Kharg Island: ವೆನೆಜುವೆಲಾ ಬಳಿಕ ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟ ಟ್ರಂಪ್; ಇರಾನ್ಗೆ ಈ ಸಣ್ಣ ಪ್ರದೇಶವೇಕೆ ಬಹಳ ಮುಖ್ಯ? – Kannada News
ವಾಷಿಂಗ್ಟನ್, ಜೂನ್ 11: ಇರಾನ್ ಜೊತೆಗಿನ ಸಂಘರ್ಷ ಆರಂಭವಾದಾಗಿನಿಂದಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟಿದ್ದಾರೆ. ಖಾರ್ಗ್ ದ್ವೀಪವು (Kharg Island) ಇರಾನ್‌ನ ತೈಲ ವ್ಯಾಪಾರದ ಬೆನ್ನೆಲುಬಾಗಿದ್ದು, ದೇಶದ ಬಹುಪಾಲು ಕಚ್ಚಾ ತೈಲದ ರಫ್ತನ್ನು ಇದೊಂದೇ ದ್ವೀಪ ನಿರ್ವಹಿಸುತ್ತದೆ. ಪ್ರತಿದಿನ ಸುಮಾರು 20 ಲಕ್ಷ (2 ಮಿಲಿಯನ್) ಬ್ಯಾರೆಲ್ ತೈಲವು ಈ ಸಣ್ಣ ಗಲ್ಫ್ ದ್ವೀಪದಿಂದ ಹೊರಹೋಗುತ್ತದೆ. ಅದರಲ್ಲಿ ಬಹುಪಾಲು ಚೀನಾ ದೇಶಕ್ಕೆ ರಫ್ತಾಗುತ್ತದೆ. ಹೀಗಾಗಿ, ಇರಾನ್ ಪಾಲಿಗೆ ಈ…