All posts by nagaraj11081993

ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

ಜೈಪುರ, ಏಪ್ರಿಲ್ 3: ರಾಜಸ್ಥಾನದ ಜೈಪುರದ ಹಲವಾರು ಭಾಗಗಳಲ್ಲಿ ಭಾರೀ ಮಳೆ (Rain Updates) ಮತ್ತು ಆಲಿಕಲ್ಲು ಮಳೆಯಾಗಿದ್ದು, ಹಠಾತ್ ಹವಾಮಾನ ವೈಪರೀತ್ಯ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆಯು ಈ ಪ್ರದೇಶದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಗಳ ಎಚ್ಚರಿಕೆಯನ್ನು ಹಳದಿ ಅಲರ್ಟ್ ನೀಡಿದೆ. ಮುಂದಿನ 2 ದಿನಗಳವರೆಗೆ ಬಿರುಗಾಳಿ ಮತ್ತು ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಮುಂದಿನ 2 ದಿನಗಳವರೆಗೆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಬಲವಾದ ಗಾಳಿ, ಮಳೆ ಮತ್ತು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಇಂದು 7 ಜಿಲ್ಲೆಗಳಲ್ಲಿ ಗುಡುಗು ಮತ್ತು ಮಳೆಯ ಎಚ್ಚರಿಕೆಯನ್ನು ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಹದಲ್ಲಿ ಪ್ಲೇಟ್‌ಲೆಟ್‌ಗಳು ಕಡಿಮೆಯಾಗುವುದಕ್ಕೆ ಈ ರೋಗಗಳೇ ಕಾರಣ ಎಂಬುದು ತಿಳಿದಿದೆಯೇ?

ನಿಮಗೆ ತಿಳಿದಿರಬಹುದು, ಪ್ಲೇಟ್‌ಲೆಟ್‌ಗಳು (Low Platelet) ನಮ್ಮ ದೇಹದ ರಕ್ತದಲ್ಲಿ ಇರುವ ಸಣ್ಣ ಕೋಶಗಳಾಗಿದ್ದು, ರಕ್ತಸ್ರಾವವನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ದೇಹದಲ್ಲಿ ಗಾಯವಾದಾಗ, ಈ ಪ್ಲೇಟ್‌ಲೆಟ್‌ಗಳು ಆ ಸ್ಥಳದಲ್ಲಿ ಸೇರಿ ರಕ್ತದ ಗಡ್ಡೆ (clot) ರೂಪಿಸಿ ರಕ್ತಸ್ರಾವವನ್ನು ನಿಲ್ಲಿಸುತ್ತವೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಪ್ರತಿ ಮೈಕ್ರೋಲೀಟರ್ ರಕ್ತದಲ್ಲಿ 1.5 ಲಕ್ಷದಿಂದ 4.5 ಲಕ್ಷದವರೆಗೆ ಇರುತ್ತದೆ. ಇದು 1.5 ಲಕ್ಷಕ್ಕಿಂತ ಕಡಿಮೆಯಾದರೆ ಅದು ಅಪಾಯದ ಸೂಚನೆ. 50 ಸಾವಿರಕ್ಕಿಂತ ಕಡಿಮೆಯಾದರೆ ಗಂಭೀರ ಎಂದು ಪರಿಗಣಿಸಲಾಗುತ್ತದೆ. 20 ಸಾವಿರಕ್ಕಿಂತ ಕಡಿಮೆಯಾದರೆ ಒಳಾಂಗಿಕ ರಕ್ತಸ್ರಾವದ ಅಪಾಯ ಹೆಚ್ಚುತ್ತದೆ, ಇದು ಜೀವಕ್ಕೆ ಅಪಾಯಕಾರಿಯೂ ಆಗಬಹುದು. ದೀರ್ಘಕಾಲ ಪ್ಲೇಟ್‌ಲೆಟ್‌ಗಳ ಕೊರತೆ ಇದ್ದರೆ ಸಣ್ಣ ಗಾಯವೂ ದೊಡ್ಡ ಸಮಸ್ಯೆಯಾಗಬಹುದು. ಆದರೆ ನಿಮಗೆ ಈ ರೀತಿ ಆಗುವುದಕ್ಕೆ ಕಾರಣವೇನು, ಪ್ಲೇಟ್‌ಲೆಟ್‌ಗಳ ಕೊರತೆಯಾದಾಗ ಕಂಡುಬರುವ ಲಕ್ಷಣಗಳು ಹೇಗಿರುತ್ತವೆ ಎಂಬುದು ತಿಳಿದಿದೆಯೇ, ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಪ್ಲೇಟ್‌ಲೆಟ್‌ ಕಡಿಮೆಯಾಗಲು ಕಾರಣವಾಗುವ ರೋಗಗಳು:

  • ವೈರಲ್ ಸೋಂಕುಗಳಾದ ಡೆಂಗ್ಯೂ, ಚಿಕನ್‌ಗುನ್‌ಯಾ ಮತ್ತು ಮಲೇರಿಯಾ
  • ಟೈಫಾಯ್ಡ್ ಮತ್ತು ವೈರಲ್ ಜ್ವರ
  • ಲೀವರ್ ಸಮಸ್ಯೆಗಳು ಅದರಲ್ಲಿಯೂ ಸಿರೋಸಿಸ್ ಸಮಸ್ಯೆ
  • ಬೋನ್ ಮ್ಯಾರೋ ಸಮಸ್ಯೆಗಳು
  • ಕ್ಯಾನ್ಸರ್ ಮತ್ತು ಕೀಮೋಥೆರಪಿ
  • ಆಟೋಇಮ್ಯೂನ್ ರೋಗಗಳು
    ಈ ರೋಗಗಳಲ್ಲಿ ಸಮಯಕ್ಕೆ ಸರಿಯಾಗಿ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ.

ಪ್ಲೇಟ್‌ಲೆಟ್‌ಗಳ ಕೊರತೆಯಾದಾಗ ಕಂಡುಬರುವ ಲಕ್ಷಣಗಳು:

  • ಬೇಗ ಗಾಯವಾಗುವುದು
  • ರಕ್ತಸ್ರಾವ ಬೇಗ ನಿಲ್ಲದಿರುವುದು
  • ಚರ್ಮದ ಮೇಲೆ ಕೆಂಪು ಅಥವಾ ನೇರಳೆ ಚುಕ್ಕೆಗಳು ಕಂಡುಬರುವುದು
  • ಮೂಗು ಅಥವಾ ಹಲ್ಲಿನ ಮಸೂರಿನಿಂದ ರಕ್ತಸ್ರಾವ
  • ಮಹಿಳೆಯರಲ್ಲಿ ಪೀರಿಯಡ್ಸ್ ಸಮಯದಲ್ಲಿ ಹೆಚ್ಚು ರಕ್ತಸ್ರಾವ
  • ದಣಿವು, ದುರ್ಬಲತೆ ಮತ್ತು ತಲೆಸುತ್ತು
    ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಇದನ್ನೂ ಓದಿ: ಒಸಡು ಹಾಗೂ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುತ್ತಿದೆಯೇ? ಲಕ್ಷಣಗಳು ಯಾವ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ?

ಪ್ಲೇಟ್‌ಲೆಟ್‌ಗಳ ಕೊರತೆಯಿಂದ ಹೇಗೆ ರಕ್ಷಿಸಿಕೊಳ್ಳುವುದು?

  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು
  • ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ
  • ಸೊಳ್ಳೆಗಳಿಂದ ದೂರವಿರಿ
  • ಪೌಷ್ಟಿಕ ಆಹಾರ ಸೇವಿಸಿ (ಹಸಿರು ತರಕಾರಿಗಳು, ಹಣ್ಣುಗಳು, ಪ್ರೋಟೀನ್)
  • ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ
  • ಜ್ವರ ಅಥವಾ ದುರ್ಬಲತೆಯನ್ನು ನಿರ್ಲಕ್ಷಿಸಬೇಡಿ
  • ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವಿಸಬೇಡಿ

ಒಟ್ಟಿನಲ್ಲಿ, ಪ್ಲೇಟ್‌ಲೆಟ್‌ಗಳ ಪ್ರಮಾಣ ದೇಹದ ಆರೋಗ್ಯಕ್ಕೆ ಬಹಳ ಮುಖ್ಯ. ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಿಫ್ಟ್​ನಲ್ಲಿ ಸಿಲುಕಿದ್ದ ವ್ಯಕ್ತಿ, 2 ಶ್ವಾನಗಳನ್ನ ರಕ್ಷಿಸಿದ ಪೊಲೀಸರು: ಸಾರ್ವಜನಿಕರಿಂದ ಮೆಚ್ಚುಗೆ

ಬೆಂಗಳೂರು, ಏಪ್ರಿಲ್​ 03: ಲಿಫ್ಟ್‌ನಲ್ಲಿ ಸಿಲುಕಿದ್ದ (Lift Rescues) ವ್ಯಕ್ತಿ ಮತ್ತು ಎರಡು ಶ್ವಾನಗಳನ್ನು ಪೊಲೀಸರು ಯಶಸ್ವಿಯಾಗಿ ರಕ್ಷಣೆ ಮಾಡಿರುವಂತಹ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆ ಸಮಯದಲ್ಲಿ ಲಿಫ್ಟ್​ನಲ್ಲಿ ವ್ಯಕ್ತಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಕೇವಲ 8 ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿ ಹಾಗೂ ಶ್ವಾನಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ನಡೆದಿದ್ದೇನು?

ನಗರದ ಆರ್​.ಜಿಎಸ್ ಕಾಲೇಜು ಸಮೀಪದ ಕಟ್ಟಡದಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್ ಮಧ್ಯದಲ್ಲೇ ನಿಂತುಹೋಗಿತ್ತು. ಲಿಫ್ಟ್‌ನಲ್ಲಿ ಸಿಲುಕಿದ್ದ ವ್ಯಕ್ತಿ ತಕ್ಷಣವೇ ತುರ್ತು ಸಹಾಯಕ್ಕಾಗಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರ ತ್ವರಿತ ಹಾಗೂ ಸಮರ್ಪಕ ಕಾರ್ಯಾಚರಣೆಯಿಂದ ವ್ಯಕ್ತಿ ಮತ್ತು ಎರಡು ಶ್ವಾನಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ಅಸ್ವಸ್ಥ ಬಾಲಕನ ರಕ್ಷಣೆ ಮಾಡಿದ ಬೇಗೂರು ಪೊಲೀಸರು: ಪೋಷಕರಿಗೆ ಹಸ್ತಾಂತರ

ಅಸ್ವಸ್ಥ ಸ್ಥಿತಿಯಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ 12 ವರ್ಷದ ಬಾಲಕನನ್ನು ಬೇಗೂರು ಪೊಲೀಸರು ರಕ್ಷಿಸಿ, ನಂತರ ಆತನ ಪೋಷಕರಿಗೆ ಸುರಕ್ಷಿತವಾಗಿ ಒಪ್ಪಿಸಿದ ಘಟನೆ ನಡೆದಿದೆ. ಸಾಗರ್ ಲೇಔಟ್ ಪ್ರದೇಶದಲ್ಲಿ ಬಾಲಕ ಅಸಹಜವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಕುಸಿದುಬಿದ್ದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ಮಾಹಿತಿ ಪಡೆದ ಬೇಗೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಲಕನನ್ನು ಸುರಕ್ಷಿತವಾಗಿ ತಮ್ಮ ವಶಕ್ಕೆ ಪಡೆದರು. ನಂತರ ಬಾಲಕನ ಪೋಷಕರನ್ನು ಪತ್ತೆಹಚ್ಚಿ, ಅವರಿಗೆ ಒಪ್ಪಿಸಲಾಗಿದೆ. ಇನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಇಬ್ಬರು 112 ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ವೀಲ್ಹಿಂಗ್ ಪುಂಡರ ಅಟ್ಟಹಾಸ

ಸಿಲಿಕಾನ್ ಸಿಟಿಯಲ್ಲಿ ವೀಲ್ಹಿಂಗ್ ಪುಂಡರ ಅಟ್ಟಹಾಸ ಮುಂದುವರೆದಿದೆ. ಇಷ್ಟುದಿನ ಖಾಲಿ ರಸ್ತೆ ಮತ್ತು ಹೆದ್ದಾರಿಗಳಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಯುವಕರು, ಇದೀಗ ಆಂಬ್ಯುಲೆನ್ಸ್​​ನ್ನೇ ಓವರ್‌ಟೇಕ್ ಮಾಡಿ ಅಪಾಯಕಾರಿ ಸಾಹಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಬಿದರಕಲ್ಲು ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಬ್ಯಾಡ್​​ ನ್ಯೂಸ್​: ಸದ್ಯ ಸಾರ್ವಜನಿಕ ಸೇವೆಗೆ ಲಭ್ಯವಾಗಲ್ಲ ಬಹುನಿರೀಕ್ಷಿತ ಈ ಫ್ಲೈಓವರ್​

ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಆಂಬ್ಯುಲೆನ್ಸ್​ನ್ನು ವೇಗವಾಗಿ ವೀಲ್ಹಿಂಗ್ ಮಾಡುತ್ತಾ ಓವರ್‌ಟೇಕ್ ಮಾಡಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಭೀಕರ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಲ್ಹಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು

ದಾವಣಗೆರೆ, (ಏಪ್ರಿಲ್ 03): ಶಾಮನೂರು ಶಿವಶಂಕರಪ್ಪನವರು ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ (Davanagere South By Election )ಎದುರಾಗಿದ್ದು, ಕಾಂಗ್ರೆಸ್ (Congress) ಹಾಗೂ ಬಿಜೆಪಿ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಅದರಲ್ಲೂ ಈ ಬೈಎಲೆಕ್ಷನ್​​ ನಲ್ಲಿ ಗೆಲ್ಲಲ್ಲೇಬೇಕೆಂದು ಕಾಂಗ್ರೆಸ್ ಪಣತೊಟ್ಟಿದ್ದು, ಸಿಎಂ ಸಿದ್ದರಾಂಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಸಚಿವ, ಶಾಸಕರು, ವಿಧಾನಪರಿಷತ್ ಸದಸ್ಯರು ಮತಬೇಟೆಗಿಳಿದಿದ್ದಾರೆ. ಇನ್ನೊಂದೆಡೆ ವಿಪಕ್ಷ ಬಿಜೆಪಿ, ಆಡಳಿರೂಢ ಕಾಂಗ್ರೆಸ್​ ಅಭ್ಯರ್ಥಿ ಸಮರ್ಥ ಶಾಮನೂರ ಅವರನ್ನ ಸೋಲಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈ ನಡುವೆ ಬಿಜೆಪಿ ಶಾಸಕ ಶ್ರೀರಾಮುಲು ಅವರು ಇಂದು (ಏಪ್ರಿಲ್ 03) ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಸಮರ್ಥನನ್ನು ಸೋಲಿಸಲು ಕಾಂಗ್ರೆಸ್​​ನಲ್ಲೇ ಷಡ್ಯಂತ್ರ ನಡೆದಿದೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಗಳದ ವಿಡಿಯೋ ವೈರಲ್ ಬೆನ್ನಲ್ಲೇ ಪಿಎಸ್​ಎಲ್ ತೊರೆದ ಡೇವಿಡ್ ವಾರ್ನರ್

ವರ್ಷಗಳ ಕಾಲ ಐಪಿಎಲ್‌ನಲ್ಲಿ ಅಬ್ಬರಿಸಿದ್ದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಇದೀಗ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಇದಕ್ಕೆ ಕಾರಣ ಹರಾಜಿನಲ್ಲಿ ಯಾರು ಅವರನ್ನು ಖರೀದಿಸಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಆಡುತ್ತಿರುವ ವಾರ್ನರ್, ಕರಾಚಿ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇದುವರೆಗೆ ಹತ್ತು ಪಂದ್ಯಗಳು ನಡೆದಿದ್ದು, ಕರಾಚಿ ಕಿಂಗ್ಸ್ ತಂಡವು ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಮಧ್ಯೆ, ಕರಾಚಿ ಕಿಂಗ್ಸ್ ನಾಯಕ ಡೇವಿಡ್ ವಾರ್ನರ್, ಲೀಗ್​ ತೊರೆದು ತವರಿಗೆ ಮರಳಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿವೆ.

ಆಸ್ಟ್ರೇಲಿಯಾಕ್ಕೆ ಹಾರಿದ ಡೇವಿಡ್ ವಾರ್ನರ್

ವಾಸ್ತವವಾಗಿ ಡೇವಿಡ್ ವಾರ್ನರ್ ತಮ್ಮ ತಂಡದ ಸಹ ಆಟಗಾರರೊಂದಿಗೆ ಜಗಳ ಮಾಡಿಕೊಂಡಿದ್ದಾರೆ ಎಂದು ಬಿಂಬಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇದೆಲ್ಲದರ ನಡುವೆ ವಾರ್ನರ್ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ ಎಂಬ ಸುದ್ದಿ ಬಂದಿದೆ. ಆದಾಗ್ಯೂ ವಾರ್ನರ್ ಮನೆಗೆ ಮರಳಿರುವುದಕ್ಕೂ, ವೈರಲ್ ವಿಡಿಯೋಕ್ಕೂ ಯಾವುದೇ ಸಂಬಂಧವಿಲ್ಲ. ಏಕೆಂದರೆ ಕರಾಚಿ ಕಿಂಗ್ಸ್ ತಂಡದ ಮುಂದಿನ ಪಂದ್ಯ ಏಪ್ರಿಲ್ 9 ರಂದು ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪೇಶಾವರ್ ಝಲ್ಮಿ ವಿರುದ್ಧ ನಡೆಯಲಿದೆ.

ಹೀಗಾಗಿ ಡೇವಿಡ್ ವಾರ್ನರ್ ಸಣ್ಣ ವಿರಾಮ ತೆಗೆದುಕೊಂಡು ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ತಂಡದ ಮುಂದಿನ ಪಂದ್ಯಕ್ಕೆ ಇನ್ನು 6 ದಿನಗಳು ಬಾಕಿ ಇರುವುದರಿಂದ ವಾರ್ನರ್, ಈ ವಿರಾಮದ ಲಾಭವನ್ನು ಪಡೆದುಕೊಂಡು ಮನೆಗೆ ಮರಳಲು ನಿರ್ಧರಿಸಿದ್ದಾರೆ. ಇದರರ್ಥ ಅವರು ಕರಾಚಿ ಕಿಂಗ್ಸ್ ತಂಡದ ಮುಂದಿನ ಪಂದ್ಯಕ್ಕೂ ಮೊದಲು ಪಾಕಿಸ್ತಾನಕ್ಕೆ ಮರಳಲಿದ್ದು ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಡೇವಿಡ್ ವಾರ್ನರ್ ನಾಯಕತ್ವದಲ್ಲಿ, ಕರಾಚಿ ಕಿಂಗ್ಸ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದೆ. ಬ್ಯಾಟ್ಸ್‌ಮನ್ ಆಗಿಯೂ ಉತ್ತಮ ಪ್ರದರ್ಶನ ನೀಡಿರುವ ವಾರ್ನರ್ ಆಡಿರುವ ಮೂರು ಪಂದ್ಯಗಳಲ್ಲಿ 31.00 ಸರಾಸರಿಯಲ್ಲಿ 93 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ.

ವಾರ್ನರ್- ಅಲಿ ನಡುವೆ ಜಗಳ?

ಮೇಲೆ ಹೇಳಿದಂತೆ ಪಾಕಿಸ್ತಾನ ಸೂಪರ್ ಲೀಗ್ ಸಮಯದಲ್ಲಿ ಡೇವಿಡ್ ವಾರ್ನರ್ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ, ಅವರು ಮೊಯಿನ್ ಅಲಿ ಅವರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಇತ್ತ ಕರಾಚಿ ಕಿಂಗ್ಸ್ ತಂಡದ ನಿರ್ದೇಶಕ ಹೈದರ್ ಅಜರ್ ಕೂಡ ವಾರ್ನರ್ ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದು ಕಾಣಬಹುದಾಗಿದೆ. ಹೀಗಾಗಿ ಇಬ್ಬರೂ ಜಗಳವಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಆದಾಗ್ಯೂ, ಡೇವಿಡ್ ವಾರ್ನರ್ ಈ ವದಂತಿಯನ್ನು ನಿರಾಕರಿಸಿದ್ದು, ಕರಾಚಿ ತಂಡದೊಳಗೆ ಯಾವುದೇ ಸಮಸ್ಯೆ ಇಲ್ಲ ಮತ್ತು ವಾದವು ತಮಾಷೆಯಾಗಿತ್ತು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಮುಂದಾದ ಜಿಬಿಎ: ಎಲ್ಲಿಂದ ಎಲ್ಲಿಗೆ ಸಂಪರ್ಕ?

ಬೆಂಗಳೂರು, ಏಪ್ರಿಲ್​​ 03: ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ನಗರದ ಹೆಬ್ಬಾಳದಲ್ಲಿ ಎರಡು ಲೂಪ್​ಗಳನ್ನ ಅಳವಡಿಸಿರುವ ಕಾರಣಕ್ಕೆ ಇತ್ತೀಚೆಗೆ ಟ್ರಾಫಿಕ್ ಕೊಂಚ ಸುಧಾರಿಸಿದೆ. ಆದರೆ ಅಲ್ಲಿನ ಟ್ರಾಫಿಕ್ ಈಗ ಮೇಖ್ರಿ ಸರ್ಕಲ್​ಗೆ ಶಿಫ್ಟ್ ಆಗಿದ್ದು, ವಾಹನ ಸವಾರರಿಗೆ ಕಿರಿಕಿರಿ ಹೆಚ್ಚಾಗಿದೆ. ಹೀಗಾಗಿ ಬಳ್ಳಾರಿ ರಸ್ತೆಯ ವೆಟರ್ನರಿ ಕಾಲೇಜು ಬಳಿಯಿಂದ ಮೇಖ್ರಿ ಸರ್ಕಲ್​​ವರೆಗೆ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದ್ದು, ಇದಕ್ಕಾಗಿ ಟೆಂಡರ್ ಕೂಡ ಆಹ್ವಾನಿಸಿದೆ.

ಬರೋಬ್ಬರಿ 420 ಕೋಟಿ ರೂಪಾಯಿ ವೆಚ್ಚದಲ್ಲಿ 4 ಪಥದ ರೋಟರಿ ಎಲಿವೇಟೆಡ್ ಕಾರಿಡಾರ್ ನಿಮಾರ್ಣಕ್ಕೆ ಟೆಂಡರ್​​ ಆಹ್ವಾನಿಸಲಾಗಿದ್ದು, ಈ ಫ್ಲೈಓವರ್​​ ಸಂಚಾರ ದಟ್ಟಣೆ ವಿಚಾರದಲ್ಲಿ ಗಮನಾರ್ಹ ಸುಧಾರಣೆ ತರುವ ವಿಶ್ವಾಸವನ್ನು ಜಿಬಿಎ ಹೊಂದಿದೆ. ಈ ಸರ್ಕಲ್​​ನಲ್ಲಿ ರೋಟರಿ ರೀತಿಯ ವಿನ್ಯಾಸವಿರಲಿದ್ದು, ಜಯಮಹಲ್ ರಸ್ತೆ ಹಾಗೂ ಯಶವಂತಪುರ ಕಡೆಗೆ ಲೂಪ್ ಮಾಡಲಾಗುತ್ತದೆ. ಸುಮಾರು 1.6 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ಇದಾಗಿರಲಿದೆ. ಇನ್ನು ಯೋಜನೆಯನ್ನು ತ್ವರಿತವಾಗಿ ಆರಂಭಿಸಲು ಬಿಡಿಎ ಮಾರ್ಚ್ 26ರಂದು ಹೊಸ ಟೆಂಡರ್ ಆಹ್ವಾನಿಸಿದೆ. ಕಳೆದ ನಾಲ್ಕು ತಿಂಗಳಲ್ಲಿ ಇದು ಎರಡನೇ ಬಾರಿಕರೆದ ಟೆಂಡರ್ ಆಗಿದ್ದು, 2025ರ ಡಿಸೆಂಬರ್‌ನಲ್ಲಿ ಫ್ಲೈಓವರ್ ಮತ್ತು ಶಾರ್ಟ್ ಟನಲ್ ಯೋಜನೆಗೆ ಸಂಯುಕ್ತ ಪ್ರಸ್ತಾವನೆ ನೀಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿಗರಿಗೆ ಬ್ಯಾಡ್​​ ನ್ಯೂಸ್​; ಸದ್ಯ ಸಾರ್ವಜನಿಕ ಸೇವೆಗೆ ಲಭ್ಯವಾಗಲ್ಲ ಬಹುನಿರೀಕ್ಷಿತ ಈ ಫ್ಲೈಓವರ್​

ಫ್ಲೈಓವರ್‌ನಲ್ಲಿ ಎರಡು ಪ್ರಮುಖ ಡೌನ್‌ರ್ಯಾಂಪ್‌ಗಳು ಇರಲಿದ್ದು, ಬಿಡಿಎ ಅಧಿಕಾರಿಗಳ ಪ್ರಕಾರ ಈ ಫ್ಲೈಓವರ್ ವಿನ್ಯಾಸ ಭವಿಷ್ಯದ ಈಸ್ಟ್-ವೆಸ್ಟ್ ಎಲಿವೇಟೆಡ್ ಕಾರಿಡಾರ್‌ಗೆ ಹೊಂದಿಕೆಯಾಗುವಂತೆ ರೂಪಿಸಲಾಗುತ್ತದೆ. ಇದರಿಂದ ನಗರದ ದೀರ್ಘಕಾಲಿಕ ಸಾರಿಗೆ ಯೋಜನೆಗೆ ಅನುಗುಣವಾಗಿ ಅಭಿವೃದ್ಧಿ ಸಾಧ್ಯವಾಗಲಿದೆ. ಅಲ್ಲದೆ 18 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಈ ಯೋಜನೆಯ ವಿಶೇಷವೆಂದರೆ ಖಾಸಗಿ ಭೂಸ್ವಾಧೀನದ ಅಗತ್ಯವಿಲ್ಲ. ಆದರೆ ಏರ್ ಫೋರ್ಸ್ ಟ್ರೈನಿಂಗ್ ಕಮಾಂಡ್ ಹಾಗೂ ಪ್ಯಾರಾಚೂಟ್ ರೆಜಿಮೆಂಟ್ ಸೇರಿದಂತೆ ಪ್ರಮುಖ ರಕ್ಷಣಾ ಸಂಸ್ಥೆಗಳಿಂದ ಅನುಮತಿ ಅಗತ್ಯವಿದ್ದು, ಅದನ್ನು ಈಗಾಗಲೇ ಪಡೆಯಲಾಗಿದೆ.

ವರದಿ: ಲಕ್ಷ್ಮೀನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡ್ರೋನ್ ದಾಳಿ ವೇಳೆ ಅಮೆರಿಕದ ಯುದ್ಧ ವಿಮಾನದಿಂದ ಹೊರಬಿದ್ದ ಪೈಲಟ್ ಇರಾನ್ ವಶದಲ್ಲಿ?

ಟೆಹ್ರಾನ್, ಏಪ್ರಿಲ್ 3: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ಎಫ್ -35 ಮತ್ತು ಎಫ್ -15ಇ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದು, ಇರಾನ್‌ನಲ್ಲಿ (Iran War) ಅಮೆರಿಕದ ಪೈಲಟ್​ನನ್ನು ಸೆರೆಹಿಡಿಯಲಾಗಿದೆ ಎಂದು ಇರಾನ್ ಮಾಧ್ಯಮ ಇಂದು ವರದಿ ಮಾಡಿದೆ. ಆದರೆ, ಈ ಸುದ್ದಿ ನಿಜವೇ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಐಆರ್‌ಜಿಸಿ ಏರೋಸ್ಪೇಸ್ ಫೋರ್ಸ್ ಡಿಕ್ಕಿ ಹೊಡೆದ ಎಫ್ -35 ಯುದ್ಧ ವಿಮಾನದಿಂದ ಅಮೆರಿಕದ ಪೈಲಟ್ ನೈಋತ್ಯ ಇರಾನ್ ಕಡೆಗೆ ಜಿಗಿದಿದ್ದಾರೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಮೆರಿಕದ ವಿಮಾನದ ವಿನ್ಯಾಸಕ್ಕೆ ಅವಶೇಷಗಳು ಹೊಂದಿಕೆಯಾಗುತ್ತವೆ ಎಂಬ ತಜ್ಞರ ಅಭಿಪ್ರಾಯವನ್ನು ಉಲ್ಲೇಖಿಸಿ ಎಫ್ -15ಇ ಅನ್ನು ಕೂಡ ಹೊಡೆದುರುಳಿಸಲಾಗಿದೆ ಎಂದು ಇರಾನ್ ಇಂಟರ್ನ್ಯಾಷನಲ್ ವರದಿ ಮಾಡಿದೆ. ಅಮೆರಿಕನ್ ಪೈಲಟ್ ಅನ್ನು ಸೆರೆಹಿಡಿಯಲಾಗಿದೆ ಎಂದು ಇರಾನ್ ಸರ್ಕಾರಕ್ಕೆ ಸಂಬಂಧಿಸಿದ ಮೂಲಗಳು ತಿಳಿಸಿವೆ. ಆದರೆ, ಯುಎಸ್ ಸೆಂಟ್ರಲ್ ಕಮಾಂಡ್, ಪೆಂಟಗನ್ ಮತ್ತು ಶ್ವೇತಭವನವು ತಮ್ಮ ಜೆಟ್‌ಗಳನ್ನು ಇರಾನ್ ಹೊಡೆದುರುಳಿಸಲಾಗಿದೆ ಎಂಬ ವರದಿಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: ಇರಾನ್​ನಿಂದ ಅಮೆರಿಕದ ಎರಡನೇ ಎಫ್-35 ಫೈಟರ್ ಜೆಟ್ ಪತನ; ಪೈಲಟ್ ಬದುಕುಳಿದ ಸಾಧ್ಯತೆ ಕಡಿಮೆ

ಕೊಹ್ಗಿಲುಯೆ ಮತ್ತು ಬೋಯರ್-ಅಹ್ಮದ್‌ನಲ್ಲಿರುವ ಬುಡಕಟ್ಟು ಜನರು ಮತ್ತು ಗ್ರಾಮಸ್ಥರು ಸಹ ಪರ್ವತಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಾ ಯುಎಸ್ ಪಡೆಗಳನ್ನು ಹುಡುಕುತ್ತಿದ್ದರು. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಇರಾನಿನ ಭೂಪ್ರದೇಶದಲ್ಲಿ ಅಮೇರಿಕನ್ ಹೆಲಿಕಾಪ್ಟರ್ ಮತ್ತು ಸಿ -130 ಹರ್ಕ್ಯುಲಸ್ ಕೆಳಕ್ಕೆ ಹಾರುತ್ತಿರುವುದನ್ನು ತೋರಿಸುವ ವೀಡಿಯೊಗಳನ್ನು ಐಆರ್‌ಜಿಸಿಗೆ ಸಂಬಂಧಿಸಿದ ಪೇಜ್​ಗಳು ಎಕ್ಸ್‌ನಲ್ಲಿ ಪೋಸ್ಟ್ ಮಾಡಿವೆ.

ಇರಾನ್ ಅಮೆರಿಕದ ಅತ್ಯಂತ ಅಮೂಲ್ಯವಾದ ವಿಮಾನಗಳಲ್ಲಿ ಒಂದಾದ ಮತ್ತು ಅಮೆರಿಕದ ಐದನೇ ತಲೆಮಾರಿನ ಯುದ್ಧ ಹೋರಾಟದ ಸಾಮರ್ಥ್ಯದ ಬೆನ್ನೆಲುಬಾದ US F-35 ಲೈಟ್ನಿಂಗ್ 2 ಅನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡ ಸುಮಾರು 2 ವಾರಗಳ ನಂತರ ಈ ದಾಳಿ ಸಂಭವಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್​ನಿಂದ ಹೈಟೆಕ್ ಟೋಲ್​ಬೂತ್; ಯುಆನ್, ಕ್ರಿಪ್ಟೋದಲ್ಲಿ ಟೋಲ್ ಕಟ್ಟಿರಿ, ಸೀಕ್ರೆಟ್ ಕೋಡ್ ಪಡೆಯಿರಿ

ನವದೆಹಲಿ, ಏಪ್ರಿಲ್ 3: ಗಲ್ಫ್ ರಾಷ್ಟ್ರಗಳಿಂದ ತೈಲ ಪೂರೈಕೆಯ ಸಮುದ್ರ ಮಾರ್ಗದಲ್ಲಿರುವ ಹಾರ್ಮುಜ್ ಜಲಸಂಧಿಗೆ (Hormuz Strait) ಇರಾನ್​ನಿಂದ ತಡೆ ಬಿದ್ದಿದೆ. ಯುಎಇ, ಸೌದಿ, ಬಹರೇನ್ ಸೇರಿದಂತೆ ಹೆಚ್ಚಿನ ಕೊಲ್ಲಿ ದೇಶಗಳು ಅಮೆರಿಕದ ಪರ ಇರುವುದರಿಂದ ಇರಾನ್ ಬಹುತೇಕ ಏಕಾಂಗಿಯಾಗಿ ಹೋರಾಡುತ್ತಿದೆ. ಹಾರ್ಮುಜ್ ಜಲಸಂಧಿಯ ನಿಯಂತ್ರಣ ಹೊಂದಿರುವ ಇರಾನ್, ಅದನ್ನೇ ತನ್ನ ಆಯುಧ ಮತ್ತು ಆದಾಯ ಮೂಲವಾಗಿ ಮಾಡಿಕೊಳ್ಳಲು ಹೊರಟಿದೆ. ಈ ಹಿಂದೆ ಬಂದ ವರದಿಯಲ್ಲಿ ತಿಳಿಸಲಾಗಿದ್ದಂತೆ ಹಾರ್ಮುಜ್ ಜಲಸಂಧಿ ಮೂಲಕ ಹಾದು ಹೋಗುವ ಹಡಗುಗಳಿಂದ ಟೋಲ್ ಸಂಗ್ರಹಿಸುವ ವ್ಯವಸ್ಥೆಯನ್ನು ಇರಾನ್ ಮಾಡುತ್ತಿದೆ. ಇರಾನ್​ನ ಸಂಸದರು ಈ ಸಂಬಂಧ ಒಂದು ಮಸೂದೆಗೆ ಅಂಗೀಕಾರ ನೀಡಿದ್ದು, ಅದು ಜಾರಿ ಕೂಡ ಆಗಿದೆ ಎನ್ನಲಾಗುತ್ತಿದೆ.

ಸೀಕ್ರೆಟ್ ಕೋಡ್ ಮತ್ತು ಚೀನೀ ಕರೆನ್ಸಿಯಲ್ಲಿ ಪಾವತಿ

ಇರಾನ್​ನ ಇಸ್ಲಾಮಿಕ್ ರೆವಲ್ಯೂಶನರಿ ಮಿಲಿಟರಿಗೆ ಸೇರಿದ ಕಂಪನಿಯೊಂದು ಈ ಟೋಲ್ ಅನ್ನು ನಿರ್ವಹಿಸುತ್ತದೆ. ಹಾರ್ಮುಜ್ ಜಲಸಂಧಿ ಮೂಲಕ ಹಾದು ಹೋಗಬೇಕಾದ ಹಡಗುಗಳಿಗೆ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಅಮೆರಿಕ ಮತ್ತು ಇಸ್ರೇಲ್​ಗೆ ಸಂಬಂಧಪಡದ ಹಡಗುಗಳಿಗೆ ಮಾತ್ರ ಅನುಮತಿ ಸಿಗುತ್ತದೆ.

ಇದನ್ನೂ ಓದಿ: ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಹೆಚ್ಚಿಸಲು ಸಿದ್ಧ: ರಷ್ಯಾ ಅಭಯ

ಹಡಗಿನ ಡಾಕ್ಯುಮೆಂಟೇಶನ್ ವಿವರ ಪೂರ್ಣವಾಗಿ ನೀಡಬೇಕು. ಹಡಗಿನ ಮಾಲಿಕತ್ವ, ಯಾವ ದೇಶದ ದ್ವಜ, ಎಲ್ಲಿ ಹೋಗುವುದು, ಸಿಬ್ಬಂದಿ ಯಾರು, ಆಟೊಮೇಟೆಡ್ ಐಡೆಂಟಿಫಿಕೇಶನ್ ಸಿಸ್ಟಂನ (ಎಐಎಸ್) ದತ್ತಾಂಶ ಇತ್ಯಾದಿ ಮಾಹಿತಿಯನ್ನು ಮೊದಲೇ ಸಲ್ಲಿಸಬೇಕು. ಇದನ್ನು ಪರಿಶೀಲಿಸಿ, ಶತ್ರು ದೇಶಗಳಿಗೆ ಸಂಬಂಧಪಡದ ಹಡಗು ಎಂಬುದು ಖಾತ್ರಿಯಾದ ಬಳಿಕವಷ್ಟೇ ಜಲಸಂಧಿಯತ್ತ ಬರಲು ಅನುಮತಿಸಲಾಗುತ್ತದೆ.

ಎಷ್ಟು ಟೋಲ್ ಕಟ್ಟಬೇಕು?

ಹಾರ್ಮುಜ್ ಜಲಸಂಧಿ ದಾಟಿ ಹೋಗಲು ನಿರ್ದಿಷ್ಟ ಹಣವನ್ನು ಶಿಪ್ಪಿಂಗ್ ಕಂಪನಿಗಳು ಇರಾನ್​ಗೆ ಪಾವತಿಸಬೇಕಾಗುತ್ತದೆ. ಒಂದು ಬ್ಯಾರಲ್ ಕಚ್ಛಾ ತೈಲಕ್ಕೆ 1 ಡಾಲರ್​ನಂತೆ ಈ ಟೋಲ್ ಕಟ್ಟಬೇಕು. 500 ಬ್ಯಾರಲ್ ಹೊತ್ತ ಹಡಗು ಇದ್ದರೆ 500 ಡಾಲರ್ ಮೌಲ್ಯದಷ್ಟು ಹಣವನ್ನು ಕಟ್ಟಬೇಕು. ಆದರೆ ಹಣ ಪಾವತಿ ಡಾಲರ್​ನಲ್ಲಿ ಇರಕೂಡದು. ಚೀನಾದ ಯುಆನ್ ಕರೆನ್ಸಿಯಲ್ಲಿ ಪಾವತಿಸಬೇಕು, ಅಥವಾ ಕ್ರಿಪ್ಟೋಕರೆನ್ಸಿಗಳಲ್ಲಾದರೂ ಪಾವತಿಸಬೇಕು ಎಂದು ಇರಾನ್ ತಿಳಿಸಿದೆ. ಹಣ ಪಾವತಿಸಿದ ಬಳಿಕ ಆ ಹಡಗಿಗೆ ರಹಸ್ಯ ಐಡಿ ಕೋಡ್ ನೀಡಲಾಗುತ್ತದೆ. ಅದು ಸಿಕ್ಕಾಗ ಹಡಗಿನಿಂದ ಹೈಫ್ರೀಕ್ವೆನ್ಸಿ ಸಿಗ್ನಲ್ ಹೊರಹೊಮ್ಮುತ್ತದೆ. ಇರಾನ್​ನ ನೌಕಾಪಡೆಯು ಈ ಸಿಗ್ನಲ್ ಹೊಂದಿರುವ ಹಡಗಿನ ಬಳಿ ಹೋಗಿ ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿ ದಾಟುವವರೆಗೂ ರಕ್ಷಣೆ ಒದಗಿಸುತ್ತದೆ.

ಇದನ್ನೂ ಓದಿ: ಏಪ್ರಿಲ್​ನಲ್ಲಿ ಚಿನ್ನ ಸಖತ್ ದುಬಾರಿ? ಕಳೆದ 45 ವರ್ಷದಲ್ಲೆ ಬಂಗಾರಕ್ಕೆ ಗರಿಷ್ಠ ಡಿಮ್ಯಾಂಡ್; 20,000 ರೂಗೆ ಏರುತ್ತಾ ಬೆಲೆ?

ಅಮೆರಿಕದ ಡಾಲರ್ ಪ್ರಾಬಲ್ಯಕ್ಕೆ ವಿರಾಮ

ಇರಾನ್​ನ ಈ ಟೋಲ್ ಬೂತ್ ಯೋಜನೆ ಯಶಸ್ವಿಯಾದರೆ ಅಮೆರಿಕಕ್ಕೆ ಇರಿಸುಮುರುಸಾಗಬಹುದು. ತೈಲ ಮಾರಾಟ ಹಾಗು ಇತರ ಅಂತಾರಾಷ್ಟ್ರೀಯ ವಹಿವಾಟುಗಳು ಡಾಲರ್​ನಲ್ಲೇ ನಡೆಯುವುದರಿಂದ ಅಮೆರಿಕಕ್ಕೆ ಸಿಕ್ಕಾಪಟ್ಟೆ ಅನುಕೂಲ ಸ್ಥಿತಿ ಇದೆ. ಆದರೆ, ಈಗ ಗಲ್ಫ್​ನಿಂದ ತೈಲ ಪಡೆಯುವ ದೇಶಗಳು ಇರಾನ್​ಗೆ ಟೋಲ್ ಕಟ್ಟಲು ಚೀನೀ ಕರೆನ್ಸಿ ಬಳಸಬೇಕಾಗುತ್ತದೆ. ಇದರಿಂದ ಯುಆನ್ ಕರೆನ್ಸಿಯು ಡಾಲರ್​ಗೆ ಪರ್ಯಾಯವಾಗಿ ಬೆಳೆಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಾಖಲೆ ಬರೆಯುತ್ತಾ ‘ರಾಮಾಯಣ’? ಬರೋಬ್ಬರಿ 1000 ಕೋಟಿ ರೂಪಾಯಿಗೆ ಒಟಿಟಿ ಬೇಡಿಕೆ

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ‘ರಾಮಾಯಣ’ (Ramayana) ಈಗ ವ್ಯವಹಾರದ ವಿಚಾರದಲ್ಲಿ ಹೊಸ ಸಂಚಲನ ಮೂಡಿಸಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ರಾಕಿಂಗ್ ಸ್ಟಾರ್ ಯಶ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರದ ಡಿಜಿಟಲ್ ಹಕ್ಕುಗಳಿಗಾಗಿ (OTT Rights) ನಿರ್ಮಾಪಕರು ಭಾರಿ ಮೊತ್ತದ ಬೇಡಿಕೆಯಿಟ್ಟಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ನೂರಲ್ಲ, ಇನ್ನೂರಲ್ಲ.. ಬರೋಬ್ಬರಿ ಸಾವಿರ ಕೋಟಿ ರೂಪಾಯಿ ನಿರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಹೆಸರಾಂತ ಒಟಿಟಿ ಸಂಸ್ಥೆಯೊಂದು ‘ರಾಮಾಯಣ’ ಸಿನಿಮಾದ ಎರಡು ಭಾಗಗಳ ಡಿಜಿಟಲ್ ಹಕ್ಕುಗಳಿಗಾಗಿ ಬರೋಬ್ಬರಿ 700 ಕೋಟಿ ರೂಪಾಯಿಗಳ ಆಫರ್ ನೀಡಿತ್ತು. ಆದರೆ, ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಈ ಬೃಹತ್ ಬಜೆಟ್​ನ ದೃಶ್ಯಕಾವ್ಯಕ್ಕೆ ಕನಿಷ್ಠ 1000 ಕೋಟಿ ರೂಪಾಯಿಗಳ ಡೀಲ್ ಕುದುರಿಸುವುದು ಅವರ ಗುರಿಯಾಗಿದೆ.

ಈ ಚಿತ್ರವು ಸುಮಾರು 4000 ಕೋಟಿ ರೂಪಾಯಿ ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿದೆ ಎಂಬ ಮಾಹಿತಿ. ಹೂಡಿಕೆಯನ್ನು ಹಿಂಪಡೆಯಲು ಚಿತ್ರತಂಡಕ್ಕೆ ಥಿಯೇಟರ್ ಮತ್ತು ಡಿಜಿಟಲ್ ಮೂಲಗಳಿಂದ ದೊಡ್ಡ ಮಟ್ಟದ ಆದಾಯದ ಅಗತ್ಯವಿದೆ. ಆ ಕಾರಣದಿಂದಲೇ ದೊಡ್ಡ ಮೊತ್ತದ ಒಟಿಟಿ ಡೀಲ್ ಸಲುವಾಗಿ ಚಿತ್ರತಂಡ ಕಾಯುತ್ತಿದೆ ಎನ್ನಲಾಗಿದೆ.

ರಾಮಾಯಣ ಸಿನಿಮಾದ ಟೀಸರ್:

ಎಸ್‌ಎಸ್‌ ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ ‘ವಾರಾಣಸಿ’ ಚಿತ್ರಕ್ಕೂ ಇದೇ ರೀತಿಯ ದೊಡ್ಡ ಮೊತ್ತದ ಒಟಿಟಿ ಆಫರ್ ಬಂದಿತ್ತು ಎಂಬ ಸುದ್ದಿಯಿದೆ. ನೆಟ್‌ಫ್ಲಿಕ್ಸ್ ಸಂಸ್ಥೆಯು ಈ ಚಿತ್ರಕ್ಕೆ ಭಾರಿ ಮೊತ್ತದ ಆಫರ್ ನೀಡಿತ್ತು ಎನ್ನಲಾಗಿದ್ದರೂ, ಇನ್ನೂ ಅಧಿಕೃತವಾಗಿ ಯಾವುದೇ ಒಪ್ಪಂದ ನಡೆದಿಲ್ಲ. ‘ವಾರಣಸಿ’ ಚಿತ್ರಕ್ಕಿಂತಲೂ ದೊಡ್ಡ ಮೊತ್ತಕ್ಕೆ ತಮ್ಮ ಸಿನಿಮಾದ ಒಟಿಟಿ ಡೀಲ್ ಕುದುರಬೇಕು ಎಂಬ ಹಠ ‘ರಾಮಾಯಣ’ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಇರಬಹುದು.

ಇದನ್ನೂ ಓದಿ: ರಾಮಾಯಣ ಟೀಸರ್: ‘ಇದಕ್ಕಿಂತ ಆದಿಪುರುಷ್ ಎಷ್ಟೋ ಚೆನ್ನಾಗಿತ್ತು’ ಎಂದ ನೆಟ್ಟಿಗರು

‘ರಾಮಾಯಣ’ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಶೇಷವಾಗಿ ವಿಎಫ್‌ಎಕ್ಸ್ ವಿಚಾರದಲ್ಲಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದು, ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ರಾಜಮೌಳಿ ಅವರ ‘ವಾರಾಣಸಿ’ ಮೊದಲ ಗ್ಲಿಂಪ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

CSK vs PBKS Playing XI: ಟಾಸ್ ಗೆದ್ದ ಪಂಜಾಬ್; ಸಿಎಸ್​ಕೆ ತಂಡದಲ್ಲಿ 1 ಬದಲಾವಣೆ

ಐಪಿಎಲ್ 2026 (IPL 2026) ರ ಏಳನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್ (CSK vs PBKS) ತಂಡವನ್ನು MA ಚಿದಂಬರಂ ಕ್ರೀಡಾಂಗಣದಲ್ಲಿ ಎದುರಿಸಿದೆ. ಕಳೆದ ಸೀಸನ್​ನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಆವೃತ್ತಿಯ ಆರಂಭವನ್ನು ಕಳಪೆಯಾಗಿ ಮಾಡಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಹೀನಾಯ ಸೋಲನ್ನು ಎದುರಿಸಿರುವ ಸಿಎಸ್​ಕೆ, ಬಲಿಷ್ಠ ಪಂಜಾಬ್ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಇತ್ತ ಪಂಜಾಬ್ ಕಿಂಗ್ಸ್ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವು ಸಾಧಿಸಿದ್ದು, ತನ್ನ ಅಜೇಯ ಓಟವನ್ನು ಮುಂದುವರೆಸುವ ಇರಾದೆಯಲ್ಲಿದೆ.

ಟಾಸ್ ಗೆದ್ದ ಪಂಜಾಬ್

ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸಿಎಸ್​ಕೆ ಮೊದಲು ಬ್ಯಾಟಿಂಗ್‌ ಮಾಡಲಿದೆ. ಇದರೊಂದಿಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಖಚಿತವಾಗಿದೆ. ಅದರಂತೆ ಗೆಲುವಿನ ಲಯದಲ್ಲಿರುವ ಪಂಜಾಬ್ ಕಿಂಗ್ ತನ್ನ ಪ್ಲೇಯಿಂಗ್​ 11ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಪ್ರಶಾಂತ್ ವೀರ್ ಪ್ಲೇಯಿಂಗ್​ 11ನಲ್ಲಿ ಸ್ಥಾನ ಪಡೆದಿದ್ದಾರೆ.

ಹೆಡ್ ಟು ಹೆಡ್ ರೆಕಾರ್ಡ್

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ಎರಡೂ ತಂಡಗಳು ಸ್ಪರ್ಧೆಯ ಮೊದಲ ಸೀಸನ್‌ನಿಂದ ಆಡುತ್ತಿವೆ. ಇಲ್ಲಿಯವರೆಗೆ, ಎರಡೂ ತಂಡಗಳು 32 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 16 ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ 16 ಪಂದ್ಯಗಳನ್ನು ಗೆದ್ದಿದೆ. ಆದ್ದರಿಂದ ಈ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಎಂಬ ಕುತೂಹಲವಿದೆ. ಐಪಿಎಲ್ ಇತಿಹಾಸದಲ್ಲಿ, ಎರಡೂ ತಂಡಗಳು ಮೊದಲ ಬಾರಿಗೆ ಏಪ್ರಿಲ್ 19, 2008 ರಂದು ಪರಸ್ಪರ ಮುಖಾಮುಖಿಯಾಗಿದ್ದವು, ಆ ಪಂದ್ಯದಲ್ಲಿ ಚೆನ್ನೈ ಗೆದ್ದಿತ್ತು. ಇನ್ನು ಕೊನೆಯ ಮುಖಾಮುಖಿಯಲ್ಲಿ ಪಂಜಾಬ್ ಗೆಲುವು ಸಾಧಿಸಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್ಕುಮಾರ್ ವೈಶಾಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

CSK vs PBKS IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್(ನಾಯಕ), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಆಯುಷ್ ಮ್ಹಾತ್ರೆ, ಸರ್ಫರಾಜ್ ಖಾನ್, ಶಿವಂ ದುಬೆ, ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಮ್ಯಾಟ್ ಹೆನ್ರಿ, ಖಲೀಲ್ ಅಹ್ಮದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link