All posts by nagaraj11081993

ಬಿಗ್ ಬಾಸ್ ಫಿನಾಲೆ ಯಾವಾಗ? ಇನ್ನೂ ಎಷ್ಟು ಎಲಿಮಿನೇಷನ್ ನಡೆಯುತ್ತೆ? – Kannada News | Bigg Boss Kannada 12 Finale: Date, Eliminations, Winner name and Prize Money Revealed

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಹಂತ ತಲುಪಿದೆ. ಕಳೆದ ಕೆಲವು ವಾರಗಳಿಂದ ಈ ಶೋ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬರುತ್ತಿದೆ. ಈಗ ಶೋ ಕೊನೆ ಆಗುವ ಹಂತ ತಲುಪಿದೆ. ಜನವರಿ 17 ಹಾಗೂ 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಅದಕ್ಕೂ ಮೊದಲು ಎಷ್ಟು ಎಲಿಮಿನೇಷನ್ ನಡೆಯುತ್ತದೆ? ಫಿನಾಲೆ ಯಾವ ರೀತಿಯಲ್ಲಿ ನಡೆಯುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗ 15ನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ದೊಡ್ಮನೆಯಲ್ಲಿ ಗಿಲ್ಲಿ ನಟ, ರಘು, ಅಶ್ವಿನಿ ಗೌಡ, ಕಾವ್ಯಾ ಶೈವ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧ್ರುವಂತ್ ಹಾಗೂ ಧನುಷ್ ಇದ್ದಾರೆ. ಇವರ ಪೈಕಿ ಒಬ್ಬರು ಕಪ್ ಎತ್ತಲಿದ್ದಾರೆ. ಅದಕ್ಕೂ ಮೊದಲು ಕೆಲವು ಎಲಿಮಿನೇಷನ್ ನಡೆಯಲಿದೆ.

ಸದ್ಯ ದೊಡ್ಮನೆಯಲ್ಲಿ 8 ಮಂದಿ ಇದ್ದಾರೆ. ಇವರ ಪೈಕಿ ಫಿನಾಲೆಗೆ ಉಳಿಯೋದು ಆರು ಅಥವಾ ಐದು ಮಂದಿ ಮಾತ್ರ. ಕಳೆದ ಎರಡು ಸೀಸನ್​​ಗಳಿಂದ ಫಿನಾಲೆಗೆ ಆರು ಜನರನ್ನು ಉಳಿಸಿಕೊಳ್ಳಲಾಗಿತ್ತು. ಈ ಬಾರಿಯೂ ಹಾಗೆಯೇ ಮಾಡಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಹಾಗಾದಲ್ಲಿ, ಈ ವಾರ ಅಥವಾ ಮುಂದಿನ ವಾರ ಮಧ್ಯವಾರದ ಎಲಿಮಿನೇಷನ್ ಇರಲಿದೆ. ಈ ವಾರಾಂತ್ಯದಲ್ಲಿ ಒಂದು ಎಲಿಮಿನೇಷನ್ ಆಗಲಿದೆ.

ಆರು ಮಂದಿಯನ್ನು ಫಿನಾಲೆಗೆ ಕರೆದುಕೊಂಡು ಹೋದರೆ ಜನವರಿ 17ರಂದು ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಜನವರಿ 18ರಂದು ಹಂತ ಹಂತವಾಗಿ ಎಲಿಮಿನೇಷನ್ ಮಾಡಿ, ಇಬ್ಬರನ್ನು ಉಳಿಸಿಕೊಳ್ಳಲಾಗುತ್ತದೆ. ಫಿನಾಲೆ ಸಂಜೆ 6 ಗಂಟೆಗೆ ಆರಂಭ ಆಗುವ ಸಾಧ್ಯತೆ ಇದೆ. ವಿವಿಧ ಸ್ಪರ್ಧಿಗಳು ಡ್ಯಾನ್ಸ್ ಕೂಡ ಮಾಡುತ್ತಾರೆ. ಈ ಬಾರಿ ಎಲಿಮಿನೇಟ್ ಆದ ಸ್ಪರ್ಧಿಗಳು ಫಿನಾಲೆಯಲ್ಲಿ ಇರಲಿದ್ದಾರೆ. ಗೆದ್ದ ಸ್ಪರ್ಧಿಗೆ 50 ಲಕ್ಷ ಕ್ಯಾಶ್ ಹಾಗೂ ಆಕರ್ಷಕ ಟ್ರೋಫಿ ಸಿಗಲಿದೆ.

ಇದನ್ನೂ ಓದಿ: ಬಿಗ್ ಬಾಸ್​​ನಲ್ಲಿ ಇಬ್ಬರಿಗೆ ರೆಡ್ ಕಾರ್ಡ್; ಮೂರು ತಿಂಗಳ ಸಂಬಳ ಕಟ್, ಫಿನಾಲೆಗೂ ಇಲ್ಲ ಅವಕಾಶ

ಈ ವಾರ ಧನುಷ್ ಅವರನ್ನು ಹೊರತುಪಡಿಸಿ ಉಳಿದ ಏಳು ಮಂದಿ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಟೊಮೊಟೊ ಬಳಸಿ ಪೂರಿ ಲಟ್ಟಿಸಿದ ಯುವಕ, ವೈರಲ್‌ ಆಯ್ತು ದೃಶ್ಯ – Kannada News | A young man used the jugaad idea to make puri

ನಮ್ಮಲ್ಲಿ ಪ್ರತಿಭೆಗಳಿಗೆ, ಜುಗಾಡ್ ಐಡಿಯಾಗಳಿಗೇನು ಕೊರತೆ ಇಲ್ಲ ಬಿಡಿ. ತಮ್ಮ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ವಿಭಿನ್ನ ಶೈಲಿಯ ದೇಸಿ ಉಪಾಯಗಳನ್ನು (desi idea) ಬಳಸಿಕೊಳ್ಳುತ್ತಾರೆ. ಇದಕ್ಕೆ ಉದಾಹರಣಯಂತಿದೆ ಈ ವಿಡಿಯೋ. ಸಾಮಾನ್ಯವಾಗಿ ಚಪಾತಿ ಅಥವಾ ಪೂರಿ ಲಟ್ಟಿಸಲು ಲಟ್ಟಣಿಗೆ ಬಳಸುತ್ತೇವೆ. ಆದರೆ ಇಲ್ಲೊಬ್ಬ ಯುವಕನು (young man) ಟೊಮೊಟೊದಿಂದಲೇ ಪೂರಿ ಲಟ್ಟಿಸುತ್ತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

Maximum_manthan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿಯುವಕನೊಬ್ಬ ಲಟ್ಟಣಿಗೆ ಬದಲು ಟೊಮೊಟೊದಿಂದ ಪೂರಿ ಲಟ್ಟಿಸುವುದನ್ನು ಕಾಣಬಹುದು. ಜುಗಾಡ್ ಐಡಿಯಾ ಬಳಸಿ ಲಟ್ಟಿಸಿದ ಪೂರಿ ದುಂಡಗೆ ಇರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:12 ಲಕ್ಷ ರೂ ಸಾಲ ತೀರಿಸಲು ಹಣ ನೀಡಿದ ಮಗ, ಕಣ್ಣೀರು ಹಾಕಿದ ತಾಯಿ

ಈ ವಿಡಿಯೋ ಎಂಭತ್ತೇಳು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇದು ತಂತ್ರಜ್ಞಾನದ ಪ್ರಭಾವ ಎಂದರೆ, ಮತ್ತೊಬ್ಬರು, ಒಳ್ಳೆಯ ಪ್ರಯತ್ನ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಅದ್ಭುತ ಉಪಾಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅವಳಿ ಜವಳಿ ಆಕಳು ಕರುಗಳಿಗೆ ಅದ್ಧೂರಿಯಾಗಿ ತೊಟ್ಟಿಲು ಶಾಸ್ತ್ರ: ಮುದ್ದಾದ ಚಿತ್ರಗಳು ಇಲ್ಲಿವೆ – Kannada News | Grand cradle ceremony for twin cow calves in Gadag

ಗ್ರಾಮದ ರೈತ ನಾಗರಾಜ್ ಮಡಿವಾಳರ ಮನೆಯಲ್ಲಿ ತೊಟ್ಟಿಲಿಗೆ ತೆಂಗಿನ ಗರಿ, ತಳಿರು ತೋರಣ, ಹೂವುಗಳಿಂದ ಶೃಂಗಾರ ಮಾಡಲಾಗಿದ್ದು, ಅಕ್ಷರಶಃ ಹಬ್ಬದ ವಾತಾವರಣ ಸ್ಥಳದಲ್ಲಿ ಮನೆ ಮಾಡಿತ್ತು. ಸಂಪ್ರದಾಯದಂತೆ ಮುದ್ದಾದ ಕರುಗಳನ್ನು ತೊಟ್ಟಿಲಿಗೆ ಹಾಕಿ ನೆರೆದಿದ್ದವರು ಸಂತಸಪಟ್ಟರು. ಮಠಾಧೀಶರು ಕೂಡ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Source link

ಆಸ್ಕರ್​​ಗೆ ಇನ್ನಷ್ಟು ಹತ್ತಿರವಾದ ‘ಹೋಮ್​​ಬೌಂಡ್’, ಇನ್ನೆಷ್ಟು ಹಂತ ಬಾಕಿ – Kannada News | Indian movie Homebound movie another step closer to Oscars

ಸಿನಿಮಾಗಳಿಗಾಗಿ (Cinema) ನೀಡಲಾಗುವ ವಿಶ್ವಶ್ರೇಷ್ಠ ಪ್ರಶಸ್ತಿ ಎಂದು ನಂಬಲಾಗಿರುವ ಆಸ್ಕರ್ಸ್ ಅಥವಾ ಅಕಾಡೆಮಿ ಅವಾರ್ಡ್ಸ್​ನಲ್ಲಿ ಭಾರತದ ಸಿನಿಮಾಗಳು ಪ್ರಶಸ್ತಿಯ ರೇಸಿನಲ್ಲಿದ್ದು, ಭಾರತದಿಂದ ಈ ಬಾರಿ ಅಧಿಕೃತವಾಗಿ ಆಸ್ಕರ್ಸ್​​ಗೆ ಆಯ್ಕೆ ಆಗಿರುವ ‘ಹೋಮ್​​ಬೌಂಡ್’ ಸಿನಿಮಾ ಈಗಾಗಲೇ ಕೆಲವು ಮೆಟ್ಟಿಲುಗಳನ್ನು ಹತ್ತಿದೆ. ಇದೀಗ ಆಸ್ಕರ್​ಗೆ ಇನ್ನಷ್ಟು ಸನಿಹವಾಗಿದೆ ‘ಹೋಮ್​​ಬೌಂಡ್’ ಈ ಹಿಂದೆ ಪ್ರಾಥಮಿಕ ಹಂತ, ಅದರ ಬಳಿಕದ ಅಂತಿಮ ಹದಿನೈದರ ಪಟ್ಟಿಗೆ ಸಹ ‘ಹೋಮ್​​ಬೌಂಡ್’ ಆಯ್ಕೆ ಆಗಿತ್ತು. ಈಗ ನಾಮಿನೇಷನ್​​ಗೆ ಶಾರ್ಟ್ ಲಿಸ್ಟ್ ಆಗುವ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಕರಣ್ ಜೋಹರ್ ನಿರ್ಮಾಣ ಮಾಡಿರುವ ‘ಹೋಮ್​​ಬೌಂಡ್’ ಸಿನಿಮಾ ಧರ್ಮ ಮತ್ತು ಜಾತಿ ಮತ್ತು ಮಹಿಳಾ ದೌರ್ಜನ್ಯದ ಬಗೆ ವಸ್ತುವನ್ನು ಒಳಗೊಂಡ ಸಿನಿಮಾ ಆಗಿದ್ದು ಸಿನಿಮಾನಲ್ಲಿ ಇಶಾನ್ ಕಟ್ಟರ್, ಜಾನ್ಹವಿ ಕಪೂರ್ ಮತ್ತು ವಿಶಾಲ್ ಜೇಟ್ವಾ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನೀರಜ್ ಗಯ್ವಾನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆಸ್ಕರ್​​ಸ್​ನ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಸ್ಪರ್ಧೆಯಲ್ಲಿರುವ ‘ಹೋಮ್​​ಬೌಂಡ್’ ಸಿನಿಮಾ ಅಂತಿಮ ಹದಿನೈದು ಸಿನಿಮಾಗಳ ಪಟ್ಟಿಗೆ ಆಯ್ಕೆ ಆಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.

ಇದನ್ನೂ ಓದಿ:ಕಮಲ್-ರಜನಿ ಕಾಂಬಿನೇಷನ್ ಸಿನಿಮಾ: ಯುವ ನಿರ್ದೇಶಕನಿಗೆ ಅದೃಷ್ಟ

ಈ ವರೆಗೆ ಭಾರತದ ಐದು ಸಿನಿಮಾಗಳು ಮಾತ್ರವೇ ವಿದೇಶಿ ವಿಭಾಗದಲ್ಲಿ ಆಸ್ಕರ್ಸ್​ನ ಶಾರ್ಟ್ ಲಿಸ್ಟ್ ಪಟ್ಟಿ ಸೇರಿವೆ. ಐದು ಸಿನಿಮಾಗಳಲ್ಲಿ ‘ಹೋಮ್​​ಬೌಂಡ್’ ಸಹ ಒಂದಾಗಿದೆ. ನಾಮಿನೇಷನ್ಸ್ ಪಟ್ಟಿಯನ್ನು ಜನವರಿ 22 ರಂದು ಘೋಷಣೆ ಮಾಡಲಿದ್ದು, ‘ಹೋಮ್​​ಬೌಂಡ್’ ಸಿನಿಮಾ ನಾಮಿನೇಷನ್ಸ್​​ಗೆ ಎಂಟ್ರಿ ಕೊಟ್ಟಲ್ಲಿ, ಭಾರತೀಯ ಚಿತ್ರರಂಗದ ಪಾಲಿಗೆ ಹೆಮ್ಮೆಯ ವಿಷಯವಾಗಲಿದೆ. ಈ ಹಿಂದೆ ಕೇವಲ ‘ಲಗಾನ್’ ಸಿನಿಮಾ ಮಾತ್ರವೇ ವಿದೇಶಿ ಸಿನಿಮಾ ವಿಭಾಗದಲ್ಲಿ ಆಸ್ಕರ್ಸ್​ನ ನಾಮಿನೇಷನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ಭಾರತೀಯ ಸಿನಿಮಾ ಆಗಿತ್ತು.

ಆದರೆ ‘ಹೋಮ್​​ಬೌಂಡ್​​’ಗೆ ಕಠಿಣ ಸ್ಪರ್ಧೆ ಸಹ ಇದೆ. ಇರಾಖ್​ನ ‘ದಿ ಪ್ರೆಸಿಡೆಂಟ್ ಕೇಕ್’, ಪ್ಯಾಲೆಸ್ತೇನಿನ ‘ಪ್ಯಾಲೆಸ್ತೇನ್ 36’, ‘ದಕ್ಷಿಣ ಕೊರಿಯಾದ ‘ನೋ ಅದರ್ ಚಾಯ್ಸ್’ ಸಿನಿಮಾಗಳು ಕಠಿಣ ಸ್ಪರ್ಧೆ ಒಡ್ಡಲಿವೆ. ಮಾತ್ರವಲ್ಲದೆ ‘ಹೋಮ್ಬೌಂಡ್’ ಸಿನಿಮಾಕ್ಕೆ ಇನ್ನು ಮುಂದಿನ ಹಾದಿ ಕ್ರಮಿಸಲು ದೊಡ್ಡ ಮಟ್ಟದ ಪ್ರಚಾರದ ಅವಶ್ಯಕತೆಯೂ ಸಹ ಇದೆ.

‘ಹೋಮ್​​ಬೌಂಡ್’ ಸಿನಿಮಾ ಆಸ್ಕರ್ಸ್​ ರೇಸಿನಲ್ಲಿ ಇದೆಯಾದರೂ ಸಿನಿಮಾ ಅಂತಿಮ ಹಂತ ತಲುಪಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಭರ್ಜರಿ ಪ್ರಚಾರವನ್ನೂ ಮಾಡಬೇಕಿದೆ. ಆದರೆ ಸಿನಿಮಾದ ನಿರ್ಮಾಪಕರುಗಳ್ಯಾರು ಈ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಂಡಂತಿಲ್ಲ. ಜನವರಿ 22 ರಂದು ನಾಮಿನೇಷನ್ಸ್ ಘೋಷಣೆ ಆಗಲಿದ್ದು, ಅಂದು ‘ಹೋಮ್​​ಬೌಂಡ್​’ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆಯೇ ಇಲ್ಲವೇ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SIR ವಿಚಾರಣೆಗೆ ಹಾಜರಾಗಲು ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಸಮನ್ಸ್ – Kannada News | Team India Cricketer Mohammed Shami summoned for SIR

ದೇಶದ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಈ ಪರಿಷ್ಕರಣೆಯ ಭಾಗವಾಗಿ ಇದೀಗ ವಿಚಾರಣೆಗೆ ಹಾಜರಾಗುವಂತೆ ಟೀಮ್ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ಅವರ ಸಹೋದರ ಮೊಹಮ್ಮದ್ ಕೈಫ್​ ಅವರಿಗೆ ಚುನಾವಣಾ ಆಯೋಗ ಸಮನ್ಸ್ ಜಾರಿ ಮಾಡಿದೆ.

ದಕ್ಷಿಣ ಕೋಲ್ಕತ್ತಾದ ಜಾದವ್‌ಪುರ ಪ್ರದೇಶದ ಕರ್ತ್ಜು ನಗರ ಶಾಲೆಯಿಂದ ಸೋಮವಾರ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದ್ದು, ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (AERO) ಮುಂದೆ ಹಾಜರಾಗುವಂತೆ ಶಮಿ ಮತ್ತು ಅವರ ತಮ್ಮನಿಗೆ ಸೂಚಿಸಲಾಗಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಮೊಹಮ್ಮದ್ ಶಮಿ ವಿಜಯ್ ಹಝಾರೆ ಟ್ರೋಫಿಯಲ್ಲಿ ರಾಜ್‌ಕೋಟ್‌ನಲ್ಲಿ ಬಂಗಾಳವನ್ನು ಪ್ರತಿನಿಧಿಸುತ್ತಿರುವುದರಿಂದ ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಪಂದ್ಯದ ಬಳಿಕ ಅವರು ಕೊಲ್ಕತ್ತಾಗೆ ಮರಳುವ ಸಾಧ್ಯತೆಯಿದೆ.

ಸಮನ್ಸ್ ಜಾರಿಗೊಳಿಸಿದ್ದೇಕೆ?

ಮೊಹಮ್ಮದ್ ಶಮಿ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ವಾರ್ಡ್ ಸಂಖ್ಯೆ 93 ರಲ್ಲಿ ಮತದಾರರಾಗಿ ದಾಖಲಾಗಿದ್ದಾರೆ. ಇದು ರಾಶ್‌ಬೆಹರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅಂದರೆ ರಾಶ್​ಬೆಹರಿ ಕ್ಷೇತ್ರದಲ್ಲಿ ಮೊಹಮ್ಮದ್ ಶಮಿ ಮತದಾನದ ಹಕ್ಕನ್ನು ಹೊಂದಿದ್ದಾರೆ.

ಆದರೆ ಶಮಿ ಅವರು ಮೂಲತಃ ಉತ್ತರ ಪ್ರದೇಶದವರು. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಜನಿಸಿದ ಅವರು ಹಲವಾರು ವರ್ಷಗಳಿಂದ ಕೋಲ್ಕತ್ತಾದ ಖಾಯಂ ನಿವಾಸಿಯಾಗಿದ್ದಾರೆ

ಇದೀಗ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ವೇಳೆ  ಮೊಹಮ್ಮದ್ ಶಮಿ ಮತ್ತು ಅವರ ಸಹೋದರನ ಹೆಸರುಗಳು ಎಣಿಕೆ ನಮೂನೆಗಳಲ್ಲಿನ ತೊಡಕುಗಳಿಂದಾಗಿ ವಿಚಾರಣಾ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಈ ಮ್ಯಾಪಿಂಗ್ ವ್ಯತ್ಯಾಸಗಳ ಬಗ್ಗೆ ವಿಚಾರಣೆ ನಡೆಸಲು ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಕೈಫ್ ಅವರಿಗೆ ಚುನಾವಣಾ ಆಯೋಗ ನೋಟೀಸ್ ಕಳುಹಿಸಿದೆ.

ಅತ್ತ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿರುವುದರಿಂದ ಮೊಹಮ್ಮದ್ ಶಮಿ ಈವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಶಮಿ ಅವರ ವಿಚಾರಣೆಯನ್ನು ಜನವರಿ 9 ರಿಂದ 11 ರ ನಡುವೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ ಎಂದು ವರದಿಯಾಗಿದೆ.

ಸದ್ಯ ಪಶ್ಚಿಮ ಬಂಗಾಳದಲ್ಲಿ ಎಸ್​ಐಆರ್​ ಪ್ರಕ್ರಿಯೆ ಚಾಲನೆಯಲ್ಲಿದ್ದು, ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ ಈ ಪ್ರಕ್ರಿಯೆಯು ಅಂತ್ಯಗೊಳ್ಳಲಿದೆ. ಅಲ್ಲದೆ ಬಂಗಾಳದ ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 14 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: ಅಬ್ಬರ ಸಿಡಿಲಬ್ಬರ… ಟ್ರಾವಿಸ್ ಹೆಡ್​ ಬ್ಯಾಟ್​ನಿಂದ ದಾಖಲೆಯ ಸೆಂಚುರಿ

ಇದಕ್ಕೂ ಮುನ್ನ ಪಶ್ಚಿಮ ಬಂಗಾಳದ ಎಸ್​ಐಆರ್​ ಪ್ರಕ್ರಿಯೆಯ ಭಾಗವಾಗಿ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ 58 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಅಳಿಸಲಾಗಿತ್ತು. ಅಲ್ಲದೆ ಪ್ರಕಟವಾದ ಕರಡು ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹೋಗಿದ್ದರೆ ಅಥವಾ ಕಾಣೆಯಾಗಿದ್ದರೆ, ಅವರು ಮತ್ತೊಮ್ಮೆ ಅಧಿಕೃತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕೆಂದು ಚುನಾವಣಾ ಆಯೋಗ ತಿಳಿಸಿದೆ.

Published On – 1:06 pm, Tue, 6 January 26

Source link

ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಮರಕ್ಕೆ ಕಟ್ಟಿ ಹಾಕಿ, ಕೂದಲು ಕತ್ತರಿಸಿದ ದುರುಳರು – Kannada News | Another minority horror in Bangladesh: Hindu woman Physically Assaulted,tied to tree, hair cut off

ಢಾಕಾ, ಜನವರಿ 06: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಕಳೆದ 18 ದಿನಗಳಲ್ಲಿ ಆರು ಹಿಂದೂ(Hindu)ಗಳನ್ನು ಹತ್ಯೆ ಮಾಡಲಾಗಿದೆ. ಜೆನೈದಾ ಜಿಲ್ಲೆಯ ಕಾಲಿಗಂಜ್‌ನಲ್ಲಿ ಹಿಂದೂ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ, ಅಷ್ಟೇ ಅಲ್ಲದೆ ಆಕೆಯನ್ನು ಮರಕ್ಕೆ ಕಟ್ಟಿ ಕೂದಲು ಕತ್ತರಿಸಿ ಹಲ್ಲೆ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಇಬ್ಬರು ಆರೋಪಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿ, ಮರಕ್ಕೆ ಕಟ್ಟಿ. ಬಲವಂತವಾಗಿ ಆಕೆಯ ಕೂದಲುಗಳನ್ನು ಕತ್ತರಿಸಿ ಲೈಂಗಿಕ ದೌರ್ಜನ್ಯವೆಸಗಿ ಹಲ್ಲೆಯನ್ನು ವಿಡಿಯೋದಲ್ಲಿ ರೆಕಾರ್ಡ್​ ಮಾಡಿದ್ದಾರೆ. ನಂತರ ಆ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದರು.
ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಮಹಿಳೆ ಸುಮಾರು ಎರಡೂವರೆ ವರ್ಷಗಳ ಹಿಂದೆ ಕಾಲಿಗಂಜ್ ಪುರಸಭೆಯ ವಾರ್ಡ್ ಸಂಖ್ಯೆ 7 ರಲ್ಲಿ ಶಾಹಿನ್ ಎಂಬ ವ್ಯಕ್ತಿ ಮತ್ತು ಅವನ ಸಹೋದರನಿಂದ ಭೂಮಿ ಮತ್ತು ಎರಡು ಅಂತಸ್ತಿನ ಮನೆಯನ್ನು ಖರೀದಿಸಿದ್ದಾಗಿ ಹೇಳಿದ್ದಾರೆ. ಖರೀದಿಯ ನಂತರ, ಶಾಹಿನ್ ಆಕೆಗೆ ಕಿರುಕುಳ ನೀಡಲು ಮತ್ತು ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದ. ಆದರೆ ಆಕೆ ಪದೇ ಪದೇ ನಿರಾಕರಿಸಿದರೂ ಆತ ಕಿರುಕುಳ ನೀಡುತ್ತಲೇ ಇದ್ದ.

ಮತ್ತಷ್ಟು ಓದಿ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಹತ್ಯೆ; 3 ವಾರಗಳಲ್ಲಿ ಅಲ್ಪಸಂಖ್ಯಾತರ ಮೇಲೆ 5ನೇ ದಾಳಿ

ಶನಿವಾರ ಸಂಜೆ, ಆಕೆಯ ಗ್ರಾಮದ ಇಬ್ಬರು ಸಂಬಂಧಿಕರು ಭೇಟಿ ನೀಡಿದ್ದಾಗ, ಶಾಹಿನ್ ಮತ್ತು ಆತನ ಸಹಚರ ಹಸನ್ ಮನೆಗೆ ಬಲವಂತವಾಗಿ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಪುರುಷರು ಮಹಿಳೆಯಿಂದ 50,000 ಟಾಕಾಗೆ ಬೇಡಿಕೆ ಇಟ್ಟಿದ್ದರು, ಆಕೆ ನಿರಾಕರಿಸಿದಾಗ, ಆಕೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ವರದಿಯಾಗಿದೆ.

ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಎಂ. ಮೊಸ್ತಫಿಜುರ್ ರೆಹಮಾನ್ ಮಾತನಾಡಿ, ಮಹಿಳೆ ಆರಂಭದಲ್ಲಿ ಹಲ್ಲೆಯ ಬಗ್ಗೆ ಹೇಳಿರಲಿಲ್ಲ, ವೈದ್ಯಕೀಯ ಪರೀಕ್ಷೆಯ ನಂತರ, ಆಕೆ ಮೇಲೆ ದೌರ್ಜನ್ಯ ನಡೆದಿದೆ ಎಂದು ನಮಗೆ ತಿಳಿದುಬಂದಿದೆ” ಎಂದು ಅವರು ಹೇಳಿದರು.

ಪ್ರಜ್ಞೆ ಮರಳಿದ ನಂತರ, ಮಹಿಳೆ ಕಾಲಿಗಂಜ್ ಪೊಲೀಸ್ ಠಾಣೆಯಲ್ಲಿ ಶಾಹಿನ್ ಮತ್ತು ಹಸನ್ ವಿರುದ್ಧ ಔಪಚಾರಿಕ ದೂರು ದಾಖಲಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ನಡುವೆಯೇ ಈ ಅಪರಾಧ ನಡೆದಿದೆ. ಶರಿಯತ್‌ಪುರ ಜಿಲ್ಲೆಯಲ್ಲಿ ಗುಂಪೊಂದು ಹಿಂದೂ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಬೆಂಕಿ ಹಚ್ಚಿ ಸಾವನ್ನಪ್ಪಿದ ದಿನವೇ ಆ ಮಹಿಳೆಯ ಮೇಲೆ ಅತ್ಯಾಚಾರ ನಡೆದಿತ್ತು.

ಮತ್ತೊಂದು ಘಟನೆಯಲ್ಲಿ, ಡಿಸೆಂಬರ್ 24 ರಂದು ಕಲಿಮೋಹರ್ ಯೂನಿಯನ್‌ನಲ್ಲಿ ಹಿಂದೂ ಯುವಕ ಅಮೃತ್ ಮಂಡಲ್ ಅವರನ್ನು ಗುಂಪೊಂದು ಹತ್ಯೆ ಮಾಡಿತ್ತು. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಹತ್ಯೆಯನ್ನು ಖಂಡಿಸಿತು ಆದರೆ ವಿವಾದಾತ್ಮಕವಾಗಿ ಮಂಡಲ್ ಒಬ್ಬ ಸುಲಿಗೆಕೋರ ಎಂದು ಹೇಳಿಕೊಂಡಿತ್ತು.

ಇದಕ್ಕೂ ಮೊದಲು, ಡಿಸೆಂಬರ್ 18 ರಂದು, 25 ವರ್ಷದ ದೀಪು ಚಂದ್ರ ದಾಸ್ ಅವರನ್ನು ಸುಳ್ಳು ಆರೋಪದ ಮೇಲೆ ಗುಂಪೊಂದು ಹೊಡೆದು ಕೊಂದಿತ್ತು. ಅವರ ದೇಹವನ್ನು ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಲಾಗಿತ್ತು ಎಂದು ವರದಿಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Angaraka Sankashti: ಇಂದು ಬಹಳ ಅಪರೂಪದ ದಿನ, ಅಡೆತಡೆ ಮತ್ತು ಸಾಲದಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿ – Kannada News | Sankashtahara Chaturthi: Angaraka Significance, Rituals and Ganesha Blessings

ಹಿಂದೂ ಕ್ಯಾಲೆಂಡರ್ ಪ್ರಕಾರ, ಸಂಕಷ್ಟಹರ ಚತುರ್ಥಿಯು ಪ್ರತಿ ತಿಂಗಳು ಬರುವ ಗಣೇಶನ ಹಬ್ಬವಾಗಿದೆ. ಇದನ್ನು ಸಂಕಷ್ಟ ಚತುರ್ಥಿ ಎಂದೂ ಕರೆಯುತ್ತಾರೆ. ಈ ಸಂಕಷ್ಟ ಚತುರ್ಥಿ ಹುಣ್ಣಿಮೆಯ ನಂತರ 4 ನೇ ದಿನದಂದು ಬರುತ್ತದೆ. ಈ ಸಂಕಷ್ಟಹರ ಚತುರ್ಥಿ ಮಂಗಳವಾರ ಬಂದರೆ, ಅದನ್ನು ಅಂಗಾರಕ ಸಂಕಷ್ಟಹರ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ಅಂಗಾರಕ ಸಂಕಷ್ಟಹರ ಚತುರ್ಥಿಯು ವರ್ಷದ ಉಳಿದಿರುವ ಸಂಕಷ್ಟಹರ ಚತುರ್ಥಿ ದಿನಗಳಲ್ಲಿ ಅತ್ಯಂತ ಪ್ರಮುಖವಾದುದು ಎಂದು ಪರಿಗಣಿಸಲಾಗಿದೆ.

ಈ ದಿನದಂದು, ಮಹಿಳೆಯರು ತಮ್ಮ ಮಕ್ಕಳ ದೀರ್ಘಾಯುಷ್ಯ, ಅವರ ಕುಟುಂಬಗಳ ಸಂತೋಷ ಮತ್ತು ಸಮೃದ್ಧಿಗಾಗಿ ಉಪವಾಸ ಮಾಡುತ್ತಾರೆ. ಈ ವರ್ಷ, ಮಂಗಳವಾರ, ಜನವರಿ 6 ರಂದು ಶುಭ ಸಂಕಷ್ಟಿ ಚತುರ್ಥಿ ಉಪವಾಸವನ್ನು ಆಚರಿಸಲಾಗುತ್ತಿದೆ. ಈ ದಿನವು ಬಹಳ ಅಪರೂಪದ ದಿನ ಎಂದು ವಿದ್ವಾಂಸರು ಹೇಳುತ್ತಾರೆ. ಈ ದಿನದಂದು ಮಾಡಬೇಕಾದ ಪೂಜಾ ವಿಧಾನ ಮತ್ತು ಉಪವಾಸದ ಫಲಿತಾಂಶಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿ ತಿಳಿದುಕೊಳ್ಳಿ.

ಇಂದು ಬೆಳಿಗ್ಗೆ 11.37 ರಿಂದ ನಾಳೆ ಬುಧವಾರ 7ನೇ ತಾರೀಕಿನ ವರೆಗೆ ಇದೆ. ಚೌತಿ ತಿಥಿ ಚಂದ್ರ ಉದಯಿಸುವ ದಿನದಂದು ಸಂಕಟ ಹರ ಚತುರ್ಥಿಯನ್ನು ಆಚರಿಸಲಾಗುತ್ತದೆ. ಮಂಗಳವಾರ ಬರುವ ಈ ದಿನವನ್ನು ಅಂಗಾರಕ ಸಂಕಷ್ಟ ಹರ ಚತುರ್ಥಿ ಎಂದು ಕರೆಯಲಾಗುತ್ತದೆ. ಅಲ್ಲದೆ, ಭದ್ರ ಕಾಲದ ಒಂದು ನಿರ್ದಿಷ್ಟ ಅವಧಿ ಇದೆ. ಭದ್ರ ಕಾಲ ಪೂಜೆ ಅಥವಾ ಶುಭ ಕಾರ್ಯಗಳಿಗೆ ಸೂಕ್ತವಲ್ಲ. ಆದ್ದರಿಂದ, ಭದ್ರ ಕಾಲದಲ್ಲಿ ಪೂಜೆ ಅಥವಾ ಸಂಕಲ್ಪ ಇತ್ಯಾದಿಗಳನ್ನು ಮಾಡಬಾರದು ಎಂದು ವಿದ್ವಾಂಸರು ಹೇಳುತ್ತಾರೆ. ಈ ದಿನ ಉಪವಾಸ ಮಾಡುವವರು ಶುಭ ಸಮಯದಲ್ಲಿ ಪೂಜೆ ಮತ್ತು ಪ್ರಾರ್ಥನೆಗಳನ್ನು ಮಾಡಬೇಕು. ಚಂದ್ರ ಉದಯಿಸಿದ ನಂತರ, ರಾತ್ರಿ ಚಂದ್ರನನ್ನು ನೋಡಿ ಅರ್ಘ್ಯ ಅರ್ಪಿಸಿದ ನಂತರವೇ ಅವರು ಉಪವಾಸವನ್ನು ಬಿಡಲಾಗುತ್ತದೆ. ಇದರೊಂದಿಗೆ, ಸಂಕಟ ಹರ ಚತುರ್ಥಿ ಉಪವಾಸವು ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಸಂಕಷ್ಟಹರ ಚತುರ್ಥಿಯ ದಿನದಂದು ಭಕ್ತರು, ವಿಶೇಷವಾಗಿ ಮಹಿಳೆಯರು, ಗಣೇಶನನ್ನು ಭಕ್ತಿಯಿಂದ ಪೂಜಿಸುತ್ತಾರೆ. ಜೊತೆಗೆ ದಿನವಿಡೀ ಉಪವಾಸ ಮಾಡುತ್ತಾರೆ. ಸಂಜೆ, ಚಂದ್ರ ಉದಯಿಸಿದ ನಂತರ, ಚಂದ್ರನ ದರ್ಶನ ಮಾಡಿದ ನಂತರ ಉಪವಾಸವನ್ನು ಕೊನೆಗೊಳಿಸುತ್ತಾರೆ. ಈ ದಿನದಂದು ಗಣೇಶ ಮತ್ತು ಚಂದ್ರನನ್ನು ಪೂಜಿಸಿದರೆ ಕೆಲಸದಲ್ಲಿನ ಅಡೆತಡೆಗಳು, ಆರ್ಥಿಕ ಸಮಸ್ಯೆಗಳು ಮತ್ತು ಸಾಲದ ಸಮಸ್ಯೆಗಳು ದೂರವಾಗುತ್ತವೆ. ಜೀವನದಲ್ಲಿ ಸಕಾರಾತ್ಮಕತೆ ಉಂಟಾಗುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Budhaditya Yoga 2026: ಜನವರಿ 17ರಿಂದ ಬುಧಾದಿತ್ಯ ರಾಜಯೋಗ; ಈ ರಾಶಿಗೆ ಅಪಾರ ಧನ ಲಾಭ! – Kannada News | Budhaditya Yoga 2026: Jan 17 Capricorn Transit Lucky Zodiac Effects and Forecast

ಇದೇ ಜನವರಿ 17ರಂದು ಬುದ್ಧಿವಂತಿಕೆಯ ಕಾರಕತ್ವ ಇರುವಂಥ ಬುಧ ಮತ್ತು ಆತ್ಮಕಾರಕನಾದ ಸೂರ್ಯ ಮಕರ ರಾಶಿಯಲ್ಲಿ ಯುತಿ ಆಗುತ್ತಿದ್ದಾರೆ. ಅಂದರೆ ಅದೇ ರಾಶಿಯಲ್ಲಿ ಇರುತ್ತಾರೆ. ಈ ಸಂಯೋಗದಿಂದ ಅತ್ಯಂತ ಪ್ರಭಾವಶಾಲಿ ‘ಬುಧಾದಿತ್ಯ ಯೋಗ’ ಸೃಷ್ಟಿ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧಾದಿತ್ಯ ಯೋಗವನ್ನು ಅತ್ಯುತ್ತಮ ಯೋಗ ಎಂದು ಪರಿಗಣಿಸಲಾಗುತ್ತದೆ.

ಮೇಷದಿಂದ ಮೀನದ ತನಕ ಪ್ರಭಾವ ಹೀಗಿದೆ:

ಮೇಷ ರಾಶಿ:

ಈ ಯೋಗವು ನಿಮ್ಮ ಕರ್ಮ ಸ್ಥಾನ- ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯುತ್ತದೆ, ಜತೆಗೆ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.

ವೃಷಭ ರಾಶಿ:

ಭಾಗ್ಯ ಸ್ಥಾನದಲ್ಲಿ ಈ ಯೋಗವು ಸೃಷ್ಟಿ ಆಗುವುದರಿಂದ ನಿಂತುಹೋದ ಕೆಲಸಗಳು ಪುನಾರಂಭಗೊಳ್ಳಲಿವೆ. ದೂರದ ಪ್ರಯಾಣ ಅಥವಾ ವಿದೇಶಿ ಶಿಕ್ಷಣದ ಹಾದಿ ಸುಗಮವಾಗಲಿದ್ದು, ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ.

ಮಿಥುನ ರಾಶಿ:

ಹಠಾತ್ ಧನಲಾಭ ಉಂಟಾಗುವ ಸಾಧ್ಯತೆ ಇದ್ದರೂ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ವಾಹನ ಚಾಲನೆ ವೇಳೆ ಎಚ್ಚರಿಕೆ ಮುಖ್ಯ. ಗುಪ್ತ ವಿದ್ಯೆಗಳ ಕಲಿಕೆಯಲ್ಲಿ ಆಸಕ್ತಿ ಮೂಡಲಿದೆ ಮತ್ತು ವಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲವಾಗಲಿದೆ.

ಕರ್ಕಾಟಕ ರಾಶಿ:

ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ದಾಂಪತ್ಯದಲ್ಲಿ ಇದ್ದ ಅಸಮಾಧಾನಗಳು ದೂರವಾಗಿ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಆದರೆ ನಿಮ್ಮ ಎದುರಿಗೆ ಇರುವ ವ್ಯಕ್ತಿಗಳು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಿ.

ಸಿಂಹ ರಾಶಿ:

ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆತು ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಹಳೆಯ ಸಾಲಗಳಿಂದ ಮುಕ್ತಿ ಪಡೆಯಲು ಇದು ಸಕಾಲವಾಗಿದ್ದು, ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

ಕನ್ಯಾ ರಾಶಿ:

ಈ ಸಮಯವು ವಿದ್ಯಾರ್ಥಿಗಳಿಗೆ ಬಹಳ ಶುಭದಾಯಕವಾಗಿದ್ದು, ಸೃಜನಾತ್ಮಕ ಕೆಲಸಗಳಲ್ಲಿ ಪ್ರಗತಿ ಕಾಣುವಿರಿ. ಪ್ರೇಮ ಜೀವನದಲ್ಲಿ ಹೊಸ ತಿರುವು ಸಿಗಲಿದ್ದು, ಮಕ್ಕಳ ಪ್ರಗತಿಯಿಂದ ಸಂತಸ ಉಂಟಾಗಲಿದೆ.

ತುಲಾ ರಾಶಿ:

ಕುಟುಂಬದ ಸದಸ್ಯರ ನಡುವೆ ಬಾಂಧವ್ಯ ವೃದ್ಧಿ ಆಗಲಿದ್ದು, ಹೊಸ ಆಸ್ತಿ ಅಥವಾ ವಾಹನ ಖರೀದಿಗೆ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದ್ದು, ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ.

ವೃಶ್ಚಿಕ ರಾಶಿ:

ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗಲಿದ್ದು, ಕಠಿಣ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ಸಣ್ಣ ಪ್ರಯಾಣಗಳಿಂದ ಲಾಭವಾಗುವುದೇ ಅಲ್ಲದೆ, ಸಹೋದರ-ಸಹೋದರಿಯರೊಂದಿಗೆ ಸೌಹಾರ್ದತೆ ಹೆಚ್ಚಲಿದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಧನು ರಾಶಿ:

ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಲಿದ್ದು, ಬಾಕಿ ಉಳಿದಿದ್ದ ಹಣ ನಿಮ್ಮ ಕೈ ಸೇರಲಿದೆ. ಮಾತು ಮಧುರವಾಗುವುದರಿಂದ ಸಾಮಾಜಿಕವಾಗಿ ನಿಮ್ಮ ಗೌರವ ಪ್ರತಿಷ್ಠೆಗಳು ಹೆಚ್ಚಲಿವೆ. ಆದರೆ ಮಾತಿನ ಮೇಲೆ ನಿಗಾ ಇರಿಸಿಕೊಳ್ಳಬೇಕು. ಪದ ಬಳಕೆಯಲ್ಲಿ ಜಾಗ್ರತೆ.

ಮಕರ ರಾಶಿ:

ನಿಮ್ಮದೇ ರಾಶಿಯಲ್ಲಿ ಬುಧಾದಿತ್ಯ ಯೋಗವು ಸಂಭವಿಸುತ್ತಿರುವುದರಿಂದ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ಲಭಿಸುವುದಲ್ಲದೆ, ವೈಯಕ್ತಿಕ ಬೆಳವಣಿಗೆಗೆ ಹೊಸ ದಾರಿಗಳು ಗೋಚರಿಸಲಿವೆ.

ಕುಂಭ ರಾಶಿ:

ವಿದೇಶ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಂಡುಬರಲಿದ್ದು, ಖರ್ಚುಗಳ ಮೇಲೆ ಹಿಡಿತ ಸಾಧಿಸುವುದು ಒಳ್ಳೆಯದು. ಹೂಡಿಕೆ ಮಾಡುವ ಮುನ್ನ ಅನುಭವಸ್ಥರ ಸಲಹೆ ಪಡೆಯುವುದು ಉತ್ತಮ. ಅತಿಯಾದ ಆತ್ಮವಿಶ್ವಾಸ ಸಮಸ್ಯೆಗೆ ಕಾರಣ ಆಗಬಹುದು, ಎಚ್ಚರ.

ಮೀನ ರಾಶಿ:

ಆದಾಯದ ಮೂಲಗಳು ಹೆಚ್ಚಾಗಲಿದ್ದು, ಬಹುಕಾಲದ ಆಸೆಗಳು ಈ ಸಮಯದಲ್ಲಿ ಈಡೇರಲಿವೆ. ದೊಡ್ಡ ವ್ಯಕ್ತಿಗಳ ಪರಿಚಯದಿಂದ ಭವಿಷ್ಯದ ಯೋಜನೆಗಳಿಗೆ ಸಹಕಾರ ಸಿಗಲಿದೆ ಮತ್ತು ಸಮಾಜದಲ್ಲಿ ನಿಮ್ಮ ಪ್ರಭಾವ ವೃದ್ಧಿಸಲಿದೆ.

ಲೇಖನ- ಶ್ರೀನಿವಾಸ ಮಠ

Published On – 12:34 pm, Tue, 6 January 26

Source link

Sonia Gandhi: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು – Kannada News | Congress Leader Sonia Gandhi Admitted to Hospital in Delhi

ನವದೆಹಲಿ, ಜನವರಿ 06: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ(Sonia Gandhi) ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ಸೋಮವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಕೆಲವು ದಿನಗಳಿಂದ ಕೆಮ್ಮು ಕಾಣಿಸಿಕೊಂಡಿತ್ತು. ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಕೆಮ್ಮು ಕಡಿಮೆಯಾಗುತ್ತಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ತೆರಳಿದ್ದಾರೆ.

ಸೋನಿಯಾ ಗಾಂಧಿಗೆ ಡಿಸೆಂಬರ್​​ನಲ್ಲಿ 79 ವರ್ಷ ತುಂಬಿತ್ತು. ಕೆಲವು ತಿಂಗಳ ಹಿಂದೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆಬ್ರವರಿಯಲ್ಲಿ ಅವರ ಆಸ್ಪತ್ರೆಗೆ ಒಂದು ದಿನ ಚಿಕಿತ್ಸೆ ನೀಡಲಾಯಿತು, ಆ ಸಮಯದಲ್ಲಿ ಅವರು ಗ್ಯಾಸ್ಟ್ರೋಎಂಟರಾಲಜಿ ತಜ್ಞರ ಮೇಲ್ವಿಚಾರಣೆಯಲ್ಲಿದ್ದರು.

ಜೂನ್ 19 ರಂದು, ಹೊಟ್ಟೆಗೆ ಸಂಬಂಧಿತ ಸಮಸ್ಯೆಗೆ ಚಿಕಿತ್ಸೆ ಪಡೆದ ನಂತರ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಜೂನ್ 15 ರಂದು ಹೊಟ್ಟೆಯ ಸೋಂಕಿಗೆ ಒಳಗಾಘಿದ್ದರು, ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳಿಂದ,ಗಾಂಧಿಯವರ ಮೇಲೆ ತೀವ್ರ ವೈದ್ಯಕೀಯ ನಿಗಾ ಇಡಲಾಗಿತ್ತು.

ಮತ್ತಷ್ಟು ಓದಿ: ನೆಹರುಗೆ ಸಂಬಂಧಿಸಿದ ದಾಖಲೆಗಳು ಕಾಣೆಯಾಗಿರಲಿಲ್ವಾ? ಗಜೇಂದ್ರ ಶೇಖಾವತ್ ಹೇಳಿದ್ದೇನು? ಸೋನಿಯಾ ಕುರಿತು ಚರ್ಚೆ ಶುರು

ಜೂನ್ 7 ರಂದು ಕೂಡ ಕಾಂಗ್ರೆಸ್ ನಾಯಕಿ ಹಿಮಾಚಲ ಪ್ರದೇಶದ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೋಗಿದ್ದರು, ಕೆಲವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಂದಾಗಿ ನಿಯಮಿತ ಆರೋಗ್ಯ ತಪಾಸಣೆಗಾಗಿ ಅವರನ್ನು ಕರೆತರಲಾಗಿತ್ತು ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿಯ ಪ್ರಧಾನ ಸಲಹೆಗಾರ (ಮಾಧ್ಯಮ) ನರೇಶ್ ಚೌಹಾಣ್ ಹೇಳಿದ್ದರು.

ಸೆಪ್ಟೆಂಬರ್ 2022 ರಲ್ಲಿ, ಸೋನಿಯಾ ಗಾಂಧಿ ವೈದ್ಯಕೀಯ ತಪಾಸಣೆಗಾಗಿ ಅಮೆರಿಕಕ್ಕೆ ಹೋಗಲು ಮುಂದಾಗಿದ್ದರು, ಆದರೆ ಕೋವಿಡ್-19 ಕೋವಿಡ್​ನಿಂದಾಗಿ ಆ ಭೇಟಿಯನ್ನು ಮುಂದೂಡಲಾಗಿತ್ತು. ಆ ಪ್ರವಾಸದಲ್ಲಿ ಅವರ ಮಗ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಇದ್ದರು.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Budhaditya Yoga 2025: ಜನವರಿ 17ರಿಂದ ಬುಧಾದಿತ್ಯ ರಾಜಯೋಗ; ಈ ರಾಶಿಗೆ ಅಪಾರ ಧನ ಲಾಭ! – Kannada News | Budhaditya Yoga 2025: Jan 17 Capricorn Transit Lucky Zodiac Effects and Forecast

ಇದೇ ಜನವರಿ 17ರಂದು ಬುದ್ಧಿವಂತಿಕೆಯ ಕಾರಕತ್ವ ಇರುವಂಥ ಬುಧ ಮತ್ತು ಆತ್ಮಕಾರಕನಾದ ಸೂರ್ಯ ಮಕರ ರಾಶಿಯಲ್ಲಿ ಯುತಿ ಆಗುತ್ತಿದ್ದಾರೆ. ಅಂದರೆ ಅದೇ ರಾಶಿಯಲ್ಲಿ ಇರುತ್ತಾರೆ. ಈ ಸಂಯೋಗದಿಂದ ಅತ್ಯಂತ ಪ್ರಭಾವಶಾಲಿ ‘ಬುಧಾದಿತ್ಯ ಯೋಗ’ ಸೃಷ್ಟಿ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧಾದಿತ್ಯ ಯೋಗವನ್ನು ಅತ್ಯುತ್ತಮ ಯೋಗ ಎಂದು ಪರಿಗಣಿಸಲಾಗುತ್ತದೆ.

ಮೇಷದಿಂದ ಮೀನದ ತನಕ ಪ್ರಭಾವ ಹೀಗಿದೆ:

ಮೇಷ ರಾಶಿ:

ಈ ಯೋಗವು ನಿಮ್ಮ ಕರ್ಮ ಸ್ಥಾನ- ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯುತ್ತದೆ, ಜತೆಗೆ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.

ವೃಷಭ ರಾಶಿ:

ಭಾಗ್ಯ ಸ್ಥಾನದಲ್ಲಿ ಈ ಯೋಗವು ಸೃಷ್ಟಿ ಆಗುವುದರಿಂದ ನಿಂತುಹೋದ ಕೆಲಸಗಳು ಪುನಾರಂಭಗೊಳ್ಳಲಿವೆ. ದೂರದ ಪ್ರಯಾಣ ಅಥವಾ ವಿದೇಶಿ ಶಿಕ್ಷಣದ ಹಾದಿ ಸುಗಮವಾಗಲಿದ್ದು, ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ.

ಮಿಥುನ ರಾಶಿ:

ಹಠಾತ್ ಧನಲಾಭ ಉಂಟಾಗುವ ಸಾಧ್ಯತೆ ಇದ್ದರೂ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ವಾಹನ ಚಾಲನೆ ವೇಳೆ ಎಚ್ಚರಿಕೆ ಮುಖ್ಯ. ಗುಪ್ತ ವಿದ್ಯೆಗಳ ಕಲಿಕೆಯಲ್ಲಿ ಆಸಕ್ತಿ ಮೂಡಲಿದೆ ಮತ್ತು ವಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲವಾಗಲಿದೆ.

ಕರ್ಕಾಟಕ ರಾಶಿ:

ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ದಾಂಪತ್ಯದಲ್ಲಿ ಇದ್ದ ಅಸಮಾಧಾನಗಳು ದೂರವಾಗಿ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಆದರೆ ನಿಮ್ಮ ಎದುರಿಗೆ ಇರುವ ವ್ಯಕ್ತಿಗಳು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಿ.

ಸಿಂಹ ರಾಶಿ:

ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆತು ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಹಳೆಯ ಸಾಲಗಳಿಂದ ಮುಕ್ತಿ ಪಡೆಯಲು ಇದು ಸಕಾಲವಾಗಿದ್ದು, ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

ಕನ್ಯಾ ರಾಶಿ:

ಈ ಸಮಯವು ವಿದ್ಯಾರ್ಥಿಗಳಿಗೆ ಬಹಳ ಶುಭದಾಯಕವಾಗಿದ್ದು, ಸೃಜನಾತ್ಮಕ ಕೆಲಸಗಳಲ್ಲಿ ಪ್ರಗತಿ ಕಾಣುವಿರಿ. ಪ್ರೇಮ ಜೀವನದಲ್ಲಿ ಹೊಸ ತಿರುವು ಸಿಗಲಿದ್ದು, ಮಕ್ಕಳ ಪ್ರಗತಿಯಿಂದ ಸಂತಸ ಉಂಟಾಗಲಿದೆ.

ತುಲಾ ರಾಶಿ:

ಕುಟುಂಬದ ಸದಸ್ಯರ ನಡುವೆ ಬಾಂಧವ್ಯ ವೃದ್ಧಿ ಆಗಲಿದ್ದು, ಹೊಸ ಆಸ್ತಿ ಅಥವಾ ವಾಹನ ಖರೀದಿಗೆ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದ್ದು, ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ.

ವೃಶ್ಚಿಕ ರಾಶಿ:

ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗಲಿದ್ದು, ಕಠಿಣ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ಸಣ್ಣ ಪ್ರಯಾಣಗಳಿಂದ ಲಾಭವಾಗುವುದೇ ಅಲ್ಲದೆ, ಸಹೋದರ-ಸಹೋದರಿಯರೊಂದಿಗೆ ಸೌಹಾರ್ದತೆ ಹೆಚ್ಚಲಿದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಧನು ರಾಶಿ:

ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಲಿದ್ದು, ಬಾಕಿ ಉಳಿದಿದ್ದ ಹಣ ನಿಮ್ಮ ಕೈ ಸೇರಲಿದೆ. ಮಾತು ಮಧುರವಾಗುವುದರಿಂದ ಸಾಮಾಜಿಕವಾಗಿ ನಿಮ್ಮ ಗೌರವ ಪ್ರತಿಷ್ಠೆಗಳು ಹೆಚ್ಚಲಿವೆ. ಆದರೆ ಮಾತಿನ ಮೇಲೆ ನಿಗಾ ಇರಿಸಿಕೊಳ್ಳಬೇಕು. ಪದ ಬಳಕೆಯಲ್ಲಿ ಜಾಗ್ರತೆ.

ಮಕರ ರಾಶಿ:

ನಿಮ್ಮದೇ ರಾಶಿಯಲ್ಲಿ ಬುಧಾದಿತ್ಯ ಯೋಗವು ಸಂಭವಿಸುತ್ತಿರುವುದರಿಂದ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ಲಭಿಸುವುದಲ್ಲದೆ, ವೈಯಕ್ತಿಕ ಬೆಳವಣಿಗೆಗೆ ಹೊಸ ದಾರಿಗಳು ಗೋಚರಿಸಲಿವೆ.

ಕುಂಭ ರಾಶಿ:

ವಿದೇಶ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಂಡುಬರಲಿದ್ದು, ಖರ್ಚುಗಳ ಮೇಲೆ ಹಿಡಿತ ಸಾಧಿಸುವುದು ಒಳ್ಳೆಯದು. ಹೂಡಿಕೆ ಮಾಡುವ ಮುನ್ನ ಅನುಭವಸ್ಥರ ಸಲಹೆ ಪಡೆಯುವುದು ಉತ್ತಮ. ಅತಿಯಾದ ಆತ್ಮವಿಶ್ವಾಸ ಸಮಸ್ಯೆಗೆ ಕಾರಣ ಆಗಬಹುದು, ಎಚ್ಚರ.

ಮೀನ ರಾಶಿ:

ಆದಾಯದ ಮೂಲಗಳು ಹೆಚ್ಚಾಗಲಿದ್ದು, ಬಹುಕಾಲದ ಆಸೆಗಳು ಈ ಸಮಯದಲ್ಲಿ ಈಡೇರಲಿವೆ. ದೊಡ್ಡ ವ್ಯಕ್ತಿಗಳ ಪರಿಚಯದಿಂದ ಭವಿಷ್ಯದ ಯೋಜನೆಗಳಿಗೆ ಸಹಕಾರ ಸಿಗಲಿದೆ ಮತ್ತು ಸಮಾಜದಲ್ಲಿ ನಿಮ್ಮ ಪ್ರಭಾವ ವೃದ್ಧಿಸಲಿದೆ.

ಲೇಖನ- ಶ್ರೀನಿವಾಸ ಮಠ

Source link