Headlines

nagaraj11081993

ಬೈರತ್‌ನಲ್ಲಿ ಇಸ್ರೇಲ್ ನೌಕಾಪಡೆಯಿಂದ ಹಿಜ್ಬೊಲ್ಲಾದ ಕಮಾಂಡರ್ ಹತ್ಯೆ

ಟೆಹ್ರಾನ್, ಏಪ್ರಿಲ್ 1: ದಕ್ಷಿಣ ಲೆಬನಾನ್‌ನಲ್ಲಿ ಭಯೋತ್ಪಾದಕ ಗುಂಪಿನ ಮಿಲಿಟರಿ ಚಟುವಟಿಕೆಗೆ ಕಾರಣರಾಗಿದ್ದ ಹೆಜ್ಬೊಲ್ಲಾದ ಟಾಪ್ ಕಮಾಂಡರ್ ನಿನ್ನೆ ಬೈರತ್‌ನಲ್ಲಿ ನಡೆದ ಇಸ್ರೇಲ್ ನೌಕಾಪಡೆಯ ದಾಳಿಯಲ್ಲಿ (Israel Attack) ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಲೆಬನಾನ್ ರಾಜಧಾನಿಯಲ್ಲಿ ನಡೆದ ದಾಳಿಯಲ್ಲಿ ಹಜ್ ಯೂಸುಫ್ ಇಸ್ಮಾಯಿಲ್ ಹಶೆಮ್ ಸಾವನ್ನಪ್ಪಿದ್ದಾರೆ. ಅವರು ಸೆಪ್ಟೆಂಬರ್ 2024ರಲ್ಲಿ ಅಲಿ ಕರಕಿಯಿಂದ ದಕ್ಷಿಣದ ಟಾಪ್ ಕಮಾಂಡರ್ ಹುದ್ದೆಯನ್ನು ವಹಿಸಿಕೊಂಡರು. ಈ ಬಗ್ಗೆ ಐಡಿಎಫ್ ಮಾಹಿತಿ ಪ್ರಕಟಿಸಿದ್ದು, ಇಸ್ರೇಲಿ ದಾಳಿಯಲ್ಲಿ ಹಿಜ್ಬೊಲ್ಲಾ ಕಮಾಂಡರ್ ಹಜ್ ಯೂಸುಫ್ ಇಸ್ಮಾಯಿಲ್ ಹಶೆಮ್…

Read More

ಚಿಯಾ, ಕಲ್ಲಂಗಡಿ ಬೆನ್ನಲ್ಲೇ ಕರಬೂಜಕ್ಕೂ ತಟ್ಟಿದ ಯುದ್ಧದ ಬಿಸಿ: ದರ ಕುಸಿತ, ಹೊಲದಲ್ಲೇ ಕೊಳೆಯುತ್ತಿರುವ ಹಣ್ಣು

ಬೀದರ್, ಏಪ್ರಿಲ್​ 01: ಗಲ್ಫ್​ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಸದ್ಯ ಕರಬೂಜ ಹಣ್ಣು (muskmelon) ಬೆಳೆಗಾರರಿಗೂ ತಟ್ಟಿದೆ. ಹೀಗಾಗಿ ಏಕಾಏಕಿ ಕರಬೂಜ ಹಣ್ಣಿನ ದರ ಕುಸಿತವಾಗಿದ್ದು, ರೈತರಿಗೆ ಸಂಕಷ್ಟ ತಂದೊಡ್ಡಿದೆ. ಉತ್ತಮ ಗುಣಮಟ್ಟದ ಕರಬೂಜ ಹಣ್ಣು ಮಾರಾಟವಾಗದೇ ಹೊಲದಲ್ಲಿಯೇ ಕೊಳೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಕರಬೂಜ ಹಣ್ಣು ಮಾರಾಟದಲ್ಲಿ ಭಾರೀ ಕುಸಿತ ಗಲ್ಫ್​ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ಬೀದರ್ ಜಿಲ್ಲೆಯ ಕರಬೂಜ ಹಣ್ಣು ಬೆಳೆಗಾರರಿಗೆ ತಟ್ಟಿದೆ. ಯುದ್ಧದ ಪರಿಣಾಮವಾಗಿ ರಫ್ತು ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ಕರಬೂಜ…

Read More

ಮನೆದಲ್ಲಿ ಹಿರಿಯರು ಇದ್ದಾರಾ? ಹಾಗಿದ್ರೆ ನೀವು ಈ ಸಲಹೆಗಳನ್ನು ಅನುಸರಿಸಲೇಬೇಕು

ಮನೆಯಲ್ಲಿ ಹಿರಿಯರಿದ್ದರೆ ಮನೆ ಮಂದಿಗೆಲ್ಲಾ ಒಂದು ರೀತಿಯ ಸಂತೋಷ. ಆದರೆ ಅವರ ಜೊತೆ ಕಾಲಕಳೆಯುವುದರ ಜೊತೆಗೆ ಅವರ ಆರೋಗ್ಯದ ಕಡೆ ವಿಶೇಷ ಗಮನ ನೀಡುವುದು ಅತ್ಯಂತ ಮುಖ್ಯವಾಗುತ್ತದೆ. ಏಕೆಂದರೆ ವಯಸ್ಸು ಹೆಚ್ಚಾಗುತ್ತಿದ್ದಂತೆ ಹಲವಾರು ರೀತಿಯ ಕಾಯಿಲೆಗಳು ಬರುವ ಅಪಾಯ ಕೂಡ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಹಿರಿಯರ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದರ ಕುರಿತು ತಿಳಿದುಕೊಂಡಿರುವುದು ಬಹಳ ಮುಖ್ಯವಾಗುತ್ತದೆ. ವಯೋವೃದ್ಧರಲ್ಲಿ ಹೈ ಬಿಪಿ (Hypertension), ಶುಗರ್, ಎಲುಬಿನ ನೋವು ಮತ್ತು ನೆನಪಿನ ಶಕ್ತಿ ಕುಂದುವುದು ಮುಂತಾದ…

Read More

ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ

ದಾವಣಗೆರೆ, (ಮೇ 01): ಕರ್ನಾಟಕದಲ್ಲಿ ಎರಡು ವಿಧಾನಭಾ ಕ್ಷೇತ್ರಗಳ ಉಪಚುನಾವಣೆ ರಂಗೇರಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿ ಗೆಲುವಿಗೆ ಬಿರು ಬಿಸಿಲಿನಲ್ಲೂ ಗಲ್ಲಿ ಗಲ್ಲಿ ಸುತ್ತುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಬಾಗಲಕೋಟೆಯಲ್ಲಿ ಮೂರು ದಿನ ತಮ್ಮ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಭರ್ಜರಿ ಪ್ರಚಾರ ಮಾಡಿ ಇದೀಗ ದಾವಣೆಗೆರೆ ಅಖಾಡಕ್ಕಿಳಿದಿದ್ದಾರೆ. ಹೌದು…ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಗಲಕೋಟೆ ಮುಗಿಸಿಕೊಂಡು ಇಂದು (ಮೇ 01) ದಾವಣಗೆರೆಗೆ ಕಾಲಿಟ್ಟಿದ್ದು, ತಮ್ಮ ಅಭ್ಯರ್ಥಿ ಸಮರ್ಥ್ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದ್ರೆ,…

Read More

ಮದುವೆಯಾದರೂ ಡೇಟಿಂಗ್ ಆ್ಯಪ್ ಬಳಸುವವರಲ್ಲಿ ಬೆಂಗಳೂರಿಗೆ ನಂಬರ್ 1 ಸ್ಥಾನ!

ಬೆಂಗಳೂರು, ಏಪ್ರಿಲ್ 1: ಮದುವೆಯಾದರೂ ಡೇಟಿಂಗ್ ಆ್ಯಪ್ (Dating App) ಬಳಸುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನು ಸಮೀಕ್ಷೆಯೊಂದು ಬೆಳಕಿಗೆ ತಂದಿದೆ. ಮದುವೆಯಾದರೂ ತಮ್ಮ ಅಕ್ರಮ ಸಂಬಂಧಕ್ಕಾಗಿ ಡೇಟಿಂಗ್ ಆ್ಯಪ್ ಮೂಲಕ ಸಂಗಾತಿಯನ್ನು ಹೊಂದುವವರ ಸಂಖ್ಯೆಯಲ್ಲಿ ಬೆಂಗಳೂರು (Bengaluru) ಭಾರತದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದರಲ್ಲಿ 30-45 ವರ್ಷ ವಯಸ್ಸಿನ ಬಳಕೆದಾರರ ಸಂಖ್ಯೆ ಗಣನೀಯವಾಗಿದೆ. ಗ್ಲೀಡೆನ್‌ ಎಂಬ ಆ್ಯಪ್ ಮಾಡಿರುವ ಸಮೀಕ್ಷೆ ಈ ವಿಷಯವನ್ನು ಬಹಿರಂಗಪಡಿಸಿದೆ. ತಂತ್ರಜ್ಞಾನ ಮುಂದುವರೆದಂತೆ ಅದರಿಂದಾಗುವ ಅಡ್ಡಪರಿಣಾಮಗಳೂ ಕಡಿಮೆಯೇನಿಲ್ಲ ಎಂಬುದಕ್ಕೆ…

Read More

Viral: ಎಂಟು ವರ್ಷಗಳ ಕಾಲ ಕೆಲಸ ಮಾಡಿದ ಬಾಸ್‌ನ್ನು ವಜಾಗೊಳಿಸಿದ ಕಂಪನಿ ನಿರ್ಧಾರದಿಂದ ಉದ್ಯೋಗಿ ಶಾಕ್

ಇತ್ತೀಚೆಗಿನ ದಿನಗಳಲ್ಲಿ ಕೆಲಸ ಉಳಿಸಿಕೊಳ್ಳೋದು ಕಷ್ಟದ ಕೆಲಸ. ಕಂಪನಿಗಳಲ್ಲಿ (company) ವಿವಿಧ ಕಾರಣಗಳಿಂದಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೀಗಾಗಿ ಖಾಸಗಿ ಕಂಪನಿಗಳಿಗೆ ಕೆಲಸಕ್ಕೆ ಸೇರಿಕೊಂಡರೆ ಉದ್ಯೋಗ ಭದ್ರತೆಯಂತೂ ಇಲ್ಲವೇ ಇಲ್ಲ. ಯಾವಾಗ ಹೇಗೆ ಕೆಲಸ ಹೋಗುತ್ತದೆ ಎಂದು ಹೇಳಲು ಅಸಾಧ್ಯ. ಇದೀಗ ಉದ್ಯೋಗಿಯೊಬ್ಬರು ತಮ್ಮ ಕಚೇರಿಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಒಂದಲ್ಲ ಎರಡಲ್ಲ, ಬರೋಬ್ಬರಿ ಎಂಟು ವರ್ಷಗಳಿಂದ ಒಂದೇ ಕಂಪನಿಯಿಂದ ಕೆಲಸ ಮಾಡುತ್ತಿದ್ದ ತನ್ನ ಬಾಸ್‌ನ್ನು (Boss) ಹೆಚ್ ಆರ್ ಕೆಲಸದಿಂದ ತೆಗೆದು…

Read More

ಟ್ರಂಪ್ ಹಾಕಿದ ಟ್ಯಾರಿಫ್​ಗಳಿಗೆ ಬದಲಾಗಿ ಸಿಗಲಿದೆ ರೀಫಂಡ್; ಯಾರಿಗೆ ಸಿಗುತ್ತೆ ಆದ್ಯತೆ?

ವಾಷಿಂಗ್ಟನ್, ಏಪ್ರಿಲ್ 1: ಡೊನಾಲ್ಡ್ ಟ್ರಂಪ್ ವಿಧಿಸಿರುವ ಟ್ಯಾರಿಫ್ ಕ್ರಮವನ್ನು ಅಮೆರಿಕದ ಸುಪ್ರೀಮ್ ಕೋರ್ಟ್ ಅಮಾನ್ಯಗೊಳಿಸಿದೆ. ಈ ಟ್ಯಾರಿಫ್ ಸಂಗ್ರಹ ಅಕ್ರಮವಾಗಿದೆ ಎಂದು ಹೇಳಿ ಟ್ಯಾರಿಫ್ ಅನ್ನು (US Tariffs) ರದ್ದುಗೊಳಿಸಿದೆ. ಆದರೆ, ಅಷ್ಟರಲ್ಲಾಗಲೇ ಅಮೆರಿಕ ಸಾಕಷ್ಟು ಟ್ಯಾರಿಫ್ ಅನ್ನು ಸಂಗ್ರಹಿಸಿದ್ದಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸುಂಕ ಪ್ರಾಧಿಕಾರವು ಟ್ಯಾರಿಫ್ ಪಾವತಿಸಿದವರಿಗೆ ರೀಫಂಡ್ ಮಾಡಲು ವ್ಯವಸ್ಥೆ ಮಾಡಿದೆ. ಒಂದು ಅಂದಾಜು ಪ್ರಕಾರ 166 ಬಿಲಿಯನ್ ಡಾಲರ್​ನಷ್ಟು ಟ್ಯಾರಿಫ್ ಸಂಗ್ರಹವಾಗಿದ್ದು, ಅವೆಲ್ಲವನ್ನೂ ಹಂತ ಹಂತವಾಗಿ ರೀಫಂಡ್ ಮಾಡಲಾಗಬಹುದು. ಈ…

Read More

ಮಂಗಳನ ವೇಗ, ಆವೇಶ ನೋಡಿದ್ರೆ ಈ ರಾಶಿಯವರಿಗೆ ದೊಡ್ಡದಾಗಿ ಏನೋ ಕಾದಿದೆ

ಮೀನ ರಾಶಿಯಲ್ಲಿ ಮಂಗಳ ಮತ್ತು ಶನಿಯರ ಸಂಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ದ್ವಂದ್ವ ಯುದ್ಧದಂತೆ ಭಾಸವಾಗುತ್ತದೆ. ಶನಿಯು ಶಿಸ್ತು, ನಿಧಾನಗತಿ ಮತ್ತು ಕರ್ಮದ ಸಂಕೇತವಾದರೆ, ಮಂಗಳನು ವೇಗ, ಆವೇಶ ಮತ್ತು ಶಕ್ತಿಯ ಪ್ರತೀಕ. ಈ ಎರಡು ಶಕ್ತಿಗಳು ಮೀನ ಎಂಬ ಜಲತತ್ವದ ರಾಶಿಯಲ್ಲಿ ಸಂಧಿಸಿದಾಗ ಉಂಟಾಗಲಿದೆ. ​ಜಾಗತಿಕ ಮತ್ತು ಸಾಮಾಜಿಕ ಪ್ರಭಾವಗಳು ​ಮೀನ ರಾಶಿಯು ಸಮುದ್ರ ಮತ್ತು ಜಲಮೂಲಗಳನ್ನು ಪ್ರತಿನಿಧಿಸುವುದರಿಂದ, ಈ ಯುತಿಯು ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತದೆ. ​ನೈಸರ್ಗಿಕ ಬದಲಾವಣೆ: ಸಮುದ್ರದಲ್ಲಿ ಚಂಡಮಾರುತ, ಸುನಾಮಿ ಅಥವಾ ಅನಿರೀಕ್ಷಿತ ಮಳೆ…

Read More

ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆಹೋಗಿ, ‘ಇಡೀ ದೇಶಕ್ಕಾಗಿ ಪ್ರಾರ್ಥಿಸಿದೆ’ ಎಂದ ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ‘ಭೂತ್ ಬಂಗ್ಲಾ’ (Bhooth Bangla) ಸಿನಿಮಾದ ಬಿಡುಗಡೆಯ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ಈ ಚಿತ್ರ ರಿಲೀಸ್ ಆಗಲಿದೆ. ಬಿಡುಗಡೆಗೂ ಮುನ್ನ ಅವರು ದೇವರ ಮೊರೆಹೋಗಿದ್ದಾರೆ. ಬುಧವಾರ (ಏಪ್ರಿಲ್ 1) ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನಿಯ ಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ (Akshay Kumar) ಜೊತೆ ಅವರ ಅತ್ತೆ, ಹಿರಿಯ ನಟಿ ಡಿಂಪಲ್ ಕಪಾಡಿಯಾ ಸಾಥ್ ನೀಡಿದರು. ದೇವಸ್ಥಾನಕ್ಕೆ…

Read More

ಜೂ ಎನ್​​ಟಿಆರ್-ನೀಲ್ ಸಿನಿಮಾಕ್ಕೆ ಜೊತೆಯಾದ ಹಾಲಿವುಡ್ ತಂಡ

ಜೂ ಎನ್​​ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ (Prashant Neel) ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ‘ಡ್ರ್ಯಾಗನ್’, ‘ವಾರಣಾಸಿ’, ‘ಪೆದ್ದಿ’ ಇನ್ನಿತರೆ ಕೆಲ ಸಿನಿಮಾಗಳ ರೀತಿ ದೊಡ್ಡ ಸದ್ದು ಮಾಡುತ್ತಿಲ್ಲ ಆದರೆ ಸದ್ದಿಲ್ಲದೇ ಬೃಹತ್ ಆದ, ಭಾರಿ ಬಜೆಟ್​​ನ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಸಿನಿಮಾವನ್ನು ತಯಾರು ಮಾಡುತ್ತಿದೆ ಚಿತ್ರತಂಡ. ಪ್ರಶಾಂತ್ ನೀಲ್ ತಮ್ಮ ಈ ವರೆಗಿನ ಸಿನಿಮಾಗಳನ್ನು ಸೆಟ್​​ಗಳಲ್ಲಿಯೇ ನಿರ್ಮಿಸಿರುವುದು ಹೆಚ್ಚು. ಆದರೆ ಇದೇ ಮೊದಲ ಬಾರಿಗೆ ನೀಲ್ ಅವರು ಹೊರದೇಶಕ್ಕೆ ಸಹ ಹೋಗಿದ್ದು, ಅಲ್ಲಿ…

Read More