‘ಕ್ಷೇತ್ರಪಾಲ’ ಸಿನಿಮಾ ತನ್ನ ಟೈಟಲ್ ಮೂಲಕವೇ ಸದ್ದು ಮಾಡುತ್ತಿದೆ. ಈ ಚಿತ್ರದ ಟೈಟಲ್ ಕೇಳಿದರೆ ಅದು ದೈವದ ಕಥೆ ಇರುವ ಚಿತ್ರವೇ ಎಂಬ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಉತ್ತರ ಸಿಕ್ಕಿದೆ. ‘ಕ್ಷೇತ್ರಪಾಲ ಎಂದರೆ ದೇವಸ್ಥಾನ ಕಾಯುವವನು. ಅದೇ ರೀತಿ ಊರನ್ನು ಕಾಯುವವನು ಕ್ಷೇತ್ರಪಾಲನೇ. ಇದು ದೇವರ ಅಥವಾ ದೈವದ ಸಿನಿಮಾ ಅಲ್ಲ. ಆದರೆ, ದೇವರ ಮೇಲೆ ನಂಬಿಕೆ ಇಟ್ಟವರ ಕುರಿತ ಸಿನಿಮಾ’ ಎಂದು ತಂಡ ವಿವರಿಸಿತು.
ಬೆಂಗಳೂರು, ಜೂನ್ 09: ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು (AQI) ಅತ್ಯಂತ ಉತ್ತಮ ಹಾಗೂ ತೃಪ್ತಿಕರ ಮಟ್ಟದಲ್ಲಿದೆ. ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕಾಗಿರುವುದರಿಂದ ಧೂಳಿನ ಕಣಗಳು ಮತ್ತು ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವು ನಗರಗಳ ಜನರು ಇಂದು ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ.
ಮುಖ್ಯಾಂಶಗಳು
ಸಿಲಿಕಾನ್ ಸಿಟಿಯಲ್ಲಿ ಇಂದಿನ ವಾಯು ಗುಣಮಟ್ಟ ಅತ್ಯಂತ ಉತ್ತಮ ಮಟ್ಟದಲ್ಲಿದೆ.
ಮುಂಗಾರು ಮಳೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಾಯು ಮಾಲಿನ್ಯ ಗಣನೀಯವಾಗಿ ಇಳಿಕೆಯಾಗಿದೆ.
ರಾಜ್ಯದ ಪ್ರಮುಖ ನಗರಗಳ ಪೈಕಿ ರಾಮನಗರದಲ್ಲಿ ಅತ್ಯುತ್ತಮ ಗಾಳಿ ದಾಖಲಾಗಿದೆ.
ಬೆಂಗಳೂರಿನ ಇಂದಿನ ವಾಯು ಗುಣಮಟ್ಟ
ರಾಜಧಾನಿ ಬೆಂಗಳೂರಿನಲ್ಲಿ ಇಂದು ಸರಾಸರಿ AQI ಮಟ್ಟ 37 ರಿಂದ 42 ರ ಆಸುಪಾಸಿನಲ್ಲಿದ್ದು, ಇದನ್ನು ಉತ್ತಮ ಎಂದು ವರ್ಗೀಕರಿಸಲಾಗಿದೆ. ಮಾಲಿನ್ಯಕಾರಕ ಕಣಗಳಾದ PM2.5 ಮತ್ತು PM10 ಮಟ್ಟಗಳು ಅತ್ಯಂತ ಕನಿಷ್ಠ ಮಟ್ಟದಲ್ಲಿ ದಾಖಲಾಗಿವೆ.
ಬೆಂಗಳೂರಿನ ವಿವಿಧ ಭಾಗಗಳ ಇಂದಿನ AQI ವಿವರ
ಬಿಟಿಎಂ ಲೇಔಟ್ : 42 (ಉತ್ತಮ)
ಸಿಲ್ಕ್ ಬೋರ್ಡ್ : 52 (ಸಾಧಾರಣ/Moderate)
ಜಯನಗರ : 33 (ಉತ್ತಮ)
ಬಸವನಗುಡಿ : 29 (ಉತ್ತಮ)
ಪೀಣ್ಯ ಕೈಗಾರಿಕಾ ಪ್ರದೇಶ : 54 (ಸಾಧಾರಣ)
ಕರ್ನಾಟಕದ ಇತರ ಪ್ರಮುಖ ನಗರಗಳ ಸ್ಥಿತಿಗತಿ
ರಾಮನಗರ: 17 (ಅತ್ಯಂತ ಸ್ವಚ್ಛ ಗಾಳಿ)
ಚಿಕ್ಕಮಗಳೂರು: 37 (ಉತ್ತಮ)
ಮೈಸೂರು: 56 (ಸಾಧಾರಣ)
ಮಂಗಳೂರು: 60 (ಸಾಧಾರಣ)
ಶಿವಮೊಗ್ಗ: 58 (ಸಾಧಾರಣ)
ಧಾರವಾಡ: 86 (ಸಾಧಾರಣ – ವಾಹನ ದಟ್ಟಣೆಯಿಂದ ಸ್ವಲ್ಪ ಹೆಚ್ಚು)
ಒಟ್ಟಾರೆಯಾಗಿ ಇಂದು ಜೂನ್ 9 ರಂದು ಇಡೀ ಕರ್ನಾಟಕದಲ್ಲಿ ವಾಯು ಮಾಲಿನ್ಯದ ಯಾವುದೇ ತೀವ್ರ ಆತಂಕವಿಲ್ಲ. ಮಳೆಯ ಮಾರುತಗಳು ವಾತಾವರಣವನ್ನು ಸ್ವಚ್ಛಗೊಳಿಸಿರುವುದರಿಂದ ರಾಜ್ಯದ ಜನತೆಗೆ ಇಂದು “ಗ್ರೀನ್ ಡೇ” ಲಭಿಸಿದಂತಾಗಿದೆ.
ಕ್ರಿಕೆಟ್ ಮೈದಾನದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುವ ವಿರಾಟ್ ಕೊಹ್ಲಿ, ಈಗ ವಾಣಿಜ್ಯ ಮತ್ತು ಜಾಹೀರಾತು ಜಗತ್ತಿನಲ್ಲೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ. ಪ್ರಖ್ಯಾತ ಬಿಸಿನೆಸ್ ಮ್ಯಾಗಝೀನ್ ಫಾರ್ಚೂನ್ ಇಂಡಿಯಾ (Fortune India) ಮತ್ತು ಜಾಗತಿಕ ಬ್ರಾಂಡ್ ಕನ್ಸಲ್ಟೆನ್ಸಿ ಸಂಸ್ಥೆ ಇಂಟರ್‌ಬ್ರಾಂಡ್ (Interbrand) ಜಂಟಿಯಾಗಿ ಪ್ರಕಟಿಸಿರುವ ಭಾರತದ ಅತೀ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕೊಹ್ಲಿ ₹3,542 ಕೋಟಿ ($427 ಮಿಲಿಯನ್) ಬ್ರಾಂಡ್ ಮೌಲ್ಯದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮೌಲ್ಯವನ್ನು ಅವರ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಅಥವಾ ಕೇವಲ ಗಳಿಕೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಆದರೆ ಫಾರ್ಚೂನ್ ಇಂಡಿಯಾ ಮತ್ತು ಇಂಟರ್‌ಬ್ರಾಂಡ್ ವಿಶಿಷ್ಟವಾದ ಆರ್ಥಿಕ ಮಾನದಂಡಗಳನ್ನು ಬಳಸಿದೆ.
ವ್ಯಕ್ತಿಯೊಬ್ಬರ ವಿಶಿಷ್ಟತೆ, ನಂಬಿಕೆ, ಗ್ರಾಹಕರೊಂದಿಗಿನ ಒಡನಾಟ, ಸ್ಥಿರತೆ ಮತ್ತು ಸಾಮಾಜಿಕ ಜವಾಬ್ದಾರಿಯ ಆಧಾರದ ಮೇಲೆ ಈ ಮೌಲ್ಯವನ್ನು ನಿರ್ಧರಿಸಲಾಗಿದೆ. ಈ ಎಲ್ಲಾ ವಿಭಾಗಗಳಲ್ಲಿ ವಿರಾಟ್ ಕೊಹ್ಲಿ ಭಾರತದ ಇತರೆಲ್ಲಾ ತಾರೆಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ.
ದ್ವಿತೀಯ ಸ್ಥಾನದಲ್ಲಿ ಕಿಂಗ್ ಖಾನ್:
ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನ ಪಡೆದರೆ. ಬಾಲಿವುಡ್‌ನ ಕಿಂಗ್ ಖಾನ್ ಖ್ಯಾತಿಯ ಶಾರುಖ್ ಖಾನ್ ಎರಡನೇ ಸ್ಥಾನದ್ದಲಿದ್ದಾರೆ.
ಹಾಗೆಯೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಇನ್ನು ಮಹೇಂದ್ರ ಸಿಂಗ್ ಧೋನಿ (4ನೇ ಸ್ಥಾನ) ಮತ್ತು ಸಚಿನ್ ತೆಂಡೂಲ್ಕರ್ (8ನೇ ಸ್ಥಾನ) ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಿಂಗ್ ಕೊಹ್ಲಿ ಸಾಮ್ರಾಜ್ಯ:
ಜಾಗತಿಕ ಬ್ರಾಂಡ್‌ಗಳ ಒಪ್ಪಂದ: ಪೂಮಾ, ಆಡಿ, ಮತ್ತು ಎಂಆರ್‌ಎಫ್ ನಂತಹ ಜಾಗತಿಕ ಬ್ರಾಂಡ್‌ಗಳೊಂದಿಗೆ ವಿರಾಟ್ ಕೊಹ್ಲಿ ದೀರ್ಘಾವಧಿಯ ಒಪ್ಪಂದ ಹೊಂದಿದ್ದಾರೆ.
ಸೋಷಿಯಲ್ ಮೀಡಿಯಾ ಪವರ್: ಇನ್‌ಸ್ಟಾಗ್ರಾಮ್‌ನಲ್ಲಿ 270 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಕೊಹ್ಲಿ, ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿ. ಅಲ್ಲದೆ ಇವರ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಅಥವಾ ರೀಲ್ಸ್ ಕೋಟ್ಯಂತರ ರೂಪಾಯಿ ಆದಾಯ ತಂದುಕೊಡುತ್ತದೆ.
ಫಿಟ್‌ನೆಸ್ ಐಕಾನ್: ಕೇವಲ ಕ್ರಿಕೆಟ್ ಮಾತ್ರವಲ್ಲದೆ, ದೇಶದಲ್ಲಿ ಫಿಟ್‌ನೆಸ್ ಕ್ರಾಂತಿ ಮೂಡಿಸಿರುವ ಐಕಾನ್ ಆಗಿಯೂ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ.
ಉದ್ಯಮಿ: ಕೊಹ್ಲಿ ಕೇವಲ ಬ್ರಾಂಡ್ ರಾಯಭಾರಿಯಾಗಿ ಉಳಿದಿಲ್ಲ, ಬದಲಿಗೆ ಅವರೇ ಸ್ವತಃ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ಒನ್8 (One8) ಬ್ರಾಂಡ್ ಅಡಿಯಲ್ಲಿ ರೆಸ್ಟೋರೆಂಟ್‌ಗಳು, ಅಪ್ಯಾರಲ್ಸ್ ಮತ್ತು ಪರ್ಫ್ಯೂಮ್ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ಬ್ಲೂ ಟ್ರೈಬ್ (Blue Tribe) ನಂತಹ ಸ್ಟಾರ್ಟ್‌ಅಪ್‌ಗಳಲ್ಲಿ ಮತ್ತು ಸ್ಪೋರ್ಟ್ಸ್ ಫ್ರಾಂಚೈಸಿಗಳಲ್ಲೂ (FC Goa) ಹೂಡಿಕೆ ಮಾಡಿದ್ದಾರೆ.
ಈ ಎಲ್ಲಾ ವಿಷಯಗಳು ವಿರಾಟ್ ಕೊಹ್ಲಿಯ ಬ್ರಾಂಡ್ ವ್ಯಾಲ್ಯೂವನ್ನು ಹೆಚ್ಚಿಸಿದೆ. ಈ ವ್ಯಾಲ್ಯೂಗಳೊಂದಿಗೆ ಇದೀಗ ಭಾರತದ ಅತೀ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.
ವಾಹನ ಖರೀದಿಗೆ ಶುಭ ದಿನImage Credit source: Pinterest
ಪ್ರತಿಯೊಬ್ಬರಿಗೂ ತಮ್ಮ ಯೋಗ್ಯತೆಗೆ ತಕ್ಕಂತೆ ಒಂದು ವಾಹನ ಹೊಂದಬೇಕೆಂಬ ಆಸೆ ಇರುತ್ತದೆ. ಅದು ಪುಟ್ಟ ಕಾರು, ಬೈಕ್, ಸ್ಕೂಟರ್, ಲಾರಿ, ಟ್ರ್ಯಾಕ್ಟರ್, ವ್ಯಾನ್ ಅಥವಾ ಸೈಕಲ್ ಆಗಿರಬಹುದು. ಆದರೆ, ಬೇರೆಯವರನ್ನು ನೋಡಿ ಮೊಂಡು ಹಠದಿಂದ ವಾಹನ ಖರೀದಿಸುವುದಕ್ಕಿಂತ, ನಮ್ಮ ಶಕ್ತ್ಯಾನುಸಾರ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸುವುದು ಉತ್ತಮ. ವಾಹನ ಖರೀದಿ ವಿಷಯದಲ್ಲಿ, ಯಾವ ದಿನ ಶುಭ, ಯಾವಾಗ ಖರೀದಿಸಬೇಕು ಎಂಬ ಗೊಂದಲ ಅನೇಕರಲ್ಲಿ ಸಹಜ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಪ್ರಸ್ತುತ, ಜೂನ್ ಮಾಸವು ಅಧಿಕ ಜೇಷ್ಠ ಮಾಸವಾಗಿದೆ. ಈ ಅಧಿಕ ಜೇಷ್ಠ ಮಾಸವು ಜೂನ್ 15 ರವರೆಗೂ ಇದ್ದು, ನಂತರ ನಿಜ ಜೇಷ್ಠ ಮಾಸವು ಮುಂದುವರಿಯುತ್ತದೆ. ಈ ಅವಧಿಯಲ್ಲಿ ವಾಹನ ಖರೀದಿಸುವುದು ಶುಭವೋ ಅಶುಭವೋ ಎಂಬ ಗೊಂದಲ ಅನೇಕರನ್ನು ಕಾಡುತ್ತದೆ. ಲೋನ್ ಮಂಜೂರಾದವರು ಅಥವಾ ಹಣ ಸಿದ್ಧವಾಗಿಟ್ಟುಕೊಂಡವರು “ಮಲ ಮಾಸ” ಎಂಬ ಕಾರಣಕ್ಕೆ ವಾಹನ ಖರೀದಿಯನ್ನು ಮುಂದೂಡಬೇಕೇ ಎಂದು ಯೋಚಿಸುತ್ತಾರೆ. ಆದರೆ, ಧರ್ಮಶಾಸ್ತ್ರಗಳಲ್ಲಿ ಉಲ್ಲೇಖದ ಪ್ರಕಾರ, ಪ್ರಪಂಚದಲ್ಲಿ ಯಾವುದೂ ಪೂರ್ತಿ ಕೆಟ್ಟದ್ದೂ ಇಲ್ಲ, ಪೂರ್ತಿ ಒಳ್ಳೆಯದೂ ಇಲ್ಲ. “ಯದ್ಭಾವಂ ತದ್ಭವತಿ” ಎಂಬಂತೆ, ನಮ್ಮ ಭಾವನೆಗಳೇ ಫಲಿತಾಂಶವನ್ನು ನಿರ್ಧರಿಸುತ್ತವೆ.
ಪ್ರಾಚೀನ ಕಾಲದಲ್ಲಿ ವಾಹನಗಳನ್ನು ಚರಾಸ್ತಿಗಳ ಸಮಾನವಾಗಿ ಪರಿಗಣಿಸಲಾಗುತ್ತಿತ್ತು. ಮನೆ ವಿಭಾಗ ಮಾಡುವಾಗ ಭೂಮಿಯಂತೆ ವಾಹನಗಳನ್ನೂ ಹಂಚಿಕೊಳ್ಳಲಾಗುತ್ತಿತ್ತು. ಇಂದಿಗೂ ವಾಹನವು ನಮ್ಮ ದೇಹ, ಆತ್ಮ ಮತ್ತು ಪ್ರಾಣವನ್ನೇ ಹೊತ್ತು ಸಾಗಿಸುವ ಒಂದು ಅವಿಭಾಜ್ಯ ಅಂಗವಾಗಿದೆ. ಅಂತಹ ವಾಹನವನ್ನು ಖರೀದಿಸಲು ಜೂನ್ ಮಾಸದಲ್ಲಿ ಮೂರು ಮಹಾಯೋಗಗಳಿವೆ.
ಈ ದಿನ ವಾಹನ ಖರೀದಿಗೆ ಅತ್ಯಂತ ಶುಭಕರವಾಗಿದೆ. ಬುಧವಾರದಂದು ಮಧ್ಯಾಹ್ನ 12 ರಿಂದ 1:30 ರವರೆಗೆ ರಾಹುಕಾಲವಿರುತ್ತದೆ. ಈ ರಾಹುಕಾಲವನ್ನು ಹೊರತುಪಡಿಸಿ ವಾಹನ ಖರೀದಿಸಿದರೆ ನಿಮ್ಮ ಜೀವನದಲ್ಲಿ ಸ್ಥಿರತೆ, ಮಾಡುವ ಕೆಲಸಗಳಲ್ಲಿ ಶುಭ ಮತ್ತು ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ. ಇದು ಅತ್ಯಂತ ಒಳ್ಳೆದಾಗುವ ದಿನ.
ಜೂನ್ 24, ಬುಧವಾರ (ಚಿತ್ತಾ ನಕ್ಷತ್ರ):
ಇದು ಅತ್ಯಂತ ಶಕ್ತಿಶಾಲಿ ಮುಹೂರ್ತಗಳಲ್ಲಿ ಒಂದಾಗಿದೆ. ಚಿತ್ತಾ ನಕ್ಷತ್ರದಲ್ಲಿ ವಾಹನ ಖರೀದಿಸುವುದರಿಂದ ದೈವಬಲ ಚೆನ್ನಾಗಿರುತ್ತದೆ. ಈ ಮುಹೂರ್ತವು 12 ರಾಶಿಗಳಿಗೂ ಶುಭವನ್ನು ತರುತ್ತದೆ. ಅಷ್ಟೇ ಅಲ್ಲದೆ, ಸಣ್ಣಪುಟ್ಟ ಅಪಘಾತಗಳು ಸಂಭವಿಸುವುದನ್ನು ತಪ್ಪಿಸುವ ಸಾಧ್ಯತೆಯೂ ಈ ಮುಹೂರ್ತಕ್ಕೆ ಇದೆ.
ಜೂನ್ 27, ಶನಿವಾರ (ಉತ್ತರಭಾದ್ರ ನಕ್ಷತ್ರ):
ಶನಿವಾರ ವಾಹನ ಖರೀದಿಯು ಬಹಳ ವಿಶೇಷವಾಗಿದೆ. ಈ ದಿನ ಸಾಕ್ಷಾತ್ ವೆಂಕಟೇಶ್ವರನ ಕೃಪೆ, ಶನಿಭಗವಾನ್ ಮತ್ತು ಹನುಮನ ಕೃಪೆ ಇರುತ್ತದೆ. ಉತ್ತರಭಾದ್ರ ನಕ್ಷತ್ರವಿರುವುದರಿಂದ, ಈ ದಿನ ವಾಹನ ಖರೀದಿಸಿದರೆ ಶನಿಭಗವಾನ್‌ನ ಕೃಪಾಶೀರ್ವಾದ ನಿಮಗೆ ದೊರೆಯುತ್ತದೆ.
ಈ ಮೂರು ದಿನಗಳಲ್ಲಿ ನೀವು ಹೊಸ ಕಾರು, ಬೈಕ್, ಸ್ಕೂಟರ್, ಲಾರಿ, ಟ್ರ್ಯಾಕ್ಟರ್, ವ್ಯಾನ್ ಅಥವಾ ಯಾವುದೇ ವಾಹನವನ್ನು ಬುಕ್ ಮಾಡಬಹುದು ಅಥವಾ ನೇರವಾಗಿ ಮನೆಗೆ ತರಬಹುದು. ವಾಹನ ಖರೀದಿಸಿದ ನಂತರ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸುವುದು ಮತ್ತು ವಾಹನದ ಮೇಲೆ ಸ್ವಸ್ತಿಕ್ ಅಳವಡಿಸುವುದು ಅತ್ಯಂತ ಶುಭಕರವೆಂದು ಜ್ಯೋತಿಷ್ಯ ತಜ್ಞರು ಸಲಹೆ ನೀಡುತ್ತಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್‌ನ ಖ್ಯಾತ ನಟ ರಿತೇಶ್ ದೇಶಮುಖ್ ಸದ್ಯ ತಮ್ಮ ಬಹುನಿರೀಕ್ಷಿತ ‘ರಾಜಾ ಶಿವಾಜಿ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ‘ಬಿಗ್ ಬಾಸ್ ಮರಾಠಿ’ ಶೋ ಮೂಲಕ ಇತ್ತೀಚೆಗೆ ಕಿರುತೆರೆಯಲ್ಲೂ ಸಖತ್ ಸೌಂಡ್ ಮಾಡಿದ್ದ ರಿತೇಶ್‌ಗೆ ಚಿತ್ರರಂಗದ ಜೊತೆಗೆ ದೊಡ್ಡ ರಾಜಕೀಯ ಹಿನ್ನೆಲೆಯೂ ಇದೆ. ಇವರ ತಂದೆ ವಿಲಾಸ್ರಾವ್ ದೇಶಮುಖ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದರು. ಅಲ್ಲದೆ ರಿತೇಶ್ ಅವರ ಇಬ್ಬರು ಸಹೋದರರು ಕೂಡ ಸದ್ಯ ರಾಜಕೀಯದಲ್ಲೇ ಸಕ್ರಿಯರಾಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಸಹೋದರರ ಪರ ಪ್ರಚಾರಕ್ಕೆ ಇಳಿಯುವ ರಿತೇಶ್ ದೇಶಮುಖ್ ಅವರಿಗೆ ಮಹಾರಾಷ್ಟ್ರದಲ್ಲಿ ದೊಡ್ಡ ಜನಬೆಂಬಲವಿದೆ. ಹೀಗಾಗಿ ರಿತೇಶ್ ದೇಶಮುಖ್ ರಾಜಕೀಯಕ್ಕೆ ಬರುವುದು ಯಾವಾಗ? ಎಂಬ ಪ್ರಶ್ನೆ ಸದಾ ಕೇಳಿಬರುತ್ತಿರುತ್ತದೆ. ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟನಿಗೆ ಮತ್ತೊಮ್ಮೆ ಇದೇ ಪ್ರಶ್ನೆ ಎದುರಾಯಿತು.
ದಳಪತಿ ವಿಜಯ್ ಸಿಎಂ ಆದ ಪ್ರಸ್ತಾಪ:
ಈ ವೇಳೆ ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಸ್ತಾಪವಾಯಿತು. ಅಲ್ಲಿ ಸ್ಟಾರ್ ನಟ ದಳಪತಿ ವಿಜಯ್ ತಮ್ಮದೇ ಆದ ಹೊಸ ಪಕ್ಷ ಕಟ್ಟಿ, ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿ ನೇರವಾಗಿ ಮುಖ್ಯಮಂತ್ರಿಯಾಗಿದ್ದಾರೆ. ತಮಿಳುನಾಡಿನಲ್ಲಿ ಕಲಾವಿದರು ರಾಜಕೀಯಕ್ಕೆ ಬಂದು ಯಶಸ್ವಿಯಾಗುವುದು ಸಾಮಾನ್ಯ. ‘ನಿಮಗೂ ಅಂತಹದ್ದೇ ದೊಡ್ಡ ರಾಜಕೀಯ ಹಿನ್ನೆಲೆ ಮತ್ತು ಜನಪ್ರಿಯತೆ ಇದೆ. ತಮಿಳುನಾಡು ರಾಜಕೀಯ ಹಾಗೂ ವಿಜಯ್ ಅವರ ಯಶಸ್ಸನ್ನು ನೋಡಿದ ಮೇಲೆ, ನೀವು ಕೂಡ ಒಮ್ಮೆ ಇಂತಹ ಪ್ರಯೋಗವನ್ನು ಮಾಡಬಾರದೇ?’ ಎಂದು ರಿತೇಶ್ ಅವರನ್ನು ಕೇಳಲಾಯಿತು.
ಈ ಪ್ರಶ್ನೆಗೆ ರಿತೇಶ್ ದೇಶಮುಖ್ ಅತ್ಯಂತ ಚುರುಕಾಗಿ ಮತ್ತು ಪವರ್‌ಫುಲ್ ಆಗಿ ಉತ್ತರಿಸಿದ್ದಾರೆ. ‘ನಟ ವಿಜಯ್ ಅವರಿಗೆ ಇರುವ ಜನಪ್ರಿಯತೆ ಹಾಗೂ ಕ್ರೇಜ್ ಏನು ಎಂಬುದು ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಆದರೆ, ನಾನು ಮಾತ್ರ ಖಂಡಿತವಾಗಿಯೂ ಅಂತಹ ಯಾವುದೇ ರಾಜಕೀಯ ಪ್ರಯೋಗಕ್ಕೆ ಕೈ ಹಾಕುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಒಂದು ವೇಳೆ ನಾನು ರಾಜಕೀಯಕ್ಕೆ ಪ್ರವೇಶಿಸಿದರೆ, ಆಗ ನೀವೇ (ಮಾಧ್ಯಮಗಳು ಮತ್ತು ಜನರು) ಒಂದೇ ಕುಟುಂಬದ ಎಷ್ಟು ಜನ ರಾಜಕೀಯಕ್ಕೆ ಬರುತ್ತಾರೆ? ಎಂದು ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡಲು ಶುರು ಮಾಡುತ್ತೀರಿ’ ಎಂದು ರಿತೇಶ್ ತಮಾಷೆಯಾಗಿಯೇ ಟಾಂಗ್ ನೀಡಿದ್ದಾರೆ. ಸದ್ಯ ರಾಜಕೀಯ ಎಂಟ್ರಿ ಮತ್ತು ಕುಟುಂಬ ರಾಜಕಾರಣದ ಕುರಿತು ರಿತೇಶ್ ದೇಶಮುಖ್ ನೀಡಿರುವ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಟೆಲ್ ಅವಿವ್, ಜೂನ್ 09: ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಭೀಕರ ಯುದ್ಧದ ಮುನ್ಸೂಚನೆ ನೀಡಿದ್ದ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯು, ಜಾಗತಿಕ ನಾಯಕರ ತತ್‌ಕ್ಷಣದ ರಾಜತಾಂತ್ರಿಕ ಹಸ್ತಕ್ಷೇಪದಿಂದಾಗಿ ಸದ್ಯಕ್ಕೆ ಶಾಂತಿಯುತ ನಿಯಂತ್ರಣಕ್ಕೆ ಬಂದಿದೆ. ಇರಾನ್ ವಿರುದ್ಧ ಇಸ್ರೇಲ್ ಸಿದ್ಧಪಡಿಸುತ್ತಿದ್ದ ಬೃಹತ್ ಮಟ್ಟದ ಪ್ರತೀಕಾರದ ದಾಳಿಯ ಅಲೆಯನ್ನು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ನೇರ ಹಾಗೂ ಪ್ರಭಾವಶಾಲಿ ಮಾತುಕತೆಯು ಯಶಸ್ವಿಯಾಗಿ ತಡೆದಿದೆ.
ಯುದ್ಧದ ಹಾದಿಯನ್ನು ಬದಿಗಿಟ್ಟು ಪ್ರಾದೇಶಿಕ ಸ್ಥಿರತೆ ಮತ್ತು ಸೌಹಾರ್ದತೆಗೆ ಆದ್ಯತೆ ನೀಡುವಂತೆ ಟ್ರಂಪ್ ನೀಡಿದ ಕಟ್ಟುನಿಟ್ಟಿನ ಸಂದೇಶಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡ ನಿರಾಳತೆಯನ್ನು ತಂದಿದೆ.
ಜಾಗರೂಕರಾಗಿರಿ, ಟ್ರಂಪ್ ನೀಡಿದ ಬಲವಾದ ಮುನ್ನೆಚ್ಚರಿಕೆ
ಅಮೆರಿಕದ ಪ್ರತಿಷ್ಠಿತ ‘ಆಕ್ಸಿಯಾಸ್’ ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ನಡೆಸಿದ ರಹಸ್ಯ ದೂರವಾಣಿ ಸಂಭಾಷಣೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಟ್ರಂಪ್ ಅವರು ಇಸ್ರೇಲ್ ಇನ್ನು ಮುಂದೆ ಏಕಪಕ್ಷೀಯವಾಗಿ ಮಿಲಿಟರಿ ಕ್ರಮ ತೆಗೆದುಕೊಳ್ಳಬಾರದು ಎಂದು ಒತ್ತಿಹೇಳಿದ್ದಾರೆ.
ನಾನು ಅವರಿಗೆ ನೇರವಾಗಿ ಕರೆ ಮಾಡಿ ಹೇಳಿದೆ, ನೀವು ಈ ಪರಿಸ್ಥಿತಿಯಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ಒಂದು ವೇಳೆ ನೀವು ಇರಾನ್ ಜೊತೆ ಮತ್ತೊಂದು ವ್ಯಾಪಕ ಸಂಘರ್ಷವನ್ನು ಹುಟ್ಟುಹಾಕಿದರೆ, ಶೀಘ್ರದಲ್ಲೇ ನೀವು ಈ ಯುದ್ಧದಲ್ಲಿ ಒಬ್ಬಂಟಿಯಾಗಿರಬೇಕಾಗುತ್ತದೆ ಎಂದು ಹೇಳಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.
ಆರಂಭದಲ್ಲಿ ಉಭಯ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದರೂ, ಅಂತಿಮವಾಗಿ ಇರಾನ್ ಹೆಚ್ಚುವರಿ ದಾಳಿಗಳನ್ನು ನಡೆಸದಂತೆ ತಡೆಯುವ ರಾಜತಾಂತ್ರಿಕ ಚೌಕಟ್ಟಿಗೆ ನೆತನ್ಯಾಹು ಒಪ್ಪಿಗೆ ನೀಡಿದರು.
ಉತ್ತರ ಇಸ್ರೇಲ್ ಮೇಲೆ ಸಾವಿರಾರು ಹೋರಾಟಗಾರರನ್ನು ಬಳಸಿ ಭಾರಿ ಕ್ಷಿಪಣಿ ದಾಳಿ ನಡೆಸಲು ಹಿಜ್ಬುಲ್ಲಾ ರೂಪಿಸಿದ್ದ ಬೃಹತ್ ಸಂಚನ್ನು ಇಸ್ರೇಲಿ ಪಡೆಗಳು ಅತ್ಯಂತ ಯಶಸ್ವಿಯಾಗಿ ನಿಗ್ರಹಿಸಿವೆ. ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮವನ್ನು ಮುಂದುವರೆಸದಂತೆ ಇಸ್ರೇಲ್‌ನ ಪೂರ್ವಭಾವಿ ಕಾರ್ಯಾಚರಣೆಗಳು ತಡೆದಿವೆ ಎಂದು ನೆತನ್ಯಾಹು ವಿವರಿಸಿದ್ದಾರೆ.
ಪ್ರಸ್ತುತ ಇಸ್ರೇಲ್ ಮತ್ತು ಇರಾನ್ ನಡುವಿನ ನೇರ ಕ್ಷಿಪಣಿ ವಿನಿಮಯಗಳು ಸಂಪೂರ್ಣವಾಗಿ ನಿಂತಿದ್ದು, ಗಡಿ ಭಾಗಗಳಲ್ಲಿ ಶಾಂತಿ ಮರಳುತ್ತಿದೆ. ಭವಿಷ್ಯದಲ್ಲಿ ಯಾವುದೇ ಆಕ್ರಮಣ ಎದುರಾದರೂ ಇಸ್ರೇಲ್ ಸನ್ನದ್ಧವಾಗಿದೆ ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದರೂ, ಸದ್ಯಕ್ಕೆ ಯುದ್ಧದ ಕಾರ್ಮೋಡ ಸರಿದು ರಾಜತಾಂತ್ರಿಕ ಮಾತುಕತೆಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿರುವುದು ವಿಶ್ವ ಸಂಸ್ಥೆ ಹಾಗೂ ಜಾಗತಿಕ ಸಮುದಾಯದ ಪ್ರಶಂಸೆಗೆ ಪಾತ್ರವಾಗಿದೆ.
ರಿಯಾಲಿಟಿ ಶೋ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾಗಿರುವ ‘ಬಿಗ್ ಬಾಸ್’ ಶೋ ಈಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ರೆಡಿಯಾಗಿದೆ. ಬರೋಬ್ಬರಿ ಒಂದು ದಶಕದ ಸುದೀರ್ಘ ಗ್ಯಾಪ್ ನಂತರ ‘ಬಿಗ್ ಬಾಸ್ ಬಾಂಗ್ಲಾ’ ಭರ್ಜರಿಯಾಗಿ ಕಂಬ್ಯಾಕ್ ಮಾಡುತ್ತಿದ್ದು, ಶೋನ ಹೊಸ ಟೀಸರ್ ಅಧಿಕೃತವಾಗಿ ರಿಲೀಸ್ ಆಗಿದೆ. ವಿಶೇಷ ಎಂದರೆ, ಈ ಬಾರಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಈ ಶೋನ ನಿರೂಪಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಸ್ಟಾರ್ ಜಲ್ಶಾ ವಾಹಿನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಿಗ್ ಬಾಸ್ ಬಾಂಗ್ಲಾದ ಮೊದಲ ಪ್ರೋಮೋ ಹಾಗೂ ಟೀಸರ್ ಅನ್ನು ಹಂಚಿಕೊಂಡಿದೆ. ಈ ಟೀಸರ್‌ನಲ್ಲಿ ಹುಲಿಯ ಎಂಟ್ರಿಯ ಜೊತೆಗೆ ಸೂಟ್ ಧರಿಸಿದ ಖದರ್ ಲುಕ್‌ನಲ್ಲಿ ಸೌರವ್ ಗಂಗೂಲಿ ಬಿಗ್ ಬಾಸ್ ಮನೆಗೆ ನಿರೂಪಕನಾಗಿ ಹೆಜ್ಜೆ ಇಟ್ಟಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ವರದಿಗಳ ಪ್ರಕಾರ, ಈ ರಿಯಾಲಿಟಿ ಶೋ ಮುನ್ನಡೆಸಲು ಗಂಗೂಲಿ ಅವರು ಬರೋಬ್ಬರಿ 125 ಕೋಟಿ ರೂಪಾಯಿಯ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಟೀಸರ್ ನೋಡಿರುವ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಎಕ್ಸೈಟ್ ಆಗಿದ್ದು, ಶೋ ನೋಡಲು ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಭಾರತದಲ್ಲಿ ಈಗಾಗಲೇ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಮರಾಠಿ ಸೇರಿದಂತೆ 7 ಭಾಷೆಗಳಲ್ಲಿ ಬಿಗ್ ಬಾಸ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ಬಗ್ಗೆ ಮಾತನಾಡಿರುವ ಎಂಡೆಮೋಲ್ ಶೈನ್ ಇಂಡಿಯಾದ ಮುಖ್ಯಸ್ಥ ರಿಷಿ ನೇಗಿ, ‘ಪ್ರಾದೇಶಿಕ ಮತ್ತು ಸ್ಥಳೀಯ ಮಾರುಕಟ್ಟೆಯ ವೀಕ್ಷಕರನ್ನು ತಲುಪುವುದು ನಮ್ಮ ಮುಖ್ಯ ಗುರಿಯಾಗಿದೆ’ ಎಂದಿದ್ದಾರೆ. ‘ಬೆಂಗಾಲಿ ಮಾರುಕಟ್ಟೆಯಲ್ಲಿ ಇಡೀ ದೇಶವೇ ಗುರುತಿಸುವಂತಹ ದೊಡ್ಡ ವ್ಯಕ್ತಿ ಶೋ ನಡೆಸಿಕೊಡಲಿದ್ದಾರೆ ಎಂದು ಈ ಹಿಂದೆ ಹೇಳಿದ್ದೆವು. ಅದರಂತೆ ಈಗ ಸೌರವ್ ಗಂಗೂಲಿ ಎಂಟ್ರಿಯಾಗಿದೆ’ ಎಂದಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ಬಿಗ್ ಬಾಸ್ ಪಂಜಾಬಿ ಮತ್ತು ಭೋಜಪುರಿ ಭಾಷೆಗಳಿಗೂ ವಿಸ್ತರಣೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಗ್ ಬಾಸ್ ಒಟಿಟಿಗೆ ಬ್ರೇಕ್?
ಒಂದೆಡೆ ಪ್ರಾದೇಶಿಕ ಭಾಷೆಗಳಲ್ಲಿ ಬಿಗ್ ಬಾಸ್ ಹವಾ ಜೋರಾಗುತ್ತಿದ್ದರೆ, ಮತ್ತೊಂದೆಡೆ ಬಿಗ್ ಬಾಸ್‌ನ ಡಿಜಿಟಲ್ ಆವೃತ್ತಿಯಾದ ‘ಬಿಗ್ ಬಾಸ್ OTT’ ಶೋ ಅನ್ನು ಈ ಬಾರಿ ಸ್ಥಗಿತಗೊಳಿಸಲು ನಿರ್ಧಾರ ಮಾಡಲಾಗಿದೆ. ಟಿವಿ ಪ್ರೇಕ್ಷಕರು ಮತ್ತು ಒಟಿಟಿ ಪ್ರೇಕ್ಷಕರು ವಿಭಿನ್ನವಾಗಿದ್ದು, ಸದ್ಯಕ್ಕೆ ಟಿವಿ ಮತ್ತು ಜಿಯೋಹಾಟ್‌ಸ್ಟಾರ್‌ಗಳಲ್ಲಿ ನೇರ ಪ್ರಸಾರ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಸದ್ಯಕ್ಕೆ ಬಿಗ್ ಬಾಸ್ ಬಾಂಗ್ಲಾ ಸೀಸನ್ 3ರ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸುತ್ತಿದ್ದು, ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳು ಯಾರು ಮತ್ತು ಶೋ ಯಾವಾಗ ಆರಂಭವಾಗಲಿದೆ ಎಂಬ ಅಧಿಕೃತ ದಿನಾಂಕಗಳನ್ನು ಚಿತ್ರತಂಡ ಸದ್ಯದಲ್ಲೇ ಪ್ರಕಟಿಸಲಿದೆ.
ಛಿಂದ್ವಾರಾ, ಜೂನ್ 09: ಮದುವೆ ಸಮಾರಂಭಗಳಲ್ಲಿ ನವ ಜೋಡಿ ಹರಸಿ ಅವರು ಕೊಟ್ಟಷ್ಟು ಹಣವನ್ನು ಪಡೆದು ಹೋಗುವ ಮಂಗಳಮುಖಿ(Transgenders)ಯರು ಒಂದು ಕಡೆಯಾದರೆ, ಇತ್ತ ಪುರುಷರು ಮಂಗಳಮುಖಿಯರಂತೆ ವೇಷ ತೊಟ್ಟು ಮದುವೆ ಮನೆಯಲ್ಲಿ ಭಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಗುಂಪು ಇನ್ನೊಂದು ಕಡೆ. ಈ ಗುಂಪನ್ನು ಜನರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮದುವೆ ಹಾಗೂ ಇತರ ಮಂಗಳಕರ ಸಮಾರಂಭಗಳ ಸಂದರ್ಭದಲ್ಲಿ ಹಣದ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ನಕಲಿ ಗ್ಯಾಂಗ್ ಒಂದನ್ನು ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ನಾಗರಿಕರು ಅತ್ಯಂತ ಜಾಣಾಕ್ಷತನದಿಂದ ಪತ್ತೆಹಚ್ಚಿದ್ದಾರೆ. ಜಿಲ್ಲೆಯ ಪರಸಿಯಾ ಪ್ರದೇಶದ ದರ್ಬಾಯ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಮಂಗಳಮುಖಿಯರಂತೆ ವೇಷ ಧರಿಸಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದ ಯುವಕರ ಅಸಲಿ ಮುಖವಾಡವನ್ನು ಸ್ಥಳೀಯರು ಬಯಲಿಗೆಳೆದಿದ್ದಾರೆ.
ಈ ಘಟನೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಇಂತಹ ವಂಚಕರ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಅನುಮಾನ ಮೂಡಿಸಿದ ಅತಿಯಾದ ಬೇಡಿಕೆ, ಬಯಲಾಯ್ತು ವಂಚನೆ
ದರ್ಬಾಯ್ ಗ್ರಾಮದಲ್ಲಿ ವೈಭವದ ಮದುವೆ ಸಮಾರಂಭ ನಡೆಯುತ್ತಿದ್ದಾಗ, ಮಂಗಳಮುಖಿಯರಂತೆ ಉಡುಪು, ಮೇಕಪ್ ಮಾಡಿಕೊಂಡ ಪುರುಷರು ವಧು-ವರರ ಕುಟುಂಬಸ್ಥರ ಬಳಿ ದೊಡ್ಡ ಮೊತ್ತದ ಹಣವನ್ನು ನೀಡುವಂತೆ ಪಟ್ಟು ಹಿಡಿದರು. ಆದರೆ, ಅವರ ವರ್ತನೆ ಮತ್ತು ಅತಿಯಾದ ಒತ್ತಾಯವು ಅಲ್ಲಿದ್ದ ಗ್ರಾಮಸ್ಥರಲ್ಲಿ ತೀವ್ರ ಅನುಮಾನವನ್ನು ಹುಟ್ಟುಹಾಕಿತು.
ಗ್ರಾಮಸ್ಥರು ತಕ್ಷಣವೇ ಸ್ಥಳೀಯ ಮಂಗಳಮುಖಿಯರ ಸಮುದಾಯದ ಮುಖಂಡರಿಗೆ ಫೋನ್ ಮೂಲಕ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡರು. ಸ್ಥಳಕ್ಕೆ ಬಂದ ತೃತೀಯ ಲಿಂಗಿ ಸಮುದಾಯದ ಸದಸ್ಯರು ಈ ಅಪರಿಚಿತರ ಗುರುತನ್ನು ಪರಿಶೀಲಿಸಿದಾಗ, ಅವರು ಮಂಗಳಮುಖಿಯರಲ್ಲ ಬದಲಿಗೆ ಹಣದ ಆಸೆಗೆ ಸೀರೆ ಉಟ್ಟು ವೇಷ ಧರಿಸಿದ್ದ ಯುವಕರು ಎಂಬ ಆಘಾತಕಾರಿ ಸತ್ಯ ಬಹಿರಂಗವಾಯಿತು.
ವಿಡಿಯೋ
मध्य प्रदेश के छिंदवाड़ा जिले के परासिया क्षेत्र के दरबई गांव में नकली किन्नर बनकर नेग मांगने पहुंचे कुछ युवकों का भंडाफोड़ हो गया। शादी समारोह में बड़ी रकम की मांग किए जाने पर ग्रामीणों को शक हुआ, जिसके बाद किन्नर समुदाय को सूचना दी गई। मौके पर पहुंचे किन्नर समाज के लोगों ने… pic.twitter.com/BJFh6Urlzu
ಸ್ಥಳದಲ್ಲೇ ತರಾಟೆಗೆ ತಗೆದುಕೊಂಡ ಮಹಿಳೆಯರು
ವಂಚನೆ ಸಂಪೂರ್ಣವಾಗಿ ಜಗಜ್ಜಾಹೀರಾಗುತ್ತಿದ್ದಂತೆ ಮದುವೆ ಮನೆಯಲ್ಲಿದ್ದ ಮಹಿಳೆಯರು ಮತ್ತು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ನಂಬಿಕೆ ಹಾಗೂ ಸಾಂಪ್ರದಾಯಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಮಹಿಳೆಯರು ಆ ನಕಲಿ ವ್ಯಕ್ತಿಗಳಿಗೆ ಕಪಾಳಮೋಕ್ಷ ಮಾಡಿ, ಅವರ ಮುಖವಾಡ ಮತ್ತು ವೇಷಭೂಷಣಗಳನ್ನು ಕಳಚಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪಕ್ಕದಲ್ಲಿದ್ದವರು ಇಡೀ ಘಟನೆಯನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ಸಮಾಜಕ್ಕೆ ವಂಚಿಸುವ ಇಂತಹ ಗ್ಯಾಂಗ್‌ಗಳ ವಿರುದ್ಧ ಜಾಗರೂಕರಾಗಿರಲು ಈ ವಿಡಿಯೋ ನೆರವಾಗುತ್ತಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಈ ನಕಲಿ ಗ್ಯಾಂಗ್ ಈ ಹಿಂದೆಯೂ ಜಿಲ್ಲೆಯ ಹಲವಾರು ಮದುವೆಗಳು, ಮಗುವಿನ ಜನನ ಹಾಗೂ ಗೃಹಪ್ರವೇಶದಂತಹ ಆಚರಣೆಗಳಿಗೆ ಮಂಗಳಮುಖಿಯರಂತೆ ನಟಿಸುತ್ತಾ ನುಗ್ಗಿ, ಅಮಾಯಕ ಕುಟುಂಬಗಳಿಂದ ಸಾವಿರಾರು ರೂಪಾಯಿಗಳನ್ನು ದೋಚುತ್ತಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.
ಲಾರ್ಡ್ಸ್ ಮೈದಾನದಲ್ಲಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ 115 ರನ್‌ಗಳ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ, ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮತ್ತು ವೇಗಿ ಗಸ್ ಅಟ್ಕಿನ್ಸನ್ ಲಂಡನ್‌ನ ನೈಟ್‌ಕ್ಲಬ್ ಒಂದರಲ್ಲಿ ನಡೆದ ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಇವರಿಬ್ಬರ ವಿರುದ್ಧ ಶಿಸ್ತು ಕ್ರಮದ ತನಿಖೆ ಆರಂಭಿಸಿದೆ.
ಏನಿದು ಘಟನೆ?
ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಮುಗಿದ ಕೆಲವೇ ಗಂಟೆಗಳಲ್ಲಿ ಇಂಗ್ಲೆಂಡ್ ತಂಡದ ಕೆಲ ಆಟಗಾರರು ಚೆಲ್ಸಿಯಾದಲ್ಲಿರುವ ಪ್ರಸಿದ್ಧ ‘ರೆಕ್ಸ್ ರೂಮ್ಸ್’ ನೈಟ್ಕ್ಲಬ್ಗೆ ತೆರಳಿದ್ದರು. ಈ ವೇಳೆ ಸರಸೆನ್ಸ್ ರಗ್ಬಿ ಅಕಾಡೆಮಿಯ ಆಟಗಾರರು ಕೂಡ ಅಲ್ಲಿದ್ದರು.
ಈ ಪಾರ್ಟಿಯ ನಡುವೆ ಬೆನ್ ಸ್ಟೋಕ್ಸ್ ಹಾಗೂ ಗಸ್ ಅಟ್ಕಿನ್ಸನ್ ಸರಸೆನ್ಸ್ ರಗ್ಬಿ ಅಕಾಡೆಮಿಯ ಆಟಗಾರರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ಮಾತಿನ ಚಕಮಕಿಯಿಂದಾಗಿ ಗಲಾಟೆ ಕೂಡ ನಡೆದಿದೆ.
ಇತ್ತ ಗಲಾಟೆಯ ನಡುವೆ ಗಸ್ ಅಟ್ಕಿನ್ಸನ್ ಅವರತ್ತ ತೂರಿ ಬಂದ ಹೊಡೆತವನ್ನು ತಡೆಯಲು ಹೋದ ಇಸಿಬಿ ಭದ್ರತಾ ಸಿಬ್ಬಂದಿಯೊಬ್ಬರಿಗೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಬೆನ್ ಸ್ಟೋಕ್ಸ್ ಅಥವಾ ಗಸ್ ಅಟ್ಕಿನ್ಸನ್ ಈ ಗಲಾಟೆಯನ್ನು ಶುರು ಮಾಡಿಲ್ಲ ಮತ್ತು ಇಬ್ಬರಿಗೂ ಯಾವುದೇ ದೈಹಿಕ ಗಾಯಗಳಾಗಿಲ್ಲ. ಆದರೆ, ತಂಡದ ನಿಯಮಗಳನ್ನು ಮೀರಿ ತಡರಾತ್ರಿ ಹೊರಗುಳಿದಿದ್ದೇ ಇವರ ಪಾಲಿಗೆ ಮುಳ್ಳಾಗಿದೆ.
ಕಟ್ಟುನಿಟ್ಟಿನ ‘ನಿಯಮ’ ಮೀರಿದ ಆಟಗಾರರು:
ಇತ್ತೀಚೆಗಷ್ಟೇ ನ್ಯೂಝಿಲೆಂಡ್‌ನಲ್ಲಿ ಇಂಗ್ಲೆಂಡ್‌ನ ವೈಟ್-ಬಾಲ್ ನಾಯಕ ಹ್ಯಾರಿ ಬ್ರೂಕ್ ಮೇಲೆ ಬೌನ್ಸರ್ ಒಬ್ಬರು ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಈ ಕಾರಣದಿಂದಾಗಿ ಇಂಗ್ಲೆಂಡ್ ಮ್ಯಾನೇಜ್‌ಮೆಂಟ್ ಆಟಗಾರರಿಗೆ ಮಧ್ಯರಾತ್ರಿ 12 ಗಂಟೆಯ ಕರ್ಫ್ಯೂ ನಿಯಮವನ್ನು ಕಡ್ಡಾಯಗೊಳಿಸಿತ್ತು. ಅಂದರೆ ತಡರಾತ್ರಿ ಪಾರ್ಟಿಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಿತ್ತು.
ಇದಾಗ್ಯೂ ಬೆನ್ ಸ್ಟೋಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಈ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಮುಂಜಾನೆವರೆಗೂ ಕ್ಲಬ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ನಡುವೆ ನಡೆದ ಜಗಳವೇ ಇದೀಗ ಇಬ್ಬರು ಆಟಗಾರರ ಪಾಲಿಗೆ ಮುಳುವಾಗಿದೆ.
ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಇಸಿಬಿ, ಪ್ರಕರಣವನ್ನು ಸ್ವತಂತ್ರ ಸಂಸ್ಥೆಯಾದ ಕ್ರಿಕೆಟ್ ರೆಗ್ಯುಲೇಟರ್‌ಗೆ ಒಪ್ಪಿಸಿದೆ. ಆಟಗಾರರ ವರ್ತನೆ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಯ ಬಗ್ಗೆ ತನಿಖೆ ಆರಂಭವಾಗಿದೆ.
ಸಂಕಷ್ಟಕ್ಕೆ ಸಿಲುಕಿದ ಇಸಿಬಿ:
ಈ ವಿವಾದದಿಂದಾಗಿ ಜೂನ್ 17 ರಿಂದ ‘ದಿ ಓವಲ್’ ಮೈದಾನದಲ್ಲಿ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದ ಸಿದ್ಧತೆ ಸಂಪೂರ್ಣ ಹಳಿ ತಪ್ಪಿದೆ. ಅಲ್ಲದೆ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇನ್ನೂ ಕೂಡ ತಂಡವನ್ನು ಪ್ರಕಟಿಸಿಲ್ಲ.
ತಂಡದ ಪ್ರಕಟಣೆ ವಿಳಂಬ: ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಬೇಕಾಗಿದ್ದ ಇಸಿಬಿ, ಈ ವಿವಾದದ ಹಿನ್ನೆಲೆಯಲ್ಲಿ ಸದ್ಯಕ್ಕೆ ತಂಡದ ಪ್ರಕಟಣೆಯನ್ನು ಮುಂದೂಡಿದೆ.
ನಾಯಕತ್ವಕ್ಕೆ ಕುತ್ತು: ಬೆನ್ ಸ್ಟೋಕ್ಸ್ ಈ ಹಿಂದೆ ಕೂಡ ಇಂತಹದೇ ವಿವಾದಗಳಲ್ಲಿ ಸಿಲುಕಿದ್ದರು. ಈಗ ತಂಡದ ನಾಯಕನಾಗಿಯೇ ನಿಯಮ ಮುರಿದಿರುವುದರಿಂದ ಅವರ ನಾಯಕತ್ವದ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ದಟ್ಟವಾಗಿದೆ.
ಪ್ರಮುಖ ಬೌಲರ್ ಅಲಭ್ಯತೆ ಭೀತಿ: ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಇಂಗ್ಲೆಂಡ್ ಗೆಲುವಿನ ರೂವಾರಿಯಾಗಿದ್ದ ಗಸ್ ಅಟ್ಕಿನ್ಸನ್, ಶಿಸ್ತು ಕ್ರಮದ ಭಾಗವಾಗಿ ತಂಡದಿಂದ ಅಮಾನತಾಗುವ ಭೀತಿಯಲ್ಲಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಲಾರ್ಡ್ಸ್ ಮೈದಾನದ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿದ್ದ ಇಂಗ್ಲೆಂಡ್ ಕ್ರಿಕೆಟ್‌ಗೆ, ಈ ನೈಟ್‌ಕ್ಲಬ್ ವಿವಾದ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ನಿಯಮ ಮತ್ತು ಶಿಸ್ತಿಗೆ ಹೆಸರಾದ ಕ್ರಿಕೆಟ್ ಲೋಕದಲ್ಲಿ, ತಂಡದ ನಾಯಕನೇ ಕರ್ಫ್ಯೂ ಉಲ್ಲಂಘಿಸಿ ತನಿಖೆ ಎದುರಿಸುತ್ತಿರುವುದು ಇಂಗ್ಲೆಂಡ್ ತಂಡದ ವರ್ಚಸ್ಸಿಗೆ ಭಾರಿ ಧಕ್ಕೆ ತಂದಿದೆ. ಹೀಗಾಗಿ ಬೆನ್ ಸ್ಟೋಕ್ಸ್ ಹಾಗೂ ಗಸ್ ಅಟ್ಕಿನ್ಸನ್ ವಿರುದ್ಧ ಇಸಿಬಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಚಿಕ್ಕಮಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ
ಬೆಂಗಳೂರು, ಜೂನ್ 09: ನೈಋತ್ಯ ಮುಂಗಾರು ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವರುಣನ (Weather) ಅಬ್ಬರ ಜೋರಾಗಿದ್ದು, ಹವಾಮಾನ ಇಲಾಖೆಯು ಚಿಕ್ಕಮಗಳೂರು ಸೇರಿದಂತೆ 5 ಜಿಲ್ಲೆಗಳಿಗೆ ಅತ್ಯಂತ ಭಾರಿ ಮಳೆಯ ಹಿನ್ನೆಲೆ ರೆಡ್ ಅಲರ್ಟ್ (Red Alert) ಘೋಷಿಸಿದೆ. ಇಂದೂ ಸೇರಿದಂತೆ ಮೂರು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಪ್ರಕೃತಿ ವಿಕೋಪದ ಸಾಧ್ಯತೆ ಇರುವುದರಿಂದ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮುಖ್ಯಾಂಶಗಳು
ಚಿಕ್ಕಮಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.
ನದಿ ತೀರ, ತಗ್ಗು ಪ್ರದೇಶಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ತುರ್ತು ಪರಿಸ್ಥಿತಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಲ್ಪ್‌ಲೈನ್ ಆರಂಭಿಸಲಾಗಿದೆ.
5 ಜಿಲ್ಲೆಗಳಿಗೆ ರೆಡ್ ಅಲರ್ಟ್: ಎಲ್ಲೆಲ್ಲಿ ಭಾರಿ ಮಳೆ?
ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಬಿರುಗಾಳಿ ಸಹಿತ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಸೂಚಿಸಲಾಗಿದೆ.
ಬೆಳಗಾವಿ, ಧಾರವಾಡ, ಹಾವೇರಿ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದ್ದು, ಇಲ್ಲೂ ಭಾರಿ ಮಳೆಯಾಗಲಿದೆ. ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದರೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಲಿದೆ.
ಚಿಕ್ಕಮಗಳೂರಿನಲ್ಲಿ ಕಟ್ಟೆಚ್ಚರ: 24 ಗಂಟೆ ಸಹಾಯವಾಣಿ ಆರಂಭ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಹೈ ಅಲರ್ಟ್ ಘೋಷಿಸಿದ್ದಾರೆ. ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ ತೀರ ಹಾಗೂ ತಗ್ಗು ಪ್ರದೇಶಗಳಿಗೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ತಾಲೂಕು ಮಟ್ಟದಲ್ಲಿ ಪರಿಸ್ಥಿತಿ ನಿಭಾಯಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಎಲ್ಲಾ ತುರ್ತು ಸೇವಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲೇ ಇರುವಂತೆ ಡಿಸಿ ಆದೇಶಿಸಿದ್ದಾರೆ. ಡಿಸಿ ಕಚೇರಿ ಮತ್ತು ಎಸ್ಪಿ ಕಚೇರಿಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಹೆಲ್ಪ್‌ಲೈನ್ ಆರಂಭಿಸಲಾಗಿದೆ. ತುರ್ತು ಸಂದರ್ಭದಲ್ಲಿ 08262-238950 ಅಥವಾ 9480805100 ನಂಬರ್ಗಳಿಗೆ ಕರೆ ಮಾಡುವಂತೆ ಹೇಳಲಾಗಿದೆ.