All posts by nagaraj11081993

ಸಿಎಂ ಆಗಿ ದೇವರಾಜ ಅರಸು ದಾಖಲೆ ಮುರಿದ ಸಿದ್ದರಾಮಯ್ಯ! ಅಭಿಮಾನಿಗಳಿಂದ 6000 ಜನರಿಗೆ ನಾಟಿಕೋಳಿ ಬಾಡೂಟ – Kannada News | CM Siddaramaiah breaks Devaraj Aras Record: Fans Host Grand Naati Koli Feast for Thousands

ನೆಲಮಂಗಲ, ಜನವರಿ 06: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಕರ್ನಾಟಕದ ಮಾಜಿ ಸಿಎಂ ದೇವರಾಜ ಅರಸು 7 ವರ್ಷ 7 ತಿಂಗಳು 20 ದಿನಗಳ ಕಾಲ ಕಾರ್ಯನಿರ್ವಹಿಸಿದ್ದರು. ಮೊದಲ ಅವಧಿಯಲ್ಲಿ 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ 5 ವರ್ಷ 9 ತಿಂಗಳು 11 ದಿನ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ನಂತರ 1978ರ ಫೆಬ್ರುವರಿ 28ರಿಂದ 1980ರ ಜುಲೈ 7ರವರೆಗೆ 2ನೇ ಅವಧಿಯಲ್ಲಿ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು.

2013ರಲ್ಲಿ ಮೊದಲ ಅವಧಿಯಲ್ಲಿ ಮೇ 13ರಿಂದ 2018ರ ಮೇ 17ರವರೆಗೆ ಸಿಎಂ ಆಗಿದ್ದ ಸಿದ್ದರಾಮಯ್ಯ, 2023ರ ಮೇ 20ರಿಂದ 2ನೇ ಅವಧಿಯಲ್ಲಿ ಅಧಿಕಾರದಲ್ಲಿದ್ದು, ಒಟ್ಟು 7 ವರ್ಷ 7 ತಿಂಗಳು 20 ದಿನಗಳ ಸೇವೆ ಪೂರೈಸಿ ದೇವರಾಜ ಅರಸು ದಾಖಲೆಯನ್ನು ಮುರಿದಿದ್ದಾರೆ. ಇದೇ ಸಂಭ್ರಮದಲ್ಲಿ ನೆಲಮಂಗಲದ ಭಕ್ತನಪಾಳ್ಯದಲ್ಲಿ ಅಹಿಂದ ಯುವ ಸಂಘಟನೆ ವತಿಯಿಂದ ನಾಟಿಕೋಳಿ ಬಾಡೂಟ ಆಯೋಜಿಸಲಾಗಿದೆ. 2000 ಕೆಜಿ ನಾಟಿಕೋಳಿ ಬಳಸಿ 6,000ಕ್ಕೂ ಹೆಚ್ಚು ಜನರಿಗೆ ಮುದ್ದೆ, ಸಾರು, ಅನ್ನ, ರಸಂ ಭೋಜನ ಸಿದ್ಧಪಡಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಗ್ ಬಾಸ್​​ನಲ್ಲಿ ಇಬ್ಬರಿಗೆ ರೆಡ್ ಕಾರ್ಡ್; ಮೂರು ತಿಂಗಳ ಸಂಬಳ ಕಟ್, ಫಿನಾಲೆಗೂ ಇಲ್ಲ ಅವಕಾಶ – Kannada News | VJ Parvathy And Kamarudheen Gets Red Card In Bigg Boss these Are the rules for Red Card

ರೆಡ್ ಕಾರ್ಡ್ ತೋರಿಸಿದ ಬಳಿಕ ಅದನ್ನು ಪಡೆದ ಸ್ಪರ್ಧಿಗಳು ತಕ್ಷಣ ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನದ ಸಂಬಳ ಅವರಿಗೆ ಸಿಗೋದಿಲ್ಲ. ಇನ್ನು, ಬಿಗ್ ಬಾಸ್ ಫಿನಾಲೆಗೆ ಬರುವಂತೆ ಇಲ್ಲ. ಇದರ ಜೊತೆಗೆ ಅವರು ಮುಂದೆ ಯಾವ ಸೀಸನ್​ಗೂ ಬರಲು ಅರ್ಹರಲ್ಲ ಎನ್ನಲಾಗಿದೆ.

Source link

ಕೇಂದ್ರ ಸಚಿವ ಕುಮಾರಸ್ವಾಮಿಗೆ ಶಾಸಕ ಗಣಿಗ ರವಿಕುಮಾರ್ ಸವಾಲು: ಕಾರಣ ಏನು? – Kannada News | MLA Ravikumar Ganiga Challenges HD Kumaraswamy on Mandya Industrial Development

ಮಂಡ್ಯ, ಜನವರಿ 06: ಜಿಲ್ಲೆಗೆ ಕೈಗಾರಿಕೆ ತರುವ ವಿಚಾರವಾಗಿ ಕೇಂದ್ರ ಸಚಿವ ಹೆಚ್​​. ಡಿ. ಕುಮಾರಸ್ವಾಮಿಗೆ ಶಾಸಕ ಗಣಿಗ ರವಿಕುಮಾರ್ ಸವಾಲು ಹಾಕಿದ್ದಾರೆ. ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ 100 ಎಕರೆ ಜಾಗ ಇದೆ, ನೀವು ಇಂಡಸ್ಟ್ರಿ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ರಾಜ್ಯ ಸರ್ಕಾರ ಇಂಡಸ್ಟ್ರಿ ತರಲು ಸಹಕಾರ ಕೊಡ್ತಿಲ್ಲ, ಮಂಡ್ಯದಲ್ಲಿ ಇಂಡಸ್ಟ್ರಿ ಸ್ಥಾಪನೆಗೆ ಜಾಗ ಇಲ್ಲ ಎಂದು ಹೆಚ್​ಡಿಕೆ ಹೇಳಿದ್ದರು. ಹೀಗಾಗಿ ಡಿಸಿ ಜೊತೆಗೆ ತೆರಳಿ ಇಂಡಸ್ಟ್ರಿ ಜಾಗ ಗುರುತಿಸಿದ ಗಣಿಗ ರವಿಕುಮಾರ್, ಇಂಡಸ್ಟ್ರಿ ಸ್ಥಾಪನೆಗೆ ಸೂಕ್ತ ಸ್ಥಳ, ಎಲ್ಲದಕ್ಕೂ ಸಹಕಾರ‌ ಕೊಡುತ್ತೇವೆ. ಮಂಡ್ಯಕ್ಕೆ ಕೈಗಾರಿಕೆ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ಆ ಮೂಲಕ ಜೆಡಿಎಸ್​​ ಮತ್ತು ಕಾಂಗ್ರೆಸ್​ ನಾಯಕರ ನಡುವಿನ ಕದನ ಮತ್ತೊಂದು ಹಂತಕ್ಕೆ ತಲುಪಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಟಾಕ್ಸಿಕ್’: ಹಿಂದೆಂದೂ ಕಾಣಿಸದ ಅವತಾರದಲ್ಲಿ ರುಕ್ಮಿಣಿ ವಸಂತ್ – Kannada News | Toxic movie team introduced Rukmini Vasanth’s character

ಯಶ್ (Yash) ನಟಿಸಿ, ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಮಾರ್ಚ್ 19 ರಂದು ಸಿನಿಮಾ ಬಿಡುಡಗೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕೆ ನಿಧಾನಕ್ಕೆ ಚಾಲನೆ ನೀಡಲಾಗುತ್ತಿದೆ. ಇದರ ಭಾಗವಾಗಿ ಸಿನಿಮಾದಲ್ಲಿ ನಟಿಸಿರುವ ನಟಿಯರ ಪೋಸ್ಟರ್​ಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲಾಗುತ್ತಿದೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಅವರುಗಳ ಪೋಸ್ಟರ್​​ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇದೀಗ ನಟಿ ರುಕ್ಮಿಣಿ ವಸಂತ್ ಅವರ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ.

ಇಂದು (ಜನವರಿ 06) ರುಕ್ಮಿಣಿ ವಸಂತ್ ಅವರ ಕ್ಯಾರೆಕ್ಟರ್ ಪೋಸ್ಟರ್ ಅನ್ನು ನಟ ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರುಕ್ಮಿಣಿ ಎಂದಿನಂತೆ ಅದ್ಭುತವಾಗಿ ಕಾಣುತ್ತಿದ್ದಾರೆ. ಪೋಸ್ಟರ್​​ನಲ್ಲಿ ತುಸು ಗ್ಲಾಮರಸ್ ಧಿರಿಸು ತೊಟ್ಟಿರುವ ರುಕ್ಮಿಣಿ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನೋಡಿದರೆ ರುಕ್ಮಿಣಿ ಅವರದ್ದು ನೆಗೆಟಿವ್ ಶೇಡ್ ಇರಬಹುದಾದ ಪಾತ್ರವೇ ಎಂಬ ಅನುಮಾನವೂ ಸಹ ಮೂಡುತ್ತಿದೆ.

‘ಟಾಕ್ಸಿಕ್’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ಅವರ ಪಾತ್ರದ ಹೆಸರು ಮೆಲಿಸಾ ಎಂದಾಗಿದೆ. ಯಾವುದೋ ಪಾರ್ಟಿಯೊಂದರ ಮಧ್ಯೆ ಬಲು ಗಂಭೀರವಾಗಿ ನಡೆದು ಬರುತ್ತಿದ್ದಾರೆ ರುಕ್ಮಿಣಿ ವಸಂತ್. ತಾರಾ ಸುತಾರಿಯಾ ಅವರ ಪಾತ್ರ ಕೈಯಲ್ಲಿ ಬಂದೂಕು ಹಿಡಿದಿದ್ದರೆ ರುಕ್ಮಿಣಿ ವಸಂತ್ ಕೈಯಲ್ಲಿ ಪರ್ಸ್ ಒಂದನ್ನು ಹಿಡಿದಿದ್ದಾರೆ. ರುಕ್ಮಿಣಿ ಅವರ ಪಾತ್ರ ರಫ್ ಆಂಡ್ ಟಫ್ ಅಲ್ಲದೇ ಇದ್ದರು ಬಲು ಗಂಭೀರವಾದ ಪಾತ್ರ ಎಂದು ಪೋಸ್ಟರ್​​ನಿಂದ ಊಹಿಸಬಹುದಾಗಿದೆ.

ಇದನ್ನೂ ಓದಿ:ಯಶ್ ಬಾಲ್ಯದಲ್ಲಿ ಹೇಗೆ ಕಾಣ್ತಿದ್ರು ನೋಡಿ; ಇಲ್ಲಿದೆ ಕ್ಯೂಟ್ ಫೋಟೋ

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಕೆವಿಎನ್ ಬಂಡವಾಳ ಹೂಡಿದೆ. ಯಶ್ ಅವರು ತಮ್ಮ ಮಾನ್​​ಸ್ಟರ್ ಮೈಂಡ್​ ನಿರ್ಮಾಣ ಸಂಸ್ಥೆಯ ಮೂಲಕ ಸಹ ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಕೆಲ ವಿದೇಶಿ ತಂತ್ರಜ್ಞರು ಸಹ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Gold Rate Today Bangalore: 10 ಗ್ರಾಮ್ ಚಿನ್ನದ ಬೆಲೆ 2 ದಿನದಲ್ಲಿ 2,750 ರೂ ಏರಿಕೆ – Kannada News | Gold Price Today on 6th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 6: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮಂಗಳವಾರೂ ಭರ್ಜರಿ ಏರಿಕೆ ಕಂಡಿವೆ. ನಿನ್ನೆ ಗ್ರಾಮ್​ಗೆ 145 ರೂ ಏರಿದ್ದ ಚಿನ್ನದ ಬೆಲೆ (Gold Rate) ಇವತ್ತು 130 ರೂ ಹೆಚ್ಚಿದೆ. ಎರಡು ದಿನದಲ್ಲಿ 275 ರೂ ಬೆಲೆ ಏರಿಕೆ ಆಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಕೂಡ ಭರ್ಜರಿ ಹೆಚ್ಚಳ ಕಂಡಿದೆ. ನಿನ್ನೆ ಆರು ರೂ ಹೆಚ್ಚಿದ್ದ ಅದರ ಬೆಲೆ ಇಂದೂ ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,38,820 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,100 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 6ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,882 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,725 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,412 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 253 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,882 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,725 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 253 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,725 ರೂ
  • ಚೆನ್ನೈ: 12,830 ರೂ
  • ಮುಂಬೈ: 12,725 ರೂ
  • ದೆಹಲಿ: 12,740 ರೂ
  • ಕೋಲ್ಕತಾ: 12,725 ರೂ
  • ಕೇರಳ: 12,725 ರೂ
  • ಅಹ್ಮದಾಬಾದ್: 12,730 ರೂ
  • ಜೈಪುರ್: 12,740 ರೂ
  • ಲಕ್ನೋ: 12,740 ರೂ
  • ಭುವನೇಶ್ವರ್: 12,725 ರೂ

ಇದನ್ನೂ ಓದಿ: ಇಪಿಎಫ್ ಅಕೌಂಟ್​ನಿಂದ ಎಲ್​​ಐಸಿ ಪ್ರೀಮಿಯಮ್ ಕಟ್ಟುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 565 ರಿಂಗಿಟ್ (12,557 ರುಪಾಯಿ)
  • ದುಬೈ: 496.50 ಡಿರಾಮ್ (12,184 ರುಪಾಯಿ)
  • ಅಮೆರಿಕ: 138 ಡಾಲರ್ (12,439 ರುಪಾಯಿ)
  • ಸಿಂಗಾಪುರ: 176.80 ಸಿಂಗಾಪುರ್ ಡಾಲರ್ (12,445 ರುಪಾಯಿ)
  • ಕತಾರ್: 495 ಕತಾರಿ ರಿಯಾಲ್ (12,240 ರೂ)
  • ಸೌದಿ ಅರೇಬಿಯಾ: 503 ಸೌದಿ ರಿಯಾಲ್ (12,088 ರುಪಾಯಿ)
  • ಓಮನ್: 52.65 ಒಮಾನಿ ರಿಯಾಲ್ (12,326 ರುಪಾಯಿ)
  • ಕುವೇತ್: 40.50 ಕುವೇತಿ ದಿನಾರ್ (11,886 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 253 ರೂ
  • ಚೆನ್ನೈ: 271 ರೂ
  • ಮುಂಬೈ: 253 ರೂ
  • ದೆಹಲಿ: 253 ರೂ
  • ಕೋಲ್ಕತಾ: 253 ರೂ
  • ಕೇರಳ: 271 ರೂ
  • ಅಹ್ಮದಾಬಾದ್: 253 ರೂ
  • ಜೈಪುರ್: 253 ರೂ
  • ಲಕ್ನೋ: 253 ರೂ
  • ಭುವನೇಶ್ವರ್: 271 ರೂ
  • ಪುಣೆ: 253

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಿನಕ್ಕೆ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡಿದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಗೊತ್ತಾ? – Kannada News | What are the benefits of jumping rope for 15 minutes every day?

ಇಂದಿನ ಈ ವೇಗದ ಯುಗದಲ್ಲಿ ನಮ್ಮ ಜೀವನಶೈಲಿ (Lifestyle) ತುಂಬಾ ಹದಗೆಟ್ಟಿದೆ ಹೌದು ನಾವು ಸಮಯಕ್ಕೆ ಸರಿಯಾಗಿ ಊಟ ಮಾಡುವುದಿಲ್ಲ, ಸಾಕಷ್ಟು ನಿದ್ರೆ ಪಡೆಯುವುದಿಲ್ಲ, ಆರೋಗ್ಯಕರ ಆಹಾರವನ್ನು ಸೇವನೆ ಮಾಡುವುದಿಲ್ಲ, ಇನ್ನೂ ಟೈಮ್‌ ಸಾಕಾಗುವುದಿಲ್ಲವೆಂದು ದಿನನಿತ್ಯ ವ್ಯಾಯಾಮವನ್ನೇ ಮಾಡುವುದಿಲ್ಲ. ಈ ಎಲ್ಲಾ ಅಂಶಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಹಾಗಾಗಿ ಫಿಟ್ ಆಗಿ ಮತ್ತು ಆರೋಗ್ಯವಾಗಿರಲು ದೈಹಿಕ ಚಟುವಟಿಕೆಯನ್ನು ಮಾಡುವುದು ಅತ್ಯಗತ್ಯ. ಇದಕ್ಕಾಗಿ ಸಾಕಷ್ಟು ಸಮಯ ಇಲ್ಲ ಎಂದಾದ್ರೆ ನೀವು ಪ್ರತಿನಿತ್ಯ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಆಡಬಹುದು. ಸ್ಕಿಪ್ಪಿಂಗ್‌ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತದೆ ಅನ್ನೋದನ್ನು ನೋಡೋಣ ಬನ್ನಿ.

ಪ್ರತಿದಿನ 15 ನಿಮಿಷಗಳ ಸ್ಕಿಪ್ಪಿಂಗ್‌ ಮಾಡುವುದರಿಂದಾಗುವ ಪ್ರಯೋಜನಗಳು:

ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ: ನೀವು ತೂಕ ಹೆಚ್ಚಾಗುವ ಬಗ್ಗೆ ಚಿಂತಿತರಾಗಿದ್ದರೆ ಮತ್ತು ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡಿ. ಇದು ಕಾರ್ಡಿಯೋ ವ್ಯಾಯಾಮವಾಗಿದ್ದು, ಇದು ಕ್ಯಾಲೊರಿಗಳನ್ನು ತ್ವರಿತವಾಗಿ ಸುಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ನೀವು ವೇಗವಾಗಿ ತೂಕ ಇಳಿಸಿಕೊಳ್ಳಬಹುದು.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಇದು ಹೃದಯವನ್ನು ಬಲಪಡಿಸುವ ಮತ್ತು ರಕ್ತ ಪರಿಚಲನೆ ಸುಧಾರಿಸುವ ಅತ್ಯುತ್ತಮ ಕಾರ್ಡಿಯೋ ವ್ಯಾಯಾಮವಾಗಿದ್ದು, ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ: ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡುವುದರಿಂದ ಕಾಲುಗಳು, ತೊಡೆಗಳು, ತೋಳುಗಳು ಮತ್ತು ಭುಜಗಳ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ಇದು ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡುತ್ತದೆ. ದುರ್ಬಲ ಸ್ನಾಯುಗಳನ್ನು ಹೊಂದಿರುವ ಜನರಿಗೆ ಸ್ಕಿಪ್ಪಿಂಗ್‌ ತುಂಬಾನೇ ಪ್ರಯೋಜನಕಾರಿ.

ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ: ನೀವು ಸಣ್ಣ ವಿಷಯಗಳಿಗೂ ಒತ್ತಡಕ್ಕೊಳಗಾಗುತ್ತಿದ್ದರೆ, ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡಿ. ಈ ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಆಲಸ್ಯವನ್ನು ಹೋಗಲಾಡಿಸಿ ದಿನವಿಡೀ ಆಕ್ಟಿವ್‌ ಆಗಿರಲು ಅಹಾರಗಳನ್ನು ಸೇವನೆ ಮಾಡಿ

ಶಕ್ತಿ ಮತ್ತು ಸಹಿಷ್ಣುತೆ ಹೆಚ್ಚಳ: ಈ ವ್ಯಾಯಾಮವು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ, ಇದು ದಿನವಿಡೀ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.

ಮಧುಮೇಹವನ್ನು ನಿಯಂತ್ರಿಸಲು ಸಹಕಾರಿ: ಸ್ಕಿಪ್ಪಿಂಗ್‌ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಟೈಪ್‌ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು.

ಉತ್ತಮ ನಿದ್ರೆ ಪಡೆಯಲು ಸಹಕಾರಿ: ನಿದ್ರಾಹೀನತೆ ಅಥವಾ ಕಳಪೆ ನಿದ್ರೆಯಿಂದ ಬಳಲುತ್ತಿರುವವರು ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡಬೇಕು. ಇದು ದೇಹವನ್ನು ದಣಿಸಿ ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ, ರಾತ್ರಿಯಲ್ಲಿ ಆಳವಾದ ಮತ್ತು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಗಲಭೆಗೆ ಮತ್ತೊಂದು ಸ್ಫೋಟಕ ತಿರುವು! ಗಲಾಟೆ ಶುರುವಾಗಿದ್ದು ಹೇಗೆ ಗೊತ್ತಾ? – Kannada News | Ballari Banner Violence: Janardhan Reddy Supporters Accused in Fatal Clash, video goes viral

ಬಳ್ಳಾರಿ ಗಲಭೆಯಲ್ಲಿ ಮತ್ತೊಂದು ಸ್ಫೋಟಕ ತಿರುವು!

ಬಳ್ಳಾರಿ, ಜನವರಿ 06: ಜಿಲ್ಲೆಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರಂಭಿಕ ಹಂತದ ದೃಶ್ಯಗಳು ಬಹಿರಂಗವಾಗಿದ್ದು, ಇಡೀ ಗಲಾಟೆಗೆ ಹೊಸ ತಿರುವು ಪಡೆದುಕೊಂಡಿದೆ. ಗಲಾಟೆ ಆರಂಭಿಸಿದ್ದು ಜನಾರ್ದನ ರೆಡ್ಡಿ ಬೆಂಬಲಿಗರೆಂಬುದಾಗಿ ಕಾಂಗ್ರೆಸ್ ಗುಂಪು ಆರೋಪಿಸಿದ್ದು, ಇದಕ್ಕೆ ಸಾಕ್ಷಿಯಾಗಿ ಕೆಲವು ದೃಶ್ಯಗಳನ್ನು ಕಾಂಗ್ರೆಸ್ ಮುಖಂಡರು ಬಿಡುಗಡೆ ಮಾಡಿದ್ದಾರೆ.

ಶಾಸಕ ಭರತ್ ರೆಡ್ಡಿ ಬೆಂಬಲಿಗರು ಜನಾರ್ದನ ರೆಡ್ಡಿ ನಿವಾಸದೆದುರು ಬ್ಯಾನರ್ ಕಟ್ಟುತ್ತಿದ್ದಂತೆ ಬಿಜೆಪಿಗರು ಹರಿದು ಆಕ್ರೋಶ ಹೊರಹಾಕಿದ್ದರು. ವಿಷಯ ತಿಳಿದ ನಂತರ ಭರತ್ ರೆಡ್ಡಿ ಆಪ್ತ ಸತೀಶ್​ ರೆಡ್ಡಿ ಖಾಸಗಿ ಗನ್​​ ಮ್ಯಾನ್​​ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ಗಲಾಟೆಯಲ್ಲಿ ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದ. ಘಟನೆಯ ಕುರಿತಾಗಿ ಹಲವು ಗೊಂದಲ ಉಂಟಾಗಿದ್ದ ಹಿನ್ನೆಲೆಯಲ್ಲಿಯೇ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಗಲಾಟೆಗೆ ಸಂಬಂಧಿಸಿದ ಹಲವು ವೀಡಿಯೋಗಳು ಹೊರಬಂದಿವೆ.

ಉದ್ದೇಶಪೂರ್ವಕವಾಗಿ ಬ್ಯಾನರ್‌ ಕಿತ್ತ ಬಿಜೆಪಿಗರು

ದೃಶ್ಯಗಳಲ್ಲಿರುವಂತೆ ಜನಾರ್ದನ ರೆಡ್ಡಿ ಮನೆ ಕಾಂಪೌಂಡ್ ಹೊರಭಾಗದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಅಳವಡಿಸಿದ್ದರು. ರಸ್ತೆ ಬದಿಯಲ್ಲಿ ಅಳವಡಿಸಿದ್ದ ಈ ಬ್ಯಾನರ್‌ಗಳನ್ನು ಉದ್ದೇಶಪೂರ್ವಕವಾಗಿ ರೆಡ್ಡಿ ಬೆಂಬಲಿಗರು ಕಿತ್ತು ಹಾಕಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲೇ ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಮತ್ತೆ ಅದೇ ಜಾಗದಲ್ಲಿ ಬ್ಯಾನರ್ ಅಳವಡಿಸಲು ಮುಂದಾದಾಗ ಗಲಾಟೆ ತೀವ್ರಗೊಂಡಿತ್ತು. ಹೀಗೆ ಕ್ಷಣಾರ್ಧದಲ್ಲಿ ಎರಡೂ ಕಡೆಯಿಂದ ಸಾವಿರಾರು ಜನ ಸೇರಿ ಪರಿಸ್ಥಿತಿ ಗಲಭೆಯಾಗಿ ಮಾರ್ಪಟ್ಟಿದ್ದು, ತಳ್ಳಾಟ- ನೂಕಾಟ ಏರ್ಪಟ್ಟಿತ್ತು.

ಇದನ್ನೂ ಓದಿ ಬಳ್ಳಾರಿ ಗಲಭೆ: 20 ಜನರ ಬಂಧನ, ಕಾಂಗ್ರೆಸ್​​ನವರೆಷ್ಟು, ಬಿಜೆಪಿಯವರೆಷ್ಟು? ರೆಡ್ಡಿಗೂ ಸಂಕಷ್ಟ

ತೊಡೆತಟ್ಟಿ ಗಲಾಟೆಗೆ ಪ್ರಚೋದನೆ ನೀಡಿದ್ದ ಮಹಿಳೆ

ಈ ನಡುವೆ ಬಿಜೆಪಿ ಕಾರ್ಯಕರ್ತೆಯೊಬ್ಬರು ತೊಡೆತಟ್ಟಿ ಗಲಾಟೆಗೆ ಪ್ರಚೋದನೆ ನೀಡಿದ ವೀಡಿಯೋವೊಂದು ವೈರಲ್ ಆಗಿದೆ.  ಎರಡು ಪಕ್ಷಗಳ ಬೆಂಬಲಿಗರ ನಡುವೆ ಗಲಭೆ ಏರ್ಪಟ್ಟಾಗಲೇ ಈ ಘಟನೆಯೂ ನಡೆದಿದ್ದು, ಪೊಲೀಸರು ಆಕೆಯನ್ನು ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ಅದರೊಂದಿಗೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಖಾರಿದ ಪುಡಿ ಎರಚಿದ್ದು, ಉರಿ ತಾಳದ ವ್ಯಕ್ತಿ ಮೈಮೇಲೆ ನೀರು ಹಾಕಿಕೊಂಡ ದೃಶ್ಯಗಳೂ ಸಹ ಹೊರಬಂದಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೆಹಲಿಯ ಮೆಟ್ರೋ ಸಿಬ್ಬಂದಿ ವಸತಿಗೃಹದಲ್ಲಿ ಅಗ್ನಿ ಅವಘಡ, ಬಾಲಕಿ ಸೇರಿ ಮೂವರು ಸಜೀವ ದಹನ – Kannada News | Delhi Metro Quarters Fire: 3 Including Child Burnt Alive in Adarsh Nagar Tragedy

ನವದೆಹಲಿ, ಜನವರಿ 06: ದೆಹಲಿಯ ಮೆಟ್ರೋ ಸಿಬ್ಬಂದಿ ವಸತಿಗೃಹದಲ್ಲಿ ಭಾರಿ ಅಗ್ನಿ ಅವಘಡ(Fire Accident) ಸಂಭವಿಸಿದ್ದು, ಬಾಲಕಿ ಸೇರಿ ಮೂವರು ಸಜೀವದಹನವಾಗಿದ್ದಾರೆ.ದೆಹಲಿಯ ಆದರ್ಶನಗರದಲ್ಲಿರುವ ವಸತಿಗೃಹದಲ್ಲಿ ಈ ಘಟನೆ ನಡೆದಿದೆ. ಪತಿ, ಪತ್ನಿ ಮತ್ತು ಬಾಲಕಿ ದುರಂತವಾಗಿ ಸಾವನ್ನಪ್ಪಿದ್ದಾರೆ.ಮೂವರ ಮೃತದೇಹಗಳನ್ನು ಸುಟ್ಟು ಕರಕಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ
ಅಗ್ನಿ ಶಾಮಕದಳದ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ, ಬೆಳಗಿನ ಜಾವ 2.39ಕ್ಕೆ ಡಿಎಂಆರ್‌ಸಿ ಕ್ವಾರ್ಟರ್‌ನಲ್ಲಿರುವ ಗೃಹೋಪಯೋಗಿ ವಸ್ತುವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿ ಮಾಡಲಾಗಿತ್ತು, ನಂತರ ಆರು ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಐದನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದವರು ಬಂದಾಗ, ಮೂವರ ಸುಟ್ಟು ಕರಕಲಾದ ಶವಗಳು ಕಣ್ಣಿಗೆ ಬಿದ್ದಿದ್ದವು.

ಮೃತರನ್ನು ಅಜಯ್ (42), ನೀಲಂ (38) ಮತ್ತು ಜಾನ್ಹವಿ (10) ಎಂದು ಗುರುತಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಡಿಎಂಆರ್‌ಸಿ ಕ್ವಾರ್ಟರ್ಸ್ ಮಜ್ಲಿಸ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಇದೆ. ಪತಿ, ಪತ್ನಿ ಮತ್ತು ಬಾಲಕಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಎಲ್ಲರೂ ಒಂದೇ ಕೋಣೆಯಲ್ಲಿ ಮಲಗಿದ್ದರು.

ಮತ್ತಷ್ಟು ಓದಿ: ಆಂಧ್ರಪ್ರದೇಶದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ಅವಘಡ; ಸ್ಥಳೀಯ ನಿವಾಸಿಗಳ ಸ್ಥಳಾಂತರ

ಬೆಳಗ್ಗೆ 6.40 ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಮನೆಯ ವಸ್ತುಗಳು ಇದ್ದ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಳಗೆ ಮೂರು ಸುಟ್ಟ ದೇಹಗಳು ಪತ್ತೆಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಕಿಯನ್ನು ನಂದಿಸುವಾಗ ಅಗ್ನಿಶಾಮಕ ದಳದ ಸಿಬ್ಬಂದಿ ರಾಕೇಶ್ ಅವರ ಕೈಗೆ ಗಾಯವಾಗಿದ್ದು, ಅವರನ್ನು ಜಗಜೀವನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಪ್ರಥಮ ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಯಿತು.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೇಂದ್ರದ ಅನುಮೋದನೆ ಇದ್ರೂ ಆರಂಭವಾಗದ ಆರೆಂಜ್​​ ಲೈನ್​​ ಮೆಟ್ರೋ ಕಾಮಗಾರಿ: ಕಾರಣ ಏನು? – Kannada News | Namma Metro Orange Line: Why Bengaluru’s Approved Project Faces Delays

ಬೆಂಗಳೂರು, ಜನವರಿ 06: ಬಹು ನಿರೀಕ್ಷಿತ ನಮ್ಮ ಮೆಟ್ರೋ ಆರೆಂಜ್ ಲೈನ್ ಕಾಮಗಾರಿಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತು ಒಂದು ವರ್ಷಕ್ಕಿಂತ ಹೆಚ್ಚು ಸಮಯ ಕಳೆದಿದೆ. ನಮ್ಮ ಮೆಟ್ರೋದ ಮೂರನೇ ಹಂತದ ಪ್ರಾಜೆಕ್ಟ್​​ಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದರೂ ಯೋಜನೆ ಮಾತ್ರ ಇನ್ನೂ ಆರಂಭವಾಗಿಲ್ಲ. 2024ರ ಆಗಸ್ಟ್‌ 16ರಂದು ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಅದಾಗಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಳೆದರೂ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಇನ್ನೂ ನಾಗರಿಕ ಕಾಮಗಾರಿಗಳಿಗಾಗಿ ಟೆಂಡರ್‌ಗಳನ್ನು ಆಹ್ವಾನಿಸಿಲ್ಲ.

ವಿಳಂಬಕ್ಕೆ ಕಾರಣ ಏನು?

ಒಟ್ಟು ಸುಮಾರು 44.65 ಕಿಮೀ ಉದ್ದದ ಎರಡು ಕಾರಿಡಾರ್‌ಗಳನ್ನು ಆರೆಂಜ್​​ ಲೈನ್​ ಒಳಗೊಂಡಿದೆ. ಸಾರ್ವಜನಿಕ ಸಾರಿಗೆ ಸೌಲಭ್ಯಗಳ ಕೊರತೆಯಿರುವ ವಸತಿ ಪ್ರದೇಶಗಳು, ಕೈಗಾರಿಕಾ ವಲಯಗಳು ಹಾಗೂ ಐಟಿ ಹಬ್‌ಗಳನ್ನು ಸಂಪರ್ಕಿಸುವ ಉದ್ದೇಶ ಈ ಯೋಜನೆಗೆ ಇದೆ. ಪ್ರಾಜೆಕ್ಟ್​​ 1 ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಮತ್ತು 32.15 ಕಿ.ಮೀ ಮತ್ತು ಪ್ರಾಜೆಕ್ಟ್​​ 2 ಹೊಸಹಳ್ಳಿಯಿಂದ ಕಡಬಗೆರೆಗೆ 12.5 ಕಿ.ಮೀ. ಸಂಪರ್ಕ ಕಲ್ಪಿಸಲಿದೆ. ರಾಜ್ಯ ಸರ್ಕಾರವು ಸಂಪೂರ್ಣ ಆರೆಂಜ್ ಲೈನ್‌ ಅನ್ನು ಡಬಲ್ ಡೆಕ್ಕರ್ ಕಾರಿಡಾರ್ ಆಗಿ ನಿರ್ಮಿಸುವ ಬಗ್ಗೆ ನಿರ್ಧಾರ ಕೈಗೊಂಡಿರುವುದೇ ಯೋಜನೆಯ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ರಸ್ತೆ ಜಾಗವನ್ನು ಉತ್ತಮವಾಗಿ ಬಳಸುವ ಉದ್ದೇಶ ಈ ನಿರ್ಧಾರದ ಹಿಂದೆ ಇದ್ದರೂ ಇದರಿಂದ ಯೋಜನೆಯ ವೆಚ್ಚ ಮತ್ತು ವಿನ್ಯಾಸದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಈ ಒಂದೇ ನಿರ್ಧಾರದಿಂದಲೇ ಯೋಜನೆಗೆ ಸುಮಾರು ₹9,000 ಕೋಟಿ ಹೆಚ್ಚುವರಿ ವೆಚ್ಚ ಸೇರ್ಪಡೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಬಲ್​​ ಗುಡ್​​ನ್ಯೂಸ್​​

ನಮ್ಮ ಮೆಟ್ರೋ ಆರೆಂಜ್ ಲೈನ್ ಕುರಿತಾದ ಟೆಂಡರ್‌ಗಳು ಯಾವಾಗ ಹೊರಬರುತ್ತವೆ ಅಥವಾ ಕಾಮಗಾರಿ ಯಾವಾಗ ಆರಂಭವಾಗುತ್ತದೆ ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಯೋಜನೆಗೆ ಅನುಮೋದನೆ ಇದ್ದರೂ ಈವರೆಗೆ ಯಾವುದೇ ಪ್ರಗತಿ ಆಗಿಲ್ಲ. ಹೀಗಾಗಿ ಯೋಜನೆಯ ವೆಚ್ಚಗಳು ಏರುತ್ತಲೇ ಇರೋದು ಒಂದೆಡೆಯಾದರೆ, ಆರೆಂಜ್​​ ಲೈನ್​​ ಮೆಟ್ರೋ ಆರಂಭದಿಂದ ಟ್ರಾಫಿಕ್​​ ಸಮಸ್ಯೆ ಇಳಿಕೆಯಾಗಿ ಸುಗಮ ಸಂಚಾರದ ಕನಸು ಕಂಡಿದ್ದ ಪಶ್ಚಿಮ ಮತ್ತು ದಕ್ಷಿಣ ಬೆಂಗಳೂರಿನ ಪ್ರಯಾಣಿಕರು ತಾತ್ಕಾಲಿಕ ನಿರಾಸೆಗೆ ಒಳಗಾಗಬೇಕಾದ ಸ್ಥಿತಿ ಉದ್ಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಧರ್ಮೇಂದ್ರ ಆಸ್ಪತ್ರೆಯಲ್ಲಿದ್ದಾಗ ನಮಗೆ ಕಿರುಕುಳ ಆಗಿದೆ; ಹೇಮಾ ಮಾಲಿನಿ ಆರೋಪ – Kannada News | Dharmendra’s Demise: Hema Malini Slams Paparazzi Over Deol Family Harassment

ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ನವೆಂಬರ್ 24 ರಂದು ನಿಧನರಾದರು. ಅದಕ್ಕೂ ಮೊದಲು ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಆಸ್ಪತ್ರೆಯ ಹೊರಗೆ ಪಾಪರಾಜಿಗಳು ನಿರಂತರವಾಗಿ ಇದ್ದ ಕಾರಣ, ಡಿಯೋಲ್ ಕುಟುಂಬವು ಅಂತಿಮವಾಗಿ ಅವರ ಚಿಕಿತ್ಸೆಯನ್ನು ಮನೆಯಲ್ಲಿಯೇ ಮುಂದುವರಿಸಲು ನಿರ್ಧರಿಸಿತು. ಧರ್ಮೇಂದ್ರ ಅವರನ್ನು ಮನೆಗೆ ಕರೆತಂದ ನಂತರವೂ, ಪಾಪರಾಜಿಗಳು ಮನೆಯ ಹೊರಗೆ ನಿಲ್ಲುತ್ತಿದ್ದರು. ಇದರಿಂದ ಕಿರುಕುಳ ಉಂಟಾಗಿದೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.

ಧರ್ಮೇಂದ್ರ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಈ ವೇಳೆ ಆಸ್ಪತ್ರೆ ಹೊರಗೆ ಹಾಗೂ ಡಿಯೋಲ್ ಕುಟುಂಬದ ಹಿಂದೆ ಪಾಪರಾಜಿಗಳು ಇದ್ದರು. ಇದು ಸನ್ನಿ ಡಿಯೋಲ್​​ಗೆ ಕೋಪ ತರಿಸಿತ್ತು. ಅವರು ಕೂಗಾಡಿದ್ದರು. ಈ ಬಗ್ಗೆ ಸನ್ನಿ ಡಿಯೋಲ್ ಮಲತಾಯಿ ಹೇಮಾ ಮಾಲಿನಿ ಮಾತನಾಡಿದರು.

‘ಸನ್ನಿ ತುಂಬಾ ಅಸಮಾಧಾನಗೊಂಡಿದ್ದರು ಮತ್ತು ಅವರು ತುಂಬಾ ಕೋಪಗೊಂಡಿದ್ದರು. ಏಕೆಂದರೆ ಆ ಸಮಯದಲ್ಲಿ ನಾವೆಲ್ಲರೂ ತುಂಬಾ ಭಾವನಾತ್ಮಕ ಹಂತದ ಮೂಲಕ ಸಾಗುತ್ತಿದ್ದೆವು. ಆ ಸ್ಥಿತಿಯಲ್ಲಿಯೂ ಸಹ, ಮಾಧ್ಯಮಗಳು ಮತ್ತು ಪಾಪರಾಜಿಗಳು ನಮ್ಮನ್ನು ಮತ್ತು ನಮ್ಮ ಕಾರುಗಳನ್ನು ನಿರಂತರವಾಗಿ ಹಿಂಬಾಲಿಸುತ್ತಿದ್ದರು. ಆ ಸಮಯದಲ್ಲಿ ನಮಗೆ ಸಾಕಷ್ಟು ಕಿರುಕುಳ ನೀಡಲಾಯಿತು’ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಧರ್ಮೇಂದ್ರ ಕುಟುಂಬ ಹೇಮಾ ಮಾಲಿನಿಯನ್ನು ಒಂಟಿ ಮಾಡಿದೆ; ಕೇಳಿ ಬಂತು ಆರೋಪ

‘ಧರ್ಮೇಂದ್ರ ಅವರ ನಿಧನದಿಂದ ಎಲ್ಲರೂ ದುಃಖಿತರಾಗಿದ್ದಾರೆ. ಏಕೆಂದರೆ ನಾವೆಲ್ಲರೂ ಸುಮಾರು ಒಂದು ತಿಂಗಳಿನಿಂದ ಕಷ್ಟಪಡುತ್ತಿದ್ದೆವು. ಆಸ್ಪತ್ರೆಯಲ್ಲಿ ನಡೆಯುತ್ತಿರುವ ಎಲ್ಲವನ್ನೂ ನಿಭಾಯಿಸಲು ನಾವು ಪ್ರಯತ್ನಿಸುತ್ತಿದ್ದೆವು. ನಾವೆಲ್ಲರೂ ಅಲ್ಲಿದ್ದೆವು. ಧರ್ಮೇಂದ್ರ ಅವರನ್ನು ಈ ಮೊದಲು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರತಿ ಬಾರಿ ಅವರು ಚೇತರಿಸಿಕೊಂಡು ಮನೆಗೆ ಮರಳುತ್ತಿದ್ದರು. ಅವರು ಈ ಬಾರಿಯೂ ಚೇತರಿಸಿಕೊಳ್ಳುತ್ತಾರೆ ಎಂದು ನಾವು ಆಶಿಸಿದ್ದೆವು’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link