ಸೆನ್ಸಾರ್ ನಿಯಮ ಉಲ್ಲಂಘನೆ: ‘ಮಾಲಿವುಡ್ ಟೈಮ್ಸ್’ ಚಿತ್ರತಂಡದ ವಿರುದ್ಧ ಎಫ್‌ಐಆರ್ ದಾಖಲು – Kannada News | FIR against Mollywood Times movie makers after CBFC Censor Violations Unapproved Content Screening
ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ್ದ ದೃಶ್ಯಗಳನ್ನು ಚಿತ್ರಮಂದಿರಗಳಲ್ಲಿ ಅಕ್ರಮವಾಗಿ ಪ್ರದರ್ಶಿಸಿದ ಆರೋಪದ ಮೇಲೆ ‘ಮಾಲಿವುಡ್ ಟೈಮ್ಸ್’ (Mollywood Times) ಮಲಯಾಳಂ ಸಿನಿಮಾದ ನಿರ್ಮಾಪಕರು, ನಿರ್ದೇಶಕರು ಮತ್ತು ವಿತರಕರ ವಿರುದ್ಧ ಕೇರಳ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಪ್ರಾದೇಶಿಕ ಕಚೇರಿ ನೀಡಿದ ಅಧಿಕೃತ ದೂರು ಆಧರಿಸಿ ತಿರುವಲ್ಲಂ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ನಂತರ, ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಸಿನಿಮಾದ ಆವೃತ್ತಿಯಲ್ಲಿ ಮಾರ್ಪಾಡು ಮಾಡಿ, ಅನುಮೋದನೆ…