All posts by nagaraj11081993

ಕೊಲ್ಲೂರು ದೇವಸ್ಥಾನಕ್ಕೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ – Kannada News | Tamil Nadu CM Joseph Vijay Kollur Visit: Purnakumbha Welcome Assured, Says Priest Nityananda Adiga

ಉಡುಪಿ, ಜೂನ್ 12: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಜೋಸೆಫ್ ವಿಜಯ್ (Joseph Vijay) ಇಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಮಧ್ಯಾಹ್ನ 3:00 ಗಂಟೆಗೆ ಸಿಎಂ ವಿಜಯ್ ಅವರು ಕೊಲ್ಲೂರಿಗೆ ಆಗಮಿಸಲಿದ್ದು, ಈ ಕುರಿತು ದೇವಸ್ಥಾನದ ಅರ್ಚಕ ನಿತ್ಯಾನಂದ ಅಡಿಗ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಅರ್ಚಕ ವೃಂದ ಹಾಗೂ ಸಿಬ್ಬಂದಿ ವರ್ಗಕ್ಕೆ ಮೌಖಿಕ ಮತ್ತು ಲಿಖಿತ ಆದೇಶಗಳನ್ನು ನೀಡಲಾಗಿದೆ. ಸಿಎಂ ವಿಜಯ್ ಅವರನ್ನು ದೇವಸ್ಥಾನದ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರಿ ನಿಯಮಾವಳಿ ಮತ್ತು ಪ್ರೋಟೋಕಾಲ್ ಪ್ರಕಾರ (Protocol) ಅವರಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಗೌರವ ಸಲ್ಲಿಸಿ ದೇವಳದ ಒಳಗೆ ಕರೆದೊಯ್ಯಲಾಗುವುದು. ಬಳಿಕ ಅವರು ದೇವಿಯ ದರ್ಶನ ಪಡೆದು, ದೇವಸ್ಥಾನದ ಆವರಣವನ್ನು ವೀಕ್ಷಿಸಿ ತೆರಳಲಿದ್ದಾರೆ.

ಸಿಎಂ ವಿಜಯ್ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಯಾವುದೇ ರೀತಿಯ ವಿಶೇಷ ಪೂಜೆಗಳಿರುವುದಿಲ್ಲ ಎಂದು ಅರ್ಚಕ ನಿತ್ಯಾನಂದ ಅಡಿಗ ಸ್ಪಷ್ಟಪಡಿಸಿದ್ದಾರೆ. ಕೊಲ್ಲೂರು ಕ್ಷೇತ್ರಕ್ಕೆ ಯಾರೇ ವಿವಿಐಪಿಗಳು ಬಂದರೂ ದೇವಸ್ಥಾನದಲ್ಲಿ ಪ್ರತ್ಯೇಕ ಪೂಜೆ ಮಾಡುವ ಪರಿಪಾಠವಿಲ್ಲ. ಉಳಿದ ದೇವಸ್ಥಾನಗಳಂತೆ ಗಣ್ಯರು ಬಂದಾಗ ಪದೇ ಪದೇ ಮಂಗಳಾರತಿ ಮಾಡುವ ಸಂಪ್ರದಾಯ ನಮ್ಮಲ್ಲಿಲ್ಲ. ಸಾಮಾನ್ಯ ಭಕ್ತರಂತೆ ಸಿಎಂ ವಿಜಯ್ ಅವರು ಕೂಡ ದೇವಿಯ ದರ್ಶನ ಪಡೆಯಲಿದ್ದಾರೆ. ಒಂದು ವೇಳೆ ಅವರು ಬರುವ ಸಮಯಕ್ಕೆ ಮಹಾಮಂಗಳಾರತಿ ನಡೆಯುತ್ತಿದ್ದರೆ, ಅದನ್ನು ವೀಕ್ಷಿಸುವ ಅವಕಾಶ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಇಂದು ಶುಕ್ರವಾರವಾಗಿರುವುದರಿಂದ ಸಂಜೆ ಪ್ರದೋಷ ಕಾಲಕ್ಕೂ ಮುನ್ನ ದೇವಸ್ಥಾನದ ನಿರಂತರ ಸಂಪ್ರದಾಯದಂತೆ ರಥೋತ್ಸವ/ಉತ್ಸವ ನಡೆಯಲಿದ್ದು, ಇದು ವಿಜಯ್ ಅವರಿಗಾಗಿ ಮಾಡುತ್ತಿರುವ ವಿಶೇಷ ಸಿದ್ಧತೆಯಲ್ಲ, ಪ್ರತಿ ಶುಕ್ರವಾರದ ಸಾಮಾನ್ಯ ಪೂಜಾ ಪ್ರಕ್ರಿಯೆಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಗುರುತಿಸಬಲ್ಲಿರಾ – Kannada News | Optical Illusion: Can you spot a hidden cat in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: hindustantimes.com

ಆಪ್ಟಿಕಲ್‌ ಇಲ್ಯೂಷನ್‌ನಂತಹ (optical illusion) ಈ ಒಗಟಿನ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಹೀಗಾಗಿ ಈ ಒಗಟನ್ನು ಬಿಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಹೆಚ್ಚಿನವರು ಈ ಒಗಟು ಬಿಡಿಸಲು ಸಾಧ್ಯವಿಲ್ಲ ಎಂದು ಸೋಲನ್ನು ಒಪ್ಪಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಕಳ್ಳ ಬೆಕ್ಕೊಂದು ಅಡಗಿ ಕುಳಿತಿದೆ. 15 ಸೆಕೆಂಡುಗಳಲ್ಲಿ ಈ ಬೆಕ್ಕನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ನೀವು ರೆಡಿ ಇದ್ದರೆ ನಿಮ್ಮ ಟೈಮ್ ಈಗಲೇ ಆರಂಭವಾಗುತ್ತದೆ.

ಈ ಚಿತ್ರದಲ್ಲಿ ಏನು ಕಾಣಿಸಿತು?

ಒಗಟಿನ ಆಟಗಳು ಮನೋರಂಜನೆಯನ್ನು ನೀಡುತ್ತದೆಯೋ ಹಾಗೆ ಯೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಚಿತ್ರವು ಡ್ರೈವ್‌ವೇಯಲ್ಲಿ ನಿಲ್ಲಿಸಿರುವ ಹೊಳಪುಳ್ಳ ಕಪ್ಪು ಬಣ್ಣದ ಎಸ್ ಯುವಿಯನ್ನು ಕಾಣಬಹುದು. ಅದರ ಸುತ್ತಲೂ ಅಂದಗೊಳಿಸಲಾದ ಹಸಿರು ಹುಲ್ಲುಹಾಸು, ಹಚ್ಚ ಹಸಿರಿನ ಮರಗಳು ಇವೆ. ಚಿತ್ರದ ಮುಂಭಾಗದಲ್ಲಿರುವ ಗೋಡೆಯ ಪಕ್ಕದಲ್ಲಿ ಹೂವಿನ ಕುಂಡ ಇರಿಸಲಾಗಿದೆ. ಈ ಕುಂಡದಲ್ಲಿ ವಿಶಿಷ್ಟವಾದ ಬಿಳಿ ಹೂವುಗಳನ್ನು ಹೊಂದಿರುವ ರೋಮಾಂಚಕ ಸಸ್ಯವಿದೆ. ಇಲ್ಲಿ ಕಳ್ಳ ಬೆಕ್ಕೊಂದು ಮರೆ ಮಾಡಿ ಕುಳಿತುಕೊಂಡಿದೆ. ಹದಿನೈದು ಸೆಕೆಂಡುಗಳೊಳಗೆ ಈ ಸಾಕು ಪ್ರಾಣಿಯನ್ನು ಹುಡುಕಲು ಪ್ರಯತ್ನಿಸಿ.

ಇದನ್ನೂ ಓದಿ: ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್; ಈ ಪ್ರಶ್ನೆಯಲ್ಲೇ ಅಡಗಿರುವ ಉತ್ತರವನ್ನು ಹೇಳಬಲ್ಲಿರಾ?

ನಿಮ್ಮ ಕಣ್ಣಿಗೆ ಕಳ್ಳ ಬೆಕ್ಕು ಕಾಣಿಸಿತೇ?

ಅಬ್ಬಬ್ಬಾ ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಳ್ಳಬೇಡಿ. ನೀವು ಅಡಗಿರುವ ಕಳ್ಳ ಬೆಕ್ಕನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೀರಾ ಎಂದಾದ್ರೆ ನಿಮ್ಮದು ಹದ್ದಿನ ಕಣ್ಣು ಎಂದರ್ಥ. ಈ ಸಾಕು ಪ್ರಾಣಿ ನಿಮ್ಮ ಕಣ್ಣಿಗೆ ಕಾಣಿಸಿಲ್ಲ ಎಂದಾದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಕಾರಿನ ಪಕ್ಕದಲ್ಲಿ ಬೆಕ್ಕು ಕುಳಿತುಕೊಂಡಿದೆ. ಈ ಕೆಳಗಿನ ಚಿತ್ರದಲ್ಲಿ ಕಪ್ಪು ಬಣ್ಣದ ಬೆಕ್ಕನ್ನು ಗುರುತಿಸಿರುವುದನ್ನು ನೀವು ಕಾಣಬಹುದು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಸಾಕಷ್ಟು ವರ್ಷಗಳ ಹಿಂದೆ ಮುಳುಗಿದ್ದ ದೇಗುಲದ ಅವಶೇಷ ಗೋಚರ – Kannada News

ಮೈಸೂರು, ಜೂನ್ 12: ಮೈಸೂರು ಜಿಲ್ಲೆಯ ಹೆಚ್​ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಸಾಕಷ್ಟು ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಬಸವೇಶ್ವರ ದೇಗುಲದ ಅವಶೇಷಗಳು ಈಗ ಮತ್ತೆ ಗೋಚರವಾಗಿವೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಬಹುದು ಎಂಬ ಚರ್ಚೆಯ ನಡುವೆಯೇ ಈ ವಿದ್ಯಮಾನ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ ದೇವಸ್ಥಾನದ ಕಲ್ಲುಮಂಟಪದ ಭಾಗಗಳು ಕಾಣಿಸಿಕೊಳ್ಳುತ್ತಿವೆ. ಸ್ಥಳೀಯರ ಪ್ರಕಾರ, 15 ವರ್ಷಗಳ ಹಿಂದೆ ಇದೇ ರೀತಿಯ ಪರಿಸ್ಥಿತಿ ಎದುರಾದಾಗಲೂ ದೇಗುಲದ ಅವಶೇಷಗಳು ಗೋಚರಿಸಿದ್ದವು. ಮುಂಗಾರು ಮಳೆ ಕಡಿಮೆಯಾಗಿ ಒಳಹರಿವಿನ ಪ್ರಮಾಣ ಇಳಿಮುಖವಾದಾಗಲೆಲ್ಲಾ ಈ ದೇಗುಲದ ಭಾಗಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ರಾಜ್ಯದಲ್ಲಿ ಮೊದಲು ತುಂಬುವ ಜಲಾಶಯಗಳಲ್ಲಿ ಕಬಿನಿಯೂ ಒಂದು. ಆದರೆ ಈಗಿನ ನೀರಿನ ಮಟ್ಟವು ಆತಂಕಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ತಲೆದೋರುತ್ತಿದೆಯೇ ಎಂಬ ಚರ್ಚೆಗೆ ಪುಷ್ಟಿ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾನು ಸತ್ತಿಲ್ಲ, ಟಿವಿ9 ನೋಡ್ತಾ ಆರಾಮಾಗಿದ್ದೇನೆ’; ದೊಡ್ಡಣ್ಣ ಸ್ಪಷ್ಟನೆ – Kannada News

ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ  (Doddanna) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಕಿಡಿಗೇಡಿಗಳು ಸುಳ್ಳು ಸುದ್ದಿಯೊಂದನ್ನು ಹರಿಬಿಟ್ಟಿದ್ದಾರೆ. ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಭಾವಪೂರ್ಣ ಶ್ರದ್ಧಾಂಜಲಿಯ ಪೋಸ್ಟರ್ ಮತ್ತು ಪೋಸ್ಟ್‌ಗಳು ಫೇಸ್‌ಬುಕ್ ಸೇರಿದಂತೆ ಹಲವು ಕಡೆ ಭಾರಿ ವೈರಲ್ ಆಗಿದ್ದವು. ಇದನ್ನು ನೋಡಿ ಅವರ ಅಭಿಮಾನಿಗಳು ಹಾಗೂ ಆತ್ಮೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದರೆ, ಈ ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ನಟ ದೊಡ್ಡಣ್ಣ ಸಿಟ್ಟಾಗಿದ್ದಾರೆ . ತಾವೇ ಸ್ಪಷ್ಟನೆ ಕೊಡುವ ಮೂಲಕ ಈ ವದಂತಿಗೆ ಬ್ರೇಕ್ ಹಾಕಿದ್ದಾರೆ.

‘ಪಬ್ಲಿಕ್ ಫ್ರೆಂಡ್​’ ಹೆಸರಿನ ಫೇಸ್​​ಬುಕ್​​ ಪೇಜ್​​​ನಲ್ಲಿ ಪೋಸ್ಟ್ ಒಂದನ್ನು ಹಾಕಲಾಗಿದೆ. ‘ದೊಡ್ಡಣ್ಣ ಇನ್ನಿಲ್ಲ’ ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ. ಮರಣ ಎಂದು ಜೂನ್ 12ರ ಡೇಟ್ ಹಾಕಲಾಗಿದೆ. ‘ನಿಮ್ಮ ಅಭಿನಯ, ನಿಮ್ಮ ಸಾಧನೆ ಯಾವಾಗಲೂ ನಮ್ಮ ಜೊತೆ ಇರುತ್ತದೆ’ ಎಂದು ನೆನಪಿಸಿಕೊಳ್ಳಲಾಗಿದೆ. ಇದು ದೊಡ್ಡಣ್ಣ ಗಮನಕ್ಕೂ ಬಂದಿದೆ.

ಟಿವಿ9 ಕನ್ನಡದ ಜೊತೆ ಮಾತನಾಡಿದ ಅವರು, ‘ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಮನೆಯಲ್ಲಿ ಆರಾಮಾಗಿ ಟೀ ಕುಡಿಯುತ್ತಾ, ಟಿವಿ9 ಕನ್ನಡ ವಾಹಿನಿಯನ್ನೇ ನೋಡುತ್ತಾ ಕುಳಿತಿದ್ದೇನೆ. ನನಗೇನೂ ಆಗಿಲ್ಲ, ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ದೊಡ್ಡಣ್ಣ ಎಂದರೆ ವಿಷ್ಣುವರ್ಧನ್​ಗೆ ಬಹಳ ಆತ್ಮೀಯತೆ: ಆ ದಿನಗಳ ಮೆಲುಕು ಹಾಕಿದ ನಟ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶ್ರದ್ಧಾಂಜಲಿಯ ಪೋಸ್ಟರ್ ಸಂಪೂರ್ಣವಾಗಿ ನಕಲಿ ಮತ್ತು ಎಡಿಟೆಡ್ ಆಗಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ಯಾರೂ ನಂಬಬೇಡಿ ಮತ್ತು ಶೇರ್ ಮಾಡಬೇಡಿ ಎಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಹಿರಿಯ ನಟರ ಆರೋಗ್ಯದ ಬಗ್ಗೆ ಪದೇ ಪದೇ ಇಂತಹ ವಿಕೃತಿ ಮೆರೆಯುವ ಕಿಡಿಗೇಡಿಗಳ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ 120ಕ್ಕೂ ಹೆಚ್ಚು ಸ್ಟ್ರೀಟ್ ಲೈಟ್ಸ್ ನಾಪತ್ತೆ! ಕಳ್ಳರ ಕಾಟಕ್ಕೆ ಜನ ಕಂಗಾಲು – Kannada News

ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ 120ಕ್ಕೂ ಹೆಚ್ಚು ಸ್ಟ್ರೀಟ್ ಲೈಟ್ಸ್ ನಾಪತ್ತೆ!Image Credit source: The Hindu

ಬೆಂಗಳೂರು, ಜೂನ್ 12: ಗಾಂಧಿ ಬಜಾರ್​ನಲ್ಲಿ (Gandhibazar) ಹಬ್ಬ ಹರಿದಿನಗಳಿರಲಿ ಅಥವಾ ವೀಕೆಂಡ್ ಇರಲಿ, ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸುತ್ತಾರೆ. ಆದರೆ, ಕಳೆದ ಕೆಲವು ದಿನಗಳಿಂದ ಸಂಜೆಯಾಗುತ್ತಿದ್ದಂತೆ ಇಲ್ಲಿಗೆ ಬರಲು ಮಹಿಳೆಯರು ಮತ್ತು ಮಕ್ಕಳು ತೀವ್ರ ಭಯಪಡುತ್ತಿದ್ದಾರೆ. ಇದಕ್ಕೆ ಕಾರಣ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಬಸವನಗುಡಿಯ ಗಾಂಧಿ ಬಜಾರ್ ರಸ್ತೆ ಈಗ ಸಂಪೂರ್ಣ ಕತ್ತಲೆಯಲ್ಲಿ ಮುಳುಗಿದೆ.

ಮುಖ್ಯಾಂಶಗಳು

  • ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ ಕಳ್ಳರ ಕಾಟದಿಂದ ಬೀದಿ ದೀಪಗಳು ಬಂದ್ ಆಗಿವೆ.
  • ಒಟ್ಟು ಇನ್ನೂರು ಕಂಬಗಳ ಪೈಕಿ ನೂರಪ್ಪತ್ತಕ್ಕೂ ಹೆಚ್ಚು ಲೈಟ್‌ಗಳು ಉರಿಯುತ್ತಿಲ್ಲ.
  • ಅಪಾಯಕಾರಿ ಲೈವ್ ವಿದ್ಯುತ್ ವೈರ್‌ಗಳು ಜೋಲಾಡುತ್ತಿದ್ದು ಸಾರ್ವಜನಿಕರಲ್ಲಿ ತೀವ್ರ ಪ್ರಾಣಭೀತಿ ಎದುರಾಗಿದೆ.

200 ವಿದ್ಯುತ್ ಕಂಬಗಳು; 120ಕ್ಕೂ ಹೆಚ್ಚು ಲೈಟ್‌ಗಳು ಬಂದ್!

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗಾಂಧಿ ಬಜಾರ್‌ನಲ್ಲಿ ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ರಸ್ತೆ, ಸುಸಜ್ಜಿತ ಫುಟ್‌ಪಾತ್ ಹಾಗೂ ಆಕರ್ಷಕ ಎಲ್‌ಇಡಿ (LED) ಸ್ಟ್ರೀಟ್ ಲೈಟ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಿಲಾಡಿ ಕಳ್ಳರ ಕಾಟದಿಂದಾಗಿ ಕಳೆದ ಒಂದು ತಿಂಗಳಿನಿಂದ ಇಲ್ಲಿನ ಬೀದಿ ದೀಪಗಳು ಆನ್ ಆಗುತ್ತಲೇ ಇಲ್ಲ.

ಗಾಂಧಿ ಬಜಾರ್‌ನ ರಾಮಕೃಷ್ಣ ಆಶ್ರಮ ಸರ್ಕಲ್‌ನಿಂದ ಅಡ್ಯಾರ್ ಆನಂದ ಭವನ್ ಹೋಟೆಲ್‌ವರೆಗೆ ಸುಮಾರು 200ಕ್ಕೂ ಹೆಚ್ಚು ಎಲೆಕ್ಟ್ರಿಕ್ ಪೋಲ್‌ಗಳಿವೆ. ಆದರೆ ಕಳ್ಳರು ಇವುಗಳಲ್ಲಿರುವ ಕಬ್ಬಿಣದ ಕ್ಯಾಪ್, ಲೈಟಿಂಗ್ಸ್, ಫ್ಯೂಸ್ ಬಾಕ್ಸ್ ಒಳಗಿರುವ ಕಾಪರ್ ವೈರ್ ಮತ್ತು ಎಲ್‌ಪಿ ಬಾಕ್ಸ್ ಒಳಗಿನ ಕಂಟ್ರೋಲರ್‌ಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಪರಿಣಾಮವಾಗಿ 120ಕ್ಕೂ ಹೆಚ್ಚು ಕಂಬಗಳ ದೀಪಗಳು ಉರಿಯುತ್ತಿಲ್ಲ ಎಂದು ಹೆರಿಟೇಜ್ ಬಸವನಗುಡಿ ಅಸೋಸಿಯೇಷನ್ ಸೆಕ್ರೆಟರಿ ಗುರುಪ್ರಸಾದ್ ಹಾಗೂ ಸ್ಥಳೀಯ ವ್ಯಾಪಾರಿ ರಾಮಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.

ಪ್ರಾಣಕ್ಕೆ ಕುತ್ತು ತರುತ್ತವೆಯೇ ಜೋಲಾಡುತ್ತಿರುವ ವೈರ್‌ಗಳು?

ಬೀದಿ ದೀಪಗಳ ಕಳ್ಳತನದ ಪ್ರಕ್ರಿಯೆಯಲ್ಲಿ ಕಿಲಾಡಿ ಕಳ್ಳರು ವಿದ್ಯುತ್ ವೈರ್‌ಗಳನ್ನು ಎಲ್ಲೆಂದರಲ್ಲಿ ಕಟ್‌ ಮಾಡಿ ಹಾಕಿದ್ದಾರೆ. ಇದರಿಂದಾಗಿ ರಸ್ತೆಯ ಬದಿಯಲ್ಲಿ, ಸಾರ್ವಜನಿಕರು ಓಡಾಡುವ ಜಾಗದಲ್ಲೇ ಲೈವ್ ವಿದ್ಯುತ್ ಕೇಬಲ್‌ಗಳು ಅಪಾಯಕಾರಿಯಾಗಿ ಜೋಲಾಡುತ್ತಿವೆ. ಪ್ರತಿದಿನ ಗಾಂಧಿ ಬಜಾರ್‌ಗೆ ಮಕ್ಕಳು, ಹಿರಿಯರು ಬರುತ್ತಾರೆ. ಚೂರು ಯಾಮಾರಿದ್ರೂ ಈ ಮುಕ್ತ ವೈರ್‌ಗಳಿಂದ ಅಮಾಯಕರ ಪ್ರಾಣ ಹೋಗುವ ಭೀತಿ ಇದೆ ಎಂದು ಸ್ಥಳೀಯ ಬ್ಯಾಗ್ ವ್ಯಾಪಾರಿ ಪಳನಿ ಆತಂಕ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ

ಸಂಜೆ 6 ದಾಟುತ್ತಿದ್ದಂತೆ ಇಡೀ ಏರಿಯಾ ಕತ್ತಲೆಯ ಕೂಪವಾಗುತ್ತಿದ್ದು, ಒಂಟಿಯಾಗಿ ಓಡಾಡಲು ಮಹಿಳೆಯರು ಭಯಪಡುತ್ತಿದ್ದಾರೆ. ಕತ್ತಲೆಯ ಲಾಭ ಪಡೆದು ಮೊಬೈಲ್ ಸ್ನ್ಯಾಚಿಂಗ್ ಅಥವಾ ಸರಗಳ್ಳತನ ನಡೆಯಬಹುದು ಎನ್ನುವುದು ಸ್ಥಳೀಯರ ಆತಂಕ. ಈ ಬಗ್ಗೆ ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ ದುಡ್ಡು ಕೊಟ್ರೆ ಸಿಗುತ್ತೆ SSLC, PUC, ಡಿಗ್ರಿ ನಕಲಿ ಅಂಕ ಪಟ್ಟಿ! ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಜಾಲ ಪತ್ತೆ

ತೆರಿಗೆದಾರರ ಕೋಟ್ಯಂತರ ರೂಪಾಯಿ ಹಣದಲ್ಲಿ ನಿರ್ಮಿಸಲಾದ ಸಾರ್ವಜನಿಕ ಆಸ್ತಿ ಕಳ್ಳರ ಪಾಲಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಕಣ್ಣು ಮುಚ್ಚಿ ಕುಳಿತಿರುವುದು ದುರಂತವೇ ಸರಿ. ಪೊಲೀಸರು ಈ ಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕಿದೆ ಮತ್ತು ಅಧಿಕಾರಿಗಳು ತಕ್ಷಣ ಲೈಟ್‌ಗಳನ್ನು ದುರಸ್ತಿ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ಇದ್ದ ರೈಲಿನ ಮೇಲೆ ಕಲ್ಲು ತೂರಾಟ – Kannada News

ಕಾನ್ಪುರ, ಜೂನ್ 12: ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat) ಇದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾನ್ಪುರದಿಂದ ದೆಹಲಿಗೆ ತೆರಳುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್​ಪ್ರೆಸ್ ರೈಲಿನ ಮೇಲೆ ಫಿಜೋರಾಬಾದ್ ಬಳಿ ಗುರುವಾರ ಸಂಜೆ ಕಲ್ಲು ತೂರಾಟ ನಡೆದಿದೆ. ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಅತ್ಯಂತ ತೀವ್ರ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ರೈಲಿನಲ್ಲಿದ್ದ ಆರ್‌ಎಸ್‌ಎಸ್ ಸರ್ಸಂಘಚಾಲಕ್ ಮೋಹನ್ ಭಾಗವತ್ ಸೇರಿದಂತೆ ಎಲ್ಲಾ ಪ್ರಯಾಣಿಕರು ಸಂಪೂರ್ಣ ಸುರಕ್ಷಿತವಾಗಿದ್ದು, ತನಿಖೆ ಚುರುಕುಗೊಂಡಿದೆ.

ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12003) ಸಂಜೆ 7.15 ರ ಸುಮಾರಿಗೆ ಫಿರೋಜಾಬಾದ್ ಜಿಲ್ಲೆಯ ಮಖನ್‌ಪುರ ನಿಲ್ದಾಣದ ಬಳಿ ಹಾದುಹೋಗುವಾಗ ಈ ಕಲ್ಲು ತೂರಾಟ ನಡೆದಿದೆ. ಕಲ್ಲು ಎಸಿ ಕೋಚ್‌ನ ಕಿಟಕಿಗೆ ತಗುಲಿ ಹೊರಗಿನ ಗಾಜು ಮಾತ್ರ ಬಿರುಕು ಬಿಟ್ಟಿದೆ. ಅದೇ ಕೋಚ್‌ನಲ್ಲಿದ್ದ ಮೋಹನ್ ಭಾಗವತ್ ಅವರು ಎದುರು ಭಾಗದ ಸೀಟಿನಲ್ಲಿ ಕುಳಿತಿದ್ದರಿಂದ ಅವರಿಗೆ ಹಾಗೂ ರೈಲಿನಲ್ಲಿದ್ದ ಇತರ ಯಾವುದೇ ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.

ಘಟನೆ ನಡೆದ ತಕ್ಷಣವೇ ಆಗ್ರಾ ವಲಯದ ಎಡಿಜಿ ಎಸ್‌ಕೆ ಭಗತ್, ಡಿಐಜಿ ಶೈಲೇಶ್ ಪಾಂಡೆ ಮತ್ತು ಫಿರೋಜಾಬಾದ್ ಎಸ್‌ಎಸ್‌ಪಿ ಆದಿತ್ಯ ಲಾಂಘೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ದಂಡೇ ಸ್ಥಳಕ್ಕೆ ಧಾವಿಸಿತು. ಪರಿಸ್ಥಿತಿಯನ್ನು ಅದ್ಭುತವಾಗಿ ನಿಯಂತ್ರಿಸಿದ ಪೊಲೀಸರು, ಹಳಿಗಳ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೇವಲ ಕೆಲವೇ ಗಂಟೆಗಳಲ್ಲಿ ಒಬ್ಬ ಶಂಕಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ಬಳಿಕ ಟ್ರೋಲ್‌; ಅದ್ನಾನ್ ಸಮಿ ತಿರುಗೇಟು

ತುಂಡ್ಲಾ ಜಂಕ್ಷನ್‌ನ ಹೊರ ಸಿಗ್ನಲ್‌ನಲ್ಲಿ ರೈಲನ್ನು ನಿಲ್ಲಿಸಿ, ಅಧಿಕಾರಿಗಳು ಇಡೀ ಕೋಚ್‌ನ ಸುರಕ್ಷತೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಎಲ್ಲವೂ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಂಡ ತಕ್ಷಣವೇ, ಅಂದರೆ ಸಂಜೆ 7.41 ಕ್ಕೆ ರೈಲು ದೆಹಲಿಯತ್ತ ತನ್ನ ಪ್ರಯಾಣವನ್ನು ಯಶಸ್ವಿಯಾಗಿ ಮುಂದುವರಿಸಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ – Kannada News

ಕೊಪ್ಪಳ, ಜೂನ್ 12: ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿ ಪ್ರಮಾಣದಲ್ಲಿ ಕುಸಿದಿದೆ. ಪ್ರಸ್ತುತ ಜಲಾಶಯದಲ್ಲಿ ಕೇವಲ 9 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅತಿ ಕಡಿಮೆ ಪ್ರಮಾಣವಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಜಲಾಶಯದಲ್ಲಿ 24 ಟಿಎಂಸಿ ನೀರಿತ್ತು. ಈ ವರ್ಷ ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರೂ, ಮಲೆನಾಡು ಭಾಗದಲ್ಲಿ ಮಳೆಯ ಕೊರತೆಯಿಂದ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಕೇವಲ 9 ಟಿಎಂಸಿ ನೀರಿನಲ್ಲಿ ಕುಡಿಯುವ ನೀರು, ಕೃಷಿ ಹಾಗೂ ಜಲಚರಗಳಿಗೆ ನೀರು ಒದಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರಸ್ತುತ ಕುಡಿಯುವ ನೀರು ಮತ್ತು ಕಾಲುವೆಗಳಿಗೆ ಸುಮಾರು 249 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ನೀರಿನ ಈ ಕೊರತೆಯು ಈ ನಾಲ್ಕು ಜಿಲ್ಲೆಗಳ ರೈತರಲ್ಲಿ ಮತ್ತು ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯಕ್ಕೆ ಒಳಹರಿವು ಹೆಚ್ಚಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗಾಳಿ ಸುದ್ದಿ ನಂಬಬೇಡಿ’; ಧರ್ಮಸ್ಥಳ ಪ್ರಕರಣದ ಆರೋಪಕ್ಕೆ ಪ್ರಕಾಶ್ ರಾಜ್ ಪ್ರತಿಕ್ರಿಯೆ – Kannada News

ಬೆಂಗಳೂರು, ಜೂನ್, 12: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಟ್ವಿಸ್ಟ್ ಎದುರಾಗಿದೆ. ತನ್ನನ್ನು ಕೆಲವರು ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ಚಿನ್ನಯ್ಯ ಹೇಳಿದ್ದಾನೆ. ಅಲ್ಲದೆ, ಈತ ಪ್ರಕಾಶ್ ರಾಜ್ ಹೆಸರನ್ನು ರಿಟ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾನೆ. ಈ ಬೆನ್ನಲ್ಲೇ, ನಟ ಪ್ರಕಾಶ್ ರಾಜ್ ಅವರು (Prakash Raj) ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆ ಅಧಿಕೃತ ಸ್ಪಷ್ಟನೆ ನೀಡಿರುವ ಅವರು, ತಮ್ಮ ಬಗ್ಗೆ ಹರಡುತ್ತಿರುವುದು ಸುಳ್ಳು ಸುದ್ದಿ ಎಂದು ಕಿಡಿಕಾರಿದ್ದಾರೆ.

ಖಡಕ್ ಸ್ಪಷ್ಟನೆ ನೀಡಿದ ಪ್ರಕಾಶ್ ರಾಜ್:

‘ಎಲ್ಲರಿಗೂ ನಮಸ್ಕಾರ.. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಕೆಲವು ಸುದ್ದಿಗಳು ಚರ್ಚೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿರುವುದರಿಂದ ಮತ್ತು ಕೋಟ್ಯಂತರ ಭಕ್ತರ ನಂಬಿಕೆಗೆ ಸಾಕ್ಷಿಯಾಗಿರುವುದರಿಂದ, ಇಂತಹ ಅನುಮಾನಗಳಿಗೆ ಉತ್ತರಿಸುವುದು ನನ್ನ ಕರ್ತವ್ಯವೂ ಆಗಿದೆ’ ಎಂದು ಪ್ರಕಾಶ್ ರಾಜ್ ಪೋಸ್ಟ್ ಆರಂಭಿಸಿದ್ದಾರೆ.

‘ನಾನು ಸದ್ಯ ಊರಿನಲ್ಲಿ ಇಲ್ಲ. ಇನ್ನೆರಡು ದಿನಗಳಲ್ಲಿ ನಾನೇ ಖುದ್ದಾಗಿ ಬಂದು ಮಾಧ್ಯಮ ಮಿತ್ರರ ಮೂಲಕ ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲಿದ್ದೇನೆ. ಅಲ್ಲಿಯವರೆಗೆ ಗಾಳಿ ಸುದ್ದಿಗಳನ್ನು ದಯವಿಟ್ಟು ಯಾರೂ ನಂಬಬೇಡಿ’ ಎಂದು ಕೋರಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್‌ ಟ್ವಿಸ್ಟ್: ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್‌ ರಾಜ್‌ ಹೆಸರು ಉಲ್ಲೇಖಿಸಿದ ಚಿನ್ನಯ್ಯ!

ಪ್ರಕರಣದ ಹಿನ್ನೆಲೆ:

ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಚಿನ್ನಯ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇಡೀ ಪ್ರಕರಣದ ಹಿಂದೆ ನಟ ಪ್ರಕಾಶ್ ರಾಜ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾನೆ. ತಾವು ಹೇಳಿದಂತೆ ನಡೆದುಕೊಳ್ಳದೆ ಇದ್ದರೆ ಕೊಲೆ ಮಾಡುವ ಬೆದರಿಕೆ ಕೂಡ ಇತ್ತು ಎಂದು ಆತ ಆರೋಪಿಸಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್ ಮೇಲಿನ ದಾಳಿ ರದ್ದುಗೊಳಿಸಿದ ಟ್ರಂಪ್, ಶೀಘ್ರದಲ್ಲೇ ಶಾಂತಿ ಒಪ್ಪಂದ – Kannada News

ವಾಷಿಂಗ್ಟನ್, ಜೂನ್ 12: ಮಧ್ಯಪ್ರಾಚ್ಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿದ್ದ ಯುದ್ಧದ ಭೀತಿ ಮತ್ತು ಬಿಕ್ಕಟ್ಟು ಕೊನೆಗೊಳ್ಳುವ ಅತ್ಯಂತ ಆಶಾದಾಯಕ ಬೆಳವಣಿಗೆಯೊಂದು ಜಾಗತಿಕ ಮಟ್ಟದಲ್ಲಿ ನಡೆದಿದೆ. ಇರಾನ್ ಮೇಲಿನ ಸತತ ಮೂರನೇ ದಿನದ ನಿಗದಿತ ಮಿಲಿಟರಿ ದಾಳಿಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅಧಿಕೃತವಾಗಿ ರದ್ದುಗೊಳಿಸಿದ್ದು, ಟೆಹ್ರಾನ್ ಜೊತೆಗಿನ ಐತಿಹಾಸಿಕ ಶಾಂತಿ ಒಪ್ಪಂದ ಅಂತಿಮ ಹಂತಕ್ಕೆ ತಲುಪಿದೆ ಎಂದು ಘೋಷಿಸಿದ್ದಾರೆ.

ಒಪ್ಪಂದಕ್ಕೆ ಅಮೆರಿಕ-ಇರಾನ್ ಒಲವು: ಶ್ವೇತಭವನದ  ಮಾತನಾಡಿದ ಅಧ್ಯಕ್ಷ ಟ್ರಂಪ್, ಒಪ್ಪಂದಕ್ಕೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕುವ ಸಮಯ ಮತ್ತು ಸ್ಥಳವನ್ನು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ಅಮೆರಿಕದೊಂದಿಗಿನ ಈ ತಿಳಿವಳಿಕೆ ಒಪ್ಪಂದದ ಪ್ರಸ್ತಾವನೆಯು ಇರಾನ್‌ನ ಉನ್ನತ ನಾಯಕರ ಸಕಾರಾತ್ಮಕ ಪರಿಗಣನೆಯಲ್ಲಿದೆ ಎಂದು ಟೆಹ್ರಾನ್‌ನ ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ರಾಜತಾಂತ್ರಿಕ ತಂತ್ರಗಾರಿಕೆ ಯಶಸ್ವಿ: ನ್ಯಾಟೋ ಡಿಫೆನ್ಸ್ ಕಾಲೇಜಿನ ಅಂತಾರಾಷ್ಟ್ರೀಯ ಭದ್ರತಾ ತಜ್ಞ ರಿಚರ್ಡ್ ವೈಟ್ಜ್ ಅವರ ಪ್ರಕಾರ, ಟ್ರಂಪ್ ಇರಾನ್ ವಿರುದ್ಧ ಉದ್ವಿಗ್ನತೆ ಕಡಿಮೆ ಮಾಡುವ ಯಶಸ್ವಿ ತಂತ್ರವನ್ನು ಅನುಸರಿಸಿದ್ದಾರೆ. ಅಮೆರಿಕದ ಕಠಿಣ ಮಿಲಿಟರಿ ಎಚ್ಚರಿಕೆಗಳೇ ಈಗ ಉಭಯ ದೇಶಗಳನ್ನು ಯುದ್ಧದ ಹಾದಿ ಬಿಟ್ಟು ಮಾತುಕತೆಯ ಮೇಜಿನ ಬಳಿ ತಂದು ನಿಲ್ಲಿಸಲು ಕಾರಣವಾಗಿದೆ.

ಮತ್ತಷ್ಟು ಓದಿ: Kharg Island: ವೆನೆಜುವೆಲಾ ಬಳಿಕ ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟ ಟ್ರಂಪ್; ಇರಾನ್​ಗೆ ಈ ಸಣ್ಣ ಪ್ರದೇಶವೇಕೆ ಬಹಳ ಮುಖ್ಯ?

ಇರಾನ್ ಜನತೆಯಲ್ಲಿ ಹರ್ಷದ ವಾತಾವರಣ: ಯುದ್ಧ ಮತ್ತು ಆರ್ಥಿಕ ನಿರ್ಬಂಧಗಳಿಂದಾಗಿ ತೀವ್ರ ಕಷ್ಟ ಅನುಭವಿಸುತ್ತಿದ್ದ ಇರಾನ್‌ನ ಸಾಮಾನ್ಯ ನಾಗರಿಕರು ಈ ಶಾಂತಿ ಸುದ್ದಿಯಿಂದ ನಿರಾಳರಾಗಿದ್ದಾರೆ. ಆರ್ಥಿಕತೆ ಚೇತರಿಸಿಕೊಳ್ಳುವ ಮತ್ತು ಮುರಿದುಬಿದ್ದಿದ್ದ ಜೀವನೋಪಾಯಗಳು ಮತ್ತೆ ಹಳಿಗೆ ಬರುವ ಭರವಸೆ ಮೂಡಿದೆ. ಇರಾನ್ ನಾಯಕತ್ವವೂ ಸಹ ಈ ಸಂಘರ್ಷದಿಂದ ದೇಶವು ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ ಎಂದು ಜನರಲ್ಲಿ ವಿಶ್ವಾಸ ತುಂಬುತ್ತಿದೆ.

ಪ್ರಾದೇಶಿಕ ಸ್ಥಿರತೆಗೆ ಮುನ್ನುಡಿ: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕುವೈತ್, ಬಹ್ರೇನ್ ಹಾಗೂ ಜೋರ್ಡಾನ್ ಭಾಗದಲ್ಲಿ ಇತ್ತೀಚೆಗೆ ನಡೆಸಿದ್ದ ಸರಣಿ ಪ್ರತಿಕ್ರಿಯಾತ್ಮಕ ದಾಳಿಗಳು ಮತ್ತು ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯ ಆತಂಕಕ್ಕೆ ಈಗ ತೆರೆ ಬೀಳಲಿದೆ. ಇರಾನ್-ಅಮೆರಿಕ ನಡುವೆ ಏರ್ಪಡಲಿರುವ ಈ ಪ್ರಗತಿಪರ ಒಪ್ಪಂದವು ಇಡೀ ಮಧ್ಯಪ್ರಾಚ್ಯ ವಲಯದಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಹೊಸ ಹೆಬ್ಬಾಗಿಲನ್ನು ತೆರೆಯಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಣವೀರ್ ಸಿಂಗ್ ಎಕ್ಸಿಟ್ ಎಫೆಕ್ಟ್: ಅಧಿಕೃತವಾಗಿ ‘ಡಾನ್ 3’ ಕೈಬಿಟ್ಟ ಫರ್ಹಾನ್ ಅಖ್ತರ್? – Kannada News

ಬಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಫ್ರಾಂಚೈಸಿ ‘ಡಾನ್ 3’ ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನವೇ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದಿಂದ ನಟ ರಣವೀರ್ ಸಿಂಗ್ ಹೊರನಡೆದ ಮೇಲೆ ‘ಡಾನ್ 3’ ಸದ್ಯಕ್ಕಂತೂ ಸೆಟ್ಟೇರುವುದು ಅನುಮಾನ ಎಂಬ ಮಾತು ಕೇಳಿಬರುತ್ತಿತ್ತು. ಆ ಮಾತು ಈಗ ನಿಜವಾಗುವ ಸಮಯ ಬಂದಿದ್ದು, ನಿರ್ದೇಶಕ ಹಾಗೂ ನಟ ಫರ್ಹಾನ್ ಅಖ್ತರ್ ಈ ಪ್ರಾಜೆಕ್ಟ್ ಅನ್ನು ಸದ್ಯಕ್ಕೆ ಬದಿಗೆ ತಳ್ಳಿದ್ದಾರೆ. ಇದರ ಬೆನ್ನಲ್ಲೇ ಅವರು ಹೊಸದೊಂದು ಬಿಗ್ ಪ್ರಾಜೆಕ್ಟ್‌ಗೆ ಕೈಹಾಕಿದ್ದಾರೆ.

ಹೊಸ ವರ್ದಿಗಳ ಪ್ರಕಾರ ಫರ್ಹಾನ್ ಅಖ್ತರ್ ಅವರು ಭಾರತೀಯ ಚಿತ್ರರಂಗದ ದಂತಕಥೆ, ಖ್ಯಾತ ಸಂಗೀತ ಮಾಂತ್ರಿಕ ಆರ್.ಡಿ. ಬರ್ಮನ್ ಅವರ ಬಯೋಪಿಕ್‌ನಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ‘ಎಂ.ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಖ್ಯಾತಿಯ ಯಶಸ್ವಿ ನಿರ್ದೇಶಕ ನೀರಜ್ ಪಾಂಡೆ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಸ್ಕ್ರಿಪ್ಟ್ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಆರ್.ಡಿ. ಬರ್ಮನ್ ಅವರ ಪಾತ್ರಕ್ಕೆ ಜೀವ ತುಂಬಲು ಫರ್ಹಾನ್ ಅಖ್ತರ್ ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದ್ದು, 2026ರ ಕೊನೆಯ ವೇಳೆಗೆ ಈ ಚಿತ್ರದ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ.

ರಣವೀರ್ ಸಿಂಗ್ ಹೊಸ ‘ಡಾನ್’ ಆಗಲಿದ್ದಾರೆ ಎಂದು ಘೋಷಿಸಿದಾಗ ಅಭಿಮಾನಿಗಳಲ್ಲಿ ಭಾರಿ ಕುತೂಹಲವಿತ್ತು. ಆದರೆ, ಸ್ಕ್ರಿಪ್ಟ್ ಫೈನಲ್ ಆಗದ ಕಾರಣ ಮತ್ತು ಶೂಟಿಂಗ್ ಪದೇ ಪದೇ ತಡವಾಗುತ್ತಿದ್ದರಿಂದ ಬೇಸತ್ತ ರಣವೀರ್ ಚಿತ್ರದಿಂದ ಹೊರನಡೆದಿದ್ದರು.

ಇದನ್ನೂ ಓದಿ: ರಣ್ವೀರ್ ಸಿಂಗ್ ಕೈಕೊಟ್ಟ ಬಳಿಕ ‘ಡಾನ್ 3’ಗೆ ಮತ್ತೊಬ್ಬ ಸ್ಟಾರ್

ಈ ದಿಢೀರ್ ಎಕ್ಸಿಟ್‌ನಿಂದ ತಮಗೆ ಭಾರಿ ಆರ್ಥಿಕ ನಷ್ಟವಾಗಿದೆ ಎಂದು ಆರೋಪಿಸಿ ಫರ್ಹಾನ್ ಅಖ್ತರ್ ಅವರ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯು ರಣವೀರ್ ಸಿಂಗ್ ವಿರುದ್ಧ ಬರೋಬ್ಬರಿ 45 ಕೋಟಿ ರೂ. ಪರಿಹಾರ ಕೋರಿ ನೋಟಿಸ್ ನೀಡಿದೆ. ಈ ದೊಡ್ಡ ಕಾನೂನು ಸಮರ ಹಾಗೂ ವಿವಾದಗಳ ಕಾರಣದಿಂದಾಗಿ ‘ಡಾನ್ 3’ ಸಿನಿಮಾ ಸದ್ಯಕ್ಕೆ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಂತಾಗಿದೆ. ಈ ಸಿನಿಮಾಗೆ ಹೃತಿಕ್ ಎಂಟ್ರಿ ಆಗುತ್ತದೆ ಎಂದಿದೆಯಾದರೂ ಅದು ಇನ್ನೂ ಫೈನಲ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link