ಬೆಂಗಳೂರು, ಜನವರಿ 06: ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿ ಇಲ್ಲ, ಹೆಚ್.ಡಿ.ದೇವೇಗೌಡರು ಇಲ್ಲ ಅಂದರೆ ಜೆಡಿಎಸ್ ಪಕ್ಷ ಇಲ್ಲ. ಹಾಗೆಯೇ ಸಿದ್ದರಾಮಯ್ಯ ಇಲ್ಲ ಅಂದರೆ ಕಾಂಗ್ರೆಸ್ ಪಕ್ಷ ಇಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ ಇನ್ನಷ್ಟು ಪುಣ್ಯ, ಶ್ರೇಯಸ್ಸು ಲಭಿಸಲಿ. 2028ರಲ್ಲೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜನವರಿ 6: ಆನೇಕಲ್ ತಾಲೂಕಿನಲ್ಲಿ ಇನ್ಫೋಸಿಸ್ನಿಂದ (Infosys) 53.5 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಯಾದ ಪೂರವಂಕರಕ್ಕೆ ಮಾರಾಟ ಮಾಡಿದ ಪ್ರಕರಣ ಈಗ ದೊಡ್ಡ ಸದ್ದು ಮಾಡತೊಡಗಿದೆ. ಬೆಂಗಳೂರು ಜಿಲ್ಲಾಧಿಕಾರಿಗಳು (ಡಿಸಿ) ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರೆಂದು ಗೊತ್ತಾದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೈಗೌಡ ಅವರು ತಿಳಿಸಿದ್ದಾರೆ.
ಏನಿದು ಇನ್ಫೋಸಿಸ್ ಜಮೀನು ಮಾರಾಟ?
ಇನ್ಫೋಸಿಸ್ ಸಂಸ್ಥೆ ಅನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ತಾನು ಹೊಂದಿರುವ 53.5 ಎಕರೆ ಪ್ರದೇಶದ ಜಾಗವನ್ನು 250 ಕೊಟಿ ರೂಗೆ ಪೂರ್ವಂಕರ ಕಂಪನಿಗೆ ಮಾರಾಟ ಮಾಡಿದೆ. ತನ್ನ ಆಸ್ತಿಪಾಸ್ತಿಗಳ ಮರುವಿಂಗಡಣೆಯ ಭಾಗವಾಗಿ ಈ ಆಸ್ತಿಯನ್ನು ಮಾರಲಾಗಿದೆ ಎಂಬುದು ಇನ್ಫೋಸಿಸ್ ನೀಡಿರುವ ಹೇಳಿಕೆ.
ಅಲ್ಲದೇ, ಜಮೀನು ಮಾರಾಟದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಮಾಡಲಾಗಿಲ್ಲ. ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ. ಜೊತೆಗೆ, ಈ ಭೂಮಿ ಸರ್ಕಾರ ಅಲಾಟ್ ಮಾಡಿದ್ದಲ್ಲ. ಮಾರುಕಟ್ಟೆ ಮೌಲ್ಯಕ್ಕೆ ಖರೀದಿ ಮಾಡಿದ್ದಿದು ಎಂದು ಇನ್ಫೋಸಿಸ್ ಹೇಳಿಕೆ ಕೊಟ್ಟಿದೆ.
ಇನ್ಫೋಸಿಸ್ ಭೂಮಿ ಮಾರಾಟ ನೆರವೇರಿಸಿದ ಸರ್ಜಾಪುರ ಉಪನೊಂದಣಾಧಿಕಾರಿ ರವಿ ಸಂಕನಗೌಡ ಅವರನ್ನು ಇಲಾಖೆ ಅಮಾನತು ಮಾಡಿದೆ. ಅಕ್ರಮ ರಿಜಿಸ್ಟ್ರೇಶನ್ ಮೂಲಕ 40 ಸೇಲ್ ಡೀಡ್ಗಳನ್ನು ನೊಂದಾಯಿಸಲಾಗಿದೆ ಎನ್ನುವುದು ಆರೋಪ.
ಕಾವೇರಿ 2.0 ಸಾಫ್ಟ್ವೇರ್ ದುರುಪಯೋಗದ ಆರೋಪ
ಸೇಲ್ ಡೀಡ್ಗಳನ್ನು ನೊಂದಾಯಿಸುವ ಕಾವೇರಿ 2.0 ರಿಜಿಸ್ಟ್ರೇಶನ್ ಸಾಫ್ಟ್ವೇರ್ನಲ್ಲಿ ಕೋರ್ಟ್ ಆದೇಶವಿರುವ ಪ್ರಕರಣಗಳಲ್ಲಿ ಸೇಲ್ ಡೀಡ್ಗಳ ರಿಜಿಸ್ಟ್ರೇಶನ್ಗಳಿಗೆ ವಿನಾಯಿತಿ ಕೊಡುವ ಅವಕಾಶ ಇದೆ. ಇದನ್ನು ದುರುಪಯೋಗಿಸಿಕೊಳ್ಳಲಾಗಿದೆ. ಕೋರ್ಟ್ ಆದೇಶ ಇಲ್ಲದಿದ್ದರೂ, ಕೋರ್ಟ್ ಆರ್ಡರ್ ಆಪ್ಷನ್ ಆಯ್ಕೆ ಮಾಡಿಕೊಂಡು ಸೇಲ್ ಡೀಡ್ಗಳನ್ನು ನೊಂದಾಯಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ಫೋಸಿಸ್ನ ಜಮೀನು ಮಾರಾಟ ಮಾತ್ರವಲ್ಲ, ಇನ್ನೂ ಅನೇಕ ಪ್ರಕರಣಗಳು ಇದೇ ರೀತಿ ಆಗಿದೆ. ಹೀಗಾಗಿ ಉಪನೊಂದಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಸರ್ಜಾರಪುರ ಮಾತ್ರವಲ್ಲ, ಬಾನಸವಾಡಿ, ವರ್ತೂರು ಮತ್ತು ಹಲಸರೂರು ಉಪನೊಂದಣಿ ಕಚೇರಿಗಳಲ್ಲೂ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಐವರು ಅಧಿಕಾರಿಗಳನ್ನು ಇತ್ತೀಚೆಗೆ ಅಮಾನತುಗೊಳಿಸಲಾಗಿತ್ತು.
ಸುಮಾರು 2 ತಿಂಗಳ ಬಳಿಕ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಂಡಿರುವ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ತಮ್ಮ ಫಿಟ್ನೆಸ್ ಸಾಭೀತುಪಡಿಸಿರುವುದಲ್ಲದೆ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಬಿಸಿಸಿಐಗೆ ತಾನು ಸಂಪೂರ್ಣ ಫಿಟ್ ಆಗಿದ್ದೇನೆ ಎಂಬ ಮೆಸೇಜ್ ನೀಡಿದ್ದಾರೆ. ಹೀಗಾಗಿ ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅಯ್ಯರ್ ಆಡುವುದು ಖಚಿತವಾಗಿದೆ.
ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಆರನೇ ಸುತ್ತಿನ ಪಂದ್ಯದಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿದಿರುವ ಶ್ರೇಯಸ್ ಅಯ್ಯರ್ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ 82 ರನ್ಗಳ ಇನ್ನಿಂಗ್ಸ್ ಆಡಿದ್ದಾರೆ. ಗಾಯಗೊಂಡ ನಂತರ ಮೊದಲ ಬಾರಿಗೆ ವೃತ್ತಿಪರ ಕ್ರಿಕೆಟ್ ಆಡುತ್ತಿರುವ ಅಯ್ಯರ್ ತಮ್ಮ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್ಗಳನ್ನು ಬಾರಿಸಿದರು.
ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಶತಕ ಬಾರಿಸುವ ಅವಕಾಶ ಹೊಂದಿದ್ದರು. ಆದರೆ ಕುಶಾಲ್ ಪಾಲ್ ಎಸೆತದಲ್ಲಿ ಅಮನ್ಪ್ರೀತ್ಗೆ ಕ್ಯಾಚ್ ನೀಡಿ ಔಟಾದರು. ಆದಾಗ್ಯೂ, ಅವರು ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ ಬೌಂಡರಿ, ಸಿಕ್ಸರ್ಗಳಿಂದಲೇ 58 ರನ್ ಬಾರಿಸಿ ಅಭಿಮಾನಿಗಳನ್ನು ರಂಜಿಸಿದ್ದು ಮಾತ್ರವಲ್ಲದೆ, ತಮ್ಮ ಉತ್ತಮ ಫಾರ್ಮ್ ಅನ್ನು ಸಾಭೀತುಪಡಿಸಿದರು.
ಮೇಲೆ ಹೇಳಿದಂತೆ ಶ್ರೇಯಸ್ ಅಯ್ಯರ್ಗೆ, ಈ ಪಂದ್ಯವು ಪಂದ್ಯಕ್ಕಿಂತ ಹೆಚ್ಚಿನ ಪರೀಕ್ಷೆಯಾಗಿತ್ತು. ಅಯ್ಯರ್ ಅವರನ್ನು ನ್ಯೂಜಿಲೆಂಡ್ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದ್ದರೂ, ಅವರ ಪಂದ್ಯದ ಫಿಟ್ನೆಸ್ ನಿರ್ಣಾಯಕವಾಗಿರುತ್ತದೆ. ಇದಕ್ಕಾಗಿಯೇ ಬಿಸಿಸಿಐ ಈ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಆಡುವ ಮೂಲಕ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸುವಂತೆ ಕೇಳಿಕೊಂಡಿತು. ಅದರಂತೆ ಅಯ್ಯರ್ ತನ್ನ ಫಿಟ್ನೆಸ್ ಜೊತೆಗೆ ತನ್ನ ಫಾರ್ಮ್ ಅನ್ನು ಸಾಬೀತುಪಡಿಸಿದ್ದಾರೆ.
ಶ್ರೇಯಸ್ ಅಯ್ಯರ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಹಳಷ್ಟು ರನ್ಗಳಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ 60 ಕ್ಕಿಂತ ಹೆಚ್ಚು ಸರಾಸರಿಯನ್ನು ಹೊಂದಿರುವ ಅಯ್ಯರ್ 1,900 ಕ್ಕೂ ಹೆಚ್ಚು ರನ್ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಏಳು ಶತಕಗಳು ಮತ್ತು ಎಂಟು ಅರ್ಧಶತಕಗಳು ಸೇರಿವೆ.
ವಿಜಯ್ ಹಜಾರೆ ಟೂರ್ನಿಯ (Vijay Hazare Trophy) 6ನೇ ಸುತ್ತಿನ ಪಂದ್ಯಗಳು ಇಂದು ನಡೆಯುತ್ತಿವೆ. ಇಂದಿನ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ರಾಜಸ್ಥಾನ ತಂಡ ( Karnataka vs Rajasthan) ಎದುರಾಗಿದೆ. ಗುಜರಾತ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 324 ರನ್ ಕಲೆಹಾಕಿದೆ. ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಸಿಡಿಸಿದರೆ, ಅತ್ಯುತ್ತಮ ಫಾರ್ಮ್ನಲ್ಲಿರುವ ದೇವದತ್ ಪಡಿಕ್ಕಲ್ ( Devdutt Padikkal) ಕೇವಲ 9 ರನ್ಗಳಿಂದ ದಾಖಲೆಯ 5ನೇ ಶತಕದಿಂದ ವಂಚಿತರಾದರು. ಆದಾಗ್ಯೂ ನಾಯಕನ ಜೊತೆಗೂಡಿ ತಂಡಕ್ಕೆ ಒಳ್ಳೇಯ ಆರಂಭ ಒದಗಿಸಿಕೊಡುವಲ್ಲಿ ಪಡಿಕ್ಕಲ್ ಯಶಸ್ವಿಯಾದರು. ಇವರಿಬ್ಬರ ಜೊತೆಯಾಟದಿಂದಾಗಿ ಕರ್ನಾಟಕ ತಂಡ ಮೊದಲ ವಿಕೆಟ್ಗೆ 184 ರನ್ ಕಲೆಹಾಕಿತು.
ಕರ್ನಾಟಕಕ್ಕೆ ಭರ್ಜರಿ ಆರಂಭ
ಈ ಪಂದ್ಯದಲ್ಲಿ ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಎಂದಿನಂತೆ ನಾಯಕ ಮಯಾಂಕ್ ಹಾಗೂ ಪಡಿಕ್ಕಲ್ ಇನ್ನಿಂಗ್ಸ್ ಆರಂಭಿಸಿದರು. ಕಳೆದ ಪಂದ್ಯದಲ್ಲಿ ನಾಯಕ ಮಯಾಂಕ್ ಎಡವಿದ್ದರಿಂದ ಈ ಪಂದ್ಯದಲ್ಲಿ ಅವರ ಮೇಲೆ ನಿರೀಕ್ಷೆಗಳಿದ್ದವು. ಅದರಂತೆ ಬ್ಯಾಟ್ ಬೀಸಿದ ಮಯಾಂಕ್, ಪಡಿಕ್ಕಲ್ ಜೊತೆಗೆ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಆರಂಭದಿಂದಲೂ ರಾಜಸ್ಥಾನ್ ವೇಗಿಗಳನ್ನು ಕಾಡಿದ ಈ ಜೋಡಿ ತಲಾ ಅರ್ಧಶತಕ ಬಾರಿಸುವುದರೊಂದಿಗೆ ತಂಡವನ್ನು ಶತಕದ ಗಡಿ ದಾಟಿಸಿತು. ಆ ಬಳಿಕ ನಾಯಕ ಮಯಾಂಕ್ ಈ ಆವೃತ್ತಿಯ ಎರಡನೇ ಶತಕದ ಸನಿಹದಲಿದ್ದರು. ಇತ್ತ ಪಡಿಕ್ಕಲ್ ಕೂಡ ಶತಕದತ್ತ ದಾಪುಗಾಲಿಟ್ಟಿದ್ದರು.
9 ರನ್ಗಳಿಂದ 5ನೇ ಶತಕ ಮಿಸ್
ಆದರೆ 82 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 91 ರನ್ಗಳಿಸಿ ಆಡುತ್ತಿದ್ದ ಪಡಿಕ್ಕಲ್, ಎದುರಾಳಿ ತಂಡದ ನಾಯಕ ಮಾನವ್ ಸುತಾರ್ ಎಸೆದ 29ನೇ ಓವರ್ನ 2ನೇ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಈ ಮೂಲಕ ಪಡಿಕ್ಕಲ್, ಈ ಆವೃತ್ತಿಯ 5ನೇ ಶತಕದಿಂದ ವಂಚಿತರಾದರು. ಈ ಪಂದ್ಯದಲ್ಲಿ ಪಡಿಕ್ಕಲ್ ಶತಕ ಬಾರಿಸಿದ್ದರೆ, ವಿಜಯ್ ಹಜಾರೆ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಅಧಿಕ ಶತಕಗಳನ್ನು ಬಾರಿಸಿದ್ದ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನಕ್ಕೇರುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಪಡಿಕ್ಕಲ್ಗೂ ಮುನ್ನ ಎನ್ ಜಗದೀಸನ್ ಹಾಗೂ ಕನ್ನಡಿಗ ಕರುಣ್ ನಾಯರ್, ಒಂದೇ ಆವೃತ್ತಿಯಲ್ಲಿ ತಲಾ 5 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.
ಈ ಆವೃತ್ತಿಯಲ್ಲಿ ಇದುವರೆಗೆ 6 ಪಂದ್ಯಗಳನ್ನಾಡಿರುವ ಪಡಿಕ್ಕಲ್ 605 ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಭರ್ಜರಿ ಶತಕಗಳು ಹಾಗೂ ಒಂದು ಅರ್ಧಶತಕ ಸೇರಿದೆ. ಅಂದರೆ ಪಡಿಕ್ಕಲ್ ಆಡಿರುವ 6 ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಹೊರತುಪಡಿಸಿ ಉಳಿದ 5 ಪಂದ್ಯಗಳಲ್ಲಿ ಶತಕ ಹಾಗೂ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. 2025-26ರ ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಡಿಕ್ಕಲ್ ಜಾರ್ಖಂಡ್ ವಿರುದ್ಧ 147 ರನ್ ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ನಂತರ ಕೇರಳ ವಿರುದ್ಧ 124 ರನ್, ತಮಿಳುನಾಡು ವಿರುದ್ಧ 22 ರನ್ ಗಳಿಸಿ ಔಟಾಗಿದ್ದರು. ನಂತರ ಪುದುಚೇರಿ ವಿರುದ್ಧ 113 ರನ್ ಬಾರಿಸಿದರೆ, ತ್ರಿಪುರ ವಿರುದ್ಧ 108 ರನ್ ಚಚ್ಚಿದ್ದರು. ಈಗ ರಾಜಸ್ಥಾನ ವಿರುದ್ಧ 91 ರನ್ ಬಾರಿಸಿದ ಪಡಿಕ್ಕಲ್ ಒಂಬತ್ತು ರನ್ಗಳಿಂದ ಶತಕ ವಂಚಿತರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಳ್ಳಾರಿ, ಜನವರಿ 06: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ರಾಜಶೇಖರ್ ನಿವಾಸಕ್ಕೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಮುಂದೆ ಮೃತ ರಾಜಶೇಖರ ತಾಯಿ ತುಳಸಿ ಅವರು ಕಣ್ಣೀರು ಹಾಕಿದರು. ಇಡೀ ಮನೆಗೆ ರಾಜಶೇಖರ್ ಆಧಾರವಾಗಿದ್ದ ಎಂದು ಕಣ್ಣೀರು ಹಾಕಿದರು. ಇಡೀ ಪಕ್ಷವೇ ರಾಜಶೇಖರ ಕುಟುಂಬಸ್ಥರ ಜೊತೆ ಇದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರದಿಂದ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ರಿಯಲ್ ಘಟನೆಯನ್ನು ಆಧರಿಸಿ ತಯಾರಾದ ‘ಧುರಂಧರ್’ (Dhurandhar) ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳು ಕಳೆದಿದೆ. ಈಗಲೂ ದೇಶಾದ್ಯಂತ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ರಣವೀರ್ ಸಿಂಗ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ (Akshaye Khanna) ಮುಂತಾದವರು ನಟಿಸಿದ ಈ ಸಿನಿಮಾಗೆ ಬಹುತೇಕ ಪಾಸಿಟಿವ್ ವಿಮರ್ಶೆ ಸಿಕ್ಕಿದೆ. ಇಷ್ಟು ದಿನಗಳ ತನಕವೂ ಈ ಸಿನಿಮಾದ ಟಿಕೆಟ್ ಬೆಲೆ ದುಬಾರಿ ಆಗಿತ್ತು. ಆದರೆ ಈಗ ಟಿಕೆಟ್ ಬೆಲೆ ಕಡಿಮೆ ಮಾಡಲಾಗಿದೆ. ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಈಗ ಕೇವಲ 199 ರೂಪಾಯಿಗೆ ‘ಧುರಂಧರ್’ ಸಿನಿಮಾದ ಟಿಕೆಟ್ ಸಿಗಲಿದೆ.
‘ಧುರಂಧರ್’ ಸಿನಿಮಾ ಡಿಸೆಂಬರ್ 5ರಂದು ಬಿಡುಗಡೆ ಆಗಿತ್ತು. ಆಗ ಈ ಸಿನಿಮಾದ ಟಿಕೆಟ್ ಬೆಲೆ ಮುಗಿಲು ಮುಟ್ಟಿತ್ತು. ಸಿನಿಮಾದ ಅವಧಿ 3 ಗಂಟೆ 30 ನಿಮಿಷ ಆದ್ದರಿಂದ ಚಿತ್ರಮಂದಿರಗಳಲ್ಲಿ ಒಂದೇ ದಿನ ಹೆಚ್ಚು ಶೋ ಹಾಕಲು ಕಷ್ಟಪಡಬೇಕಿತ್ತು. ಕಡಿಮೆ ಅವಧಿಯ ಎರಡು ಸಿನಿಮಾಗಳ ಜಾಗವನ್ನು ‘ಧುರಂಧರ್’ ಆಕ್ರಮಿಸಿಕೊಳ್ಳುತ್ತದೆ. ಆ ಕಾರಣದಿಂದಾಗಿ ಸಿನಿಮಾ ಟಿಕೆಟ್ ಬೆಲೆ 250ರಿಂದ ಆರಂಭ ಆಗಿ, ಒಂದೂವರೆ ಸಾವಿರ ರೂಪಾಯಿ ತನಕವೂ ಆಗಿತ್ತು. ಆದರೆ ಈಗ ಟಿಕೆಟ್ ಬೆಲೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ.
32ನೇ ದಿನ ‘ಧುರಂಧರ್’ ಸಿನಿಮಾದ ಕಲೆಕ್ಷನ್ ಗಣನೀಯವಾಗಿ ತಗ್ಗಿದೆ. ಇಷ್ಟು ದಿನಗಳ ಕಾಲ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದ್ದ ಈ ಸಿನಿಮಾ 32ನೇ ದಿನದಲ್ಲಿ ಕೇವಲ 4.75 ಕೋಟಿ ರೂಪಾಯಿ ಗಳಿಸಿತು. ಮುಂದಿನ ದಿನಗಳಲ್ಲಿ ಕಲೆಕ್ಷನ್ ಇನ್ನಷ್ಟು ತಗ್ಗಲಿದೆ ಎಂಬುದು ಖಚಿತ ಆಗಿದೆ. ಹಾಗಾಗಿ ಟಿಕೆಟ್ ಬೆಲೆ ಕಡಿಮೆ ಮಾಡುವ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ಮುಂದಾಗಿದೆ.
Iss dhamakedar offer ko haath se jaane matt dena! Dhurandhar tickets starting ₹199 only for today. 🔥💥
ಗೋಲ್ಡ್ ಕ್ಲಾಸ್ ರೀತಿಯ ಟಿಕೆಟ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸಾಮಾನ್ಯ ಆಸನಗಳ ಟಿಕೆಟ್ ಬೆಲೆಯನ್ನು ತಗ್ಗಿಸಲಾಗಿದೆ. ಆದರೆ ಈ ಆಫರ್ ಇರುವುದು ಒಂದು ದಿನ ಮಾತ್ರ ಹಾಗೂ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇದರಿಂದ ಚಿತ್ರದ ಕಲೆಕ್ಷನ್ ಮತ್ತೆ ಹೆಚ್ಚುತ್ತಾ ಎಂಬುದನ್ನು ಕಾದು ನೋಡಬೇಕು.
‘ಧುರಂಧರ್’ ಸಿನಿಮಾಗೆ ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಅರ್ಜುನ್ ರಾಮ್ಪಾಲ್ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ಜಿಯೋ ಸ್ಟುಡಿಯೋಸ್’ ಮತ್ತು ‘ಬಿ62 ಸ್ಟುಡಿಯೋಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.
ನವದೆಹಲಿ, ಜನವರಿ 6: 2027ರಲ್ಲಿ ನಡೆಯುವ ಅರ್ಧ ಕುಂಭಮೇಳವನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ಸರ್ಕಾರವು ಹರಿದ್ವಾರದ (Haridwar) ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶದ ಕುರಿತು ಕಠಿಣ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದೆ. ಹರಿದ್ವಾರದಲ್ಲಿ ಸುಮಾರು 120 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ 105 ಘಾಟ್‌ಗಳಲ್ಲಿ ಹಿಂದೂಯೇತರರಿಗೆ ಪ್ರವೇಶ ನಿಷೇಧವನ್ನು ಪರಿಗಣಿಸಲಾಗುತ್ತಿದೆ.
ಇತ್ತೀಚೆಗೆ, ಶ್ರೀ ಗಂಗಾ ಸಭೆಗೆ ಸಂಬಂಧಿಸಿದ ಕೆಲವು ಅಧಿಕಾರಿಗಳು ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಿದ್ದರು. 2027ರಲ್ಲಿ ನಡೆಯುವ ಅರ್ಧ ಕುಂಭಮೇಳದೊಂದಿಗೆ ಹರಿದ್ವಾರದ ಗಂಗಾ ಘಾಟ್‌ಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧ ಆರಂಭವಾಗಬಹುದು. ಈ ಬಗ್ಗೆ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದಾರೆ. ಹರಿದ್ವಾರ ಪವಿತ್ರ ನಗರವಾಗಿದ್ದು, ಸರ್ಕಾರವು ಅದರ ಆಧ್ಯಾತ್ಮಿಕ ಘನತೆಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರವು ಋಷಿಕೇಶ ಮತ್ತು ಹರಿದ್ವಾರಗಳನ್ನು ಸನಾತನ ಪವಿತ್ರ ನಗರಗಳೆಂದು ಘೋಷಿಸುವ ಸಾಧ್ಯತೆಯನ್ನು ಪರಿಗಣಿಸುತ್ತಿದೆ. ಮುಖ್ಯಮಂತ್ರಿಯ ಹೇಳಿಕೆ ಪ್ರಕಾರ, ಈ ಎರಡು ನಗರಗಳು ಸನಾತನ ಸಂಪ್ರದಾಯ ಮತ್ತು ನಂಬಿಕೆಯ ಪ್ರಮುಖ ಕೇಂದ್ರಗಳಾಗಿದ್ದು, ದೇಶಾದ್ಯಂತ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿವೆ. ಆದ್ದರಿಂದ, ಜನಸಂದಣಿ ನಿಯಂತ್ರಣ, ಭದ್ರತೆ ಮತ್ತು ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಸರ್ಕಾರ ಎಲ್ಲಾ ಆಯ್ಕೆಗಳನ್ನು ಅನ್ವೇಷಿಸುತ್ತಿದೆ.
ಹರಿದ್ವಾರವು ಪ್ರತಿ ವರ್ಷ 5 ಕೋಟಿಗೂ ಹೆಚ್ಚು ಭಕ್ತರನ್ನು ಆಕರ್ಷಿಸುತ್ತದೆ. 2027ರಲ್ಲಿ ನಡೆಯುವ ಅರ್ಧ ಕುಂಭಮೇಳ, ಶ್ರಾವಣ ಮಾಸದಲ್ಲಿ ನಡೆಯುವ ಕನ್ವರ್ ಯಾತ್ರೆ ಮತ್ತು ಗಂಗಾ ಕಾರಿಡಾರ್ ಯೋಜನೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಜನಸಂದಣಿಯನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ಧಾರ್ಮಿಕ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ 105 ಗಂಗಾ ಘಾಟ್‌ಗಳ ಸಮೀಕ್ಷೆಯನ್ನು ನಡೆಸಲಾಗಿದೆ ಮತ್ತು ಅವುಗಳ ಪುನರಾಭಿವೃದ್ಧಿ ಮತ್ತು ಪುನರ್ನಿರ್ಮಾಣಕ್ಕೆ ಸಿದ್ಧತೆಗಳು ಪ್ರಾರಂಭವಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತೆಲುಗು ಚಿತ್ರರಂಗ (Tollywood), ಭಾರತದ ಚಿತ್ರರಂಗಗಳಲ್ಲಿಯೇ ಅತ್ಯಂತ ಲಾಭದಾಯಕ ಚಿತ್ರರಂಗವಾಗಿದೆ. ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಎಂಬ ವಿದೇಶಿಗರ ನಂಬಿಕೆಯನ್ನು ಅಳಿಸಿ ಹಾಕಿದ ಶ್ರೇಯ ತೆಲುಗು ಚಿತ್ರರಂಗಕ್ಕೆ ಸಲ್ಲಬೇಕಿದೆ. ‘ಬಾಹುಬಲಿ’, ‘ಆರ್ಆರ್ಆರ್’ ಸೇರಿದಂತೆ ಇನ್ನೂ ಹಲವು ಸಿನಿಮಾಗಳ ಮೂಲಕ ವಿಶ್ವಮಟ್ಟದಲ್ಲಿ ತೆಲುಗು ಚಿತ್ರರಂಗ ಜನಪ್ರಿಯತೆ ಕಂಡಿದೆ. ದೊಡ್ಡ ಚಿತ್ರರಂಗಗಳಲ್ಲಿ ಅತಿ ಹೆಚ್ಚು ಯಶಸ್ವಿ ಸರಾಸರಿ ಹೊಂದಿರುವ ಚಿತ್ರರಂಗವೂ ತೆಲುಗು ಚಿತ್ರರಂಗವೇ ಆಗಿದೆ. ಆದರೆ ತೆಲುಗು ಚಿತ್ರರಂಗವನ್ನು ಪೈರಸಿ ಎಂಬುದು ದಶಕಗಳಿಂದಲೂ ಕಾಡುತ್ತಲೇ ಬಂದಿದೆ. ಆದರೆ ಇತ್ತೀಚೆಗೆ ಈ ಪೈರಸಿ ತಡೆಗಾಗಿ ಚಿತ್ರರಂಗ ಕೆಲವು ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ.
ಕೋವಿಡ್ ಬಳಿಕ ಆದ ಒಟಿಟಿ ಕ್ರಾಂತಿಯ ಅಡ್ಡಪರಿಣಾಮವಾಗಿ ಪೈರಸಿ ಮೊದಲಿಗಿಂತಲೂ ಹೆಚ್ಚಾಗಿದೆ ಮತ್ತು ಮೊದಲಿಗಿಂತಲೂ ಹೆಚ್ಚು ವಿಸ್ತಾರವನ್ನು ಪಡೆದುಕೊಂಡಿದೆ. ಈಗಂತೂ ಬೆರಳ ತುದಿಯಲ್ಲಿ ಪೈರಸಿ ಸಿನಿಮಾಗಳು ಲಭ್ಯವಾಗುವಂತಾಗಿದೆ. ಇದರಿಂದಾಗಿ ಚಿತ್ರರಂಗಗಳಿಗೆ ವಾರ್ಷಿಕ ಸಾವಿರಾರು ಕೋಟಿ ನಷ್ಟವಾಗುತ್ತಿದೆ. ಇದರಲ್ಲಿ ಹೆಚ್ಚು ನಷ್ಟ ಅನುಭವಿಸುತ್ತಿರುವುದು ತೆಲುಗು ಚಿತ್ರರಂಗ. ಏಕೆಂದರೆ ಚಿತ್ರಮಂದಿರ ಮತ್ತು ಒಟಿಟಿಗಳಲ್ಲಿ ತೆಲುಗು ಸಿನಿಮಾಗಳಿಗೆ ಒಳ್ಳೆಯ ಬೇಡಿಕೆ ಇದೆ. ಅಲ್ಲದೆ, ಪೈರಸಿ ಕೋರರು ಟಾರ್ಗೆಟ್ ಮಾಡುತ್ತಿರುವುದು ಸಹ ತೆಲುಗು ಸಿನಿಮಾಗಳನ್ನೇ ಹೆಚ್ಚು.
ಇತ್ತೀಚೆಗಿನ ವರ್ಷಗಳಲ್ಲಿ ತೆಲುಗು ಚಿತ್ರರಂಗ ಈ ಪೈರಸಿ ತಡೆಯಲು ದಿಟ್ಟ ಹೆಜ್ಜೆಗಳನ್ನು ಇಡುತ್ತಾ ಬಂದಿದೆ. ಮೆಗಾಸ್ಟಾರ್ ಚಿರಂಜೀವಿ ನೇತೃತ್ವದಲ್ಲಿ ಟಾಲಿವುಡ್ನ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡ ಉನ್ನತ ವರ್ಗದ ನಿಯೋಗ ಕಾಲ ಕಾಲಕ್ಕೆ ಸೈಬರ್ ಪೊಲೀಸರನ್ನು ಭೇಟಿ ಮಾಡಿ ಪೈರಸಿ ಬಗ್ಗೆ ದೂರುಗಳನ್ನು ನೀಡುತ್ತಲೇ ಬಂದಿದೆ. ಸರ್ಕಾರದ ಸಿನಿಮಾಟೊಗ್ರಫಿ ಸಚಿವರು, ಗೃಹ ಮಂತ್ರಿಗಳನ್ನು ಸಹ ಭೇಟಿ ಮಾಡಿ ದೂರುಗಳನ್ನು ನೀಡಲಾಗಿತ್ತು.
ಅದರ ಫಲವಾಗಿ ಐಬೊಮ್ಮ ರವಿ ಸೇರಿದಂತೆ ಇನ್ನೂ ಕೆಲವು ಪ್ರಮುಖ ಪೈರಸಿಕೋರರನ್ನು ಸೈಬರಾಬಾದ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಅವರು ನಡೆಸುತ್ತಿದ್ದ ಕೆಲವಾರು ಪೈರಸಿ ಸೈಟ್ ಮತ್ತು ಅಪ್ಲಿಕೇಶನ್ಗಳನ್ನು ಬಂದ್ ಮಾಡಿಸಿದ್ದಾರೆ. ಇತ್ತೀಚೆಗಷ್ಟೆ ತೆಲುಗು ಸಿನಿಮಾ ಚೇಂಬರ್ಗೆ ನೂತನ ಅಧ್ಯಕ್ಷರಾಗಿ ಖ್ಯಾತ ಸಿನಿಮಾ ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು ಆಯ್ಕೆ ಆಗಿದ್ದು, ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪೈರಸಿ ತಡೆ ಕುರಿತಾಗಿ ಪೊಲೀಸರೊಂದಿಗೆ ಮೆಮೊರ್ಯಾಂಡಮ್ (ಜ್ಞಾಪಕ ಪತ್ರ) ಸಹಿ ಮಾಡಿಕೊಂಡಿದ್ದಾರೆ.
ಇದರಂತೆ ಪೈರಸಿ ತಡೆಗೆ ಪೊಲೀಸರು ಮತ್ತು ತೆಲುಗು ಚಿತ್ರರಂಗ ಇನ್ನು ಮುಂದೆ ಜೊತೆ-ಜೊತೆಯಾಗಿ ಕೆಲಸ ಮಾಡಲಿದೆ. ಈಗಾಗಲೇ ಲಭ್ಯವಿರುವ ಪೈರಸಿ ಸೈಟುಗಳನ್ನು ತೆಗೆದು ಹಾಕುವ ಜೊತೆಗೆ ಮುಂದಿನ ದಿನಗಳಲ್ಲಿ ಸಿನಿಮಾಗಳ ಪೈರಸಿ ಆಗದಂತೆ ತಡೆಯುವ ಪ್ರಯತ್ನಗಳನ್ನು ಒಕ್ಕೂರಲಿನಿಂದ ಮಾಡುವ ಯೋಜನೆ ಇದೆ.
ಹೊಳೆಯುವ ಸೊಂಪಾದ ಕೂದಲು (hair) ನಮ್ಮದಾಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ ದುಬಾರಿ ಶ್ಯಾಂಪೂ, ಕಂಡೀಷನರ್‌ಗಳನ್ನು ಹಚ್ಚಿಕೊಳ್ಳುತ್ತಾರೆ. ಹೊಳೆಯುವ ಕೂದಲಿಗಾಗಿ ಕೆರಾಟಿನ್‌ನಂತಹ ಚಿಕಿತ್ಸೆಗಳ ಮೊರೆ ಹೋಗ್ತಾರೆ. ಆದ್ರೆ ಇದರಿಂದ ಯಾವುದೇ ಹೆಚ್ಚಿನ ಫಲಿತಾಂಶಗಳು ದೊರೆಯುವುದಿಲ್ಲ ಬದಲಾಗಿ ಕೂದಲು ಉದುರುವ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಾರೆ. ಹೀಗಿರುವಾಗ ಶ್ಯಾಂಪೂ ಜೊತೆ ಗ್ಲಿಸರಿನ್ ಸೇರಿಸಿ ಕೂದಲಿಗೆ ಹಚ್ಚಿ, ಇದು ಕೂದಲನ್ನು ರೇಷ್ಮೆಯ ಹಾಗೆ ಹೊಳೆಯುವಂತೆ ಮಾಡುವುದಲ್ಲದೆ ಕೂದಲು ಉದುರುವಿಕೆ, ತಲೆಹೊಟ್ಟು ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಹಾಗಿದ್ರೆ ಕೂದಲಿನ ಆರೈಕೆಗೆ ಗ್ಲಿಸರಿನ್ ಅನ್ನು ಹೇಗೆ ಬಳಸುವುದು ನೋಡೋಣ.
ಕೂದಲಿನ ಆರೈಕೆಗೆ ಗ್ಲಿಸರಿನ್:
ಗ್ಲಿಸರಿನ್ ತ್ವಚೆಯ ಆರೈಕೆಗೆ ಮಾತ್ರವಲ್ಲ ಕೂದಲಿನ ಆರೈಕೆಗೂ ಪ್ರಯೋಜನಕಾರಿ. ಹೌದು ಗ್ಲಿಸರಿನ್ ಕೂದಲಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು, ತಲೆಹೊಟ್ಟು ಕಡಿಮೆ ಮಾಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಗ್ಲಿಸರಿನ್ ಕೂದಲನ್ನು ಬೇರುಗಳಿಂದ ಕಂಡೀಷನ್ ಮಾಡುತ್ತದೆ, ನೆತ್ತಿಯ ಮೇಲೆ ಆರೋಗ್ಯಕರ ಕೂದಲು ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ ಹೀಗೆ ಇದು ನೆತ್ತಿಯ ಒಟ್ಟಾರೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ.
ಸ್ವಲ್ಪ ಶ್ಯಾಂಪೂಗೆ 1 ಟೀ ಸ್ಪೂನ್ ಗ್ಲಿಸರಿನ್ ಸೇರಿಸಿ ಜೊತೆಗೆ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಈ ಗ್ಲಿಸರಿನ್ ಮಿಶ್ರಿತ ಶ್ಯಾಂಪೂವಿನಿಂದ ಕೂದಲನ್ನು ತೊಳೆಯಿರಿ. ಅಲ್ಲದೆ ಶಾಂಪೂ ಮಾಡಿದ ನಂತರ ನೀವು ಗ್ಲಿಸರಿನ್ ಅನ್ನು ಕಂಡಿಷನರ್ ರೀತಿಯಲ್ಲೂ ಬಳಸಬಹುದು. ಇದಕ್ಕಾಗಿ ಶ್ಯಾಂಪೂ ಮಾಡಿದ ನಂತರ ಇತರೆ ಕಂಡೀಷನ್ ಬದಲಿಗೆ ಗ್ಲಿಸರಿನ್ ನೊಂದಿಗೆ ಸ್ವಲ್ಪ ನೀರು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ, ನಂತರ ತೊಳೆಯಿರಿ. ಇದು ಕೂದಲಿಗೆ ಅಗತ್ಯವಾದ ತೇವಾಂಶ ಮತ್ತು ಪೋಷಣೆಯನ್ನು ಒದಗಿಸುತ್ತವೆ ಮತ್ತು ಕೂದಲಿನ ನೈಸರ್ಗಿಕ ಮೃದುತ್ವ ಮತ್ತು ಹೊಳಪನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತವೆ. ತಲೆಹೊಟ್ಟು, ಸೀಳು ತುದಿ ಕೂದಲು, ಒಣ ಕೂದಲು ಸಮಸ್ಯೆಯನ್ನು ನಿವಾರಿಸುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಕೂದಲಿನ ಆರೈಕೆಗೆ ಈ ಮನೆಮದ್ದುಗಳ ಜೊತೆ ಜೊತೆಗೆ ಸಾಕಷ್ಟು ನೀರು ಕುಡಿಯುವುದು, ಸಮತೋಲಿತ ಆರೋಗ್ಯಕರ ಆಹಾರವನ್ನು ಸೇವನೆ ಮಾಡುವುದು ಸಹ ಅತ್ಯಗತ್ಯವಾಗಿದೆ.
ಕೂದಲು (Hair) ಉದುರಲು ಪ್ರಾರಂಭವಾದ ತಕ್ಷಣ, ಶಾಂಪೂ, ಎಣ್ಣೆ ಅಥವಾ ಸೀರಮ್‌ಗಳನ್ನು ಬದಲಾಯಿಸಲಾಗುತ್ತದೆ. ಆದರೆ ನಿಜವಾದ ಸಮಸ್ಯೆ ಪ್ರತಿನಿತ್ಯ ಸೇವನೆ ಮಾಡುತ್ತಿರುವ ಆಹಾರದಿಂದಲೂ ಬರಬಹುದು ಎಂಬುದು ನಿಮಗೆ ತಿಳಿದಿದೆಯೇ… ಹೌದು, ಕೂದಲು ತೆಳುವಾಗಿ ಹೊಳಪು ಕಳೆದುಕೊಳ್ಳುವುದಲ್ಲದೆ, ಉದುರುವುದು ಕೇವಲ ಮಾಲಿನ್ಯದಿಂದ ಮಾತ್ರವಲ್ಲ, ಈ ಸಮಸ್ಯೆಗೆ ಪ್ರೋಟೀನ್ (Protein) ಕೊರತೆಯೂ ಕಾರಣವಾಗಿರಬಹುದು. ದೇಹ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಪಡೆಯದಿದ್ದಾಗ, ಅದು ತನ್ನ ಆದ್ಯತೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಹೃದಯ ಮತ್ತು ಮೆದುಳಿನಂತಹ ಪ್ರಮುಖ ಅಂಗಗಳಿಗೆ ಪ್ರೋಟೀನ್ ಕಳುಹಿಸಿ, ಕೂದಲಿನ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಈ ಆಂತರಿಕ ಪೌಷ್ಟಿಕಾಂಶದ ಕೊರತೆಯನ್ನು ಸರಿಯಾಗಿ ಗುರುತಿಸಿ, ಆಹಾರದ ಮೂಲಕ ಕೂದಲನ್ನು ಮತ್ತೆ ಬಲಪಡಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳ ಮುಖ್ಯವಾಗಿದೆ. ಹಾಗಾದರೆ ಪ್ರೋಟೀನ್ ಕೊರತೆಯಿಂದ ಏನೆಲ್ಲಾ ಆಗುತ್ತದೆ, ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಬೇಕಾಗುತ್ತದೆ ಮತ್ತು ಕೂದಲು ಉದುರದಂತೆ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪ್ರೋಟೀನ್ ಕೊರತೆಯಿಂದ ಕೂದಲಿನಲ್ಲಿ ಆಗುವಂತಹ ಬದಲಾವಣೆಗಳು:
ಕೂದಲು ಬೆಳೆಯುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ.
ಉಗುರುಗಳು ಸುಲಭವಾಗಿ ಮುರಿಯುತ್ತವೆ.
ಕೂದಲು ತೆಳುವಾಗುವುದು ನೆತ್ತಿಯ ಮಧ್ಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಸಾಮಾನ್ಯವಾಗಿ, ವಯಸ್ಕನು ದೇಹದ ತೂಕದ ಪ್ರತಿ ಕಿಲೋಗ್ರಾಂಗೆ 0.8 ರಿಂದ 1 ಗ್ರಾಂ ಪ್ರೋಟೀನ್ ಸೇವಿಸಬೇಕು. ಉದಾಹರಣೆಗೆ, 60 ಕೆಜಿ ತೂಕವಿರುವ ವ್ಯಕ್ತಿ ದಿನಕ್ಕೆ 50 ರಿಂದ 60 ಗ್ರಾಂ ಪ್ರೋಟೀನ್ ಸೇವನೆ ಮಾಡಬೇಕು. ಜೊತೆಗೆ ಹೆಚ್ಚಿನ ಕಾರ್ಬೋಹೈಡ್ರೇಟ್ ಸೇವನೆ ಅನೇಕರಲ್ಲಿ ಪ್ರೋಟೀನ್ ಕೊರತೆಗೆ ಕಾರಣವಾಗುತ್ತದೆ ಎಂಬುದನ್ನು ಮರೆಯಬಾರದು.
ಮೊಟ್ಟೆಗಳು: ಇವು ಪ್ರೋಟೀನ್, ಬಯೋಟಿನ್ ಮತ್ತು ಸಲ್ಫರ್ ಅಂಶಗಳಿಂದ ಸಮೃದ್ಧವಾಗಿವೆ.
ಪನೀರ್ ಮತ್ತು ಟೋಫು: ಇವು ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆಗಳಾಗಿವೆ.
ದ್ವಿದಳ ಧಾನ್ಯಗಳು: ಪ್ರತಿದಿನ ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಅಮೈನೋ ಆಮ್ಲಗಳು ದೊರೆಯುತ್ತವೆ.
ಮೊಸರು: ಗ್ರೀಕ್ ಮೊಸರು ಸಾಮಾನ್ಯ ಮೊಸರಿಗಿಂತ ಹೆಚ್ಚಿನ ಪ್ರೋಟೀನ್ ಅಂಶವನ್ನು ಹೊಂದಿರುತ್ತದೆ.
ಮೀನು ಮತ್ತು ಕೋಳಿ: ಇವುಗಳಿಂದ ಸುಲಭವಾಗಿ ಪ್ರೋಟೀನ್ ಅಂಶವನ್ನು ಪಡೆಯಬಹುದು.
ಇಷ್ಟು ಮಾತ್ರವಲ್ಲ, ಈ ವಿಷಯದಲ್ಲಿ ನಿಮ್ಮ ಜೀರ್ಣಶಕ್ತಿಯೂ ಮುಖ್ಯವಾಗುತ್ತದೆ. ಏಕೆಂದರೆ ಪ್ರೊಟೀನ್ ಸೇವನೆ ಮಾಡುವುದು ಮಾತ್ರವಲ್ಲ, ದೇಹದಿಂದ ಅದರ ಹೀರಿಕೊಳ್ಳುವಿಕೆಯೂ ಸಹ ಮುಖ್ಯವಾಗುತ್ತದೆ. ನಿಮಗೆ ಗ್ಯಾಸ್, ಆಮ್ಲೀಯತೆ ಅಥವಾ ಜೀರ್ಣಕಾರಿ ಸಮಸ್ಯೆಗಳಿದ್ದರೆ, ನೀವು ಸೇವಿಸುವ ಪ್ರೋಟೀನ್ ಸರಿಯಾಗಿ ಹೀರಲ್ಪಡದಿರಬಹುದು. ಆದ್ದರಿಂದ, ಕೂದಲಿನ ಆರೋಗ್ಯವನ್ನು ಉತ್ತೇಜಿಸಲು, ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳುವುದು ಕೂಡ ಮುಖ್ಯವಾಗಿದೆ.