All posts by nagaraj11081993

ಕನ್ನಡ ಬಾವುಟಕ್ಕೆ ಅವಮಾನ ಮಾಡಿದ ತಮಿಳುನಾಡಿನಲ್ಲೇ ನಮ್ಮ ಧ್ವಜ ಹಾರಿಸಿದ ಸುದೀಪ್ – Kannada News | Kichcha Sudeep Hoists Kannada Flag in TN: A Proud Response to Insult

ನಟ ಕಿಚ್ಚ ಸುದೀಪ್ (Sudeep) ಅವರು ನಮ್ಮ ನೆಲ, ಜಲ, ಭಾಷೆ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ನಮ್ಮ ನಾಡಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಅವಮಾನ ಆದರೂ ಅದನ್ನು ಸಹಿಸೋದಿಲ್ಲ. ಕನ್ನಡವನ್ನು ‘ಕನ್ನಡ್’ ಎಂದು ಪರಭಾಷಿಗರು ಹೇಳಿದಾಗ ಅದನ್ನು ತಿದ್ದಿದ್ದರು. ಈಗ ಕನ್ನಡ ಬಾವುಟಕ್ಕೆ ಅವಮಾನ ಆದ ಜಾಗದಲ್ಲೇ ನಮ್ಮ ಬಾವುಟ ಹಾರಿಸಿದ್ದಾರೆ.

ಶಬರಿಮಲೆಗೆ ತೆರಳುವ ಮಾರ್ಗದಲ್ಲಿ ತಮಿಳುನಾಡಿನ ಈರೋಡ್ ಬಳಿ ಕರ್ನಾಟಕದಿಂದ ತೆರಳೋ ಮಾಲಾಧಾರಿಗೆಳಿಗೆ ಸಮಸ್ಯೆ ಮಾಡಲಾಗಿತ್ತು. ಕರ್ನಾಟಕದ ಬಾವುಟ ಹೊಂದಿರುವ ವಾಹನಗಳನ್ನು ಅಡ್ಡಗಟ್ಟಲಾಗಿತ್ತು. ವಾಹನದ ಮೇಲಿನ ಬಾವುಟಗಳನ್ನು ತೆಗೆಸಲಾಗಿದೆ. ಈ ರೀತಿಯ ಘಟನೆ ಪದೇ ಪದೇ ನಡೆಯುತ್ತಿದೆ. ಇದನ್ನು ಅನೇಕರು ಖಂಡಿಸಿದ್ದರು. ತಮಿಳುನಾಡಿನಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಆಗಿದೆ ಎಂಬ ಆರೋಪ ಕೇಳಿ ಬಂತು.

ಈ ಘಟನೆ ನಡೆದ ಕೆಲವೇ ವಾರದಲ್ಲಿ ಸುದೀಪ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅವಮಾನ ಆದ ಜಾಗದಲ್ಲೇ ಕನ್ನಡದ ಬಾವುಟ ಹಾರಿಸಿದ್ದಾರೆ. ಹೌದು, ಜನವರಿ 25ರಂದು ಕರ್ನಾಟಕ ಬುಲ್ಡೋಜರ್ಸ್ vs ಭೋಜ್​​ಪುರಿ ದಬಾಂಗ್ ಮ್ಯಾಚ್ ನಡೆದಿದೆ. ಈ ಪಂದ್ಯ ನಡೆದಿದ್ದು ತಮಿಳುನಾಡಿನ ಕೊಯಿಮತ್ತೂರಿನಲ್ಲಿ. ಪಂದ್ಯ ಮುಗಿದ ಬಳಿಕ ಸುದೀಪ್ ಬಾವುಟ ಹಾರಿಸಿದ್ದಾರೆ.

ಇದನ್ನೂ ಓದಿ: ರಾಕೆಟ್ ವೇಗ; ಸಿಸಿಎಲ್​​ನಲ್ಲಿ ಅದ್ಭುತ ಸಿಕ್ಸ್ ಹೊಡೆದ ಕಿಚ್ಚ ಸುದೀಪ್

ಕರ್ನಾಟಕ ಬುಲ್ಡೋಜರ್ಸ್​​ಗೆ ಜನವರಿ 25ರಂದು ನಡೆದಿದ್ದು ಮೂರನೇ ಪಂದ್ಯ. ಈ ಮೊದಲು ಎರಡೂ ಪಂದ್ಯಗಳನ್ನು ಆಡಿ ಗೆದ್ದಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ 20 ಓವರ್​​ನಲ್ಲಿ 202 ರನ್ ಕಲೆ ಹಾಕಿತು. ಈ ಬೃಹತ್ ಮೊತ್ತ ಬೆನ್ನು ಹತ್ತಿದ ಬುಲ್ಡೋಜರ್ಸ್ ತಂಡ ಉತ್ತಮ ಆರಂಭವನ್ನೇ ಕಂಡಿತು. ಆದರೆ, ನಂತರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. ಕೊನೆಯ ಓವರ್​​ನಲ್ಲಿ 26 ರನ್​ ಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. 184 ರನ್​​ಗೆ ದಬಾಂಗ್ಸ್ ಆಲ್​ ಔಟ್ ಆಯಿತು. ಈ ಮೂಲಕ ಬುಲ್ಡೋಜರ್ಸ್ ಗೆದ್ದು, ಅಂಕಪಟ್ಟಿಯಲ್ಲಿ ಟಾಪ್ ಸ್ಥಾನ ಗಳಿಸಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇವಲ ೧೯ ಎಸೆತಗಳಲ್ಲಿ ‘ಪವರ್’ಫುಲ್ ದಾಖಲೆ ಬರೆದ ಟೀಮ್ ಇಂಡಿಯಾ – Kannada News | Record Breaking team fifty for India

ಟೀಮ್ ಇಂಡಿಯಾ ಪವರ್​ಪ್ಲೇನಲ್ಲೇ ಪವರ್​ಫುಲ್ ದಾಖಲೆ ಬರೆದಿದೆ. ಅದು ಸಹ ಕೇವಲ 19 ಎಸೆತಗಳಲ್ಲಿ. ಈ 19 ಎಸೆತಗಳಲ್ಲಿ ಭಾರತೀಯ ಬ್ಯಾಟರ್​ಗಳು ಅರ್ಧಶತಕ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಗುವಾಹಟಿಯಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು.

Source link

ಪದ್ಮಶ್ರೀ ಅಂಕೇಗೌಡರ ಗ್ರಂಥಾಲಯದಲ್ಲಿ ಎಷ್ಟು ಪುಸ್ತಕಗಳಿವೆ ಗೊತ್ತಾ? ಸರ್ಕಾರಕ್ಕೆ ಅವರ ಮನವಿಯೇನು? ಇಲ್ಲಿದೆ ನೋಡಿ – Kannada News | Padma Shri Awardee Ankegowda’s Library Houses Over 20 Lakh Books in Mandya, See what his demand to govt

ಮಂಡ್ಯ, ಜನವರಿ 26: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಅಂಕೇಗೌಡರು 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ, ತಮ್ಮದೇ ಆದ ‘ಪುಸ್ತಕಾ ಮನೆ’ ಎಂಬ ಬೃಹತ್ ಗ್ರಂಥಾಲಯವನ್ನು ನಿರ್ಮಿಸಿರುವುದು ಅವರು ಈ ಗೌರವಕ್ಕೆ ಭಾಜನರಾಗಲು ಕಾರಣವಾಗಿದೆ. ನೂರು ವರ್ಷಗಳಿಗೂ ಹಳೆಯದಾದ ಷೇಕ್ಸ್‌ಪಿಯರ್ ಕೃತಿಗಳು ಸೇರಿದಂತೆ ಅನೇಕ ಅಮೂಲ್ಯ ಗ್ರಂಥಗಳನ್ನು ಅವರ ಮನೆಯಲ್ಲಿ ಸಂಗ್ರಹಿಸಿಡಲಾಗಿದೆ.

ಅಂಕೇಗೌಡರು ತಮ್ಮ ಗ್ರಂಥಾಲಯವನ್ನು ಕೇವಲ ಪುಸ್ತಕ ಸಂಗ್ರಹವಾಗಿ ನೋಡದೆ, ಮುಂದಿನ ಪೀಳಿಗೆಗೆ ಪೂರ್ವಿಕರ ಇತಿಹಾಸ ಮತ್ತು ಜ್ಞಾನವನ್ನು ತಲುಪಿಸುವ ಸಾಧನವೆಂದು ಪರಿಗಣಿಸಿದ್ದಾರೆ. ಇಲ್ಲಿ ಭಗವದ್ಗೀತೆ ಕುರಿತು 2,500, ಮಹಾತ್ಮ ಗಾಂಧಿ ಕುರಿತು 2,500 ಹಾಗೂ ರಾಮಾಯಣದ 3,000ಕ್ಕೂ ಹೆಚ್ಚು ವಿಭಿನ್ನ ಆವೃತ್ತಿಗಳಿವೆ. ಈ ಗ್ರಂಥಾಲಯ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಒಂದು ದೊಡ್ಡ ಸಂಪನ್ಮೂಲ ಕೇಂದ್ರವಾಗಿದೆ. ಪದ್ಮಶ್ರೀ ಪ್ರಶಸ್ತಿ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಮತ್ತು ಹಣವೇ ಮುಖ್ಯವಲ್ಲ ಎಂಬುದನ್ನು ಸಮಾಜಕ್ಕೆ ಸಾರಿದೆ ಎಂದು ಅಂಕೇಗೌಡರು ಹೇಳುತ್ತಾರೆ. ಸರ್ಕಾರಕ್ಕೆ ನಿಮ್ಮ ಬೇಡಿಕೆಯೇನು ಎಂದು ಕೇಳಲಾದ ಪ್ರಶ್ನೆಗೆ ಅಂಕೇಗೌಡರು ಹೇಳಿದ್ದೇನು? ವಿಡಿಯೋದಲ್ಲಿದೆ ನೋಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Live: ಮಾಣೆಕ್​ ಶಾ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ: ಸಿಎಂ, ರಾಜ್ಯಪಾಲರ ಭಾಷಣ ಲೈವ್ – Kannada News | Republic Day 2026 Celebrations at Manekshaw Parade Ground Bangalore: CM and Governor Speeches Live

ಬೆಂಗಳೂರು, ಜನವರಿ 26: ಗಣರಾಜ್ಯೋತ್ಸವ ಸಂದರ್ಭ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ ಬೆಂಗಳೂರಿನ ಮಾಣೆಕ್​ ಶಾ ಪರೇಡ್​​ ಮೈದಾನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ತೆರೆದ ಜೀಪ್​​ನಲ್ಲಿ ರಾಜ್ಯಪಾಲರಿಗೆ ಗೌರವ ವಂದನೆ ಸಲ್ಲಿಕೆ ಬಳಿಕ ಗವರ್ನರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಂದ ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದು, ನೇರ ಪ್ರಸಾರ ಇಲ್ಲಿದೆ.

Source link

ಟಿ20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾಗೆ ಸ್ಫೋಟಕ ದಾಂಡಿಗ ಎಂಟ್ರಿ – Kannada News | Tilak Verma is fit now for the T20 World Cup 2026

ಟಿ20 ವಿಶ್ವಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್. ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್.

Source link

ರಾಕೆಟ್ ವೇಗ; ಸಿಸಿಎಲ್​​ನಲ್ಲಿ ಅದ್ಭುತ ಸಿಕ್ಸ್ ಹೊಡೆದ ಕಿಚ್ಚ ಸುದೀಪ್ – Kannada News | Kichcha Sudeep Super Six in Karnataka Bulldozers vs Bhojpuri Dabangg CCL 2026 Match

ಕಿಚ್ಚ ಸುದೀಪ್ ಅವರು ಸದ್ಯ ಸಿಸಿಎಲ್​​ನಲ್ಲಿ ಬ್ಯುಸಿ ಇದ್ದಾರೆ. ಜನವರಿ 25ರಂದು ನಡೆದ ಪಂದ್ಯದಲ್ಲಿ ಅವರ ಕರ್ನಾಟಕ ಬುಲ್ಡೋಜರ್ಸ್ ತಂಡ ಅದ್ಭುತವಾಗಿ ಆಡಿ ಬೋಜ್​​ಪುರಿ ದಬಾಂಗ್ ತಂಡವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಸುದೀಪ್ ಅವರು ಸೂಪರ್ ಆಗಿರೋ ಸಿಕ್ಸ್ ಬಾರಿಸಿದ್ದಾರೆ. ಸುದೀಪ್ ಬಾರಿಸಿದ ಚೆಂಡು ಶರವೇಗದಲ್ಲಿ ಬೌಂಡರಿ ಲೈನ್ ದಾಟಿತು. ಆ ಸಂದರ್ಭದ ವಿಡಿಯೋ ಮೇಲಿದೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

4 ಸೀಸನ್​ಗಳಲ್ಲಿ 3 ಬಾರಿ ‘ಸನ್​ರೈಸರ್ಸ್’​ ಚಾಂಪಿಯನ್ಸ್ – Kannada News | SA20 Final 2026: Sunrisers Eastern Cape seal third title in four years

ಸೌತ್ ಆಫ್ರಿಕಾ ಟಿ20 ಲೀಗ್​ನ 4ನೇ ಸೀಸನ್​ನಲ್ಲೂ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕೇಪ್​ ಟೌನ್​ನ ನ್ಯೂಲ್ಯಾಂಡ್ಸ್​ ಸ್ಟೇಡಿಯಂನಲ್ಲಿ ನಡೆದ ಈ ಬಾರಿಯ ಫೈನಲ್​ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಹಾಗೂ ಸನ್​ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡದ ನಾಯಕ ಟ್ರಿಸ್ಟನ್ ಸ್ಟಬ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿದ್ದರು.

ಈ ಗುರಿಯನ್ನು 19.2 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್  ತಂಡವು 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರನೇ ಬಾರಿ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಇದಕ್ಕೂ ಮುನ್ನ 2023 ಮತ್ತು 2024 ರಲ್ಲಿ ಸನ್​ರೈಸರ್ಸ್ ಈಸ್ಟರ್ಸ್​ ಕೇಪ್ ತಂಡ ಚಾಂಪಿಯನ್ ಪಟ್ಟಕ್ಕೇರಿದ್ದರು. ಇನ್ನು 2025 ರಲ್ಲಿ ರನ್ನರ್​ ಅಪ್ ಪ್ರಶಸ್ತಿ ಪಡೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Source link

ತುಮಕೂರು: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು; ಸ್ಥಳದಲ್ಲೇ ಮೂವರ ದುರ್ಮರಣ! – Kannada News | Tumakuru Fatal Accident: 3 Dead in NH 48 Car Lorry Crash Near Nelahal

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು; ಸ್ಥಳದಲ್ಲೇ ಮೂವರ ದುರ್ಮರಣ!

ತುಮಕೂರು, ಜನವರಿ 26: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ತುಮಕೂರು (Tumakuru) ತಾಲೂಕಿನ ನೆಲಹಾಳ್ ಸಮೀಪ ಇಂದು ಬೆಳಗ್ಗೆ ನಡೆದಿದೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತರೆಲ್ಲರೂ ಬೆಂಗಳೂರು ಮೂಲದ ನಿವಾಸಿಗಳು ಎಂದು ಹೇಳಲಾಗಿದೆ.

ಮೃತರು ಬೆಂಗಳೂರಿನ ನಿವಾಸಿಗಳು

ಅಪಘಾತದಲ್ಲಿ ಮಾರುತಿ ಎರ್ಟಿಗಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಇನ್ನಿಬ್ಬರು ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರೆಲ್ಲರೂ ಬೆಂಗಳೂರು ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ.

ಪ್ರವಾಸಕ್ಕೆ ತೆರಳಿ ವಾಪಸ್ ಬರುವಾಗ ದುರಂತ

ಮೃತರು ಗೋಕರ್ಣ, ಮುರುಡೇಶ್ವರ ಹಾಗೂ ಉಡುಪಿ ಕಡೆ ಪ್ರವಾಸಕ್ಕೆ ತೆರಳಿದ್ದು, ಪ್ರವಾಸ ಮುಗಿಸಿ ಇಂದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆವಿ ಹಾಗೂ ಕೋರಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

Source link

Republic Day 2026 Parade Live: ದೆಹಲಿಯ ಕರ್ತವ್ಯಪಥದಿಂದ ಗಣರಾಜ್ಯೋತ್ಸವ ಸಂಭ್ರಮದ ನೇರ ಪ್ರಸಾರ – Kannada News | Republic Day 2026 Live Updates watch online 77th parade Prime Minister Narendra Modi, President Droupadi Murmu, Chief Guests Speech in Kannada

ನವದೆಹಲಿ, ಜನವರಿ 26: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 77ನೇ ಗಣರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕರ್ತವ್ಯ ಪಥದಲ್ಲಿ ಪರೇಡ್, ಪ್ರಧಾನಿ ಮೋದಿ ಭಾಷಣ ಸೇರಿ ಇತರ ಕಾರ್ಯಕ್ರಮಗಳು ಸಂಭ್ರಮದಿಂದ ಇಂದು ಜರಗುತ್ತಿವೆ. ಈ ಬಾರಿ ಪಥಸಂಚಲನದಲ್ಲಿ ಆಪರೇಷನ್‌ ಸಿಂಧೂರ್‌ ಅನ್ನು ವಾಯುಪಡೆ ಪ್ರದರ್ಶಿಸಲಿದೆ. ‘ಆಪರೇಷನ್ ಸಿಂಧೂರ್’ನಲ್ಲಿ ಭಾಗವಹಿಸಿದ್ದ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡಿ ವಾಯುಪಡೆಯ ಶಕ್ತಿ ತೋರಿಸಲಿವೆ. ಯೂರೋಪಿಯನ್‌ ಕೌನ್ಸಿಲ್ ಅಧ್ಯ ಆಂಟೋನಿಯಾ ಕೋಸ್ಟಾ ಹಾಗೂ ಯೂರೋಪಿಯನ್‌ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್‌ ಡೆರ್‌ ಅತಿಥಿಗಳಾಗಿ ಈ ಎಲ್ಲ ಸಂಭ್ರಮವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರ ಇಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Republic Day 2026: 77ನೇ ಗಣರಾಜ್ಯೋತ್ಸವಕ್ಕೆ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ – Kannada News | PM Modi, President Draupati murmu and State CM’s Wishes on Republic Day 2026

77ನೇ ಗಣರಾಜ್ಯೋತ್ಸವಕ್ಕೆ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ

ಬೆಂಗಳೂರು, ಜನವರಿ 26: ಇಂದು ದೇಶಾದ್ಯಂತ 77ನೇ ಗಣರಾಜ್ಯೋತ್ಸವವನ್ನು (Republic Day 2026) ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಪ್ರಧಾನಿ ಮೋದಿ (Narendra Modi) ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಜನತೆಗೆ ಶುಭ ಕೋರಿದ್ದಾರೆ. ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಭವ್ಯ ಗಣರಾಜ್ಯೋತ್ಸವ ಪರೇಡ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧ್ಯಕ್ಷತೆ ವಹಿಸಿದ್ದಾರೆ. ಈ ವರ್ಷದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಹಾಗೂ ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಭಾಗವಹಿಸಿರುವುದು ವಿಶೇಷ.

ಶುಭ ಕೋರಿದ ಪ್ರಧಾನಿ ಮೋದಿ

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ X ಖಾತೆಯ ಮೂಲಕ ದೇಶದ ಜನತೆಗೆ ಹೃತ್ಪೂರ್ವಕವಾಗಿ ಶುಭಾಶಯ ಕೋರಿದ್ದಾರೆ. ಭಾರತದ ಗೌರವ, ಹೆಮ್ಮೆ ಮತ್ತು ವೈಭವದ ಸಂಕೇತವಾದ ಗಣರಾಜ್ಯೋತ್ಸವವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಶಕ್ತಿ ಹಾಗೂ ಉತ್ಸಾಹವನ್ನು ತುಂಬಲಿ ಎಂದು ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿರುವ ಪ್ರಧಾನಿ, ನಮ್ಮ ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸೋಣ ಎಂದು ಸಂದೇಶ ನೀಡಿದ್ದಾರೆ.

ಗಣರಾಜ್ಯೋತ್ಸವಕ್ಕೆ ಶುಭಕೋರಿದ ರಾಷ್ಟ್ರಪತಿ

ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ತಮ್ಮ X ಖಾತೆಯ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿ, ಎಲ್ಲರ ಜೀವನವು ಸಂತೋಷ, ಶಾಂತಿ, ಭದ್ರತೆ ಮತ್ತು ಸಾಮರಸ್ಯದಿಂದ ತುಂಬಿರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರವನ್ನುದ್ದೇಶಿಸಿ ಪ್ರೇರಣಾದಾಯಕ ಭಾಷಣ ಮಾಡಿದ್ದರು. ಸಂವಿಧಾನದ ಅನನ್ಯತೆ, ಸಾಮೂಹಿಕ ಮನೋಭಾವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬ ನಾಗರಿಕರು ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತು ಭಾರತವನ್ನು ಅಭಿವೃದ್ಧಿಗೊಳಿಸಬೇಕೆಂದು ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link