All posts by nagaraj11081993

ರಾಹುಲ್ ಗಾಂಧಿಯನ್ನು ಪರಶುರಾಮನ ಅವತಾರದಲ್ಲಿ ಚಿತ್ರಿಸಿ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು! – Kannada News | Congress Workers Pour Milk On Rahul Gandhi Portrait Depicted As Lord Parashurama In Varanasi on his 56th Birthday

ನವದೆಹಲಿ, ಜೂನ್ 19: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 56ನೇ ಜನ್ಮದಿನದ ಪ್ರಯುಕ್ತ ವಾರಾಣಸಿಯ ಗಂಗಾ ನದಿಯ ಘಾಟ್‌ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪೋಸ್ಟರ್ ಒಂದನ್ನು ಪ್ರದರ್ಶಿಸಿದ್ದಾರೆ. ಈ ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿ (Rahul Gandhi) ಅವರನ್ನು ಭಗವಾನ್ ಪರಶುರಾಮನ ರೂಪದಲ್ಲಿ ಬಿಂಬಿಸಲಾಗಿದ್ದು, ಗಂಗಾನದಿಯ ನೀರಿನಲ್ಲಿ ನಿಂತು ಆ ಪೋಸ್ಟರ್‌ಗೆ ಕ್ಷೀರಾಭಿಷೇಕ ಮಾಡುವ ಮೂಲಕ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲಾಗಿದೆ. ಈ ಘಟನೆ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ವಾರಾಣಸಿಯಲ್ಲಿ ನಡೆದ ಈ ಆಚರಣೆಯಲ್ಲಿ ವೇದ ಮಂತ್ರಗಳನ್ನು ಪಠಿಸುತ್ತಾ, ಕಾಂಗ್ರೆಸ್ ಕಾರ್ಯಕರ್ತರು ಗಂಗಾನದಿಯಲ್ಲಿ ನಿಂತು ರಾಹುಲ್ ಗಾಂಧಿ ಅವರ ಭಾವಚಿತ್ರಕ್ಕೆ ಹಾಲನ್ನು ಸುರಿದು ಮಂತ್ರಘೋಷಗಳೊಂದಿಗೆ ಶುಭ ಹಾರೈಸಿದ್ದಾರೆ. ಈ ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿ ಒಂದು ಕೈಯಲ್ಲಿ ಕೊಡಲಿಯನ್ನು ಮತ್ತು ಇನ್ನೊಂದು ಕೈಯಲ್ಲಿ ಭಾರತದ ಸಂವಿಧಾನವನ್ನು ಹಿಡಿದಿರುವುದನ್ನು ಚಿತ್ರಿಸಲಾಗಿತ್ತು.

(Video Source: PTI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾವೇರಿಯಲ್ಲಿ ಚಿನ್ನ ನಿಕ್ಷೇಪಗಳು ಪತ್ತೆ: ಬಂಗಾರದಂತ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು – Kannada News | Ganjur Gold Mining Project: Farmers Fear Land Acquisition and Environmental Impact

ಚಿನ್ನ ನಿಕ್ಷೇಪಗಳು ಪತ್ತೆImage Credit source: tv9 kannada

ಹಾವೇರಿ, ಜೂನ್​​ 19: ಹಾವೇರಿ (haveri) ಸಮೀಪದ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ (gold mining) ಶುರುವಾಗಲಿದೆ ಎಂಬ ವಿಚಾರ ಸದ್ಯ ಚರ್ಚೆಗೆ ಗ್ರಾಸವಾಗಿದೆ. 2015ರಲ್ಲಿ ನಡೆದ ಸಂಶೋಧನೆಯಲ್ಲಿ ಚಿನ್ನ ನಿಕ್ಷೇಪಗಳು ಇರುವುದು ಪತ್ತೆಯಾಗಿತ್ತು. ಹೀಗಾಗಿ ಇದೀಗ ಚಿನ್ನದ ಗಣಿಗಾರಿಕೆ ಪ್ರಾರಂಭಗಲಿದೆ ಎನ್ನಲಾಗುತ್ತಿದೆ. ಈ ಕುರಿತಾಗಿ ಅನ್ನದಾತರಿಗೆ ಆತಂಕ ಹೆಚ್ಚಿದ್ದು, ಭೂಮಿ ಕೊಟ್ಟು ಏನು ಮಾಡಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • 2015ರಲ್ಲಿ ನಡೆದಿದ್ದ ಸಂಶೋಧನೆಯಲ್ಲಿ ಚಿನ್ನ ನಿಕ್ಷೇಪಗಳು ಪತ್ತೆ
  • ಗಣಜೂರಿನಲ್ಲಿ ಜೋರಾದ ಚಿನ್ನದ ಗಣಿಗಾರಿಕೆ ಶುರುವಾಗುತ್ತೆ ಎಂಬ ಚರ್ಚೆ
  • ಅನ್ನದಾತರಿಗೆ ಹೆಚ್ಚಿದ ಆತಂಕ

2015ರಲ್ಲೇ ಚಿನ್ನ ನಿಕ್ಷೇಪಗಳು ಪತ್ತೆ

ಹಾವೇರಿ ತಾಲೂಕಿನ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ ‌ಪ್ರಾರಂಭವಾಗುತ್ತದೆ ಎಂಬ ಚರ್ಚೆ ಶುರುವಾಗಿದೆ. 2015ರಲ್ಲಿ ಸಂಶೋಧನಾ ಮಾಡಿ ಚಿನ್ನ ಇರುವುದು ಖಚಿತಪಡಿಸಲಾಗಿದೆ. ಚಿನ್ನದ ಗಣಿಗಾರಿಕೆಗೆ ಪೂರಕವಾದ ವಾತಾವರಣವಿದ್ದ ಗ್ರಾಮದ ಮೇಲೆ 2015ರಲ್ಲಿ ಡೆಕ್ಕನ್ ಗೋಲ್ಡ್ ಮೈನ್ಸ್ ಕಂಪನಿಯ ಕಣ್ಣುಬಿದ್ದಿತ್ತು. ಪ್ರಾಥಮಿಕ ಪರವಾನಗಿ ಮೂಲಕ ಸಂಶೋಧನೆ ಆರಂಭಿಸಿತ್ತು. ಡೆಕ್ಕನ್ ಎಕ್ಸ್‌ಪ್ಲೋರೇಶನ್ ಸರ್ವೀಸಸ್ ಹೆಸರಿನಲ್ಲಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆದು ಕಲ್ಲಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿತ್ತು. ಕಲ್ಲುಗಳಲ್ಲಿ ಯಥೇಚ್ಚವಾಗಿ ಚಿನ್ನದ ಅಂಶವಿರುವುದು ಸಾಬೀತಾಗಿತ್ತು.

ಇದನ್ನೂ ಓದಿ: ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ನಡೆಯಿತು ಶೋಧಕಾರ್ಯ

ಸಂಶೋಧನೆಗಾಗಿ ಕಂಪನಿಯು ಕೋಟ್ಯಂತರ ರೂ ಖರ್ಚು ಮಾಡಿತ್ತು. ರೈತರ ಜಮೀನು ಲೀಜ್ ಹಾಕಿಕೊಂಡು 7 ರಿಂದ 8 ವರ್ಷ ಸಂಶೋಧನೆ ಮಾಡಲಾಗಿತ್ತು. ಅಲ್ಲದೇ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದ್ದರು. ಈಗ ಮತ್ತೆ ಮಹಾರಾಷ್ಟ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗ್ರೀನ್ ಸಿಂಗಲ್ ಕೊಟ್ಟಿದೆ. ಹೀಗಾಗಿ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ ಶುರುವಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.

ಸದ್ಯದಲ್ಲೇ ಗಣಿಗಾರಿಕೆ ಪ್ರಕ್ರಿಯೆ ಆರಂಭ ಸಾಧ್ಯತೆ

ರಾಯಚೂರಿನ ಹಟ್ಟಿ ಹಾಗೂ ಕೆಜಿಎಫ್‌ ಗಣಿಗಿಂತಲೂ ಹೆಚ್ಚಿನ ಚಿನ್ನ ಗಣಜೂರಿನಲ್ಲಿದೆ ಎನ್ನಲಾಗುತ್ತಿದೆ. ಖಾತ್ರಿಯಾಗುತ್ತಿದ್ದಂತೆ, ಪೂರ್ಣ ಪ್ರಮಾಣದ ಗಣಿಗಾರಿಕೆಗೆ ಅರ್ಜಿ ಸಲ್ಲಿಸಿತ್ತು. ಕೆಲ ಕಾನೂನುಗಳಿಂದ ಅರ್ಜಿ ತಿರಸ್ಕಾರವಾಗಿತ್ತು. ಈಗ ಮಹಾರಾಷ್ಟ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶ, ಗಣಜೂರು ಗಣಿಗಾರಿಕೆ ಯೋಜನೆ ಆರಂಭಕ್ಕೆ ಪೂರಕವಾಗಿರುವ ಅಂಶ ಹೊಂದಿರುವ ಮಾಹಿತಿ ಲಭ್ಯವಾಗಿದೆ. ಸದ್ಯದಲ್ಲೇ ಗಣಿಗಾರಿಕೆ ಪ್ರಕ್ರಿಯೆ ಆರಂಭವಾಗುವ ಲಕ್ಷಣಗಳಿವೆ.

ಜಮೀನು ಕೊಟ್ಟು ಎಲ್ಲಿಗೆ ಹೋಗಬೇಕು: ರೈತರು ಆಕ್ರೋಶ

ಸುಮಾರು 400 ಎಕರೆ ಪ್ರದೇಶ ಗುರುತಿಸಲಾಗಿದೆ. 70ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಹೇರಳವಾಗಿ ಚಿನ್ನದ ನಿಕ್ಷೇಪ ಇದೆ ಎನ್ನಲಾಗಿದೆ. ಕಂಪನಿ ರೈತರೊಂದಿಗೆ ಸಭೆ ಮಾಡಬೇಕು. ನಮಗೆ ಇರುವುದು ಒಂದೆರೆಡು ಎಕರೆ ಜಮೀನು. ನಾವು ಜಮೀನು ಕೊಟ್ಟು ಎಲ್ಲಿಗೆ ಹೋಗಬೇಕು. ಹೀಗಾಗಿ ಮತ್ತೆ ರೈತರಿಗೆ ಕಿರುಕುಳ ಪ್ರಾರಂಭವಾಗಿದೆ ಎಂದು ರೈತ ಸುರೇಶ ಚಲವಾದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹೆಲಿಕಾಪ್ಟರ್ ಮೂಲಕ ಚಿನ್ನ ನಿಕ್ಷೇಪ ಹುಡುಕಾಟ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಸಿ

ಒಟ್ಟಿನಲ್ಲಿ ಗಣಜೂರಿಗೆ ಇತಿಹಾಸ ಪ್ರಸಿದ್ಧ ಹೆಸರು ಚಿನ್ನದೂರು ಎನ್ನಲಾಗಿದೆ. ಈ ಹಿಂದೆಯೇ ಚಿನ್ನದ ನಿಕ್ಷೇಪಗಳು ಇವೆ ಎನ್ನಲಾಗಿದೆ. ಡೆಕ್ಕನ್ ಮೈನಿಂಗ್ ಕಂಪನಿ ಚಿನ್ನದ ಗಣಿಗಾರಿಕೆಗೆ ತುದಿಗಾಲಿನಲ್ಲಿ ನಿಂತಿದೆ. ರೈತರು ಮುಂದಿನ ದಿನಗಳಲ್ಲಿ ಯಾವ ರೀತಿ ಸ್ಪಂದಿಸುತ್ತಾರೆ ಅನ್ನೋದು ಕಾದು ನೋಡಬೇಕಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಿಲ್ಲರ್​ ಬಿಎಂಟಿಸಿಗೆ ಒಂದೇ ಕುಟುಂಬದ ಮೂವರು ಬಲಿ: ಓರ್ವ ಮಗು ಸ್ಥಿತಿ ಗಂಭೀರ – Kannada News | Horrific Accident in Hoskote: Speeding BMTC Bus Flying on Wrong Route Wipes Out Family of Three

ಕಿಲ್ಲರ್​ ಬಿಎಂಟಿಸಿಗೆ ಒಂದೇ ಕುಟುಂಬದ ಮೂವರು ಬಲಿImage Credit source: Tv9 Kannada

ದೇವನಹಳ್ಳಿ, ಜೂನ್​​ 19: ಕಿಲ್ಲರ್​ ಬಿಎಂಟಿಸಿಗೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಅಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಬಳಿ ನಡೆದಿದೆ. ಬೈಕ್​ಗೆ ಬಿಎಂಟಿಸಿ ಬಸ್​ ಡಿಕ್ಕಿಯಾದ ಪರಿಣಾಮ ದಂಪತಿ, ಪುತ್ರಿ ಮತಪಟ್ಟಿದ್ದಾರೆ. ಮೃತರನ್ನುಅರುಣ್(35), ಅನುಷಾ(32) ಮತ್ತು ಹರ್ನಾ(2) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 5 ವರ್ಷದ ಅನುಶಿಕಾಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೂಲಿಬೆಲೆಯಿಂದ ಹೊಸಕೋಟೆ ಕಡೆಗೆ ಹೋಗ್ತಿದ್ದ ಬಿಎಂಟಿಸಿ ಬಸ್ ದೇವನಹಳ್ಳಿ ಕಡೆ ಇಬ್ಬರು ಮಕ್ಕಳೊಂದಿಗೆ ಹೋಗ್ತಿದ್ದ ದಂಪತಿ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದಿದೆ. ರಾಂಗ್ ರೂಟ್​ನಲ್ಲಿ ಬಿಎಂಟಿಸಿ ಬಸ್ ಬಂದಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಮೃತರು ದೇವನಹಳ್ಳಿ ತಾಲೂಕಿನ ತೆಲ್ಲಹಳ್ಳಿ ಗ್ರಾಮದ ನಿವಾಸಿಗಳು ಎಂಬುದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಸೂಲಿಬೆಲೆ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲೊಂದು ವಿಚಿತ್ರ ಘಟನೆ; ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!

2 ದಿನಗಳಲ್ಲಿ ಬಿಎಂಟಿಸಿಗೆ ನಾಲ್ವರು ಬಲಿ

ಬಿಎಂಟಿಸಿ ಎಲೆಕ್ಟ್ರಿಕ್ ‌ಬಸ್ ಹರಿದು ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜ್ಞಾನಭಾರತಿ ಮಂಗನಹಳ್ಳಿ ಕ್ರಾಸ್ ಬಳಿ ನಿನ್ನೆ (ಜೂನ್​​ 18) ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ರಾಜು(58) ಮೃತ ದುರ್ದೈವಿಯಾಗಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದ ಈತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಸ್ ಹರಿದು ದುರಂತ ಸಂಭವಿಸಿತ್ತು. ಮನೆಗೆ ತರಕಾರಿ ತರೋಣ ಅಂತಾ ಹೊರಗೆ ಬಂದಿದ್ದ ರಾಜು, ಮಂಗನಹಳ್ಳಿ ಕ್ರಾಸ್ ಬಳಿ ರಸ್ತೆ ದಾಟುವ ವೇಳೆ ಅಮ್ಮ ಆಶ್ರಮ ಸರ್ಕಲ್ ಕಡೆಯಿಂದ ಅತಿ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ರಾಜು ಮೈ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಘಟನೆ ಮಾಸುವ ಮುನ್ನವೇ ಬಿಎಂಟಿಸಿ ಬಸ್​​ ಈಗ ಮತ್ತೆ ಮೂವರ ಬಲಿ ಪಡೆದಿರೋದು ಆತಂಕಕ್ಕೆ ಕಾರಣವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್? – Kannada News | Karnataka Transport Corporations Seeks Government about Bus Fare Hike

ಬೆಂಗಳೂರು, (ಜೂನ್ 19): ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಸಿಲೆಂಡರ್ ದರ ಏರಿಕೆ ಬೆನ್ನಲ್ಲೇ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದರ ಮಧ್ಯೆ ಇದೀಗ ಕರ್ನಾಟಕದಲ್ಲಿ ಸಾರಿಗೆ ಬಸ್​ ಟಿಕೆಟ್ ದರ ಏರಿಕೆ ಚರ್ಚೆಗಳು ನಡೆದಿವೆ. ಹೀಗಾಗಿ ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆ ಆತಂಕ ಶುರುವಾಗಿದೆ. ಹೌದು…ಬಸ್ ಪ್ರಯಾಣ ದರ ಹೆಚ್ಚಳ ಮಾಡುವಂತೆ ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ. ಇಮದು (ಜೂನ್ 19) ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಗ್ಯಾರಂಟಿ ಪ್ರಗತಿ ಪರಿಶೀಲನೆ ವೇಳೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಾರಿಗೆ ನಿಗಮಗಳು ಪ್ರಸ್ತಾಪಿಸಿವೆ.

ಡೀಸೆಲ್​ ದರ ಮತ್ತು ಸಿಬ್ಬಂದಿ ಹೆಚ್ಚಳವಾಗಿದೆ. ಜೊತೆಗೆ ಸಿಬ್ಬಂದಿ ವೇತನ ಬಾಕಿ 1,271 ಕೋಟಿ ರೂಪಾಯಿ ಪೈಕಿ 450 ಕೋಟಿ ರೂ. ಬಿಡುಗಡೆ ಆಗಿದೆ. ಆದ್ದರಿಂದ ಪ್ರಯಾಣದ ದರ ಹೆಚ್ಚಳಕ್ಕೆ ಅನುಮತಿ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿವೆ. 2025ರ ಜನವರಿ 5ರಂದು ಬಸ್​ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಡೀಸೆಲ್​ ಬೆಲೆ ಏರಿಕೆಯಿಂದ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದು, ರಾಜ್ಯ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತೆ ಎಂದು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳಿಗೆ ಕೋಪ ಬಂದಾಗ ನಿರ್ಲಕ್ಷಿಸಬೇಡಿ! ಈ 6 ಲಕ್ಷಣಗಳು ಕಂಡುಬಂದರೆ ಎಚ್ಚರ ವಹಿಸಿ – Kannada News | Child Behavior Problems: Signs That Need Professional Attention

ಮಕ್ಕಳ ಬಾಲ್ಯವು ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮಕ ಹಂತವಾಗಿರುವುದರಿಂದ ಪೋಷಕರು ಅವರ ಪಾಲನೆ, ಪೋಷಣೆ ಮಾಡುವಾಗ ಎಷ್ಟು ಜಾಗೃತಿ ವಹಿಸಿದರೂ ಸಾಲುವುದಿಲ್ಲ. ಇಂತಹ ವಯಸ್ಸಿನಲ್ಲಿ ಮಕ್ಕಳು ತಮ್ಮ ಭಯ, ಒತ್ತಡ (Stress) ಅಥವಾ ದುಃಖವನ್ನು ಸ್ಪಷ್ಟವಾಗಿ ಹೇಳಿಕೊಳ್ಳಲು ಸಾಧ್ಯವಾಗದೇ, ಅದನ್ನು ಕೋಪ, ಬೇಸರ ಅಥವಾ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ವ್ಯಕ್ತಪಡಿಸಬಹುದು. ಆದ್ದರಿಂದ ಮಕ್ಕಳ ಕೋಪವನ್ನು ಕೇವಲ ಹಠ ಎಂದು ನಿರ್ಲಕ್ಷ್ಯ ಮಾಡುವ ಬದಲು ಅವರ ಉದ್ದೇಶವೇನು, ಯಾಕೆ ಈ ರೀತಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮಕ್ಕಳಲ್ಲಿ ಕಂಡುಬರುವ ಯಾವ ಲಕ್ಷಣವನ್ನು ನಿರ್ಲಕ್ಷಿಸಬಾರದು ಮತ್ತು ಏಕೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಗಮನಿಸಬೇಕಾದ 6 ಪ್ರಮುಖ ಲಕ್ಷಣಗಳು;

ನಿರಂತರ ದುಃಖ ಅಥವಾ ಆಸಕ್ತಿ ಕಳೆದುಕೊಳ್ಳುವುದು: ಹಿಂದೆ ಇಷ್ಟಪಟ್ಟ ಆಟ, ಚಟುವಟಿಕೆಗಳ ಮೇಲೆ ಆಸಕ್ತಿ ಕಡಿಮೆಯಾಗುವುದು ಅಥವಾ ಸದಾ ಬೇಸರದಿಂದ ಇರುವುದು ಮಾನಸಿಕ ಒತ್ತಡದ ಸೂಚನೆಯಾಗಿರಬಹುದು.

ಪದೇಪದೇ ತಲೆನೋವು ಅಥವಾ ಹೊಟ್ಟೆನೋವು: ಯಾವುದೇ ದೈಹಿಕ ಕಾರಣವಿಲ್ಲದೆ ಆಗಾಗ ತಲೆನೋವು ಅಥವಾ ಹೊಟ್ಟೆನೋವಿನ ದೂರು ನೀಡುವುದು ಭಾವನಾತ್ಮಕ ಒತ್ತಡದ ಸಂಕೇತವಾಗಿರಬಹುದು.

ಅತಿಯಾದ ಕಿರಿಕಿರಿ: ಸಣ್ಣ ವಿಷಯಕ್ಕೂ ಬೇಸರಪಡುವುದು, ಕೋಪಗೊಳ್ಳುವುದು ಅಥವಾ ಅಸಹನೆ ತೋರಿಸುವುದು ಒಳಗಿರುವ ಮಾನಸಿಕ ಅಶಾಂತಿಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ಮಕ್ಕಳಲ್ಲಿ ಯೂರಿನ್ ಟೆಸ್ಟ್ ಮಾಡಿ ಆಟಿಸಂ ಲಕ್ಷಣಗಳನ್ನು ಪತ್ತೆಹಚ್ಚಬಹುದೇ? ಏನ್ ಹೇಳುತ್ತೆ ಅಧ್ಯಯನ?

ಭಾವನಾತ್ಮಕ ಬದಲಾವಣೆಗಳು: ಒಂದು ಕ್ಷಣ ಸಂತೋಷವಾಗಿದ್ದು, ಮತ್ತೊಂದು ಕ್ಷಣಕ್ಕೆ ದುಃಖ ಅಥವಾ ಕೋಪ ಮಾಡಿಕೊಳ್ಳುವುದು ಗಮನಿಸಬೇಕಾದ ಲಕ್ಷಣವಾಗಿದೆ.

ಸಣ್ಣ ವಿಷಯಕ್ಕೂ ಕೋಪ: ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಆಗಾಗ ಜಗಳವಾಡುವುದು ಕೇವಲ ಹಠವಲ್ಲ, ಸಹಾಯದ ಅಗತ್ಯವಿರಬಹುದಾದ ಸೂಚನೆಯೂ ಆಗಿರಬಹುದು.

ಸಹಾಯಕ್ಕಾಗಿ ಮೌನ ಸಂಕೇತಗಳು: ಮಕ್ಕಳ ವರ್ತನೆಯಲ್ಲಿ ಏಕಾಏಕಿ ಬದಲಾವಣೆ ಕಂಡುಬಂದರೆ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗದೆ ಸಹಾಯ ಕೋರುತ್ತಿರಬಹುದು.

ಪೋಷಕರು ಏನು ಮಾಡಬೇಕು?

ಮಕ್ಕಳನ್ನು ಬೈಯುವುದು ಅಥವಾ ದಂಡಿಸುವುದಕ್ಕಿಂತ, ಅವರೊಂದಿಗೆ ಸ್ನೇಹಿತರಂತೆ ಮಾತನಾಡಿ. ಪ್ರತಿದಿನ ಅವರ ಭಾವನೆಗಳನ್ನು ಆಲಿಸಿ, ಶಾಲೆ, ಸ್ನೇಹಿತರು ಹಾಗೂ ಕುಟುಂಬದ ಬಗ್ಗೆ ಮುಕ್ತವಾಗಿ ಚರ್ಚಿಸಿ. ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ, ಮಕ್ಕಳ ಮನೋವೈದ್ಯರು ಅಥವಾ ಕೌನ್ಸಿಲರ್‌ರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಬರುತ್ತಿದೆ ವಿವಾದಾತ್ಮಕ ಶೋ, ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ ಸಮಯ್ ರೈನಾ – Kannada News | Samay Raina announces India Got Latent season 2 will stream on Netflix and YouTube both

‘ಇಂಡಿಯಾ ಗಾಟ್ ಲೇಟೆಂಟ್’ (India Got Latent) ಒಂದು ವಿಚಿತ್ರ ಹಾಸ್ಯಮಯ ಶೋ ಯೂಟ್ಯೂಬ್​​ ನಲ್ಲಿ ಭಾರಿ ಜನಪ್ರಿಯತೆ ಪಡೆದಿತ್ತು. ಯೂಟ್ಯೂಬರ್ ಸಮಯ್ ರೈನಾ ಶುರು ಮಾಡಿದ್ದ ಈ ಶೋಗೆ ದೇಶ-ವಿದೇಶಗಳಲ್ಲಿ ಭಾರಿ ಜನಪ್ರಿಯತೆ ಧಕ್ಕಿತ್ತು. ಆದರೆ ಇದೇ ಶೋನಲ್ಲಿ ಮಾಡಲಾದ ಒಂದು ಅತ್ಯಂತ ಅಶ್ಲೀಲ ಜೋಕಿನ ಕಾರಣದಿಂದಾಗಿ ಶೋ ವಿವಾದಕ್ಕೆ ಸಿಲುಕಿತು. ಸಮಯ್ ರೈನಾ, ರಣ್ವೀರ್ ಅಲ್ಹಾಬಾದಿಯಾ ಸೇರಿದಂತೆ ಹಲವರ ವಿರುದ್ಧ ಎಫ್​​ಐಆರ್ ದಾಖಲಾಯ್ತು. ವಿಚಾರಣೆಗಳು ನಡೆದವು. ಶೋ ನಿಂತು ಹೋಗಿತ್ತು. ಆದರೆ ಇದೀಗ ಶೋ ಮತ್ತೆ ಬರುತ್ತಿದೆ. ಸಮಯ್ ರೈನಾ, ‘ಇಂಡಿಯಾ ಗಾಟ್ ಲೇಟೆಂಟ್​​ನ ಎರಡನೇ ಸೀಸನ್ ತರುತ್ತಿದ್ದಾರೆ. ಈ ಬಗ್ಗೆ ಖುದ್ದು ಸಮಯ್ ರೈನಾ ಅಧಿಕೃತ ಘೋಷಣೆ ಮಾಡಿದ್ದಾರೆ.

‘ಇಂಡಿಯಾ ಗಾಟ್ ಲೇಟೆಂಟ್’ ಸೀಸನ್ 2 ಬರಲಿದೆ ಎಂದು ಈ ಹಿಂದೆಯೇ ಸಮಯ್ ರೈನಾ ಘೋಷಿಸಿದ್ದರು. ಕೆಲ ವಾರಗಳ ಹಿಂದೆ ಶೋನ ಚಿತ್ರೀಕರಣದ ಫೋಟೊ ಸಹ ಲೀಕ್ ಆಗಿತ್ತು. ಇತ್ತೀಚೆಗಷ್ಟೆ ಈ ಶೋ ಕುರಿತ ಪೋಸ್ಟ್ ಒಂದನ್ನು ನೆಟ್​​ಫ್ಲಿಕ್ಸ್ ಹಂಚಿಕೊಳ್ಳುವ ಮೂಲಕ ಈ ಬಾರಿ ‘ಇಂಡಿಯಾ ಗಾಟ್ ಲೇಟೆಂಟ್ 2’ ನೆಟ್​​ಫ್ಲಿಕ್ಸ್​​ನಲ್ಲಿ ಪ್ರಸಾರ ಆಗಲಿದೆ ಎಂಬ ಸುಳಿವು ನೀಡಿತ್ತು. ಆದರೆ ಇದರಿಂದ ಸಮಯ್ ರೈನಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಯೂಟ್ಯೂಬ್​​ನಲ್ಲಿ ಶೋ ಅನ್ನು ರಿಲೀಸ್ ಮಾಡಬೇಕು ಎಂದು ಒತ್ತಾಯಿಸಿದ್ದರು. ಅಭಿಮಾನಿಗಳ ಮನವಿಗೆ ಸಮಯ್ ರೈನಾ ಸ್ಪಂದಿಸಿದ್ದಾರೆ.

ಇದನ್ನೂ ಓದಿ:‘ಎಲ್ಲರೂ ಕಲ್ಲು ಹೊಡೆಯುತ್ತಾರೆ’; ಕಪಿಲ್ ಶರ್ಮಾ ಶೋನಲ್ಲಿ ಸಮಯ್ ರೈನಾ ನೇರ ಮಾತು

ಇದೀಗ ‘ಇಂಡಿಯಾ ಗಾಟ್ ಲೇಟೆಂಟ್ 2’ ಕುರಿತಂತೆ ವಿಡಿಯೋ ಒಂದನ್ನು ಸಮಯ್ ರೈನಾ ಮತ್ತು ನೆಟ್​​ಫ್ಲಿಕ್ಸ್​ ಜಂಟಿಯಾಗಿ ಬಿಡುಗಡೆ ಮಾಡಿದ್ದು, ‘ಇಂಡಿಯಾ ಗಾಟ್ ಲೇಟೆಂಟ್ 2’ ಶೋ ಈ ನೆಟ್​​ಫ್ಲಿಕ್ಸ್​ನ ಜೊತೆಗೆ ಯೂಟ್ಯೂಬ್​​ನಲ್ಲಿಯೂ ಬಿಡುಗಡೆ ಆಗಲಿದೆ. ಅದೂ ಎರಡರಲ್ಲೂ ಒಟ್ಟಿಗೆ ಮತ್ತು ಒಂದೇ ಕಂಟೆಂಟ್ ರಿಲೀಸ್ ಆಗಲಿದೆ. ಆದರೆ ಯೂಟ್ಯೂಬ್​​ನಲ್ಲಿ ಜಾಹೀರಾತು ಇರಲಿದೆ, ನೆಟ್​​ಫ್ಲಿಕ್ಸ್​ನಲ್ಲಿ ಜಾಹೀರಾತು ಇರುವುದಿಲ್ಲ. ಇದರ ಜೊತೆಗೆ ನೆಟ್​​ಫ್ಲಿಕ್ಸ್​ನಲ್ಲಿ ಸಮಯ್ ರೈನಾ ಅವರ ಕಾಮಿಡಿ ಸ್ಪೆಷಲ್ ಒಂದು ಸಹ ಪ್ರತ್ಯೇಕವಾಗಿ ಬಿಡುಗಡೆ ಆಗಲಿದೆಯಂತೆ. ಶೋ ಬರಲಿದೆ ಎಂದು ಸಮಯ್ ರೈನಾ ಘೋಷಿಸಿದ್ದಾರಾದರೂ ದಿನಾಂಕ ಪ್ರಕಟಿಸಿಲ್ಲ.

ಕಳೆದ ಸೀಸನ್​​ನಲ್ಲಿ ಅಶ್ಲೀಲ ಜೋಕು ಹೇಳಿದ್ದಕ್ಕಾಗಿ ಶೋ ವಿವಾದಕ್ಕೆ ಗುರಿಯಾಗಿತ್ತು. ಹಾಗಾಗಿ ಈ ಬಾರಿ ಸಮಯ್ ರೈನಾ, ಶೋನ ಫಾರ್ಮ್ಯಾಟ್​​ನಲ್ಲಿ ಕೆಲವಾರು ಬದಲಾವಣೆಗಳನ್ನು ಮಾಡಿದ್ದಾರಂತೆ. ಅಶ್ಲೀಲತೆ ಕಡಿಮೆ ಮಾಡಿ ಶುದ್ಧ ಹಾಸ್ಯವಷ್ಟಕ್ಕೆ ಈ ಬಾರಿ ಒತ್ತು ನೀಡಲಾಗುತ್ತಿದೆಯಂತೆ. ಅಂದಹಾಗೆ ಎರಡನೇ ಸೀಸನ್​​ನ ಮೊದಲ ಅತಿಥಿಗಳಾಗಿ ಆಲಿಯಾ ಭಟ್ ಮತ್ತು ಶರ್ವರಿ ವಾಘ್ ಅವರು ಶೋಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಇವರು ತಮ್ಮ ಹೊಸ ಸಿನಿಮಾ ‘ಆಲ್ಫಾ’ನ ಪ್ರಚಾರವನ್ನು ಇಂಡಿಯಾ ಗಾಟ್ ಲೇಟೆಂಟ್ 2 ವೇದಿಕೆಯಿಂದಲೇ ಶುರು ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಲ್ಮಾನ್ ಖಾನ್‌ಗೆ ಹಿನ್ನಡೆ: ‘ಕಾಲಾ ಹಿರಣ್’ ಚಿತ್ರದ ತುರ್ತು ನಿಷೇಧಕ್ಕೆ ದೆಹಲಿ ಹೈಕೋರ್ಟ್ ನಿರಾಕರಣೆ – Kannada News | Salman Khan Kala Hiran movie controversy Delhi High Court refuses stay order

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ದೆಹಲಿ ಹೈಕೋರ್ಟ್‌ನಲ್ಲಿ ಸದ್ಯಕ್ಕೆ ಹಿನ್ನಡೆ ಆಗಿದೆ. ಅವರ ಜೀವನಾಧಾರಿತ ಎನ್ನಲಾದ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂಬ ಮನವಿಯ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿದೆ. ಇದರಿಂದಾಗಿ ಸಲ್ಮಾನ್ ಖಾನ್ ಅವರು ಕೋರ್ಟ್ ತೀರ್ಪಿಗಾಗಿ ಜುಲೈ 1ರವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ‘ಲೈವ್ ಲಾ’ ಇಂಡಿಯಾ ವರದಿಯ ಪ್ರಕಾರ, ಜಸ್ಟಿಸ್ ಮಧು ಜೈನ್ ಅವರ ನೇತೃತ್ವದ ಪೀಠವು, ಸಲ್ಮಾನ್ ಖಾನ್ (Salman Khan) ಅವರ ಕಾನೂನು ತಂಡಕ್ಕೆ ಮೊಕದ್ದಮೆಯ ಸಂಪೂರ್ಣ ದಾಖಲೆಗಳನ್ನು ಚಿತ್ರನಿರ್ಮಾಪಕರಿಗೆ ಸಲ್ಲಿಸುವಂತೆ ಆದೇಶಿಸಿದೆ. ತದನಂತರ ವಿವರವಾದ ವಾದ-ಪ್ರತಿವಾದ ಆಲಿಸಲು ಪ್ರಕರಣವನ್ನು ಜುಲೈ 1ಕ್ಕೆ ಮುಂದೂಡಿದೆ.

1998ರ ಕೃಷ್ಣಮೃಗ ಬೇಟೆ ಪ್ರಕರಣ ಮತ್ತು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೊತೆಗಿನ ವಿವಾದಗಳನ್ನು ಆಧರಿಸಿ ‘ಕಾಲಾ ಹಿರಣ್’ ಸಿನಿಮಾ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಮಾನ್ ಖಾನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಇದು ಸಲ್ಮಾನ್ ಖಾನ್ ಅವರ ಕಹಾನಿ ಅಲ್ಲ ಎಂದು ಚಿತ್ರದ ನಿರ್ಮಾಪಕರು ವಾದಿಸುತ್ತಿದ್ದಾರೆ. ಹಾಗಿದ್ದರೂ ಟೀಸರ್​ನಲ್ಲಿ ಸಲ್ಮಾನ್ ಖಾನ್ ಅವರಿಗೆ ಸಾಮ್ಯತೆ ಕಾಣಿಸಿದೆ.

ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಸೇಥಿ, ‘ನನ್ನ ಕಕ್ಷಿದಾರರ ಜೀವನದ ಆಧಾರದ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಅವರಿಗೆ ಯಾವುದೇ ಹಕ್ಕಿಲ್ಲ, ನಾವು ಯಾವುದೇ ಅನುಮತಿ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು. ಸಿನಿಮಾದಲ್ಲಿ ಸಲ್ಮಾನ್ ಖಾನ್ ಹೆಸರನ್ನು ನೇರವಾಗಿ ಬಳಸದಿದ್ದರೂ, ಕಥೆ ಮತ್ತು ಪಾತ್ರಗಳು ಅವರ ನಿಜ ಜೀವನಕ್ಕೆ ತೀರಾ ಹತ್ತಿರವಾಗಿವೆ ಎಂದು ದೂರಲಾಗಿದೆ.

ಚಿತ್ರದ ಟೀಸರ್‌ನಲ್ಲಿ ನಾಯಕ ನಟನು ಸಲ್ಮಾನ್ ಖಾನ್ ಅವರಂತೆ ಕಾಣುವುದಲ್ಲದೆ, ಅವರ ಸಿಗ್ನೇಚರ್ ಆದ ಬ್ಲೂ ಬ್ರೇಸ್ಲೆಟ್ ಧರಿಸಿರುವುದು ಇದಕ್ಕೆ ಸಾಕ್ಷಿ ಎಂದು ವಕೀಲರು ವಾದಿಸಿದರು. ಅಲ್ಲದೆ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಖುಲಾಸೆಯಾಗಿದ್ದರೂ, ಟೀಸರ್‌ನಲ್ಲಿ ನಾಯಕ ಗನ್ ಹಿಡಿದಿರುವುದನ್ನು ತೋರಿಸಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ಬಿಗ್ ಬಜೆಟ್ ಐತಿಹಾಸಿಕ ಸಿನಿಮಾಗಾಗಿ ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್?

ಚಿತ್ರದ ಬಿಡುಗಡೆಗೆ ತಕ್ಷಣವೇ ತಡೆ ನೀಡಬಾರದು ಎಂದು ಚಿತ್ರನಿರ್ಮಾಪಕರ ವಕೀಲರು ಕೋರಿದರು. ಸಲ್ಮಾನ್ ಖಾನ್ ತಂಡದಿಂದ ತಮಗೆ ಕೇವಲ ಅರ್ಧದಷ್ಟು ಕಾನೂನು ದಾಖಲೆಗಳು ಮಾತ್ರ ಸಿಕ್ಕಿವೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದರೊಂದಿಗೆ, ಈ ಸಿನಿಮಾದ ವಿವಾದದಿಂದ ಚಿತ್ರತಂಡಕ್ಕೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಈಗಾಗಲೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ವಕೀಲರು ಕೋರ್ಟ್ ಗಮನಕ್ಕೆ ತಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಡಗಿನಲ್ಲಿ ಅಮಾನುಷ ಕೃತ್ಯ: ಬಲವಂತದ ಮತಾಂತರಕ್ಕೆ ತಾಯಿಯೇ ಸಾಥ್​​; ಮಗನ ಮರ್ಮಾಂಗಕ್ಕೆ‌ ಕತ್ತರಿ – Kannada News | Mother Accused of Forcing 9 Year Old Son to Convert and Undergo Circumcision

ಕೊಡಗು, ಜೂನ್​​ 19: ಆತ 9 ವರ್ಷದ ಬಾಲಕ. ತಾಯಿಯೇ (Mother) ಸರ್ವಸ್ವ ಅಂದುಕೊಂಡಿದ್ದ. ತಾಯಿ ಜೊತೆಯೇ ವಾಸವಾಗಿದ್ದ. ಆದರೆ ಆ ಮಹಾತಾಯಿ ಮಾಡಿರುವ ಅನಾಚಾರ ಮಾತ್ರ ನಿಜಕ್ಕೂ ಭಯಾನಕ. ಅನ್ಯಧರ್ಮದ ಯುವಕರೊಂದಿಗೆ ಸೇರಿ ಮಗನ (Son) ಮರ್ಮಾಂಗವನ್ನು ಕತ್ತರಿಸಿ ಬಲವಂತದ ಮತಾಂತರ ಮಾಡಿಸಿದ್ದಾಳೆ. ಇಂತಹದೊಂದು ಅಮಾನುಷ ಕೃತ್ಯಕ್ಕೆ ಇಡಿ ಕೊಡಗು ಜಿಲ್ಲೆ ಬೆಚ್ಚಿಬಿದ್ದಿದೆ.

ಮುಖ್ಯಾಂಶಗಳು

  • ಸುನ್ನತ್ ಹೆಸರಲ್ಲಿ ಬಾಲಕನ ಮರ್ಮಾಂಗಕ್ಕೆ‌ ಕತ್ತರಿ
  • ಮಗನನ್ನ ಬಲವಂತದ ಮತಾಂತರಕ್ಕೆ ಸಾಥ್ ನೀಡಿದ ತಾಯಿ
  • ಅನ್ಯಧರ್ಮದ ಯುವಕರ ಬಂಧನ​​

ನಡೆದಿದ್ದೇನು?

ಏನೂ ಅರಿಯದ 9 ವರ್ಷದ ಮುಗ್ಧ ಮಗನನ್ನು ತಾಯಿಯೇ ದುಷ್ಕರ್ಮಿಗಳ ಜೊತೆ ಸೇರಿ ಮರ್ಮಾಂಗ ಕತ್ತರಿಸಿ ಸುನ್ನತ್ ಹೆಸರಿನಲ್ಲಿ ಮತಾಂತರ ಮಾಡಿದ ಆರೋಪ ಕೇಳಿಬಂದಿದೆ. ಕುಶಾಲನಗರ ಪಟ್ಟಣದಲ್ಲಿ ವಾಸವಿರುವ ರಾಜೀವ್ ಮತ್ತು ಸಾಜಿದಾ ದಂಪತಿಗೆ 9 ವರ್ಷದ ಮಗನಿದ್ದಾನೆ. ಸಾಜಿದ ಕಳೆದ ಕೆಲ ವರ್ಷಗಳಿಂದ ಇಲ್ಲಿನ ನಿಸರ್ಗಧಾಮ ಟೂರಿಸ್ಟ್​ ಸೆಂಟರ್​​ ಮಳಿಗೆಯೊಂದಕ್ಕೆ ಸೇಲ್ಸ್​ ಗರ್ಲ್​ ಆಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಪ್ರೀತಿ ಪ್ರೇಮದ ಹೆಸರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ: ಲವ್ ಜಿಹಾದ್​​ಗೆ ಬಲಿಯಾದ ಹಿಂದೂ ಯುವತಿ ರೀಟಾ

ಮಳಿಗೆ ಮಾಲೀಕರಾದ ಸಲೀಂ ಮತ್ತು ಜಲೀಲ್ ಪರಿಚಯವಾಗಿದೆ. ಅವರು ಸಾಜಿದಾ ಮೇಲೆ ಅದೇನು ಪ್ರಭಾವ ಬಿರಿದ್ದಾರೆ ಗೊತ್ತಿಲ್ಲ. ಕಳೆದ ಒಂದು ತಿಂಗಳ ಹಿಂದೆ ಸಾಜಿದಾ ಮತ್ತು ಆಕೆಯ 9 ವರ್ಷದ ಮಗನನ್ನು ರಹಸ್ಯವಾಗಿ ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೆರಿ ಗ್ರಾಮದ ಮಸೀದಿಗೆ ಕರೆದುಕೊಂಡು ಹೋಗಿ ಒಂದು ತಿಂಗಳು ಅಲ್ಲೇ ಉಳಿದುಕೊಂಡಿದ್ದಾರೆ. ಈ ವೇಳೆ ಬಾಲಕನಿಗೆ ಬಲವಂತದಿಂದ ಮರ್ಮಾಂಗ ಕತ್ತರಿಸಿ ಸುನ್ನತ್ ಮಾಡಿಸಿ ಮತಾಂತರ ಮಾಡಿದ್ದಾರೆ. ಅಲ್ಲದೆ ಸಾಜಿದಾಳನ್ನ ಕೂಡ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕುಶಾಲನಗರದಲ್ಲಿ ಗುಸುಗುಸು ಶುರುವಾದಾಗ ಪತಿ ರಾಜೀವ್ ಕೆಲವು ಹಿಂದೂ ಪರ ಸಂಘಟನೆಗಳ ನೆರವು ಪಡೆದು ಕುಶಾಲನಗರಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಷ್ಟಪಟ್ಟು ಮತಾಂತರವಾಗಿರುವುದಾಗಿ ಸಾಜಿದಾ ಹೇಳಿಕೆ

ಮುಗ್ಧ ಬಾಲಕನನ್ನ ಕಾನೂನಿಗೆ ವಿರುದ್ಧವಾಗಿ ಮತಾಂತರ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಕುಶಾಲನಗರದ ಕೆಲವರು ತಂದೆ ರಾಜೀವ್ ಬೆಂಬಲಕ್ಕೆ ನಿಂತು ಕಾನೂನು ನೆರವು ನೀಡಿದ್ದಾರೆ. ಬಾಲಕನನ್ನ ಕೇರಳದ ಮಸೀದಿಯಿಂದ ರಕ್ಷಿಸಿ ಕರೆತಂದು ಸದ್ಯ ಸಾಂತ್ವನ ಕೇಂದ್ರಕ್ಕೆ ರವಾನಿಸಿದ್ದಾರೆ. ಕುರಾನ್​ನಿಂದ ಪ್ರೇರೇಪಿತಳಾಗಿ, ಇಷ್ಟಪಟ್ಟು ಮತಾಂತರವಾಗಿರುವುದಾಗಿ ಸಾಜಿದಾ ಹೇಳಿದ್ದಾರೆ ಎನ್ನಲಾಗುತ್ತಿದೆ.

ಸಲೀಂ ಮತ್ತು ಜಲೀಲ್ ಬಂಧನ

ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್​ ಸೆಂಟರ್​ನಲ್ಲಿ ಇಂತಹ ಬಹಳಷ್ಟು ಪ್ರಕರಣಗಳು ರಹಸ್ಯವಾಗಿ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಸದ್ಯ ಆರೋಪಿಗಳಾದ ಸಲೀಂ ಮತ್ತು ಜಲೀಲ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನಿಗೆ ಆಗಿರುವ ದೈಹಿಕ ಮತ್ತು ಮಾನಸಿಕ ಆಘಾತ ಊಹಿಸಲಾಗದು, ಹಾಗಾಗಿ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್​ಗಳನ್ನ ಹಾಕಿ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಬಾಲಕನ ನೆರವಿಗೆ ನಿಂತ ಅಮೃತ್ ರಾಜ್​​ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹಿಂದೂ ಯುವತಿ ಅಪಹರಣ ಕೇಸ್​​ಗೆ ಟ್ವಿಸ್ಟ್: ಮುಸ್ಲಿಂ ಯುವಕನ ವಿರುದ್ಧ ಕೇಸ್ ಬುಕ್, ಆಗಿದ್ದೇನು?

ಸದ್ಯ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಕೃತ್ಯಗಳು ಕೇವಲ ಮತಾಂತರಕ್ಕೆ ಮಾತ್ರ ಸೀಮಿತವೋ ಅಥವಾ ಮತಾಂತರದ ಬಳಿಕ ಕೇರಳದಲ್ಲಿ ಅಮಾಯಕ ಬಾಲಕರನ್ನ ಬೇರೆ ಕೃತ್ಯಗಳಿಗೆ ಬಳಸಿಕೊಳ್ಳುವ ಉದ್ದೇಶವಿತ್ತಾ, ಇಂತಹ ಇನ್ನೆಷ್ಟು ಪ್ರಕರಣಗಳು ನಡೆದಿವೆ ಎಂಬುದರ ಬಗ್ಗೆ ತನಿಖೆಯಲ್ಲಿ ಬಯಲಾಗಬೇಕಿದೆ. ಅಲ್ಲದೆ, ರಾಜ್ಯದ ಬೇರೆ ಬೇರೆ ಕಡೆ ಏಕಾಏಕಿ ನಾಪತ್ತೆಯಾಗುವ ಹಿಂದೂ ಹೆಣ್ಣು ಮಕ್ಕಳು ಮತ್ತು ವ್ಯಕ್ತಿಗಳು ಕೇರಳದ ಮಂಜೆರಿ ಗ್ರಾಮದ ಮಸೀದಿಯಲ್ಲಿ ಪತ್ತೆಯಾಗುತ್ತಿದ್ದಾರೆ ಎಂಬ ಆರೋಪವು ಇದೆ. ಈ ನಿಟ್ಟಿನಲ್ಲೂ ಆಳ ತನಿಖೆಯ ಅಗ್ಯವಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ: ಅಧಿಕಾರಿಗಳಿಗೆ ಸಿಎಂ ಕೊಟ್ಟ ಸೂಚನೆಗಳೇನು? – Kannada News | CM DK Shivakumar gives Some suggestions about guarantee schemes, here Is Meeting Details

ಬೆಂಗಳೂರು, (ಜೂನ್ 19): ವಿಧಾನಸೌಧದಲ್ಲಿಂದು (ಜೂನ್ 19) ನಡೆದ ಗ್ಯಾರಂಟಿ ಯೋಜನೆಗಳ (guarantee schemes) ಅನುಷ್ಠಾನದ ಹಿರಿಯ ಅಧಿಕಾರಿಗಳು ಹಾಗೂ ಸಚಿವರ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿರುವ ಒಬ್ಬನೇ ಒಬ್ಬ ಅರ್ಹ ಫಲಾನುಭವಿಗೂ ತೊಂದರೆಯಾಗಬಾರದು. ಆದರೆ, ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನರ್ಹರಿಗೆ ಮಾತ್ರ ತಕ್ಷಣವೇ ಬ್ರೇಕ್ ಹಾಕಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮರಣ ಹೊಂದಿದ ಫಲಾನುಭವಿಗಳ ವಿವರಗಳು ಸಕಾಲದಲ್ಲಿ ಸಿಗದೇ ಇರುವುದರಿಂದ, ಮೃತಪಟ್ಟವರ ಖಾತೆಗಳಿಗೂ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ. ಇನ್ನು ಮುಂದೆ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿ ಇದಕ್ಕೆ ತಡೆ ಒಡ್ಡಲು ನಿರ್ಧರಿಸಲಾಗಿದೆ. ಗ್ಯಾರಂಟಿ ಯೋಜನೆಯ ಹಣ ಪಡೆಯುವ ಫಲಾನುಭವಿಗಳ ಬ್ಯಾಂಕ್ ಖಾತೆಗಳು ಕರ್ನಾಟಕ ರಾಜ್ಯದಲ್ಲೇ ಇರಬೇಕು. ಆದರೆ, ಬೇರೆ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ಹಣ ಹೋಗುತ್ತಿರುವುದು ಪತ್ತೆಯಾಗಿದ್ದು, ಇತರೆ ರಾಜ್ಯಗಳ ಮತದಾರರು ಇದರ ಲಾಭ ಪಡೆಯುತ್ತಿರುವುದನ್ನು ತಡೆಯಲು ಸೂಚಿಸಿದ್ದಾರೆ. ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಯುಪಿಐ (UPI) ಖಾತೆಗಳನ್ನು ಸೃಷ್ಟಿಸಿ ಯೋಜನೆಯ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳನ್ನು ಸಹ ಅಧಿಕಾರಿಗಳು ಸಭೆಯ ಗಮನಕ್ಕೆ ತಂದಿದ್ದಾರೆ.

ಅನರ್ಹರನ್ನು ತಡೆಯುವಾಗ ನಿಜವಾದ ಬಡವರಿಗೆ ಸಮಸ್ಯೆಯಾಗಬಾರದು ಎಂದು ಸಿಎಂ ಡಿಕೆ ಶಿವಕುಮಾರ್‌ ಕೆಲವು ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ. ಹಲವು ಫಲಾನುಭವಿಗಳು ಬ್ಯಾಂಕ್ ಸಾಲ ಪಡೆದಿದ್ದು, ಗೃಹಲಕ್ಷ್ಮಿ ಹಣ ಜಮೆಯಾದ ತಕ್ಷಣ ಬ್ಯಾಂಕಿನವರು ಅದನ್ನು ಸಾಲದ ಮೊತ್ತಕ್ಕೆ ಕಡಿತ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಫಲಾನುಭವಿಗಳು ತಮ್ಮ ಖಾತೆಗಳನ್ನು ಬದಲಾಯಿಸುತ್ತಿದ್ದು, ಅಂತಹ ಖಾತೆ ಬದಲಾವಣೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾದ ತಕ್ಷಣ ಫಲಾನುಭವಿಗಳಿಗೆ ವಾಯ್ಸ್ ಮೆಸೇಜ್ ಮೂಲಕ ಮಾಹಿತಿ ನೀಡುವ ತಂತ್ರಜ್ಞಾನ ತರಲು ಸೂಚಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಿಲಯನ್ಸ್​ನ ಸೆಲ್ ಮತ್ತು ಬೆಸ್ ತಯಾರಿಕೆಯ ಸಾಮರ್ಥ್ಯ 120 GWhಕ್ಕೆ; ಬೆಸ್ ಯಾಕೆ ಮುಖ್ಯ? – Kannada News | Reliance to increase battery Gigafactory capacity to 120GWh, plan announced in RIL 49th AGM

ಮುಂಬೈ, ಜೂನ್ 19: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಹಸಿರು ಇಂಧನ (Green Energy) ಮಹತ್ವಾಕಾಂಕ್ಷೆಯತ್ತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಕಂಪನಿಯು ತನ್ನ ಬ್ಯಾಟರಿ ಗಿಗಾಫ್ಯಾಕ್ಟರಿ ಸಾಮರ್ಥ್ಯವನ್ನು ವಿಸ್ತರಿಸುವುದರ ಜೊತೆಗೆ ಸೌರಶಕ್ತಿ ಉತ್ಪಾದನಾ ಘಟಕಗಳನ್ನೂ ಕಾರ್ಯಾರಂಭ ಮಾಡಿದೆ. ರಿಲಯನ್ಸ್ ತನ್ನ ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು 120 GWh (ಗಿಗಾವ್ಯಾಟ್ ಅವರ್) ಗೆ ಹೆಚ್ಚಿಸಲು ನಿರ್ಧರಿಸಿದೆ. ಇದು ಭಾರತದ ಇಂಧನ ಶೇಖರಣಾ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಸಹಕಾರಿಯಾಗಲಿದೆ.

ಕಂಪನಿಯು ತನ್ನ ಅತ್ಯಾಧುನಿಕ ಸೌರಶಕ್ತಿ ಉತ್ಪಾದನಾ ಮಾರ್ಗಗಳನ್ನು (Solar Manufacturing Lines) ಕಾರ್ಯಾರಂಭ ಮಾಡಿದೆ. ಇದು ಭಾರತದ ಸೋಲಾರ್ ಪ್ಯಾನಲ್ ಉತ್ಪಾದನಾ ಸಾಮರ್ಥ್ಯಕ್ಕೆ ದೊಡ್ಡ ಬಲ ತುಂಬಲಿದೆ. ರಿಲಯನ್ಸ್‌ನ ಈ ಕ್ರಮವು ಪ್ರಧಾನವಾಗಿ ಪಳೆಯುಳಿಕೆ ಇಂಧನಗಳ (Fossil Fuel) ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಪರಿಸರಸ್ನೇಹಿ ಇಂಧನ ಮೂಲಗಳಿಗೆ ಪರಿವರ್ತನೆ ಹೊಂದುವ ದೇಶದ ಗುರಿಯನ್ನು ಬೆಂಬಲಿಸುತ್ತದೆ. ರಿಲಾಯನ್ಸ್ ಇಂಡಸ್ಟ್ರೀಸ್​ನ 49ನೇ ವಾರ್ಷಿಕ ಮಹಾಸಭೆಯಲ್ಲಿ ಛೇರ್ಮನ್ ಮುಕೇಶ್ ಅಂಬಾನಿ ಹಾಗೂ ಅವರ ಪುತ್ರ ಮತ್ತು ಆರ್​ಐಎಲ್​ನ ಡೈರೆಕ್ಟರ್ ಅನಂತ್ ಅಂಬಾನಿ ಅವರು ಈ ಮಾಹಿತಿ ನೀಡಿದರು.

ಇದನ್ನೂ ಓದಿ: ಜಿಯೋ ಐಪಿಒಗೆ ಸಜ್ಜು; 27 ಕೋಟಿ ಹೊಸ ಈಕ್ವಿಟಿ ಷೇರುಗಳ ಹಂಚಿಕೆ; ಆರ್​​ಐಎಲ್ ಎಜಿಎಂ ಸಭೆಯಲ್ಲಿ ಅಂಬಾನಿ ಮಾಹಿತಿ

ಇಂಧನ ಸ್ವಾವಲಂಬನೆಗೆ ಬೆಸ್ ಬಹಳ ಮುಖ್ಯ

ರಿಲಯನ್ಸ್ ಸಂಸ್ಥೆಯು ಈ ವರ್ಷದ ಕೊನೆಯಲ್ಲಿ 40GWh ಸಾಮರ್ಥ್ಯದ ಬೆಸ್ ಮತ್ತು ಸೆಲ್ ಗಿಗಾಫ್ಯಾಕ್ಟರಿ ನಿರ್ಮಿಸಲಿದೆ. ಒಟ್ಟೂ ಸಾಮರ್ಥ್ಯವನ್ನು 120GWh ಗೆ ಏರಿಸುವುದು ರಿಲಾಯನ್ಸ್​ನ ಗುರಿ. ಇಲ್ಲಿ ಬೆಸ್ (BESS) ಎಂದರೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ. ಇದು ತಡೆರಹಿತ ವಿದ್ಯುತ್ ಸರಬರಾಜು ಮಾಡಲು ಇರುವ ಬಹಳ ಮುಖ್ಯ ವ್ಯವಸ್ಥೆ.

ಬೆಸ್ ಸಿಸ್ಟಂಗಳು ಹೆಚ್ಚುವರಿ ವಿದ್ಯುತ್ ಅನ್ನು ಬ್ಯಾಟರಿ ರೂಪದಲ್ಲಿ ಹಿಡಿದಿಡುತ್ತವೆ. ವಿದ್ಯುತ್ ಪೂರೈಕೆ ಕಡಿಮೆ ಆದಾಗ ಇದನ್ನು ಬಳಸಬಹುದು. ಈ ಬೆಸ್ ಸಿಸ್ಟಂಗಳು ವಿದ್ಯುತ್ ಗ್ರಿಡ್ ಮೇಲಿನ ಒತ್ತಡ ಕಡಿಮೆ ಮಾಡುತ್ತವೆ, ಮತ್ತು ಇಂಧನ ಪೋಲಾಗುವುದನ್ನು ತಪ್ಪಿಸುತ್ತದೆ.

ರಿಲಾಯನ್ಸ್ ಯೋಜನೆಯ ಪರಿಣಾಮಗಳೇನು?

ವಿದೇಶಿ ಸೋಲಾರ್ ಸೆಲ್ ಮತ್ತು ಬ್ಯಾಟರಿಗಳ ಆಮದನ್ನು ಕಡಿಮೆ ಮಾಡಿ, ದೇಶೀಯವಾಗಿ ಇಂಧನ ಸಾಧನಗಳನ್ನು ಉತ್ಪಾದಿಸಲು ಈ ಘಟಕಗಳು ನೆರವಾಗಲಿವೆ. ಸ್ವದೇಶಿ ಉತ್ಪಾದನೆಯು ದೀರ್ಘಾವಧಿಯಲ್ಲಿ ಸೌರಶಕ್ತಿ ಮತ್ತು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Reliance AGM 2026: ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಭರ್ಜರಿ ಬಂಡವಾಳ ವೆಚ್ಚ; ಒಂದು ವರ್ಷದಲ್ಲಿ 1.44 ಲಕ್ಷ ಕೋಟಿ ರೂ ವೆಚ್ಚ

ಅಹಮದಾಬಾದ್‌ನ ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಈ ಯೋಜನೆಗಳು ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ರಿಲಯನ್ಸ್‌ನ ಈ ಹೂಡಿಕೆಯು ಭಾರತವನ್ನು ಜಾಗತಿಕ ಹಸಿರು ಇಂಧನ ಕೇಂದ್ರವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 6:48 pm, Fri, 19 June 26

Source link