ಟದ ಸಂಖ್ಯೆ, ಶುಭ ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳನ್ನು ಸಹ ಸೂಚಿಸಿದ್ದಾರೆ. ಈ ಮೂಲಕ ಈ ವಿಶೇಷ ದಿನವನ್ನು ಹೇಗೆ ಉತ್ತಮಗೊಳಿಸಿಕೊಳ್ಳಬೇಕೆಂಬುದಕ್ಕೆ ಮಾರ್ಗದರ್ಶನ ನೀಡಿದ್ದಾರೆ.

 

 

 

Source link

ಸಿಎಂ ಸಿದ್ದರಾಮಯ್ಯ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿಗೆ ಕಲ್ಲೆಸೆತ – Kannada News | Stone Pelting Incident Targeting CM Siddaramaiah’s Economic Advisor Basavaraj Rayareddi in Koppal

ಕೊಪ್ಪಳ, ಜನವರಿ 26: ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಭಾನುವಾರ ನಡೆದ ಜನಸಂಪರ್ಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರತ್ತ ಕಲ್ಲೆಸೆಯಲಾಗಿದೆ. ಗ್ರಾಮದ ಅನ್ನದಾನೇಶ್ವರ ಮಠದ ಆವರಣದಲ್ಲಿ ಜನಗಳ ಸಮಸ್ಯೆ ಆಲಿಸಲು ಶಾಸಕರು ಜನಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಬಸವರಾಜ್ ರಾಯರೆಡ್ಡಿ ಭಾಷಣ ಮಾಡುತ್ತಿದ್ದಾಗ ಅವರ ಮುಂದೆಯೇ ಒಂದು ಕಲ್ಲು ಬಿದ್ದಿದೆ.

ಈ ಅನಿರೀಕ್ಷಿತ ಘಟನೆಯಿಂದಾಗಿ ಶಾಸಕ ಬಸವರಾಜ್ ರಾಯರೆಡ್ಡಿ ಕೆಲಕಾಲ ಗಾಬರಿಗೊಂಡರು. ಅಲ್ಲಿದ್ದ ಜನರೂ ಕೂಡಾ ಆತಂಕಗೊಂಡರು. ತಕ್ಷಣದ ಪರಿಶೀಲನೆಯ ನಂತರ, ಕಲ್ಲೆಸೆದ ವ್ಯಕ್ತಿ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದೆ. ಅದೃಷ್ಟವಶಾತ್ ಶಾಸಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಈ ಘಟನೆಯಿಂದಾಗಿ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜನಸಂಪರ್ಕ ಕಾರ್ಯಕ್ರಮ ಸಸೂತ್ರವಾಗಿ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link