‘ಕ್ರಿಶ್ 4’ ನಿರ್ದೇಶಕ ಹೃತಿಕ್-ನಿರ್ಮಾಣ ಸಂಸ್ಥೆ ಮಧ್ಯೆ ಭಿನ್ನಾಭಿಪ್ರಾಯ? ಸಿಕ್ತು ಸ್ಪಷ್ಟನೆ – Kannada News
ಬಾಲಿವುಡ್‌ನ ಅತ್ಯಂತ ಯಶಸ್ವಿ ಸೂಪರ್ ಹೀರೋ ಫ್ರಾಂಚೈಸಿ ‘ಕ್ರಿಶ್’ (Krrish) ಸರಣಿಯ ಮುಂದಿನ ಭಾಗ ‘ಕ್ರಿಶ್ 4’ ಬಗ್ಗೆ ಸದ್ಯ ಬಿ-ಟೌನ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಚಿತ್ರದ ಮೂಲಕ ನಟ ಹೃತಿಕ್ ರೋಷನ್ ನಿರ್ದೇಶಕರಾಗಿ ಹೊಸ ಇನಿಂಗ್ಸ್ ಆರಂಭಿಸುತ್ತಿದ್ದು, ಸಿನಿಮಾ ಬಜೆಟ್ ವಿಷಯವಾಗಿ ದೊಡ್ಡ ವದಂತಿಗಳು ಹರಿದಾಡುತ್ತಿದ್ದವು. ಚಿತ್ರದ ಅದ್ದೂರಿ ಮೇಕಿಂಗ್ ಹಾಗೂ ಗ್ರಾಫಿಕ್ಸ್ ಸಲುವಾಗಿ ಹೃತಿಕ್ ಬರೋಬ್ಬರಿ 500 ಕೋಟಿ ರೂಪಾಯಿ ಬಜೆಟ್ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿಗೆ ಈಗ ಅವರ ತಂದೆ,…