All posts by nagaraj11081993

ನಟಿ ರುಕ್ಮಿಣಿ ವಸಂತ್ ಎಐ ವಿಡಿಯೋ ಪ್ರಕರಣ: ಬೆಂಗಳೂರಲ್ಲಿ ಮೂವರು ಆರೋಪಿಗಳ ಬಂಧನ – Kannada News | Actress Rukmini Vasanth AI Deepfake case 3 Arrested by Bengaluru Cyber Police

ಕನ್ನಡ ಚಿತ್ರರಂಗದ ಖ್ಯಾತ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ಫೋಟೋ ಮತ್ತು ವಿಡಿಯೋಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಮೂವರು ಆರೋಪಿಗಳನ್ನು ಸೈಬರ್ ಕಮಾಂಡ್ ಪೊಲೀಸರು (Bengaluru Cyber Police) ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರು ನಿವಾಸಿಗಳಾದ ಚಂದ್ರಕಾಂತ್ (33), ರಂಜಿತ್ (25) ಮತ್ತು ಬಾಗಲಕೋಟೆ ಮೂಲದ ರವಿಕುಮಾರ್ (24) ಎಂದು ಗುರುತಿಸಲಾಗಿದೆ.

ಕೃತ್ಯಕ್ಕೆ ಬಳಸಲಾಗಿದ್ದ ಮೂರು ಮೊಬೈಲ್ ಫೋನ್‌ಗಳನ್ನು ಬಂಧಿತ ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನ ಎಲ್ಲ ಕ್ಷೇತ್ರದಲ್ಲೂ ಬಳಕೆ ಆಗುತ್ತಿದೆ. ಆದರೆ ಕೆಲವರು ಈ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂಥವರಿಗೆ ಪಾಠ ಕಲಿಸಲು ರುಕ್ಮಿಣಿ ವಸಂತ್ ಅವರು ಕಾನೂನಿನ ಹಾದಿ ಹಿಡಿದಿದ್ದಾರೆ.

ಎಐ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ನಟಿಯ ಮುಖವನ್ನು ಬೇರೆ ವಿಡಿಯೋಗಳಿಗೆ ಎಡಿಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದ ಈ ಮೂವರನ್ನು ಸದ್ಯ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಜಾಲದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಅಥವಾ ಇವರು ಇಂತಹ ಇನ್ಯಾವ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಡೀಪ್‌ಫೇಕ್ ವಿಡಿಯೋಗಳನ್ನು ಸೃಷ್ಟಿಸುವ ಜಾಲ ಸಕ್ರಿಯವಾಗಿದೆ. ಈ ಹಿಂದೆ ರಶ್ಮಿಕಾ ಮಂದಣ್ಣ ಅವರಿಗೂ ಇಂಥ ಸಮಸ್ಯೆ ಎದುರಾಗಿತ್ತು. ರುಕ್ಮಿಣಿ ವಸಂತ್ ಅವರ ನಕಲಿ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕ್ರಮ ತೆಗೆದುಕೊಂಡಿದ್ದು ಆರೋಪಿಗಳಿಗೆ ನಡುಕ ಶುರುವಾಗಿದೆ.

ಇದನ್ನೂ ಓದಿ: ರುಕ್ಮಿಣಿ ವಸಂತ್ ಡೀಪ್‌ಫೇಕ್ ವಿಡಿಯೋ ಹಂಚಿಕೊಂಡವರಿಗೆ ನಡುಕ; 29 ಅಕೌಂಟ್‌ಗಳ ವಿರುದ್ಧ ಎಫ್‌ಐಆರ್

ಎಐ ತಂತ್ರಜ್ಞಾನದ ಮೂಲಕ ಸಾರ್ವಜನಿಕವಾಗಿ ರುಕ್ಮಿಣಿ ವಸಂತ್ ಅವರ ಮಾನಹಾನಿ ಮಾಡಲು ಯತ್ನಿಸಿದ ಈ ಕೃತ್ಯದ ಬೆನ್ನತ್ತಿದ ಸೈಬರ್ ಕಮಾಂಡ್ ಪೊಲೀಸರು, ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಆರೋಪಿಗಳಿರುವ ಸ್ಥಳವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಕಲಿ ವಿಡಿಯೋ ಹಂಚಿಕೊಳ್ಳುವವರಿಗೆ ಈಗ ಭಯ ಹುಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಇರಾನ್ ಕತೆ ಮುಗಿಯಿತು, ಅವರಿಗೆ ಒಂದು ಪೈಸೆಯೂ ಸಿಗುವುದಿಲ್ಲ’; ಕಿಡಿಕಾರಿದ ಟ್ರಂಪ್ – Kannada News | Iran is Finished They Get No Money Donald Trump On Tehran Deal

ವಾಷಿಂಗ್ಟನ್, ಜೂನ್ 19: “ಯುದ್ಧದಿಂದಾಗಿ ಇರಾನ್ ಸಂಪೂರ್ಣವಾಗಿ ಧ್ವಂಸಗೊಂಡಿದೆ. ನಾವು ಹತಾಶೆಯಿಂದ ಮಾತುಕತೆ ನಡೆಸುತ್ತಿಲ್ಲ. ಅವರೇ ಅಸಹಾಯಕರಾಗಿ ಒಪ್ಪಂದಕ್ಕೆ ಬಂದಿದ್ದಾರೆ. ಮುಂದಿನ 60 ದಿನಗಳವರೆಗೆ ಅವರಿಗೆ ಒಂದು ರೂಪಾಯಿ ಹಣವೂ ಸಿಗುವುದಿಲ್ಲ. ಇರಾನ್ ಕತೆ ಮುಗಿಯಿತು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಸಾಮಾಜಿಕ ಮಾಧ್ಯಮವಾದ ‘ಟ್ರುತ್ ಸೋಶಿಯಲ್’ ನಲ್ಲಿ ಗುಡುಗಿದ್ದಾರೆ.

“ಕಳೆದ ಕೆಲವು ತಿಂಗಳುಗಳ ಯುದ್ಧವು ಇರಾನ್ ಅನ್ನು ಅಕ್ಷರಶಃ ಧ್ವಂಸಗೊಳಿಸಿದೆ. ಅವರ ಬಳಿ ಈಗ ಯಾವುದೇ ವಾಯುಪಡೆ ಇಲ್ಲ, ನೌಕಾಪಡೆ ಇಲ್ಲ, ವಾಯು ರಕ್ಷಣಾ ವ್ಯವಸ್ಥೆ ಅಥವಾ ರಾಡಾರ್‌ಗಳೂ ಉಳಿದಿಲ್ಲ. ಅವರ ಇಡೀ ಸೇನಾ ನೆಟ್‌ವರ್ಕ್ ನೆಲಕಚ್ಚಿದೆ. ಒಪ್ಪಂದದ ಭಾಗವಾಗಿ ಮುಂಬರುವ 60 ದಿನಗಳ ಕಾಲ ನಾವು ಮಾತುಕತೆಯ ಪ್ರಕ್ರಿಯೆಯನ್ನು ನಡೆಸಲಿದ್ದೇವೆ. ಆದರೆ ಈ 60 ದಿನಗಳಲ್ಲಿ ಇರಾನ್‌ಗೆ ಯಾವುದೇ ಹಣ ಸಿಗುವುದಿಲ್ಲ, ಅವರಿಗೆ ಬಿಡಿಗಾಸನ್ನೂ ಕೂಡ ಕೊಡುವುದಿಲ್ಲ!” ಎಂದು ಟ್ರಂಪ್ ಗುಡುಗಿದ್ದಾರೆ.

ಇದನ್ನೂ ಓದಿ: ಅಮೆರಿಕದ ಹತಾಶೆಯೇ ಈ ಒಪ್ಪಂದಕ್ಕೆ ಕಾರಣ ಎಂದ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ

“ಆದರೂ ಡೆಮೋಕ್ರಾಟ್‌ಗಳು ಇರಾನ್ 4 ತಿಂಗಳ ಹಿಂದೆ ಇದ್ದ ಸ್ಥಿತಿಗಿಂತ ಈಗ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳುತ್ತಾರೆ. ಅವರು ಇದರಿಂದ ತಪ್ಪಿಸಿಕೊಳ್ಳುವುದನ್ನು ನೀವು ಊಹಿಸಬಲ್ಲಿರಾ? ಕೆಲವು ಜನರು ಎಷ್ಟು ಮೂರ್ಖರಾಗಬಹುದು?” ಹೋರಾಟದ ನಂತರ ವಾಷಿಂಗ್ಟನ್ ಅಲ್ಲ, ಟೆಹ್ರಾನ್ ಮಾತುಕತೆಗೆ ಪ್ರಯತ್ನಿಸಿದೆ ಎಂದು ಟ್ರಂಪ್ ಹೇಳಿದರು.

ಅಮೆರಿಕದ ಅಧಿಕಾರಿಗಳ ಪ್ರಕಾರ, ಇರಾನ್ ತೀವ್ರ ಆರ್ಥಿಕ ಹಾಗೂ ಮಿಲಿಟರಿ ಒತ್ತಡದ ನಡುವೆ ಈ ಮಾತುಕತೆಗೆ ಒಪ್ಪಿಕೊಂಡಿದೆ. ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಭಾರಿ ಕ್ಷಿಪಣಿ ದಾಳಿಗಳ ನಂತರ ಇರಾನ್‌ನ ಪ್ರಮುಖ ಆಯುಧ ಕಾರ್ಖಾನೆಗಳು, ಡ್ರೋನ್ ಉತ್ಪಾದನಾ ಕೇಂದ್ರಗಳು ಮತ್ತು ನೌಕಾ ಹಡಗುಗಳು ಸಮುದ್ರದ ಪಾಲಾಗಿದ್ದವು. ಈ ಮಿಲಿಟರಿ ನಷ್ಟದಿಂದಾಗಿ ಇರಾನ್ ಮಾತುಕತೆಯ ಮೇಜಿಗೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು ಎಂದು ಟ್ರಂಪ್ ಆಡಳಿತ ಪ್ರತಿಪಾದಿಸಿದೆ.

ಇದನ್ನೂ ಓದಿ: ಇಸ್ರೇಲ್ – ಹೆಜ್ಬೊಲ್ಲಾ ಕದನ ವಿರಾಮ ಒಪ್ಪಂದ ನಾಳೆಯಿಂದ ಜಾರಿ; ಅಮೆರಿಕ ಘೋಷಣೆ

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಿಳಿಸಿರುವಂತೆ, ಇತ್ತೀಚೆಗೆ ಎರಡೂ ದೇಶಗಳ ನಡುವೆ 14 ಅಂಶಗಳ ತಾತ್ಕಾಲಿಕ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಅನ್ವಯ ಉಭಯ ಕಡೆಯವರು ತಕ್ಷಣವೇ ಯುದ್ಧ ನಿಲ್ಲಿಸಬೇಕು. ಇರಾನ್ ತನ್ನ ಬೆಂಬಲಿತ ಹೆಜ್ಬೊಲ್ಲಾ ಉಗ್ರಗಾಮಿ ಸಂಘಟನೆಯನ್ನು ನಿಯಂತ್ರಿಸಬೇಕು. ಇರಾನ್ ತನ್ನ ಬಳಿ ಇರುವ ಯುರೇನಿಯಂ ದಾಸ್ತಾನನ್ನು ವಿಶ್ವಸಂಸ್ಥೆಯ ಕಾವಲು ಪಡೆಯ ಸಮ್ಮುಖದಲ್ಲಿ ನಿಷ್ಕ್ರಿಯಗೊಳಿಸಲು ಒಪ್ಪಿಕೊಂಡಿದೆ.

ಇದಕ್ಕೆ ಪ್ರತಿಯಾಗಿ ಇರಾನ್ ಮೇಲಿದ್ದ ಕೆಲವು ಆರ್ಥಿಕ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು, ಅದು ಕಚ್ಚಾ ತೈಲವನ್ನು ಮುಕ್ತವಾಗಿ ಮಾರಾಟ ಮಾಡಲು ಮತ್ತು ಹಾರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತವಾಗಿಡಲು ಒಪ್ಪಿಗೆ ನೀಡಲಾಗಿದೆ. ಆದರೆ, ಟ್ರಂಪ್ ಅವರ ಈ ಇತ್ತೀಚಿನ ಆಕ್ರಮಣಕಾರಿ ಹೇಳಿಕೆಗಳು, ಇರಾನ್ ಸಂಪೂರ್ಣವಾಗಿ ಶರಣಾಗುವವರೆಗೂ ಅಮೆರಿಕ ಯಾವುದೇ ದೊಡ್ಡ ಮಟ್ಟದ ಹಣಕಾಸಿನ ನೆರವು ಅಥವಾ ಫ್ರೀಜ್ ಆಗಿರುವ ಬ್ಯಾಂಕ್ ಖಾತೆಗಳ ಹಣವನ್ನು ಬಿಡುಗಡೆ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 9:40 pm, Fri, 19 June 26

Source link

ದಿನಕ್ಕೆ ಒಂದು ಮುಷ್ಟಿ ಕಡಲೆಕಾಯಿ ನಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆಯೇ? – Kannada News | Can Eating Peanuts Daily Reduce Heart Disease Risk?

ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಗಳ ಬದಲಾವಣೆಯಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತಿದೆ. ಆದರೆ ಪ್ರತಿದಿನ ಒಂದು ಮುಷ್ಟಿ ಕಡಲೆಕಾಯಿ (Peanuts) ಸೇವಿಸುವುದರಿಂದ ಹೃದಯದ ಆರೋಗ್ಯವನ್ನು (Heart Health) ಕಾಪಾಡಿಕೊಳ್ಳಲು ಸಹಾಯವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಡಲೆಕಾಯಿಯಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್, ನಾರಿನಾಂಶ, ಮೆಗ್ನೀಷಿಯಂ ಹಾಗೂ ಪೊಟ್ಯಾಸಿಯಂ ಸಮೃದ್ಧವಾಗಿದ್ದು ನಮ್ಮ ಆರೋಗ್ಯಕ್ಕೆ ಬಹಳ ಸಹಾಯಕಾರಿ. ಹಾಗಾದರೆ ಇದರಿಂದ ಯಾವ ರೀತಿ ಅನುಕೂಲವಿದೆ, ಹೇಗೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಧಮನಿಗಳಲ್ಲಿ ಕೊಬ್ಬು ಜಮೆಯಾಗುವುದನ್ನು ತಡೆಯಬಹುದು

ಹೃದಯಕ್ಕೆ ರಕ್ತ ಪೂರೈಸುವ ಧಮನಿಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಜಮೆಯಾಗುವುದನ್ನು ಪ್ಲಾಕ್ ಎಂದು ಕರೆಯಲಾಗುತ್ತದೆ. ಇದು ರಕ್ತನಾಳಗಳನ್ನು ಕಿರಿದಾಗಿಸಿ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಆದರೆ ಕಡಲೆಕಾಯಿಯಲ್ಲಿರುವ ಮೊನೋ ಅನ್‌ಸ್ಯಾಚುರೇಟೆಡ್ ಮತ್ತು ಪಾಲಿ ಅನ್‌ಸ್ಯಾಚುರೇಟೆಡ್ ಕೊಬ್ಬುಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಕಡಲೆಕಾಯಿಯಲ್ಲಿರುವ ಮೆಗ್ನೀಷಿಯಂ ಮತ್ತು ಪೊಟ್ಯಾಸಿಯಂ ರಕ್ತನಾಳಗಳನ್ನು ಸಡಿಲಗೊಳಿಸಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತವೆ. ಜೊತೆಗೆ ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಇದನ್ನೂ ಓದಿ: ಪ್ರತಿದಿನ ಕೇವಲ 2 ಲವಂಗ ತಿಂದು ನೋಡಿ! ನಿಮಗೆ ಈ ಆರೋಗ್ಯ ಸಮಸ್ಯೆಯೇ ಬರಲ್ಲ

ತೂಕ ನಿಯಂತ್ರಣಕ್ಕೂ ಸಹಕಾರಿ

ಕಡಲೆಕಾಯಿಯಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿರುವುದರಿಂದ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಇದರಿಂದ ಅತಿಯಾಗಿ ತಿನ್ನುವ ಅಭ್ಯಾಸ ಕಡಿಮೆಯಾಗಿ ತೂಕ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ತೂಕ ನಿಯಂತ್ರಣದಲ್ಲಿದ್ದರೆ ಹೃದಯದ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ.

ಹೇಗೆ ಸೇವಿಸಬೇಕು?

ಪ್ರತಿದಿನ ಸುಮಾರು 25– 30 ಗ್ರಾಂ ಕಡಲೆಕಾಯಿ ಸೇವಿಸುವುದು ಸಾಕು. ಎಣ್ಣೆಯಲ್ಲಿ ಕರಿದ ಅಥವಾ ಹೆಚ್ಚು ಉಪ್ಪು ಹಾಕಿದ ಕಡಲೆಕಾಯಿಗಿಂತ ನೆನೆಸಿದ ಅಥವಾ ಡ್ರೈ ರೋಸ್ಟ್ ಮಾಡಿದ ಕಡಲೆಕಾಯಿ ಹೆಚ್ಚು ಆರೋಗ್ಯಕರ. ಮಧುಮೇಹ ಅಥವಾ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಇರುವವರು ತಮ್ಮ ದೈನಂದಿನ ಆಹಾರದಲ್ಲಿ ಕಡಲೆಕಾಯಿಯನ್ನು ಸೇರಿಸಿಕೊಳ್ಳಬಹುದು.

ಸೂಚನೆ: ಕಡಲೆಕಾಯಿ ಆರೋಗ್ಯಕರ ಆಹಾರವಾದರೂ, ಇದು ಯಾವುದೇ ಕಾಯಿಲೆಗೆ ನೇರ ಔಷಧವಲ್ಲ. ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮದ ಜೊತೆಗೆ ಸೇವಿಸಿದಾಗ ಹೆಚ್ಚಿನ ಪ್ರಯೋಜನ ದೊರೆಯುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಕರಾವಳಿ-ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ? – Kannada News | Mangaluru Cabinet Meeting: Separate Policy for Coastal and Hill Tourism Development on the Cards

ಸಿಎಂ ಡಿಕೆ ಶಿವಕುಮಾರ್​ ಸಭೆImage Credit source: x.com/DKShivakumar

ಬೆಂಗಳೂರು, ಜೂನ್​​ 19: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ (development of coastal tourism) ಕುರಿತಂತೆ ಇಂದು ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಹಲವು ಗಣ್ಯರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಶೀಘ್ರದಲ್ಲೇ ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಸಲು ಚಿಂತನೆ ನಡೆದಿದ್ದು, ಈ ವೇಳೆ ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಾಧ್ಯತೆ ಇದೆ.

ಮುಖ್ಯಾಂಶಗಳು

  • ಶೀಘ್ರದಲ್ಲೇ ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಸಲು ಚಿಂತನೆ
  • ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ?
  • ನಟ ರಿಷಬ್ ಶೆಟ್ಟಿಯನ್ನೇ ರಾಯಭಾರಿಯಾಗಿ ನೇಮಕ ಮಾಡುವ ಸಾಧ್ಯತೆ

ಮೊದಲ ಬಾರಿಗೆ ಕರಾವಳಿ ನೀತಿಗೆ ಸರ್ಕಾರ ಚಿಂತನೆ

ಇದೇ ಮೊದಲ ಬಾರಿಗೆ ಕರಾವಳಿ ನೀತಿಗೆ ಸರ್ಕಾರ ಚಿಂತನೆ ನಡೆಸಿದೆ. ಹಾಗೆಯೇ ಕರಾವಳಿ ಆಪರೇಷನ್ ಮತ್ತು ಬ್ಯುಸಿನೆಸ್ ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಚಿಂತನೆ ನಡೆದಿದೆ. ಈಗಾಗಲೇ ಗೋವಾ, ಕರಾವಳಿ ರಿಲ್ಯಾಕ್ಸೇಶನ್ ಇದೆ. ಆದರೆ ಕರ್ನಾಟಕ ಕರಾವಳಿಯಲ್ಲಿ ರಿಲ್ಯಾಕ್ಷನ್ ಟೈಟ್ ಇದೆ. ಹೀಗಾಗಿ ಕೇಂದ್ರಕ್ಕೆ ಸಿಎಂ‌ ಡಿಕೆ ಶಿವಕುಮಾರ್​ ನಿಯೋಗದಿಂದ ಮನವಿಗೆ ಚಿಂತನೆ ನಡೆದಿದೆ. ಕರಾವಳಿ ಭಾಗದಲ್ಲಿ ಶೂಟಿಂಗ್ ಪ್ರಚಾರ ಮಾಡುವುದಕ್ಕೂ ತೀರ್ಮಾನಿಸಲಾಗಿದೆ.

ವಾಸೋದ್ಯಮವನ್ನು ಮತ್ತಷ್ಟು ಸಮೃದ್ಧಗೊಳಿಸುವುದೇ ನಮ್ಮ ಗುರಿ: ಡಿಕೆ ಶಿವಕುಮಾರ್

ಸಭೆಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ಕರ್ನಾಟಕವನ್ನು ಜಾಗತಿಕ ಮಟ್ಟದ ಪ್ರಮುಖ ಕರಾವಳಿ ಪ್ರವಾಸಿ ತಾಣವಾಗಿ ರೂಪಿಸುವ ಉದ್ದೇಶದೊಂದಿಗೆ, ವಿಶ್ವದರ್ಜೆಯ ಸುಸ್ಥಿರ ಪ್ರವಾಸೋದ್ಯಮ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಕರಾವಳಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಹಾಗೂ ನೈಸರ್ಗಿಕ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಪ್ರವಾಸೋದ್ಯಮವನ್ನು ಮತ್ತಷ್ಟು ಸಮೃದ್ಧಗೊಳಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದರು.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ನಿಮ್ಮ ಮನೆಗೆ ಬರಲಿದ್ದಾರೆ ಚೆಕ್ಕಿಂಗ್ ಆಫೀರ್ಸ್

ಕರಾವಳಿಯಲ್ಲಿ ಕ್ಯಾಬಿನೆಟ್ ನಡೆಸುತ್ತೇವೆ. ಅಷ್ಟರೊಳಗೆ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸಿದ್ಧವಿರಬೇಕು. ಸಿಆರ್‌ಝಡ್‌ ಮತ್ತು ಅರಣ್ಯ ಇಲಾಖೆಯಿಂದ ಆಗುತ್ತಿರುವ ತಾಂತ್ರಿಕ, ತಕರಾರುಗಳ ಬಗ್ಗೆ 15 ರಿಂದ 20 ದಿನಗಳಲ್ಲಿ ಸಮಸ್ಯೆಗಳು ಮತ್ತು ಪರಿಹಾರ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.

ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್​ ಖಡಕ್​ ಸೂಚನೆ

ಹೂಡಿಕೆದಾರರಿಗೆ ಸುಗಮವಾದ ಮತ್ತು ಸರಳವಾದ ಮಾರ್ಗಗಳನ್ನು ಸೃಜಿಸಬೇಕು. ಉದ್ಯಮಿಗಳಿಗೆ ಆಗುತ್ತಿರುವ ಇಲಾಖಾ ಕಿರಿಕಿರಿಗಳಿಗೆ ಪರಿಹಾರ ಕಂಡುಹಿಡಿಯಬೇಕು. ಕರಾವಳಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡಿ, ಕರಾವಳಿಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡುವಂತೆ ಸಿಎಂ ಸೂಚಿಸಿದ್ದಾರೆ.

ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ತೊಂದರೆ ಆಗದಂತೆ ನಾನಾ ಅನುಮತಿಗಳನ್ನು ಪಡೆಯಲು ಏಕ ಗವಾಕ್ಷಿ (ಸಿಂಗಲ್‌ ವಿಂಡೋ) ವ್ಯವಸ್ಥೆ ಜಾರಿಗೆ ಮತ್ತು ಹೆಲಿ ಟೂರಿಸಂ ಅಭಿವೃದ್ಧಿಗೆ ಒತ್ತು ನೀಡಲು ಸಿಎಂಗೆ ಉದ್ಯಮಿಗಳು ಮನವಿ ಮಾಡಿದರು. ಈ ವೇಳೆ ಕರ್ನಾಟಕ ಪ್ರವಾಸೋದ್ಯಮ ನೀತಿಯಡಿಯಲ್ಲಿ 718.63 ಕೋಟಿ ರೂ ಅಂದಾಜು ಹೂಡಿಕೆಯ 45 ಯೋಜನೆಗಳನ್ನು ಅನುಮೋದಿಸಲಾಗಿರುವ ಬಗ್ಗೆ ಅಧಿಕಾರಿಗಳು ಸಿಎಂ ಗಮನಕ್ಕೆ ತಂದರು.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ: ಅಧಿಕಾರಿಗಳಿಗೆ ಸಿಎಂ ಕೊಟ್ಟ ಸೂಚನೆಗಳೇನು?

ಇನ್ನು ಕರಾವಳಿ ಪ್ರವಾಸೋದ್ಯಮ ವಲಯಗಳು ಮತ್ತು ಬೃಹತ್‌ ಪ್ರವಾಸೋದ್ಯಮ ಯೋಜನೆಗಳು, ಕರಾವಳಿ ಮೇಳಗಳು, ಉತ್ಸವಗಳು, ಕರಾವಳಿ ಸಂಸ್ಕೃತಿ, ಆಚರಣೆ, ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮತ್ತು ಪ್ರಚಾರ ಮಾಡಲು ಸರ್ಕಾರದ ಈ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಮತ್ತು ಬಂಡವಾಳ ಆಕರ್ಷಿಸಲು ಬಡ್ಡಿ ಸಹಾಯಧನ ಮತ್ತು ರಿಯಾಯ್ತಿಗಳ ಮೂಲಕ ಪ್ರೋತ್ಸಾಹಗಳನ್ನು ನೀಡುವ ಬಗ್ಗೆ ಸಿಎಂ ಒತ್ತು ನೀಡಿದ್ದಾರೆ.

ರಾಜ್ಯ ಸರ್ಕಾರಕ್ಕೆ ನಟ ರಿಷಬ್ ಶೆಟ್ಟಿ ಮನವಿ

ಇನ್ನು ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ರಾಯಭಾರಿಯಾಗಿ ನಟ ರಿಷಬ್ ಶೆಟ್ಟಿಯನ್ನ ನೇಮಕ ಮಾಡುವ ಸಾಧ್ಯತೆ ಇದೆ. ಸಭೆಯಲ್ಲಿ ಭಾಗಿಯಾಗಿದ್ದ ನಟ ರಿಷಬ್ ಶೆಟ್ಟಿ ಕಲೆಗೆ ಪ್ರಾಶಸ್ತ್ಯ ಹೆಚ್ಚಿಸಬೇಕು. ಕರಾವಳಿ ಜನಪದ ಕಲೆ, ಸಂಗೀತಕ್ಕೆ ಪ್ರೋತ್ಸಾಹಿಸಬೇಕು ಮತ್ತು ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇಸ್ರೇಲ್ – ಹೆಜ್ಬೊಲ್ಲಾ ಕದನ ವಿರಾಮ ಒಪ್ಪಂದ ನಾಳೆಯಿಂದ ಜಾರಿ; ಅಮೆರಿಕ ಘೋಷಣೆ – Kannada News | Israel and Hezbollah Agreed To Ceasefire Starting June 20 US Official announces

ನವದೆಹಲಿ, ಜೂನ್ 19: ಕಳೆದ ಹಲವು ತಿಂಗಳುಗಳಿಂದ ಇಸ್ರೇಲ್ (Israel) ಸೇನೆ ಮತ್ತು ಲೆಬನಾನ್ (Lebanon) ಮೂಲದ ಹೆಜ್ಬೊಲ್ಲಾ ಸಂಘಟನೆಯ ನಡುವೆ ಭಾರಿ ಪ್ರಮಾಣದ ಕ್ಷಿಪಣಿ ದಾಳಿಗಳು ಹಾಗೂ ವೈಮಾನಿಕ ದಾಳಿಗಳು ನಡೆಯುತ್ತಿದ್ದವು. ಈ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಮತ್ತು ಇತರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆದಾರರು ನಿರಂತರ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸುತ್ತಿದ್ದರು. ಇದೀಗ ಕೊನೆಗೂ ಉಭಯ ದೇಶಗಳು ಶಾಂತಿಗೆ ಸಮ್ಮತಿಸಿವೆ. ಈ ಒಪ್ಪಂದದ ಅನ್ವಯ ನಾಳೆ ಮುಂಜಾನೆಯಿಂದಲೇ ಎರಡೂ ದೇಶದವರು ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ.

ದಕ್ಷಿಣ ಲೆಬನಾನ್‌ನ ಗಡಿ ಪ್ರದೇಶಗಳಿಂದ ಹೆಜ್ಬೊಲ್ಲಾ ತನ್ನ ಶಸ್ತ್ರಾಸ್ತ್ರ ಮತ್ತು ಹೋರಾಟಗಾರರನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಇಸ್ರೇಲ್ ಸೇನೆಯೂ ಸಹ ತನ್ನ ಸೈನಿಕರನ್ನು ಗಡಿಯಿಂದ ಹಿಂದೆ ಕರೆಸಿಕೊಳ್ಳಬೇಕು ಎಂಬ ನಿಯಮಗಳನ್ನು ವಿಧಿಸಲಾಗಿದೆ ಎನ್ನಲಾಗಿದೆ. ಕದನ ವಿರಾಮದ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡಲು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ (UNIFIL) ಮತ್ತು ಲೆಬನಾನ್ ರಾಷ್ಟ್ರೀಯ ಸೇನೆಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತದೆ.

ಇದನ್ನೂ ಓದಿ: ಇಸ್ರೇಲ್ ಕೈಲಾಗದಿದ್ದರೆ ಸಿರಿಯಾ ನಿಭಾಯಿಸಲಿ; ಹೆಜ್ಬುಲ್ಲಾ ನಿಗ್ರಹಕ್ಕೆ ಟ್ರಂಪ್ ಐಡಿಯಾ

ಇಂದು ಮುಂಜಾನೆ ಇಸ್ರೇಲಿ ಪಡೆಗಳು ಮತ್ತು ಹೆಜ್ಬೊಲ್ಲಾ ನಡುವೆ ಮತ್ತೆ ಹೊಸದಾಗಿ ಪರಸ್ಪರ ದಾಳಿಗಳು ನಡೆದ ಹೊರತಾಗಿಯೂ ಈ ಒಪ್ಪಂದ ಏರ್ಪಟ್ಟಿದ್ದು, ಇದು ಈ ಕದನ ವಿರಾಮದ ಸೂಕ್ಷ್ಮತೆಯನ್ನು ಎತ್ತಿ ತೋರಿಸುತ್ತದೆ. ಲೆಬನಾನ್‌ನಲ್ಲಿ ಮುಂದುವರಿದಿರುವ ಘರ್ಷಣೆಗಳು ಪ್ರಾದೇಶಿಕವಾಗಿ ಪ್ರಸ್ತುತ ನಡೆಯುತ್ತಿರುವ ಇತರ ವಿಶಾಲವಾದ ಮಾತುಕತೆಗಳಿಗೆ ಧಕ್ಕೆ ತರಬಹುದು ಎಂಬ ಆತಂಕಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಅಮೆರಿಕ, ಕತಾರ್ ಮತ್ತು ಇರಾನಿನ ಮಧ್ಯಸ್ಥಿಕೆದಾರರು ಕಳೆದ ಕೆಲವು ದಿನಗಳಿಂದ ತೀವ್ರವಾದ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದರು.

ಇದನ್ನೂ ಓದಿ: ವಾಸ್ತವವನ್ನು ಅರ್ಥಮಾಡಿಕೊಳ್ಳಿ: ಇರಾನ್ ಒಪ್ಪಂದ ಟೀಕಿಸಿದ ಇಸ್ರೇಲ್​ಗೆ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ ಎಚ್ಚರಿಕೆ

ಇಸ್ರೇಲ್-ಹೆಜ್ಬೊಲ್ಲಾ ಯುದ್ಧದ ಕಾರಣದಿಂದಾಗಿ ಲೆಬನಾನ್ ಮತ್ತು ಉತ್ತರ ಇಸ್ರೇಲ್‌ನಲ್ಲಿ ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆದು ನಿರಾಶ್ರಿತರಾಗಿದ್ದರು. ಅಮೆರಿಕ ಸರ್ಕಾರದ ಈ ಪ್ರಕಟಣೆಯು ಇಡೀ ಜಗತ್ತು ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ನೋಡಲಾಗುತ್ತಿದೆ. ವಿಶ್ವದ ಹಲವು ರಾಷ್ಟ್ರಗಳ ನಾಯಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 9:09 pm, Fri, 19 June 26

Source link

IND vs AFG: ಭಾರತ- ಅಫ್ಘನ್ ನಡುವಿನ ಕೊನೆಯ ಏಕದಿನ ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ? – Kannada News | India vs Afghanistan 3rd ODI: Clean Sweep Bid, Live Stream and Match Details

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ (India vs Afghanistan) ಈಗಾಗಲೇ 2 ಪಂದ್ಯಗಳನ್ನು ಗೆದ್ದು ಸರಣಿಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈಗ ಟೀಂ ಇಂಡಿಯಾ ಮೂರನೇ ಮತ್ತು ಅಂತಿಮ ಪಂದ್ಯಕ್ಕೆ ಸಿದ್ಧವಾಗಿದೆ. ಈ ಪಂದ್ಯವನ್ನು ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸುವ ಅವಕಾಶ ಟೀಂ ಇಂಡಿಯಾಕ್ಕಿದೆ. ಅಲ್ಲದೆ, ಅಫ್ಘಾನಿಸ್ತಾನವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಭಾರತಕ್ಕಿದೆ. ಮತ್ತೊಂದೆಡೆ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಅಫ್ಘಾನಿಸ್ತಾನ, ಭಾರತದ ಪ್ರವಾಸವನ್ನು ಅಂತ್ಯಗೊಳಿಸಲು ಪ್ರಯತ್ನಿಸಲಿದೆ. ಆದ್ದರಿಂದ, ಸರಣಿಯ ಫಲಿತಾಂಶದ ನಂತರವೂ, ಅಭಿಮಾನಿಗಳು ಅಂತಿಮ ಪಂದ್ಯದಲ್ಲಿ ಹೈವೋಲ್ಟೇಜ್ ಕದನವನ್ನು ನಿರೀಕ್ಷಿಸಬಹುದು.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಏಕದಿನ ಪಂದ್ಯ ಯಾವಾಗ ನಡೆಯಲಿದೆ?

ಜೂನ್ 20 ರ ಶನಿವಾರದಂದು ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಏಕದಿನ ಪಂದ್ಯ ನಡೆಯಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಏಕದಿನ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಏಕದಿನ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಏಕದಿನ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಏಕದಿನ ಪಂದ್ಯ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದ್ದು, ಟಾಸ್ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಏಕದಿನ ಪಂದ್ಯವನ್ನು ಟಿವಿಯಲ್ಲಿ ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಏಕದಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್‌ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.

IND vs AFG: ನಾಯಕನಾಗಿ ಚೊಚ್ಚಲ ಏಕದಿನ ಸರಣಿ ಗೆದ್ದ ಶುಭ್​ಮನ್ ಗಿಲ್

ಉಭಯ ತಂಡಗಳು

ಏಕದಿನ ಸರಣಿಗೆ ಟೀಂ ಇಂಡಿಯಾ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ, ಹರ್ಷಿತ್ ರಾಣಾ.

ಏಕದಿನ ಸರಣಿಗೆ ಅಫ್ಘಾನಿಸ್ತಾನ ತಂಡ: ಹಸ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಸೇದಿಕುಲ್ಲಾ ಅಟಲ್, ದರ್ವಿಶ್ ರಸೂಲಿ, ರಹಮತ್ ಷಾ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜೈ, ರಶೀದ್ ಖಾನ್, ನಂಗ್ಯಾಲ್ ಖರೋಟೈ, ಎಎಮ್ ಗಜನ್ಫರ್, ಜಿಯಾ ಯು ರೆಹಮಾನ್ ಶರೀಫಿ, ಫರೀದ್ ಮಲಿಕ್, ಬಿಲಾಲ್ ಸಾಮಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಡಾಯ ಸಂಸದರ ವಿರುದ್ಧ ಕಾನೂನು ಸಮರಕ್ಕಿಳಿದ ಟಿಎಂಸಿ; 20 ರೆಬೆಲ್​ಗಳ ಅನರ್ಹತೆಗೆ ಸ್ಪೀಕರ್​ಗೆ ಮನವಿ – Kannada News | Abhishek Banerjee meets Speaker Om Birla demands disqualification of 20 rebel TMC MPs

ನವದೆಹಲಿ, ಜೂನ್ 19: ಪಶ್ಚಿಮ ಬಂಗಾಳದ ಸಾರ್ವತ್ರಿಕ ಚುನಾವಣೆಗಳ ಬೆನ್ನಲ್ಲೇ ಟಿಎಂಸಿ (TMC) ಪಕ್ಷದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎದ್ದಿದೆ. ಪಕ್ಷದ ನಿಲುವಿಗೆ ವಿರುದ್ಧವಾಗಿ ಬಂಡಾಯ ಎದ್ದು, ಬೇರೆ ಪಕ್ಷದೊಂದಿಗೆ ವಿಲೀನ ಪ್ರಕ್ರಿಯೆಗೆ ಮುಂದಾಗಿರುವ 20 ಸಂಸದರ ವಿರುದ್ಧ ಟಿಎಂಸಿ ಹೈಕಮಾಂಡ್ ಕಠಿಣ ಕ್ರಮಕ್ಕೆ ಮುಂದಾಗಿದೆ. ನವದೆಹಲಿಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಆ ಎಲ್ಲಾ 20 ಬಂಡಾಯ ಸಂಸದರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಲಿಖಿತ ಮನವಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಟಿಎಂಸಿ ಪಕ್ಷದ ಸುಮಾರು 20 ಸಂಸದರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಪ್ರತ್ಯೇಕ ಬಣ ರಚಿಸಿಕೊಂಡಿದ್ದರು. ಈ ಬಣವು ಮತ್ತೊಂದು ಪ್ರಮುಖ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ಮಾತುಕತೆ ನಡೆಸಿತ್ತು. ಸಂಸತ್ತಿನಲ್ಲಿ ಪಕ್ಷಾಂತರ ನಿರೋಧಕ ಕಾಯ್ದೆಯಿಂದ ಬಚಾವಾಗಲು 2/3ರಷ್ಟು ಬಹುಮತದ ಅಗತ್ಯವಿದ್ದು, ಈ ಸಂಸದರು ಆ ತಾಂತ್ರಿಕತೆಯನ್ನು ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಟಿಎಂಸಿ ಉನ್ನತ ಮಟ್ಟದ ನಿಯೋಗವು ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಯಿತು. ಪಕ್ಷದ 20 ಬಂಡಾಯ ಸಂಸದರು ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಪಕ್ಷದೊಂದಿಗೆ ವಿಲೀನಗೊಂಡಿದ್ದೇವೆ ಎಂದು ಮಾಡಿರುವ ದಾವೆಯನ್ನು ನಿಯೋಗವು ಕಟ್ಟುನಿಟ್ಟಾಗಿ ವಿರೋಧಿಸಿತು. ಈ ನಿಯೋಗದಲ್ಲಿ ಟಿಎಂಸಿ ಹಿರಿಯ ನಾಯಕರಾದ ಕಲ್ಯಾಣ್ ಬ್ಯಾನರ್ಜಿ, ಡೆರೆಕ್ ಒಬ್ರಿಯಾನ್, ಮಹುವಾ ಮೊಯಿತ್ರಾ ಮತ್ತು ಸೌಗತಾ ರಾಯ್ ಇದ್ದರು.

ಇದನ್ನೂ ಓದಿ: ಎನ್‌ಸಿಪಿಐಗೆ ಹೊಸ ಅಧ್ಯಕ್ಷರ ನೇಮಕ: ಟಿಎಂಸಿ ಬಂಡಾಯ ಸಂಸದರ ಅರ್ಜಿ ಸ್ವೀಕರಿಸುತ್ತಾರಾ ಸ್ಪೀಕರ್ ಓಂ ಬಿರ್ಲಾ?

ಲೋಕಸಭೆಯಲ್ಲಿ ಟಿಎಂಸಿ ಪಕ್ಷದ ಸಂಸದೀಯ ನಾಯಕರೂ ಆಗಿರುವ ಅಭಿಷೇಕ್ ಬ್ಯಾನರ್ಜಿ ದೆಹಲಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಸಂವಿಧಾನದ 10ನೇ ಶೆಡ್ಯೂಲ್ (ಪಕ್ಷಾಂತರ ನಿರೋಧಕ ಕಾಯ್ದೆ) ಅಡಿಯಲ್ಲಿ ಈ 20 ಸಂಸದರು ಮೂಲ ಪಕ್ಷದ ವಿಪ್​ಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಆದ್ದರಿಂದ ಇವರ ವಿರುದ್ಧ ತಕ್ಷಣವೇ ಕ್ರಮ ಕೈಗೊಂಡು ಲೋಕಸಭೆಯಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಎನ್‌ಸಿಪಿಐ ಜೊತೆಗಿನ ವಿಲೀನದ ನಂತರ ತಮಗೆ ಪ್ರತ್ಯೇಕ ಗುಂಪಾಗಿ ಮಾನ್ಯತೆ ನೀಡಬೇಕೆಂದು ಕೋರಿ 20 ಬಂಡಾಯ ಸಂಸದರು ಸಲ್ಲಿಸಿದ್ದ ಮನವಿಯ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ, ಲೋಕಸಭೆಯ ಟಿಎಂಸಿ ನಾಯಕರಾಗಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಪಕ್ಷದ ನಿಲುವನ್ನು ಮಂಡಿಸಲು ಸ್ಪೀಕರ್ ಓಂ ಬಿರ್ಲಾ ಆಹ್ವಾನ ನೀಡಿದ್ದರು. ಕಳೆದ ವಾರವಷ್ಟೇ ಬ್ಯಾನರ್ಜಿ ಅವರು ಸ್ಪೀಕರ್ ಅವರಿಗೆ ಪತ್ರ ಬರೆದು, ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಪ್ರತ್ಯೇಕ ಬಣ ಎಂದು ಹೇಳಿಕೊಳ್ಳುವ ಯಾವುದೇ ಗುಂಪಿಗೆ ಯಾವುದೇ ರೀತಿಯ ಮಾನ್ಯತೆ, ಸ್ಥಾನಮಾನ ಅಥವಾ ಸಂಸದೀಯ ಸೌಲಭ್ಯಗಳನ್ನು ನೀಡದಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ: ‘ಎನ್‌ಸಿಪಿಐ’ ಜೊತೆ 20 ಟಿಎಂಸಿ ಬಂಡಾಯ ಸಂಸದರ ವಿಲೀನ, ಸಂಸತ್ತಿನಲ್ಲಿ ಹೊಸ ಬಣದ ಉದಯ

ಬಂಡಾಯ ಸಂಸದರ ವಿರುದ್ಧ ಕೇವಲ ರಾಜಕೀಯವಾಗಿ ಮಾತ್ರವಲ್ಲದೆ, ಕಾನೂನಾತ್ಮಕವಾಗಿಯೂ ಹೋರಾಡಲು ಮಮತಾ ಬ್ಯಾನರ್ಜಿ ಬ್ಲೂಪ್ರಿಂಟ್ ಸಿದ್ಧಪಡಿಸಿದ್ದಾರೆ. ಒಂದು ವೇಳೆ ಲೋಕಸಭಾ ಸ್ಪೀಕರ್ ಕಡೆಯಿಂದ ಕ್ರಮ ಕೈಗೊಳ್ಳಲು ವಿಳಂಬವಾದರೆ, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೂಡ ಟಿಎಂಸಿ ಸಿದ್ಧತೆ ನಡೆಸಿದೆ. ಸದ್ಯಕ್ಕೆ ಓಂ ಬಿರ್ಲಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಎಲ್ಲರ ಗಮನ ನೆಟ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ನಿಮ್ಮ ಮನೆಗೆ ಬರಲಿದ್ದಾರೆ ಚೆಕ್ಕಿಂಗ್ ಆಫೀರ್ಸ್ – Kannada News | Guarantee Schemes Revision: DK Shivakumar Governmnet to Plan Door To door survey for document verification

ಬೆಂಗಳೂರು, (ಜೂನ್ 19): ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಿಗೆ (guarantee schemes) ಆಪರೇಷನ್ ಮಾಡಲು ಸಿಎಂ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನರ್ಹರಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಿ ಅರ್ಹರಿಗೆ ಮುಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದಕ್ಕಾಗಿ ನಾನಾ ನಿಯಮಗಳನ್ನ ಜಾರಿಗೆ ತರುವ ಚಿಂತನೆಗಳು ನಡೆದಿವೆ. ಇಂದು (ಜೂನ್ 19) ವಿಧಾನಸೌಧದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹಿರಿಯ ಅಧಿಕಾರಿಗಳು ಹಾಗೂ ಸಚಿವರ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿರುವ ಒಬ್ಬನೇ ಒಬ್ಬ ಅರ್ಹ ಫಲಾನುಭವಿಗೂ ತೊಂದರೆಯಾಗಬಾರದು. ಆದರೆ, ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನರ್ಹರಿಗೆ ಮಾತ್ರ ತಕ್ಷಣವೇ ಬ್ರೇಕ್ ಹಾಕಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ

ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಯೋಜನೆಗೆ ಮರು ಪರಿಶೀಲನೆ ಅರ್ಜಿ ಹಾಕಬೇಕು. ಮರು ಪರಿಶೀಲನೆ ಅರ್ಜಿ ಸಲ್ಲಿಕೆ ಬಳಿಕ ಮನೆ ಮನೆಗೆ ತೆರಳಿ ಅಧಿಕಾರಿಗಳಿಂದ ಸರ್ವೆ ಮಾಡಿಸುವ ಚಿಂತನೆ ನಡೆಸಿದ್ದು, ಒಟ್ಟು 10 ಅಂಶಗಳ ಮೂಲಕ ಮಾಹಿತಿ ಪಡೆಯಲು ಸರ್ಕಾರ ಮುಂದಾಗಿದೆ. ಯಜಮಾನಿ ಹೆಸರು, ಪಡಿತರ ಚೀಟಿ ಸಂಖ್ಯೆ, ಮಂಜೂರಾತಿ ಪತ್ರ ಸಂಖ್ಯೆ, ಬ್ಯಾಂಕ್ ಖಾತೆ, ಮನೆ ವಿಳಾಸ, ಮತದಾರರ ಗುರುತಿನ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ, ಪತಿಯ ಮಾಹಿತಿ, ಯಾವ ಕ್ಯಾಟಗರಿ, ಮೊಬೈಲ್ ಸಂಖ್ಯೆ ಹೀಗೆ 10 ಅಂಶಗಳ ಮೂಲಕ ಮಾಹಿತಿ ಪಡೆಯಲು ಮುಂದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ತಂದೆಯ ಸ್ಮರಿಸಿದ ವಿನೋದ್ ಪ್ರಭಾಕರ್ – Kannada News | Vinod Prabhakar remembers his father Tiger Prabhakar in Balaramana Dinagalu movie press meet

ಬಹುನಿರೀಕ್ಷಿತ ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಂದೆ ಟೈಗರ್ ಪ್ರಭಾಕರ್ ಅವರನ್ನು ವಿನೋದ್ ನೆನಪಿಸಿಕೊಂಡರು. ‘ನಾನು ಇಲ್ಲಿ ನಿಂತಿದ್ದಕ್ಕೆ ನಮ್ಮ ತಂದೆ ಟೈಗರ್ ಪ್ರಭಾಕರ್ ಕಾರಣ. ಅವರು ಬಿಟ್ಟು ಹೋದ ಅಧ್ಯಾಯ ನಾನು. ಅವರು 52ನೇ ವರ್ಷಕ್ಕೆ ತೀರಿ ಹೋದರು. ಅವರ ಕನಸುಗಳು ಇನ್ನೂ ಬಹಳ ಇತ್ತು. ಕೆಲವು ಸಿನಿಮಾಗಳನ್ನು ನಮ್ಮ ತಂದೆಯವರು ಮಾಡಬೇಕಾಗಿತ್ತು. ಅವರ ಕನಸು ನನಗೆ ಗೊತ್ತಿತ್ತು. ಅದು ಬಲರಾಮನ ದಿನಗಳು ಕೂಡ ಆಗಿರಬಹುದು. ನಾವು ಯಾವುದೇ ಪ್ರಶಸ್ತಿ ತೆಗೆದುಕೊಂಡರೂ ನಮ್ಮ ತಂದೆಗೆ ಅರ್ಪಿಸುತ್ತೇನೆ’ ಎಂದು ಅವರು ಹೇಳಿದರು. ‘ಬಲರಾಮನ ದಿನಗಳು’ ಸಿನಿಮಾ ಜೂನ್ 26ರಂದು ಬಿಡುಗಡೆ ಆಗಲಿದೆ. ಕೆ.ಎಂ. ಚೈತನ್ಯ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2027: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯುವರಾಜ್ ಸಿಂಗ್ ಕೋಚ್?

Source link