All posts by nagaraj11081993

LSG vs DC: ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ಲಕ್ನೋ ‘ಸೂಪರ್ ಸ್ಟಾರ್ಸ್’

Source link

ಹೋಟೆಲ್ ಬಳಿ ಡ್ರಗ್ಸ್ ಸೇವನೆ: ಪ್ರಶ್ನಿಸಿದ್ದಕ್ಕೆ ಗಲಾಟೆ; ಸಿಕ್ಕಸಿಕ್ಕ ವಸ್ತುಗಳಿಂದ ಹೊಡೆದಾಟ

ಬೆಂಗಳೂರು, ಏಪ್ರಿಲ್​ 01: ಕಾಫಿ ಶಾಪ್‌ ಬಳಿ ಡ್ರಗ್ಸ್ ಸೇವನೆ ಆರೋಪ ಹಿನ್ನೆಲೆ ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪ್ಪಿನ ನಡುವೆ ಭಾರಿ ಗಲಾಟೆ (fight) ನಡೆದಿರುವಂತಹ ಘಟನೆ ಕೊತ್ತನೂರಿನ ಭಾರತಿ ಸಿಟಿಯ ಕಾಫಿ ಶಾಪ್​​ ಬಳಿ ನಿನ್ನೆ ರಾತ್ರಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.

ನಡೆದಿದ್ದೇನು?

ಹೋಟೆಲ್ ಸಿಬ್ಬಂದಿ ಮತ್ತು ಸ್ಥಳೀಯ ಯುವಕರ ಗುಂಪಿನ ನಡುವೆ ನಡೆದ ಈ ಗಲಾಟೆಗೆ ಡ್ರಗ್ಸ್ ಸೇವನೆ ಆರೋಪವೇ ಕಾರಣ ಎನ್ನಲಾಗಿದೆ. ಹೆಣ್ಣೂರು ಭಾಗದಿಂದ ಬಂದಿದ್ದ ಕೆಲ ಯುವಕರು ಹೋಟೆಲ್ ಬಳಿ ಸಿರಿಂಜ್ ಮೂಲಕ ಡ್ರಗ್ಸ್ ಇಂಜೆಕ್ಟ್ ಮಾಡಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದನ್ನು ಸಿಸಿ ಕ್ಯಾಮೆರಾಗಳ ಮೂಲಕ ಗಮನಿಸಿದ ಹೋಟೆಲ್ ಸಿಬ್ಬಂದಿ, ತಕ್ಷಣವೇ ಯುವಕರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಇನ್ನು ಮುಂದೆ ತಮ್ಮ ಹೋಟೆಲ್‌ಗೆ ಬರದಂತೆ ಯುವಕರ ಸಂಬಂಧಿಕರಿಗೂ ಮಾಹಿತಿ ನೀಡಿದ್ದಾರೆ. ಇದರಿಂದ ಕೆರಳಿದ ಯುವಕರ ಗುಂಪು, ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿಗಳ 119ನೇ ಜನ್ಮದಿನೋತ್ಸಕ್ಕೆಂದು ಸಿದ್ಧಗಂಗಾ ಮಠಕ್ಕೆ ಬಂದಿದ್ದ ಭಕ್ತ ಸಾವು

ಹಲ್ಲೆಗೆ ಪ್ರತಿಯಾಗಿ ಹೋಟೆಲ್ ಸಿಬ್ಬಂದಿಯೂ ಯುವಕರ ಗ್ಯಾಂಗ್ ಮೇಲೆ ಹಲ್ಲೆ ನಡೆಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಗಲಾಟೆಯಲ್ಲಿ ಚೇರ್​ ಸೇರಿದಂತೆ ಕೈಗೆ ಸಿಕ್ಕಸಿಕ್ಕ ವಸ್ತುಗಳನ್ನು ಬಳಸಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಒಂದೇ ಬಿಲ್ಡಿಂನ್​ನಲ್ಲಿದ್ದ ಇಬ್ಬರು ಬಾಡಿಗೆದಾರರ ಮಧ್ಯೆ ಗಲಾಟೆ: ಹಲ್ಲೆ

ಒಂದೇ ಬಿಲ್ಡಿಂಗ್​ನಲ್ಲಿದ್ದ ಇಬ್ಬರು ಬಾಡಿಗೆದಾರರ ಮಧ್ಯೆ ಗಲಾಟೆ ಮತ್ತು ಹಲ್ಲೆ ನಡೆದಿರುವಂತಹ ಘಟನೆ ಬೆಂಗಳೂರು ಬ್ಯಾಡರಹಳ್ಳಿಯ ಸಿಂಡಿಕೇಟ್ ಬ್ಯಾಂಕ್ ಲೇಔಟ್​ನಲ್ಲಿ ನಡೆದಿದೆ. ಸಂತೋಷ್​ ಮತ್ತು ಶುಭ ದಂಪತಿ ಮೇಲೆ ಮತ್ತೊಂದು ಮನೆಯವರಿಂದ ಹಲ್ಲೆ ಮಾಡಲಾಗಿದೆ.

ಮನೆಯ ಕೆಳಗಡೆ ಕಾರು ಪಾರ್ಕ್ ಮಾಡುವ ವಿಚಾರಕ್ಕೆ ಪ್ರತಿನಿತ್ಯ ಕ್ಯಾತೆ ತೆಗೆಯುತ್ತಿದ್ದರು. ಒಬ್ಬರು ಬೈಕ್ ನಿಲ್ಲಿಸಬೇಕು, ಇನ್ನೊಬ್ಬರು ಕಾರು ನಿಲ್ಲಿಸಬೇಕೆಂದು ಗಲಾಟೆ ಮಾಡುತ್ತಿದ್ದರು. ನಿನ್ನೆ ಸಂಜೆ ಮನೆಯ ಕೆಳಗಡೆ ಸಂತೋಷ್ ಕಾರು ನಿಲ್ಲಿಸಲು ಬಂದಿದ್ದರು. ಅದೇ ಸ್ಥಳದಲ್ಲಿ ಮತ್ತೊಂದು ಮನೆಯ ರತ್ನಮ್ಮ ಎಂಬುವರು ಬೈಕ್ ನಿಲ್ಲಿಸಿದ್ದರು. ಅಲ್ಲಿದ್ದ ಬೈಕ್ ತೆಗೆಯಿರಿ ನಾನು ಕಾರು ನಿಲ್ಲಿಸಬೇಕು ಎಂದು ಸಂತೋಷ್ ಹೇಳಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ.

ಇದನ್ನೂ ಓದಿ: ಪೊಲೀಸ್​ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿಡಲು ಅಧಿಕಾರ ಕೊಟ್ಟವರ್ಯಾರು? ರೌಡಿಶೀಟರ್​​ ಅರ್ಜಿ ವಜಾ

ಕಾಂಕ್ರೀಟ್​ ಕ್ರಿಕೆಟ್​ ಸ್ಟಂಪ್​ ಮತ್ತು ದೊಣ್ಣೆಯಿಂದ ಸಂತೋಷ್​ ಮೇಲೆ ಹಲ್ಲೆ ಮಾಡಲಾಗಿದೆ. ಬಳಿಕ ಸಂತೋಷ್​ ಕಾರು ಡಿಕ್ಕಿ ಹೊಡೆಸಿ ​ಡ್ಯಾಮೇಜ್​ ಮಾಡಿದ್ದಾರೆ. ಗಲಾಟೆ ಮಾಡಿ ಮನಸೋ ಇಚ್ಚೆ ಹಲ್ಲೆ ನಡೆಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಸದ್ಯ ಸಂತೋಷ್​ ಕುಟುಂಬ ಬ್ಯಾಡರಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಗಲಾಟೆ, ಹಲ್ಲೆ ನಡೆಸಿದ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಗಾಯಾಳು ಸಂತೋಷ್​ ತಲೆಗೆ 10 ಸ್ಟಿಚ್​ ಹಾಕಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯರ ಈ ಮಾತುಗಳನ್ನು ಪಾಲಿಸಿ

ವೃತ್ತಿ ಜೀವನದಲ್ಲಿ (career) ಯಶಸ್ಸನ್ನು ಸಾಧಿಸಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಹಲವರು ಹಗಲಿರುಳು ಶ್ರಮಿಸುತ್ತಾರೆ. ಹೀಗೆ ಕಠಿಣ ಪರಿಶ್ರಮ ಪಟ್ಟರೂ ಹಲವರಿಗೆ ಯಶಸ್ಸು ಅನ್ನೋದು ಲಭಿಸೋದೇ ಇಲ್ಲ. ವೃತ್ತಿ ಜೀವನದ ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ಸಾಲುವುದಿಲ್ಲ, ಇದಕ್ಕಾಗಿ ಕೆಲವೊಂದು ಮೌಲ್ಯ, ತತ್ವಗಳನ್ನೂ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಚಾಣಕ್ಯರು ಹೇಳಿರುವಂತೆ ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಏನು ಮಾಡಬೇಕು, ಯಾವ ಸಲಹೆಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.

ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಏನು ಮಾಡಬೇಕು?

ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ: ಚಾಣಕ್ಯನ ಪ್ರಕಾರ, ಸಮಯವನ್ನು ಗೌರವಿಸದವರಿಗೆ ಯಶಸ್ಸು ಸಿಗುವುದಿಲ್ಲ. ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ವೃತ್ತಿಜೀವನದ ಪ್ರಗತಿಗೆ ನಿರ್ಣಾಯಕವಾಗಿದೆ. ಕಳೆದುಹೋದ ಸಮಯವು ಭರಿಸಲಾಗದದು, ಆದ್ದರಿಂದ ಇಂದಿನ ಕೆಲಸಗಳನ್ನು ನಾಳೆಯವರೆಗೆ ಮುಂದೂಡುವ ತಪ್ಪನ್ನು ಎಂದಿಗೂ ಮಾಡಬೇಡಿ.

ನಿಮ್ಮ ದೌರ್ಬಲ್ಯ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ: ಪ್ರಗತಿಗೆ ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನೀವು ಯಾವುದರಲ್ಲಿ, ಯಾವ ಕೆಲಸದಲ್ಲಿ ಉತ್ತಮರಾಗಿದ್ದೀರಿ ಮತ್ತು ಎಲ್ಲಿ ಸುಧಾರಣೆ ಅಗತ್ಯವಿದೆ ಎಂಬುದನ್ನು ನೀವು ತಿಳಿದಿರಬೇಕು. ತಮ್ಮ ದೌರ್ಬಲ್ಯಗಳನ್ನು ಗುರುತಿಸಿ ಅವುಗಳನ್ನು ಸುಧಾರಿಸಿ ಮುಂದೆ ಸಾಗುವವರು ವೃತ್ತಿ ಜೀವನದ  ಓಟದಲ್ಲಿ ಮುಂದೆ ಇರುತ್ತಾರೆ ಎನ್ನುತ್ತಾರೆ ಚಾಣಕ್ಯ.

ನಿಮ್ಮ ಯೋಜನೆಗಳನ್ನು ಯಾರಿಗೂ ಹೇಳಬೇಡಿ: ಚಾಣಕ್ಯರು ಹೇಳುವಂತೆ ನಿಮ್ಮ ಮುಂದಿನ ನಡೆ ಅಥವಾ ಪ್ರಮುಖ ಯೋಜನೆ  ಪೂರ್ಣಗೊಳ್ಳುವವರೆಗೆ ಆ ಬಗ್ಗೆ  ಯಾರಿಗೂ ಹೇಳಬೇಡಿ. ಈ ವಿಚಾರಗಳನ್ನು ರಹಸ್ಯವಾಗಿ ಇಟ್ಟುಕೊಳ್ಳುವುದರಿಂದ ನಿಮ್ಮ ಸಹೋದ್ಯೋಗಿಗಳು ಅಥವಾ ವಿರೋಧಿಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗದಂತೆ ತಡೆಯಬಹುದು. ಜೊತೆಗೆ ನೀವು ಯಾವುದೇ ತೊಂದರೆಗಳಿಲ್ಲದೆ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ತಂದೆಯ ತಪ್ಪುಗಳು ಮಗಳ ಭವಿಷ್ಯವನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ

 ಪ್ರಾಮಾಣಿಕತೆ: ನಿಮ್ಮ ಕೆಲಸದಲ್ಲಿ ಪ್ರಾಮಾಣಿಕರಾಗಿರಿ. ಶಾರ್ಟ್‌ಕಟ್‌ಗಳ ಮೂಲಕ ಸಾಧಿಸಿದ ಗೆಲುವು ಎಂದಿಗೂ ಶಾಶ್ವತವಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ವೃತ್ತಿ ಜೀವನದಲ್ಲಿ ಯಾವುದೇ ಅಡೆತಡೆಗಳು ಎದುರಾಗಬಾರದು ಎಂದರೆ ಪ್ರಾಮಾಣಿಕವಾಗಿ ಕೆಲಸ ಮಾಡಿ.

ವೈಫಲ್ಯಕ್ಕೆ ಹೆದರಬೇಡಿ, ಅಪಾಯಗಳನ್ನು ತೆಗೆದುಕೊಳ್ಳಲು ಕಲಿಯಿರಿ: ಕೆಲವೊಮ್ಮೆ, ನಿಮ್ಮ ವೃತ್ತಿಜೀವನದಲ್ಲಿ ದೊಡ್ಡ ಪ್ರಗತಿ ಸಾಧಿಸಲು ನೀವು ಅಪಾಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಚಾಣಕ್ಯನ ಪ್ರಕಾರ, ವೈಫಲ್ಯದ ಭಯದಿಂದ ಹೊಸ ಹೆಜ್ಜೆಗಳನ್ನು ಇಡಲು ಹಿಂದೇಟು ಹಾಕುವ ವ್ಯಕ್ತಿಯು ಎಂದಿಗೂ ಯಶಸ್ಸನ್ನು ಸಾಧಿಸುವುದಿಲ್ಲ. ನಿಮ್ಮ ತಪ್ಪುಗಳಿಂದ ಕಲಿಯಿರಿ ಮತ್ತು ಧೈರ್ಯದಿಂದ ಮುಂದುವರಿಯಿರಿ. ಆಗ ಮಾತ್ರ ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಪೇಂದ್ರ ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ರಿಯಲ್ ಸ್ಟಾರ್

ನಟ, ನಿರ್ದೇಶಕ ಉಪೇಂದ್ರ ಅವರು ಮತ್ತೆ ಪ್ರಜಾಕೀಯ (Prajaakeeya) ಕೆಲಸಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇಂದು (ಏಪ್ರಿಲ್ 1) ಅವರು ‘ದಿ ರಿಯಲ್ ಪ್ರಜಾಕೀಯ’ ಆ್ಯಪ್ ಬಿಡುಗಡೆ ಮಾಡಿದರು. ಈ ವೇಳೆ ಅವರು ಸುದ್ದಿಗೋಷ್ಠಿ ನಡೆಸಿದರು. ಮಾಧ್ಯಮದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಉಪೇಂದ್ರ ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬ ಪ್ರಶ್ನೆ ಎದುರಾಯಿತು. ‘ಭಯ ಇದ್ದಿದ್ದರೆ ನಾನು ಇಷ್ಟೆಲ್ಲ ಮಾಡುತ್ತ ಇರಲಿಲ್ಲ. ನನಗೆ ಆದಾಗ ನಾನು ಸ್ಪರ್ಧೆ ಮಾಡುತ್ತೇನೆ. ಇಲ್ಲ ಅಂತ ನಾನು ಹೇಳಿಲ್ಲ. ನೋಡೋಣ, ನನಗೂ ಟೈಮ್ ಸಿಗಬೇಕು. ನಾನು ಬಿಡುವು ಮಾಡಿಕೊಳ್ಳಬೇಕು. ಕಾರ್ಯಕರ್ತನ ರೀತಿ ಕೆಲಸ ಮಾಡಬೇಕು. ನಿಮ್ಮನ್ನೆಲ್ಲ ಭೇಟಿ ಮಾಡಿ ಅಭಿಪ್ರಾಯ ಕೇಳಬೇಕು. ಆ ಸಾಮರ್ಥ್ಯ ನನಗೆ ಇದೆಯಾ ಎಂಬುದನ್ನು ನೋಡಿಕೊಂಡು ಬರುತ್ತೇನೆ’ ಎಂದು ಉಪೇಂದ್ರ (Upendra) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

LSG vs DC: ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರಿಷಭ್ ಪಂತ್; ವಿಡಿಯೋ

ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಲಕ್ನೋ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಅದರಂತೆ ಆರಂಭಿಕರಾಗಿ ನಾಯಕ ರಿಷಭ್ ಪಂತ್ ಹಾಗೂ ಮಿಚೆಲ್ ಮಾರ್ಷ್​ ಕಣಕ್ಕಿಳಿದಿದ್ದರು. ಇಬ್ಬರು ಮೊದಲ ಮೂರು ಓವರ್​ಗಳಲ್ಲಿ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿ 19 ರನ್ ಕೂಡ ಕಲೆಹಾಕಿದರು. ಆದರೆ ಮುಖೇಶ್ ಕುಮಾರ್ ಬೌಲ್ ಮಾಡಿದ ಮೂರನೇ ಓವರ್​ನ ಕೊನೆಯ ಎಸೆತದಲ್ಲಿ ರಿಷಭ್ ಪಂತ್ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾಗಬೇಕಾಯಿತು.

ಈ ಪಂದ್ಯದಲ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಖಾತೆ ತೆರೆದಿದ್ದ ರಿಷಭ್ ಪಂತ್, ಆರಂಭದಲ್ಲೇ ಅಬ್ಬರಿಸುವ ಸುಳಿವು ನೀಡಿದ್ದರು. ಆದರೆ ಮೂರನೇ ಓವರ್​ನಲ್ಲಿ ರಿಷಭ್ ಪಂತ್ ಅನಿರೀಕ್ಷಿತವಾಗಿ ಔಟಾಗಬೇಕಾಯಿತು. ಮುಖೇಶ್ ಕುಮಾರ್ ಎಸೆದ ಈ ಓವರ್​ನ ಕೊನೆಯ ಎಸೆತವನ್ನು ಮಿಚೆಲ್ ಮಾರ್ಷ್​ ನೇರವಾಗಿ ಬೌಲರ್​ ಕಡೆಗೆ ಆಡಿದರು. ಇತ್ತ ಬೌಲರ್ ಮುಖೇಶ್ ಆ ಚೆಂಡನ್ನು ಹಿಡಿಯಲು ಯತ್ನಿಸಿದರು. ಒಂದು ವೇಳೆ ಮುಖೇಶ್ ಆ ಚೆಂಡನ್ನು ಹಿಡಿದಿದ್ದರೆ, ಮಾರ್ಷ್​ ಕ್ಯಾಚ್ ಔಟ್ ಆಗುತ್ತಿದ್ದರು. ಆದರೆ ಮುಖೇಶ್ ಆ ಚೆಂಡನ್ನು ಹಿಡಿಯಲಿಲ್ಲ.

ಆದಾಗ್ಯೂ ಅದೃಷ್ಟ ಮುಖೇಶ್ ಅವರ ಕೈಹಿಡಿಯಿತು. ಮಾರ್ಷ್​ ಆಡಿದ ಚೆಂಡು ಮುಖೇಶ್ ಅವರ ಕೈಗೆ ತಾಗಿ ನಾನ್ ಸ್ಟ್ರೈಕ್​ ವಿಕೆಟ್​ಗಳಿಗೆ ಬಡಿಯಿತು. ಇತ್ತ ನಾನ್ ಸ್ಟ್ರೈಕ್​ನಲ್ಲಿದ್ದ ಪಂತ್, ಕ್ರೀಸ್​ ಬಿಟ್ಟಿದ್ದ ಕಾರಣ ಅವರು ರನೌಟ್ ಆಗಬೇಕಾಯಿತು. ಹೀಗಾಗಿ ಪಂತ್ ತಮ್ಮ ಇನ್ನಿಂಗ್ಸ್​ನಲ್ಲಿ 9 ಎಸೆತಗಳನ್ನು ಎದುರಿಸಿ 1 ಬೌಂಡರಿ ಸಹಿತ 7 ರನ್ ಬಾರಿಸಿ ಔಟಾಗಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾರ್ಚ್​ನಲ್ಲಿ ನಿವ್ವಳ ಜಿಎಸ್​ಟಿ 1.78 ಲಕ್ಷ ಕೋಟಿ ರೂ; ಇಡೀ ವರ್ಷ 19.34 ಲಕ್ಷ ಕೋಟಿ ರೂ ಸಂಗ್ರಹ

ನವದೆಹಲಿ, ಏಪ್ರಿಲ್ 1: ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ನಿವ್ವಳ ಜಿಎಸ್​ಟಿ ಸಂಗ್ರಹ (GST collections) 1.78 ಲಕ್ಷ ಕೋಟಿ ರೂ ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಜಿಎಸ್​ಟಿ ಸಂಗ್ರಹ ಶೇ. 8.2ರಷ್ಟು ಹೆಚ್ಚಿದೆ. ರೀಫಂಡ್ ಮಾಡಿರುವುದನ್ನೂ ಒಳಗೊಂಡರೆ ಒಟ್ಟೂ ಜಿಎಸ್​ಟಿ ಸಂಗ್ರಹ ಮಾರ್ಚ್​ನಲ್ಲಿ 2 ಲಕ್ಷ ಕೋಟಿ ರೂ ದಾಟಿದೆ. ಇದರಲ್ಲೂ ಕೂಡ ಹಿಂದಿನ ವರ್ಷದಕ್ಕಿಂತ ಶೇ. 8.8ರಷ್ಟು ಹೆಚ್ಚಿದೆ.

ರೀಫಂಡ್ ಪ್ರಮಾಣ ಮಾರ್ಚ್​ನಲ್ಲಿ ಶೇ. 13.8ರಷ್ಟು ಹೆಚ್ಚಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮಾರ್ಚ್​ನಲ್ಲಿ ಜಿಎಸ್​ಟಿ ರೀಫಂಡ್ ಮಾಡಲಾಗಿರುವ ಪ್ರಮಾಣ 22,000 ಕೋಟಿ ರೂ ಎನ್ನಲಾಗಿದೆ.

ಇದನ್ನೂ ಓದಿ: ವಿವಿಧ ಹಣಕಾಸು ಕಾರ್ಯಗಳಿಗೆ ಪ್ಯಾನ್ ನಿಯಮಗಳಲ್ಲಿ ಬದಲಾವಣೆಗಳಿವೆ, ಗಮನಿಸಿ

ಇಡೀ ವರ್ಷಕ್ಕೆ 22 ಲಕ್ಷ ಕೋಟಿ ರೂ ಜಿಎಸ್​ಟಿ

2025-26ರ ಹಣಕಾಸು ವರ್ಷದಲ್ಲಿ 22.27 ಲಕ್ಷ ಕೋಟಿ ರೂನಷ್ಟು ಒಟ್ಟು ಜಿಎಸ್​ಟಿ ಸಂಗ್ರಹ ಆಗಿದೆ. ಹಿಂದಿನ ಹಣಕಾಸು ವರ್ಷದಕ್ಕಿಂತ ಶೇ. 8.3ರಷ್ಟು ಜಿಎಸ್​ಟಿ ಹೆಚ್ಚಿದೆ. ರೀಫಂಡ್ ಕಳೆದು ಬಂದಿರುವ ನಿವ್ವಳ ಜಿಎಸ್​ಟಿ ಸಂಗ್ರಹ 19.34 ಲಕ್ಷ ಕೋಟಿ ರೂ ಇದೆ. ಇದರಲ್ಲಿ ಹೆಚ್ಚಳ ಆಗಿರುವುದು ಶೇ. 7.1ರಷ್ಟು.

ರಾಜ್ಯವಾರು ಜಿಎಸ್​ಟಿ ಸಂಗ್ರಹದ ಲೆಕ್ಕ ತೆಗೆದರೆ ಮಹಾರಾಷ್ಟ್ರ ಯಥಾಪ್ರಕಾರ ಅಗ್ರಸ್ಥಾನಕ್ಕೆ ಬರುತ್ತದೆ. ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳು ಅತಿಹೆಚ್ಚು ಜಿಎಸ್​ಟಿ ಸಂಗ್ರಹದಲ್ಲಿ ಟಾಪ್-3ನಲ್ಲಿ ಬರುತ್ತವೆ.

ಇದನ್ನೂ ಓದಿ: April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ಎಸ್​ಜಿಎಸ್​ಟಿ ಹಂಚಿಕೆ ಬಳಿಕ ಕರ್ನಾಟಕ, ಹಿಮಾಚಲಪ್ರದೇಶ, ಪಂಜಾಬ್, ಉತ್ತರಾಖಂಡ್, ಹರ್ಯಾಣ, ರಾಜಸ್ಥಾನ್, ಉತ್ತರಪ್ರದೇಶ, ಬಿಹಾರ್, ಗುಜರಾತ್, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ಪಾಸಿಟಿವ್ ಬೆಳವಣಿಗೆ ತೋರಿವೆ.

ಜಮ್ಮು ಕಾಶ್ಮೀರ, ಚಂಡೀಗಡ, ದೆಹಲಿ, ಅರುಣಾಚಲ, ಮೇಘಾಲಯ ಮೊದಲಾದ ರಾಜ್ಯಗಳು ನೆಗಟಿವ್ ಗ್ರೋತ್ ತೋರಿವೆ. ಅಂದರೆ ಹಿಂದಿನ ವರ್ಷದಕ್ಕಿಂತ ಈ ವರ್ಷ ಈ ರಾಜ್ಯಗಳು ಜಿಎಸ್​ಟಿ ಸಂಗ್ರಹದಲ್ಲಿ ಹಿಂದುಳಿದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ ಬೈ ಎಲೆಕ್ಷನ್: ಮುಸ್ಲಿಂ ಮತಗಳ ಆತಂಕ, ಪಕ್ಷೇತರ ಅಭ್ಯರ್ಥಿಗಳ ಬಗ್ಗೆ ಸಿಎಂ ಮಹತ್ವದ ಸಂದೇಶ

ದಾವಣಗೆರೆ, ಏಪ್ರಿಲ್​ 01: ದಾವಣಗೆರೆ ದಕ್ಷಿಣ ಚುನಾವಣೆಗೆ (Davanagere South By Election) ಸಿಎಂ, ಡಿಸಿಎಂ, ಮಾಜಿ ಸಿಎಂಗಳು ಎಂಟ್ರಿಯಿಂದಾಗಿ ಭಾರೀ ರಂಗು ಪಡೆಯುತ್ತಿದೆ. ಬಿರುಬಿಸಿಲಿನಲ್ಲೂ ಮತಬೇಟೆಗೆ ಇಳಿದಿದ್ದು ಗೆಲುವಿಗಾಗಿ ಭರ್ಜರಿ ಭಾಷಣ ಮಾಡುತ್ತಿದ್ದಾರೆ. ನಮ್ಮದು ಹಿಂದುಳಿದವರ, ಬಡವರ ಹಾಗೂ ಮುಸ್ಲಿಂ ಪರವಾದ ಪಕ್ಷ. ಪಕ್ಷೇತರರಿಗೆ ಮತ ನೀಡಬೇಡಿ ಬಿಜೆಪಿ ಗೆಲ್ಲುತ್ತದೆ ಎಂಬ ಸಿಎಂ ಸಂದೇಶ ನೀಡಿದ್ದು, ಅಲ್ಪ ಸಂಖ್ಯಾತರ ಬಗ್ಗೆ ಕಾಂಗ್ರೆಸ್​ಗೆ ಆತಂಕ ಶುರುವಾಗಿದೆ.

ಸಮರ್ಥ್ ಗೆಲ್ಲಿಸುವಂತೆ ಕರೆ ನೀಡಿದ ಸಿಎಂ ಸಿದ್ದರಾಮಯ್ಯ 

ದಾವಣಗೆರೆ ಬೈ ಎಲೆಕ್ಷನ್ ಮುಂದಿನ ಚುನಾವಣೆಗೆ ದಿಕ್ಸೂಚಿ ಅಂತಲೇ ಕರೆಯಲಾಗುತ್ತಿದ್ದು, ಭಾರೀ ಪ್ರಚಾರ ನಡೆಯುತ್ತಿದೆ. ಚುನಾವಣೆಗೆ ಕೆಲವೇ ದಿನ ಉಳಿದಿದೆ. ಈ ಹಿನ್ನಲೆ ದಕ್ಷಿಣದಲ್ಲಿ ಘಟಾನುಘಟಿಗಳ ದಂಡು ಬಿಡುಬಿಟ್ಟಿದೆ. ಮಂಗಳವಾರ ಡಿಸಿಎಂ ಡಿಕೆ ಶಿವಕುಮಾರ್​ ಗೇಮ್ ಪ್ಲಾನ್ ಮಾಡಿದರೆ, ಇಂದು ಸಿಎಂ ಸಿದ್ದರಾಮಯ್ಯ, ಸಮರ್ಥ್ ಪರ ಗ್ರೌಂಡ್​ಗೆ ಇಳಿದು ಹೋದಲೆಲ್ಲಾ ಬೆಂಕಿ‌ ಭಾಷಣ ಮಾಡಿದ್ದಾರೆ. ನಾಗನೂರು, ಶಿರಮಗೊಂಡನಹಳ್ಳಿ, ತುರ್ಚಗಟ್ಟದಲ್ಲಿ ರೋಡ್ ಶೋ ನಡೆಸಿದ್ದರು. ಸಿಎಂಗೆ ಮಹಿಳೆಯರು ಆರತಿ ಬೆಳಗಿದರು. ಕಂಬಳಿ‌ ಹೊದಿಸಿ ಸನ್ಮಾನಿಸಿದರು. ಬಳಿಕ ಹದಡಿ ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಸಿ ಸಮರ್ಥ್ ಗೆಲ್ಲಿಸುವಂತೆ ಕರೆ ನೀಡಿದರು.

ಬಿಜೆಪಿ ವಿರುದ್ಧ ಸಿಎಂ ಕೆಂಡ

ಇನ್ನು ಬಿಜೆಪಿ ವಿರುದ್ಧ ಕೆಂಡಕಾರಿದ ಸಿಎಂ, ನಾನು‌ ಅನ್ನರಾಮಯ್ಯ, ನಾನು ಕೊಟ್ಟ ಬಜೆಟ್ ಕೇಂದ್ರ ಬಜೆಟ್ ಗಿಂತ ಚೆನ್ನಾಗಿದೆ. ಬಜೆಟ್ ಅಧಿವೇಶನದ ಚರ್ಚೆಯಲ್ಲಿ ಎಲ್ಲವನ್ನು ಹೇಳಿದ್ದೇನೆ. ಜಮೀರ್ ಅಹ್ಮದ್ ಏಪ್ರಿಲ್​ 5ರಂದರು ಪ್ರಚಾರಕ್ಕೆ ಬರ್ತಾರೆ ಅಂದ್ದರು. ನಮ್ಮದು ದಲಿತ ಹಿಂದುಳಿದವರ ಹಾಗೂ ಮುಸ್ಲಿಂರ ಪರ ಇರುವ ಪಕ್ಷ. ಪಕ್ಷೇತರರಿಗೆ ಮತ ಹಾಕಬೇಡಿ, ಬಿಜೆಪಿ ಗೆದ್ದು ಬಿಡುತ್ತದೆ ಎಂದಿದ್ದಾರೆ. ಸಿಎಂರ ಈ ಮಾತು ಸದ್ಯ ಹತ್ತಾರು ಪ್ರಶ್ನೆಗಳನ್ನ ಹುಟ್ಟುಹಾಕಿದೆ.

ಸರ್ಕಾರದ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಇತ್ತ ಬಿಜೆಪಿಯೂ ಸಂಘಟನಾತ್ಮವಾಗಿ ಹೆಜ್ಜೆ ಇಡುತ್ತಿದೆ. ಎಲ್ಲಾ ನಾಯಕರು ಒಗ್ಗಟ್ಟಿನ ಮೂಲಕ ಚುನಾವಣೆ ಎದುರಿಸುತ್ತಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಶ್ರೀನಿವಾಸ್ ಪರ ಆರ್ಯ ವೈಶ್ಯ ಸಮಾಜದ ಸಭೆ ನಡೆಸಿ ಮತಬೇಟೆ ನಡೆಸಿದರು. ಬಳಿಕ‌ ಬಸವರಾಜ್ ಬೊಮ್ಮಾಯಿ ಪೇಟೆಯಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ರಾಜ್ಯ ಸರ್ಕಾರಕ್ಕೆ ದಾವಣಗೆರೆ ದಕ್ಷಿಣದ ಜನ ಪಾಠ ಕಲಿಸುತ್ತಾರೆ ಎಂಬ ಸಂದೇಶ ರವಾನಿಸಿದರು.

ಇದನ್ನೂ ಓದಿ: ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ

ಒಟ್ಟಾರೆ ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಸಿಎಂ, ಡಿಸಿಎಂ, ಮಾಜಿ ಸಿಎಂ ಆದಿಯಾಗಿ ಘಟಾನುಘಟಿ ನಾಯಕರು ದಾವಣಗೆರೆಯಲ್ಲಿ ಬಿಡುಬಿಟ್ಟು ಗೆಲುವಿಗಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಸಚಿವ ಜಮೀರ್ ಅಹ್ಮದ್ ಪ್ರಚಾರಕ್ಕೆ ಬರುತ್ತಾರೆ ಇಲ್ವಾ ಎನ್ನುವ ಚರ್ಚೆ ಕೂಡ ಶುರುವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಾಧವನ್ ಹೊರತು ಇನ್ಯಾರೂ ‘ಧುರಂಧರ್’ನಲ್ಲಿ ನಟಿಸಲು ಒಪ್ಪಿರಲಿಲ್ಲ

ಆದಿತ್ಯ ಧರ್ ನಿರ್ದೇಶಿಸಿ, ರಣ್ವೀರ್ ಸಿಂಗ್ ನಟಿಸಿರುವ ‘ಧುರಂಧರ್ 2’ (Dhurandhar 2) ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ದೇಶ, ವಿದೇಶಗಳಲ್ಲಿ ಸಿನಿಮಾ ದೊಡ್ಡ ಬ್ಲಾಕ್ ಬಸ್ಟರ್ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್‌ನ ಘಟಾನುಘಟಿ ನಟರಾದ ಸಂಜಯ್ ದತ್, ಆರ್ ಮಾಧವನ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಅವರುಗಳು ನಟಿಸಿದ್ದು, ನಾಯಕನಷ್ಟೆ ಮಹತ್ವದ ಪಾತ್ರಗಳು ಇವರದ್ದಾಗಿವೆ. ಆದರೆ, ಮಾಧವನ್ ಅವರ ಹೊರತಾಗಿ ಮೂರೂ ಮಂದಿ ಪ್ರಮುಖ ನಟರುಗಳು ಸಹ ‘ಧುರಂಧರ್’ ಸಿನಿಮಾನಲ್ಲಿ ನಟಿಸಲು ಒಪ್ಪಿರಲಿಲ್ಲವಂತೆ. ಈ ಬಗ್ಗೆ ಸಿನಿಮಾದ ಕಾಸ್ಟಿಂಗ್ ನಿರ್ದೇಶಕ ಸಂದರ್ಶನದಲ್ಲಿ ಹೇಳಿದ್ದಾರೆ.

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಕ್ಕೆ ನಟರನ್ನು ಆಯ್ಕೆ ಮಾಡಿರುವುದು ಬಾಲಿವುಡ್​​ನ ಖ್ಯಾತ ಕಾಸ್ಟಿಂಗ್ ನಿರ್ದೇಶಕ ಮುಕೇಶ್ ಛಾಬ್ರಾ. ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ ಚಿತ್ರಕಥೆಯನ್ನು ಕೇಳಿದ ಕೂಡಲೇ ಯಾವುದೇ ಮುಲಾಜಿಲ್ಲದೆ ನಟಿಸಲು ಒಪ್ಪಿಕೊಂಡ ಏಕೈಕ ನಟ ಆರ್ ಮಾಧವನ್, ‘ನಾವು ಕಥೆ ಹೇಳಿದ ತಕ್ಷಣ ಮಾಧವನ್ ಗ್ರೀನ್ ಸಿಗ್ನಲ್ ನೀಡಿದರು. ಆದರೆ ಸಂಜಯ್ ದತ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಅವರು ಆರಂಭದಲ್ಲಿ ಈ ಚಿತ್ರದಲ್ಲಿ ನಟಿಸಲು ಕೊಂಚ ಹಿಂದೇಟು ಹಾಕಿದ್ದರು ಅಥವಾ ಗೊಂದಲದಲ್ಲಿದ್ದರು’ ಎಂದು ಮುಕೇಶ್ ತಿಳಿಸಿದ್ದಾರೆ.

ಈ ದೊಡ್ಡ ತಾರಾಗಣವನ್ನು ಒಟ್ಟುಗೂಡಿಸುವಲ್ಲಿ ಮುಕೇಶ್ ಛಾಬ್ರಾ ಅವರ ಪಾತ್ರ ದೊಡ್ಡದಿದೆ. ಆರಂಭದಲ್ಲಿ ನಿರ್ದೇಶಕ ಆದಿತ್ಯ ಧರ್ ಮತ್ತು ಮುಕೇಶ್ ಅವರು ಬೇರೆ ರೀತಿಯ ನಟರನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರು. ಆದರೆ ಕಥೆಯ ವ್ಯಾಪ್ತಿ ದೊಡ್ಡದಾಗಿದ್ದರಿಂದ, ದೊಡ್ಡ ತಾರೆಯರನ್ನೇ ಸಿನಿಮಾಕ್ಕೆ ಕರೆತರಬೇಕು ಎಂದು ಮುಕೇಶ್ ಅವರು ಆದಿತ್ಯ ಧರ್ ಅವರಿಗೆ ಧೈರ್ಯ ತುಂಬಿದರಂತೆ. ಹಾಗೂ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಸಹ ತಾವೇ ಧೈರ್ಯ ನೀಡಿದ್ದಾಗಿಯೂ ಸಹ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:‘ಧುರಂಧರ್ 2’ ಬಳಿಕ ಬರ್ತಿದೆ ಏಳೂವರೆ ಗಂಟೆ ಸಿನಿಮಾ; ಎರಡು ಇಂಟರ್​​ವಲ್

ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರು ಒಪ್ಪಿಕೊಳ್ಳದೇ ಇರಲು ಹಾಗೂ ಮಾಧವನ್ ಬೇಗನೆ ಒಪ್ಪಿಕೊಳ್ಳಲು ಕಾರಣವೂ ಇದೆ. ಅಕ್ಷಯ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರದ್ದು ಪಾಕಿಸ್ತಾನಿಗಳ ಪಾತ್ರ, ಅದರಲ್ಲೂ ಅಕ್ಷಯ್ ಕುಮಾರ್ ಮತ್ತು ಅರ್ಜುನ್ ರಾಂಪಾಲ್ ಅವರದ್ದಂತೂ ಉಗ್ರವಾದಿ ನಾಯಕರ ಪಾತ್ರ. ಸಹಜವಾಗಿಯೇ ಅವರು ಆರಂಭದಲ್ಲಿ ಒಲ್ಲೆ ಎಂದಿದ್ದಾರೆ. ಆದರೆ ಮಾಧವನ್ ಅವರದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪಾತ್ರ, ಗೌರವ ಹೊಂದಿರುವ, ಹೀರೋಗಿರಿ ಉಳ್ಳ ಪಾತ್ರ ಹಾಗಾಗಿ ಅವರು ಸುಲಭವಾಗಿ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಸಿನಿಮಾನಲ್ಲಿ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಸಿನಿಮಾದಲ್ಲಿದೆ. ಇದೇ ಕಾರಣಕ್ಕೆ ಉಗ್ರರ ಪಾತ್ರವಾದರೂ ಸಹ ಪ್ರೇಕ್ಷಕರು ಅಕ್ಷಯ್ ಖನ್ನಾ ಪಾತ್ರವನ್ನೂ ಸಹ ಸೆಲೆಬ್ರೇಟ್ ಮಾಡಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಕಾಸ್ಟಿಂಗ್ ನಿರ್ದೇಶಕ ಮುಕೇಶ್ ಹೇಳಿರುವಂತೆ, ‘ಧುರಂಧರ್’ ಒಂದು ನಿಖರವಾದ ಕಾಸ್ಟಿಂಗ್ ಆಗಿರುವ ಸಿನಿಮಾ ಅಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೌರವ್ ಗಂಗೂಲಿ ಬಯೋಪಿಕ್: ‘ದಾದಾ’ ಸಿನಿಮಾ ಶೂಟಿಂಗ್ ಆರಂಭಿಸಿದ ರಾಜ್‌ಕುಮಾರ್ ರಾವ್

ಭಾರತೀಯ ಕ್ರಿಕೆಟ್ ಕಂಡ ಯಶಸ್ವಿ ಕ್ಯಾಪ್ಟನ್ ಸೌರವ್ ಗಂಗೂಲಿ ಅವರ ಜೀವನದ ಕಥೆ ಬೆಳ್ಳಿತೆರೆಯ ಮೇಲೆ ಬರಲು ಸಿದ್ಧವಾಗುತ್ತಿದೆ. ಸೌರವ್ ಗಂಗೂಲಿ ಬಯೋಪಿಕ್ (Sourav Ganguly Biopic) ಬಗ್ಗೆ ಮೊದಲಿನಿಂದಲೂ ಸುದ್ದಿಗಳು ಕೇಳಿಬರುತ್ತಲೇ ಇತ್ತು. ಈಗ ಆ ಸಿನಿಮಾಗೆ ಶೀರ್ಷಿಕೆ ಏನೆಂಬುದು ಬಹಿರಂಗ ಆಗಿದೆ. ಈ ಚಿತ್ರಕ್ಕೆ ‘ದಾದಾ’ (Dada) ಎಂದು ಶೀರ್ಷಿಕೆ ಇಡಲಾಗಿದೆ. ಇದು ಬಹುನಿರೀಕ್ಷಿತ ಬಯೋಪಿಕ್. ಬುಧವಾರ (ಏಪ್ರಿಲ್ 1) ಈ ಸಿನಿಮಾದ ಚಿತ್ರೀಕರಣ ಆರಂಭ ಆಗಿದೆ. ನಟ ರಾಜ್​ಕುಮಾರ್ ರಾವ್ (Rajkummar Rao) ಅವರು ಈ ಚಿತ್ರದಲ್ಲಿ ಸೌರವ್ ಗಂಗೂಲಿ ಪಾತ್ರ ಮಾಡುತ್ತಿದ್ದಾರೆ.

ಶೂಟಿಂಗ್ ಆರಂಭ ಆಗಿರುವ ಬಗ್ಗೆ ಮತ್ತು ಶೀರ್ಷಿಕೆ ಬಗ್ಗೆ ರಾಜ್​ಕುಮಾರ್ ರಾವ್ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ‘ಇದೀಗ ಆರಂಭ ಆಗಿದೆ. ಒನ್ ಆ್ಯಂಡ್ ಓನ್ಲಿ ದಾದಾ’ ಎಂದು ಪೋಸ್ಟ್ ಮಾಡಿರುವ ಅವರು ಸಿನಿಮಾದ ಕ್ಲ್ಯಾಪ್ ಬೋರ್ಡ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳಿಗೆ ಖುಷಿ ಆಗಿದೆ.

2025ರಲ್ಲಿ ಗಂಗೂಲಿ ಅವರೇ ಈ ಸಿನಿಮಾದ ಬಗ್ಗೆ ಸುಳಿವು ನೀಡಿದ ನಂತರ, ರಾಜ್‌ಕುಮಾರ್ ರಾವ್ ಅಧಿಕೃತವಾಗಿ ತಾವು ಈ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದ್ದರು. ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ಅವರು, ‘ದಾದಾ ಅವರೇ ಇದನ್ನು ಈಗಾಗಲೇ ಹೇಳಿದ್ದಾರೆ. ಹಾಗಾಗಿ ನಾನು ಅಧಿಕೃತವಾಗಿ ಖಚಿತಪಡಿಸುತ್ತಿದ್ದೇನೆ. ಗಂಗೂಲಿ ಪಾತ್ರವನ್ನು ನಿರ್ವಹಿಸುವುದು ಒಂದು ದೊಡ್ಡ ಜವಾಬ್ದಾರಿ. ನನಗೆ ಸ್ವಲ್ಪ ಆತಂಕವಿದ್ದರೂ, ಈ ಪಯಣವು ಬಹಳ ಮಜವಾಗಿರಲಿದೆ’ ಎಂದು ತಿಳಿಸಿದ್ದರು.

ಪಾತ್ರಕ್ಕಾಗಿ ಪರಕಾಯ ಪ್ರವೇಶ ಮಾಡುವಲ್ಲಿ ರಾಜ್‌ಕುಮಾರ್ ರಾವ್ ಸದಾ ಸಿದ್ಧ. ಫೆಬ್ರವರಿ ತಿಂಗಳಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್‌ಕುಮಾರ್ ರಾವ್ ಅವರ ಹೇರ್ ಸ್ಟೈಲ್ ಮತ್ತು ದೇಹದ ತೂಕ ಹೆಚ್ಚಿದ್ದು ಕಂಡು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇವೆಲ್ಲವೂ ಸೌರವ್ ಗಂಗೂಲಿ ಪಾತ್ರದ ಸಿದ್ಧತೆಗಾಗಿ ಎಂದು ಈಗ ಬಹಿರಂಗವಾಗಿದೆ.

ಇದನ್ನೂ ಓದಿ: ಹೊಸ ಇನ್ನಿಂಗ್ಸ್ ಆರಂಭಿಸಿದ ದಾದಾ; ಸೌರವ್ ಗಂಗೂಲಿಗೆ ಮುಖ್ಯ ಕೋಚ್ ಹುದ್ದೆ

ತಮ್ಮ ದೈಹಿಕ ಬದಲಾವಣೆಯ ಬಗ್ಗೆ ವಿವರಿಸಿದ ರಾಜ್‌ಕುಮಾರ್ ರಾವ್, ‘ನನ್ನ ಹಿಂದಿನ ಸಿನಿಮಾ ‘ನಿಕಮ್’ ಸಲುವಾಗಿನಾನು ಸುಮಾರು 9-10 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಇದಕ್ಕಾಗಿ ಎರಡು ಪಿಜ್ಜಾ, ಸಾಕಷ್ಟು ಸಿಹಿತಿಂಡಿ, ಆಲೂ ಪರೋಟ ಮತ್ತು ಬಿರಿಯಾನಿ ಸೇವಿಸುತ್ತಿದ್ದೆ. ಈಗ ತಕ್ಷಣವೇ ಗಂಗೂಲಿ ಆಗಿ ಬದಲಾಗುತ್ತಿದ್ದೇನೆ. ಸಿನಿಮಾ ತೆರೆಕಂಡಾಗ ಈ ಕಠಿಣ ಶ್ರಮ ನಿಮಗೆ ತಿಳಿಯಲಿದೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್ ಕದನವಿರಾಮಕ್ಕೆ ಮನವಿ ಮಾಡಿದೆ; ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ

ವಾಷಿಂಗ್ಟನ್, ಏಪ್ರಿಲ್, 1: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ತಮ್ಮ ಟ್ರೂತ್ ಸೋಷಿಯಲ್​ನ ಪೋಸ್ಟ್‌ನಲ್ಲಿ ಇರಾನ್ ಅಮೆರಿಕದ ಬಳಿ ಕದನ ವಿರಾಮಕ್ಕೆ ಮನವಿ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಎಲ್ಲ ದೇಶಗಳಿಗೆ ಮುಕ್ತಗೊಳಿಸಿದ ನಂತರ ಅಮೆರಿಕ ಕದನವಿರಾಮದ ಪ್ರಸ್ತಾಪವನ್ನು ಪರಿಗಣಿಸುತ್ತದೆ ಎಂದು ಅವರು ಹೇಳಿರುವುದಾಗಿ ತಿಳಿಸಿದ್ದಾರೆ.

“ಇರಾನ್‌ನ ಹೊಸ ಆಡಳಿತದ ಅಧ್ಯಕ್ಷರು ಈ ಹಿಂದಿನ ಅಧ್ಯಕ್ಷರಿಗಿಂತ ಹೆಚ್ಚು ಬುದ್ಧಿವಂತರು. ಅಮೆರಿಕದ ಬಳಿ ಅವರು ಕದನವಿರಾಮಕ್ಕೆ ಮನವಿ ಮಾಡಿದ್ದಾರೆ! ಹಾರ್ಮುಜ್ ಜಲಸಂಧಿ ಯಾವಾಗ ಮುಕ್ತಗೊಳಿಸಿ ಮತ್ತೆ ತೆರೆಯುತ್ತೀರೋ ಆಗ ಈ ಬಗ್ಗೆ ನಾವು ಯೋಚಿಸುತ್ತೇವೆ” ಎಂದು ಹೇಳಿರುವುದಾಗಿ ಟ್ರಂಪ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇರಾನ್​ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾದಲ್ಲಿದ್ದಾರಾ? ರಾಯಭಾರಿ ಹೇಳಿದ್ದೇನು?

ಆದರೆ, ಇರಾನ್ ಈ ಬಗ್ಗೆ ಯಾವುದೇ ಹೇಳಿಕೆಯನ್ನಾಗಲಿ, ಸ್ಪಷ್ಟನೆಯನ್ನಾಗಲಿ ನೀಡಿಲ್ಲ. ನಿನ್ನೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ಇರಾನ್ ಇಸ್ರೇಲ್ ಮತ್ತು ಅಮೆರಿಕದ ವಿರುದ್ಧದ ಹೋರಾಟವನ್ನು ಮುಂದುವರಿಸಲು ಉದ್ದೇಶಿಸಿದೆ ಎಂದು ಹೇಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link