All posts by nagaraj11081993

ವೇಗವಾಗಿ ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನಿಂದ ಹೊರಗೆಸೆಯಲ್ಪಟ್ಟ ವಿದ್ಯಾರ್ಥಿನಿಯರು! ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ವೇಗವಾಗಿ ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನಿಂದ ಹೊರಗೆಸೆಯಲ್ಪಟ್ಟ ವಿದ್ಯಾರ್ಥಿನಿಯರು! ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಮಂಗಳೂರು, ಮಾರ್ಚ್ 31: ವೇಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್‌ನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಎಸೆಯಲ್ಪಟ್ಟ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಇಬ್ಬರು ವಿದ್ಯಾರ್ಥಿನಿಯರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ: ಪುತ್ತೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಗೇರುಕಟ್ಟೆ ಎಂಬಲ್ಲಿ ಅಕ್ಕ-ತಂಗಿ ಹತ್ತಿದ್ದರು. ಬಸ್ ಕಳಿಯ ಗ್ರಾಮದ ರೇಷ್ಮೆರೋಡ್ ಎಂಬಲ್ಲಿನ ತಿರುವಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ, ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡಿದೆ. ಈ ವೇಳೆ ಬಾಗಿಲ ಬಳಿಯೇ ನಿಂತಿದ್ದ ಅಕ್ಕ ಮೊದಲು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಅವರನ್ನು ರಕ್ಷಿಸಲು ಹೋದ ತಂಗಿ ಕೂಡ ನಿಯಂತ್ರಣ ತಪ್ಪಿ ಬಸ್ಸಿನಿಂದ ಹೊರಕ್ಕೆ ಬಿದ್ದಿದ್ದಾರೆ.

ಈ ಇಡೀ ದೃಶ್ಯವು ರಸ್ತೆಯ ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುವವರ ಎದೆ ನಡುಗಿಸುವಂತಿದೆ. ಬಿದ್ದ ತಕ್ಷಣ ಸ್ಥಳೀಯರು ಓಡಿ ಬಂದು ವಿದ್ಯಾರ್ಥಿನಿಯರನ್ನು ರಕ್ಷಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ಸಿನ ನಿರ್ವಹಣೆ ಮತ್ತು ಚಾಲಕನ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ, ರಾಯಚೂರಲ್ಲಿ ಕುಡಿಯುವ ನೀರಿಗೂ ಪರದಾಟ: ರಸ್ತೆ ತಡೆದು ಪ್ರತಿಭಟನೆ

ಹುಬ್ಬಳ್ಳಿ/ರಾಯಚೂರು, ಮಾರ್ಚ್​​ 31: ಬೇಸಿಗೆ ಆರಂಭವಾಗುತ್ತಿದ್ದಂತೆ ಕರ್ನಾಟಕದ ಹಲವೆಡೆ ನೀರಿನ ಸಮಸ್ಯೆ ತಲೆದೋರಿದ್ದು, ಹುಬ್ಬಳ್ಳಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದೆ. ಹುಬ್ಬಳ್ಳಿಯ ಕಿಲ್ಲೆ ವಾರ್ಡ್‌ನಲ್ಲಿ ವಾರಕ್ಕೊಮ್ಮೆ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಸ್ಥಳೀಯರು ಪ್ರತಿದಿನವೂ ನೀರಿಗಾಗಿ ಪರದಾಡುತ್ತಿದ್ದಾರೆ. ಹೀಗಾಗಿ ರಸ್ತೆ ತಡೆದು ಸಾರ್ವಜನಿಕರು ಪ್ರತಿಭಟನೆ ನಡೆಸಿರುವ ಪ್ರಸಂಗ ನಡೆದಿದೆ. ಅತ್ತ ರಾಯಚೂರು ಜಿಲ್ಲೆಯ ಹಲವು ಭಾಗಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆ, ಜಿಲ್ಲಾಧಿಕಾರಿಗಳು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. 150ಕ್ಕೂ ಹೆಚ್ಚು ಕೆರೆಗಳನ್ನು ಭರ್ತಿ ಮಾಡುವಂತೆ ಆದೇಶಿಸಿದ್ದು, ಈ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಆ ಪಾತ್ರ ಮಾಡುವುದಿಲ್ಲ’: ದೊಡ್ಡ ಹಾಲಿವುಡ್ ಆಫರ್ ಕೈಬಿಟ್ಟಿದ್ದ ಹಿರಿಯ ನಟ

ಭಾರತದ ನಟ-ನಟಿಯರಿಗೆ ಹಾಲಿವುಡ್ (Hollywood)​ ಮೇಲೆ ವಿಪರೀತ ಮೋಹ. ಹಾಲಿವುಡ್ ಅವಕಾಶ ಎಂದರೆ ಸಾಕು ಹಿಂದೆ-ಮುಂದೆ ಯೋಚಿಸದೆ ಹಾರಿ ಬಿಡುತ್ತಾರೆ. ಹಾಲಿವುಡ್ ಸಹ ಭಾರತದ ಖ್ಯಾತ ನಟರನ್ನು ವಿಲನ್​​ಗಳಾಗಿ ಅಥವಾ ಸಾಧಾರಣ ಪೋಷಕ ನಟರ ಪಾತ್ರಗಳನ್ನೇ ನೀಡುವುದು ಹೆಚ್ಚು. ಪ್ರಿಯಾಂಕಾ ಚೋಪ್ರಾ, ಐಶ್ವರ್ಯಾ ರೈ ಸಹ ಹಾಲಿವುಡ್ ಸಿನಿಮಾಗಳಲ್ಲಿ ವಿಲನ್ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಭಾರತದ ಹಿರಿಯ ನಟರೊಬ್ಬರು ಬಲು ದೊಡ್ಡ ಹಾಲಿವುಡ್ ಸಿನಿಮಾ ಅವಕಾಶವನ್ನು ನಿರಾಕರಿಸಿದ್ದರು. ಅದಕ್ಕೆ ನೀಡಿದ ಕಾರಣ ಹೆಮ್ಮೆ ಪಡುವಂಥಹದ್ದು.

ನಾನಾ ಪಟೇಕರ್ ಬಾಲಿವುಡ್​ನ ಬಲು ಹಿರಿಯ ನಟ. ಕೇವಲ ತಮ್ಮ ನಟನೆಯಿಂದಲೇ ದೊಡ್ಡ ಅಭಿಮಾನಿ ವರ್ಗವನ್ನು ಪಡೆದುಕೊಂಡಿರುವವರು ನಾನಾ ಪಟೇಕರ್. ಹಾಲಿವುಡ್​ನ ದೊಡ್ಡ ನಟ ‘ಟೈಟ್ಯಾನಿಕ್’ ಖ್ಯಾತಿಯ ಲಿಯಾನಾರ್ಡೊ ಡಿ ಕ್ಯಾಪ್ರಿಯೊ ಅವರೊಟ್ಟಿಗೆ ಸಿನಿಮಾನಲ್ಲಿ ನಟಿಸುವ ದೊಡ್ಡ ಅವಕಾಶ ನಾನಾ ಪಟೇಕರ್ ಅವರನ್ನು ಅರಸಿ ಬಂದಿತ್ತು. ಆದರೆ ನಾನಾ ಪಟೇಕರ್ ಹೇಳಿದ್ದು ಒಂದೇ ಮಾತು, ‘ನಾನು ಅಂಥಹಾ ಪಾತ್ರಗಳಲ್ಲಿ ನಟಿಸಲ್ಲ’ ಎಂದು. ಯಾವುದು ಆ ಪಾತ್ರ.

2007 ರಲ್ಲಿ ನಾನಾ ಪಟೇಕರ್ ಅವರು ಅಮೆರಿಕನ್ ನಿರ್ದೇಶಕ ನಿರ್ದೇಶಿಸಿದ್ದ ಭಾರತೀಯ ಸಿನಿಮಾ ‘ದಿ ಪೂಲ್’ನಲ್ಲಿ ನಟಿಸಿದ್ದರು. ಇದೇ ಸಿನಿಮಾನಲ್ಲಿ ಗದಗದ ಮುಂಡರಗಿಯ ಯುವಕ ವೆಂಕಟೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ. ಆ ಸಿನಿಮಾಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಧಕ್ಕಿತ್ತು. ಆ ಸಿನಿಮಾವನ್ನು ಹಾಲಿವುಡ್​ನ ಖ್ಯಾತ ನಿರ್ದೇಶಕ ರೆಡ್ಲಿ ಸ್ಕಾಟ್ ಅವರು ನೋಡಿದ್ದರು. ಅವರಿಗೆ ನಾನಾ ಪಟೇಕರ್ ಪಾತ್ರ ಬಹಳ ಇಷ್ಟವಾಯ್ತು. ಅದೇ ಸಮಯದಲ್ಲಿ ಅವರು ಲಿಯೊನಾರ್ಡೊ ಡಿ ಕ್ರಾಪ್ರಿಯೊ ಜೊತೆಗೆ ‘ಬಾಡಿ ಆಫ್ ಲೈಸ್’ ಸಿನಿಮಾ ಮಾಡುತ್ತಿದ್ದರು.

ಇದನ್ನೂ ಓದಿ:ಹೈದರಾಬಾದ್​ ಮೇಲೆ ಕಣ್ಣು ಹಾಕಿದ ಬಾಲಿವುಡ್, ಹಾಲಿವುಡ್: ಕಾರಣ?

‘ದಿ ಪೂಲ್’ ಸಿನಿಮಾಕ್ಕೆ ನಾನಾ ಪಟೇಕರ್ ಅವರನ್ನು ಒಪ್ಪಿಸಿದ್ದ ಅನುರಾಗ್ ಕಶ್ಯಪ್ ಅವರಿಗೆ ಮೇಲ್ ಮಾಡಿದ್ದ ರೆಡ್ಲಿ ಸ್ಕಾಟ್ ‘ಬಾಡಿ ಆಫ್ ಲೈಸ್’ ಸಿನಿಮಾದ ಪಾತ್ರಕ್ಕೆ ನಾನಾ ಪಟೇಕರ್ ಬೇಕಾಗಿದ್ದರೆ ಎಂದು ಮೇಲ್ ಮಾಡಿದ್ದರು. ಕೂಡಲೇ ಅನುರಾಗ್ ಅವರು ನಾನಾ ಪಟೇಕರ್ ಬಳಿ ಹೋಗಿ ಖ್ಯಾತ ನಿರ್ದೇಶಕ ರೆಡ್ಲಿ ಸ್ಕಾಟ್ ಅವರ ಸಿನಿಮಾನಲ್ಲಿ ಅವಕಾಶ ಸಿಕ್ಕಿದೆ ಎಂದರಂತೆ. ಆದರೆ ಕತೆ ಕೇಳಿದ ಬಳಿಕ ತಾವು ಭಯೋತ್ಪಾದಕನ ಪಾತ್ರ ಮಾಡುವುದಿಲ್ಲ ಎಂದು ಹೇಳಿಬಿಟ್ಟರಂತೆ. ಅನುರಾಗ್ ಕಶ್ಯಪ್, ನಾನಾ ಪಟೇಕರ್ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಿದರಾದರೂ ನಾನಾ ಪಟೇಕರ್ ಅವರು ತಮ್ಮ ನಿರ್ಧಾರದ ಬಗ್ಗೆ ಅಚಲವಾಗಿದ್ದರಂತೆ.

ಕೊನೆಗೆ ನಾನಾ ಪಟೇಕರ್ ಮಾಡಬೇಕಿದ್ದ ಪಾತ್ರ ನಟ ಮಾರ್ಕ್ ಸ್ಟ್ರಾಂಗ್ ನಿರ್ವಹಿಸಿದರು. ‘ಬಾಡಿ ಆಫ್ ಲೈಸ್’ ಸಿನಿಮಾ ದೊಡ್ಡ ಹಿಟ್ ಆಯ್ತು. ವಿಶ್ವದ ಅತ್ಯುತ್ತಮ ಗೂಢಚಾರಿ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯಶ್ ಇಲ್ಲದೆ ಲಾಸ್ ಏಂಜಲೀಸ್​​ಗೆ ತೆರಳಿದ ‘ರಾಮಾಯಣ’ ಟೀಂ; ಪ್ರಚಾರದಲ್ಲಿ ಭಾಗಿ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಯಲ್ಲಿ ರಿಲೀಸ್ ಆಗಲಿದೆ. ಮೊದಲ ಪಾರ್ಟ್​ ಈ ವರ್ಷ ತೆರೆಗೆ ಬಂದರೆ, ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ. ಈ ಚಿತ್ರದ ಪ್ರಚಾರವನ್ನು ಇನ್ನೂ ಆರಂಭಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ಇದಕ್ಕೆ ಉತ್ತರವಾಗಿ ಸಿನಿಮಾ ತಂಡ ಪ್ರಚಾರ ಆರಂಭಿಸಿದೆ. ‘ರಾಮಾಯಣ’ ತಂಡ ಇತ್ತೀಚೆಗೆ ಲಾಸ್ ಏಂಜಲೀಸ್​​ಗೆ ತೆರಳಿತ್ತು. ಅಲ್ಲಿ ‘ರಾಮಾಯಣ’ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿತ್ತು. ಆದರೆ, ಈ ಶೋನಲ್ಲಿ ಯಶ್ ಇರಲಿಲ್ಲ.

ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾವಣನಾಗಿ ಯಶ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಶೋನಲ್ಲಿ ಭಾಗವಹಿಸಿದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾದ ಗ್ರಾಫಿಕ್ಸ್​​ನ ಹಾಡಿ ಹೊಗಳಿದ್ದಾರೆ. ಈ ವಿಮರ್ಶೆಗಳನ್ನು ಕೇಳಿ ರಣಬೀರ್ ಕಪೂರ್ ಕೂಡ ಖುಷಿಪಟ್ಟಿದ್ದಾರೆ.

‘ಅದ್ಭುತ ವಿಶ್ಯುವಲ್ಸ್’ ಎಂದು ಕೆಲವರು ಹೇಳಿದ್ದಾರೆ. ‘ಈ ಸಿನಿಮಾ ನೋಡಲು ಕಾದಿದ್ದೇವೆ’ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಈ ಟೀಸರ್ ನೋಡಲು ಅಭಿಮಾನಿಗಳು ಕಾದಿದ್ದಾರೆ. ಏಪ್ರಿಲ್ 2ರಂದು ಟೀಸರ್ ಪ್ರೇಕ್ಷಕರ ಎದುರು ಬರಲಿದೆ. ಯಶ್ ಅವರನ್ನು ರಾವಣನಾಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ರಣಬೀರ್, ಸಾಯಿ ಪಲ್ಲವಿ ‘ರಾಮಾಯಣ’ ಫೋಟೋ ಫೇಕ್; ಅಸಲಿ ವಿಷಯ ಬಿಚ್ಚಿಟ್ಟ ನಟ

‘ರಾಮಾಯಣ’ ಚಿತ್ರಕ್ಕೆ 2 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ ರಿಕವರಿ ಮಾಡಲಿದೆಯೇ ಎಂಬುದು ಸದ್ಯದ ಪ್ರಶ್ನೆ. ಎಲ್ಲಕ್ಕಿಂತ ಮುಖ್ಯವಾಗಿ, ಸಿನಿಮಾ ಸೂಕ್ಷ್ಮ ವಿಷಯಗಳ ಮೇಲಿದೆ. ಹೀಗಾಗಿ, ಕಥೆಯಲ್ಲಿ ಕೊಂಚ ಬದಲಾವಣೆ ಆದರೂ ಸಾಕಷ್ಟು ಟ್ರೋಲ್​​​ಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಮೆರಿಕಾ ಅಜೆಂಡಾ ಏನು? ಯುಎಸ್ ಸೇನೆಗೆ ಭಾರತವೇಕೆ ನೆಲೆ ಕೊಟ್ಟಿಲ್ಲ ಗೊತ್ತೇ? ಇಲ್ಲಿದೆ ಮಾಹಿತಿ

ಅಮೆರಿಕಾದ ಸೇನಾನೆ ಲೆಗಳು ಜಗತ್ತಿನಾದ್ಯಂತ ವಿಸ್ತರಿಸಿದ್ದು, ಪ್ರಸ್ತುತ 70ಕ್ಕೂ ಹೆಚ್ಚು ದೇಶಗಳಲ್ಲಿ 750ಕ್ಕೂ ಅಧಿಕ ಸೇನಾ ನೆಲೆಗಳನ್ನು ಹೊಂದಿದೆ. ಈ ನೆಲೆಗಳು 195 ರಾಷ್ಟ್ರಗಳ ಮೇಲೆ 360 ಡಿಗ್ರಿ ಕಣ್ಗಾವಲು ಇಡುವ ಅಮೆರಿಕದ ಕಾರ್ಯಸೂಚಿಯ ಭಾಗವಾಗಿದೆ. 1898ರಲ್ಲಿ ಕ್ಯೂಬಾದಲ್ಲಿ ಮೊದಲ ವಿದೇಶಿ ನೆಲೆ ಸ್ಥಾಪಿಸಿದ ಅಮೆರಿಕಾ, ನಂತರ ಹಂತ ಹಂತವಾಗಿ ತನ್ನ ಸೇನಾನೆಲೆಗಳನ್ನು ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಿಗೆ ವಿಸ್ತರಿಸಿದೆ. ಈ ನೆಲೆಗಳು ಮೈತ್ರಿ ರಾಷ್ಟ್ರಗಳ ರಕ್ಷಣೆಯ ಜೊತೆಗೆ ಶತ್ರುಗಳ ಮೇಲೆ ಕಣ್ಣಿಡಲು ಮತ್ತು ಭವಿಷ್ಯದ ಯುದ್ಧಗಳಿಗೆ ಪೂರ್ವಸಿದ್ಧತೆಗಾಗಿ ನಿರ್ಮಿತವಾಗಿವೆ ಎಂದು ವಿಶ್ಲೇಷಿಸಲಾಗುತ್ತದೆ. ಇದೀಗ ಮಧ್ಯಪ್ರಾಚ್ಯ ಯುದ್ಧದ ಸಂದರ್ಭದಲ್ಲಿ ಅಮೆರಿಕಾದ ಸೇನಾನೆಲೆಗಳನ್ನು ಗುರಿಯಾಗಿಸಿ ಇರಾನ್‌ ದಾಳಿ ನಡೆಸುತ್ತಿರುವುದು ಗಮನಾರ್ಹ.

ಆದರೆ, ಭಾರತವು ಅಮೆರಿಕಾಗೆ ತನ್ನ ನೆಲದಲ್ಲಿ ಯಾವುದೇ ಸೇನಾನೆಲೆ ಸ್ಥಾಪಿಸಲು ಅವಕಾಶ ನೀಡಿಲ್ಲ. ಅಲಿಪ್ತ ನೀತಿ ಮತ್ತು ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುವ ಭಾರತವು, ಸೇನಾನೆಲೆಗಳು ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆ ಮತ್ತು ಭೂಭಾಗದ ಹಿಡಿತವನ್ನು ಕಡಿಮೆ ಮಾಡುತ್ತವೆ ಎಂಬ ನಿಲುವನ್ನು 1947ರಿಂದಲೂ ಹೊಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

Source link

‘ಗೃಹಸಚಿವರೇ ನೆಟ್ಟಗಿಲ್ಲ’ ಎಂದು ಎಕ್ಸ್​​ ಪೋಸ್ಟ್​​: ದಾಖಲಾಯ್ತು ಸುಮೋಟೋ ಕೇಸ್​

ಬೆಂಗಳೂರು, ಮಾರ್ಚ್​​ 31: ಗೃಹಸಚಿವರೇ ನೆಟ್ಟಗಿಲ್ಲ, ಅವರ ಕಾಲೇಜಿನ ಪ್ರೊಫೆಸರ್ ನೆಟ್ಟಗಿರ್ತಾನಾ? ಎಂದು ಎಕ್ಸ್​​​​​ ಖಾತೆ ಮೂಲಕ ಗೃಹ ಸಚಿವ ಡಾ. ಜಿ. ಪರಮೆಶ್ವರ್​​ ಕುರಿತು ಆಕ್ಷೇಪಾರ್ಹ ಪೋಸ್ಟ್​​​ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಹಿಂದೂ ಜಾಗೃತನಾಗು ಎಂಬ ಎಕ್ಸ್ ಖಾತೆಯಲ್ಲಿ ಈ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿದ್ದು, ಉದ್ದೇಶಪೂರ್ವಕ ದ್ವೇಷ ಭಾವನೆ ಮೂಡಿಸುವ ಆರೋಪ ಸಂಬಂಧ ಐಟಿ ಆ್ಯಕ್ಟ್ ಹಾಗೂ BNS U/S 299ರಡಿ ಪ್ರಕರಣ ದಾಖಲಾಗಿದೆ. ಹಿಂಮದೂ ಮತ್ತು ಮುಸ್ಲಿಂ ಧರ್ಮದವರ ಭಾವನೆಗಳಿಗೆ ನಿಂದನೆ ಆರೋಪವೂ ಕೇಳಿಬಂದಿದೆ.

ಎಕ್ಸ್​​ ಪೋಸ್ಟ್​​ನಲ್ಲಿ ಏನಿದೆ?

ಗೃಹಮಂತ್ರಿಗಳೇ ನೆಟ್ಟಗಿಲ್ಲ, ಇನ್ನು ಅವರ ಕಾಲೇಜಿನ ಪ್ರೊಪೆಸರ್ ನೆಟ್ಟಗೆ ಇರ್ತಾನಾ? ಎಂಬ ಶೀರ್ಷಿಕೆ ಸಮೇತ ಹಿಂದೂ ಜಾಗೃತನಾಗು ಎಂಬ ಎಕ್ಸ್​​ ಖಾತೆಯಲ್ಲಿ ವಿಡಿಯೋ ಸಮೇತ ಪೋಸ್ಟ್​​ ಒಂದನ್ನು ಮಾಡಲಾಗಿದೆ. ಮೆಡಿಕಲ್​​ ಕಾಲೇಜಿನ ಹಿಂದೂ ಯುವತಿಗೆ ಪ್ರೇಮ ನಿವೇದನೆ​​ ಮಾಡಿದ ಅಬ್ದುಲ್ಲಾನಿಗೆ ಬಿತ್ತು ಚಪ್ಪಲಿ ಏಟು. ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿಗಳು ಎಂಬ ಬರಹವೂ ಈ ಪೋಸ್ಟ್​​ನಲ್ಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ ಅಬ್ದುಲ್​​ಗೆ ಚಪ್ಪಲಿ ಏಟು

ಮಾರ್ಚ್ 23ರಂದು ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ಕಾಲೇಜಿನಲ್ಲಿ ಡಾ. ಅಬ್ದುಲ್ ರೆಹಮಾನ್ ಷರೀಫ್ ಎಂಬ ಪ್ರಾಧ್ಯಾಪಕ, ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್‌ ಮಾಡಿದ್ದ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತರಗತಿಯಲ್ಲೇ ಪ್ರಶ್ನೆ ಮಾಡಿದ್ದಳು. ಈ ಹಿಂದೆ ನೀನು ನನಗೆ ಪ್ರಪೋಸ್​ ಮಾಡಿಲ್ವಾ ಎಂದು ಪ್ರಾಧ್ಯಾಪಕ ವಿದ್ಯಾರ್ಥಿನಿಯನ್ನು ಕೇಳಿದ್ದು, ಸಾಕ್ಷಿಗೆ ಸಿಸಿಟಿವಿ ದೃಶ್ಯವಿದೆ ಎಂದಿದ್ದ. ಕೋಪಗೊಂಡ ವಿದ್ಯಾರ್ಥಿನಿ ಸಿಸಿಟಿವಿ ವಿಡಿಯೋ ತೋರಿಸು ಎಂದಿದ್ದಾಳೆ. ಈ ಬಗ್ಗೆ ನಾಳೆ ಮಾತನಾಡುತ್ತೇನೆ ಎಂದು ಹೇಳಿ ಪ್ರಾಧ್ಯಾಪಕ​ ಕ್ಲಾಸ್​​ನಿಂದ ಹೊರಗೆ ಹೋಗಿದ್ದ.  ಘಟನೆಯಿಂದ ತೀವ್ರವಾಗಿ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರಾಧ್ಯಾಪಕನ ಮೇಲೆ ಹಲ್ಲೆ ನಡೆಸಿದ್ದರು. ಗೃಹ ಸಚಿವರಿಗೆ ಸೇರಿದ ಕಾಲೇಜಿನಲ್ಲಿಯೇ ಈ ರೀತಿಯ ಘಟನೆ ನಡೆದಿರೋದು ಭಾರೀ ಚರ್ಚೆಗೆ ಕೂಡ ಗ್ರಾಸವಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

 

 

Source link

ಕೇರಳ ಚುನಾವಣಾ ಪ್ರಚಾರಕ್ಕೆ ಟ್ರಂಪ್​, ಷಿ ಜಿನ್​ಪಿಂಗ್​, ಪುಟಿನ್​!

ಕೇರಳ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಷಿ ಜಿನ್ಪಿಂಗ್, ಪುಟಿನ್ ಬಂದಿದ್ದಾರೆ ನೋಡಿ. ಇದೇನಿದು ವಿಶ್ವ ನಾಯಕರು ಒಂದು ರಾಜ್ಯದ ಪ್ರಚಾರಕ್ಕೆ ಬಂದ್ಬಿಟ್ರಾ ಎಂದು ಆಲೋಚಿಸುತ್ತಿದ್ದೀರಾ, ಇಲ್ಲ ನಿಜವಾಗಿಗೂ ಬಂದಿಲ್ಲ ಆದರೆ ಎಐ ಅವರೆಲ್ಲರನ್ನೂ ವಿಶಿಷ್ಟ ಕೇರಳದ ಉಡುಗೆಯಲ್ಲಿ ಕರೆತಂದಿದೆ. ಡೊನಾಲ್ಡ್​ ಟ್ರಂಪ್, ಷಿ ಜಿನ್​ಪಿಂಗ್, ಪುಟಿನ್, ವೊಲೊಡಿಮಿರ್ ಝೆಲೆನ್ಸ್ಕಿ ಒಬ್ಬೊಬ್ಬರು ಒಂದೊಂದು ಪಕ್ಷಕ್ಕೆ ಬೆಂಬಲ ನೀಡಿ ಪ್ರಚಾರ ಮಾಡುತ್ತಿರುವಂತೆ ವಿಡಿಯೋವನ್ನು ರಚಿಸಲಾಗಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯವರನ್ನು ಕೂಡ ನೀವು ಕಾಣಬಹುದು. ನಿಜವಾಗಿಯೂ ಈ ನಾಯಕರು ಪ್ರಚಾರಕ್ಕೆ ಬಂದರೆ ಹೇಗಿರುತ್ತೆ  ಎಂಬುದನ್ನು ಆಲೋಚಿಸಿ ಈ ಎಐ ವಿಡಿಯೋ ರಚಿಸಲಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL mobile Theft: ಕ್ರೀಡಾಂಗಣ ಮಾತ್ರವಲ್ಲದೆ ಮೆಟ್ರೋ, ಬಸ್ ನಿಲ್ದಾಣಗಳಲ್ಲೂ ಮೊಬೈಲ್ ಕಳ್ಳತನ, ಹುಷಾರಾಗಿರಿ!

ಬೆಂಗಳೂರು, ಮಾರ್ಚ್​ 31: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ವೇಳೆ ನಡೆದ ಮೊಬೈಲ್​ಗಳ ಕಳ್ಳತನದ (Mobile Theft) ಬಗ್ಗೆ ಮಹಿಳೆಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿ ಒಟ್ಟು 21 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ ಮಾತ್ರವಲ್ಲದೆ, ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ ಹಾಗೂ ರಸ್ತೆ ಬದಿಗಳಲ್ಲೂ ಆರೋಪಿಯು ಮೊಬೈಲ್ ಕಳವು ಮಾಡುತ್ತಿದ್ದನು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್​ ಪೊಲೀಸ್ ಸ್ಟೇಷನ್​ನಲ್ಲಿ ಸುಮಾರು 12 ಪ್ರಕರಣಗಳು ದಾಖಲಾಗಿದ್ದವು. ಬಂಧಿತ ಆರೋಪಿ ಅಪ್ರಾಪ್ತ ಬಾಲಕರನ್ನು ಸಹ ತನ್ನ ಜೊತೆ ಸೇರಿಸಿಕೊಂಡು ಕಳ್ಳತನ ನಡೆಸುತ್ತಿದ್ದ ವಿಚಾರವೂ ಬಹಿರಂಗವಾಗಿದ್ದು, ಇದೀಗ ಪೊಲೀಸರು ಕೆಲ ಬಾಲಕರನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ.

ಇದನ್ನೂ ಓದಿ ಐಪಿಎಲ್ ಸಂಭ್ರಮದ ನಡುವೆ ಕಳ್ಳರ ಕೈಚಳಕ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50ಕ್ಕೂ ಹೆಚ್ಚು ಮೊಬೈಲ್ ಫೋನ್ ಕಳವು

ಪೊಲೀಸ್ ಆಯುಕ್ತರ ಎಚ್ಚರಿಕೆ

ಘಟನೆಯ ಹಿನ್ನೆಲೆ ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ಐಪಿಎಲ್ ಪಂದ್ಯಗಳಂತಹ ಹೆಚ್ಚಿನ ಜನಸಂದಣಿ ಇರುವ ಸ್ಥಳಗಳಿಗೆ ಹೋಗುವವರು ತಮ್ಮ ವೈಯಕ್ತಿಕ ವಸ್ತುಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಸೂಚಿಸಲಾಗಿದೆ. ಮೊಬೈಲ್, ಪರ್ಸ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ಮಶಾನದಲ್ಲಿ ಸಿಲಿಂಡರ್ ದಂಧೆ

ತೆಲಂಗಾಣ, ಮಾರ್ಚ್​ 31: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿ ದೇಶದಲ್ಲಿರುವ ಅನಿಲ ಕೊರತೆ ಭಯವನ್ನೇ ಉಪಯೋಗಿಸಿಕೊಂಡು ಸ್ಮಶಾನದಲ್ಲಿ ಸಿಲಿಂಡರ್(Cylinder) ದಂಧೆ ನಡೆಸುತ್ತಿದ್ದವರ ವಿರುದ್ಧ ತೆಲಂಗಾಣ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪಂಜಗುಟ್ಟದಲ್ಲಿರುವ ಸ್ಮಶಾನವನ್ನು ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಅನಿಲ ಲಭ್ಯತೆ ಕಡಿಮೆಯಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಸಿಲಿಂಡರ್‌ಗಳು ಲಭ್ಯವಿರುವುದಿಲ್ಲ ಎಂಬ ಕೃತಕ ಭಯವನ್ನು ಒಡ್ಡಿ ಈ ಗ್ಯಾಂಗ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ ಮಾಲೀಕರಿಂದ ಹೆಚ್ಚುವರಿ ಹಣ ಪಡೆದಿದೆ. ಸುಮಾರು 2,100 ರೂ. ಬೆಲೆಯ ವಾಣಿಜ್ಯ ಸಿಲಿಂಡರ್ ಅನ್ನು 6,000 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಟಾಸ್ಕ್ ಫೋರ್ಸ್ ಡಿಸಿಪಿ ವೈಭವ್ ರಘುನಾಥ್ ಬಹಿರಂಗಪಡಿಸಿದ್ದಾರೆ.

ಪೊಲೀಸರ ಕಣ್ಣು ತಪ್ಪಿಸಲು, ಸಿಲಿಂಡರ್‌ಗಳನ್ನು ಪಂಜಗುಟ್ಟದಲ್ಲಿರುವ ಸ್ಮಶಾನದಲ್ಲಿ ಸಂಗ್ರಹಿಸಲಾಗಿತ್ತು. ಆರೋಪಿಗಳು ಶಂಷಾಬಾದ್‌ನಲ್ಲಿ ಬೃಹತ್ ಗೋಡೌನ್ ಮತ್ತು ಅಫ್ಜಲ್‌ಗಂಜ್‌ನಲ್ಲಿ ಕಚೇರಿಯನ್ನು ಸಹ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ರಾಜ್ಯದಲ್ಲಿ ಗ್ಯಾಸ್​​ ಸಿಲಿಂಡರ್​​ ಬೆನ್ನಲ್ಲೇ ರಸಗೊಬ್ಬರ ಅಭಾವ ಆತಂಕ: ಸೂಕ್ತ ಕ್ರಮಕ್ಕೆ ಆಗ್ರಹ

ಟಾಸ್ಕ್ ಫೋರ್ಸ್ ಜುಬಿಲಿ ಹಿಲ್ಸ್ ತಂಡ ಮತ್ತು ಬಂಜಾರಾ ಹಿಲ್ಸ್ ಪೊಲೀಸರು ಜಂಟಿಯಾಗಿ ನಡೆಸಿದ ಈ ದಾಳಿಗಳಲ್ಲಿ 414 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ಸುಮಾರು 22 ಲಕ್ಷ ರೂ. ಎಂದು ಅವರು ಹೇಳಿದರು. 11 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಮೊಹಮ್ಮದ್ ಅಮೀರ್ ಜೊತೆಗೆ ಒಟ್ಟು 10 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಕೆಲವರು ಗ್ಯಾಸ್ ಡೆಲಿವರಿ ಬಾಯ್ಸ್ ಆಗಿದ್ದರು ಎಂಬುದು ಅಚ್ಚರಿಯ ಸಂಗತಿ.

ಈ ಗ್ಯಾಂಗ್ ಕಳೆದ 18 ತಿಂಗಳಿನಿಂದ ಈ ಅಕ್ರಮ ವ್ಯವಹಾರ ನಡೆಸುತ್ತಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರು ಮೆಟ್ರೋ ಗ್ಯಾಸ್ ಏಜೆನ್ಸಿ ಹೆಸರಿನಲ್ಲಿ ವಾಣಿಜ್ಯ ಅನಿಲ ಸರಬರಾಜುಗಳನ್ನು ಬೇರೆಡೆಗೆ ತಿರುಗಿಸಿ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ನಗರದಲ್ಲಿನ ಸಣ್ಣ ಪ್ರಮಾಣದ ಹೋಟೆಲ್‌ಗಳು ಮತ್ತು ಟಿಫಿನ್ ಕೇಂದ್ರಗಳು ಹತಾಶ ಪರಿಸ್ಥಿತಿಯಲ್ಲಿದ್ದಾಗ ಅವರಿಂದ ಮೂರು ಪಟ್ಟು ಬೆಲೆಗೆ ಅನಿಲವನ್ನು ಖರೀದಿಸುತ್ತಿವೆ ಎಂದು ವರದಿಯಾಗಿದೆ.

ನಗರದಲ್ಲಿ ಗ್ಯಾಸ್ ಕೊರತೆ ಇಲ್ಲ, ಸರಬರಾಜು ಸುಗಮವಾಗಿದೆ. ಯಾರೂ ವದಂತಿಗಳನ್ನು ನಂಬಿ ಕಾಳಸಂತೆಯಲ್ಲಿ ಖರೀದಿಸಬಾರದು ಎಂದು ಡಿಸಿಪಿ ರಘುನಾಥ್ ಸ್ಪಷ್ಟಪಡಿಸಿದ್ದಾರೆ. ಯಾರಾದರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ, ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಕೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Sainik School Recruitment 2026: ಸೈನಿಕ್ ಶಾಲೆಯಲ್ಲಿ ಬೋಧಕ-ಬೋಧಕೇತರ ಹುದ್ದೆಗಳಿಗೆ ನೇಮಕಾತಿ; 10ನೇ ತರಗತಿ ಪಾಸಾದವರಿಗೂ ಅವಕಾಶ!

ನೀವು ಶಿಕ್ಷಣ ಕ್ಷೇತ್ರ ಅಥವಾ ಆಡಳಿತಾತ್ಮಕ ವಿಭಾಗದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುತ್ತಿದ್ದರೆ, ಹರಿಯಾಣದ ರೇವಾರಿಯಲ್ಲಿರುವ ಸೈನಿಕ್ ಶಾಲೆಯು ನಿಮಗಾಗಿ ಒಂದು ಸುವರ್ಣಾವಕಾಶವನ್ನು ತಂದಿದೆ. ಬೋಧಕ ಮತ್ತು ಬೋಧಕೇತರ ವಿಭಾಗದ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯು ಮಾರ್ಚ್ 28 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 17 ವರೆಗೆ ಸಮಯವಕಾಶವಿದೆ.

ಈ ನೇಮಕಾತಿ ಅಭಿಯಾನದ ಅಡಿಯಲ್ಲಿ ಒಟ್ಟು ಐದು ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಟಿಜಿಟಿ (ಸಾಮಾನ್ಯ ವಿಜ್ಞಾನ) ಮತ್ತು ಟಿಜಿಟಿ (ಸಮಾಜ ವಿಜ್ಞಾನ) ವಿಭಾಗದಲ್ಲಿ ತಲಾ ಒಂದು ಹುದ್ದೆ, ಸಂಗೀತ ಶಿಕ್ಷಕರ ಒಂದು ಹುದ್ದೆ ಹಾಗೂ ಎರಡು ಎಲ್‌ಡಿಸಿ (ಲೋವರ್ ಡಿವಿಷನ್ ಕ್ಲರ್ಕ್) ಹುದ್ದೆಗಳು ಸೇರಿವೆ. ವಿಶೇಷವೆಂದರೆ, ಕೇವಲ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಕಂಪ್ಯೂಟರ್ ಜ್ಞಾನವಿದ್ದರೆ ಎಲ್‌ಡಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ ಮತ್ತು ಮಾನದಂಡಗಳು:

ಟಿಜಿಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸಂಬಂಧಿತ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಪದವಿ ಅಥವಾ ಆನರ್ಸ್ ಪದವಿ ಪಡೆದಿರಬೇಕು ಮತ್ತು ಬಿ.ಎಡ್ ಜೊತೆಗೆ ಸಿಟಿಇಟಿ (CTET) ಪತ್ರಿಕೆ-II ರಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ. ಸಂಗೀತ ಶಿಕ್ಷಕರ ಹುದ್ದೆಗೆ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕನಿಷ್ಠ ಮೂರು ವರ್ಷಗಳ ವಿಷಯಾಧಾರಿತ ಅಧ್ಯಯನ ಅಗತ್ಯವಿದೆ. ಇನ್ನು ಎಲ್‌ಡಿಸಿ ಹುದ್ದೆ ಬಯಸುವವರು 10ನೇ ತರಗತಿ ಪಾಸಾಗಿರಬೇಕು ಹಾಗೂ ನಿಮಿಷಕ್ಕೆ 40 ಪದಗಳ ಟೈಪಿಂಗ್ ವೇಗದೊಂದಿಗೆ ಎಂಎಸ್ ವರ್ಡ್, ಎಕ್ಸೆಲ್ ಮತ್ತು ಇಂಟರ್ನೆಟ್‌ನಂತಹ ಮೂಲಭೂತ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು ಸೈನಿಕ್ ಸ್ಕೂಲ್ ರೇವಾರಿಯ ಅಧಿಕೃತ ವೆಬ್‌ಸೈಟ್ ssrw.org ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳು ಮತ್ತು 500 ರೂ.ಗಳ ಡಿಮ್ಯಾಂಡ್ ಡ್ರಾಫ್ಟ್ (DD) ಅನ್ನು ಲಗತ್ತಿಸಿ, “ಗೋತ್ರ, ಅಹಿರ್, ಜಿಲ್ಲೆ ರೇವರಿ, ಪಿನ್-123102” ವಿಳಾಸಕ್ಕೆ ಕಳುಹಿಸಿಕೊಡಬೇಕು. ಅರ್ಜಿಯೊಂದಿಗೆ ಸ್ವಯಂ ದೃಢೀಕರಿಸಿದ ಲಕೋಟೆಯನ್ನು ಲಗತ್ತಿಸುವುದನ್ನು ಮರೆಯಬೇಡಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link