All posts by nagaraj11081993

ರಾಯಚೂರಿನಲ್ಲಿ ರಸ್ತೆಗಿಳಿದ ‘ವಿದ್ಯಾರ್ಥಿ ರಥ’; ಸ್ಕೂಲ್ ಮಕ್ಕಳೀಗಾಗಿಯೇ ರಿಸರ್ವ್​ 15 ಹೊಸ ಬಸ್ಗಳು – Kannada News | Sindhanur’s “Vidhyarthi Ratha”: New Bus Service for 25K Students

ರಾಯಚೂರಿನಲ್ಲಿ ರಸ್ತೆಗಿಳಿದ ‘ವಿದ್ಯಾರ್ಥಿ ರಥ’; ಸ್ಕೂಲ್ ಮಕ್ಕಳೀಗಾಗಿಯೇ ರಿಸರ್ವ್​ 15 ಹೊಸ ಬಸ್ಗಳು

ರಾಯಚೂರು, ಜನವರಿ 06: ಕರ್ನಾಟಕದ ಹಲವೆಡೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದಾರೆ. ರಾಯಚೂರಿನಲ್ಲಿಯೂ ಮಕ್ಕಳು ಇದೇ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಪರಿಹಾರವಾಗಿ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆಂದೇ ಬಸ್ ಸೇವೆ ಆರಂಭವಾಗಿದ್ದು, ಸಿಂಧನೂರು ತಾಲ್ಲೂಕಿನಲ್ಲಿ 15 ಹೊಸ ಬಸ್‌ಗಳನ್ನು ವಿದ್ಯಾರ್ಥಿಗಳಿಗಾಗಿ ರಿಸರ್ವ್ ಮಾಡಲಾಗಿದೆ. ‘ವಿದ್ಯಾರ್ಥಿ ರಥ’ ಹೆಸರಿನ ಯೋಜನೆಯಡಿ ಸೇವೆ ನೀಡಲು ಸಿದ್ಧತೆ ಸಂಪೂರ್ಣಗೊಂಡಿದ್ದು, ಈ ಬಸ್‌ಗಳಲ್ಲಿ ಕೇವಲ ಪಿಯು, ಡಿಗ್ರಿ, ಪಿಜಿ ವಿದ್ಯಾರ್ಥಿಗಳು ಮಾತ್ರ ಪ್ರಯಾಣಿಸಬಹುದಾಗಿದೆ.

5 ಕೋಟಿ ರೂ. ವೆಚ್ಚದ ಯೋಜನೆ

ಕಾಂಗ್ರೆಸ್ ಶಾಸಕ ಹಂಪನಗೌಡ ಬಾದರ್ಲಿರಿಂದ ಈ ವಿನೂತನ ಕಾರ್ಯ ನಡೆದಿದ್ದು, ಸಿಂಧನೂರು ತಾಲೂಕಿನಲ್ಲಿ ಸಂಚರಿಸಲಿರುವ 15 ಹೊಸ ಬಸ್‌ಗಳ ಯೋಜನೆಯನ್ನು ಜನವರಿ 3ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಂಟಾಗುತ್ತಿದ್ದ ಬಸ್ ಕೊರತೆಯನ್ನು ಪರಿಹರಿಸಲು 5 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಈ ಬಸ್​ಗಳಲ್ಲಿ ಸಾರ್ವಜನಿಕರಿಗೆ ಅವಕಾಶವಿಲ್ಲದೆ ಕೇಲವ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುವುದಾಗಿ ಹೇಳಲಾಗಿದೆ.

ವಿದ್ಯಾರ್ಥಿಗಳ ಹರ್ಷ

ಇದಕ್ಕಾಗಿ ಬಸ್‌ಗಳ ಸಂಚಾರ ದೈನಂದಿನ ಶಕ್ತಿ ಯೋಜನೆ ರೂಪಿಸಲ್ಪಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಬಸ್‌ಗಳ ಕೊರತೆಯಿಂದ ತರಗತಿಗೆ ಹಾಜರಾಗಲು ತೊಂದರೆ ಎದುರಿಸುತ್ತಿದ್ದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಹೊಸ ಬಸ್ ಸೇವೆಯನ್ನು ಖುಷಿಯಿಂದ ಸ್ವಾಗತಿಸಿದ್ದಾರೆ. ವಿದ್ಯಾರ್ಥಿ ರಥ ಯೋಜನೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸುಲಭ, ಸುರಕ್ಷಿತ ಮತ್ತು ಸಮಯಬದ್ಧ ಪ್ರಯಾಣ ಸಿಗುವ ನಿರೀಕ್ಷೆ ವ್ಯಕ್ತವಾಗಿದ್ದು, ಈ ಸೇವೆ ರಾಜ್ಯದ ಬಸ್ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಮಾದರಿಯ ಹೆಜ್ಜೆ ಇಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್ ಹೊಂದಿರುವ ವಿಶ್ವದ ಮೊದಲ ಸೇನೆ ಭಾರತದ್ದು; ಏನಿದರ ವಿಶೇಷತೆ? – Kannada News | In a world’s first, Indian Army to deploy ramjet powered 155 mm artillery shells

ನವದೆಹಲಿ, ಜನವರಿ 6: ಭಾರತೀಯ ಸೇನೆಯ (Indian Army) 155 ಎಂಎಂ ಗನ್​ಗಳಿಗೆ ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್​ಗಳನ್ನು ನಿಯೋಜಿಸಿದೆ. ಈ ಬಲ ಪಡೆದ ವಿಶ್ವದ ಮೊದಲ ಸಶಸ್ತ್ರ ಸೇನೆ ಭಾರತದ್ದಾಗಿದೆ. ಡಿಆರ್​ಡಿಒ ಮತ್ತು ಐಐಟಿ ಮದ್ರಾಸ್ ಜಂಟಿಯಾಗಿ ಮತ್ತು ಸ್ವಂತವಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಭೂಸೇನೆಯ ಬತ್ತಳಿಕೆಯಲ್ಲಿ ಇರುವ ಪ್ರಮುಖ ಶಸ್ತ್ರಾಸ್ತ್ರಗಳಲ್ಲಿ ಆರ್ಟಿಲರಿ ಶೆಲ್​ಗಳು ಇವೆ. ಈ ಶೆಲ್​ಗಳಿಗೆ ರಾಮ್​ಜೆಟ್ ಎಂಜಿನ್ ಅಳವಡಿಸಿರುವುದು ಗೇಮ್ ಚೇಂಜರ್ ಎನಿಸಿದೆ.

ಏನಿದು ರಾಮ್​ಜೆಟ್?

ರಾಮ್​ಜೆಟ್ ಎಂಬುದು ಒಳನುಗ್ಗುವ ಗಾಳಿ ಬಳಸಿಕೊಂಡು ಕೆಲಸ ಮಾಡುವ ಎಂಜಿನ್ ಆಗಿದೆ. ತಿರುಗುವ ಕಂಪ್ರೆಸ್ಸರ್​ಗಳು ಮತ್ತು ಟರ್ಬೈನ್​ಗಳು ಬೇಕಾಗುವುದಿಲ್ಲ. ಗನ್​ನಿಂದ ಹೊರಹಾರುವ ಶೆಲ್ ಒಂದು ನಿರ್ದಿಷ್ಟ ವೇಗ ಪಡೆದಾಗ ರಾಮ್​ಜೆಟ್ ಎಂಜಿನ್ ಸಕ್ರಿಯಗೊಳ್ಳುತ್ತದೆ. ರಾಮ್​ಜೆಟ್ ಎಂಜಿನ್​ಗೆ ಗಾಳಿಯೇ ಪ್ರಮುಖ ಶಕ್ತಿ. ಈ ರಾಮ್​ಜೆಟ್​ಗಳನ್ನು ಸಾಮಾನ್ಯವಾಗಿ ಮಿಸೈಲ್​ಗಳಿಗೆ ಅಳವಡಿಸಲಾಗುತ್ತದೆ. ಆರ್ಟಿಲರಿ ಶೆಲ್​ಗಳಿಗೆ ಇತ್ತೀಚೆಗೆ ಇದರ ಅಳವಡಿಕೆ ಆರಂಭವಾಗಿದೆ.

ಇದನ್ನೂ ಓದಿ: ಈ ಬಾರಿಯ ಗಣರಾಜ್ಯೋತ್ಸವ ಬಹಳ ಡಿಫರೆಂಟ್; ಸೇನೆಯಿಂದ ಒಂಟೆ, ಭಾರತೀಯ ತಳಿಯ ನಾಯಿಗಳ ಮೆರವಣಿಗೆ

ಏನಿದು ಆರ್ಟಿಲರಿ ಶೆಲ್?

ಇದು ಒಂದು ರೀತಿಯಲ್ಲಿ ಬುಲೆಟ್​ಗಳಂತೆ. ಆದರೆ, ಸ್ಫೋಟಕಗಳು ಆರ್ಟಿಲರಿ ಶೆಲ್​ನ ಒಳಗೆ ಇರುತ್ತವೆ. 155 ಎಂಎಂ ಗನ್, ಹೌವಿಟ್ಜರ್ ಗನ್ ಇತ್ಯಾದಿಗಳಿಂದ ಇವುಗಳನ್ನು ಶೂಟ್ ಮಾಡಲಾಗುತ್ತದೆ. ಸಾಮಾನ್ಯ ಆರ್ಟಿಲರಿ ಶೆಲ್​ಗಳು 5ರಿಂದ 10 ಕಿಮೀ ದೂರದವರೆಗೆ ಹೋಗಬಲ್ಲುವು. ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್​ಗಳು 50 ಕಿಮೀ ದೂರದವರೆಗೂ ಗುರಿಯನ್ನು ಹೊಡೆದುರುಳಿಸಬಲ್ಲುವು.

ಭಾರತದಲ್ಲಿ ನಿಯೋಜಿಸಲಾಗಿರುವ ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್​ಗಳು ಸಾಮಾನ್ಯದವಕ್ಕಿಂತ ಶೇ. 30ರಷ್ಟು ಹೆಚ್ಚು ದೂರ ತಲುಪಬಲ್ಲುವು ಎಂದೆನ್ನಲಾಗುತ್ತಿದೆ. ಸದ್ಯ ಇದನ್ನು 155 ಎಂಎಂ ಗನ್​ಗಳಿಗೆ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಲೈಟ್ ಹೌವಿಟ್ಜರ್ ಗನ್ ಇತ್ಯಾದಿ ಇನ್ನೂ ಹಲವು ವೆಪನ್ ಸಿಸ್ಟಂಗಳಿಗೆ ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್​ಗಳನ್ನು ಸೇರಿಸುವ ಯೋಜನೆ ಭಾರತದ್ದಾಗಿದೆ.

ಇದನ್ನೂ ಓದಿ: ದೆಹಲಿ ರಕ್ಷಣೆಗೆ ‘ಸುದರ್ಶನ ಚಕ್ರ’; ಐಎಡಿಎಫ್​ಎಸ್ ಖರೀದಿಗೆ ಸರ್ಕಾರ ಅನುಮೋದನೆ

ಬೇರೆ ದೇಶಗಳಲ್ಲಿ ಇಲ್ಲವಾ ರಾಮ್​ಜೆಟ್ ಟೆಕ್ನಾಲಜಿ?

ಕ್ಷಿಪಣಿಗಳಿಗೆ ರಾಮ್​ಜೆಟ್ ಎಂಜಿನ್ ಬಳಸಲಾಗುತ್ತದೆ. ಆದರೆ, ಆರ್ಟಿಲರಿ ಶೆಲ್​ಗಳಿಗೆ ಇದನ್ನು ಅಳವಡಿಸುವ ಪ್ರಯತ್ನ ಇತ್ತೀಚಿನ ವರ್ಷಗಳಿಂದ ಆಗುತ್ತಿದೆ. ಅಮೆರಿಕದ ಬೋಯಿಂಗ್ ಮತ್ತು ನಾರ್ವೆಯ ನ್ಯಾಮ್ಮೋ ಕಂಪನಿಗಳು ಇಂಥ ಶೆಲ್​ಗಗಳನ್ನು ಅಭಿವೃದ್ಧಿಪಡಿಸಿವೆ. ಆದರೆ, ಇನ್ನೂ ಕೂಡ ಯಾವುದೇ ಸಶಸ್ತ್ರ ಸೇನಾ ಪಡೆಗಳ ಬಳಕೆಗೆ ಅದನ್ನು ನಿಯೋಜಿಸಲಾಗಿಲ್ಲ. ಆ ಮಟ್ಟಿಗೆ, ಇದನ್ನು ಬಳಸಿದ ಮೊದಲ ಸಶಸ್ತ್ರ ಪಡೆ ಭಾರತೀಯ ಸೇನೆಯದ್ದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಿರುಪ್ಪರನ್​ಕುಂದ್ರಂ ಬೆಟ್ಟಗಳ ಮೇಲೆ ದರ್ಗಾದ ಬಳಿ ದೀಪ ಬೆಳಗಲು ಹಿಂದೂಗಳಿಗೆ ಅನುಮತಿ, ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಖಭಂಗ – Kannada News | Tamil Nadu News Madras High Court Backs Hilltop Lamp Lighting in Deepam Dispute

ಚೆನ್ನೈ, ಜನವರಿ 06: ತಮಿಳುನಾಡಿನ ತಿರುಪ್ಪರನ್​ಕುಂದ್ರಂ ಬೆಟ್ಟಗಳ ಮೇಲೆ ದರ್ಗಾದ ಬಳಿ ದೀಪ ಬೆಳಗಿಸುವ ವಿಚಾರ ಎರಡು ಧರ್ಮಗಳ ನಡುವೆ ವಿವಾದವನ್ನು ಹುಟ್ಟುಹಾಕಿದೆ. ಆದರೆ ಮದ್ರಾಸ್ ಹೈಕೋರ್ಟ್ ಹಿಂದೂಗಳಿಗೆ​ ದೀಪ ಬೆಳಗಲು ಅನುಮತಿ ನೀಡಿದ್ದು ಇದು ಎಡ ಪಂಥೀಯರು ಹಾಗೂ ತಮಿಳುನಾಡು(Tamil Nadu) ಸರ್ಕಾರಕ್ಕೆ ಪೆಟ್ಟು ಕೊಟ್ಟಂತಾಗಿದೆ. ತಮಿಳುನಾಡು ಸರ್ಕಾರ ಮತ್ತು ಜಿಲ್ಲಾಡಳಿತದ ವಾದಗಳನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿರಸ್ಕರಿಸಿದೆ. ದೀಪಂ ವಕ್ಫ್ ಮಂಡಳಿ ಮತ್ತು ದರ್ಗಾದ ಆಸ್ತಿ ಎಂಬ ಹೇಳಿಕೆಯನ್ನು ಕೂಡ ನ್ಯಾಯಾಲಯ ತಿರಸ್ಕರಿಸಿದೆ.

ದೇವಾಲಯ ದೇವಸ್ಥಾನದ ದೀಪ ಪ್ರಕರಣವನ್ನು ಆಲಿಸಿದ ನಂತರ, ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ತಮಿಳುನಾಡು ಸರ್ಕಾರವು ದೇವಾಲಯವು ಜೈನ ದೇವಾಲಯ ಎಂದು ವಾದಿಸಿತ್ತು. ಇದಲ್ಲದೆ, ದೀಪಸ್ತಂಭವು ದರ್ಗಾದ ಆಸ್ತಿ ಎಂದು ವಕ್ಫ್ ಮಂಡಳಿ ಹೇಳಿಕೊಂಡಿತ್ತು.
ದೀಪಸ್ತಂಭವು ತಿರುಪ್ಪರನ್​ಕುಂದ್ರಂ ಬೆಟ್ಟದ ದೇವಾಲಯದ ಬಳಿ ಇರುವ ಕಲ್ಲಿನ ಕಂಬದ ಮೇಲೆ ಇದೆ. ಹಿಂದೂಗಳು ತಮ್ಮ ಧಾರ್ಮಿಕ ಆಚರಣೆಯ ಭಾಗವಾಗಿರುವ ದೀಪಗಳನ್ನು ಬೆಳಗಿಸುವ ಹಕ್ಕನ್ನು ಹೊಂದಿದ್ದಾರೆಯೇ ಎಂಬುದು ಪ್ರಶ್ನೆಯಾಗಿತ್ತು.

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಮಂಗಳವಾರ ತೀರ್ಪು ನೀಡಿದೆ. ದೇವಾಲಯದ ದೇವಾಲಯಗಳು ದೀಪಸ್ತಂಭಗಳ ಮೇಲೆ ದೀಪಗಳನ್ನು ಬೆಳಗಿಸಲು ಅವಕಾಶ ನೀಡಬೇಕು ಎಂದು ತೀರ್ಪು ನೀಡಿದೆ . ದೀಪಗಳನ್ನು ಬೆಳಗಿಸುವ ಅಭ್ಯಾಸವು ಪ್ರಾಚೀನ ಹಿಂದೂ ಸಂಪ್ರದಾಯವಾಗಿದೆ ಎಂದು ಹೈಕೋರ್ಟ್ ಹೇಳಿದೆ. ದೂರದಿಂದಲೇ ಭಕ್ತರಿಗೆ ದೀಪಗಳು ಗೋಚರಿಸುವಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ.

ಮತ್ತಷ್ಟು ಓದಿ: ತಮಿಳುನಾಡು ಚುನಾವಣೆಗೆ ನಟ ವಿಜಯ್ ಸಿಎಂ ಅಭ್ಯರ್ಥಿ; ಟಿವಿಕೆ ಅಧಿಕೃತ ಘೋಷಣೆ

ಭಕ್ತರ ಕೋರಿಕೆಯನ್ನು ನಿರಾಕರಿಸಲು ದೇವಾಲಯದ ಅಧಿಕಾರಿಗಳಿಗೆ ಯಾವುದೇ ಮಾನ್ಯ ಅಥವಾ ಕಾನೂನು ಕಾರಣವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲು ದೇವಸ್ಥಾನಕ್ಕೆ ಸೂಚನೆ ನೀಡಿದೆ. ಅಧಿಕಾರಿಗಳು ಮಂಡಿಸಿದ ವಾದಗಳನ್ನು ನ್ಯಾಯಾಲಯವು ತೀವ್ರವಾಗಿ ಆಕ್ಷೇಪಿಸಿತು. ತಮಿಳುನಾಡು ಸರ್ಕಾರ ಮತ್ತು ಜಿಲ್ಲಾಡಳಿತದ ವಾದಗಳನ್ನು ಹಾಸ್ಯಾಸ್ಪದ ಮತ್ತು ನಂಬಲು ಕಷ್ಟ ಎಂದು ನ್ಯಾಯಾಲಯ ಬಣ್ಣಿಸಿತು, ದೇವಾಲಯದ ಆವರಣದಲ್ಲಿ ದೀಪವನ್ನು ಬೆಳಗಿಸುವಂತಹ ಸರಳವಾದ ವಿಚಾರ ಹೇಗೆ ಸಮಾಜದಲ್ಲಿ ಶಾಂತಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಪ್ರಶ್ನಿಸಿದ್ದಾರೆ.

ಸ್ವಲ್ಪ ತಿಂಗಳುಗಳ ಹಿಂದೆ ತಮಿಳುನಾಡಿನ ತಿರುಪರನಕುಂದ್ರಂ ಬೆಟ್ಟದಲ್ಲಿ ದರ್ಗಾದ ಬಳಿ ಇರುವ ಕಲ್ಲಿನ ಕಂಬದ ಮೇಲೆ ಸಾಂಪ್ರದಾಯಿಕ ದೀಪ ಬೆಳಗಲು ಅನುಮತಿ ನೀಡಿದ್ದ ನ್ಯಾಯಾಧೀಶ ಜಿ. ಆರ್ ಸ್ವಾಮಿನಾಥನ್ ವಿರುದ್ಧ ವಿಪಕ್ಷಗಳ ಸಂಸದರು ಕಿಡಿ ಕಾರಿದ್ದರು. ಅಷ್ಟೇ ಅಲ್ಲದೇ ಬೆಟ್ಟದ ಮೇಲಿನ ದರ್ಗಾ ಬಳಿ ಇರುವ ಕಲ್ಲಿನ ಕಂಬದ ಮೇಲೆ ಸಾಂಪ್ರದಾಯಿಕ ದೀಪ ಬೆಳಗಲು ಆದೇಶ ನೀಡಿರುವ ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸಬೇಕೆಂದು ಆಗ್ರಹಿಸಿ ಸ್ಪೀಕರ್ ಗೆ ದೂರು ನೀಡಿದ್ದರು.

ದೇವಾಲಯ ಮತ್ತು ಹತ್ತಿರದ ದರ್ಗಾ ಹೊಂದಿರುವ ತಿರುಪರಂಕುಂದ್ರಂನಲ್ಲಿರುವ ಬೆಟ್ಟದ ಮೇಲೆ ಸಾಂಪ್ರದಾಯಿಕ ಕಾರ್ತಿಗೈ ದೀಪವನ್ನು ಬೆಳಗಿಸುವ ಬಗ್ಗೆ ನ್ಯಾ.ಜಿಆರ್ ಸ್ವಾಮಿನಾಥನ್ ಅವರು ಆದೇಶ ನೀಡಿದ್ದರು. ನ್ಯಾಯಾಧೀಶರ ಆದೇಶದ ಪ್ರಕಾರ ಡಿಸೆಂಬರ್ 4 ರೊಳಗೆ “ದೀಪಥೂನ್” ಕಂಬದ ಮೇಲೆ ದೀಪವನ್ನು ಬೆಳಗಿಸಬೇಕಿತ್ತು.

ಇಲ್ಲಿನ ತಿರುಪ್ಪರನ್​ಕುಂದ್ರಂ ಬೆಟ್ಟದಲ್ಲಿನ ಕಾಶಿ ವಿಶ್ವನಾಥ ದೇವಾಲಯದ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಲು ಹೈಕೋರ್ಟ್​ ಅನುಮತಿ ನೀಡಿತ್ತು. ಆದರೆ, ತಮಿಳುನಾಡು ಸರ್ಕಾರದ ಇದಕ್ಕೆ ಅನುಮತಿ ನೀಡದೆ, ಅದೇ ಜಾಗದಲ್ಲಿರುವ ದರ್ಗಾದಲ್ಲಿ ಉರುಸ್​ ಆಚರಣೆಗೆ ಅನುಮತಿ ನೀಡಿರುವುದು ಕೋಲಾಹಲಕ್ಕೆ ಕಾರಣವಾಗಿತ್ತು.

ಬೆಟ್ಟದಲ್ಲಿರುವ ಹಜರತ್ ಸುಲ್ತಾನ್ ಸಿಕಂದರ್ ಬಾದುಶಾ ಔಲಿಯಾ ದರ್ಗಾದಲ್ಲಿ ಇಂದಿನಿಂದ ಜನವರಿ 6ರಂದು ಸಂತನಕೂಡು ಉತ್ಸವ ಜರುಗಲಿದೆ. ಇದರ ಭಾಗವಾಗಿ ಡಿಸೆಂಬರ್ 21ರಂದು ರಾತ್ರಿ ದರ್ಗಾದಲ್ಲಿ ಧ್ವಜಾರೋಹಣ ನಡೆಸಲು ತಿರುಮಂಗಲಂ ಕಂದಾಯ ವಿಭಾಗೀಯ ಅಧಿಕಾರಿ ಅನುಮತಿ ನೀಡಿದ್ದರು. ಇದರ ವಿರುದ್ಧ ಕೆಲ ಹಿಂದೂಗಳು ಮತ್ತು ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ದರ್ಗಾದ ಪಕ್ಕದಲ್ಲಿರುವ ಸ್ತಂಭದಲ್ಲಿ ದೀಪ ಬೆಳಗಲು ಹಿಂದುಗಳಿಗೂ ಅವಕಾಶ ನೀಡಬೇಕು. ಈ ಕುರಿತು ಕೋರ್ಟ್​ ಆದೇಶವಿದೆ ಎಂದು ಬಿಜೆಪಿ ಮತ್ತು ಹಿಂದೂಗಳು ಒತ್ತಾಯಿಸಿದ್ದಾರೆ. ಅಲ್ಲದೆ, ಅಧಿಕಾರಿಯ ನಿರ್ಧಾರವನ್ನು ವಿರೋಧಿಸಿ ‘ರಸ್ತೆ ರೋಕೋ’ ಆಂದೋಲನ ನಡೆಸಿದ್ದಾರೆ. ಹಿಂದುಗಳಿಗೆ ಅನುಮತಿ ನೀಡದೆ ಇನ್ನೊಂದು ಸಮುದಾಯಕ್ಕೆ ಹೇಗೆ ಅನುಮತಿ ನೀಡಲಾಯಿತು ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:11 pm, Tue, 6 January 26

Source link

ಕಳ್ಳರ ಕೈ ಹಿಡಿಯಲಿಲ್ಲ ಮಂಜುನಾಥ: ಉದ್ಯಮಿ ಮನೆಯಲ್ಲಿ ಕದ್ದು ಸಿಕ್ಕಿಬಿದ್ದ ಗ್ಯಾಂಗ್​ – Kannada News | Vidyaranyapura Businessman’s House Robbed; Police Arrest Four, Including House Workers

ಬೆಂಗಳೂರು, ಜನವರಿ 06: ಉದ್ಯಮಿಯೋರ್ವರ ಮನೆಯಲ್ಲಿ ಬಂಗಾರ, ಬೆಳ್ಳಿ ಮತ್ತು ಹಣ ಕಳ್ಳತನ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಗೋಪಾಲ ಸಿಂಧೆ ಎಂಬವರಿಗೆ ಸೇರಿದ ಲಕ್ಷ್ಮೀಪುರ ಕ್ರಾಸ್ ಬಳಿಯ ಡೊನಾಟಾ ಕೌಂಟಿ ಎಂಬ ವಿಲ್ಲಾದಲ್ಲಿ ಕಳೆದ ಡಿಸೆಂಬರ್ 24ರಂದು ಗ್ಯಾಂ ಕೈಚಳಕ ತೋರಿಸಿತ್ತು. ಪ್ರಕರಣದ ತನಿಖೆ ವೇಳೆ ಮನೆಗೆಲಸದವರೇ ಆರೋಪಿಗಳು ಎಂಬುದು ಗೊತ್ತಾಗಿದ್ದು, ಗ್ಯಾಂ ಪ್ಲ್ಯಾನ್​​ ಕಂಡು ಖಾಕಿಯೇ ಗಾಬರಿಯಾಗಿದೆ.

ಮಂಜುನಾಥ, ಚಂದನ್, ನರೇಂದ್ರ ಹಾಗೂ ಮಂಜಿತ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಬರೋಬ್ಬರಿ 550 ಗ್ರಾಂ ಚಿನ್ನಾಭರಣ, 3 ಕೆ.ಜಿ. ಬೆಳ್ಳಿ ಮತ್ತು 3 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಮಂಜಿತ್ ಉದ್ಯಮಿ ಮನೆಯ ಕೆಲಸದಾಳು ಆಗಿದ್ರೆ ನರೇಂದ್ರ ಡ್ರೈವರ್​ ಆಗಿದ್ದ ಎನ್ನಲಾಗಿದೆ. ಮಂಜಿತ್ ಮೂಲತಃ ಬಿಹಾರದವನಾಗಿದ್ದು ನರೇಂದ್ರ ದೊಡ್ಡಬಳ್ಳಾಪುರದವನು. ಇಬ್ಬರು ಸೇರಿ ಮನೆಗಳ್ಳತನಕ್ಕೆ ಪ್ಲ್ಯಾನ್​ ಮಾಡಿದ್ದರು. ಎಷ್ಟು ದಿನ ಹೀಗೆ ಕೆಲಸ ಮಾಡೋದು ಎಂದು ಯೋಚಿಸಿದ್ದ ಇವರು, ಮಾಲೀಕನ ಮನೆ ಕಳ್ಳತನ ಮಾಡಿ ಲೈಫ್ ಸೆಟಲ್ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.

ಇದನ್ನೂ ಓದಿ: ಕೈ ಮುರಿದು, ಕಣ್ಣಿಗೆ ಚಾಕು ಇರಿದ ಪತ್ನಿ; ಪೊಲೀಸ್​​ ಠಾಣೆಗೆ ಓಡೋಡಿ ಬಂದ ರೌಡಿಶೀಟರ್​​

ತಮ್ಮ ಪ್ಲ್ಯಾನ್​​ ಪ್ರಕಾರ ನರೇಂದ್ರ ತನ್ನ ಸ್ನೇಹಿತ ಮಂಜುನಾಥನ ಟೀಂಗೆ ಸೇರಿಸಿಕೊಂಡಿದ್ದ. ಈತ ಅದಾಗಲೇ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿದ್ದ ಕಾರಣ ತಮಗೆ ನೆರವಾಗ್ತಾನೆಂದು ಭಾವಿಸಿದ್ದ. ಇತ್ತ ಮಂಜಿತ್​​ ಕೂಡ ತನ್ನ ಬಿಹಾರದ ಸ್ನೇಹಿತ ಚಂದನ್​​ನ ಜೊತೆ ಸೇರಿಸಿಕೊಂಡಿದ್ದ. ಸುಮಾರು 3 ತಿಂಗಳು ಕಳ್ಳತನಕ್ಕಾಗಿ ಟೀಂ ಸ್ಕೆಚ್​​ ಹಾಕಿತ್ತು. ಈ ನಡುವೆ ಉದ್ಯಮಿ ಮನೆಯವರು ಕ್ರಿಸ್​​ಮಸ್ ರಜೆ ಹಿನ್ನೆಲೆ ಪ್ರವಾಸಕ್ಕೆ ಹೋದಾಗ ಗ್ಯಾಂಗ್​​ ಮನೆಯಲ್ಲಿ ಕಳ್ಳತನ ನಡೆಸಿದೆ. ಆರೋಪಿ ಮಂಜುನಾಥ ಧರ್ಮಸ್ಥಳದ  ಭಕ್ತನಾಗಿದ್ದು, ಕಳ್ಳತನದ ಬಳಿಕ ಹರಕೆ ತೀರಿಸಲು ಚಂದನ್​​ ಮತ್ತು ಮಂಜುನಾಥ್​ ಧರ್ಮಸ್ಥಳಕ್ಕೆ ತೆರಳಿದ್ದರು. ನಂತರ ಸುಮಾರು ಮೂರು ದಿನಗಳ ಕಾಲ ಕದ್ದ ದುಡ್ಡಲ್ಲಿ ಟ್ರಿಪ್ ಮಾಡಿದ್ದರು ಎನ್ನಲಾಗಿದೆ.

ಇತ್ತ ಪ್ರವಾಸ ಮುಗಿಸಿ ಉದ್ಯಮಿ ಮನೆಗೆ ಬಂದಾಗ ಕಳ್ಳತನ ನಡೆದಿರೋದು ಗೊತ್ತಾಗಿದೆ. ಈ ಹಿನ್ನೆಲೆ ಹೊಸ ವರ್ಷದ ದಿನವೇ ಅವರು ದೂರು ಸಲ್ಲಿಸಿದ್ದರು. ಬಟ್ಟೆ ಒಗೆಯುವಾಗ ಜೇಬಿನಲ್ಲಿ ಹಣ ಸಿಕ್ಕರೂ ಮಂಜಿತ್ ವಾಪಸ್ಸು ಕೊಡುತ್ತಿದ್ದ ಕಾರಣ, ಮನೆ ಕೆಲಸದವರ ಮೇಲೆ ಇವರಿಗೆ ಯಾವುದೇ ಅನುಮಾನ ಬಂದಿರಲಿಲ್ಲ. ಆದರೆ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಮನೆ ಕೆಲಸದವರ ಕಳ್ಳಾಟ ಬಯಲಾಗಿದೆ. ಪ್ರಾಮಾಣಿಕರು ಎಂದು ನಂಬಿದ್ದವರ ಈ ಕೃತ್ಯ ಕಂಡು ಉದ್ಯಮಿ ಕುಟುಂಬ ಹೌಹಾರಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

6,6,6,4,6,6… ಬೈರ್​ಸ್ಟೋವ್ ಬಿರುಗಾಳಿ ಬ್ಯಾಟಿಂಗ್

ಸೌತ್ ಆಫ್ರಿಕಾ ಟಿ20 ಟೂರ್ನಿಯಲ್ಲಿ ಜಾನಿ ಬೈರ್​ಸ್ಟೋವ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದು ಕೂಡ ಒಂದೇ ಓವರ್​ನಲ್ಲಿ 34 ರನ್​ ಚಚ್ಚುವ ಮೂಲಕ. ಸೆಂಚುರಿಯನ್​ನ ಸೂಪರ್​ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ಹಾಗೂ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು.

177 ರನ್​ಗಳ ಗುರಿ ಪಡೆದ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ಪರ ಜಾನಿ ಬೈರ್​ಸ್ಟೋವ್ ಹಾಗೂ ಕ್ವಿಂಟನ್ ಡಿಕಾಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಈ ಜೋಡಿಯು ಕ್ಯಾಪಿಟಲ್ಸ್ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ 10 ಓವರ್​ಗಳ ಮುಕ್ತಾಯದ ವೇಳೆಗೆ ತಂಡದ ಸ್ಕೋರ್ 105 ಕ್ಕೆ ಬಂದು ನಿಂತಿತು.

ಇನ್ನು ಕೇಶವ್ ಮಹಾರಾಜ್ ಎಸೆದ 11ನೇ ಓವರ್​ನಲ್ಲಿ ಜಾನಿ ಬೈರ್​ಸ್ಟೋವ್ 5 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 34 ರನ್​ ಚಚ್ಚಿದರು. ಈ ಮೂಲಕ ಜಾನಿ ಬೈರ್​ಸ್ಟೋವ್ 45 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 85 ರನ್ ಬಾರಿಸಿದರು.

ಮತ್ತೊಂದೆಡೆ ಕ್ವಿಂಟನ್ ಡಿಕಾಕ್ 41 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 79 ರನ್ ಚಚ್ಚಿದರು. ಈ ಮೂಲಕ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು 14.2 ಓವರ್​ಗಳಲ್ಲಿ 177 ರನ್ ಬಾರಿಸಿ 10 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.

 

Source link

ದೇವರಾಜ ಅರಸು ದಾಖಲೆ ಬ್ರೇಕ್​​: ಹೊಸ ಇತಿಹಾಸ ಸೃಷ್ಟಿಸಿದ ಸಿಎಂ ಸಿದ್ದರಾಮಯ್ಯ – Kannada News | Siddaramaiah Breaks Devaraj Urs Record as Karnatakas Longest Serving Chief Minister

ಬೆಂಗಳೂರು, ಜನವರಿ 06: ಸಿಎಂ ಆಗಿ ದೇವರಾಜ ಅರಸು ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದು, ಮುಖ್ಯಮಂತ್ರಿಯಾಗಿ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. 7 ವರ್ಷ 7 ತಿಂಗಳು 20 ದಿನಗಳ ಕಾಲ ದೇವರಾಜ ಅರಸು ಸಿಎಂ ಆಗಿದ್ದರು. ಇದೀಗ ದೇವರಾಜ ಅರಸು ದಾಖಲೆಯನ್ನು ಸಿದ್ದರಾಮಯ್ಯ  ಬ್ರೇಕ್​​ ಮಾಡಿದ್ದಾರೆ. 2013ರಲ್ಲಿ ಮೊದಲ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಸಿದ್ದರಾಮಯ್ಯ, 2013ರ ಮೇ 13ರಿಂದ 2018ರ ಮೇ 17ರವರೆಗೆ ಸೇವೆ ಸಲ್ಲಿಸಿದ್ದರು. ಆ ಬಳಿಕ 2023ರ ಮೇ 20ರಿಂದ 2ನೇ ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅವಧಿಯಲ್ಲೂ ಈಗಾಗಲೇ 963 ದಿನ ಪೂರೈಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಗಳ ಪಟ್ಟಿಗೆ ಸೇರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Optical Illusion: ನೀವು ಜಾಣರೇ, ಈ ಮೂವರಲ್ಲಿ ಬಾಸ್ ಯಾರೆಂದು ಗುರುತಿಸಿ – Kannada News | Optical illusion: Identify the boss among these three people within 10 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಮೆದುಳಿಗೆ ಕೆಲಸ ನೀಡುವ ದೃಷ್ಟಿ ಸಾಮರ್ಥ್ಯ ಪರೀಕ್ಷಿಸುವ ಆಟಗಳನ್ನು ಆಡುವುದೆಂದರೆ ಕೆಲವರಿಗೆ ತುಂಬಾನೇ ಇಷ್ಟ. ಇಂತಹ ಒಗಟಿನ ಚಿತ್ರಗಳು ಸರಳವಾಗಿ ಕಂಡರೂ ಅಷ್ಟೇ ಟ್ರಿಕ್ಕಿಯಾಗಿರುತ್ತವೆ. ಈ ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರಗಳನ್ನು ಬಿಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಮೂವರು ವ್ಯಕ್ತಿಗಳಿದ್ದು, ಬಾಸ್ ಯಾರೆಂದು ಗುರುತಿಸುವುದೇ ನಿಮ್ಮ ಮುಂದಿರುವ ಸವಾಲು. ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ನಿಮಗೆ ಸಮಯಾವಕಾಶವಿದೆ.

ಈ ಚಿತ್ರವು ಏನು ಹೇಳುತ್ತದೆ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ಅಂದುಕೊಂಡಕ್ಕಿಂತ ಭಿನ್ನವಾಗಿರುತ್ತದೆ. ನಮ್ಮ ಕಣ್ಣಿಗೆ ಕಾಣುವುದು ಒಂದಾದರೆ ಉತ್ತರವು ಮತ್ತೊಂದಾಗಿರುತ್ತದೆ. ಈ ಇಲ್ಯೂಷನ್ ಚಿತ್ರದಲ್ಲಿ ಮೂವರು ವ್ಯಕ್ತಿಗಳಿರುವುದನ್ನು ಕಾಣಬಹುದು. ಆಫೀಸಿನ ರೂಮ್ ಆಗಿದ್ದು, ಒಬ್ಬ ವ್ಯಕ್ತಿ ಬಾಸ್ ಕುಳಿತುಕೊಳ್ಳುವ ಮೇಜಿನ ಬಳಿ ನಿಂತಿದ್ದಾನೆ. ಇನ್ನೊಬ್ಬ ವ್ಯಕ್ತಿ ಟೇಬಲ್ ಬಳಿ ಕುಳಿತಿದ್ದಾನೆ. ಮೂರನೇ ವ್ಯಕ್ತಿ ನಿಂತಿದ್ದಾನೆ. ಬಾಸ್ ಮೇಜಿನ ಬಳಿ ಇರುವ ವ್ಯಕ್ತಿ ಏನನ್ನೋ ಹೇಳುತ್ತಿದ್ದು, ಉಳಿದ ಇಬ್ಬರು ಕೇಳಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಾಸ್ ಯಾರೆಂದು ಗುರುತಿಸುವುದೇ ಚಾಲೆಂಜ್. ನಿರ್ದಿಷ್ಟ ಸಮಯದೊಳಗೆ ಒಗಟು ಬಿಡಿಸುವತ್ತ ಗಮನ ಕೊಡಿ.

ಇದನ್ನೂ ಓದಿ:ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಾಲ್ಕನೇ ಬೆಕ್ಕನ್ನು ಹುಡುಕಬಲ್ಲಿರಾ

ಉತ್ತರ ಕಂಡುಕೊಳ್ಳಲು ಸಾಧ್ಯವಾಯಿತೇ?

ಈ ಭ್ರಮೆ ಉಂಟು ಮಾಡುವ ಈ ಚಿತ್ರವು ಸರಳವಾಗಿ ಕಂಡರೂ ಇಲ್ಲಿ ಬಾಸ್ ಯಾರೆಂದು ಗುರುತಿಸುವುದು ಕಷ್ಟಕರ. ಬಾಸ್ ಯಾರೆಂದು ಹೇಳಿದರೆ ನಿಮ್ಮ ಐಕ್ಯೂ ಲೆವೆಲ್ ಅತ್ಯುತ್ತಮವಾಗಿದೆ ಎಂದರ್ಥ. ಎಷ್ಟೇ ತಲೆ ಉಪಯೋಗಿಸಿದ್ರು ಉತ್ತರ ಕಂಡು ಕೊಳ್ಳಲು ಸಾಧ್ಯವಾಗಿಲ್ಲ ಎಂದಾದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಬಿಳಿ ಶರ್ಟ್ ಧರಿಸಿ ನಿಂತಿರುವ ವ್ಯಕ್ತಿಯೇ ಬಾಸ್.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ ನಟನಿಂದ ನನ್ನ ಮದುವೆ ನಿಂತಿತು, ಜೀವನ ಹಾಳಾಯ್ತು: ನಟಿ ಪೂನಂ ಕೌರ್ – Kannada News | Poonam Kaur said due to Posani Krishna Murali her life spoiled

ಚಿತ್ರರಂಗದ (Sandalwood) ಅದ್ವಾನಗಳು, ಅನ್ಯಾಯಗಳ ಬಗ್ಗೆ ಆಗಾಗ್ಗೆ ಸುದ್ದಿಗಳು ಹೊರ ಬೀಳುತ್ತಲೇ ಇರುತ್ತವೆ. ದೊಡ್ಡ ನಿರ್ಮಾಪಕರು, ನಟರುಗಳು ಮಾಡುವ ಅನ್ಯಾಯ, ತೋರುವ ದರ್ಪಗಳ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಪರ ಭಾಷೆಯಿಂದ ಬಂದು ಇನ್ನೊಂದು ಭಾಷೆಯಲ್ಲಿ ನೆಲೆಗೊಂಡ ನಟಿಯರಿಗಂತೂ ನರಕವನ್ನೇ ತೋರಿಸಲಾಗುತ್ತದೆ. ಇದೀಗ ಒಂದು ಸಮಯದಲ್ಲಿ ಬಲು ಖ್ಯಾತ ನಟಿಯಾಗಿದ್ದ ಪೂನಂ ಕೌರ್ ಅವರು, ಕೆಲ ಸಿನಿಮಾ ಮಂದಿ ಮತ್ತು ರಾಜಕಾರಣಿಗಳು ಸೇರಿಕೊಂಡು ಹೇಗೆ ತಮ್ಮ ಬದುಕು ಹಾಳು ಮಾಡಿದರು ಎಂದು ಹೇಳಿಕೊಂಡಿದ್ದಾರೆ.

ಪೂನಂ ಕೌರ್ ಮೂಲತಃ ಪಂಜಾಬಿನವರಾದರೂ ಜನಪ್ರಿಯತೆ ಗಳಿಸಿದ್ದು ತೆಲುಗು ಚಿತ್ರರಂಗದಲ್ಲಿ. ತೆಲುಗಿನ ಹಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ ಪೂನಂ ಕೌರ್. ಕನ್ನಡದ ‘ಬಂಧು-ಬಳಗ’ ಸಿನಿಮಾನಲ್ಲಿ ಶಿವರಾಜ್ ಕುಮಾರ್ ಅವರ ಜೊತೆಯಾಗಿಯೂ ಪೂನಂ ಕೌರ್ ನಟಿಸಿದ್ದಾರೆ. ಆದರೆ 2019 ರ ಬಳಿಕ ಪೂನಂ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಅದೇ ಸಮಯದಲ್ಲಿ ಅವರ ಹೆಸರು ಸುದ್ದಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡಲು ಆರಂಭವಾಯ್ತು. ಹಲವು ವರ್ಷಗಳ ಬಳಿಕ ಮಾಧ್ಯಮಗಳ ಮುಂದೆ ಬಂದಿರುವ ಪೂನಂ ಕೌರ್, ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದು, ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ. ನಟನೊಬ್ಬನಿಂದ ತಮ್ಮ ಜೀವನವೇ ಹಾಳಾಯ್ತು ಎಂದು ಹೇಳಿಕೊಂಡಿದ್ದಾರೆ.

‘”ಕೆಲವು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ನನ್ನನ್ನು ಬಳಸಿಕೊಳ್ಳಲು ಪ್ರಯತ್ನಿಸಿದವು. ಅದಕ್ಕಾಗಿ ಅವರು ನನಗೆ ಬೆದರಿಕೆ ಹಾಕಿದರು. ಅವರು ನನಗೆ ಹಣ ಮತ್ತು ಹುದ್ದೆಗಳನ್ನು ಸಹ ನೀಡಿದರು. ಅಂತಿಮವಾಗಿ, ನಾನು ಒಬ್ಬ ನಟನ ವಿರುದ್ಧ ಮಾತನಾಡದಿದ್ದರೆ, ಅವರು ನನ್ನ ಅಶ್ಲೀಲ ವೀಡಿಯೊಗಳು ಮತ್ತು ಫೋಟೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದರು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್

ಮುಂದುವರೆದು, ‘ನಾನು ನನ್ನ ಸ್ನೇಹಿತನನ್ನು ಮದುವೆಯಾಗಲು ಬಯಸಿದ್ದೆ. ಆದರೆ ಇದ್ದಕ್ಕಿದ್ದಂತೆ, ಪೊಸಾನಿ ಕೃಷ್ಣ ಮುರಳಿ ಅದೇ ಸಮಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನನ್ನ ಬಗ್ಗೆ ಮಾತನಾಡಿದರು. ಅದರಿಂದ ನನ್ನ ಮದುವೆ ನಿಂತು ಹೋಯ್ತು. ಈ ವಿಷಯ ತಿಳಿದಾಗ ನನ್ನ ತಾಯಿಗೆ ಹೃದಯಾಘಾತವಾಯಿತು. ಪೊಸಾನಿ ಕೃಷ್ಣ ಮುರಳಿಯಿಂದಾಗಿ ನನ್ನ ವೈಯಕ್ತಿಕ ಜೀವನವೂ ಹಾಳಾಗಿತ್ತು’ ಎಂದಿರುವ ನಟಿ, ‘ರಾಜಕೀಯ ನಾಯಕರಗೆ ಹತ್ತಿರವಾಗಿರುವ ಯುವತಿಯರಿಗೆ ಏನೂ ಆಗುವುದಿಲ್ಲ, ಅವರು ಆರಾಮವಾಗಿರುತ್ತಾರೆ, ಆದರೆ ಅವರಿಂದ ದೂರವಿರುವವರ ಯುವತಿಯರ ಬಗ್ಗೆ ಕೆಟ್ಟದಾಗಿ ಮಾತನಾಡಲಾಗುತ್ತದೆ’ ಎಂದಿದ್ದಾರೆ ಪೂನಂ.

ನಟ ಹಾಗೂ ವೈಸಿಪಿ ಪಕ್ಷದ ಸದಸ್ಯರಾಗಿದ್ದ ಪೋಸಾನಿ ಕೃಷ್ಣ ಮುರಳಿ, ಪವನ್ ಕಲ್ಯಾಣ್ ವಿರುದ್ಧವಾಗಿ ಮಾಧ್ಯಮಗಳಲ್ಲಿ ಹಲವು ಬಾರಿ ಮಾತನಾಡಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದೂ ಇದೆ. ಪೋಸಾನಿ, ಒಮ್ಮೆ ಸುದ್ದಿಗೋಷ್ಠಿಯಲ್ಲಿ, ಪವನ್ ಕಲ್ಯಾಣ್ ಮತ್ತು ಪೂನಂ ಕೌರ್ ನಡುವೆ ಸಂಬಂಧ ಇದೆ ಎಂದು ಹೇಳಿದ್ದರು. ಇದು ಆಗ ಭಾರಿ ವೈರಲ್ ಸುದ್ದಿಯಾಗಿತ್ತು. ಪವನ್ ಅವರಿಂದ ಆ ನಟಿ (ಪೂನಂ) ಗರ್ಭಿಣಿ ಆಗಿದ್ದಾರೆ ಎಂದು ಸಹ ಪೋಸಾನಿ ಕೃಷ್ಣ ಮುರಳಿ ಹೇಳಿದ್ದರು.

ಪೂನಂ ಕೌರ್, ರಾಹುಲ್ ಗಾಂಧಿ ಜೊತೆಗೆ ‘ಭಾರತ್ ಜೋಡೊ ಯಾತ್ರಾ’ನಲ್ಲಿಯೂ ಭಾಗಿ ಆಗಿದ್ದರು. ಆಗ ಪೂನಂ ಕೌರ್ ಮತ್ತು ರಾಹುಲ್ ಗಾಂಧಿ ಬಗ್ಗೆಯೂ ಕೆಲ ಸುದ್ದಿಗಳನ್ನು ಹರಿಬಿಡಲಾಗಿತ್ತು. ಬಳಿಕ ಸ್ವತಃ ಪೂನಂ ಅವರೇ ಹೇಳಿಕೆ ಬಿಡುಗಡೆ ಮಾಡಿ ಆ ಬಗ್ಗೆ ಸ್ಪಷ್ಟನೆ ನೀಡಬೇಕಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:42 am, Tue, 6 January 26

Source link

Magh Mela at Prayagraj: ಪ್ರಯಾಗ್‌ರಾಜ್​ಗೆ ಮಾಘ ಮೇಳಕ್ಕೆ ಹೋಗುತ್ತಿದ್ದೀರಾ? ಹಾಗಿದ್ರೆ ಈ ಸ್ಥಳ ಮಿಸ್​ ಮಾಡ್ಲೇ ಬೇಡಿ – Kannada News | Prayagraj Magh Mela 2026: Holy Dip at Triveni Sangam and Travel Tips

ಪ್ರಯಾಗ್‌ರಾಜ್‌ನಲ್ಲಿ 2026ರ ಮಾಘ ಮೇಳದ ಸಡಗರ ಆರಂಭವಾಗಿದೆ. ತಮ್ಮ ಕೋಟ್ಯಂತರ ಭಕ್ತರು ಈ ಪವಿತ್ರ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಕುಂಭಮೇಳ, ಅರ್ಧ ಕುಂಭಮೇಳ ಮತ್ತು ವಾರ್ಷಿಕ ಮಾಘ ಮೇಳದ ಸಮಯದಲ್ಲಿ, ಈ ಸಂಗಮವು ಆಧ್ಯಾತ್ಮಿಕ ಸಾಗರವಾಗಿ ಬದಲಾಗುತ್ತದೆ. ಆದ್ದರಿಂದ ಮಾಘ ಮೇಳ ಎಂದರೇನು? ಅದರ ಮಹತ್ವ ಮತ್ತು ಪ್ರಯಾಗ್ರಾಜ್‌ನಲ್ಲಿ ನೋಡಲು ಯೋಗ್ಯವಾದ ಇತರ ಐತಿಹಾಸಿಕ ಸ್ಥಳಗಳ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಮಾಘ ಮೇಳ ಎಂದರೇನು? ಅದರ ಮಹತ್ವವೇನು?

ಮಾಘ ಮೇಳವು ಕೇವಲ ಸ್ನಾನದ ಕಾರ್ಯಕ್ರಮವಲ್ಲ, ಇದು ಒಂದು ತಿಂಗಳ ಅವಧಿಯ ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರತಿ ವರ್ಷ ಮಾಘ ಮೇಳವನ್ನು ಜನವರಿ-ಫೆಬ್ರವರಿಯಲ್ಲಿ ನಡೆಸಲಾಗುತ್ತದೆ, ಇದನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಬಹಳ ಶುಭ ಸಮಯವೆಂದು ಪರಿಗಣಿಸಲಾಗುತ್ತದೆ. ಪುರಾಣಗಳ ಪ್ರಕಾರ, ತ್ರಿವೇಣಿ ಸಂಗಮದಲ್ಲಿ ಮಾಘ ನದಿಯಲ್ಲಿ ಸ್ನಾನ ಮಾಡುವುದರಿಂದ ಪೂರ್ವ ಜನ್ಮಗಳ ಪಾಪಗಳಿಂದ ಮುಕ್ತಿ ಮತ್ತು ಮೋಕ್ಷವನ್ನು ಪಡೆಯಲು ಸಹಾಯಕ ಎಂದು ನಂಬಲಾಗಿದೆ. ಲಕ್ಷಾಂತರ ಭಕ್ತರು ಇಲ್ಲಿ ಒಂದು ತಿಂಗಳ ಮುಂಚೆಯೇ ಬಂದು ಕಲ್ಪವಾಸವನ್ನು ಮಾಡುತ್ತಾರೆ. ಅವರು ಇಡೀ ತಿಂಗಳು ಸಂಗಮದ ಬಳಿ ಇರುವ ಮೂಲಕ ಶಿಸ್ತುಬದ್ಧ, ಆಧ್ಯಾತ್ಮಿಕ ಜೀವನವನ್ನು ನಡೆಸುತ್ತಾರೆ.

ಮಾಘ ಮೇಳ 2026:

ಮಾಘ ಮೇಳವನ್ನು ಜನವರಿ-ಫೆಬ್ರವರಿಯಲ್ಲಿ ಪ್ರಯಾಗರಾಜ್​​ನ ಗಂಗಾ, ಯಮುನಾ, ಸರಸ್ವತಿಯ ಸಂಗಮದಲ್ಲಿ ನಡೆಸಲಾಗುತ್ತದೆ. ಪ್ರತಿ ವರ್ಷ ನದಿಯ ದಡದಲ್ಲಿ ತಾತ್ಕಾಲಿಕ ನಗರವನ್ನು ನಿರ್ಮಿಸಲಾಗುತ್ತದೆ. ಇದನ್ನು ವಲಯಗಳಾಗಿ ವಿಂಗಡಿಸಲಾಗುತ್ತದೆ. ಈ ನಗರಗಳು ತಾತ್ಕಾಲಿಕವಾಗಿದ್ದರೂ, ಅವು ಆಂತರಿಕ ರಸ್ತೆ, ದೀಪಗಳು, ನೈರ್ಮಲ್ಯ, ಕುಡಿಯುವ ನೀರು, ಪೊಲೀಸ್ ಠಾಣೆಗಳು, ವೈದ್ಯಕೀಯ ಶಿಬಿರಗಳು ಮತ್ತು ಪರಿಹಾರ ಕೇಂದ್ರಗಳಿಂದ ಸುಸಜ್ಜಿತವಾಗಿವೆ.

ಪ್ರಯಾಗ್‌ರಾಜ್ ತಲುಪುವುದು ಹೇಗೆ?

ತ್ರಿವೇಣಿ ಸಂಗಮವು ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ವಾರಣಾಸಿ, ಲಕ್ನೋ, ಕಾನ್ಪುರ ಮತ್ತು ದೆಹಲಿಯಿಂದ ರಸ್ತೆ ಅಥವಾ ರೈಲು ಮೂಲಕವೂ ಸುಲಭವಾಗಿ ತಲುಪಬಹುದು. ಕೊನೆಯ ಕ್ಷಣದ ದಟ್ಟಣೆಯನ್ನು ತಪ್ಪಿಸಲು ಮುಂಚಿತವಾಗಿ ಆಗಮಿಸಿ.

ಮಾಘ ಮೇಳದ ಪ್ರಮುಖ ದಿನಾಂಕಗಳು:

  • ಜನವರಿ 3, ಪೌಷ ಪೂರ್ಣಿಮೆ ಕಲ್ಪವಾಸ ಆರಂಭವಾಗುತ್ತದೆ, ಜನಸಂದಣಿ ಕಡಿಮೆ, ಮೊದಲ ಬಾರಿಗೆ ಭೇಟಿ ನೀಡುವವರಿಗೆ ಸೂಕ್ತವಾಗಿದೆ.
  • ಜನವರಿ 18 ಮೌನಿ ಅಮಾವಾಸ್ಯೆ ಅತ್ಯಂತ ಶುಭ ದಿನ, ಹೆಚ್ಚಿನ ಭಕ್ತರು ಬರುತ್ತಾರೆ.
  • ಜನವರಿ 23 ವಸಂತ ಪಂಚಮಿ ಪಂಚಮಿಯಂದು ಸ್ನಾನ ಮಾಡುವುದು ತುಂಬಾ ಶುಭ.
  • ಫೆಬ್ರವರಿ 1 ಮಾಘ ಪೂರ್ಣಿಮೆ ಕೊನೆಯ ಮಹಾ ಸ್ನಾನ, ಈ ದಿನ ಹೆಚ್ಚಿನ ಜನರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಾರೆ.

ಪವಿತ್ರ ಸ್ನಾನದ ನಂತರ ಏನು ಮಾಡಬೇಕು?

ಮಾಘ ಮೇಳ ದಿನವಿಡೀ ನಡೆಯುತ್ತಿರುವುದರಿಂದ ಪವಿತ್ರ ಸ್ನಾನದ ನಂತರ, ನೀವು ಅಖಾಡ ಶಿಬಿರಗಳಿಗೆ ಭೇಟಿ ನೀಡಬಹುದು, ಅಲ್ಲಿ ಸಂತರು ದೈನಂದಿನ ಆಚರಣೆಗಳನ್ನು ಮಾಡುತ್ತಾರೆ. ವೇದ, ಪುರಾಣ ಮತ್ತು ಭಗವದ್ಗೀತೆಯನ್ನು ಆಧರಿಸಿದ ಆಧ್ಯಾತ್ಮಿಕ ಪ್ರವಚನಗಳನ್ನು ಆಲಿಸಿ. ಶಿಬಿರಗಳಲ್ಲಿ ನಡೆಯುವ ನಿರಂತರ ಭಜನೆಗಳು ಮತ್ತು ಕೀರ್ತನೆಗಳಲ್ಲಿ ಭಾಗವಹಿಸಿ. ಸಂಜೆ, ಗಂಗಾ ನದಿಯ ಆರತಿಯ ಸೌಂದರ್ಯವನ್ನು ನೀವು ಆನಂದಿಸಬಹುದು. ಯಾತ್ರಿಕರು ಉಚಿತ ಊಟದ ಸಭಾಂಗಣಗಳು ಮತ್ತು ದತ್ತಿ ಶಿಬಿರಗಳಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆಯಬಹುದು.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಪ್ರಯಾಗ್‌ರಾಜ್‌ನಲ್ಲಿ ಭೇಟಿ ನೀಡಬಹುದಾದ ಇತರ ಸ್ಥಳಗಳು:

  • ಅಲಹಾಬಾದ್ ಕೋಟೆ: 1583 ರಲ್ಲಿ ಚಕ್ರವರ್ತಿ ಅಕ್ಬರ್ ನಿರ್ಮಿಸಿದ ಈ ಕೋಟೆಯು ಯಮುನಾ ಮತ್ತು ಗಂಗಾ ನದಿಗಳ ಸಂಗಮದ ದಡದಲ್ಲಿದೆ. ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಐತಿಹಾಸಿಕ ಸ್ಮಾರಕವಾಗಿದೆ.
  • ಆನಂದ ಭವನ: ನೆಹರು ಕುಟುಂಬಕ್ಕೆ ಸೇರಿದ ಈ ಐತಿಹಾಸಿಕ ಕಟ್ಟಡವನ್ನು ಈಗ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಇತಿಹಾಸ ಪ್ರಿಯರಿಗೆ ಇದು ಉತ್ತಮ ಆಯ್ಕೆಯಾಗಿದೆ.
  • ಖುಸ್ರೋ ಬಾಗ್: ಮೊಘಲ್ ವಾಸ್ತುಶಿಲ್ಪದ ಸಂಕೇತವಾಗಿರುವ ಸುಂದರವಾದ ಉದ್ಯಾನ. ಇದು ಮರಳುಗಲ್ಲಿನಿಂದ ನಿರ್ಮಿಸಲಾದ ನಾಲ್ಕು ಭವ್ಯವಾದ ಸಮಾಧಿಗಳನ್ನು ಹೊಂದಿದೆ.
  • ಶ್ರೀ ಲಲಿತಾ ದೇವಿ ದೇವಾಲಯ: ಲಲಿತಾ ದೇವಿಗೆ ಸಮರ್ಪಿತವಾದ ಈ ದೇವಾಲಯವು ಭಕ್ತರಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ.

ಮಾಘ ಮೇಳಕ್ಕೆ ಹೋಗುವ ಮುನ್ನ ಸಿದ್ಧತೆಗಳು?

ಪ್ರಯಾಗ್‌ರಾಜ್‌ನಲ್ಲಿ ಜನವರಿ ತಿಂಗಳು ತಂಪಾಗಿರುತ್ತದೆ ಮತ್ತು ಶುಷ್ಕವಾಗಿರುತ್ತದೆ. ಆದ್ದರಿಂದ ಬೆಚ್ಚಗಿನ ಬಟ್ಟೆಗಳನ್ನೇ ತೆಗೆದುಕೊಂಡು ಹೋಗಿ. ಆರಾಮದಾಯಕವಾದ ವಾಕಿಂಗ್ ಶೂಗಳು, ಹಗುರವಾದ ಲಗೇಜ್, ಐಡಿ ಪ್ರೂಫ್ ತುರ್ತು ಸಂಪರ್ಕ ಸ್ಲಿಪ್ ಮತ್ತು ಔಷಧಗಳು, ಮರುಬಳಕೆ ಮಾಡಬಹುದಾದ ನೀರಿನ ಬಾಟಲ್ ನಿಮ್ಮ ಜೊತೆಗಿರಲಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:36 am, Tue, 6 January 26

Source link

Vastu for Windows: ವಾಸ್ತು ಶಾಸ್ತ್ರದ ಪ್ರಕಾರ ಒಂದು ಮನೆಯಲ್ಲಿ ಎಷ್ಟು ಕಿಟಕಿಗಳಿರಬೇಕು? ತಜ್ಞರ ಸಲಹೆ ಇಲ್ಲಿದೆ – Kannada News | Vastu for Windows: Avoid These Mistakes for Home Positivity and Health

ಮನೆ ಎಂದರೆ ಕೇವಲ ನಾಲ್ಕು ಗೋಡೆಗಳ ನಡುವಿನ ಸ್ಥಳವಲ್ಲ. ಅದು ನಮಗೆ ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ನೀಡುವ ದೇವಾಲಯ. ಮನೆಯ ಅಲಂಕಾರದಲ್ಲಿ ಬಾಗಿಲುಗಳು ಎಷ್ಟು ಮುಖ್ಯವೋ, ಕಿಟಕಿಗಳು ಅಷ್ಟೇ ಮುಖ್ಯ. ಕಿಟಕಿಗಳು ಗಾಳಿ ಮತ್ತು ಬೆಳಕಿಗೆ ಮಾತ್ರವಲ್ಲ, ಮನೆಯ ವಾಸ್ತುವನ್ನು ನಿರ್ಧರಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತವೆ. ಈಗ ವಾಸ್ತು ಶಾಸ್ತ್ರದ ಪ್ರಕಾರ ಕಿಟಕಿಗಳ ವಿಷಯದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕಿಟಕಿಗಳ ಸಂಖ್ಯೆ ಎಷ್ಟಿರಬೇಕು?

ಮನೆ ಕಟ್ಟುವಾಗ ಅನೇಕರು ಕಿಟಕಿಗಳ ಸಂಖ್ಯೆಯ ಬಗ್ಗೆ ಗಮನ ಹರಿಸುವುದಿಲ್ಲ. ಆದರೆ ವಾಸ್ತು ಪ್ರಕಾರ, ಮನೆಯಲ್ಲಿ ಕಿಟಕಿಗಳ ಸಂಖ್ಯೆ ಯಾವಾಗಲೂ ಸಮ ಸಂಖ್ಯೆಯಾಗಿರಬೇಕು. 2, 4, 6, 8, 10 ನಂತಹ ಸಮ ಸಂಖ್ಯೆಯ ಕಿಟಕಿಗಳನ್ನು ಹೊಂದಿರುವುದು ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. 3, 5, 7, 9 ನಂತಹ ಬೆಸ ಸಂಖ್ಯೆಯ ಕಿಟಕಿಗಳಿದ್ದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಬೇಗನೆ ಸಂಗ್ರಹವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಯಾವ ದಿಕ್ಕು ಉತ್ತಮ?

ಕಿಟಕಿಗಳ ದಿಕ್ಕು ನಿಮ್ಮ ಮನೆಯ ಸದಸ್ಯರ ಆರೋಗ್ಯ ಮತ್ತು ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ. ಈ ದಿಕ್ಕುಗಳಲ್ಲಿ ಕಿಟಕಿಗಳನ್ನು ಇಡುವುದರಿಂದ ಬೆಳಿಗ್ಗೆ ಸೂರ್ಯನ ಬೆಳಕು ಮತ್ತು ತಾಜಾ ಗಾಳಿಯು ಮನೆಗೆ ಪ್ರವೇಶಿಸುತ್ತದೆ. ಇದು ಕುಟುಂಬ ಸದಸ್ಯರ ಆರೋಗ್ಯವನ್ನು ರಕ್ಷಿಸುವುದಲ್ಲದೆ ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ. ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಕಿಟಕಿಗಳಿದ್ದರೆ, ಅವುಗಳನ್ನು ಗಾತ್ರದಲ್ಲಿ ಚಿಕ್ಕದಾಗಿ ಇಡುವುದು ಉತ್ತಮ.

ಕಿಟಕಿಗಳ ಜೋಡಣೆಯಲ್ಲಿ ಇನ್ನೂ ಕೆಲವು ಪ್ರಮುಖ ನಿಯಮಗಳು:

  • ಸಮಾನ ಎತ್ತರ: ಮನೆಯಲ್ಲಿರುವ ಎಲ್ಲಾ ಕಿಟಕಿಗಳು ಸರಿಸುಮಾರು ಒಂದೇ ಎತ್ತರದಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ. ಒಂದು ತುಂಬಾ ದೊಡ್ಡದಾಗಿರಬಾರದು ಮತ್ತು ಇನ್ನೊಂದು ತುಂಬಾ ಚಿಕ್ಕದಾಗಿರಬಾರದು.
  • ಸ್ವಚ್ಛತೆ: ಕಿಟಕಿಗಳನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಧೂಳಿನಿಂದ ಮುಕ್ತವಾಗಿಡಬೇಕು. ಕಿಟಕಿಗಳು ಮುರಿದಿದ್ದರೆ ಅಥವಾ ಶಬ್ದ ಮಾಡುತ್ತಿದ್ದರೆ, ಅವುಗಳನ್ನು ತಕ್ಷಣವೇ ದುರಸ್ತಿ ಮಾಡಬೇಕು.
  • ಸಮಯ: ಹಗಲಿನಲ್ಲಿ ಸ್ವಲ್ಪ ಸಮಯದವರೆಗೆ ಕಿಟಕಿಗಳನ್ನು ತೆರೆದಿಡಿ. ಇದು ನಕಾರಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಸಂಜೆ ಕತ್ತಲಾದಾಗ ಕಿಟಕಿಗಳನ್ನು ಮುಚ್ಚುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link