All posts by nagaraj11081993

Makar Sankranti 2026: ಮಕರ ಸಂಕ್ರಾಂತಿ ಯಾವಾಗ? ಸುಗ್ಗಿ ಹಬ್ಬದ ಸಂಪ್ರದಾಯ ಮತ್ತು ಮಹತ್ವ ತಿಳಿಯಿರಿ – Kannada News | Makar Sankranti 2026: Harvest Festival, Rituals and Auspicious Timings

ಸೂರ್ಯನು ಉತ್ತರ ದಿಕ್ಕಿಗೆ ಚಲಿಸುತ್ತಿದ್ದಂತೆ ಹಬ್ಬದ ಋತು ಪ್ರಾರಂಭವಾಗುತ್ತದೆ. ಇದು ಜನವರಿ 14 ರಂದು ಆಚರಿಸಲಾಗುವ ಶುಭ ಮಕರ ಸಂಕ್ರಾಂತಿಯೊಂದಿಗೆ ಪ್ರಾರಂಭವಾಗುತ್ತದೆ. ದೇಶಾದ್ಯಂತ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಆದರೆ, ಹಬ್ಬವನ್ನು ವಿಭಿನ್ನ ಹೆಸರುಗಳು ಮತ್ತು ವಿಧಾನಗಳೊಂದಿಗೆ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬವು ಕತ್ತಲೆಯಿಂದ ಬೆಳಕಿಗೆ, ಶೀತದಿಂದ ಶಕ್ತಿಗೆ ಪರಿವರ್ತನೆಯ ಸಮಯವನ್ನು ಸೂಚಿಸುತ್ತದೆ.

ಧನು ರಾಶಿಯಿಂದ ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಹಬ್ಬ ಇದು. ಸಂಕ್ರಾಂತಿ ಕೇವಲ ಹಬ್ಬವಲ್ಲ, ಪ್ರಕೃತಿಯಲ್ಲಿನ ಬದಲಾವಣೆಗಳ ಸಂಕೇತವೂ ಆಗಿದೆ. ಭಾರತೀಯ ಸಂಪ್ರದಾಯದಲ್ಲಿ, ಇದು ಬಹಳ ಶುಭ ಸಮಯ. ಕೈಯಲ್ಲಿ ಹೊಸ ಬೆಳೆ ಇದೆ. ಎಲ್ಲಾ ರೈತರು ಸಂತೋಷವಾಗಿದ್ದಾರೆ. ಮನೆ ಧಾನ್ಯಗಳ ರಾಶಿಯಿಂದ ತುಂಬಿರುತ್ತದೆ. ಅದಕ್ಕಾಗಿಯೇ, ಮಕರ ಸಂಕ್ರಾಂತಿಯು ಎಲ್ಲ ರೀತಿಯಲ್ಲೂ ಸಂತೋಷವನ್ನು ತರುತ್ತದೆ, ಹೆಚ್ಚಾಗಿ ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿನಿಸುಗಳಿಂದ ಹಿಡಿದು, ಮನೆಯ ಮುಂದೆ ರಂಗೋಲಿ, ಸಿಹಿತಿಂಡಿಗಳು, ಆಕಾಶದಲ್ಲಿ ಹಾರುವ ವರ್ಣರಂಜಿತ ಗಾಳಿಪಟಗಳವರೆಗೆ ದೇಶದ ಪ್ರತಿಯೊಂದು ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ.

ಸಂಕ್ರಾಂತಿ ಹಬ್ಬವು ಭಾರತದಾದ್ಯಂತ 2-4 ದಿನಗಳವರೆಗೆ ಆಚರಿಸಲಾಗುವ ಸುಗ್ಗಿ ಹಬ್ಬವಾಗಿದ್ದು, ಪ್ರತಿ ದಿನಕ್ಕೂ ಅದರದೇ ಆದ ವಿಶಿಷ್ಟ ಹೆಸರುಗಳು ಮತ್ತು ಸಂಪ್ರದಾಯಗಳಿವೆ. ಕರ್ನಾಟಕದ ಬಯಲುನಾಡು ಪ್ರದೇಶಗಳಲ್ಲಿ ಇದನ್ನು ಭೋಗಿ, ಸಂಕ್ರಾಂತಿ (ಸಂಕ್ರಮಣ), ಮತ್ತು ಕಣುಮ/ಕರಿ ಎಂದು ಮೂರು ದಿನಗಳ ಕಾಲ ಆಚರಿಸುತ್ತಾರೆ, ಮೊದಲ ದಿನ ಹೊಸ ಬೆಳೆ ಪೂಜೆ, ಎರಡನೇ ದಿನ ಎಳ್ಳು-ಬೆಲ್ಲ ವಿನಿಮಯ ಮತ್ತು ಗಾಳಿಪಟ ಹಾರಿಸುವುದು, ಮೂರನೇ ದಿನ ಜಾನುವಾರುಗಳ ಪೂಜೆ ಮಾಡುವ ಸಂಪ್ರದಾಯವಿದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಪಂಚಾಂಗದ ಪ್ರಕಾರ, ಜನವರಿ 14 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಅದು ಮಧ್ಯಾಹ್ನ 3:13 ರಿಂದ ಸಂಜೆ 5:45 ರವರೆಗೆ ಇರುತ್ತದೆ. (ಅವಧಿ: 2 ಗಂಟೆ 32 ನಿಮಿಷಗಳು) ಇಲ್ಲದಿದ್ದರೆ, ಮಕರ ಸಂಕ್ರಾಂತಿಯ ಮಹಾ ಶುಭ ಅವಧಿ ಮಧ್ಯಾಹ್ನ 3:13 ರಿಂದ ಸಂಜೆ 4:58 ರವರೆಗೆ ಇರುತ್ತದೆ. ಪವಿತ್ರ ಸ್ನಾನ, ಸೂರ್ಯನಿಗೆ ನೈವೇದ್ಯ, ದಾನ, ಭಕ್ತಿ ಆಚರಣೆಗಳು ಮತ್ತು ಉಪವಾಸ ಮುರಿಯುವುದು ಈ ಸಮಯದಲ್ಲಿ ಮಾತ್ರ ಮಾಡಬೇಕು ಎಂದು ವಿದ್ವಾಂಸರು ಹೇಳುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಿಲೀಸ್​​ ವೇಳೆ ಕೋರ್ಟ್ ಮೆಟ್ಟಿಲು ಹತ್ತಿದ ‘ಜನ ನಾಯಗನ್’ ಟೀಂ; ಆಗಿದೆ ದೊಡ್ಡ ಸಮಸ್ಯೆ – Kannada News | Jana Nayagan Censor Trouble: Vijay’s Film Release in Doubt, High Court Approached

ಎಲ್ಲವೂ ಅಂದುಕೊಂಡಂತೆ ನಡೆದರೆ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಜನವರಿ 9ರಂದು ರಿಲೀಸ್ ಆಗಲಿದೆ. ಈ ವಾಕ್ಯವನ್ನು ಹೇಳಲು ಒಂದು ಕಾರಣವೂ ಇದೆ. ಸದ್ಯ ‘ಜನ ನಾಯಗನ್’ ತಂಡಕ್ಕೆ ಸೆನ್ಸಾರ್ ಸಮಸ್ಯೆ ಆಗಿದೆ. ಡಿಸೆಂಬರ್ 19ರಂದು ಸೆನ್ಸಾರ್ ತಂಡ ಸಿನಿಮಾ ವೀಕ್ಷಿಸಿದೆ. ಸಿನಿಮಾ ರಿಲೀಸ್ ಹತ್ತಿರವಾದರೂ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ. ಈ ವಿಷಯ ಚರ್ಚೆ ಹುಟ್ಟುಹಾಕಿದೆ. ಇದನ್ನು ಪ್ರಶ್ನಿಸಿ ತಂಡದವರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ರಾಜಕೀಯ ಕಥಾ ಹಂದರದ ಕಥೆ, ಧರ್ಮದ ವಿಷಯಗಳ ಬಗ್ಗೆ ಸಿನಿಮಾ ಮಾಡುವಾಗ ಹೆಚ್ಚು ಎಚ್ಚರಿಕೆ ಇರಬೇಕು. ಒಂದು ದೃಶ್ಯ, ಡೈಲಾಗ್ ಸಮಾಜದಲ್ಲಿ ಕಾಡ್ಗಿಚ್ಚು ಹೊತ್ತಿಸಬಹುದು. ಹೀಗಾಗಿ, ಈ ರೀತಿಯ ಸಿನಿಮಾಗಳನ್ನು ಸೆನ್ಸಾರ್ ಮಂಡಳಿಯವರು ಹೆಚ್ಚು ಎಚ್ಚರಿಕೆಯಿಂದ ವೀಕ್ಷಿಸುತ್ತಾರೆ. ‘ಜನ ನಾಯಗನ್’ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದೆ. ಕೆಲವು ಪದಗಳಿಗೆ ಮ್ಯೂಟ್ ಮಾಡುವಂತೆ ನಿರ್ದೇಶಿಸಿದೆ.

ಈ ಬದಲಾವಣೆಗಳನ್ನು ಮಾಡಿ ತಂಡದವರು ಸಿನಿಮಾನ ಸೆನ್ಸಾರ್ ಮಂಡಳಿಗೆ ಸಲ್ಲಿಕೆ ಮಾಡಿದ್ದಾರೆ. ಆದರೆ, ಅವರ ಕಡೆಯಿಂದ ಸೆನ್ಸಾರ್ ಪತ್ರ ಸಿಕ್ಕಿಲ್ಲ. ಸೆನ್ಸಾರ್ ಪತ್ರ ಇಲ್ಲದೆಯೇ ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ. ರಿಲೀಸ್​​ಗೆ ಇನ್ನು ಕೆಲವೇ ದಿನ ಬಾಕಿ ಇದೆ. ಹೀಗಾಗಿ, ತಂಡದವರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.

ಈಗಾಗಲೇ ಏಕ ಪರದೆ ಚಿತ್ರಮಂದಿರಗಳಿಗೆ ಬುಕಿಂಗ್ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಏಕಪರದೆಗಳಲ್ಲಿ ಮುಂಜಾನೆ ಶೋಗೆ ಸಾವಿರ ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಆದಾಗ್ಯೂ ಟಿಕೆಟ್ ಸೋಲ್ಡ್​ ಔಟ್ ಆಗಿದೆ. ಇದು ಚರ್ಚೆಗೆ ಕಾರಣ ಆಗಿದೆ. ಇಷ್ಟು ದುಬಾರಿ ಟಿಕೆಟ್ ದರ ನಿಗದಿ ಮಾಡಿದ ಬಗ್ಗೆಯೂ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ರಿಲೀಸ್​ಗೆ ಸಂಕಷ್ಟ? ಇನ್ನೂ ಸಿಕ್ಕಿಲ್ಲ ಸೆನ್ಸಾರ್ ಪತ್ರ

ಎಚ್​. ವಿನೋದ್ ನಿರ್ದೇಶನ ಇರುವ ಈ ಸಿನಿಮಾದಲ್ಲಿ ವಿಜಯ್ ಮುಖ್ಯ ಭೂಮಿಕೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಅವರ ಕೊನೆಯ ಸಿನಿಮಾ ಆಗಲಿದೆ. ಪೂಜಾ ಹೆಗ್ಡೆ, ಮಮಿತಾ ಬೈಜು ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೂಲಿಯನ್ ಅಸ್ಸೆಂಜ್ ಬಿಡುಗಡೆಗೆ ಕಾರಣವಾದ ಪ್ರಸಿದ್ಧ ವಕೀಲ ಬ್ಯಾರಿ ಪೊಲಾಕ್ ಈಗ ನಿಕೋಲಸ್​ರನ್ನೂ ಬಿಡಿಸ್ತಾರಾ? – Kannada News | Nicolas Maduro’s Defense: Barry Pollack, The Man Who Freed Julian Assange

ವಾಷಿಂಗ್ಟನ್, ಜನವರಿ 06: ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ(Nicolas Maduro)
ಈಗ ಅಮೆರಿಕದ ವಶದಲ್ಲಿದ್ದಾರೆ. ಅದಕ್ಕೂ ಮುನ್ನ ತಾಕತ್ತಿದ್ದರೆ ತನ್ನ ಹಿಡೀರಿ ಎಂದು ನಿಕೋಲಸ್ ಡೊನಾಲ್ಡ್​ ಟ್ರಂಪ್​ಗೆ ಸವಾಲು ಹಾಕಿದ್ದರು. ಸವಾಲನ್ನು ಸವಾಲಾಗಿಯೇ ಸ್ವೀಕರಿಸಿ ಅಮೆರಿಕ ಸೇನೆಯು ಕ್ಯಾರಕಾಸ್​ನಲ್ಲಿ ನಿಕೋಲಸ್ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಈಗ ನಿಕೋಲಸ್ ಅಮೆರಿಕದ ವಶದಲ್ಲಿದ್ದಾರೆ.  ನಿಕೋಲಸ್​ನಷ್ಟೇ ಅವರ ವಕೀಲ ಬ್ಯಾರಿ ಪೊಲಾಕ್ ಅವರ ಬಗ್ಗೆಯೂ ಹೆಚ್ಚು ಚರ್ಚೆ ನಡೆಯುತ್ತಿದೆ. ಸಾಮಾನ್ಯ ವಕೀಲರ ಬಗ್ಗೆ ಇಷ್ಟೇಕೆ ಚರ್ಚೆ ಎಂದು ನಿಮಗೆ ಅನಿಸಬಹುದು ಆದರೆ ಅವರು ಸಾಮಾನ್ಯ ವಕೀಲರಲ್ಲ.

ಅಸಾಧ್ಯವಾದುದ್ದನ್ನು ಕೂಡ ಸಾಧ್ಯವಾಗಿಸಿ ತೋರಿಸುವ ಛಲ ಅವರಿಗಿದೆ. ಅಮೆರಿಕದ ಜೈಲಿನಿಂದ ಜೂಲಿಯನ್ ಅಸ್ಸೆಂಜ್ ಅವರ ಬಿಡುಗಡೆಗೆ ಕಾರಣರಾದ ಪ್ರಸಿದ್ಧ ವಕೀಲರಿವರು. ಇದೀಗ ಅಮೆರಿಕದಲ್ಲಿ ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಆರೋಪಗಳನ್ನು ನಿಕೋಲಸ್ ಎದುರಿಸುತ್ತಿದ್ದಾರೆ. ಅವರ ರಕ್ಷಣೆಗೆ ಬ್ಯಾರಿ ಮುಂದಾಗಿದ್ದಾರೆ.

ನಿಕೋಲಸ್ ಮಡುರೊ ಅವರ ವಕೀಲ ಬ್ಯಾರಿ ಯಾರು?
ಅಮೆರಿಕದಲ್ಲಿ ನಿಕೋಲಸ್ ಮಡುರೊ ವಿರುದ್ಧದ ಐತಿಹಾಸಿಕ ಮತ್ತು ಪ್ರಮುಖ ಕಾನೂನು ಹೋರಾಟವು ಹೊಸ ತಿರುವು ಪಡೆದುಕೊಂಡಿದೆ. ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ಅಮೆರಿಕದ ಜೈಲಿನಿಂದ ಬಿಡುಗಡೆ ಮಾಡುವುದು ಅಸಾಧ್ಯವೆಂದುಕೊಂಡಿರುವಾಗ ಪೋಲಾಕ್ ಅವರು ಅಸ್ಸಾಂಜೆಯನ್ನು ಹೊರಕ್ಕೆ ತಂದಿದ್ದರು.ಈಗ ನ್ಯಾಯಾಲಯದಲ್ಲಿ ವೆನೆಜುವೆಲಾದ ಅಧ್ಯಕ್ಷ ಮಡುರೊ ಅವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಮತ್ತಷ್ಟು ಓದಿ: Video: ವೆನೆಜುವೆಲಾದ ಅಧ್ಯಕ್ಷೀಯ ಭವನದ ಬಳಿ ಗುಂಡಿನ ದಾಳಿ, ಸ್ಫೋಟದ ಸದ್ದು

ಬ್ಯಾರಿ ಜೆ ಪೊಲಾಕ್ ವಾಷಿಂಗ್ಟನ್ ಡಿಸಿಯಲ್ಲಿ ಪ್ರಸಿದ್ಧ ವಕೀಲರಾಗಿದ್ದು, ಕಳೆದ ಮೂರು ದಶಕಗಳಿಂದ ಅಮೆರಿಕದ ಅತ್ಯಂತ ಸೂಕ್ಷ್ಮ ಮತ್ತು ವಿವಾದಾತ್ಮಕ ಪ್ರಕರಣಗಳನ್ನು ಗೆದ್ದು ಬೀಗಿದ್ದಾರೆ. ಪ್ರತಿಷ್ಠಿತ ಕಾನೂನು ಸಂಸ್ಥೆ ಹ್ಯಾರಿಸ್, ಸೇಂಟ್ ಲಾರೆಂಟ್ ಹಾಗೂ ವೆಚ್ಸ್ಲರ್‌ನಲ್ಲಿ ಪಾಲುದಾರರಾಗಿದ್ದಾರೆ ಮತ್ತು ರಾಷ್ಟ್ರೀಯ ಭದ್ರತೆ, ಅಂತಾರಾಷ್ಟ್ರೀಯ ಅಪರಾಧ ಮತ್ತು ಹೆಚ್ಚಿನ ಮಟ್ಟದ ಫೆಡರಲ್ ವಿಚಾರಣೆಗಳಲ್ಲಿ ಅನುಭವಿ. ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಆಳವಾಗಿ ಅಧ್ಯಯನ ಮಾಡುವ ಮತ್ತು ಜಡ್ಜ್​ ಮುಂದೆ ಪರಿಣಾಮಕಾರಿಯಾಗಿ ವಾದಿಸುವ ಚಾಕಚಕ್ಯತೆ ಅವರಿಗಿದೆ.

ಪೊಲಾಕ್ ಅವರನ್ನು ಆರಿಸಿಕೊಂಡಿದ್ದೇಕೆ?
ಮಡುರೊ ವಿರುದ್ಧದ ಪ್ರಕರಣ ಸಾಮಾನ್ಯವಾದುದ್ದಲ್ಲ, ಅಮೆರಿಕದಲ್ಲಿ ಕೊಕೇನ್ ಪೂರೈಕೆ ಜಾಲವನ್ನು ರಕ್ಷಿಸಲು ಮಡುರೊ 25 ವರ್ಷಗಳ ಕಾಲ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅಮೆರಿಕದ ಪ್ರಾಸಿಕ್ಯೂಟರ್​ಗಳ ವಾದವಾಗಿದೆ. ಪೊಲಾಕ್ ಅವರ ಅನುಭವವು ಮಡುರೊಗೆ ನಿರ್ಣಾಯಕವಾಗಿದೆ.

ನಿಕೋಲಸ್ ಪ್ರಕರಣ
ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲಾ ನ್ಯಾಯಾಲಯದಲ್ಲಿ ಮಡುರೊ ಅವರ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ನ್ಯಾ. ಆಲ್ವಿನ್ ಹೆಲ್ಲರ್‌ಸ್ಟೈನ್ ಅಧ್ಯಕ್ಷತೆ ವಹಿಸಿದ್ದಾರೆ. ಸಿನಾಲೋವಾ ಕಾರ್ಟೆಲ್‌ನಂತಹ ಮಾದಕವಸ್ತು ಜಾಲಗಳಿಗೆ ಮಡುರೊ ಲಾಜಿಸ್ಟಿಕಲ್ ಬೆಂಬಲವನ್ನು ಒದಗಿಸಿದ್ದಾರೆ ಮತ್ತು ಮಾದಕವಸ್ತು ಕಳ್ಳಸಾಗಣೆದಾರರಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಸಹ ಒದಗಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.

ಅಮೆರಿಕದ ಬೇಹುಗಾರಿಕೆ ಕಾನೂನುಗಳ ಅಡಿಯಲ್ಲಿ ನಡೆದ ಅಸ್ಸಾಂಜೆಯವರ ಪ್ರಕರಣವನ್ನು ಬಹುತೇಕ ಅಸಾಧ್ಯವೆಂದು ಪರಿಗಣಿಸಲಾಗಿತ್ತು. ಆದಾಗ್ಯೂ, ಪೊಲಾಕ್ ಅವರ ಮಾತು ಮತ್ತು ಕಾನೂನು ತಂತ್ರವು ಅಮೆರಿಕವನ್ನು ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಮಾಡಿತು. ಅದಕ್ಕಾಗಿಯೇ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಸಿಲುಕಿರುವವರು ಅವರನ್ನು ಮೊದಲ ಹಾಗೂ ಕಟ್ಟಕಡೆಯ ಭರವಸೆಯ ವಕೀಲ ಎಂದೇ ಭಾವಿಸುತ್ತಾರೆ. ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸೆಂಜ್ ತಮ್ಮ 13 ವರ್ಷಗಳ ಕಾನೂನು ಹೋರಾಟವನ್ನು ಕೊನೆಗೊಳಿಸಿ, ಯುಎಸ್ ಜತೆ ಒಪ್ಪಂದ ಮಾಡಿಕೊಂಡು, ನ್ಯಾಯಾಲಯದಲ್ಲಿ ಬೇಹುಗಾರಿಕೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡು ಬಂಧಮುಕ್ತರಾಗಿದ್ದು 2024ರ ಜೂನ್ 26ರಂದು ತಮ್ಮ ತಾಯ್ನಾಡು ಆಸ್ಟ್ರೇಲಿಯಾಗೆ ಹೋಗಿದ್ದರು. ಅವರಿಗೆ 62 ತಿಂಗಳುಗಳ ಶಿಕ್ಷೆ ವಿಧಿಸಲಾಗಿತ್ತು.

ಮಡುರೊ ಪತ್ನಿಯನ್ನು ರಕ್ಷಿಸುವವರ್ಯಾರು?
ಅಮೆರಿಕದ ನ್ಯಾಯಾಂಗ ಇಲಾಖೆಯ ಮಾಜಿ ಪ್ರಾಸಿಕ್ಯೂಟರ್ ಮಾರ್ಕ್ ಡೊನ್ನೆಲ್ಲಿ ಅವರು ಮಡುರೊ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಇದರರ್ಥ ನಿಕೋಲಸ್ ಕುಟುಂಬವು ಅಮೆರಿಕದ ಅತ್ಯಂತ ಅನುಭವಿ ವಕೀಲರನ್ನು ಕಾನೂನು ಹೋರಾಟದಲ್ಲಿ ಕಣಕ್ಕಿಳಿಸಿದೆ.

ಜಗತ್ತಿಗೆ ಯಾಕಿಷ್ಟು ಕುತೂಹಲ?
ಇದು ಕೇವಲ ಮಾದಕವಸ್ತು ವಿಚಾರಣೆಯಲ್ಲ, ಬದಲಾಗಿ ಅಮೆರಿಕದ ಆಡಳಿತ ಬದಲಾವಣೆ ನೀತಿ, ಅಂತಾರಾಷ್ಟ್ರೀಯ ಕಾನೂನು ಮತ್ತು ಸಾರ್ವಭೌಮತ್ವದ ಪರೀಕ್ಷೆಯಾಗಿದೆ. ಈ ಪ್ರಕರಣದಲ್ಲಿ ಪೊಲಾಕ್‌ಗೆ ಕಾನೂನು ಪರಿಹಾರ ಸಿಕ್ಕರೆ, ಅದು ಅಮೆರಿಕದ ಪ್ರಾಸಿಕ್ಯೂಷನ್ ವ್ಯವಸ್ಥೆಗೆ ದೊಡ್ಡ ಹೊಡೆತವಾಗುವುದಂತೂ ಸತ್ಯ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:49 pm, Tue, 6 January 26

Source link

ಶಾನ್​ದಾರ್ ಶತಕದೊಂದಿಗೆ ಹೊಸ ಮೈಲಿಗಲ್ಲು ದಾಟಿದ ಸ್ಟೀವ್ ಸ್ಮಿತ್ – Kannada News | Ashes: Steve Smith brings up his 37th Test century

ಸ್ಟೀವ್ ಸ್ಮಿತ್ (Steve Smith) ಟೆಸ್ಟ್ ಕ್ರಿಕೆಟ್​​ನಲ್ಲಿ  37ನೇ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಆ್ಯಶಸ್ ಸರಣಿಯಲ್ಲಿ ಸ್ಮಿತ್ ವಿಶೇಷ ಮೈಲಿಗಲ್ಲನ್ನು ದಾಟಿದ್ದಾರೆ. ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 384 ರನ್​ ಕಲೆಹಾಕಿತು.

Source link

Bengaluru: ಡ್ರಗ್ಸ್​ ದಂಧೇಕೋರರಿಗೆ ಶಾಕ್​; 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​

ಬೆಂಗಳೂರು, ಜನವರಿ 06: ಹೊಸ ವರ್ಷದ ಸಂಭ್ರಮದ ನಡುವೆ ಬೆಂಗಳೂರು ಪೊಲೀಸರು 3 ಕೋಟಿ ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ದಾಳಿಯಲ್ಲಿ ಅಂದಾಜು 3.16 ಕೋಟಿ ರೂ. ಮೌಲ್ಯದ, 3 ಕೆ.ಜಿ. 169 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಯದ್ ತಾರಿಕ್ ಇಕ್ಬಾಲ್, ಶೇಕ್ ಮೊಹಮ್ಮದ್ ಅರ್ಬಾಸ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಬೆಂಗಳೂರು ನಿವಾಸಿಗಳಾಗಿದ್ದು, ಹೊಸ ವರ್ಷದ ಪಾರ್ಟಿಗಳಿಗೆ ಮಾದಕ ವಸ್ತುಗಳನ್ನು ಪೂರೈಸಲು ಸಿದ್ಧತೆ ನಡೆಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಡ್ರಗ್ಸ್‌ಗಳನ್ನು ನೈಜೀರಿಯಾ ಮೂಲದ ವ್ಯಕ್ತಿಯಿಂದ ಪಡೆದಿರುವ ಶಂಕೆ ವ್ಯಕ್ತವಾಗಿದ್ದು, ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

World’s Largest Shiva Linga: ಬಿಹಾರದಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾದ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ; ಇಲ್ಲಿನ ವಿಶೇಷತೆ ತಿಳಿಯಿರಿ – Kannada News | World’s Largest Monolithic Shiva Linga at Virat Ramayan Temple, Champaran

ವಿಶ್ವದ ಅತಿ ದೊಡ್ಡ ಏಕಶಿಲಾ ಶಿವಲಿಂಗ

ಬಿಹಾರದ ಚಂಪಾರಣ್ಯದಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಭಾರೀ ಸಿದ್ಧತೆ ನಡೆಯುತ್ತಿದೆ. ತಮಿಳುನಾಡಿನ ಪ್ರಸಿದ್ಧ ಕರಕುಶಲ ಕೇಂದ್ರವಾದ ಮಹಾಬಲಿಪುರಂ ಬಳಿಯ ಪಟ್ಟಿಕಾಡು ಗ್ರಾಮದಲ್ಲಿ 33 ಅಡಿ ಎತ್ತರ, 210 ಟನ್ ತೂಕದ ಈ ಬೃಹತ್​​ ಏಕಶಿಲಾ ಶಿವಲಿಂಗವನ್ನು ಕೆತ್ತಲಾಗಿದೆ. ಇತ್ತೀಚಿಗಷ್ಟೇ ತಮಿಳುನಾಡಿನಿಂದ ರಸ್ತೆ ಮೂಲಕ ಸುಮಾರು 2,100 ಕಿಲೋಮೀಟರ್ ದೂರದಲ್ಲಿರುವ ಚಂಪಾರಣ್ಯಕ್ಕೆ ತರಲಾಗಿದೆ. ದೇವಾಲಯದ ಟ್ರಸ್ಟ್ ಪ್ರಕಾರ, ಜನವರಿ 17 ರಂದು ಶಿವಲಿಂಗ ಪ್ರತಿಷ್ಠಾಪನೆಗಾಗಿ ಒಂದು ಭವ್ಯ ಸಮಾರಂಭ ನಡೆಯಲಿದ್ದು, ದೇಶಾದ್ಯಂತದ ಸಂತರು, ವಿದ್ವಾಂಸರು ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ತೂಕ, ಎತ್ತರ ಮತ್ತು ವಿನ್ಯಾಸ:

ಈ ಶಿವಲಿಂಗವು ಸುಮಾರು 210 ಮೆಟ್ರಿಕ್ ಟನ್ ತೂಕವಿದ್ದು, ಇದು ವಿಶ್ವದ ಅತ್ಯಂತ ಭಾರವಾದ ಮತ್ತು ದೊಡ್ಡ ಶಿವಲಿಂಗವಾಗಿದೆ. ಇದರ ಎತ್ತರ 33 ಅಡಿ ಮತ್ತು ಅದರ ವೃತ್ತಾಕಾರದ ವ್ಯಾಸವು 33 ಅಡಿಗಳು. ಧಾರ್ಮಿಕ ನಂಬಿಕೆಗಳ ಪ್ರಕಾರ, 33 ಸಂಖ್ಯೆಯು 330 ಮಿಲಿಯನ್ ದೇವರು ಮತ್ತು ದೇವತೆಗಳೊಂದಿಗೆ ಸಂಬಂಧ ಹೊಂದಿದೆ, ಇದು ಅದರ ಆಧ್ಯಾತ್ಮಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದರ ಭಾರೀ ತೂಕದಿಂದಾಗಿ, ಇದನ್ನು ಸಾಗಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ, 96 ಚಕ್ರಗಳ ಟ್ರಕ್ ಅನ್ನು ಬಳಸಲಾಗಿದೆ.

ಪ್ರಯಾಣ ಎಷ್ಟು ದೂರ ಇತ್ತು?

ಮಹಾಬಲಿಪುರಂನಿಂದ ಪೂರ್ವ ಚಂಪಾರಣ್ಯಗೆ ಶಿವಲಿಂಗದ ಪ್ರಯಾಣವು ಸಾವಿರಾರು ಕಿಲೋಮೀಟರ್‌ಗಳನ್ನು ವ್ಯಾಪಿಸಿತು. ಈ ಪ್ರಯಾಣವು ಸುಮಾರು 45 ದಿನಗಳನ್ನು ತೆಗೆದುಕೊಂಡಿತು. ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಈ ಐತಿಹಾಸಿಕ ಪ್ರಯಾಣದ ಸಮಯದಲ್ಲಿ, ಶಿವಲಿಂಗವು ಹಲವಾರು ರಾಜ್ಯಗಳು ಮತ್ತು ನಗರಗಳ ಮೂಲಕ ಹಾದುಹೋಯಿತು. ಅದನ್ನು ನೋಡಲು ಉತ್ತರ ಪ್ರದೇಶ-ಬಿಹಾರ ಗಡಿಯಲ್ಲಿರುವ ಬಾಲ್ಥಾರಿ ಚೆಕ್‌ಪೋಸ್ಟ್‌ನಲ್ಲಿ ದೊಡ್ಡ ಜನಸಮೂಹ ಜಮಾಯಿಸಿತು.

ವಿರಾಟ್ ರಾಮಾಯಣ ದೇವಾಲಯ:

ವಿರಾಟ್ ರಾಮಾಯಣ ದೇವಾಲಯವನ್ನು ಪಾಟ್ನಾದ ಪ್ರಸಿದ್ಧ ಮಹಾವೀರ ದೇವಾಲಯದ ನೇತೃತ್ವದಲ್ಲಿ ನಿರ್ಮಿಸಲಾಗುತ್ತಿದೆ. ಇದರ ಅಡಿಪಾಯ ಪೂಜೆಯನ್ನು ಜೂನ್ 20, 2023 ರಂದು ಬಿಹಾರ ರಾಜ್ಯ ಧಾರ್ಮಿಕ ಟ್ರಸ್ಟ್ ಸಮಿತಿಯ ಆಗಿನ ಅಧ್ಯಕ್ಷರಾದ ಕಿಶೋರ್ ಕುನಾಲ್ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು. ದೇವಾಲಯದ ನಿರ್ಮಾಣದಲ್ಲಿ ತೊಡಗಿರುವ ಅಧಿಕಾರಿಗಳ ಪ್ರಕಾರ, ಈ ದೇವಾಲಯವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ದೃಷ್ಟಿಕೋನಗಳಿಂದ ಒಂದು ಹೆಗ್ಗುರುತಾಗಿದೆ. ಮಹಾವೀರ ದೇವಾಲಯವು ಬೃಹತ್ ಶಿವಲಿಂಗದ ನಿರ್ಮಾಣವನ್ನು ನಿಯೋಜಿಸಿದೆ.

120 ಎಕರೆಯಲ್ಲಿ ವಿರಾಟ್ ರಾಮಾಯಣ ದೇವಾಲಯ ನಿರ್ಮಾಣ:

ವಿರಾಟ್ ರಾಮಾಯಣ ದೇವಾಲಯವು ಸುಮಾರು 120 ಎಕರೆಗಳಷ್ಟು ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ಇದರ ಮುಖ್ಯ ಶಿಖರವು 270 ಅಡಿ ಎತ್ತರವಿದ್ದು, ಇದು ವಿಶ್ವದ ಅತಿ ಎತ್ತರದ ದೇವಾಲಯ ಶಿಖರ ಎಂದು ನಂಬಲಾಗಿದೆ. ದೇವಾಲಯವು 198, 180, 135 ಮತ್ತು 108 ಅಡಿ ಎತ್ತರದ ಇತರ ಶಿಖರಗಳನ್ನು ಸಹ ಹೊಂದಿರುತ್ತದೆ. ಒಟ್ಟು 12 ಶಿಖರಗಳನ್ನು ಹೊಂದಿರುವ ಈ ದೇವಾಲಯವು 1,080 ಅಡಿ ಉದ್ದ ಮತ್ತು 540 ಅಡಿ ಅಗಲವನ್ನು ಹೊಂದಿರುತ್ತದೆ. ಈ ಸಂಕೀರ್ಣವು 22 ಇತರ ದೇವಾಲಯಗಳು, ವಿಶಾಲವಾದ ಅಂಗಳ, ಪ್ರದಕ್ಷಿಣಾ ಮಾರ್ಗ, ಧ್ಯಾನ ಕೇಂದ್ರ ಮತ್ತು ಭಕ್ತರಿಗೆ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ಪ್ರಾಣ-ಪ್ರತಿಷ್ಠೆ ಮತ್ತು ಧಾರ್ಮಿಕ ಸಮಾರಂಭಗಳು:

ದೇವಾಲಯದ ಟ್ರಸ್ಟ್ ಪ್ರಕಾರ, ಜನವರಿ 17 ರಂದು ಶಿವಲಿಂಗ ಪ್ರತಿಷ್ಠಾಪನೆಗಾಗಿ ಒಂದು ಭವ್ಯ ಸಮಾರಂಭ ನಡೆಯಲಿದ್ದು, ದೇಶಾದ್ಯಂತದ ಸಂತರು, ವಿದ್ವಾಂಸರು ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ವಿರಾಟ್ ರಾಮಾಯಣ ದೇವಾಲಯ ಸಂಕೀರ್ಣದಲ್ಲಿ ಸ್ಥಾಪಿಸಲಾಗುವ ಸಾವಿರ ಶಿವಲಿಂಗಗಳಿಗೆ ಪೀಠ ಸ್ಥಾಪನೆಯೂ ಅದೇ ದಿನ ನಡೆಯಲಿದೆ. ಪಂಡಿತ್ ಭವನನಾಥ್ ಝಾ ಅವರ ಮೇಲ್ವಿಚಾರಣೆಯಲ್ಲಿ ಸಾಂಪ್ರದಾಯಿಕ ವಿಧಿಗಳ ಪ್ರಕಾರ ಈ ಪೂಜೆಯನ್ನು ನೆರವೇರಿಸಲಾಗುತ್ತದೆ. ಈ ಆಚರಣೆಯು ಮಾಘ ಕೃಷ್ಣ ಚತುರ್ದಶಿಯಂದು ಅಥವಾ ನರಕ ನಿವಾರಣ ಚತುರ್ದಶಿಯಂದು ನಡೆಯಲಿದೆ ಮತ್ತು ಇದನ್ನು ಶಿವರಾತ್ರಿಯಂತೆಯೇ ಪುಣ್ಯವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

ಅಭಿವೃದ್ಧಿ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ:

ವಿರಾಟ್ ರಾಮಾಯಣ ದೇವಾಲಯ ಮತ್ತು ಈ ಬೃಹತ್ ಶಿವಲಿಂಗದ ನಿರ್ಮಾಣವು ಕೇಸರಿಯಾ ಮತ್ತು ಪೂರ್ವ ಚಂಪಾರಣ್ಯ ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಎಂದು ತಜ್ಞರು ಮತ್ತು ಸ್ಥಳೀಯರು ನಂಬುತ್ತಾರೆ. ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ, ಹೋಟೆಲ್, ಧರ್ಮಶಾಲಾ ಮತ್ತು ಸಾರಿಗೆ ವ್ಯವಹಾರಗಳು ಉತ್ತೇಜನ ಪಡೆಯುತ್ತವೆ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮವು ಹೊಸ ದಿಕ್ಕನ್ನು ಕಂಡುಕೊಳ್ಳುತ್ತದೆ. 2030 ರ ವೇಳೆಗೆ ದೇವಾಲಯ ನಿರ್ಮಾಣವನ್ನು ಪೂರ್ಣಗೊಳಿಸುವುದು ಗುರಿಯಾಗಿದೆ, ಆ ಹೊತ್ತಿಗೆ ಈ ಪ್ರದೇಶವು ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಬಹುದು.

ಈ ಶಿವಲಿಂಗಗಳ ಬಗ್ಗೆಯೂ ತಿಳಿಯಿರಿ:

ರಾಮಾಯಣ ದೇವಾಲಯ ಸಂಕೀರ್ಣದಲ್ಲಿ ಸ್ಥಾಪಿಸಲಾದ ಶಿವಲಿಂಗವು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಆದಾಗ್ಯೂ, ದೇಶದಲ್ಲಿ ಇನ್ನೂ ನಾಲ್ಕು ಪ್ರಮುಖ ಶಿವಲಿಂಗಗಳಿವೆ, ಅವು ಎತ್ತರ ಮತ್ತು ಐತಿಹಾಸಿಕ ಮಹತ್ವಕ್ಕೆ ಹೆಸರುವಾಸಿಯಾಗಿವೆ. ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ಬೃಹತ್ ಶಿವಲಿಂಗವು ವಿಜಯನಗರ ಕಾಲದ ಸೂಕ್ಷ್ಮ ಕರಕುಶಲತೆಗೆ ಒಂದು ಉದಾಹರಣೆಯಾಗಿದೆ. ಒಂದೇ ಗ್ರಾನೈಟ್ ಬ್ಲಾಕ್‌ನಿಂದ ಕೆತ್ತಲಾದ ಇದು ಸುಮಾರು 27 ಅಡಿ ಎತ್ತರವಿದೆ ಎಂದು ಅಂದಾಜಿಸಲಾಗಿದೆ. ತಮಿಳುನಾಡಿನ ಗಂಗೈಕೊಂಡ ಚೋಳಪುರಂನಲ್ಲಿರುವ ಪರಮೇಶ್ವರ ಶಿವಲಿಂಗವು ಚೋಳ ರಾಜವಂಶದ ವಾಸ್ತುಶಿಲ್ಪ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ಸರಿಸುಮಾರು 13 ಅಡಿ ಎತ್ತರದ ಈ ಶಿವಲಿಂಗವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದು ಹಂತ ಮೇಲಕ್ಕೆ ಹೋದ ಯಶ್ ಫ್ಯಾನ್ಸ್; ಮೆಟ್ರೋದಲ್ಲೂ ಮಿಂಚಿದ ರಾಕಿಂಗ್ ಸ್ಟಾರ್ – Kannada News | Yash Photo On Namma Bengaluru Metro Ahead Of His Birthday

ನೆಚ್ಚಿನ ಹಿರೋನ ಬರ್ತ್​​ಡೇ ಎಂದಾಗ ಕಟೌಟ್ ಹಾಕಲಾಗುತ್ತದೆ. ಅದಕ್ಕೆ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಈಗ ಯಶ್ ಅಭಿಮಾನಿಗಳು ಒಂದು ಹಂತ ಮೇಲಕ್ಕೆ ಹೋಗಿದ್ದಾರೆ. ಜನವರಿ 8 ಯಶ್ ಜನ್ಮದಿನ. ಹೀಗಾಗಿ, ನಮ್ಮ ಮೆಟ್ರೋದಲ್ಲಿ ಯಶ್ ಫೋಟೋ ರಾರಾಜಿಸಲಿದೆ. ಅಭಿಮಾನಿ ಸಂಘಟನೆಗಳು ಮೆಟ್ರೋಗೆ ಜಾಹೀರಾತು ನೀಡಿ, ಯಶ್​​ಗೆ ಬರ್ತ್​ಡೇ ವಿಶ್ ತಿಳಿಸಿದ್ದಾರೆ. ಆ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ, ಪಾಸ್‌ಪೋರ್ಟ್ ಕಚೇರಿಗೂ ಬಂತು ಇ-ಮೇಲ್ – Kannada News | Karnataka Bomb Threats: Mysuru, Bagalkote Courts Receive Email Hoaxes

ಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

ಮೈಸೂರು/ ಬಾಗಲಕೋಟೆ, ಜನವರಿ 06: ಕಳೆದ ತಿಂಗಳಲ್ಲಿ ಕೋಲಾರ, ಗದಗ ಸೇರಿದಂತೆ ರಾಜ್ಯದ ಹಲವು ಕಡೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಆತಂಕ ಸೃಷ್ಟಿಸಿತ್ತು. ಇದೀಗ ಮತ್ತೊಮ್ಮೆ ಇಂತದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ ಹಳೆ ಕೋರ್ಟ್ ಹಾಗೂ ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದು, ತಪಾಸಣೆ ನಡೆಸಲಾಗಿದೆ.

ಆತ್ಮಾಹುತಿ ದಾಳಿ ಮಾಡುವುದಾಗಿ ಬೆದರಿಕೆ

ಮೈಸೂರಿನಲ್ಲಿ ಮಧ್ಯಾಹ್ನ 1.55ಕ್ಕೆ ಮೂರು ಆರ್‌ಡಿಎಕ್ಸ್ ಬಾಂಬ್ ಇಟ್ಟಿರುವುದಾಗಿ, ಆತ್ಮಹತ್ಯಾ ದಾಳಿ ಮಾಡುವುದಾಗಿ ಬೆದರಿಕೆ ಇತ್ತು. ಸಂದೇಶದಲ್ಲಿ ನ್ಯಾಯಾಧೀಶರನ್ನು ಸ್ಥಳಾಂತರಿಸುವಂತೆ ಎಚ್ಚರಿಸಲಾಗಿತ್ತು. ಮಾಹಿತಿ ಸ್ವೀಕರಿಸಿರುವ ನ್ಯಾಯಾಧೀಶರು, ಕಕ್ಷಿದಾರರು, ವಕೀಲರು ತಕ್ಷಣ ಕೋರ್ಟ್ ಆವರಣದಿಂದ ಹೊರಬಂದಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ತಂಡ ತಕ್ಷಣ ಹೋಗಿ ಪರಿಶೀಲನೆ ನಡೆಸಿದೆ.

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೂ ಮಧ್ಯಾಹ್ನ ಇ-ಮೇಲ್ ಮೂಲಕ ಬೆದರಿಕೆಯ ಸಂದೇಶ ಬಂದಿದೆ. ನಿಮ್ಮ ಜಿಲ್ಲಾ ನ್ಯಾಯಾಲಯದ ಕ್ರಿಟಿಕಲ್ ಸ್ಥಳಗಳಲ್ಲಿ ಬಾಂಬ್ ಇಟ್ಟಿದ್ದೇವೆ, ಮಧ್ಯಾಹ್ನದ ಊಟದ ಅವಧಿಯಲ್ಲಿ ಸ್ಫೋಟ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಈ ವಿಷಯ ತಿಳಿದ ನ್ಯಾಯವಾದಿಗಳು, ಕಕ್ಷಿದಾರರು, ನೌಕರರು ಮತ್ತು ಸಾರ್ವಜನಿಕರು ಭಯಭೀತರಾಗಿ ಹೊರಬಂದಿದ್ದಾರೆ. ಪೊಲೀಸ್‌, ಜಿಲ್ಲಾಡಳಿತ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ತೆರಳಿ ಕಟ್ಟಡ ಹಾಗೂ ಆವರಣದ ಸಂಪೂರ್ಣ ತಪಾಸಣೆ ನಡೆಸುತ್ತಿದೆ.

ಇದನ್ನೂ ಓದಿ ಗದಗ, ಮಂಗಳೂರು ಆಯ್ತು ಈಗ ಭಟ್ಕಳದ ತಹಶೀಲ್ದಾರ್ ಕಚೇರಿಗೂ ಬಾಂಬ್ ಬೆದರಿಕೆ!

ಪಾಸ್‌ಪೋರ್ಟ್ ಕಚೇರಿಗೂ ಬಾಂಬ್ ಥ್ರೆಟ್

ಬೆಂಗಳೂರಿನ ಲಾಲ್‌ಬಾಗ್ ರಸ್ತೆಯಲ್ಲಿರುವ ಪಾಸ್‌ಪೋರ್ಟ್ ಕಚೇರಿಗೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಬಾಂಬ್ ಇಟ್ಟಿರುವುದಾಗಿ ಬೆದರಿಕೆವೊಡ್ಡಿದ್ದು, ಮಾಹಿತಿ ತಿಳಿದ ವಿಲ್ಸನ್ ಗಾರ್ಡನ್ ಹಾಗೂ ಎಸ್.ಆರ್.ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿಯಿಂದ ಪಾಸ್‌ಪೋರ್ಟ್ ಕಚೇರಿ ಆವರಣದಲ್ಲಿ ತಪಾಸಣೆ ನಡೆಲಾಗಿದೆ.

ಇದೇ ಮೊದಲೇನಲ್ಲ ಹುಸಿ ಬೆದರಿಕೆ

ಡಿ.12ರಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಂದ ಬಾಂಬ್ ಬೆದರಿಕೆ ಇಮೇಲ್ ಕೆಲಕಾಲ ಆತಂಕ ಸೃಷ್ಟಿಸಿತ್ತು. ಜಿಲ್ಲಾಡಳಿತ ಹಾಗೂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಶೋಧ ನಡೆಸಿದ್ದು, ತಮಿಳುನಾಡಿನ 13 ವರ್ಷದ ಬಾಲಕಿಯಿಂದ ಬಂದ ಹುಸಿ ಬೆದರಿಕೆ ಎಂದು ತಿಳಿದುಬಂದಿತ್ತು. ಡಿ.15ರಂದು ಗದಗ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಡಿಸಿ ಕಚೇರಿಗೆ ಬಾಂಬ್​​ ಬೆದರಿಕೆ ಹಾಕಲಾಗಿದ್ದು, ಪಾಕ್​ನ ಐಎಸ್​​ಐ ಮತ್ತು ಎಲ್​​​ಟಿಟಿಇ ಕಾರ್ಯಕರ್ತರ ಜೊತೆ ಸೇರಿ 5 ಬಾಂಬ್​ಗಳಿಂದ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಕಿಡಿಗೇಡಿಗಳು ಧಮ್ಕಿ ಹಾಕಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

56 ರನ್​ಗೆ 7 ವಿಕೆಟ್​… ಆದರೂ ಪಂದ್ಯ ಗೆದ್ದ ಸಿಡ್ನಿ ಸಿಕ್ಸರ್ಸ್

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನ 24ನೇ ಪಂದ್ಯದಲ್ಲಿ ರಣರೋಚಕ ಹೋರಾಟ ಕಂಡು ಬಂದಿದೆ. ಅದು ಕೂಡ ಲೋ ಸ್ಕೋರಿಂಗ್ ಆಟದೊಂದಿಗೆ. ಅಂದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬ್ರಿಸ್ಬೇನ್ ಹೀಟ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 114 ರನ್​ಗಳು ಮಾತ್ರ.

115 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್ ತಂಡವು 56 ರನ್​ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಈ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಗೆಲುವನ್ನು ಎಲ್ಲರೂ ನಿರೀಕ್ಷಿಸಿದ್ದರು.

ಆದರೆ 8ನೇ ವಿಕೆಟ್​ಗೆ ಜೊತೆಗೂಡಿದ ಜೋಯೆಲ್ ಡೇವಿಸ್ ಹಾಗೂ ಹೇಡನ್ ಕೇರ್ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು. ಅತ್ಯತ್ತಮವಾಗಿ ಬ್ಯಾಟ್ ಬೀಸಿದ ಡೇವಿಸ್ 26 ಎಸೆತಗಳಲ್ಲಿ 35 ರನ್ ಬಾರಿಸಿದರೆ, ಹೇಡನ್ ಕೇರ್ 27 ರನ್​ಗಳಿಸಿದರು.

ಅಲ್ಲದೆ 8ನೇ ವಿಕೆಟ್​ಗೆ 62 ರನ್​ಗಳ ಜೊತೆಯಾಟವಾಡುವ ಮೂಲಕ ಸಿಡ್ನಿ ಸಿಕ್ಸರ್ಸ್ ತಂಡವನ್ನು 18.4 ಓವರ್​ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಸಿಡ್ನಿ ಸಿಕ್ಸರ್ಸ್ ತಂಡವು 3 ವಿಕೆಟ್​ಗಳ ರೋಚಕ ಜಯ ತಂದು ಕೊಡುವಲ್ಲಿ ಯಶಸ್ವಿಯಾದರು.

 

Source link

Railway stocks: ಬಜೆಟ್​ಗೆ ಮುಂಚೆ ರೈಲ್ವೆ ಕ್ಷೇತ್ರದ ಯಾವ ಷೇರುಗಳನ್ನು ಖರೀದಿಸಬಹುದು? – Kannada News | Demand for railway stocks, weeks ahead of 2026 Budget

ನವದೆಹಲಿ, ಜನವರಿ 6: ಬಜೆಟ್ ಮಂಡನೆಗೆ (Union Budget) ಕೆಲವೇ ವಾರ ಬಾಕಿ ಇದೆ. ನಿರೀಕ್ಷೆಗಳು ಹಲವಿವೆ. ರೈಲ್ವೆ ಕ್ಷೇತ್ರದಲ್ಲೂ (Indian Railways) ನಿರೀಕ್ಷೆ ಹೆಚ್ಚಿದೆ. ಆ ಕ್ಷೇತ್ರದ ಹಲವು ಕಂಪನಿಗಳ ಷೇರುಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚುತ್ತಿದೆ. ರೈಲ್ವೆ ಸ್ಟಾಕ್​ಗಳು ಕಳೆದ ಎರಡು ವಾರಗಳಲ್ಲಿ ಸರಾಸರಿಯಾಗಿ ಶೇ. 13ರಷ್ಟು ಏರಿವೆ. ಇತ್ತೀಚೆಗೆ ರೈಲು ಪ್ರಯಾಣ ದರವನ್ನು ಏರಿಸಿರುವುದು, ಮುಂಬರುವ ಬಜೆಟ್​ನಲ್ಲಿ ಪೂರಕ ಕ್ರಮಗಳಿಗೆ ನಿರೀಕ್ಷೆ ಹೆಚ್ಚಿರುವುದು ರೈಲು ಷೇರುಗಳ ಮೇಲೆ ಹೂಡಿಕೆದಾರರ ಕಣ್ಣು ನೆಡುವಂತೆ ಮಾಡಿದೆ.

ಡಿಸೆಂಬರ್ 26ರಂದು ರೈಲು ಪ್ರಯಾಣ ದರ ಏರಿಸಿದ್ದರಿಂದ ಭಾರತೀಯ ರೈಲ್ವೆಯ ಆದಾಯಕ್ಕೆ 600 ಕೋಟಿ ರೂನಷ್ಟು ಹೆಚ್ಚಳ ಆಗಿದೆ. ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ಕ್ಷೇತ್ರಕ್ಕೆ ಸರ್ಕಾರದಿಂದ 1.3 ಲಕ್ಷ ಕೋಟಿ ರೂ ಬಂಡವಾಳ ವೆಚ್ಚ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎಂದು ತಜ್ಞರು ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್ ಹೊಂದಿರುವ ವಿಶ್ವದ ಮೊದಲ ಸೇನೆ ಭಾರತದ್ದು; ಏನಿದರ ವಿಶೇಷತೆ?

ಭಾರತೀಯ ರೈಲ್ವೇಸ್ ಯಾಕೆ ಮುಖ್ಯ?

ಭಾರತದಲ್ಲಿ ಈಗಲೂ ಕೂಡ ಜನರಿಗೆ ಕಡಿಮೆ ಬೆಲೆಯಲ್ಲಿ ಪ್ರಯಾಣ ವ್ಯವಸ್ಥೆ ಇದೆ ಎಂದರೆ ಅದು ರೈಲು. ದೇಶದ ಬಹುತೇಕ ಎಲ್ಲಾ ಜಾಗಕ್ಕೂ ಈಗ ರೈಲ್ವೆ ನೆಟ್ವರ್ಕ್ ಇದೆ. ಜನರ ಪ್ರಯಾಣಕ್ಕೆ ಮಾತ್ರವಲ್ಲ, ಸರಕು ಸಾಗಣೆಯಲ್ಲೂ ರೈಲ್ವೆಯದ್ದು ಮುಖ್ಯ ಪಾತ್ರ ಇದೆ. ದೇಶದ ಲಾಜಿಸ್ಟಿಕ್ಸ್ ವ್ಯವಸ್ಥೆಗೆ ರೈಲ್ವೆಯ ಬಲ ಇದೆ. ರಫ್ತು, ಆಮದು, ಸರಬರಾಜು ಸರಪಳಿ ಇದಕ್ಕೆ ಗೂಡ್ಸ್ ರೈಲುಗಳ ಬಳಕೆ ಬಹಳ ಆಗುತ್ತದೆ. ಹೀಗಾಗಿ, ಸರ್ಕಾರ ಯಾವತ್ತಿಗೂ ಕೂಡ ರೈಲ್ವೇ ವಿಭಾಗವನ್ನು ಕಡೆಗಣಿಸಲು ಸಾಧ್ಯವಿಲ್ಲ.

ಕಳೆದ ಎರಡು ವಾರದಲ್ಲಿ ವಿವಿಧ ರೈಲು ಷೇರುಗಳ ಬೆಲೆ ಏರಿಕೆ

  • ಇರ್​ಕಾನ್ ಇಂಟರ್ನ್ಯಾಷನಲ್: ಶೇ. 13.93ರಷ್ಟು ಹೆಚ್ಚಳ
  • ಐಆರ್​ಎಫ್​ಸಿ: ಶೇ. 9.79
  • ತೀತಾಗಡ್ ರೈಲ್: ಶೇ. 8.79
  • ಐಆರ್​ಸಿಟಿಸಿ: ಶೇ. 1.94
  • ರೈಟ್ಸ್: ಶೇ. 5.72
  • ರೈಲ್ ವಿಕಾಸ್: ಶೇ. 10
  • ಜುಪಿಟರ್ ವ್ಯಾಗನ್ಸ್: ಶೇ. 8.90 ಹೆಚ್ಚಳ

ಇದನ್ನೂ ಓದಿ: ಈ ಬಾರಿಯ ಗಣರಾಜ್ಯೋತ್ಸವ ಬಹಳ ಡಿಫರೆಂಟ್; ಸೇನೆಯಿಂದ ಒಂಟೆ, ಭಾರತೀಯ ತಳಿಯ ನಾಯಿಗಳ ಮೆರವಣಿಗೆ

ಬಜೆಟ್​ಗೆ ಮುನ್ನ ಯಾವ ರೈಲ್ವೆ ಸ್ಟಾಕ್​ಗಳನ್ನು ಖರೀದಿಸಬಹುದು?

ವೆಂಚುರಾ ಸಂಸ್ಥೆಯ ವಿನೀತ್ ಬೋಳಿಂಜಕರ್ ಅವರು ಕೆಲ ರೈಲ್ವೆ ಷೇರುಗಳನ್ನು ಖರೀದಿಸಲು ಶಿಫಾರಸು ಮಾಡಿದ್ದಾರೆ. ಅದಕ್ಕೆ ಕೆಲ ಕಾರಣಗಳನ್ನೂ ನೀಡಿದ್ದಾರೆ. ಅವರು ಶಿಫಾರಸು ಮಾಡಿದ ಷೇರುಗಳೆಂದರೆ ಆರ್​ವಿಎನ್​ಎಲ್, ಐಆರ್​ಎಫ್​ಸಿ, ಐಆರ್​ಸಿಟಿಸಿ, ತೀತಾಗಡ್ ಮತ್ತು ರೈಟ್ಸ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link