All posts by nagaraj11081993

Khan Sir: ಬಿಹಾರದ ‘ಖಾನ್ ಸರ್’ಗೆ ದೊಡ್ಡ ರಿಲೀಫ್, ಗುಂಡಿನ ದಾಳಿ ಪ್ರಕರಣದಲ್ಲಿ ಫೈಸಲ್ ಖಾನ್ ಬಂಧನಕ್ಕೆ ಪಾಟ್ನಾ ನ್ಯಾಯಾಲಯ ತಡೆ – Kannada News

ಪಾಟ್ನಾ, ಜೂನ್ 09: ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿರುವ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಹಾಗೂ ಶಿಕ್ಷಣ ತಜ್ಞ ಫೈಸಲ್ ಖಾನ್ ( ಖಾನ್ ಸರ್) ಅವರಿಗೆ ಪಾಟ್ನಾ ನ್ಯಾಯಾಲಯದಿಂದ ಸಾಮಾಧಾನ ಸಿಕ್ಕಿದೆ. ಪಾಟ್ನಾದ ಕೋಚಿಂಗ್ ಇನ್‌ಸ್ಟಿಟ್ಯೂಟ್ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು, ಖಾನ್ ಸರ್ ಬಂಧನಕ್ಕೆ ತಕ್ಷಣವೇ ಮಧ್ಯಂತರ ತಡೆ ನೀಡಿದೆ ಮತ್ತು ಅವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ನ್ಯಾಯಾಲಯದ ಈ ನಿರ್ಧಾರವು ಖಾನ್ ಸರ್ ಅವರ ಅಭಿಮಾನಿಗಳು ಹಾಗೂ ವಿದ್ಯಾರ್ಥಿ ವಲಯದಲ್ಲಿ ಭಾರಿ ಹರ್ಷವನ್ನು ತಂದಿದೆ. ಜೂನ್ 6 ರಂದು ಪಾಟ್ನಾ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಜೂನ್ 8ರಂದು ನಡೆದಿತ್ತು.

ವಿಚಾರಣೆಯ ಸಮಯದಲ್ಲಿ ಖಾನ್ ಸರ್ ಪರ ವಕೀಲರು ಅತ್ಯಂತ ಬಲವಾದ ವಾದ ಮಂಡಿಸಿದರು. ಕೋಚಿಂಗ್ ಇನ್‌ಸ್ಟಿಟ್ಯೂಟ್ ಬಳಿ ನಡೆದ ಗುಂಡಿನ ಘಟನೆಗೂ ಫೈಸಲ್ ಖಾನ್ ಅವರಿಗೂ ಯಾವುದೇ ನೇರ ಸಂಬಂಧವಿಲ್ಲ. ಅವರು ಯಾವುದೇ ಕ್ರಿಮಿನಲ್ ಕೃತ್ಯ ಎಸಗಿಲ್ಲ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ಅವರನ್ನು ಈ ಪ್ರಕರಣದಲ್ಲಿ ಸಂಪೂರ್ಣವಾಗಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.

ಮತ್ತಷ್ಟು ಓದಿ: Khan Sir: ಬಸ್ಸಿಗೆ ದುಡ್ಡಿಲ್ಲದೆ ಊರಿಗೆ ನಡೆದು ಹೋಗಿದ್ದ ಖಾನ್ ಸರ್, 107 ಕೋಟಿ ರೂ ತಿರಸ್ಕರಿಸಿದ ಕಥೆ

ಪಾಟ್ನಾದ ಕಡಮ್‌ಕುವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೋಚಿಂಗ್ ಇನ್‌ಸ್ಟಿಟ್ಯೂಟ್ ಒಂದರ ವಿವಾದದ ವೇಳೆ ನಡೆದ ಗುಂಡಿನ ಚಕಮಕಿಯ ವೈರಲ್ ವೀಡಿಯೊದ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆದರೆ, ಪೊಲೀಸ್ ತನಿಖೆಯಲ್ಲೇ ಸ್ಪಷ್ಟವಾಗಿರುವಂತೆ, ಈ ಗುಂಡಿನ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದವರು ಇನ್‌ಸ್ಟಿಟ್ಯೂಟ್‌ಗೆ ಸಂಬಂಧಿಸಿದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು (ಭದ್ರತಾ ಸಿಬ್ಬಂದಿ). ಆ ಇಬ್ಬರೂ ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಲೆಮರೆಸಿಕೊಂಡಿದ್ದ ಖಾನ್ ಸರ್‌ಗೆ ಈಗ ಆಡಳಿತಾತ್ಮಕ ರಕ್ಷಣೆ
ವಿವಾದದ ನಂತರ ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಆತಂಕದಿಂದಾಗಿ ಖಾನ್ ಸರ್ ಕಳೆದ ಕೆಲವು ದಿನಗಳಿಂದ ಪಾಟ್ನಾದಿಂದ ಹೊರಗಿದ್ದು, ಕಾನೂನಾತ್ಮಕ ಪ್ರಕ್ರಿಯೆಗಳ ಕಡೆ ಗಮನ ಹರಿಸಿದ್ದರು. ಪಾಟ್ನಾ ಎಸ್‌ಎಸ್‌ಪಿ ಕಾರ್ತಿಕ್ ಶರ್ಮಾ ನೇರ ಉಸ್ತುವಾರಿಯಲ್ಲಿ ಪೊಲೀಸರು ದಾಳಿಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲೇ, ನ್ಯಾಯಾಲಯವು ಮಧ್ಯಸ್ಥಿಕೆ ವಹಿಸಿ ಖಾನ್ ಸರ್ ಅವರ ಘನತೆ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ.

ನ್ಯಾಯಾಲಯದ ಈ ಪರಿಹಾರದ ಆದೇಶದೊಂದಿಗೆ ಖಾನ್ ಸರ್ ಅವರ ಬಂಧನದ ಭೀತಿ ಸಂಪೂರ್ಣವಾಗಿ ದೂರವಾಗಿದೆ. ಮುಂದಿನ ವಿಚಾರಣೆಯಲ್ಲಿ ಪೊಲೀಸ್ ತನಿಖಾ ವರದಿಯ ವಿವರವಾದ ಪರಿಶೀಲನೆ ನಡೆಯಲಿದ್ದು, ಸತ್ಯಕ್ಕೆ ಜಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಇದರಿಂದಾಗಿ ಖಾನ್ ಸರ್ ಅವರು ಶೀಘ್ರದಲ್ಲೇ ಮರಳಿ ತರಗತಿಗಳಿಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಎಂದಿನಂತೆ ಮಾರ್ಗದರ್ಶನ ನೀಡಲು ಹಾದಿ ಸುಗಮವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

8 ತಿಂಗಳ ಬಳಿಕ ಕಲಬುರಗಿ-ಬೆಂಗಳೂರು ವಿಮಾನ ಸಂಚಾರ ನಾಳೆಯಿಂದ ಆರಂಭ – Kannada News

ಕಲಬುರಗಿ ವಿಮಾನ ನಿಲ್ದಾಣImage Credit source: tv9

ಕಲಬುರಗಿ, ಜೂನ್ 9: ಕಲಬುರಗಿ (Kalaburagi) ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಚರಿಸುವ ವಿಮಾನ ಪ್ರಯಾಣಿಕರಿಗೆ ಕೊನೆಗೂ ಸಂತಸದ ಸುದ್ದಿ ಸಿಕ್ಕಿದೆ. ಕಳೆದ 8 ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ-ಬೆಂಗಳೂರು ನಡುವಿನ ವಿಮಾನ ಸೇವೆ ಜೂನ್ 10ರಿಂದ (ನಾಳೆಯಿಂದ) ಅಧಿಕೃತವಾಗಿ ಪುನರಾರಂಭಗೊಳ್ಳಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಕಿಶೋರ್ ಕಿಲ್ಲಂಪಳ್ಳಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಆರ್ಥಿಕ ನೆರವು ವಿಸ್ತರಿಸಿದ ಬೆನ್ನಲ್ಲೇ ಸ್ಟಾರ್ ಏರ್ (Star Air) ಸಂಸ್ಥೆಯು ವಾರದ ಏಳೂ ದಿನಗಳೂ ಈ ಮಾರ್ಗದಲ್ಲಿ ವಿಮಾನ ಯಾನ ಸೇವೆ ನೀಡಲು ಮುಂದೆ ಬಂದಿದೆ.

ಮುಖ್ಯಾಂಶಗಳು

  • ಜೂನ್ 10ರಿಂದ ವಿಮಾನ ಸೇವೆ ಪುನರಾರಂಭ.
  • ವಾರದ ಏಳೂ ದಿನ ಸ್ಟಾರ್ ಏರ್ ಸಂಚಾರ.
  • ರನ್‌ವೇ ನವೀಕರಣ, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ.

ಕಲಬುರಗಿ ಬೆಂಗಳೂರು ವಿಮಾನ ಸಂಚಾರದ ಟೈಮಿಂಗ್ಸ್

ಈ ಎರಡು ನಗರಗಳ ನಡುವೆ ಸ್ಟಾರ್ ಏರ್ ಸಂಸ್ಥೆಯ 76 ಆಸನಗಳ ಸಾಮರ್ಥ್ಯದ ‘ಎಂಬ್ರೇಯರ್ 175 (E175)’ ಅತ್ಯಾಧುನಿಕ ವಿಮಾನ ಸಂಚರಿಸಲಿದೆ. ಪ್ರತಿದಿನ ಬೆಳಗ್ಗೆ 6:30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನವು 7:40ಕ್ಕೆ ಕಲಬುರಗಿ ತಲುಪಲಿದೆ. ತದನಂತರ 30 ನಿಮಿಷಗಳ ಬಿಡುವಿನ ನಂತರ, ಬೆಳಗ್ಗೆ 8:10ಕ್ಕೆ ಕಲಬುರಗಿಯಿಂದ ಹೊರಟು ಬೆಂಗಳೂರಿಗೆ ವಾಪಸ್ ಆಗಲಿದೆ. ಈ ಮುಂಜಾನೆಯ ಸಮಯದ ಸೇವೆಯು ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ತುರ್ತು ಕೆಲಸದ ನಿಮಿತ್ತ ರಾಜಧಾನಿಗೆ ತೆರಳುವ ಸಾರ್ವಜನಿಕರಿಗೆ ಭಾರಿ ಅನುಕೂಲ ಕಲ್ಪಿಸಲಿದೆ.

8 ತಿಂಗಳ ಸುದೀರ್ಘ ಕಾಯುವಿಕೆಗೆ ತೆರೆ

ಕಲಬುರಗಿ ಮತ್ತು ಬೆಂಗಳೂರು ನಡುವೆ ಕೊನೆಯ ವಿಮಾನ ಸಂಚಾರ 2025 ರ ಅಕ್ಟೋಬರ್ 8 ರಂದು ಸಂಚರಿಸಿತ್ತು. ಆ ಬಳಿಕ ವಿಮಾನ ನಿಲ್ದಾಣದ ಸೇವೆ ಕೇವಲ ಹೆಲಿಕಾಪ್ಟರ್‌ಗಳು ಮತ್ತು ವಿಶೇಷ ಚಾರ್ಟರ್ಡ್ ವಿಮಾನಗಳಿಗಷ್ಟೇ ಸೀಮಿತವಾಗಿತ್ತು. ಎರಡು ವಾರಗಳ ಹಿಂದಷ್ಟೇ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ತಾಂತ್ರಿಕ ಸಿದ್ಧತೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ವಿಮಾನ ಸಂಚಾರ ಇಲ್ಲದಿದ್ದರೂ ನಿಲ್ದಾಣದ 3 ಕಿಲೋಮೀಟರ್ ಉದ್ದದ ರನ್‌ವೇಯನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಸುತ್ತಮುತ್ತಲಿನ 9 ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಿ ಬೀದಿದೀಪಗಳನ್ನು ಅಳವಡಿಸಲಾಗಿದೆ.

ವಿಮಾನ ನಿಲ್ದಾಣಕ್ಕೆ ವಿಶೇಷ ಬಸ್ ಸೇವೆ ಹಾಗೂ ‘ಫ್ಲೈಬ್ರರಿ’!

ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಕಲಬುರಗಿ ನಗರದಿಂದ ಮುಂಜಾನೆ 5:30ಕ್ಕೆ ಹಾಗೂ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:15ಕ್ಕೆ ವಿಶೇಷ ಬಸ್ ಸೌಕರ್ಯ ಕಲ್ಪಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) ಕೋರಲಾಗಿದೆ. ಇದರೊಂದಿಗೆ ಪ್ರಯಾಣಿಕರ ಜ್ಞಾನಾರ್ಜನೆಗಾಗಿ ವಿಮಾನ ನಿಲ್ದಾಣದಲ್ಲಿ ‘ಫ್ಲೈಬ್ರರಿ (ಗ್ರಂಥಾಲಯ)’ ಸೌಲಭ್ಯವನ್ನು ಕೂಡ ಆರಂಭಿಸಲಾಗುತ್ತಿದೆ.

ಇದನ್ನೂ ಓದಿ: ಆರೇ ವರ್ಷಕ್ಕೇ ಕಲಬುರಗಿ ಬೆಂಗಳೂರು ವಿಮಾನ ಸಂಚಾರ ಬಂದ್‌! ಸ್ತಬ್ಧವಾಯ್ತು ಕಲಬುರಗಿ ವಿಮಾನ ನಿಲ್ದಾಣ

2020 ರಿಂದ 2025 ರ ಅವಧಿಯಲ್ಲಿ ಈ ಮಾರ್ಗದಲ್ಲಿ ಒಟ್ಟು 5,792 ಬಾರಿ ವಿಮಾನ ಸಂಚಾರ ನಡೆದಿದ್ದು, 2.83 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಸದ್ಯ ಸ್ಥಳೀಯರಿಂದ ಮುಂಬೈ, ದೆಹಲಿ, ತಿರುಪತಿ ಹಾಗೂ ಗೋವಾ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸುವಂತೆ ಬೇಡಿಕೆ ಕೇಳಿಬಂದಿದ್ದು, ವಿಮಾನಯಾನ ಸಂಸ್ಥೆಗಳು ಮುಂದೆ ಬಂದರೆ ಆ ಮಾರ್ಗಗಳಲ್ಲೂ ಸೇವೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Visakhapatnam Tragedy: ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು, ಹೆಚ್​ಡಿಕೆ ಭೇಟಿ – Kannada News

ವಿಶಾಖಪಟ್ಟಣಂ, ಜೂನ್ 09: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಭೀಕರ ದುರಂತ ಸಂಭವಿಸಿದೆ. ಕರಗಿದ ಕಬ್ಬಿಣವನ್ನು ಸಾಗಿಸುತ್ತಿದ್ದ ಲ್ಯಾಡಲ್ ಸ್ಫೋಟಗೊಂಡ ಪರಿಣಾಮ ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಘಟನೆಯು ಕಂಟಿನ್ಯೂಯಸ್ ಕ್ಯಾಸ್ಟಿಂಗ್ ಯಂತ್ರದ ಕಾರ್ಯಾಚರಣೆಯ ಸಂದರ್ಭದಲ್ಲಿ ನಡೆದಿದೆ. ಇಪ್ಪತ್ತೆರಡು ಲ್ಯಾಡಲ್‌ಗಳ ಕಾರ್ಯಾಚರಣೆ ಮುಗಿದ ನಂತರ, ಮುಂದಿನ ಲ್ಯಾಡಲ್ ಅನ್ನು ಸೇರಿಸುವಾಗ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಸಮಯದಲ್ಲಿ, ಲ್ಯಾಡಲ್‌ನ ಮೇಲ್ಭಾಗದಿಂದ ಹಠಾತ್ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಬಿಸಿ ಲೋಹ ಚೆಲ್ಲಿದೆ ಮತ್ತು ಕ್ರೇನ್‌ಗೂ ಹಾನಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಲೋಹದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸ್ಲೈಡ್ ಗೇಟ್ ವ್ಯವಸ್ಥೆಯಲ್ಲಿನ ವೈಫಲ್ಯವು ಈ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ತನಿಖೆ ನಡೆಯುತ್ತಿದ್ದು, ದುರಂತಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚುವ ಪ್ರಯತ್ನ ಸಾಗಿದೆ. ಕಾರ್ಮಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭರ್ಜರಿ ಬೌಲಿಂಗ್, ಸಿಡಿಲಬ್ಬರದ ಬ್ಯಾಟಿಂಗ್: ಅರ್ಜುನ್ ತೆಂಡೂಲ್ಕರ್ ಮಿಂಚಿಂಗ್! – Kannada News

ಮುಂಬೈ ಟಿ20 ಲೀಗ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಕ್ಸ್ ಅಂಧೇರಿ  ಹಾಗೂ ನಮೋ ಬಾಂದ್ರಾ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್ಕ್ಸ್ ಅಂಧೇರಿ ತಂಡಕ್ಕೆ ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ಅತ್ಯುತ್ತಮ ಆರಂಭ ಒದಗಿಸಿದ್ದರು.

ಪಂದ್ಯದ ಮೊದಲ ಓವರ್‌ನಲ್ಲೇ ಎರಡು ಪ್ರಮುಖ ವಿಕೆಟ್ ಕಿತ್ತ ಅರ್ಜುನ್ ಬಾಂದ್ರಾ ಬ್ಲಾಸ್ಟರ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಈ ಆಘಾತದಿಂದ ಪಾರಾಗಲು ಬ್ಲಾಸ್ಟರ್ಸ್​ ಪಡೆ ಪರದಾಡಬೇಕಾಯಿತು. ಪರಿಣಾಮ 20 ಓವರ್​ಗಳಲ್ಲಿ ಕೇವಲ 144 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.

ಈ ಪಂದ್ಯದಲ್ಲಿ 3 ಓವರ್​ಗಳನ್ನು ಎಸೆದ ಅರ್ಜುನ್ ತೆಂಡೂಲ್ಕರ್ ಒಂದು ಓವರ್ ಮೇಡನ್ ಮಾಡಿದ್ದರು. ಅಲ್ಲದೆ ಮೂರು ಓವರ್​​ಗಳಲ್ಲಿ ನೀಡಿದ್ದು ಕೇವಲ 11 ರನ್​ಗಳು ಮಾತ್ರ. ಹಾಗೆಯೇ ಈ  3 ವಿಕೆಟ್ ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದರು.

ಬ್ಯಾಟಿಂಗ್​ನಲ್ಲೂ ಮಿಂಚಿಂಗ್:

145 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಅಂಧೇರಿ ತಂಡಕ್ಕೆ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲೂ ಆಸರೆಯಾದರು. ಈ ಬಾರಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅರ್ಜುನ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಅಲ್ಲದೆ ಯುವ ದಾಂಡಿಗ ಮುಶೀರ್ ಖಾನ್ (54*) ಅವರ ಜೊತೆಗೂಡಿ ಎರಡನೇ ವಿಕೆಟ್‌ಗೆ 116 ರನ್‌ಗಳ ಅಜೇಯ ಜೊತೆಯಾಟವಾಡಿದರು. ಈ ಮೂಲಕ ಕೇವಲ 13.5 ಓವರ್‌ಗಳಲ್ಲೇ ತಂಡವನ್ನು ಗೆಲುವಿನ ದಡ ಸೇರಿಸಿ ಆರ್ಕ್ಸ್ ಅಂಧೇರಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

ಅರ್ಜುನ್ ಆಲ್​ರೌಂಡರ್:

  • ಬೌಲಿಂಗ್​ನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಅರ್ಜುನ್ ತೆಂಡೂಲ್ಕರ್ 3 ಓವರ್​ಗಳಲ್ಲಿ ಕೇವಲ 11 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದರು.
  • ಬ್ಯಾಟಿಂಗ್​ನಲ್ಲಿ 34 ಎಸೆತಗಳನ್ನು ಎದುರಿಸಿದ ಅರ್ಜುನ್, 5 ಭರ್ಜರಿ ಸಿಕ್ಸರ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 66 ರನ್ ಬಾರಿಸಿದ್ದರು.
  • ಈ ಭರ್ಜರಿ ಆಲ್​ರೌಂಡರ್ ಪ್ರದರ್ಶನಕ್ಕೆ ಅರ್ಜುನ್ ತೆಂಡೂಲ್ಕರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 3,542 ಕೋಟಿ ರೂ! ಕಿಂಗ್​​ ಖಾನ್​ನ ಹಿಂದಿಕ್ಕಿದ ಕಿಂಗ್ ಕೊಹ್ಲಿ

ಐಪಿಎಲ್​ನಲ್ಲಿ ಒಂದೇ ಚಾನ್ಸ್​:

ಐಪಿಎಲ್​ ಸೀಸನ್-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅರ್ಜುನ್ ತೆಂಡೂಲ್ಕರ್ ಅವರನ್ನು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಕಣಕ್ಕಿಳಿಸಲಾಗಿತ್ತು. ಅದು ಕೂಡ ಎಲ್​ಎಸ್​ಜಿ ತಂಡದ ಕೊನೆಯ ಮ್ಯಾಚ್​ನಲ್ಲಿ. ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದಿದ್ದ ಅರ್ಜುನ್ 4 ಓವರ್​ಗಳಲ್ಲಿ 36 ರನ್ ನೀಡಿ ಒಂದು ವಿಕೆಟ್ ಮಾತ್ರ ಕಬಳಿಸಿದ್ದರು.

Published On – 8:54 am, Tue, 9 June 26

Source link

ಫೋನ್ ಪೇನಲ್ಲಿ ಹಣ ಪಡೆದು ಕ್ಯಾಶ್ ಕೊಡುವ ಮುನ್ನ ಎಚ್ಚರ! ನಿಮ್ಮ ಖಾತೆಯನ್ನೇ ಖಾಲಿ ಮಾಡ್ತಾರೆ ವಂಚಕರು – Kannada News

ಫೋನ್ ಪೇನಲ್ಲಿ ಹಣ ಪಡೆದು ಕ್ಯಾಶ್ ಕೊಡುವ ಮುನ್ನ ಎಚ್ಚರ!

ರಾಯಚೂರು, ಜೂನ್ 09: ತಾಂತ್ರಿಕತೆ ಬೆಳೆದಂತೆ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಅಪರಿಚಿತರ ಮಾತನ್ನು ನಂಬಿ ಯುಪಿಐ (UPI) ಮೂಲಕ ಹಣ ಪಡೆದು ನಗದು (Cash) ನೀಡುವ ಮುನ್ನ ನೂರು ಬಾರಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹದೇ ಒಂದು ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ಅರಕೇರಾ ಪಟ್ಟಣದಲ್ಲಿ ನಡೆದಿದ್ದು, ಕಮಿಷನ್ ಆಸೆ ಹಾಗೂ ಮಾನವೀಯತೆ ದೃಷ್ಟಿಯಿಂದ ಅಪರಿಚಿತರಿಗೆ ಸಹಾಯ ಮಾಡಲು ಹೋದ ಯುವಕರು ಈಗ ಸೈಬರ್ ಪೊಲೀಸರ ವಿಚಾರಣೆಗೆ ಬೆಚ್ಚಿಬಿದ್ದಿದ್ದಾರೆ.

ಮುಖ್ಯಾಂಶಗಳು

  • ಅಪರಿಚಿತರ ಫೋನ್ ಪೇ ನಂಬಿ ನಗದು ನೀಡಿ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
  • ಕಳ್ಳರು ಕದ್ದ ಫೋನ್‌ ಬಳಸಿ 2.5 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ.
  • ವಂಚನೆ ತಿಳಿಯದೆ ಹಣ ವ್ಯವಹಾರ ನಡೆಸಿದ ಯುವಕರ ಬ್ಯಾಂಕ್ ಅಕೌಂಟ್ ಬ್ಲಾಕ್.

ಮೆಡಿಕಲ್ ಎಮರ್ಜನ್ಸಿ ಎಂದ ಕಳ್ಳರು: ಲಾಕ್ ಆದ ಸಿಎಸ್‌ಸಿ ಕೇಂದ್ರಗಳು!

ಅರಕೇರಾ ಪಟ್ಟಣದಲ್ಲಿ ಕಾಮನ್ ಸರ್ವಿಸ್ ಸೆಂಟರ್ (CSC) ನಡೆಸುತ್ತಿದ್ದ ಮಲ್ಲಿಕಾರ್ಜುನ, ಮಹಾಂತೇಶ್ ಸೇರಿದಂತೆ ಮೂವರು ಯುವಕರ ತಂಡವೇ ಈ ವಂಚನೆಗೆ ಒಳಗಾಗಿದೆ. ಇತ್ತೀಚೆಗೆ ಇವರ ಕೇಂದ್ರಗಳಿಗೆ ಬಂದಿದ್ದ ಇಬ್ಬರು ಅಪರಿಚಿತರು, ತಮಗೆ ಮೆಡಿಕಲ್ ಎಮರ್ಜನ್ಸಿ ಇದೆ ಎಂದು ನಂಬಿಸಿದ್ದಾರೆ. ತಮ್ಮ ಫೋನ್ ಪೇ ಮೂಲಕ ಸಿಎಸ್‌ಸಿ ಕೇಂದ್ರದ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ಹೇಳಿ, ಅದಕ್ಕೆ ಪ್ರತಿಯಾಗಿ ನಗದು ಹಣ ನೀಡುವಂತೆ ವಿನಂತಿಸಿದ್ದಾರೆ. ಜೊತೆಗೆ 1,000 ರೂಪಾಯಿಗೆ 10 ರೂಪಾಯಿ ಕಮಿಷನ್ ನೀಡುವುದಾಗಿಯೂ ಆಮಿಷ ಒಡ್ಡಿದ್ದಾರೆ.

ಇದನ್ನು ನಂಬಿದ ಯುವಕರು ಒಟ್ಟು ಮೂರು ಮಳಿಗೆಗಳಿಂದ ಸುಮಾರು 2.5 ಲಕ್ಷ ರೂಪಾಯಿ ಹಣದ ಟ್ರಾನ್ಸಾಕ್ಷನ್ ಮಾಡಿಸಿಕೊಂಡು, ಕಳ್ಳರಿಗೆ ನಗದು ಕೊಟ್ಟಿದ್ದಾರೆ. ಆದರೆ, ಆ ಇಬ್ಬರು ವ್ಯಕ್ತಿಗಳು ಕದ್ದ ಮೊಬೈಲ್‌ನಿಂದ ಯುಪಿಐ ಟ್ರಾನ್ಸಾಕ್ಷನ್ ಮಾಡುತ್ತಿದ್ದಾರೆ ಎಂಬ ಸತ್ಯ ಯುವಕರಿಗೆ ತಿಳಿದಿರಲಿಲ್ಲ.

ಮೊಬೈಲ್ ಕಳವು ಮತ್ತು ಪೊಲೀಸ್ ತನಿಖೆ

ಮೇ 25 ರಂದು ರಾಯಚೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ರಾಂಬಾಬು ಎಂಬುವವರ ಮೊಬೈಲ್ ಅನ್ನು ಬಸ್ ಹತ್ತುವ ವೇಳೆ ಕಳ್ಳರು ಕದ್ದಿದ್ದರು. ಮೊಬೈಲ್ ಕದ್ದ ಕೆಲವೇ ಗಂಟೆಗಳಲ್ಲಿ ಕಳ್ಳರು ಅರಕೇರಾದ ಸಿಎಸ್‌ಸಿ ಕೇಂದ್ರಗಳಲ್ಲಿ ರಾಂಬಾಬು ಅವರ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಸರಣಿ ಹಣ ಕಡಿತಗೊಂಡ ಮೆಸೇಜ್ ನೋಡಿ ಗಾಬರಿಯಾದ ರಾಂಬಾಬು ತಕ್ಷಣ ಸದರ ಬಜಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಹಣ ವರ್ಗಾವಣೆಯಾದ ಅರಕೇರಾ ಸಿಎಸ್‌ಸಿ ಕೇಂದ್ರದ ಹುಡುಗರಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಆಗ ತಮಗೆ ಆ ವ್ಯಕ್ತಿಗಳು ಯಾರೆಂದೇ ಗೊತ್ತಿಲ್ಲ ಎಂದು ಯುವಕರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಮುಂಜಾಗ್ರತಾ ಕ್ರಮವಾಗಿ ಹಣ ಕಳೆದುಕೊಂಡ ರಾಂಬಾಬು ಹಾಗೂ ಅಪರಿಚಿತರಿಂದ ಹಣ ಹಾಕಿಸಿಕೊಂಡು ನಗದು ಕೊಟ್ಟ ಮಲ್ಲಿಕಾರ್ಜುನ್, ಮಹಾಂತೇಶ್ ಸೇರಿದಂತೆ ಇತರರ ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಜ್ (Freeze) ಮಾಡಿದ್ದಾರೆ.

ಇದನ್ನೂ ಓದಿ Viral News: ಹೆಂಡತಿಗೆ ಕೈಕೊಟ್ಟು ಅತ್ತೆಯನ್ನೇ ಮದುವೆಯಾದ ಅಳಿಯ!

ಬ್ಯಾಂಕ್ ಖಾತೆಗಳು ಬ್ಲಾಕ್ ಆಗಿರುವುದರಿಂದ ಸಿಎಸ್‌ಸಿ ಕೇಂದ್ರದ ಯುವಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸದರ ಬಜಾರ್ ಪೊಲೀಸರು ಸದ್ಯ ಮೊಬೈಲ್ ಕಳ್ಳರ ಪತ್ತೆಗೆ ಜಾಲ ಬೀಸಿದ್ದು, ಸಾರ್ವಜನಿಕರು ಇಂತಹ ಆನ್‌ಲೈನ್ ನಗದು ವ್ಯವಹಾರಗಳ ಜೂಜಾಟಕ್ಕೆ ಬೀಳದಂತೆ ಮತ್ತು ಅಪರಿಚಿತರ ಫೋನ್ ಪೇ ನಂಬಿ ನಗದು ನೀಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಪೆದ್ದಿ’ ಸಿನಿಮಾಗೆ ಶುರುವಾಯ್ತು ಅಟ್ರಾಸಿಟಿ ಕೇಸ್ ಭಯ; ದೂರು ದಾಖಲು

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ, ಬುಚ್ಚಿ ಬಾಬು ಸನಾ ನಿರ್ದೇಶನದ ಬಿಗ್ ಬಜೆಟ್ ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ‘ಪೆದ್ದಿ’ ಥಿಯೇಟರ್‌ಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ ಕೇವಲ 5 ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 248.92 ಕೋಟಿ ರೂಪಾಯಿ ಗಳಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಭಾರತದಲ್ಲೇ ಈ ಚಿತ್ರ 169.70 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಆದರೆ, ಈ ಭಾರಿ ಯಶಸ್ಸಿನ ಬೆನ್ನಲ್ಲೇ ಸಿನಿಮಾ ದೊಡ್ಡ ಕಾನೂನು ಸಂಕಷ್ಟ ಹಾಗೂ ವಿವಾದಗಳ ಸುಳಿಗೆ ಸಿಲುಕಿದೆ.

ಚಿತ್ರತಂಡದ ವಿರುದ್ಧ SC/ST ಅಟ್ರಾಸಿಟಿ ಕೇಸ್‌ಗೆ ಡಿಮ್ಯಾಂಡ್:

ಚಿತ್ರದಲ್ಲಿ ಬುಡಕಟ್ಟು ಸಮುದಾಯವನ್ನು ಅತ್ಯಂತ ಅವಮಾನಕರವಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಆಂಧ್ರಪ್ರದೇಶದ ಮಾನ್ಯಂ ಹಾಗೂ ವಿಜಯನಗರಂ ಜಿಲ್ಲೆಗಳಲ್ಲಿ ಬುಡಕಟ್ಟು ಜನಾಂಗದ ನಾಯಕರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಿನಿಮಾದಲ್ಲಿ ಬುಡಕಟ್ಟು ಜನರನ್ನು ಹಾಗೂ ಅವರ ಸಂಸ್ಕೃತಿಯನ್ನು ಕೀಳಾಗಿ ಕಾಣುವಂತಹ ಆಕ್ಷೇಪಾರ್ಹ ಡೈಲಾಗ್‌ಗಳನ್ನು ಬಳಸಲಾಗಿದೆ. ಇದು ನಮ್ಮ ಸಮುದಾಯದ ಮನೋಭಾವನೆಗೆ ಧಕ್ಕೆ ತಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಪೆದ್ದಿ’ ಚಿತ್ರದ ಆಕ್ಷೇಪಾರ್ಹ ಶಾಟ್‌ಗಳಿಗೆ ಜಾನ್ವಿ ಕಪೂರ್ ವಿರೋಧ? ನಟಿಯ ಮೆಸೇಜ್ ಲೀಕ್

ಈ ಹಿನ್ನೆಲೆಯಲ್ಲಿ ನಿರ್ದೇಶಕ ಬುಚ್ಚಿ ಬಾಬು ಸನಾ, ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ಹೌಸ್ ಹಾಗೂ ಇಂತಹ ಸಂಭಾಷಣೆಗಳಿಗೆ ಅನುಮತಿ ನೀಡಿದ ಸೆನ್ಸಾರ್ ಮಂಡಳಿ ಸದಸ್ಯರ ವಿರುದ್ಧ ತಕ್ಷಣವೇ SC/ST ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ಹೂಡಬೇಕೆಂದು ಬುಡಕಟ್ಟು ಜನಾಂಗದ ಸಂಘಟನೆಗಳು ಪಟ್ಟು ಹಿಡಿದಿವೆ.

ಜಾನ್ವಿ ಕಪೂರ್ ಡ್ರೆಸ್ ಮತ್ತು ಹೈಪರ್‌ಸೆಕ್ಷುಅಲೈಸ್ ವಿವಾದ:

ಈ ಕಡೆ ಲೀಗಲ್ ಶಾಕ್ ಎದುರಾಗಿದ್ದರೆ, ಆ ಕಡೆ ಸಾಮಾಜಿಕ ಜಾಲತಾಣಗಳಲ್ಲಿ ನಾಯಕಿ ಜಾನ್ವಿ ಕಪೂರ್ ಪಾತ್ರದ ಸುತ್ತ ವಿವಾದ ಜೋರಾಗಿದೆ. ಚಿತ್ರದಲ್ಲಿ ಜಾನ್ವಿ ಅವರ ಪಾತ್ರಕ್ಕೆ ತೊಡಿಸಿರುವ ಉಡುಪುಗಳು ಹಾಗೂ ಅವರನ್ನು ತೋರಿಸಿರುವ ರೀತಿ ಸರಿಯಾಗಿಲ್ಲ ಎಂದು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಗ್ರಾಮೀಣ ಹಿನ್ನೆಲೆಯ ಕಥೆಯಲ್ಲಿ ಮಹಿಳಾ ಪಾತ್ರವನ್ನು ಇಷ್ಟು ಆಕ್ಷೇಪಾರ್ಹವಾಗಿ ಬಿಂಬಿಸುವ ಅಗತ್ಯವಿರಲಿಲ್ಲ ಎಂದು ಚಿತ್ರತಂಡದ ವಿರುದ್ಧ ತೀವ್ರ ಆಸಮಾಧಾನ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Dried Tulasi Plant: ಒಣಗಿದ ತುಳಸಿ ಗಿಡವನ್ನು ಕಸಕ್ಕೆ ಎಸೆಯಬೇಡಿ; ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಿಸಲು ಹೀಗೆ ಬಳಸಿ… – Kannada News

ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಅತ್ಯುನ್ನತ ಹಾಗೂ ಅತ್ಯಂತ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ತುಳಸಿ ಗಿಡದಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿಯೇ ನೆಲೆಸಿದ್ದಾಳೆ ಮತ್ತು ಈ ದೇವಿಯು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯಳಾಗಿದ್ದಾಳೆ ಎಂಬುದು ಧಾರ್ಮಿಕ ನಂಬಿಕೆ. ಇದೇ ಕಾರಣಕ್ಕೆ ತುಳಸಿ ಸಸ್ಯವು ಹಸಿರಾಗಿದ್ದಾಗ ಮಾತ್ರವಲ್ಲದೆ, ಅದು ಒಣಗಿದ ಮೇಲೂ ಅಷ್ಟೇ ಗೌರವದಿಂದ ಕಾಣಬೇಕೆಂದು ಧರ್ಮಗ್ರಂಥಗಳು ಸೂಚಿಸುತ್ತವೆ. ಒಂದು ವೇಳೆ ಮನೆಯಲ್ಲಿರುವ ತುಳಸಿ ಗಿಡವು ಒಣಗಿಹೋದರೆ, ಅದನ್ನು ಅಜಾಗರೂಕತೆಯಿಂದ ಕಸದ ಬುಟ್ಟಿಗೆ ಎಸೆಯದೆ, ಕೆಲವು ಆಧ್ಯಾತ್ಮಿಕ ನಿಯಮಗಳನ್ನು ಪಾಲಿಸುವ ಮೂಲಕ ಅದರ ಪವಿತ್ರತೆಯನ್ನು ಕಾಪಾಡಿಕೊಳ್ಳಬಹುದು. ಒಣಗಿದ ತುಳಸಿ ಸಸ್ಯವನ್ನು ಹೇಗೆ ಗೌರವಯುತವಾಗಿ ಬಳಸಬಹುದು ಮತ್ತು ಸಂರಕ್ಷಿಸಬಹುದು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಒಣಗಿದ ತುಳಸಿಯನ್ನು ಕಸದ ಬುಟ್ಟಿಗೆ ಎಸೆಯಬೇಡಿ:

ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಗಿಡವು ಒಣಗಿದ ನಂತರವೂ ತನ್ನ ಪವಿತ್ರತೆಯನ್ನು ಕಳೆದುಕೊಳ್ಳುವುದಿಲ್ಲ. ಹಾಗಾಗಿ ಒಣಗಿದ ತುಳಸಿ ಎಲೆಗಳು ಅಥವಾ ಕೊಂಬೆಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಅಥವಾ ಕಸದ ಬುಟ್ಟಿಗೆ ಹಾಕುವುದು ತಪ್ಪು ಎಂದು ಹೇಳಲಾಗುತ್ತದೆ. ಬದಲಿಗೆ, ಒಣಗಿದ ತುಳಸಿಯ ಭಾಗಗಳನ್ನು ಸಂಗ್ರಹಿಸಿ, ನಿಮ್ಮ ಹತ್ತಿರದ ಯಾವುದೇ ಪವಿತ್ರ ಜಲಮೂಲ ಅಥವಾ ಹರಿಯುವ ನದಿಯಲ್ಲಿ ಮುಳುಗಿಸುವುದು (ವಿಸರ್ಜಿಸುವುದು) ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.

ತುಳಸಿ ಕಡ್ಡಿಯಿಂದ ಮಾಲೆ (ದಂಡ) ತಯಾರಿಕೆ:

ಒಣಗಿದ ತುಳಸಿಯ ದಪ್ಪನೆಯ ಕಾಂಡಗಳನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ, ಗಂಗಾಜಲದಿಂದ ಶುದ್ಧೀಕರಿಸಿದ ನಂತರ ಅದರಿಂದ ತುಳಸಿ ಮಾಲೆ ತಯಾರಿಸಬಹುದು. ವೈಷ್ಣವ ಸಂಪ್ರದಾಯದಲ್ಲಿ ಈ ತುಳಸಿ ಮಾಲೆ ಧರಿಸುವುದಕ್ಕೆ ವಿಶೇಷ ಮಹತ್ವವಿದೆ. ಇದನ್ನು ಧರಿಸುವುದರಿಂದ ಮನಸ್ಸಿಗೆ ಅಪಾರ ಶಾಂತಿ ಸಿಗುತ್ತದೆ ಮತ್ತು ಸಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತವೆ. ಆದರೆ, ತುಳಸಿ ದಂಡವನ್ನು ಧರಿಸುವವರು ಸತ್ಯತೆ, ಸಾತ್ವಿಕತೆ ಮತ್ತು ದೈಹಿಕ-ಮಾನಸಿಕ ಶುಚಿತ್ವದಂತಹ ಕಠಿಣ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.

ಪೂಜಾ ಕೋಣೆಯಲ್ಲಿ ಸಂರಕ್ಷಿಸಿ ಇಡುವುದು:

ಒಣಗಿದ ತುಳಸಿಯ ಎಲೆಗಳು ಅಥವಾ ಸಣ್ಣ ಸಣ್ಣ ಕೊಂಬೆಗಳನ್ನು ಒಂದು ಸಣ್ಣ ಕೆಂಪು ಬಟ್ಟೆಯಲ್ಲಿ ಕಟ್ಟಿ, ಅದನ್ನು ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಇಡುವುದು ತುಂಬಾ ಒಳ್ಳೆಯದು. ಹೀಗೆ ಮಾಡುವುದರಿಂದ ಮನೆಯಲ್ಲಿ ದೈವಿಕ ಮತ್ತು ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗುತ್ತದೆ ಹಾಗೂ ಮನೆಯೊಳಗಿನ ಸಕಾರಾತ್ಮಕ ಶಕ್ತಿಯು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.

ಮುಖ್ಯ ದ್ವಾರಕ್ಕೆ ರಕ್ಷಣಾ ಕವಚ:

ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ಒಣಗಿದ ತುಳಸಿ ಎಲೆಗಳನ್ನು ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿ, ಅದನ್ನು ಮನೆಯ ಮುಖ್ಯ ದ್ವಾರದ (ಹೊಸ್ತಿಲ) ಮೇಲೆ ನೇತುಹಾಕಬೇಕು. ಇದು ಮನೆಗೆ ಬರುವ ನಕಾರಾತ್ಮಕ ಶಕ್ತಿಗಳು ಮತ್ತು ಕೆಟ್ಟ ದೃಷ್ಟಿಯನ್ನು ತಡೆಯಲು ಒಂದು ರಕ್ಷಣಾತ್ಮಕ ಗುರಾಣಿಯಾಗಿ (ಕವಚವಾಗಿ) ಕಾರ್ಯನಿರ್ವಹಿಸುತ್ತದೆ ಮತ್ತು ಮನೆಗೆ ಯಾವುದೇ ನಕಾರಾತ್ಮಕತೆ ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಹೋಮಗಳು ಮತ್ತು ಯಜ್ಞಗಳಲ್ಲಿ ಬಳಕೆ:

ಒಣಗಿದ ತುಳಸಿ ಎಲೆಗಳನ್ನು ಮತ್ತು ಕಡ್ಡಿಗಳನ್ನು ಹವನ ಹಾಗೂ ಯಜ್ಞದಂತಹ ಪವಿತ್ರ ಆಧ್ಯಾತ್ಮಿಕ ಸಮಾರಂಭಗಳಲ್ಲಿ ಅಹುತಿಯಾಗಿ ಅರ್ಪಿಸಬಹುದು. ಯಜ್ಞ ಕುಂಡದಲ್ಲಿ ತುಳಸಿಯನ್ನು ಅರ್ಪಿಸುವುದರಿಂದ ಹೊರಹೊಮ್ಮುವ ಹೊಗೆಯು ಸುತ್ತಮುತ್ತಲಿನ ವಾತಾವರಣವನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತದೆ ಮತ್ತು ದೇವಾನುದೇವತೆಗಳ ವಿಶೇಷ ಆಶೀರ್ವಾದಕ್ಕೆ ಪಾತ್ರರಾಗಬಹುದು ಎಂಬುದು ಭಕ್ತರ ದೃಢ ನಂಬಿಕೆ.

ತುಳಸಿ ಬತ್ತಿಯಿಂದ ದೀಪಾರಾಧನೆ:

ಒಣಗಿದ ತುಳಸಿ ಎಲೆಗಳು ಮತ್ತು ಸಣ್ಣ ಕೊಂಬೆಗಳನ್ನು ಪುಡಿ ಮಾಡಿ ಅಥವಾ ನೂಲಿನೊಂದಿಗೆ ಸೇರಿಸಿ ಬತ್ತಿಯನ್ನು ಸಿದ್ಧಪಡಿಸಿ, ಅದರಿಂದ ದೀಪವನ್ನು ಹಚ್ಚುವ ಸಂಪ್ರದಾಯವೂ ಇದೆ. ಈ ರೀತಿಯ ತುಳಸಿ ಬತ್ತಿಯ ದೀಪ ಪೂಜೆಯು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಇದು ಸಾಕ್ಷಾತ್ ಲಕ್ಷ್ಮಿ ದೇವಿಯ ಅನುಗ್ರಹವನ್ನು ತಂದುಕೊಡುವ ಮೂಲಕ, ಇಡೀ ಕುಟುಂಬಕ್ಕೆ ಸುಖ, ಶಾಂತಿ, ಸಂತೋಷ ಮತ್ತು ಅಪಾರ ಸಮೃದ್ಧಿಯನ್ನು ಕರುಣಿಸುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KSRTC ಸೇರಿ ನಾಲ್ಕು ಸಾರಿಗೆ ನಿಗಮಗಳಿಗೆ ಶಕ್ತಿ ತುಂಬಲಿವೆ 5000 ಹೊಸ ಬಸ್! – Kannada News

ಕೆಎಸ್​ಆರ್​ಟಿಸಿ ಬಸ್ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜೂನ್ 9: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ (Shakti scheme) ಜಾರಿಯಾದ ಬಳಿಕ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಂಟಾಗುತ್ತಿರುವ ಭಾರಿ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಬಲಪಡಿಸಲು ಕರ್ನಾಟಕ ಸರ್ಕಾರ ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ರಾಜ್ಯಾದ್ಯಂತ ನಾಲ್ಕೂ ಸಾರಿಗೆ ನಿಗಮಗಳಿಗೆ ಹಂತ-ಹಂತವಾಗಿ ಒಟ್ಟು 5,000 ಹೊಸ ಬಸ್‌ಗಳನ್ನು ಖರೀದಿಸಿ ಸೇರ್ಪಡೆಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸೋಮವಾರ ಘೋಷಿಸಿದ್ದಾರೆ.

ಮುಖ್ಯಾಂಶಗಳು

  • ಸಾರಿಗೆ ನಿಗಮಗಳಿಗೆ ಸೇರ್ಪಡೆಯಾಗಲಿವೆ 5 ಸಾವಿರ ಹೊಸ ಬಸ್‌.
  • ಮಹಿಳೆಯರಿಗೆ ಉಚಿತ ಶಕ್ತಿ ಸ್ಮಾರ್ಟ್ ಕಾರ್ಡ್.
  • ಪುರುಷರಿಗೂ ಮೆಟ್ರೋ ಮಾದರಿ ರೀಚಾರ್ಜ್ ಕಾರ್ಡ್.

4,000 ಎಲೆಕ್ಟ್ರಿಕ್ ಮತ್ತು 1,000 ಸಾಮಾನ್ಯ ಬಸ್‌ಗಳ ಖರೀದಿ

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ವಾಯವ್ಯ ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಸಚಿವರು, ಬಸ್‌ಗಳ ಹಂಚಿಕೆಯ ವಿವರ ನೀಡಿದರು. ಒಟ್ಟು 5,000 ಹೊಸ ಬಸ್‌ಗಳನ್ನು ಖರೀದಿಸಲಾಗುವುದು. ಈ ಪೈಕಿ 1,000 ಬಸ್‌ಗಳನ್ನು ರಾಜ್ಯ ಸರ್ಕಾರದ ನಿಧಿಯ ಮೂಲಕ ನೇರವಾಗಿ ಖರೀದಿಸಲಾಗುವುದು. ಇನ್ನುಳಿದ 4,000 ಅತ್ಯಾಧುನಿಕ ಎಲೆಕ್ಟ್ರಿಕ್ (Electric Buses) ಬಸ್‌ಗಳನ್ನು ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಪಡೆದುಕೊಳ್ಳಲಾಗುವುದು. ಈ ಎಲ್ಲಾ ಬಸ್‌ಗಳನ್ನು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುವುದು ಎಂದರು.

ಮಹಿಳೆಯರಿಗೆ ಉಚಿತ ಸ್ಮಾರ್ಟ್ ಕಾರ್ಡ್

ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ರಾಜ್ಯದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 40 ರಷ್ಟು ಹೆಚ್ಚಳ ದಾಖಲಾಗಿದೆ. ಈ ಯೋಜನೆಯನ್ನು ಮತ್ತಷ್ಟು ವ್ಯವಸ್ಥಿತವಾಗಿ ಜಾರಿಗೊಳಿಸಲು ಮತ್ತು ಪ್ರಯಾಣಿಕರ ನಿಖರ ಟ್ರ್ಯಾಕಿಂಗ್‌ಗಾಗಿ ಮೂರು ಕೋಟಿಗೂ ಅಧಿಕ ಮಹಿಳಾ ಫಲಾನುಭವಿಗಳಿಗೆ ಸಂಪೂರ್ಣ ಉಚಿತವಾಗಿ ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸಲು ಸರ್ಕಾರ ನಿರ್ಧರಿಸಿದೆ. ಈ ಕಾರ್ಡ್‌ಗಳ ತಯಾರಿಕೆಗಾಗಿ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಮತ್ತು ರಾಜ್ಯಾದ್ಯಂತ ಜಾರಿಗೊಳಿಸುವ ಮುನ್ನ ಪ್ರಾಯೋಗಿಕ ಯೋಜನೆ (Pilot Project) ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಪುರುಷರಿಗೆ ಮೆಟ್ರೋ ಮಾದರಿ ರಿಚಾರ್ಜ್ ಕಾರ್ಡ್

ಪುರುಷ ಪ್ರಯಾಣಿಕರಿಗೂ ಸಹ ನಮ್ಮ ಮೆಟ್ರೋ ಮಾದರಿಯಲ್ಲಿಯೇ ನಿಗದಿತ ಶುಲ್ಕ ಪಾವತಿಸಿ ರೀಚಾರ್ಜ್ ಮಾಡಿಕೊಳ್ಳಬಹುದಾದ ಸ್ಮಾರ್ಟ್ ಕಾರ್ಡ್‌ಗಳನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಮುಜರಾಯಿ ದೇಗುಲಗಳ ಆದಾಯಕ್ಕೆ ಬೂಸ್ಟ್​​ ಕೊಟ್ಟ ಶಕ್ತಿ ಯೋಜನೆ: ಭಕ್ತರ ಜೊತೆ ಕಾಣಿಕೆ ಸಂಗ್ರಹವೂ ಹೆಚ್ಚಳ

ಪ್ರಯಾಣಿಕರ, ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಟ್ಯಾಕ್ಸಿಗಳು ಸೇರಿದಂತೆ ಎಲ್ಲಾ ವಾಣಿಜ್ಯ ಪ್ರಯಾಣಿಕರ ವಾಹನಗಳಲ್ಲಿ ‘ವೆಹಿಕಲ್ ಲೊಕೇಷನ್ ಟ್ರಾಕಿಂಗ್ ಸಿಸ್ಟಂ (VLTS)’ ಅಳವಡಿಕೆಯನ್ನು ಚುರುಕುಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ವಾಹನಗಳಿಗೆ ಈ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇನ್ನುಳಿದ 4 ರಿಂದ 5 ಲಕ್ಷ ವಾಹನಗಳಿಗೆ ಮುಂದಿನ 3-4 ತಿಂಗಳ ಒಳಗಾಗಿ ವಿಎಲ್‌ಟಿಎಸ್ ಅಳವಡಿಕೆಯನ್ನು ಪೂರ್ಣಗೊಳಿಸಲಾಗುವುದು ಎಂದು ಬೈರತಿ ಸುರೇಶ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ

‘ಕ್ಷೇತ್ರಪಾಲ’ ಸಿನಿಮಾ ತನ್ನ ಟೈಟಲ್ ಮೂಲಕವೇ ಸದ್ದು ಮಾಡುತ್ತಿದೆ. ಈ ಚಿತ್ರದ ಟೈಟಲ್ ಕೇಳಿದರೆ ಅದು ದೈವದ ಕಥೆ ಇರುವ ಚಿತ್ರವೇ ಎಂಬ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಉತ್ತರ ಸಿಕ್ಕಿದೆ. ‘ಕ್ಷೇತ್ರಪಾಲ ಎಂದರೆ ದೇವಸ್ಥಾನ ಕಾಯುವವನು. ಅದೇ ರೀತಿ ಊರನ್ನು ಕಾಯುವವನು ಕ್ಷೇತ್ರಪಾಲನೇ. ಇದು ದೇವರ ಅಥವಾ ದೈವದ ಸಿನಿಮಾ ಅಲ್ಲ. ಆದರೆ, ದೇವರ ಮೇಲೆ ನಂಬಿಕೆ ಇಟ್ಟವರ ಕುರಿತ ಸಿನಿಮಾ’ ಎಂದು ತಂಡ ವಿವರಿಸಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರಿನಲ್ಲಿ ಗಣನೀಯವಾಗಿ ಸುಧಾರಿಸಿದ ಗಾಳಿಯ ಗುಣಮಟ್ಟ – Kannada News

ಬೆಂಗಳೂರಿನಲ್ಲಿ ಗಣನೀಯವಾಗಿ ಸುಧಾರಿಸಿದ ಗಾಳಿಯ ಗುಣಮಟ್ಟ

ಬೆಂಗಳೂರು, ಜೂನ್ 09: ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು (AQI) ಅತ್ಯಂತ ಉತ್ತಮ ಹಾಗೂ ತೃಪ್ತಿಕರ ಮಟ್ಟದಲ್ಲಿದೆ. ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕಾಗಿರುವುದರಿಂದ ಧೂಳಿನ ಕಣಗಳು ಮತ್ತು ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವು ನಗರಗಳ ಜನರು ಇಂದು ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ.

ಮುಖ್ಯಾಂಶಗಳು

  • ಸಿಲಿಕಾನ್ ಸಿಟಿಯಲ್ಲಿ ಇಂದಿನ ವಾಯು ಗುಣಮಟ್ಟ ಅತ್ಯಂತ ಉತ್ತಮ ಮಟ್ಟದಲ್ಲಿದೆ.
  • ಮುಂಗಾರು ಮಳೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಾಯು ಮಾಲಿನ್ಯ ಗಣನೀಯವಾಗಿ ಇಳಿಕೆಯಾಗಿದೆ.
  • ರಾಜ್ಯದ ಪ್ರಮುಖ ನಗರಗಳ ಪೈಕಿ ರಾಮನಗರದಲ್ಲಿ ಅತ್ಯುತ್ತಮ ಗಾಳಿ ದಾಖಲಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ರಾಜಧಾನಿ ಬೆಂಗಳೂರಿನಲ್ಲಿ ಇಂದು ಸರಾಸರಿ AQI ಮಟ್ಟ 37 ರಿಂದ 42 ರ ಆಸುಪಾಸಿನಲ್ಲಿದ್ದು, ಇದನ್ನು ಉತ್ತಮ ಎಂದು ವರ್ಗೀಕರಿಸಲಾಗಿದೆ. ಮಾಲಿನ್ಯಕಾರಕ ಕಣಗಳಾದ PM2.5 ಮತ್ತು PM10 ಮಟ್ಟಗಳು ಅತ್ಯಂತ ಕನಿಷ್ಠ ಮಟ್ಟದಲ್ಲಿ ದಾಖಲಾಗಿವೆ.

ಬೆಂಗಳೂರಿನ ವಿವಿಧ ಭಾಗಗಳ ಇಂದಿನ AQI ವಿವರ

  • ಬಿಟಿಎಂ ಲೇಔಟ್ : 42 (ಉತ್ತಮ)
  • ಸಿಲ್ಕ್ ಬೋರ್ಡ್ : 52 (ಸಾಧಾರಣ/Moderate)
  • ಜಯನಗರ : 33 (ಉತ್ತಮ)
  • ಬಸವನಗುಡಿ : 29 (ಉತ್ತಮ)
  • ಪೀಣ್ಯ ಕೈಗಾರಿಕಾ ಪ್ರದೇಶ : 54 (ಸಾಧಾರಣ)

ಕರ್ನಾಟಕದ ಇತರ ಪ್ರಮುಖ ನಗರಗಳ ಸ್ಥಿತಿಗತಿ

  • ರಾಮನಗರ: 17 (ಅತ್ಯಂತ ಸ್ವಚ್ಛ ಗಾಳಿ)
  • ಚಿಕ್ಕಮಗಳೂರು: 37 (ಉತ್ತಮ)
  • ಮೈಸೂರು: 56 (ಸಾಧಾರಣ)
  • ಮಂಗಳೂರು: 60 (ಸಾಧಾರಣ)
  • ಶಿವಮೊಗ್ಗ: 58 (ಸಾಧಾರಣ)
  • ಧಾರವಾಡ: 86 (ಸಾಧಾರಣ – ವಾಹನ ದಟ್ಟಣೆಯಿಂದ ಸ್ವಲ್ಪ ಹೆಚ್ಚು)

ಒಟ್ಟಾರೆಯಾಗಿ ಇಂದು ಜೂನ್ 9 ರಂದು ಇಡೀ ಕರ್ನಾಟಕದಲ್ಲಿ ವಾಯು ಮಾಲಿನ್ಯದ ಯಾವುದೇ ತೀವ್ರ ಆತಂಕವಿಲ್ಲ. ಮಳೆಯ ಮಾರುತಗಳು ವಾತಾವರಣವನ್ನು ಸ್ವಚ್ಛಗೊಳಿಸಿರುವುದರಿಂದ ರಾಜ್ಯದ ಜನತೆಗೆ ಇಂದು “ಗ್ರೀನ್ ಡೇ” ಲಭಿಸಿದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link