All posts by nagaraj11081993

ರಾಜ್​​ಕುಮಾರ್ ಹಾಗೂ ಪಾರ್ವತಮ್ಮಗೆ ಇಷ್ಟ ಆಗಿತ್ತು ಆ ಒಂದು ಸಿನಿಮಾ

ರಾಜ್​​ಕುಮಾರ್ ಹಾಗೂ ಪಾರ್ವತಮ್ಮಗೆ ಇಷ್ಟ ಆಗಿತ್ತು ಆ ಒಂದು ಸಿನಿಮಾ

ರಾಜ್​​ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಇದ್ದರು. ಅವರ ಸಿನಿ ಜರ್ನಿಗೆ ಬೆಂಬಲವಾಗಿ ನಿಂತಿದ್ದು ಎಂದರೆ ಅದು ಪಾರ್ವತಮ್ಮ ಅವರು. ಪಾರ್ವತಮ್ಮ ಅವರು ನಿರ್ಮಾಪಕಿ ಆಗಿ ಚಿತ್ರರಂಗದಲ್ಲಿ ಗಮನ ಸೆಳೆದರು. ಈಗ ಪಾರ್ವತಮ್ಮ ಅವರ ಬಗೆಗಿನ ಒಂದು ಅಚ್ಚರಿಯ ವಿಷಯ ಹೇಳಲೇಬೇಕು. ರಾಜ್​​​ಕುಮಾರ್ ಅವರಿಗೆ ಹೆಚ್ಚು ಇಷ್ಟ ಆದ ಸಿನಿಮಾವೇ ಪಾರ್ವತಮ್ಮ ಅವರಿಗೂ ಹೆಚ್ಚು ಇಷ್ಟ ಆಗಿತ್ತು.

ರಾಜ್​​ಕುಮಾರ್ ಅವರ ಸಿನಿಮಾಗಳ ಪೈಕಿ ಯಾವ ಸಿನಿಮಾ ಹೆಚ್ಚು ಇಷ್ಟ ಎಂದು ಅವರಿಗೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ‘ನನಗೆ ರಾಜ್​​​ಕುಮಾರ್ ಅವರ ಎಲ್ಲ ಸಿನಿಮಾಗಳೂ ಇಷ್ಟ. ಆದರೆ, ಅದರಲ್ಲೂ ರಾಘವೇಂದ್ರ ಮಹಾತ್ಮೆ’ ತುಂಬಾನೇ ಇಷ್ಟ ಎಂದು ಪಾರ್ವತಮ್ಮ ಅವರು ಹೇಳಿಕೊಂಡಿದ್ದರು. ಈ ಚಿತ್ರವು 1966ರಲ್ಲಿ ರಿಲೀಸ್ ಆಯಿತು. ರಾಘವೇಂದ್ರ ಸ್ವಾಮಿ ಬಗ್ಗೆ, ಅವರ ಪವಾಡಗಳ ಬಗ್ಗೆ ಸಿನಿಮಾ ಇತ್ತು.

ಇಲ್ಲೊಂದು ಅಚ್ಚರಿಯ ವಿಷಯ ಇದೆ. ರಾಜ್​​ಕುಮಾರ್ ಅವರ ಪ್ರೀತಿಯ ಸಿನಿಮಾಗಳ ಪೈಕಿ ಮೊದಲ ಸ್ಥಾನ ಇದ್ದಿದ್ದು ‘ರಾಘವೇಂದ್ರ ಮಹಾತ್ಮೆ’ ಚಿತ್ರಕ್ಕೆ. ಈ ಮೊದಲು ಈ ಬಗ್ಗೆ ಮಾತನಾಡಿದ್ದ ರಾಜ್​​ಕುಮಾರ್ ಅವರು, ‘ನನಗೆ ನನ್ನ ವೃತ್ತಿ ಜೀವನದಲ್ಲಿ ಅತಿ ಇಷ್ಟವಾದ ಸಿನಿಮಾ ಎಂದರೆ ರಾಘವೇಂದ್ರ ಮಹಾತ್ಮೆ. ಅದನ್ನು ನೋಡುವಂತೆ ನಾನು ಅಭಿಮಾನಿಗಳ ಬಳಿ ಕೋರುತ್ತೇನೆ. ಮತ್ಯಾವ ಸಿನಿಮಾಗಳನ್ನು ನೋಡಿ ಎಂದು ನಾನು ಪ್ರೇಕ್ಷಕರ ಬಳಿ ಹೇಳಲ್ಲ ಎಂದು ರಾಜ್​​ಕುಮಾರ್ ಈ ಮೊದಲು ಹೇಳಿಕೊಂಡಿದ್ದರು.

ಇದನ್ನೂ ಓದಿ: ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ರಾಜ್​​ಕುಮಾರ್​​ ಇಳಿಸಲು ನಡೆದಿತ್ತು ಪ್ಲ್ಯಾನ್

ರಾಜ್​​​ಕುಮಾರ್ ಅವರು ಮಂತ್ರಾಲಯಕ್ಕೆ ತೆರಳಿದ್ದರಂತೆ. ಈ ಸಂದರ್ಭದಲ್ಲಿ ಅಲ್ಲಿ ಅವರು ರಾಯರ ಗುಡಿಯಲ್ಲಿ ಮಲಗಿದ್ದರು. ಬೆಳಿಗ್ಗೆ ನೇರವಾಗಿ ಬೆಂಗಳೂರಿಗೆ ಬಂದ ಅವರಿಗೆ ಸಿನಿಮಾ ಮಾಡಬೇಕು ಎಂಬ ಆಲೋಚನೆ ಬಂತು. ಅದನ್ನು ಮಾಡಿಯೇ ಬಿಟ್ಟರು. ಈ ರೀತಿಯಲ್ಲಿ ‘ರಾಘವೇಂದ್ರ ಮಹಾತ್ಮೆ’ ಸಿನಿಮಾ ಮೂಡಿಬಂತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಕರಗ ವೈಭವ! ಮಲ್ಲಿಗೆ ಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ದ್ರೌಪದಮ್ಮ; ಭಕ್ತಸಾಗರದಲ್ಲಿ ಮೊಳಗಿದ ಗೋವಿಂದ ನಾಮ

Source link

Dreaming About Death: ಸತ್ತಂತೆ ಕನಸು ಬಿದ್ದರೆ ಏನರ್ಥ? ಶಾಸ್ತ್ರಗಳು ಹೇಳುವುದೇನು?

ಮರಣಿಸಿದವರ ಅಥವಾ ನಾವೇ ಮರಣಿಸಿದ ಹಾಗೆ ಕನಸು ಬಿದ್ದರೆ ಅದು ಶುಭವೇ ಅಥವಾ ಅಶುಭವೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಸ್ವಪ್ನಶಾಸ್ತ್ರವು ಈ ಬಗ್ಗೆ ಬಹಳ ವಿಶೇಷವಾದ ವಿಶ್ಲೇಷಣೆಗಳನ್ನು ನೀಡುತ್ತದೆ. ಕನಸು ಬಿದ್ದ ಸ್ಥಳ (ಮನೆ, ಹೋಟೆಲ್, ದೇವಸ್ಥಾನ, ಕಚೇರಿ) ಕೂಡ ವಿಶ್ಲೇಷಣೆಗೆ ಮುಖ್ಯವಾಗುತ್ತದೆ. ಆದರೆ, ಇಂದಿನ ಮುಖ್ಯ ವಿಚಾರವು ಮರಣದ ಬಗ್ಗೆ. ನಾವು ಸತ್ತ ಹಾಗೆ ಅಥವಾ ನಮ್ಮ ಮನೆಯಲ್ಲಿ ಬಂಧುಗಳೆಲ್ಲಾ ಸೇರಿರುವ ಹಾಗೆ, ನಾವು ದೂರ ಹೋಗಿರುವ ಹಾಗೆ ಕನಸುಗಳು ಗೋಚರಿಸುತ್ತವೆ. ಕೆಲವೊಮ್ಮೆ ಶವಸಂಸ್ಕಾರದಲ್ಲಿ ಭಾಗಿಯಾಗುವಂತೆ ಅಥವಾ ಬೇರೆಯವರು ಮರಣಿಸಿದಂತೆ ಕನಸುಗಳು ಬೀಳುತ್ತವೆ.

ಇಂತಹ ಕನಸುಗಳು ಶುಭವೇ. ಇದು ಶುಭವನ್ನು ತರುತ್ತದೆ ಮತ್ತು ತುಂಬಾ ಒಳ್ಳೆಯದಾಗುತ್ತದೆ. ನಿಮಗೆ ಅದೃಷ್ಟ ಕೂಡಿ ಬರುತ್ತದೆ, ನಿಮ್ಮ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುತ್ತವೆ, ಮತ್ತು ಒಳಿತಾಗುವ ಯೋಗ ಕೂಡಿ ಬರುತ್ತದೆ. ಬೇರೆಯವರು ಸತ್ತ ಕನಸು ಬಂದರೆ ಅವರಿಗೆ ಆಯುಷ್ಯ ವೃದ್ಧಿಯಾಗುತ್ತದೆ. ನಾವೇ ಸತ್ತ ಹಾಗೆ ಕನಸು ಬಂದರೆ, ನಾವು ಕಷ್ಟಗಳಿಂದ ಪಾರಾಗುತ್ತೇವೆ, ಸಂಕಟಗಳು ದೂರವಾಗುತ್ತವೆ, ದೋಷಗಳು ನಿವಾರಣೆಯಾಗುತ್ತವೆ ಮತ್ತು ಅದೃಷ್ಟ ಕೂಡಿ ಬರುತ್ತದೆ ಎಂಬ ಭಾವನೆಗಳು ಮೂಡುತ್ತವೆ. ಯಾರೂ ಸಹ ಇಂತಹ ಕನಸುಗಳಿಂದ ಹೆದರಬೇಕಾಗಿಲ್ಲ ಅಥವಾ ಚಿಂತೆ ಮಾಡಬೇಕಾಗಿಲ್ಲ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಬ್ರಹ್ಮ ವೈವರ್ತ ಪುರಾಣದಲ್ಲಿಯೇ ಇದರ ಬಗ್ಗೆ ಉಲ್ಲೇಖವಿದೆ. ಬ್ರಹ್ಮ ವೈವರ್ತ ಪುರಾಣದಲ್ಲಿ “ಯಪಶ್ಚತಿ ಮೃತಂ ಸ್ವಪ್ನೇಸ ಭವೇಶಚಿರ ಜೀವಿಚ ಆರೋಗೋ ರೋಗಿಣಂ ದುಃಖಿ ಸುಖಿನಂಚ ಸಿಕಿಭವೇತ” ಎಂಬ ಶ್ಲೋಕವನ್ನು ಹೇಳಲಾಗಿದೆ. ಈ ಶ್ಲೋಕದ ಪ್ರಕಾರ, ಕನಸಿನಲ್ಲಿ ಮರಣವನ್ನು ಕಂಡವರು ದೀರ್ಘಾಯುಷಿಗಳಾಗುತ್ತಾರೆ, ರೋಗಿಗಳು ಆರೋಗ್ಯವಂತರಾಗುತ್ತಾರೆ ಮತ್ತು ದುಃಖಿಗಳು ಸುಖಿಗಳಾಗುತ್ತಾರೆ. ಇಂತಹ ಕನಸುಗಳು ಬಂದಾಗ ಬಹಳಷ್ಟು ಶುಭವಾಗುತ್ತದೆ, ತುಂಬಾ ಒಳ್ಳೆಯದಾಗುತ್ತದೆ. ನಿಮ್ಮ ಕುಟುಂಬದಲ್ಲಿ ನಿಮಗೆ ತಿಳಿದಿರುವ ಯಾರಾದರೂ ಸತ್ತಿರುವಂತೆ ಕನಸು ಬಂದರೆ, ಅವರಿಗೆ ಶುಭವಾಗುತ್ತದೆ. ನಮಗೆ ನಮ್ಮದೇ ಕನಸು ಬಂದಾಗ ನಮ್ಮ ಆಯುಷ್ಯ ವೃದ್ಧಿಯಾಗುತ್ತದೆ, ಸಂಕಟಗಳು ದೂರವಾಗುತ್ತವೆ. ಇದರಿಂದ ನಮಗೆ ಯಾವುದೇ ಕೆಟ್ಟದಾಗುವುದಿಲ್ಲ ಅಥವಾ ಮರಣ ಸಂಭವಿಸುವುದಿಲ್ಲ. ಅಂತಹ ನಕಾರಾತ್ಮಕ ಆಲೋಚನೆಗಳು ಬೇಡ.

ಕನಸಿನ ಭಾವನೆಗೆ ತಕ್ಕ ಹಾಗೆ, ಹನುಮನ ದರ್ಶನ ಮಾಡಿಕೊಳ್ಳಿ ಅಥವಾ ಸಾಧ್ಯವಾದರೆ ಶಿವನ ದರ್ಶನ ಮಾಡಿಕೊಳ್ಳಿ. ಶಿವನ ದೇವಸ್ಥಾನದಲ್ಲಿ ಒಂದು ಅರ್ಚನೆ ಮಾಡಿಸಿಕೊಳ್ಳಿ ಮತ್ತು ವಿಭೂತಿಯನ್ನು ಧಾರಣೆ ಮಾಡಿಕೊಳ್ಳಿ. ಇದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Indonesia Earthquake: ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ಇಂಡೋನೇಷ್ಯಾ, ಏಪ್ರಿಲ್ 2: ಪೂರ್ವ ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಮೊಲುಕ್ಕಾ ಸಮುದ್ರದಲ್ಲಿ ಸುಮಾರು 35 ಕಿಲೋಮೀಟರ್ ಆಳದಲ್ಲಿದೆ. ಬಲವಾದ ಕಂಪನಗಳ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದಿಂದ ಆಸ್ತಿ ಮತ್ತು ಜೀವಕ್ಕೆ ಎಷ್ಟು ಹಾನಿಯಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಗುರುವಾರ ಬೆಳಿಗ್ಗೆ ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೇಹ್ ಪ್ರದೇಶದಲ್ಲಿಯೂ ಭೂಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (ಎನ್‌ಸಿಎಸ್) ಮಾಹಿತಿಯ ಪ್ರಕಾರ, ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಉತ್ತರ ಭಾಗದಲ್ಲಿ ಲಘು ಭೂಕಂಪನದ ಅನುಭವವಾಗಿದೆ. ಆದಾಗ್ಯೂ, ಅದರ ತೀವ್ರತೆ ಕಡಿಮೆ ಇತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

IPL 2026: ಐಪಿಎಲ್​ನಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಶಮಿ

Source link

ಸೋಲಿನ ಬೆನ್ನಲ್ಲೇ ರಿಷಭ್​​ ಪಂತ್​​​ಗೆ ಕ್ಲಾಸ್ ತೆಗೆದುಕೊಂಡ ಸಂಜೀವ್ ಗೋಯೆಂಕಾ

Source link

‘ನಮಗೆ ಹಾಗೆ ಕೆಲಸ ಮಾಡೋಕಾಗಲ್ಲ’; ‘ಡ್ರ್ಯಾಗನ್’ ಚಿತ್ರದ ಟುವಿನೋ ಹೊರಕ್ಕೆ

ಟುವಿನೋ ಥಾಮಸ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ (Toxic) ನಟಿಸಿದ್ದಾರೆ ಎನ್ನಲಾಗುತ್ತಿದೆ. ಅವರು ಮಲಯಾಳಂ ನಟ. ವರ್ಷಕ್ಕೆ 2-3 ಸಿನಿಮಾಗಳನ್ನು ಮಾಡಿ ಅವರಿಗೆ ಅಭ್ಯಾಸ. ಹೀಗಾಗಿ, ದೀರ್ಘ ಕಾಲ ಶೂಟ್ ಆಗುವ ಸಿನಿಮಾಗಳಲ್ಲಿ ನಟಿಸದೇ ಇರಲು ಅವರು ಇಷ್ಟಪಡುತ್ತಾರೆ. ಹೀಗಿರುವಾಗಲೇ, ಟುವಿನೋ ಅವರು ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​​ಟಿಆರ್ ಅವರ ‘ಡ್ರ್ಯಾಗನ್’ ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ.

‘ಡ್ರ್ಯಾಗನ್’ ಸಿನಿಮಾ ಶೂಟಿಂಗ್ ಶುರುವಾಗಿ ಬಹು ಸಮಯ ಕಳೆದಿದೆ. ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಾಕಷ್ಟು ಸಮಯ ತೆಗೆದುಕೊಂಡು ಚಿತ್ರದ ಶೂಟ್ ಮಾಡುತ್ತಿದ್ದಾರೆ. ಹೀಗಾಗಿ, ಟುವಿನೋ ಅವರು ಈ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದ್ದಾರೆ. ‘ನಾವು ಮಲಯಾಳಂನಲ್ಲಿ ಭಿನ್ನವಾಗಿ ಕೆಲಸ ಮಾಡುತ್ತೇವೆ. ತೆಲುಗಿಗಿಂತ ನಾವು ಸಿನಿಮಾ ಶೂಟಿಂಗ್​​​ನ ಬೇಗನೆ ಮುಗಿಸುತ್ತೇವೆ. ನಾವು ವರ್ಷಕ್ಕೆ 4-5 ಚಲನಚಿತ್ರಗಳನ್ನು ಮಾಡುತ್ತೇವೆ. ಡ್ರ್ಯಾಗನ್‌ಗೆ ಡೇಟ್ಸ್ ನೀಡುವುದು 4-5 ಚಲನಚಿತ್ರಗಳಿಗೆ ತೊಂದರೆ ಮಾಡಿದಂತೆ’ ಎಂದಿದ್ದಾರೆ ಅವರು.

ತೆಲುಗು ಚಿತ್ರರಂಗದವರು ಹೆಚ್ಚು ದಿನ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಟುವಿನೋ ಥಾಮಸ್​​ಗೆ ಯಾವುದೇ ಅಸಮಾಧಾನ ಇಲ್ಲ. ಮಲಯಾಳಂ ಸಣ್ಣ ಉದ್ಯಮ. ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡಲಾಗುತ್ತದೆ. ಹೀಗಾಗಿ ಚಿತ್ರವನ್ನು ಬೇಗ ರಿಲೀಸ್ ಮಾಡುವುದು ಅವರಿಗೆ ಮುಖ್ಯವಾಗಿದೆ. ಆದರೆ, ತೆಲುಗು ಚಿತ್ರರಂಗದಲ್ಲಿ ಈ ಮಾಡೆಲ್ ತರೋದು ಕಷ್ಟ. ಸಿನಿಮಾಗಳು ಬಿಗ್ ಬಜೆಟ್​​ನವಾಗಿರುತ್ತವೆ. ದೊಡ್ಡ ದೊಡ್ಡ ಸೆಟ್​​​ಗಳ ನಿರ್ಮಾಣ ಮಾಡಬೇಕಾಗಿರುತ್ತದೆ. ಇದಕ್ಕೆಲ್ಲ ಸಾಕಷ್ಟು ಸಮಯ ಹಿಡಿಯುತ್ತದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರವನ್ನು ಕಿಯಾರಾ ಒಪ್ಪಿಕೊಂಡಿದ್ದೇಕೆ? ಅಸಲಿ ಕಾರಣ ಬಯಲು

‘ಟಾಕ್ಸಿಕ್’ ಸಿನಿಮಾಗೂ ಸಾಕಷ್ಟು ದಿನಗಳ ಕಾಲ ಶೂಟ್ ನಡೆದಿದೆ. ಟುವಿನೋ ಥಾಮಸ್ ಪಾತ್ರ ಹೆಚ್ಚು ಹೊತ್ತು ತೆರೆಮೇಲೆ ಕಾಣಿಸಿಕೊಳ್ಳದಿರಬಹುದು. ಈ ಕಾರಣದಿಂದ ಅವರು ಸಿನಿಮಾದಲ್ಲಿ ನಟಿಸಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಸಿನಿಮಾ ನೋಡಿದ ಬಳಿಕವೇ ಈ ಬಗ್ಗೆ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಗಳೂರು-ಉಡುಪಿಯಲ್ಲಿ ಹದಗೆಡುತ್ತಿದೆ ವಾಯು ಗುಣಮಟ್ಟ; ಉಸಿರಾಡುವ ಮುನ್ನ ಇರಲಿ ಎಚ್ಚರ.

ಬೆಂಗಳೂರು: ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) 58 ರಿಂದ 95 ರ ಆಸುಪಾಸಿನಲ್ಲಿ ದಾಖಲಾಗಿದೆ. ಇದನ್ನು ಹವಾಮಾನ ಇಲಾಖೆಯು ‘ಸಾಧಾರಣ’ (Moderate) ಅಥವಾ ‘ತೃಪ್ತಿಕರ’ (Satisfactory) ವರ್ಗಕ್ಕೆ ಸೇರಿಸಿದೆ. ನಗರದ ಕೆಲವು ಭಾಗಗಳಾದ ಬಿಟಿಎಂ ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಾಲಿನ್ಯದ ಮಟ್ಟ ತುಸು ಹೆಚ್ಚಿದ್ದು, ಅಲ್ಲಿನ AQI 100ರ ಗಡಿ ದಾಟಿದೆ. ಇದು ಶ್ವಾಸಕೋಶದ ಸಮಸ್ಯೆ ಇರುವವರಿಗೆ ಹಾಗೂ ಮಕ್ಕಳಿಗೆ ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು.

ಕರಾವಳಿ ಭಾಗದಲ್ಲಿ ಇತ್ತೀಚೆಗೆ ವಾಯು ಗುಣಮಟ್ಟದಲ್ಲಿ ಏರುಪೇರಾಗುತ್ತಿದೆ. ಇಂದು ಇಲ್ಲಿನ AQI 150ರ ಆಸುಪಾಸಿನಲ್ಲಿದ್ದು, ಇದು ‘ಕಳಪೆ’ (Poor) ಮಟ್ಟಕ್ಕೆ ಹತ್ತಿರದಲ್ಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹವಾಮಾನ ತಕ್ಕಮಟ್ಟಿಗೆ ಉತ್ತಮವಾಗಿದ್ದು, AQI 80-90 ರಷ್ಟಿದೆ. ಕಲಬುರಗಿ ಮತ್ತು ಬೆಳಗಾವಿ ಭಾಗದಲ್ಲಿ ಬಿಸಿಲಿನ ತಾಪ ಹೆಚ್ಚಿದ್ದರೂ, ವಾಯು ಮಾಲಿನ್ಯದ ಮಟ್ಟ ನಿಯಂತ್ರಣದಲ್ಲಿದೆ (AQI ಸುಮಾರು 110-120)

ನಗರವಾರು ವಾಯು ಗುಣಮಟ್ಟ ಸೂಚ್ಯಂಕ:

ನಗರ / ಪ್ರದೇಶ ಗಾಳಿಯ ಮಟ್ಟ (AQI) ಸ್ಥಿತಿ (Status)
ಬೆಂಗಳೂರು 85 – 105 ಸಾಧಾರಣ (Moderate)
ಮಂಗಳೂರು 140 – 155 ಕಳಪೆ (Poor)
ಉಡುಪಿ 135 – 150 ಕಳಪೆ ಹಂತಕ್ಕೆ ಸಮೀಪ
ಹಾಸನ 65 – 75 ತೃಪ್ತಿಕರ (Satisfactory)
ಚಿಕ್ಕಮಗಳೂರು 55 – 65 ಉತ್ತಮ (Good)
ಹುಬ್ಬಳ್ಳಿ 110 – 125 ಸಾಧಾರಣ (Moderate)
ರಾಯಚೂರು 120 – 135 ಧೂಳು ಮಿಶ್ರಿತ ಗಾಳಿ
ಬೀದರ್ 105 – 115 ಸಾಧಾರಣ
ವಿಜಯಪುರ 115 – 130 ಸಾಧಾರಣ
ಮಲೆನಾಡು ಭಾಗ 40 – 60 ಅತ್ಯುತ್ತಮ (Excellent)

ಗಾಳಿಯಲ್ಲಿ PM2.5 ಮತ್ತು PM10 ಕಣಗಳ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ. ಹಿರಿಯ ನಾಗರಿಕರು ಮತ್ತು ಉಸಿರಾಟದ ತೊಂದರೆ ಇರುವವರು ಮಧ್ಯಾಹ್ನದ ವೇಳೆ ಮತ್ತು ವಾಹನ ಸಂಚಾರ ಹೆಚ್ಚಿರುವ ಸಮಯದಲ್ಲಿ ಹೊರಹೋಗುವಾಗ ಜಾಗರೂಕರಾಗಿರಬೇಕು. ಧೂಳು ಹೆಚ್ಚಿರುವ ಪ್ರದೇಶಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಉತ್ತಮ. ಬೆಳಿಗ್ಗೆ ಮತ್ತು ಸಂಜೆಯ ಗರಿಷ್ಠ ಸಂಚಾರದ ಸಮಯದಲ್ಲಿ ಮನೆಯ ಕಿಟಕಿಗಳನ್ನು ಮುಚ್ಚಿಡುವುದು ಸೂಕ್ತ. ಮನೆಯ ಸುತ್ತಮುತ್ತ ಹೆಚ್ಚು ಗಿಡಗಳನ್ನು ಬೆಳೆಸುವುದರಿಂದ ಶುದ್ಧ ಗಾಳಿ ಪಡೆಯಲು ಸಾಧ್ಯ.

ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಡದ ಬಿಸಿಲ ಬೇಗೆ: ಉತ್ತರ ಕರ್ನಾಟಕದಲ್ಲಿ ಕೆಂಡದಂತಹ ಬಿಸಿಲು! ಮಲೆನಾಡಿನಲ್ಲಿ ಹೇಗಿದೆ ತಾಪಮಾನ?

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Donald Trump Speech: ಟ್ರಂಪ್ ಮಹತ್ವದ ಸುದ್ದಿಗೋಷ್ಠಿ, ಇರಾನ್ ಮೇಲಿನ ದಾಳಿ ಮುಂದುವರೆಸುತ್ತಾ ಅಮೆರಿಕ, ಇಲ್ಲಿದೆ ಬಿಗ್ ಅಪ್​ಡೇಟ್ಸ್​

ವಾಷಿಂಗ್ಟನ್, ಏಪ್ರಿಲ್ 2: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಇರಾನ್ ಜತೆಗಿನ ಯುದ್ಧದ ಬಗ್ಗೆ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಅದರಲ್ಲಿ ನಾವು ಇರಾನ್ ಜತೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ, ಅದು ಪರಿಮಾಣು ಶಕ್ತಿಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.ಇರಾನ್, ಯುಎಸ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಯುದ್ಧ ಪ್ರಾರಂಭವಾಗಿ 34 ದಿನಗಳು ಕಳೆದಿವೆ ಮತ್ತು ಹೊಸ ಮುಖಾಮುಖಿಯ ಭಯ ಹೊರಹೊಮ್ಮುತ್ತಿದೆ.

ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳು, ಬ್ಯಾಲಿಸ್ಟಿಕ್ ಕ್ಷಿಪಣಿ ತಾಣಗಳು ಮತ್ತು ಶೇಖರಣಾ ಬಂಕರ್‌ಗಳು ಸೇರಿದಂತೆ 12,300 ಕ್ಕೂ ಹೆಚ್ಚು ಇರಾನಿನ ಗುರಿಗಳ ಮೇಲೆ ಇದುವರೆಗೆ ದಾಳಿ ಮಾಡಿದೆ ಎಂದು ಯುಎಸ್ ಮಿಲಿಟರಿ ಹೇಳಿದೆ. 155 ಕ್ಕೂ ಹೆಚ್ಚು ಹಡಗುಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ. ಯುದ್ಧ ಪ್ರಾರಂಭವಾದಾಗಿನಿಂದ, ಆಧುನಿಕ ಫೈಟರ್ ಜೆಟ್‌ಗಳು ಮತ್ತು ಬಾಂಬರ್‌ಗಳನ್ನು ಬಳಸಿಕೊಂಡು 13,000 ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹಾರಿಸಲಾಗಿದೆ ಎಂದು ಮಿಲಿಟರಿ ಹೇಳುತ್ತದೆ.

ಮಧ್ಯಪ್ರಾಚ್ಯದಲ್ಲಿ ನಿರಂತರ ದಾಳಿಗಳ ಮಧ್ಯೆ, ಟ್ರಂಪ್ ಇಂದು ಯುದ್ಧದ ಕುರಿತು ತಮ್ಮ ಮೊದಲ ಪ್ರೈಮ್‌ಟೈಮ್ ಭಾಷಣ ಮಾಡಿದರು. ವಿಯೆಟ್ನಾಂ ಯುದ್ಧವು 18 ವರ್ಷಗಳ ಕಾಲ ನಡೆಯಿತು ಮತ್ತು ದೀರ್ಘ ಯುದ್ಧಗಳು ನಡೆದಿವೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಆಪರೇಷನ್ ಎಪಿನ್ ಫ್ಯೂರಿ ಮುಂದುವರೆಯುತ್ತದೆ ಎಂದರು.

ಇರಾನ್‌ನಲ್ಲಿ ಅಮೆರಿಕ ತನ್ನ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಸಾಧಿಸುವ ಹಂತಕ್ಕೆ ಹತ್ತಿರದಲ್ಲಿದೆ, ಸಾಧ್ಯವಾದಷ್ಟು ಬೇಗ ಕಾರ್ಯಾಚರಣೆ ಕೊನೆಗೊಳಿಸುವುದಾಗಿ ಭರವಸೆ ನೀಡಿದರು. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಬಿಡಬಾರದು. ವಾಷಿಂಗ್ಟನ್ ತನ್ನ ಗಲ್ಫ್ ಮಿತ್ರರಾಷ್ಟ್ರಗಳನ್ನು ರಕ್ಷಿಸುತ್ತದೆ ಎಂದು ಅವರು ಭರವಸೆ ನೀಡಿದರು.

 

ಮಾಹಿತಿ ಶೀಘ್ರ ಅಪ್​ಡೇಟ್ ಆಗಲಿದೆ

Source link

ದಾನ-ಧರ್ಮಕ್ಕೆ ಇಂದು ಸುವರ್ಣಾವಕಾಶ! ಚೈತ್ರ ಪೌರ್ಣಮಿಯ ಪುಣ್ಯ ಸ್ನಾನ ಮತ್ತು ಮಂತ್ರ ಜಪದ ವಿಶೇಷ ಫಲ

ಬೆಂಗಳೂರು, ಏ.1: ಚೈತ್ರ ಪೌರ್ಣಮಿ ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ಪರ್ವ ದಿನಗಳಲ್ಲಿ ಒಂದಾಗಿದೆ. ಇದನ್ನು ದವನದ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ವರ್ಷದ ಪ್ರಥಮ ಮಾಸವಾದ ಚೈತ್ರ ಮಾಸದಲ್ಲಿ ಬರುವ ಈ ಮೊದಲ ಪೂರ್ಣಿಮೆಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಭಗವಾನ್ ವಿಷ್ಣು ಮತ್ತು ಕರ್ಮಗಳ ಲೆಕ್ಕ ಇಡುವ ಚಿತ್ರಗುಪ್ತನನ್ನು ಪೂಜಿಸಲಾಗುತ್ತದೆ. ಪವಿತ್ರ ಸ್ನಾನ ಮಾಡಿ, ವಿಷ್ಣು ಸಹಸ್ರನಾಮ ಜಪಿಸುವುದು ಅಥವಾ “ಓಂ ನಮೋ ಭಗವತೇ ವಾಸುದೇವಾಯ” ಮಂತ್ರ ಪಠಿಸುವುದು ಶ್ರೇಷ್ಠ. ಅನ್ನದಾನ, ವಸ್ತ್ರದಾನ ಮಾಡುವುದರಿಂದ ಕರ್ಮಗಳ ಪ್ರಭಾವ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಸಾಕ್ಷಾತ್ ಇಂದ್ರ ಮತ್ತು ಶಿವನು ಕೂಡ ಈ ಪೌರ್ಣಮಿಯ ಮಹತ್ವವನ್ನು ಸಾರಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡುವುದು, ಹಿರಿಯರ ಆಶೀರ್ವಾದ ಪಡೆಯುವುದು, ದಾನ ಧರ್ಮಗಳನ್ನು ಮಾಡುವುದು ಈ ದಿನದ ಆಚರಣೆಯ ಪ್ರಮುಖ ಭಾಗವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link