All posts by nagaraj11081993

ಡಿವೈಡರ್​​ಗೆ ಗುದ್ದಿದ ಸಾರಿಗೆ ಬಸ್​​: ಅಪಘಾತದ ತೀವ್ರತೆಗೆ ಕಿತ್ತು ಬಂದ ಎಂಜಿನ್​​, ಮುಂಬದಿ ಚಕ್ರಗಳು!

ಡಿವೈಡರ್​​ಗೆ ಗುದ್ದಿದ ಸಾರಿಗೆ ಬಸ್​​: ಅಪಘಾತದ ತೀವ್ರತೆಗೆ ಕಿತ್ತು ಬಂದ ಎಂಜಿನ್​​, ಮುಂಬದಿ ಚಕ್ರಗಳು!

ಬೆಂಗಳೂರು, ಏಪ್ರಿಲ್​​ 02: ವೇಗವಾಗಿ ಬಂದ ಆಂಧ್ರ ಸಾರಿಗೆ ಬಸ್ (Bus) ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಶಿವಾನಂದ ಸರ್ಕಲ್ ಬಳಿ ಇಂದು ಮುಂಜಾನೆ ನಡೆದಿದೆ. ಅಧೋನಿಯಿಂದ ಅನಂತಪುರ ಮೂಲಕ ಬೆಂಗಳೂರಿಗೆ ಬರ್ತಿದ್ದ ಬಸ್​​ ಡಿವೈಡರ್​ಗೆ ಡಿಕ್ಕಿಯಾದ ರಭಸಕ್ಕೆ ಮುಂಭಾಗದ ಚಕ್ರ ಮತ್ತು ಇಂಜಿನ್ ಕಿತ್ತು ಬಂದಿದೆ. ಬಸ್​​ನಲ್ಲಿರುವ ಪ್ರಯಾಣಿಕರೆಲ್ಲವೂ ಸುರಕ್ಷಿತವಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಹೈಗ್ರೌಂಡ್ಸ್ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

 

 

Source link

ನನ್ನ ಬೆಂಬಲ ದಳಪತಿ ವಿಜಯ್ ಪಕ್ಷಕ್ಕೆ, ರಾಜಕೀಯಕ್ಕೆ ಸೇರಲು ರೆಡಿ ಎಂದ ಜನಪ್ರಿಯ ನಟಿ

ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ತಿಂಗಳ 23ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಪ್ರಚಾರದಲ್ಲಿ ನಿರತವಾಗಿವೆ. ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಪ್ರಮುಖ ಪಕ್ಷಗಳ ಜೊತೆಗೆ, ನಾಯಕ ದಳಪತಿ ವಿಜಯ್ ಕೂಡ ಈ ಬಾರಿ ಕಣದಲ್ಲಿದ್ದಾರೆ. ಟಿವಿಕೆ ಪಕ್ಷದ ಪರವಾಗಿ ವಿಜಯ್ ಈಗಾಗಲೇ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಮತ್ತೊಂದೆಡೆ, ಚಲನಚಿತ್ರೋದ್ಯಮದ ಅನೇಕ ಸೆಲೆಬ್ರಿಟಿಗಳು ಸಹ ಈ ಚುನಾವಣೆಗೆ ಕಣದಲ್ಲಿದ್ದಾರೆ. ಈ ಸಂದರ್ಭದಲ್ಲಿ, ಜನಪ್ರಿಯ ನಾಯಕಿ ವಾಣಿ ಭೋಜನ್ ಅವರು ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಬೆಂಬಲಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಇತ್ತೀಚೆಗೆ, ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅನೇಕ ಆಸಕ್ತಿದಾಯಕ ವಿಷಯಗಳಿಗೆ ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ, ನೀವು ಯಾವ ನಾಯಕನೊಂದಿಗೆ ನಟಿಸಲು ಬಯಸುತ್ತೀರಿ ಎಂದು ಕೇಳಿದಾಗ, ವಾಣಿ ಭೋಜನ್ ಉತ್ತರಿಸಿದ್ದಾರೆ. ‘ನಾನು ನಾಯಕ ವಿಜಯ್ ದಳಪತಿ ಅವರ ದೊಡ್ಡ ಅಭಿಮಾನಿ. ಅವರ ಜೊತೆಗೆ ನಾಯಕಿಯಾಗಿ ನಟಿಸುವ ಆಸೆ ನನಗಿತ್ತು. ಆದರೆ ಈಗ ವಿಜಯ್ ನಟನೆಯನ್ನು ನಿಲ್ಲಿಸಿದ್ದಾರೆ. ಅವರು ರಾಜಕೀಯ ಪ್ರವೇಶಿಸಿರುವುದರಿಂದ, ವಿಜಯ್ ಅವರೊಂದಿಗೆ ನಟಿಸುವ ಅವಕಾಶ ಸಿಗಲಿಲ್ಲ. ಆದಾಗ್ಯೂ, ಅವರ ರಾಜಕೀಯ ಪ್ರವೇಶವನ್ನು ನಾನು ಸ್ವಾಗತಿಸುತ್ತೇನೆ. ವಿಜಯ್ ಟಿವಿಕೆ ಪಕ್ಷವನ್ನು ಪ್ರಾರಂಭಿಸುತ್ತಿರುವುದು ನನಗೆ ಸಂತೋಷವಾಗಿದೆ’ ಎಂದು ವಾಣಿ ಭೋಜನ್ ಹೇಳಿದರು.

ಟಿವಿಕೆ ವಿಜಯ್ ಪಕ್ಷ ಸೇರಲು ಯೋಜಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ವಾಣಿ ಭೋಜನ್, ‘ನಾನು ವಿಜಯ್ ಅವರ ಅಭಿಮಾನಿ. ಅವಕಾಶ ಸಿಕ್ಕರೆ, ನಾನು ಖಂಡಿತವಾಗಿಯೂ ಅವರ ಪಕ್ಷ ಸೇರುತ್ತೇನೆ. ಅವರು ಯಾರೇ ಆಗಿರಲಿ, ಈ ಚುನಾವಣೆಯಲ್ಲಿ ನನ್ನ ಬೆಂಬಲ ವಿಜಯ್ ಅವರಿಗೆ” ಎಂದು ಪ್ರತಿಕ್ರಿಯಿಸಿದರು. ಪ್ರಸ್ತುತ, ಈ ನಾಯಕಿಯ ಕಾಮೆಂಟ್‌ಗಳುವೈರಲ್ ಆಗುತ್ತಿವೆ.

ಇದನ್ನೂ ಓದಿ: ಪತಿ ವಿಜಯ್ ತೊಡೆಯಮೇಲೆ ಕುಳಿತು ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ

ತಮಿಳುನಾಡಿನಲ್ಲಿ ಸ್ಟಾರ್ ನಾಯಕಿಯಾಗಿ ಹೊರಹೊಮ್ಮುತ್ತಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Video: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ತಂದೆ ಮಗಳ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಗಳ ಪಾಲಿಗೆ ಅಪ್ಪ (father) ಎಲ್ಲವೂ ಆಗಿರುತ್ತಾನೆ. ಇತ್ತ ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಆಕೆಗಿಂತ ದೊಡ್ಡ ಪ್ರಪಂಚ ಬೇರೆ ಇಲ್ಲ. ಮಗಳ ಖುಷಿಯಲ್ಲೇ ತನ್ನ ಖುಷಿ ಕಾಣುವ ತಂದೆಯ ಹೃದಯ ಸ್ಪರ್ಶಿ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ  ಪುಟಾಣಿಯೊಂದು ನಡುರಸ್ತೆಯಲ್ಲೇ ತಂದೆಯ ಮೇಲೆ ಕೋಪಿಸಿಕೊಂಡಿದೆ. ತಂದೆ ಎಷ್ಟೇ ರಮಿಸಿದ್ರೂ ಈ ಪುಟಾಣಿಯ ಕೋಪ ಮಾತ್ರ ಕಡಿಮೆಯಾಗಿಲ್ಲ. ಈ ಮುದ್ದಾದ ವಿಡಿಯೋ ನೆಟ್ಟಿಗರ ಮೊಗದಲ್ಲಿ ನಗುತರಿಸಿದೆ.

republicmag.pk ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಂದೆ ಮಗಳ ಬಾಂಧವ್ಯ ಕಾಣಬಹುದು. ಪುಟಾಣಿಯೊಂದು ನಡುರಸ್ತೆಯಲ್ಲೇ ಕೋಪಿಸಿಕೊಂಡಿದೆ. ಇತ್ತ ತಂದೆಯೂ ತನ್ನ ಮಗಳನ್ನು ರಮಿಸಿ ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದಾನೆ. ಆದರೆ ಈ ಪುಟ್ಟ ಮಗಳು ಮಾತ್ರ ತಂದೆ ಮಾತನ್ನು ಕೇಳುತ್ತಲೇ ಇಲ್ಲ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಎಷ್ಟು ಚಂದ ಈ ಬಾಂಧವ್ಯ; ಅಪ್ಪನಿಗೆ ತನ್ನ ಪುಟ್ಟ ಕೈಗಳಿಂದ ಕೈ ತುತ್ತು ನೀಡಿದ ಪುಟಾಣಿ

ಈ ವಿಡಿಯೋ ಮೂವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುದ್ದಾಗಿದೆ ಈ ದೃಶ್ಯ ಎಂದರೆ, ಮತ್ತೊಬ್ಬರು, ಮಗಳನ್ನು ಸಮಾಧಾನ ಪಡಿಸಲು ತಂದೆಗೆ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.. ಇನ್ನೊಬ್ಬರು, ಈ ಚೋಟುದ್ದ ಪುಟಾಣಿ ಕೋಪ ಎಷ್ಟಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

‘ರಾಮಾಯಣ’ ಟೀಸರ್ ಅಲ್ಲಿ ಯಶ್ ಲುಕ್ ಹೇಗಿದೆ? ಇಲ್ಲಿದೆ ಫೋಟೋಸ್

Source link

ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ: ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು, ಬೇಸರದಿಂದ ತಾಯಿ ಆತ್ಮಹತ್ಯೆ

ಬೆಂಗಳೂರು, ಏಪ್ರಿಲ್ 2: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore) ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಬಕೆಟ್ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದೆ. ಮಗುವಿನ ಸಾವಿಗೆ ನಾನೇ ಕಾರಣ ಎಂಬ ಅಪರಾಧ ಪ್ರಜ್ಞೆಯಿಂದ ಮನನೊಂದ ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದು, ಕೆಲಸ ಮುಗಿಸಿ ಮನೆಗೆ ಬಂದ ಆಕೆಯ ಪತಿಗೆ ಆಘಾತ ಕಾದಿತ್ತು. ಈ ದಾರುಣ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ.

ಘಟನೆಯ ವಿವರ

ಮೃತರನ್ನು ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ (29) ಮತ್ತು ಅವರ 11 ತಿಂಗಳ ಗಂಡು ಮಗು ಅಗಸ್ತ್ಯ ಎಂದು ಗುರುತಿಸಲಾಗಿದೆ. ಪ್ರತಿಭಾ ಅವರು ಮನೆಯಿಂದಲೇ ಕೆಲಸ (Work From Home) ಮಾಡುತ್ತಿದ್ದರು. ಗುರುವಾರ ಸಂಜೆ ಟೆರೇಸ್ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಪ್ರತಿಭಾ ಅವರು ಮೇಲಕ್ಕೆ ಹೋಗಿದ್ದಾಗ ದುರಂತ ಸಂಭವಿಸಿದೆ. ತಾಯಿ ಟೆರೇಸ್ ಮೇಲೆ ಹೋಗಿದ್ದ ಸಮಯದಲ್ಲಿ ಮಗು ಆಟವಾಡುತ್ತಾ ಬಚ್ಚಲು ಮನೆಗೆ ಹೋಗಿದೆ. ಅಲ್ಲಿ ನೀರಿನಿಂದ ತುಂಬಿದ್ದ ಬಕೆಟ್‌ನಲ್ಲಿ ಮುಳುಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಬಟ್ಟೆ ತಂದು ಕೆಳಗೆ ಬಂದ ಪ್ರತಿಭಾಗೆ ಮಗುವಿನ ಸ್ಥಿತಿ ಕಂಡು ದಿಕ್ಕು ತೋಚದಂತಾಗಿದೆ. ಮಗು ಬಾರದ ಲೋಕಕ್ಕೆ ಪಯಣಿಸಿರುವುದು ಖಚಿತವಾದಾಗ, ಪ್ರತಿಭಾ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ.

ಡೆತ್ ನೋಟ್‌ನಲ್ಲಿ ಬಿಚ್ಚಿಟ್ಟ ಸತ್ಯ

ರಾತ್ರಿ ಪತಿ ಮಹಾಂತೇಶ್ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ತಮ್ಮ ಬಳಿಯಿದ್ದ ಕೀಲಿಯಿಂದ ಬಾಗಿಲು ತೆರೆದು ಒಳಹೋದಾಗ ಪ್ರತಿಭಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗು ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿತ್ತು.

ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್​​ನಿಂದ ಪತಿಗೆ ಸಾವಿನ ರಹಸ್ಯ ಗೊತ್ತಾಗಿದೆ. ‘ನನ್ನ ಮಗುವಿನ ಸಾವಿಗೆ ನಾನೇ ಕಾರಣ, ಅವನನ್ನು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪ್ರತಿಭಾ ಡೆತ್​ನೋಟ್​​ನಲ್ಲಿ ಬರೆದಿಟ್ಟಿದ್ದರು. ನೇಣಿಗೆ ಶರಣಾಗುವ ಮುನ್ನ ಪ್ರತಿಭಾ ಅವರು 15 ಮಾತ್ರೆಗಳನ್ನು ನುಂಗಿ, ಕೈ ಕುಯ್ದುಕೊಂಡು ಸಾಯುವುದಕ್ಕೆ ಯತ್ನಿಸಿದ್ದರು. ಆದರೆ ರಕ್ತ ಬಾರದ ಕಾರಣ ಕೊನೆಗೆ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ಇಂದಿರಾಗಾಂಧಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ವರ್ಷವಿಡೀ ಬೆಡ್ ಹಿಡಿದಿದ್ದ ಬಾಲಕ; ಖಾಸಗಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖ!

ಚಂದ್ರಾಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

NASA Artemis Rocket Launch: 54 ವರ್ಷಗಳ ಬಳಿಕ ಚಂದ್ರನೆಡೆಗೆ ಮತ್ತೆ ಮಾನವನ ಹೆಜ್ಜೆ, 4 ಗಗನಯಾತ್ರಿಗಳ ಕಳುಹಿಸಿದ ನಾಸಾ

ವಾಷಿಂಗ್ಟನ್, ಏಪ್ರಿಲ್ 02: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, 54 ವರ್ಷಗಳ ಬಳಿಕ ಚಂದ್ರನೆಡೆಗೆ ಗಗನಯಾತ್ರಿಗಳನ್ನು ಕಳುಹಿಸಿದೆ. ನಾಸಾ ಈ ನಾಲ್ವರು ಗಗನಯಾತ್ರಿಗಳಿಗೆ ಫ್ಲೋರಿಡಾದಲ್ಲಿ ತರಬೇತಿ ನೀಡಿ ನಂತರ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಈ ಗಗನಯಾತ್ರಿಗಳಲ್ಲಿ ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್‌ಗಳಾದ ವಿಕ್ಟರ್ ಗ್ಲೋವರ್ ಮತ್ತು ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಸೇರಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ), ಮುಂದಿನ ಕೆಲವು ವರ್ಷಗಳಲ್ಲಿ ಚಂದ್ರನ ಮೇಲೆ ಶಾಶ್ವತ ನೆಲೆಯನ್ನು ಸ್ಥಾಪಿಸಲು ಯೋಜಿಸಿದೆ.

1972 ರ ನಂತರ ಚಂದ್ರನನ್ನು ತಲುಪಿದ ಮೊದಲ ಮಾನವಸಹಿತ ಮಿಷನ್ (ಅಪೊಲೊ 17). ಸರಿಸುಮಾರು 10 ದಿನಗಳ ಈ ಮಿಷನ್ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ಮತ್ತು ಓರಿಯನ್ ಬಾಹ್ಯಾಕಾಶ ನೌಕೆಯನ್ನು ಬಳಸುತ್ತದೆ. ನಾಸಾದ ಆರ್ಟೆಮಿಸ್ II ಮಿಷನ್ 10 ದಿನಗಳದ್ದಾಗಿ. ಇದರರ್ಥ ಏಪ್ರಿಲ್ 1 ರಂದು ಉಡಾವಣೆಯಾಗಿದ್ದು, ಏಪ್ರಿಲ್ 10-11 ರ ವೇಳೆಗೆ ಮಿಷನ್ ಭೂಮಿಗೆ ಮರಳಬಹುದು.

ಈ ಮಿಷನ್ ನಲ್ಲಿ ನಾಲ್ಕು ಜನ ಸಿಬ್ಬಂದಿ ಇದ್ದು, ಇವರು ಚಂದ್ರನ ಮೇಲೆ ಇಳಿಯುವುದಿಲ್ಲ, ಬದಲಿಗೆ ಭೂಮಿಗೆ ಹಿಂತಿರುಗುವ ಮೊದಲು ಚಂದ್ರನ ಸುತ್ತ ಸುತ್ತಲಿದ್ದಾರೆ. ಭವಿಷ್ಯದಲ್ಲಿ ಮಾನವನನ್ನು ಚಂದ್ರನ ಮೇಲೆ ಇಳಿಸುವ ಮಿಷನ್‌ಗೆ ಮುನ್ನ, ಒರಾಯನ್ ನೌಕೆಯ ಜೀವ ರಕ್ಷಕ ವ್ಯವಸ್ಥೆಗಳು ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ಪರೀಕ್ಷಿಸುವುದು ಇದರ ಮುಖ್ಯ ಗುರಿಯಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಾಮಾಯಣ’ ಟೀಸರ್: ದೃಶ್ಯ ವೈಭವದಲ್ಲಿ ಮಿಂದೆದ್ದ ಹಿಂದೂ ಪುರಾಣ ಪುಣ್ಯ ಕತೆ

ಭಾರತ ಚಿತ್ರರಂಗದ (Indian Film) ಅತ್ಯಂತ ದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ದ (Ramayana) ಟೀಸರ್ ಇಂದು (ಏಪ್ರಿಲ್ 02) ಬಿಡುಗಡೆ ಆಗಿದೆ. ಹನುಮಜಯಂತಿಯಂದು ‘ರಾಮಾಯಣ’ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರೆಗೆ ಹಲವಾರು ಭಾರಿ, ಹಲವಾರು ಭಾಷೆಗಳಲ್ಲಿ ರಾಮಾಯಣ ಕತೆ ಸಿನಿಮಾ ಆಗಿ ಮೂಡಿ ಬಂದಿದೆ. ಪ್ರತಿಬಾರಿಯೂ ಭಿನ್ನ ರೀತಿಯಲ್ಲಿ ಪುರಾಣ ಪುಣ್ಯ ಕತೆಯನ್ನು ಪ್ರಸ್ತುತ ಪಡಿಸಲಾಗಿದೆ. ಇದೀಗ ಬರಲಿರುವ ‘ರಾಮಾಯಣ’ ಈ ವರೆಗೆ ಭಾರತೀಯ ಚಿತ್ರರಂಗ ಮಾಡಿದ ಸಾಹಸಗಳಲ್ಲಿಯೇ ಅದ್ಧೂರಿಯಾದ ಸಾಹಸ ಇದಾಗಿದೆ. ಟೀಸರ್​​ನಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಆಧುನಿಕ ತಂತ್ರಜ್ಞಾನದ ಸ್ಪರ್ಷದಲ್ಲಿ ರಾಮಾಯಣವನ್ನು ಅದ್ಧೂರಿಯಾಗಿ ತೆರೆಗೆ ತರುವ ಪ್ರಯತ್ನ ಚಿತ್ರತಂಡ ಮಾಡಿದೆ. ಇದೀಗ ಬಿಡುಗಡೆ ಆಗಿರುವ 2:38 ನಿಮಿಷದ ಟೀಸರ್​ನ ಪ್ರತಿ ದೃಶ್ಯದಲ್ಲಿಯೂ ಆ ಅದ್ಧೂರಿತನ ಎದ್ದು ಕಾಣುತ್ತಿದೆ. ಅದ್ಧೂರಿತನದ ಜೊತೆಗೆ ನಿರ್ದೇಶಕರು ವಾಲ್ಮಿಕಿ ರಾಮಾಯಣದ ಕತೆಗೆ ನಿಷ್ಠವಾಗಿರುವುದು ಸಹ ಗೋಚರಿಸುತ್ತಿದೆ.

ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ರಾಮನ ಪಾತ್ರವನ್ನಷ್ಟೆ ಪ್ರಮುಖವಾಗಿ ತೋರಿಸಲಾಗಿದೆ. ಶ್ರೀರಾಮನ ಬಾಲಕಾಂಡ, ಅರಣ್ಯಕಾಂಡದ ಕತೆಯ ಭಾಗಗಳನ್ನು ಮಾತ್ರವೇ ಟೀಸರ್​​ನಲ್ಲಿ ಸೇರಿಸಿರುವುದು ತಿಳಿದು ಬರುತ್ತಿದೆ. ರಾಮನ ಪಟ್ಟಾಭಿಷೇಕದ ಮುಂಚಿನ ಕತೆ, ವನವಾಸ, ಅರಣ್ಯದಲ್ಲಿ ಸಾಹಸಗಳು ಇನ್ನಿತರೆ ದೃಶ್ಯಗಳು ಟೀಸರ್​​ನಲ್ಲಿವೆ. ವಿಶೇಷವಾಗಿ ರಾಮನ ವಿಚಿತ್ರ ಜೀವಿಗಳೊಟ್ಟಿಗೆ ಸೆಣೆಸಾಡುತ್ತಿರುವ ಕೆಲವು ದೃಶ್ಯಗಳು ಸಹ ಟೀಸರ್​​ನಲ್ಲಿವೆ.

ರಣ್​​ಬೀರ್ ಕಪೂರ್, ಶ್ರೀರಾಮನ ಪಾತ್ರದಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ಅವರ ಮುಖ, ಮೈಕಟ್ಟು ರಾಮನ ಪಾತ್ರಕ್ಕೆ ಚೆನ್ನಾಗಿ ಹೊಂದಿರುವಂತೆ ತೋರುತ್ತಿದೆ. ಆದರೆ ಟೀಸರ್​​ನಲ್ಲಿ ಅವರ ಪಾತ್ರದ ಹೊರತಾಗಿ ಇನ್ಯಾರ ಪಾತ್ರವನ್ನೂ ಸಹ ತೋರಿಸಿಲ್ಲ. ಸೀತೆ, ಲಕ್ಷ್ಮಣನ ಪಾತ್ರವನ್ನೂ ಸಹ ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ತೋರಿಸಿಲ್ಲ. ಯಶ್ ಅವರ ರಾವಣನ ಪಾತ್ರ ಟೀಸರ್​ನ ಅಂತ್ಯದಲ್ಲಿ ಬರುತ್ತದೆಯಾದರೂ ಯಶ್ ಪಾತ್ರವನ್ನೂ ಸಹ ಹಿಂದಿನಿಂದ ಮಾತ್ರವೇ ತೋರಿಸಲಾಗಿದೆ. ಜೊತೆಗೆ ರಾವಣನ ಪುಷ್ಪಕವಿಮಾನವನ್ನು ಸಹ ತೋರಿಸಲಾಗಿದೆ.

ಒಟ್ಟಾರೆಯಾಗಿ ಈಗ ಬಿಡುಗಡೆ ಆಗಿರುವ ಟೀಸರ್​​, ‘ರಾಮಾಯಣ’ ಕತೆ ಭಾರತೀಯ ಈ ಹಿಂದೆ ನೋಡಿದ ಇನ್ಯಾವುದೇ ರಾಮಾಯಣ ಸಿನಿಮಾ ಅಥವಾ ಧಾರಾವಾಹಿಗಳಿಗಿಂತಲೂ ಬಲು ಅದ್ಧೂರಿಯಾಗಿ ಇರಲಿದೆ ಎಂಬುದಂತೂ ಖಾತ್ರಿ. ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡಿ ನಿತೀಶ್ ತಿವಾರಿ ನಿರ್ದೇಶನ ಮಾಡಿರುವ ಈ ಸಿನಿಮಾ ಇದೇ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಗನ ರೋಗ ಗುಣಪಡಿಸಲು ಮಾಟಗಾತಿಯ ಮಾತು ನಂಬಿ ಮಗಳನ್ನೇ ಬಲಿಕೊಟ್ಟ ತಾಯಿ

ಜಾರ್ಖಂಡ್, ಏಪ್ರಿಲ್ 02: ಮಾಟಗಾತಿಯ ಮಾತು ಕೇಳಿ ಮಹಿಳೆಯೊಬ್ಬಳು ಮಗನ ರೋಗ(Disease) ಗುಣಪಡಿಸಲು ಮಗಳನ್ನೇ ಬಲಿಕೊಟ್ಟಿರುವ ಘಟನೆ ಜಾರ್ಖಂಡ್​​ನಲ್ಲಿ ನಡೆದಿದೆ. ಬಾಲಕಿಯ ತಾಯಿ ಆಕೆಯ ಪ್ರಿಯಕರ ಸೇರಿ ಮೂವರನ್ನು ಬಂಧಿಸಲಾಗಿದೆ. ಮಾರ್ಚ್​ 24ರ ರಾತ್ರಿ ಕುಸುಂಭ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆ ದಿನ ಸಂಜೆ ರಾಮ ನವಮಿ ಮೆರವಣಿಗೆ ನಡೆಯುತ್ತಿತ್ತು ಅಂದು ಬಾಲಕಿ ಕಾಣೆಯಾಗಿದ್ದಳು. ಮರುದಿನ ಬೆಳಗ್ಗೆ 8.30 ರ ಸುಮಾರಿಗೆ ಸ್ಥಳೀಯ ಮಾಧ್ಯಮಿಕ ಶಾಲೆಯ ಹಿಂಭಾಗದ ಬಿದಿರಿನ ತೋಪಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.

ಸಂತ್ರಸ್ತೆಯ ತಾಯಿ ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ, ಆರಂಭದಲ್ಲಿ ಧನೇಶ್ವರ ಪಾಸ್ವಾನ್ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಆದಾಗ್ಯೂ, ತನಿಖೆ ಶೀಘ್ರದಲ್ಲೇ ಬೇರೆಯದೇ ತಿರುವು ಪಡೆದುಕೊಂಡಿತು.

ಜಾರ್ಖಂಡ್ ಪೊಲೀಸ್ ಮಹಾನಿರ್ದೇಶಕರು ಮತ್ತು ಹಜಾರಿಬಾಗ್ ಪೊಲೀಸ್ ವರಿಷ್ಠಾಧಿಕಾರಿ ಅವರ ನಿರ್ದೇಶನದ ಮೇರೆಗೆ ಮಾರ್ಚ್ 26 ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಯಿತು. ತನಿಖೆಯ ಸಮಯದಲ್ಲಿ, ಆಘಾತಕಾರಿ ವಿಚಾರಗಳು ಬಹಿರಂಗಗೊಂಡಿದ್ದು, ಬಾಳಕಿ ಸಾವಿಗೆ ಆಕೆಯ ತಾಯಿಯೇ ಮೂಲ ಕಾರಣ ಎಂಬುದು ಅರಿವಾಗಿದೆ.

ಮತ್ತಷ್ಟು ಓದಿ: ಸಣ್ಣ ವಯಸ್ಸಿನ ವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಈ ಅಭ್ಯಾಸಗಳು ಕಾರಣ!

‘ಭಗ್ತಿನ್’ ಎಂದೂ ಕರೆಯಲ್ಪಡುವ 55 ವರ್ಷದ ಶಾಂತಿ ದೇವಿ ಎಂಬಾಕೆ, ತಾಂತ್ರಿಕ ಆಚರಣೆಗಳನ್ನು ನಡೆಸುವುದಾಗಿ ಹೇಳಿಕೊಂಡಿದ್ದು, ಆರೋಪಿ ಮಹಿಳೆ ಬಳಿ ನಿನ್ನ ಮಗನ ಅನಾರೋಗ್ಯವನ್ನು ಗುಣಪಡಿಸಲು ಮತ್ತು ಕುಟುಂಬದ ಸಮಸ್ಯೆಗಳನ್ನು ನಿವಾರಿಸಲು ನರಬಲಿ ಕೊಡಲೇಬೇಕು ಎಂದು ತಾಂತ್ರಿಕ ಹೇಳಿದಾಗ ಅದನ್ನೇ ಸತ್ಯ ಎಂದು ಬಾಲಕಿ ತಾಯಿ ನಂಬಿದ್ದಳು.

ಕೊನೆಗೆ ಮಗಳನ್ನೇ ಬಲಿಕೊಟ್ಟಿದ್ದಾಳೆ. ಮೂರು ತಿಂಗಳಿನಿಂದ ತಂತ್ರಿಯೊಂದಿಗೆ ಸಂಪರ್ಕದಲ್ಲಿದ್ದಳು.
ಪ್ರಿಯಕರ ಭೀಮ್ ರಾಮ್ (40) ಜೊತೆ, ಪೂಜೆಯ ನೆಪದಲ್ಲಿ ಬಾಲಕಿಯನ್ನು ತಂತ್ರಿಯ ಮನೆಗೆ ಕರೆದೊಯ್ದರು. ಆರಂಭಿಕ ವಿಧಿವಿಧಾನಗಳ ನಂತರ, ಮಗುವನ್ನು ಹತ್ತಿರದ ಬಿದಿರಿನ ತೋಪಿಗೆ ಕರೆದೊಯ್ಯಲಾಯಿತು. ಭೀಮ್ ರಾಮ್ ಬಾಲಕಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ತಾಯಿ ಬಾಲಕಿ ಕಷ್ಟಪಡುತ್ತಿದ್ದಂತೆ ಆಕೆಯ ಕಾಲುಗಳನ್ನು ಹಿಡಿದಿದ್ದಾಳೆ ಎಂದು ಆರೋಪಿಸಲಾಗಿದೆ.

ಬಾಲಕಿಯ ಗುಪ್ತಾಂಗಗಳೊಳಗೆ ಮರದ ಕೋಲನ್ನು ಹಾಕಿದ್ದಾರೆ. ಭೀಮ್ ರಾಮ್ ಆಕೆಯ ತಲೆಗೆ ಹೊಡೆದು ರಕ್ತವನ್ನು ತೆಗೆದುಕೊಂಡಿದ್ದಾನೆ. ನಂತರ ಶವವನ್ನು ಸ್ಥಳದಲ್ಲಿಯೇ ಬಿಡಲಾಯಿತು. ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುರುಡು ನಂಬಿಕೆ ಮತ್ತು ಹಾನಿಕಾರಕ ಮೂಢನಂಬಿಕೆಗಳಿಂದ ಉಂಟಾಗುವ ಅಪಾಯಗಳಿಗೆ ಈ ಅಪರಾಧವು ಒಂದು ಭೀಕರ ಉದಾಹರಣೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Tulasi Puja: ತುಳಸಿ ಗಿಡ ನೆಡುವಾಗ ಈ ತಪ್ಪು ಮಾಡಲೇಬೇಡಿ; ವಾಸ್ತು ತಜ್ಞರ ಸಲಹೆ ಇಲ್ಲಿದೆ

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಈ ಗಿಡವನ್ನು ನೆಡಲು ಗುರುವಾರ ಮತ್ತು ಶುಕ್ರವಾರಗಳು ಅತ್ಯಂತ ಶ್ರೇಷ್ಠವಾದ ದಿನಗಳಾಗಿವೆ. ಗುರುವಾರವು ಜಗತ್ಪಾಲಕನಾದ ವಿಷ್ಣುವಿಗೆ ಹಾಗೂ ಶುಕ್ರವಾರವು ಸಂಪತ್ತಿನ ದೇವತೆಯಾದ ಲಕ್ಷ್ಮಿಗೆ ಸಮರ್ಪಿತವಾಗಿರುವುದರಿಂದ, ಈ ದಿನಗಳಲ್ಲಿ ತುಳಸಿಯನ್ನು ನೆಡುವುದರಿಂದ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ. ಅದರಲ್ಲೂ ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ತುಳಸಿಯನ್ನು ನೆಟ್ಟು ಪೂಜಿಸುವುದು ಅನಂತ ಪುಣ್ಯವನ್ನು ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ನಿಷೇಧಿತ ದಿನಗಳು ಮತ್ತು ಮುನ್ನೆಚ್ಚರಿಕೆ:

ವಾಸ್ತು ಶಾಸ್ತ್ರದ ಪ್ರಕಾರ, ಎಲ್ಲಾ ದಿನಗಳಲ್ಲೂ ತುಳಸಿಯನ್ನು ನೆಡುವುದು ಶುಭವಲ್ಲ. ಸೋಮವಾರ, ಬುಧವಾರ ಮತ್ತು ಶನಿವಾರದಂದು ಹೊಸದಾಗಿ ಗಿಡವನ್ನು ನೆಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಭಾನುವಾರ ಮತ್ತು ಏಕಾದಶಿ ತಿಥಿಗಳಂದು ತುಳಸಿ ಗಿಡವನ್ನು ಸ್ಪರ್ಶಿಸಬಾರದು ಅಥವಾ ಹೊಸದಾಗಿ ನೆಡಬಾರದು. ಈ ನಿಯಮಗಳನ್ನು ಪಾಲಿಸುವುದರಿಂದ ಗಿಡದ ಪಾವಿತ್ರ್ಯತೆ ಉಳಿಯುತ್ತದೆ ಮತ್ತು ದೇವಿಯ ಕೃಪೆಗೆ ಪಾತ್ರರಾಗಬಹುದು.

ದೈನಂದಿನ ಪೂಜಾ ನಿಯಮಗಳು:

ಮನೆಯಲ್ಲಿ ತುಳಸಿ ಗಿಡ ಇದ್ದರೆ ಪ್ರತಿದಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಬೆಳಿಗ್ಗೆ ಸ್ನಾನ ಮಾಡಿದ ನಂತರವೇ ತುಳಸಿಗೆ ನೀರನ್ನು ಅರ್ಪಿಸಬೇಕು. ಆದರೆ, ಭಾನುವಾರ ಮತ್ತು ಏಕಾದಶಿಯ ದಿನಗಳಲ್ಲಿ ತುಳಸಿ ಗಿಡಕ್ಕೆ ನೀರು ಸುರಿಯುವುದನ್ನು ಶಾಸ್ತ್ರಗಳು ನಿರ್ಬಂಧಿಸಿವೆ. ಪ್ರತಿದಿನ ಸಂಜೆ ತುಳಸಿ ಕಟ್ಟೆಯ ಬಳಿ ತುಪ್ಪ ಅಥವಾ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿರುವ ವಾಸ್ತು ದೋಷಗಳು ನಿವಾರಣೆಯಾಗಿ, ಸಕಾರಾತ್ಮಕ ಶಕ್ತಿಯು ಆಕರ್ಷಿತವಾಗುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಸ್ಥಾನ ಮತ್ತು ನಿರ್ವಹಣೆ:

ತುಳಸಿ ಗಿಡವನ್ನು ಯಾವಾಗಲೂ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸುವುದು ಶ್ರೇಷ್ಠ. ತುಳಸಿ ಕಟ್ಟೆಯ ಸುತ್ತಮುತ್ತಲಿನ ಜಾಗವು ಸದಾ ಸ್ವಚ್ಛವಾಗಿರಬೇಕು; ಅಲ್ಲಿ ಪಾದರಕ್ಷೆಗಳನ್ನಾಗಲಿ ಅಥವಾ ಯಾವುದೇ ಕೊಳಕು ವಸ್ತುಗಳನ್ನಾಗಲಿ ಇಡಬಾರದು. ಒಂದು ವೇಳೆ ಗಿಡವು ಒಣಗಿ ಹೋದರೆ, ಅದನ್ನು ಮನೆಯಲ್ಲಿಯೇ ಇಟ್ಟುಕೊಳ್ಳದೆ ತಕ್ಷಣ ತೆಗೆದು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು, ಏಕೆಂದರೆ ಒಣಗಿದ ಗಿಡವನ್ನು ಮನೆಯಲ್ಲಿ ಇಡುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಈ ನಿಯಮಗಳನ್ನು ಪಾಲಿಸಿದರೆ ಲಕ್ಷ್ಮಿ ಮತ್ತು ನಾರಾಯಣರ ಆಶೀರ್ವಾದ ಸದಾ ಇರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಸರಿಗಟ್ಟಿದ ಸಾಹಿಬ್​ಝಾದ ಫರ್ಹಾನ್

Source link