nagaraj11081993

ಚಿಕ್ಕಮಗಳೂರಿನಲ್ಲಿ ಡ್ರಿಪ್ಸ್ ಹಾಕಿಸಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿ

ಚಿಕ್ಕಮಗಳೂರು, ಏಪ್ರಿಲ್​​ 02: ಅನಾರೋಗ್ಯದ ಹಿನ್ನೆಲೆ ಡ್ರಿಪ್ಸ್ ಹಾಕಿಸಿಕೊಂಡೇ ವಿದ್ಯಾರ್ಥಿಯೋರ್ವ SSLC ಪರೀಕ್ಷೆ ಬರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‌ ಪ್ರೌಢ ಶಾಲೆಯಲ್ಲಿ ನಡೆದಿದೆ. ಬೆಳಗ್ಗೆ ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿ ಗಗನ್​​ ಎಂಬಾತ ಅಸ್ವಸ್ಥಗೊಂಡಿದ್ದು, ತಕ್ಷಣವೇ ಅಂಬುಲೈನ್ಸ್ ಮೂಲಕ ಬಣಕಲ್ ಅಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಅಗತ್ಯ ಚಿಕಿತ್ಸೆ ಪಡೆದ ಬಳಿಕ ವೈದ್ಯರ ಸಲಹೆ ಪಡೆದು ಡ್ರಿಪ್ಸ್ ಹಾಕಿಸಿಕೊಂಡೇ ಗಗನ್​​ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬಳಿಕ ವಿದ್ಯಾರ್ಥಿಯನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮತ್ತಷ್ಟು ವಿಡಿಯೋ ನೋಡಲು…

Read More

ಡಾಲರ್ ಎದುರು ರುಪಾಯಿ ಮೌಲ್ಯ ಭರ್ಜರಿ ಹೆಚ್ಚಳ; ಭಾರತೀಯ ಕರೆನ್ಸಿಯ ಚೇತರಿಕೆಗೆ ಏನು ಕಾರಣ?

ನವದೆಹಲಿ, ಏಪ್ರಿಲ್ 2: ಸತತ ಹಿನ್ನಡೆಯಲ್ಲಿದ್ದ ರುಪಾಯಿ ಕರೆನ್ಸಿ ಗುರುವಾರ ಡಾಲರ್ ಎದುರು 105 ಪೈಸೆಗಳಷ್ಟು ಚೇತರಿಕೆ ಪಡೆದು 94ರ ಮಟ್ಟಕ್ಕಿಂತ ಕೆಳಗೆ ಬಂದಿದೆ. ಹಿಂದಿನ ದಿನದ ವಹಿವಾಟು ಅಂತ್ಯದಲ್ಲಿ ಡಾಲರ್ ಎದುರು 94.70ರ ಮಟ್ಟದಲ್ಲಿದ್ದ ರುಪಾಯಿ ಮೌಲ್ಯ ಇವತ್ತು ಗುರುವಾರ 93.65ಕ್ಕೆ ಏರಿದೆ. ಡಾಲರ್ ಎದುರು ರುಪಾಯಿ (Dollar vs Rupee) ಚೇತರಿಕೆಗೆ ಪ್ರಮುಖವಾಗಿ ಕಾರಣವಾಗಿದ್ದು ಆರ್​ಬಿಐ ತೆಗೆದುಕೊಂಡ ಒಂದು ಕ್ರಮ. ಸ್ಪೆಕ್ಯುಲೇಟಿವ್ ಟ್ರೇಡಿಂಗ್​ನಿಂದ ರುಪಾಯಿಗೆ ಬಹಳ ಹಿನ್ನಡೆಯಾಗಿತ್ತು. ತೈಲ ಬೆಲೆ ಹೆಚ್ಚಿದ್ದರಿಂದ ಭಾರತದ ಕರೆಂಟ್…

Read More

ಯೂಟ್ಯೂಬರ್ ಭೇಟಿಯಾಗಲು ಕೊಯಮತ್ತೂರಿನಿಂದ ಓಡಿಹೋದ 7ನೇ ತರಗತಿ ವಿದ್ಯಾರ್ಥಿನಿಯರು!

ಕೊಯಮತ್ತೂರು, ಏಪ್ರಿಲ್ 2: ಯೂಟ್ಯೂಬರ್ (YouTuber) ಮೊನಾಲಿಸಾಳನ್ನು ಭೇಟಿಯಾಗುವ ಉದ್ದೇಶದಿಂದ ಕೊಯಮತ್ತೂರಿನಿಂದ ಚೆನ್ನೈಗೆ ಪ್ರಯಾಣಿಸಲು ಯತ್ನಿಸಿದ ನಾಲ್ವರು ಶಾಲಾ ವಿದ್ಯಾರ್ಥಿನಿಯರನ್ನು ಕೊಯಮತ್ತೂರು ರೈಲ್ವೆ ನಿಲ್ದಾಣದ ಪೊಲೀಸರು ರಕ್ಷಿಸಿದ್ದಾರೆ. ಕೊಯಮತ್ತೂರಿನ ಖಾಸಗಿ ಶಾಲೆಯಲ್ಲಿ 7ನೇ ತರಗತಿಯ ಆಪ್ತ ಸ್ನೇಹಿತರಾದ ನಾಲ್ವರು ವಿದ್ಯಾರ್ಥಿನಿಯರು ಮನೆಯಿಂದ ಓಡಿಹೋಗಿ ರೈಲು ಹತ್ತುವ ಮೊದಲೇ ಅವರನ್ನು ತಡೆಹಿಡಿಯಲಾಯಿತು. ಈ ಹುಡುಗಿಯರು ತಮ್ಮ ಪೋಷಕರ ಒಪ್ಪಿಗೆ ಪಡೆದು ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದರು. ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಗಳನ್ನು ರಚಿಸಿದರು, ಅದರಲ್ಲಿ ಹಲವಾರು ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಂಡರು. ಸದಾ…

Read More

Vivo V70 FE: ಭಾರತದಲ್ಲಿ 7000mAh ಬ್ಯಾಟರಿ, 200MP ಕ್ಯಾಮೆರಾದ ಹೊಸ ವಿವೋ V70 FE ಸ್ಮಾರ್ಟ್​ಫೋನ್ ಬಿಡುಗಡೆ

ಬೆಂಗಳೂರು (ಏ. 02): ಪ್ರಸಿದ್ಧ ವಿವೋ (Vivo) ಕಂಪನಿ ಭಾರತೀಯ ಮಾರುಕಟ್ಟೆಗೆ ಆಕರ್ಷಕ ಫೀಚರ್ಸ್​ನ ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದೆ. ಇದರ ಹೆಸರು ವಿವೋ V70 FE. ಮಿಡ್‌ರೇಂಜ್ ಬೆಲೆಯಲ್ಲಿ ಈ ಫೋನ್ ಅನಾವರಣಗೊಂಡಿದ್ದು, ಇದರಲ್ಲಿ ಹೆಚ್ಚಿನ ರೆಸಲ್ಯೂಶನ್ 200-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 7,000mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7360-ಟರ್ಬೊ ಚಿಪ್‌ಸೆಟ್ ಅನ್ನು ಬಳಸುತ್ತದೆ, AI ಇಮೇಜಿಂಗ್ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?,…

Read More

ಪ್ರಾಧ್ಯಾಪಕನ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ: ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಬರೆದ ಡೆತ್​​ನೋಟ್​​ನಲ್ಲಿ ಸ್ಫೋಟಕ ಮಾಹಿತಿ

ಚಿತ್ರದುರ್ಗ, ಏಪ್ರಿಲ್​​ 02: ಪ್ರಾಧ್ಯಾಪಕನ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ ಆರೋಪ ಸಂಬಂಧ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ BAMS ವಿದ್ಯಾರ್ಥಿನಿ‌ ನಿಖಿತಾ(23) ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತಷ್ಟು ವಿಚಾರಗಳು ಬಯಲಾಗಿವೆ. ರಾಜು, ಪತ್ನಿ ನಿಶಾ, ಕೆಲ ವಿದ್ಯಾರ್ಥಿನಿಯರ ಹೆಸರನ್ನು ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲವರ ವಿರುದ್ಧ ಕೇಸ್​​ ಕೂಡ ಆಗಿದೆ. ಈ ನಡುವೆ ಸಾವಿಗೂ ಮುನ್ನ ನಿಖಿತಾ ಬರೆದ ಡೆತ್​​ನೋಟ್​​ ಲಭ್ಯವಾಗಿದ್ದು, ಆಕೆ ಮಾನಸಿಕವಾಗಿ ತೀವ್ರ ನೊಂದಿದ್ದಳು ಎಂಬುದು…

Read More

ರಾಮಾಯಣ ಟೀಸರ್: ‘ಇದಕ್ಕಿಂತ ಆದಿಪುರುಷ್ ಎಷ್ಟೋ ಚೆನ್ನಾಗಿತ್ತು’ ಎಂದ ನೆಟ್ಟಿಗರು

ಭಾರತೀಯ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ರಾಮಾಯಣ’ (Ramayana) ಸಿನಿಮಾದ ಟೀಸರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಆದರೆ, ಟೀಸರ್ (Ramayana Teaser) ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ರಣಬೀರ್ ಕಪೂರ್ (Ranbir Kapoor) ಅವರ ಶ್ರೀರಾಮನ ಅವತಾರ ನೆಟ್ಟಿಗರ ವಿಮರ್ಶೆಗೆ ಗುರಿಯಾಗಿದೆ. ಅಲ್ಲದೇ, ಈ ಟೀಸರ್​ನ ವಿಎಫ್​ಎಕ್ಸ್ ದೃಶ್ಯಗಳು ಸಮಾಧಾನಕರವಾಗಿಲ್ಲ ಎಂದು ಜನರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಅದ್ದೂರಿ ಕಾರ್ಯಕ್ರಮದ…

Read More

ಪತಿ ಬಿಟ್ಟರೆ ಗತಿ ಇಲ್ಲದಂತಾಯ್ತೆ ಸಮಂತಾಗೆ? ಮುಂದೇನು?

ಸಮಂತಾ (Samantha) ದಕ್ಷಿಣದ ಸ್ಟಾರ್ ನಟಿ ಎನಿಸಿಕೊಂಡವರು, ನಯನತಾರಾ, ಅನುಷ್ಕಾ ಶೆಟ್ಟಿ ರೀತಿ ಸಮಂತಾ ಸಹ ತೆಲುಗು, ತಮಿಳಿನ ಸ್ಟಾರ್ ನಟಿಯಾಗಿ ಮೆರೆದವರು. ನಯನತಾರಾ, ಅನುಷ್ಕಾ ಶೆಟ್ಟಿ ಏರಿದ ಎತ್ತರಕ್ಕೆ ಅವರೂ ಏರಲಿದ್ದಾರೆ ಎಂದೇ ಸಿನಿಮಾ ಪ್ರೀಯರು ನಿರೀಕ್ಷಿಸಿದ್ದರು. ಸಮಂತಾಗೆ ಪ್ರತ್ಯೇಕ ಅಭಿಮಾನಿ ವರ್ಗವೂ ಇತ್ತು. ಆದರೆ ಇತ್ತೀಚೆಗೆ ಯಾಕೋ ಸಮಂತಾಗೆ ಅವಕಾಶಗಳೇ ಸಿಗುತ್ತಿಲ್ಲ. ಅವರ ಪತಿಯ ಹೊರತಾಗಿ ಇನ್ಯಾರೂ ಸಹ ಸಮಂತಾ ಜೊತೆಗೆ ಕೆಲಸ ಮಾಡಲು ತಯಾರೇ ಇಲ್ಲ ಎನ್ನಲಾಗುತ್ತಿದೆ. ಹೀಗಾಗಲು ಕಾರಣವೇನು? 2019ರ ವರೆಗೆ…

Read More

ಗ್ಯಾಸ್ ಕೊರತೆ: ಕೊಡಗಿನಲ್ಲಿ ಸೌದೆ-ಇದ್ದಿಲುಗೆ ಫುಲ್ ಡಿಮ್ಯಾಂಡ್: ಕೆಜಿಗೆ ಎಷ್ಟು ಗೊತ್ತಾ?

ಕೊಡಗು, ಏಪ್ರಿಲ್​ 02: ಗಲ್ಫ್ ರಾಷ್ಟ್ರದಲ್ಲಾಗುತ್ತಿರುವ ಯುದ್ಧದಿಂದಾಗಿ ಗ್ಯಾಸ್ ಪೂರೈಕೆಯಲ್ಲಿ (Gas Shortage) ವ್ಯತ್ಯಯವಾಗಿದೆ. ಪ್ರತಿಯೊಂದು ಕ್ಷೇತ್ರವೂ ಸೌದೆ ಒಲೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಸೌದೆ, ಇದ್ದಿಲುಗೆ ಭಾರೀ ಬೇಡಿಕೆ ಬಂದಿದೆ. ಗ್ಯಾಸ್​ ಕೊರತೆಯಿಂದಾಗಿ ಇದೀಗ ಸೌದೆ ಮತ್ತು ಇದ್ದಿಲು ಬಳಸಲಾಗುತ್ತಿದೆ. ಹಾಗಾಗಿ ಇದೀಗ ಸೀಸನ್​​ ಅಲ್ಲದಿದ್ದರೂ ಸೌದೆಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗುತ್ತಿದೆ. ಗ್ಯಾಸ್​ ಸಿಲಿಂಡರ್​ಗಳಿಲ್ಲದೇ ಪರದಾಟ ಇರಾನ್-ಇಸ್ರೆಲ್ ಯುದ್ಧದಿಂದಾಗಿ ಜಾಗತಿಕವಾಗಿ ಆಗಿರುವ ಅಡ್ಡಪರಿಣಾಮಗಳು ಒಂದೆರಡಲ್ಲ. ವಿಶೇಷವಾಗಿ ಅಡುಗೆ ಅನಿಲದ ಮೇಲೆ ಬಹಳಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ….

Read More

ಬೈ ಎಲೆಕ್ಷನ್​ ಪ್ರಚಾರಕ್ಕಿಳಿಯುವ ಮುನ್ನವೇ ಬಿಜೆಪಿ ವಿರುದ್ಧ ಯತ್ನಾಳ್ ವಾಗ್ದಾಳಿ

ವಿಜಯಪುರ, (ಏಪ್ರಿಲ್ 02): ಕಾಂಗ್ರೆಸ್​​ನ ಎಚ್​​ವೈ ಮೇಟಿ ನಿಧನದಿಂದ ತರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇದೇ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಎರಡು ರಾಷ್ಟ್ರೀಯ ಪಕ್ಷದಿಂದ ಭರ್ಜರಿ ಪ್ರಚಾರ ನಡೆದಿದೆ. ಬೇಸಿಗೆಯ ಬಿರು ಬಿಸಿಲು ಲೆಕ್ಕಿಸಿದೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಮತಬೇಟೆ ನಡೆಸಿದ್ದಾರೆ. ಇದೀಗ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಬಾಗಲಕೋಟೆ ಬೈ ಎಲೆಕ್ಷನ್​ ಅಖಾಡಕ್ಕಿಳಿದಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರಕ್ಕಿಳಿದಿದ್ದಾರೆ. ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ…

Read More

ನಾಪತ್ತೆಯಾಗಿದ್ದ ಕಾಂಗ್ರೆಸ್​​ ಮುಖಂಡ ಶವವಾಗಿ ಪತ್ತೆ: ನಡೀತಾ ಭೀಕರ ಕೊಲೆ?

ಚಿತ್ರದುರ್ಗ/ ಚಿಕ್ಕಮಗಳೂರು, ಏಪ್ರಿಲ್​​ 02: ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾಂಗ್ರೆಸ್​ ಮುಖಂಡನ ಶವ ಪತ್ತೆಯಾಗಿದೆ. ಮೃತರನ್ನು ರಸಗೊಬ್ಬರ ಅಂಗಡಿ ನಡೆಸುತ್ತಿದ್ದ ‘ಕೈ’​ ಮುಖಂಡ ಶಿವಲಿಂಗಪ್ಪ (50) ಎಂದು ಗುರುತಿಸಲಾಗಿದ್ದು, ಮೂರು ದಿನಗಳ ಹಿಂದೆ ಇವರು ನಾಪತ್ತೆಯಾಗಿದ್ದರು. ಇಂದು ಅವರ ಮೃತದೇಹ ಮುಖದ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ನಡೆಸಿರುವ  ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆಗೆ ಸಂಬಂಧಿಕರಿಂದ ಆಗ್ರಹ ವ್ಯಕ್ತವಾಗಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….

Read More