ಸಿಎಂ ಆಗಿ ದೇವರಾಜ ಅರಸು ದಾಖಲೆ ಮುರಿದ ಸಿದ್ದರಾಮಯ್ಯ! ಅಭಿಮಾನಿಗಳಿಂದ 6000 ಜನರಿಗೆ ನಾಟಿಕೋಳಿ ಬಾಡೂಟ – Kannada News | CM Siddaramaiah breaks Devaraj Aras Record: Fans Host Grand Naati Koli Feast for Thousands
ನೆಲಮಂಗಲ, ಜನವರಿ 06: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಕರ್ನಾಟಕದ ಮಾಜಿ ಸಿಎಂ ದೇವರಾಜ ಅರಸು 7 ವರ್ಷ 7 ತಿಂಗಳು 20 ದಿನಗಳ ಕಾಲ ಕಾರ್ಯನಿರ್ವಹಿಸಿದ್ದರು. ಮೊದಲ ಅವಧಿಯಲ್ಲಿ 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ 5 ವರ್ಷ 9 ತಿಂಗಳು 11 ದಿನ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ನಂತರ 1978ರ ಫೆಬ್ರುವರಿ 28ರಿಂದ…