ಮದುವೆ, ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ 18 ಲಕ್ಷ ಪಂಗನಾಮ ಹಾಕಿದ ಮಹಿಳೆ: ಹಣ ಕೊಟ್ಟು ಕೆಟ್ಟ ಎಂಜಿನಿಯರ್ನಿಂದ ದೂರು ದಾಖಲು
ಬೆಂಗಳೂರು, ಏಪ್ರಿಲ್ 02: ಆನ್ ಲೈನ್ ಹೂಡಿಕೆ ಹೆಸರಲ್ಲಿ ನಡೆಯುವ ವಂಚನೆ ಪ್ರಕರಣಗಳು ಇನ್ನೊಂದು ಹಂತ ತಲುಪಿದ್ದು, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೋರ್ವಳು ಸ್ವಾಫ್ಟ್‌ವೇರ್ ಎಂಜಿನಿಯರ್ ಓರ್ವನಿಗೆ ಬರೋಬ್ಬರಿ 18 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಹಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನ (Bengaluru) ನ್ಯೂ ತಿಪ್ಪಸಂದ್ರದಲ್ಲಿ ನಡೆದಿದೆ. ಪ್ರೀತಿಯ ಹೆಸರಲ್ಲಿ ಮಹಿಳೆ ಹೆಣೆದ ಮೋಸದ ಬಲೆಗೆ ಸಿಲುಕಿ ಹಣ ಕಳೆದುಕೊಂಡ ಎಂಜಿನಿಯರ್ ಈಗ ನ್ಯಾಯಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. 2025ರ ನವೆಂಬರ್‌ನಲ್ಲಿ Flutrr ಡೇಟಿಂಗ್ ಆಪ್ ಮೂಲಕ…