All posts by nagaraj11081993

ಕೆಲ ವರ್ಷಗಳ ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ: ಮಾಜಿ ಸಚಿವ ಬೆಳಮಗಿ ಕಣ್ಣೀರು

ಕೆಲ ವರ್ಷಗಳ ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ: ಮಾಜಿ ಸಚಿವ ಬೆಳಮಗಿ ಕಣ್ಣೀರು

ಕಲಬುರಗಿ, (ಏಪ್ರಿಲ್ 03): ದುಷ್ಕರ್ಮಿಗಳು ಫೈನಾನ್ಸ್ ಕಚೇರಿಗೆ ನುಗ್ಗಿ ಕರ್ನಾಟಕದ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅಳಿಯನನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಲಬುರಗಿಯ ಸಿದ್ದೇಶ್ವರ ಬಡಾವಣೆಯ ನಿವಾಸಿ ಅನೀಲ್ ರಾಠೋಡ್ (45)ಕೊಲೆಯಾದ ವ್ಯಕ್ತಿ. ಅನೀಲ್ ರಾಠೋಡ್ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅವರ ಅಳಿಯನಾಗಿದ್ದು, ಕಲಬುರಗಿಯ ಪಿ ಆ್ಯಂಡ್​ ಟಿ ಕಾಲೋನಿಯ ವೆಂಕಟೇಶ್ವರ್​ ಕಾಂಪ್ಲೆಕ್ಸ್​ನಲ್ಲಿ ಫೈನಾನ್ಸ್​ ನಡೆಸುತ್ತಿದ್ದರು. ಆದ್ರೆ, ದುಷ್ಕರ್ಮಿಗಳು ಫೈನ್ಸಾನ್ಸ್ ಕಚೇರಿಗೆ ನುಗ್ಗಿ ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇನ್ನು ಈ ಬಗ್ಗೆ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಮಾತನಾಡಿದ್ದು, ಕೆಲ ವರ್ಷಗಳ ಹಿಂದೆ ನಮ್ಮ ಸಂಬಂಧಿಯನ್ನ ಕಟ್ಟಡ ಮೇಲಿಂದ ತಳ್ಳಿ ಹತ್ಯೆ ಮಾಡಲಾಗಿತ್ತು. ಇದೀಗ ದುಷ್ಕರ್ಮಿಗಳು ಫೈನಾನ್ಸ್‌ಗೆ ನುಗ್ಗಿ ನಮ್ಮ ಅಳಿಯನನ್ನೇ ಹತ್ಯೆ ಮಾಡಿದ್ದು, ಕೂಡಲೇ ಪೊಲೀಸರು ಹಂತಕರನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಫೈನಾನ್ಸ್ ಕಚೇರಿಗೆ ನುಗ್ಗಿ ಮಾಜಿ ಸಚಿವರ ಸಂಬಂಧಿಯ ಹತ್ಯೆ: ಬೆಚ್ಚಿಬಿದ್ದ ಕಲಬುರಗಿ

Source link

ದಾಖಲೆ ಬರೆದ ಬೆಂಗಳೂರಿನ ಕೋರಮಂಗಲ ಆರ್ಟಿಓ ‌ಕಚೇರಿ: ರಾಜ್ಯದಲ್ಲಿ ನಂ 1, ದೇಶದಲ್ಲಿ 3ನೇ ಸ್ಥಾನ

ಬೆಂಗಳೂರು, ಏಪ್ರಿಲ್​ 03: ಸದಾ ಒಂದಿಲ್ಲೊಂದು ನೆಗೆಟಿವ್ ಸುದ್ದಿಯಲ್ಲಿರುವ ಬೆಂಗಳೂರಿನ ಸೆಂಟ್ರಲ್ ಆರ್​ಟಿಓ (Koramangala RTO) ಕಚೇರಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಯಾವುದೇ ನೆಗೆಟಿವ್ ವಿಚಾರವಾಗಿ ಅಲ್ಲದೇ ಹೊಸ ದಾಖಲೆಯೊಂದನ್ನು ಬರೆದಿದೆ. ದೇಶದಲ್ಲೇ ಅತೀ ಹೆಚ್ಚು ಆದಾಯ ಗಳಿಸಿದ 3ನೇ ಅತಿದೊಡ್ಡ ಆರ್​ಟಿಓ ಕಚೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂದಿಲ್ಲೊಂದು ಅಕ್ರಮ, ಹಗರಣ ಆರೋಪದಲ್ಲಿ ಸುದ್ದಿಯಾಗುವ ಬೆಂಗಳೂರಿನ ಸೆಂಟ್ರಲ್ ಕೋರಮಂಗಲ ಆರ್​ಟಿಓ ಇದೀಗ ದೇಶದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದ್ದು, ಈ ಬಾರಿ KA-01 ಕೋರಮಂಗಲ ಆರ್​ಟಿಓ ಆದಾಯ ಗಳಿಸುವುದರಲ್ಲಿ ನಂ-1 ಬಂದಿದೆ. ದೇಶದಲ್ಲೇ ಅತಿಹೆಚ್ಚು ರಾಜಸ್ವ ಸಂಗ್ರಹ ಮಾಡಿದ 3ನೇ ಅತಿದೊಡ್ಡ ಆರ್​ಟಿಓ ಕಚೇರಿ ಎಂಬ ದಾಖಲೆ ಬರೆದಿದೆ.

ಇದನ್ನೂ ಓದಿ; ಮೈಸೂರು ರೈಲ್ವೆ ದಾಖಲೆ: ಸರಕು ಸಾಗಣೆ-ಪಾರ್ಸೆಲ್, ಟಿಕೆಟ್ ಪರಿಶೀಲನೆಯಲ್ಲಿ ಕೋಟ್ಯಂತರ ರೂ ಆದಾಯ

ಇತ್ತ ರಾಜ್ಯದಲ್ಲಿ ಅತಿಹೆಚ್ಚು ಆದಾಯ ಗಳಿಸಿದ ಮೊದಲ KA-01 ಆರ್​ಟಿಓ ಎನ್ನುವ ದಾಖಲೆಯನ್ನು ನಿರ್ಮಿಸಿದೆ. 2025-26 ಆರ್ಥಿಕ ವರ್ಷದಲ್ಲಿ ಕೋರಮಂಗಲ ಆರ್​​ಟಿಓ ಕಚೇರಿ ಬರೋಬ್ಬರಿ 1273 ಕೋಟಿ ರೂ ರಾಜಸ್ವ ಸಂಗ್ರಹ ಮಾಡಿದೆ.

ಯಾವ ಆರ್​​ಟಿಓ ಕಚೇರಿಗೆ ಯಾವ ಸ್ಥಾನ

ಇನ್ನು ದೇಶದಲ್ಲಿ ಮೊದಲ ಸ್ಥಾನವನ್ನು ಮಹಾರಾಷ್ಟ್ರದ ಪುಣೆ ಆರ್​​ಟಿಓ ಪಡೆದುಕೊಂಡು 1900 ಕೋಟಿ ರೂ ಆದಾಯ ಗಳಿಸಿದ್ದಾರೆ. 1500 ಕೋಟಿ ರೂ ರಾಜಸ್ವ ಸಂಗ್ರಹ ಮಾಡುವ ಮೂಲಕ ಮಹಾರಾಷ್ಟ್ರದ ಪಿಂಪ್ರಿ ಆರ್​ಟಿಓ ಕಚೇರಿ ಎರಡನೇ ಸ್ಥಾನ ಪಡೆದುಕೊಂಡಿದೆ. 1273 ಕೋಟಿ ರೂ ಆದಾಯ ಗಳಿಸುವ ಮೂಲಕ ಕೋರಮಂಗಲ ಆರ್​​ಟಿಓ ರಾಜ್ಯದಲ್ಲೇ ಅತಿ ಹೆಚ್ಚು ರಾಜಸ್ವ ಸಂಗ್ರಹ ಮಾಡಿದ ಆರ್​ಟಿಓ ಕಚೇರಿಯಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಮುಂದಾದ ಜಿಬಿಎ: ಎಲ್ಲಿಂದ ಎಲ್ಲಿಗೆ ಸಂಪರ್ಕ?

ದೇಶದಲ್ಲಿ 1100 ಆರ್​​ಟಿಓ ಕಚೇರಿಗಳ ಪೈಕಿ ಕೋರಮಂಗಲ ಆರ್​ಟಿಓ ಕಚೇರಿ 3ನೇ ಸ್ಥಾನ ಪಡೆದುಕೊಂಡಿದೆ. ಫ್ಯಾನ್ಸಿ ನಂಬರ್, ಪರ್ಮಿಟ್, ಎಫ್‌ಸಿ ನವೀಕರಣ, ವಾಹನ ತಪಾಸಣೆ ಸೇರಿದಂತೆ ಹಲವು ರೀತಿಯ ಆರ್​ಟಿಓ ಸೇವೆಗಳಿಂದ ಅತಿಹೆಚ್ಚು ರಾಜಸ್ವ ಗಳಿಸಿದೆ.

ಒಟ್ಟಿನಲ್ಲಿ ಈ ಬಾರಿಯ ಆರ್ಥಿಕ ವರ್ಷದಲ್ಲಿ 1273 ಆದಾಯ ಗಳಿಸುವ ಮೂಲಕ ದೇಶದಲ್ಲೇ ಮೂರನೇ ಸ್ಥಾನ ಪಡೆದಿದ್ದು, ಬರುವ ಆರ್ಥಿಕ ವರ್ಷದಲ್ಲಿ ಎರಡನೇ ಸ್ಥಾನ ಪಡೆಯುವ ಗುರಿ ಹಾಕಿಕೊಂಡಿರುವುದು ವಿಶೇಷ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದಿಂದ ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್

ರವಿ ಶ್ರೀವತ್ಸ ಅವರು ‘ಗ್ಯಾಂಗ್ಸ್ ಆಫ್ ಯುಕೆ’ (Gangs of UK) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಒರಟ ಪ್ರಶಾಂತ್‍, ಪದ್ಮಾ ವಾಸಂತಿ, ಪ್ರವೀಣ್, ಮುನಿ, ಸೋನು ಉಪಾಧ್ಯ, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ಪ್ರಜ್ವಲ್ ಮಸ್ಕಿ, ನವೀನ್, ವಿಕಾಸ್, ಉಮೇಶ್, ಅಮೋಘ್‍ ಮುಂತಾದ ಕಲಾವಿದರು ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಚಿತ್ರದ ಟ್ರೇಲರ್ ಸಖತ್ ಮಾಸ್ ಆಗಿದೆ. ಏಪ್ರಿಲ್ 10ರಂದು ಬಿಡುಗಡೆ ಆಗಲಿರುವ ಈ ಸಿನಿಮಾದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತನಾಡಿದರು. ನಟ ಒರಟ ಪ್ರಶಾಂತ್ (Orata Prashanth) ಅವರ ವೃತ್ತಿಜೀವನದಲ್ಲಿ ಈ ಚಿತ್ರ ಭಿನ್ನವಾಗಿದೆ ಎಂಬುದು ಟ್ರೇಲರ್ ನೋಡಿದರೆ ತಿಳಿಯುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಈ ಸಿನಿಮಾದಿಂದ ಬೇರೊಂದು ಅಧ್ಯಾಯ ಆರಂಭ ಆಗಲಿದೆ ಎಂದು ಪ್ರಶಾಂತ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಜಯ್ ಮಲ್ಯ ಅಥವಾ ಲಲಿತ್ ಮೋದಿ ಪಾತ್ರದಲ್ಲಿ ‘ಧುರಂಧರ್’ ನಟ ಅರ್ಜುನ್ ರಾಮ್​ಪಾಲ್?

‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ ಸಿನಿಮಾಗಳ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಅರ್ಜುನ್ ರಾಮ್​ಪಾಲ್ (Arjun Rampal) ಈಗ ಒಟಿಟಿ ಮೂಲಕ ಅಬ್ಬರಿಸಲು ಸಿದ್ಧರಾಗಿದ್ದಾರೆ. ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಬಿಲಿಯನೇರ್’ (Billionaire) ವೆಬ್ ಸರಣಿಯಲ್ಲಿ ಅರ್ಜುನ್ ರಾಮ್​ಪಾಲ್ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಬಗ್ಗೆ ಈಗ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿದೆ. ಯಾರಿದು ಬಿಲಿಯನೇರ್ ಎಂಬ ಪ್ರಶ್ನೆ ಉದ್ಭವ ಆಗಿದೆ.

ವಿಜಯ್ ಮಲ್ಯ ಅಥವಾ ಲಲಿತ್ ಮೋದಿ ರೀತಿ ಒಬ್ಬ ಪ್ರಭಾವಿ ಉದ್ಯಮಿಯ ಮಹತ್ವಾಕಾಂಕ್ಷೆ, ಅಧಿಕಾರದ ಹಪಾಹಪಿ ಮತ್ತು ಯಶಸ್ಸಿನ ಹಿಂದಿನ ಕರಾಳ ಮುಖವನ್ನು ಈ ಸರಣಿ ಅನಾವರಣಗೊಳಿಸಲಿದೆ. ಆದರೆ, ಈ ಕಥೆ ನಿಜ ಜೀವನದ ವ್ಯಕ್ತಿಗಳಿಂದ ಪ್ರೇರಿತವಾಗಿದೆಯೇ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಆದ್ದರಿಂದ ‘ಬಿಲಿಯನೇರ್’ ವೆಬ್ ಸಿರೀಸ್ ಕೌತುಕ ಮೂಡಿಸಿದೆ.

‘ಕಿಂಗ್ ಆಫ್ ಗುಡ್ ಟೈಮ್ಸ್’ ಎಂದು ಕರೆಸಿಕೊಳ್ಳುತ್ತಿದ್ದ ವಿಜಯ್ ಮಲ್ಯ ಅವರ ವೈಭವೋಪೇತ ಜೀವನ ಶೈಲಿ ಮತ್ತು ನಂತರ ಎದುರಿಸಿದ ಕಾನೂನು ಸಂಕಷ್ಟಗಳಿಗೂ, ಈ ಸರಣಿಯ ಕಥೆಗೂ ಸಾಮ್ಯತೆ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಅದೇ ರೀತಿ, ಐಪಿಎಲ್ ಮೂಲಕ ಕ್ರಿಕೆಟ್ ಜಗತ್ತನ್ನೇ ಬದಲಿಸಿದ ಲಲಿತ್ ಮೋದಿ ಅವರ ಪಾತ್ರದ ಎಳೆಗಳು ಕೂಡ ಈ ಸರಣಿಯಲ್ಲಿ ಇರಲಿವೆ ಎಂಬ ಮಾತು ಕೇಳಿಬರುತ್ತಿದೆ. ಅಧಿಕಾರ, ರಾಜಕಾರಣ ಮತ್ತು ಉದ್ಯಮ ಲೋಕದ ಸಂಘರ್ಷಗಳು ಇವರ ಜೀವನಕ್ಕೆ ಹತ್ತಿರವಾಗಿವೆ ಎನ್ನಲಾಗುತ್ತಿದೆ.

ಈ ಹಿಂದೆ ‘ಸ್ಕ್ಯಾಮ್’ ವೆಬ್ ಸರಣಿಯ ಮೂಲಕ ನೈಜ ಘಟನೆಗಳನ್ನು ರೋಚಕವಾಗಿ ತೆರೆಮೇಲೆ ತಂದಿದ್ದ ಹನ್ಸಲ್ ಮೆಹ್ತಾ ಅವರು, ‘ಬಿಲಿಯನೇರ್’ ಸರಣಿಯಲ್ಲೂ ಅಂತಹದ್ದೇ ಮ್ಯಾಜಿಕ್ ಮಾಡಲಿದ್ದಾರೆ ಎಂಬ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಾಗಿರದೆ, ಹಲವು ಉದ್ಯಮಿಗಳ ಜೀವನದ ಘಟನೆಗಳನ್ನು ಸೇರಿಸಿ ಸಿದ್ಧಪಡಿಸಿದ ಕಾಲ್ಪನಿಕ ಕಥೆಯಾಗಿರುವ ಸಾಧ್ಯತೆಯಿದೆ.

ಇದನ್ನೂ ಓದಿ: ವಯಸ್ಸಲ್ಲಿ 15 ವರ್ಷ ಕಿರಿಯವಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅರ್ಜುನ್ ರಾಮ್​ಪಾಲ್

ಅರ್ಜುನ್ ರಾಮ್ಪಾಲ್ ಅವರು ಈ ಸರಣಿಯಲ್ಲಿ ಅತ್ಯಂತ ಗಂಭೀರವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಕಥೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಸೋಶಿಯಲ್ ಮೀಡಿಯಾದಲ್ಲಿ ‘ಬಿಲಿಯನೇರ್’ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಅರ್ಜುನ್ ರಾಮ್​ಪಾಲ್ ಮತ್ತು ಹನ್ಸಲ್ ಮೆಹ್ತಾ ಅವರ ಈ ಕಾಂಬಿನೇಷನ್ ಆದ್ದರಿಂದ ನಿರೀಕ್ಷೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

CSK vs PBKS Record Alert: ಚೆಪಾಕ್ ಮೈದಾನದಲ್ಲಿ ಇತಿಹಾಸ ಸೃಷ್ಟಿಸಿದ ಆಯುಷ್ ಮ್ಹಾತ್ರೆ

ಚೆನ್ನೈ ಸೂಪರ್ ಕಿಂಗ್ಸ್‌ನ ತವರು ಮೈದಾನವಾದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ ಏಳನೇ ಪಂದ್ಯದಲ್ಲಿ, ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ಪಂಜಾಬ್ ಕಿಂಗ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ಹಾದಿಯಲ್ಲಿ ಅವರು ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಅಂತಿಮವಾಗಿ ಆಯುಷ್ 43 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 73 ರನ್ ಬಾರಿಸಿ ಔಟಾದರು.

ಈ ಅದ್ಭುತ ಇನ್ನಿಂಗ್ಸ್‌ನೊಂದಿಗೆ, ಆಯುಷ್ ಮ್ಹಾತ್ರೆ, ಚೆಪಾಕ್ ಕ್ರೀಡಾಂಗಣದಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 18 ವರ್ಷ 261 ದಿನಗಳಲ್ಲಿ ಈ ಸಾಧನೆ ಮಾಡಿದ ಆಯುಷ್, ಈ ಹಿಂದೆ 21 ವರ್ಷ 148 ದಿನಗಳಲ್ಲಿ ಈ ಸಾಧನೆ ಮಾಡಿದ್ದ ರೈನಾ ಅವರ ದಾಖಲೆಯನ್ನು ಮುರಿದರು.

ಇದರ ಜೊತೆಗೆ 19 ವರ್ಷಕ್ಕೂ ಮೊದಲೇ ಐಪಿಎಲ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್‌ ದಾಖಲಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಇದೀಗ ಆಯುಷ್ ಸೇರಿದ್ದಾರೆ. ಆಯುಷ್ ಇಲ್ಲಿಯವರೆಗೆ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದು, ಇದುವರೆಗೆ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಐಪಿಎಲ್ 2025 ರ ನಂತರ ಪವರ್‌ಪ್ಲೇನಲ್ಲಿ ಕನಿಷ್ಠ 100 ಎಸೆತಗಳನ್ನು ಎದುರಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಆಯುಷ್ ಮ್ಹಾತ್ರೆ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. 183.93 ಸ್ಟ್ರೈಕ್ ರೇಟ್‌ನೊಂದಿಗೆ, ಈ ಪಟ್ಟಿಯಲ್ಲಿ ಆಯುಷ್ ಅಗ್ರಸ್ಥಾನದಲ್ಲಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 34.33 ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫೈನಾನ್ಸ್ ಕಚೇರಿಗೆ ನುಗ್ಗಿ ಮಾಜಿ ಸಚಿವರ ಸಂಬಂಧಿಯ ಹತ್ಯೆ: ಬೆಚ್ಚಿಬಿದ್ದ ಕಲಬುರಗಿ

ಕಲಬುರಗಿ, (ಏಪ್ರಿಲ್ 03): ದುಷ್ಕರ್ಮಿಗಳು ಫೈನಾನ್ಸ್ ಕಚೇರಿಗೆ ನುಗ್ಗಿ ಕರ್ನಾಟಕದ ಮಾಜಿ ಸಚಿವರೊಬ್ಬರ ಸಂಬಂಧಿಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ (Kalaburagi) ನಗರದ ಪಿ ಅಂಡ್ ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ. ಅನೀಲ್ ರಾಠೋಡ್ (45)ಕೊಲೆಯಾದ ವ್ಯಕ್ತಿ. ಈ ಅನಿಲ್ ರಾಠೋಡ್, ಕಲಬುರಗಿಯ ಸಿದ್ದೇಶ್ವರ ಬಡಾವಣೆಯ ನಿವಾಸಿಯಾಗಿದ್ದು, ಪಿ ಆ್ಯಂಡ್​ ಟಿ ಕಾಲೋನಿಯ ವೆಂಕಟೇಶ್ವರ್​ ಕಾಂಪ್ಲೆಕ್ಸ್​ನಲ್ಲಿ ಫೈನಾನ್ಸ್​ ಇಟ್ಟುಕೊಂಡಿದ್ದ. ಮೇಲಾಗಿ ಮಾಜಿ ಸಚಿವ ರೇವು ನಾಯಕ್ ಬೆಳಮಗಿಯ ಸಂಬಂಧಿ. ಆದ್ರೆ, ನಿನ್ನೆ (ಏಪ್ರಿಲ್ 02) ರಾತ್ರಿ ತನ್ನ ಫೈನಾನ್ಸ್​ನಲ್ಲಿ ಕುಳಿತಿದ್ದಾಗ, ಆಟೋದಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ಬಳಿಕ ಮೂವರೂ ಸೇರಿಕೊಂಡು ಮಾರಕಾಸ್ತ್ರಗಳಿಂದ ಅಟ್ಯಾಕ್​ ಮಾಡಿ ಅನಿಲ್​​ನನ್ನ ಬರ್ಬರವಾಗಿ ಕೊಚ್ಚಿ ಕೊಂದು ಎಸ್ಕೇಪ್ ಆಗಿದ್ದಾರೆ. ಕೊಟ್ಟ ಹಣ ವಾಪಸ್​ ಕೇಳಿದ್ದಕ್ಕೆ ಕೊಲೆ ಮಾಡಿದ್ದಾರೆ ಎಂದು ತಂದೆ ಆರೋಪಿಸಿದ್ದಾರೆ.

ಕಲಬುರಗಿಯ ಸಿದ್ದೇಶ್ವರ ಬಡವಾಣೆ ನಿವಾಸಿಯಾಗಿರೋ ಅನಿಲ್ ರಾಠೋಡ್, ಫೈನಾನ್ಸ್ ವ್ಯವಹಾರ ನಡೆದುಕೊಂಡು ಹೋಗುತ್ತಿದ್ದರು. ನಗರದ ಪಿ ಅಂಡ್ ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್ ನಲ್ಲಿ ಫೈನಾನ್ಸ್ ಕಚೇರಿಗೆ ಕಳೆದ ರಾತ್ರಿ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು, ಕಚೇರಿಯಲ್ಲಿ ಕುಂತಿದ್ದ ಅನಿಲ್ ರಾಠೋಡ್ ಜೊತೆ ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ಹೋಗಿದ್ದು, ಈ ವೇಳೆ ಮೂವರು ಸೇರಿಕೊಂಡು ಮಾರಕಾಸ್ತ್ರಗಳಿಂದ ಅನಿಲ್ ರಾಠೋಡ್‌ರನ್ನ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಕತ್ತು ಕೊಯ್ದು ಪತ್ನಿಯನ್ನ ಹತ್ಯೆಗೈದ ಪತಿ: ಬಳಿಕ ಕಾರು ಹಾಯಿಸಿ ವಿಕೃತಿ

ಸಾಲ ಪಡೆದವರೇ ಕೊಂದ್ರಾ?

ಇನ್ನೂ ಹಣಕಾಸಿನ ವಿಚಾರಕ್ಕೆ ನಮ್ಮ ಮಗನನ್ನ ಕೊಲೆ ಮಾಡಿರುವ ಅನುಮಾನ ಇದೆ. ಸಾಲ ಪಡೆದವರೇ ಕೊಲೆ ಮಾಡಿದ್ದಾರೆ ಎಂದು ಮೃತನ ಪೋಷಕರು ಹೇಳಿದ್ದಾರೆ. ಇನ್ನೂ ಅನಿಲ್‌ಗೆ ಜೀವ ಬೆದರಿಕೆ ಇತ್ತು. ಈ ಬಗ್ಗೆ ನಮ್ಮ ಬಳಿಯು ಸಹ ಆತ ಹೇಳಿಕೊಂಡಿದ್ದ. ಆದರೆ ಈ ರೀತಿಯಾಗಿ ಕೊಲೆ ಮಾಡುತ್ತಾರೆ ಎಂದು ನಾವು ಊಹಿಸಿರಲಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಇನ್ನೂ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡುತ್ತಿದ್ದಂತೆಯೇ ಅನಿಲ್ ರಾಠೋಡ್ ಓಡಿಹೋಗಲು ಯತ್ನಿಸಿದ್ದು, ಈ ವೇಳೆ ಫೈನಾನ್ಸ್ ಕಚೇರಿ ಬಾಗಿಲು ಮುಂದೆಯೇ ಕೊಚ್ಚಿ ಹಾಕಿದ್ದಾರೆ. ಇನ್ನೂ ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಂತಕರ ಬಂಧನಕ್ಕೆ ನಗರ ಪೊಲೀಸ್ ಆಯುಕ್ತರು ಮೂರು ವಿಶೇಷ ತಂಡಗಳನ್ನ ರಚಿಸಿದ್ದಾರೆ.

ರೇವುನಾಯಕ್ ಬೆಳಮಗಿ ಹೇಳಿದ್ದೇನು?

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಕೆಲ ವರ್ಷಗಳ ಹಿಂದೆ ನಮ್ಮ ಸಂಬಂಧಿಯನ್ನ ಕಟ್ಟಡ ಮೇಲಿಂದ ತಳ್ಳಿ ಹತ್ಯೆ ಮಾಡಲಾಗಿತ್ತು. ಇದೀಗ ದುಷ್ಕರ್ಮಿಗಳು ಫೈನಾನ್ಸ್‌ಗೆ ನುಗ್ಗಿ ನಮ್ಮ ಅಳಿಯನನ್ನೇ ಹತ್ಯೆ ಮಾಡಿದ್ದು, ಕೂಡಲೇ ಪೊಲೀಸರು ಹಂತಕರನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಈ ಬಗ್ಗೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕವಷ್ಟೇ ಮಾಜಿ ಸಚಿವರ ಅಳಿಯನ ಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.

ಒಟ್ಟಿನಲ್ಲಿ ಕಲಬುರಗಿಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಕೊಲೆಗಳಿಂದ ಸಾರ್ವಜನಿಕರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ

ಪುದುಚೇರಿ, ಏಪ್ರಿಲ್ 3: ಏಪ್ರಿಲ್ 9ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೂ (Assembly Elections 2026) ಮುನ್ನ ಎನ್​ಡಿಎ (NDA)ಗೆ ಬೆಂಬಲ ಕೋರಿ ಪ್ರಧಾನಿ ನರೇಂದ್ರ ಮೋದಿ ಇಂದು ಪುದುಚೇರಿಯಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಪ್ರಧಾನಿ ಮೋದಿಯೊಂದಿಗೆ ಮುಖ್ಯಮಂತ್ರಿ ಎನ್. ರಂಗಸಾಮಿ ಮತ್ತು ಕೇಂದ್ರಾಡಳಿತ ಪ್ರದೇಶದ ಗೃಹ ಸಚಿವ ಎ ನಮಶ್ಶಿವಾಯಂ ಕೂಡ ಭಾಗವಹಿಸಿದ್ದರು. ಸುಮಾರು 2 ಕಿಲೋಮೀಟರ್ ದೂರ ಭವ್ಯ ರೋಡ್ ಶೋ ನಡೆಯಿತು.

ಭಾರತೀಯ ಜನತಾ ಪಕ್ಷ (BJP) ಮತ್ತು ಅಖಿಲ ಭಾರತ ಎನ್​ಆರ್​ ಕಾಂಗ್ರೆಸ್ (AINRC) ಧ್ವಜಗಳನ್ನು ಬೀಸುತ್ತಾ ಜನರು ರೋಡ್ ಶೋ ನೋಡಲು ಜಮಾಯಿಸಿದ್ದರು. ಪ್ರಧಾನಿ ಮೋದಿ ಪುದುಚೇರಿಗೆ ಆಗಮಿಸಿದಾಗ ಬಿಜೆಪಿ ಬೆಂಬಲಿಗರಿಂದ ಅದ್ದೂರಿ ಸ್ವಾಗತ ದೊರೆಯಿತು. ಅನೇಕರು ‘ಜೈ ಶ್ರೀ ರಾಮ್’ ಮತ್ತು ‘ಭಾರತ್ ಮಾತಾ ಕಿ ಜೈ’ ಮುಂತಾದ ಘೋಷಣೆಗಳನ್ನು ಕೂಗಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ತವ್ಯ ನಿರತ ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌

ಬಳ್ಳಾರಿ, ಏಪ್ರಿಲ್​ 03: ಕರ್ತವ್ಯ ನಿರತ ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಫುಟ್ಪಾತ್ ಮೇಲೆ ಇದ್ದ ಶೆಡ್ ತೆರವು ವಿಳಂಬ‌ ಹಿನ್ನೆಲೆ ಬಳ್ಳಾರಿ ಪಾಲಿಕೆಯ 39ನೇ ವಾರ್ಡ್​ನ ಕಾಂಗ್ರೆಸ್ ಸದಸ್ಯ ವಿ. ಕುಬೇರ, ಪಾಲಿಕೆಯ ಎಇಇ ವೀರೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಕಮಿಷನರ್​ ಮಾತನಾಡಿದ್ದು, ಸಾರ್ವಜನಿಕ ಪ್ರತಿನಿಧಿಗಳು ಗೌರವ ಕಾಪಾಡಿಕೊಳ್ಳದೆ ಇಂತಹ ಅಮಾನವೀಯ ಕೃತ್ಯ ನಡೆಸಿರುವುದು ಖಂಡನೀಯ ಎಂದಿದ್ದಾರೆ. ಘಟನೆ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಡುಗಡೆಗೆ ಸಿದ್ಧವಾಯ್ತು ‘ಮೃತ್ಯುದೇವತೆ’ ಸಿನಿಮಾ: ಏನು ಈ ಚಿತ್ರದ ಥೀಮ್?

ಶೀಘ್ರದಲ್ಲೇ ಬಿಡುಗಡೆ ಆಗಲಿರುವ ‘ಮೃತ್ಯದೇವತೆ’ (Mruthyu Devathe) ಸಿನಿಮಾದಲ್ಲಿ ಸಾರಿಕಾ, ವಿನಯಾ ಪ್ರಸಾದ್‍, ನವೀನ್‍ ಮಹದೇವ, ಹಿಮಶ್ರೀ, ಡಯಾನಾ, ಸೂರ್ಯ, ಪವನ್‍, ವರ್ಷಿತಾ, ಮಾಹಿನ್‍ ಕುಬೇರ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ಛಾಯಾಗ್ರಹಣ, ಶಿವಪ್ರಸಾದ್‍ ಸಂಗೀತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ‘ಮೃತ್ಯದೇವತೆ’ ಚಿತ್ರಕ್ಕೆ ನವೀನ್‍ ಮಹದೇವ ಅವರು ನಿರ್ದೇಶನ ಮಾಡಿದ್ದಾರೆ. ಅವರೇ ಕಥೆ-ಚಿತ್ರಕಥೆ ಬರೆದು ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ.

ರಘು ಅವರ ನೃತ್ಯ ನಿರ್ದೇಶನ, ಅಲ್ಟಿಮೇಟ್‍ ಶಿವು ಮತ್ತು ಚಿಟ್ಟ ಜಾಧವ್‍ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ವಿಕ್ರಮಾದಿತ್ಯ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ಸಿನಿಮಾವನ್ನು ನವೀನ್‍ ಮಹದೇವ್‍ ಅವರ ಪತ್ನಿ ಸರಸ್ವತಿ ಅವರು ‘ವರ್ಷಿತಾ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಮಾಡಿದ್ದಾರೆ. ಚಿತ್ರದ ಕೆಲಸಗಳು ಪೂರ್ಣವಾಗಿ ಮುಗಿದಿದೆ. ಸೆನ್ಸಾರ್ ಪ್ರಕ್ರಿಯೆ ಬಾಕಿ ಇದೆ.

‘ಮೃತ್ಯದೇವತೆ’ ಸಿನಿಮಾದ ‘ಕಾಳಿ’ ಮತ್ತು ‘ಮಹದೇವ’ ಹಾಡುಗಳ ಜೊತೆ ಟ್ರೇಲರ್ ಸಹ ಬಿಡುಗಡೆ ಆಗಿದೆ. ಕೆ. ರಮೇಶ್‍ ಅವರು ಟ್ರೇಲರ್ ಬಿಡುಗಡೆ ಮಾಡಿದರೆ, ಶ್ರೀನಿವಾಸ್‍ ಅವರು ‘ಮಹಾದೇವ’ ಹಾಡನ್ನು ರಿಲೀಸ್ ಮಾಡಿದರು. ಹಿರಿಯ ನಟಿ ವಿನಯಾ ಪ್ರಸಾದ್‍ ಅವರು ‘ಕಾಳಿ’ ಹಾಡಿನ ಮೇಕಿಂಗ್‍ ವೀಡಿಯೋ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಈ ವೇಳೆ ನಿರ್ದೇಶಕ ನವೀನ್‍ ಮಹಾದೇವ್‍ ಅವರು ಮಾತನಾಡಿದರು. ‘ಹೆಣ್ಮಕ್ಕಳು ಬುದ್ಧಿವಂತರಾದರೂ, ಓದಿಕೊಂಡಿದ್ದರೂ ಕೆಲವೊಮ್ಮೆ ಗೊತ್ತಿಲ್ಲದೆ ಯಾವುದೋ ಬಲೆಗೆ ಬೀಳುತ್ತಾರೆ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ತೊಂದರೆ ಅತಿರೇಕಕ್ಕೆ ಹೋದಾಗ ಹುಡುಗಿ ಮೃತ್ಯದೇವತೆ ಅವತಾರ ತಾಳುತ್ತಾಳೆ. ಅದೇ ಈ ಚಿತ್ರದ ಕಥಾವಸ್ತು. ಡಾ. ರಾಜ್​ಕುಮಾರ್‍ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ:

ನಟಿ ಸಾರಿಕಾ ಅವರು ಈ ಚಿತ್ರದಲ್ಲಿ ಆರತಿ ಎಂಬ ಪಾತ್ರ ಮಾಡಿದ್ದಾರೆ. ಮೊದಲ ಬಾರಿಗೆ ಫೈಟಿಂಗ್‍ ಮಾಡಿರುವ ಖುಷಿ ಅವರಿಗೆ ಇದೆ. ವಿನಯಾ ಪ್ರಸಾದ್‍ ಜೊತೆ ಕೆಲಸ ಮಾಡಿ ಬಹಳಷ್ಟು ಕಲಿತಿರುವುದಾಗಿ ಅವರು ಹೇಳಿದ್ದಾರೆ. ಚಿತ್ರತಂಡದ ಶ್ರಮ ಮತ್ತು ಒಗ್ಗಟ್ಟನ್ನು ವಿನಯಾ ಪ್ರಸಾದ್ ಅವರು ಹೊಗಳಿದರು. ಈ ಸಿನಿಮಾದಲ್ಲಿ ನಟಿ ಹಿಮಶ್ರೀ ಅವರು ಮೇಕಪ್ ಇಲ್ಲದೇ ಅಭಿನಯಿಸಿದ್ದಾರೆ. ಹಳ್ಳಿ ಹುಡುಗಿಯ ಪಾತ್ರವನ್ನು ಅವರು ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

CSK vs PBKS: ಏಳರಿಂದ ಮೇಲೇಳದ ಸಂಜು ಸ್ಯಾಮ್ಸನ್

Source link