ಟೆಹ್ರಾನ್, ಏಪ್ರಿಲ್ 1: ದಕ್ಷಿಣ ಲೆಬನಾನ್‌ನಲ್ಲಿ ಭಯೋತ್ಪಾದಕ ಗುಂಪಿನ ಮಿಲಿಟರಿ ಚಟುವಟಿಕೆಗೆ ಕಾರಣರಾಗಿದ್ದ ಹೆಜ್ಬೊಲ್ಲಾದ ಟಾಪ್ ಕಮಾಂಡರ್ ನಿನ್ನೆ ಬೈರತ್‌ನಲ್ಲಿ ನಡೆದ ಇಸ್ರೇಲ್ ನೌಕಾಪಡೆಯ ದಾಳಿಯಲ್ಲಿ (Israel Attack) ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಲೆಬನಾನ್ ರಾಜಧಾನಿಯಲ್ಲಿ ನಡೆದ ದಾಳಿಯಲ್ಲಿ ಹಜ್ ಯೂಸುಫ್ ಇಸ್ಮಾಯಿಲ್ ಹಶೆಮ್ ಸಾವನ್ನಪ್ಪಿದ್ದಾರೆ. ಅವರು ಸೆಪ್ಟೆಂಬರ್ 2024ರಲ್ಲಿ ಅಲಿ ಕರಕಿಯಿಂದ ದಕ್ಷಿಣದ ಟಾಪ್ ಕಮಾಂಡರ್ ಹುದ್ದೆಯನ್ನು ವಹಿಸಿಕೊಂಡರು.
ಈ ಬಗ್ಗೆ ಐಡಿಎಫ್ ಮಾಹಿತಿ ಪ್ರಕಟಿಸಿದ್ದು, ಇಸ್ರೇಲಿ ದಾಳಿಯಲ್ಲಿ ಹಿಜ್ಬೊಲ್ಲಾ ಕಮಾಂಡರ್ ಹಜ್ ಯೂಸುಫ್ ಇಸ್ಮಾಯಿಲ್ ಹಶೆಮ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದೆ. ಹಶೆಮ್ ಅವರು 40 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಹೆಜ್ಬೊಲ್ಲಾದ ಹಿರಿಯ ಕಮಾಂಡರ್ ಮತ್ತು ಭಯೋತ್ಪಾದಕ ಸಂಘಟನೆಯಲ್ಲಿ ಕೇಂದ್ರ ವ್ಯಕ್ತಿ ಎಂದು ಮಿಲಿಟರಿ ಹೇಳಿದೆ.
ಇರಾನ್‌ನೊಂದಿಗಿನ ಯುದ್ಧದ ನಡುವೆ ಯುದ್ಧಗಳು ಉಲ್ಬಣಗೊಂಡ ನಂತರ ಇಸ್ರೇಲ್‌ನಿಂದ ಕೊಲ್ಲಲ್ಪಟ್ಟ ಅತ್ಯಂತ ಹಿರಿಯ ಹಿಜ್ಬೊಲ್ಲಾ ಕಮಾಂಡರ್ ಹಶೆಮ್ ಆಗಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೀದರ್, ಏಪ್ರಿಲ್ 01: ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಸದ್ಯ ಕರಬೂಜ ಹಣ್ಣು (muskmelon)ಬೆಳೆಗಾರರಿಗೂ ತಟ್ಟಿದೆ. ಹೀಗಾಗಿ ಏಕಾಏಕಿ ಕರಬೂಜ ಹಣ್ಣಿನ ದರ ಕುಸಿತವಾಗಿದ್ದು, ರೈತರಿಗೆ ಸಂಕಷ್ಟ ತಂದೊಡ್ಡಿದೆ. ಉತ್ತಮ ಗುಣಮಟ್ಟದ ಕರಬೂಜ ಹಣ್ಣು ಮಾರಾಟವಾಗದೇ ಹೊಲದಲ್ಲಿಯೇ ಕೊಳೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಕರಬೂಜ ಹಣ್ಣು ಮಾರಾಟದಲ್ಲಿ ಭಾರೀ ಕುಸಿತ
ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ಬೀದರ್ ಜಿಲ್ಲೆಯ ಕರಬೂಜ ಹಣ್ಣು ಬೆಳೆಗಾರರಿಗೆ ತಟ್ಟಿದೆ. ಯುದ್ಧದ ಪರಿಣಾಮವಾಗಿ ರಫ್ತು ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ಕರಬೂಜ ಹಣ್ಣು ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಒಮ್ಮೆ ಉತ್ತಮ ಬೇಡಿಕೆ ಹೊಂದಿದ್ದ ಕರಬೂಜ ಹಣ್ಣು, ಇದೀಗ ಬೆಲೆ ಕುಸಿತದಿಂದ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕರಬೂಜ ಕೆಜಿಗೆ ಕೇವಲ 4ರಿಂದ 5 ರೂಗೆ ಮಾರಾಟವಾಗುತ್ತಿದೆ.
ಈ ದರದಲ್ಲಿ ಕಟಾವು ಮತ್ತು ಸಾಗಾಟ ವೆಚ್ಚ ಸಹ ಮರಳದ ಪರಿಸ್ಥಿತಿ ನಿರ್ಮಾಣವಾಗಿದೆ. ಆತಂಕಕಾರಿ ಸಂಗತಿ ಅಂದರೆ ಉತ್ತಮ ಗುಣಮಟ್ಟದ ಕರಬೂಜ ಇದ್ದರೂ ಖರೀದಿದಾರರ ಕೊರತೆಯಿಂದ ಹೊಲದಲ್ಲೇ ಕೊಳೆಯುವಂತಾಗಿದೆ. ಇದರಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಜಿಲ್ಲೆಯ ಬಹುತೇಕ ಕರಬೂಜ ಬೆಳೆಗಾರರು ಈ ಸಂಕಷ್ಟವನ್ನು ಎದುರಿಸುತ್ತಿದ್ದು, ಸರ್ಕಾರದ ನೆರವಿಗೆ ಕಾದಿದ್ದಾರೆ.
ಜಿಲ್ಲೆಯೊಂದರಲ್ಲಿಯೇ ಸುಮಾರು 2 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಕರಬೂಜ ಬೆಳೆಯನ್ನ ಬೆಳೆಯುತ್ತಿದ್ದಾರೆ. ಔಷಧಿ ಗುಣಲಕ್ಷಣ ಹಾಗೂ ಪೌಷ್ಟಿಕಾಂಶ ಇರುವ ಗುಣಮಟ್ಟದ ಕರಬೂಜ, ಗಲ್ಫ್ ರಾಷ್ಟ್ರಕ್ಕೆ ಹೆಚ್ಚಾಗಿ ರಫ್ತು ಆಗುತ್ತಿತ್ತು. ಈ ಕರಬೂಜ ಹಣ್ಣಿಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬಹುಬೇಡಿಕೆ ಇದೆ.
ಕೈಕೊಟ್ಟ ಕರಬೂಜ ಬೆಳೆ
ಒಣ ಹವಾಮಾನದಲ್ಲಿ, ವಾರಕ್ಕೊಂದು ಬಾರಿ ತುಂತುರು ನೀರಾವರಿ ನೀಡಿದರೆ ಸಾಕು. 90 ರಿಂದ 100 ದಿನದಲ್ಲಿ ಫಸಲು ಬರುತ್ತದೆ. ಒಂದು ಎಕರೆ ಪ್ರದೇಶಕ್ಕೆ 40 ರಿಂದ 50 ಸಾವಿರ ರೂ ವೆಚ್ಚ ಬರಲಿದ್ದು, ಪೈರು ಬೆಳೆಸಿ ನಾಟಿ ಅಥವಾ ಬಿತ್ತನೆ ಬೀಜ ನೇರವಾಗಿ ಸಾಲು ಬಿಟ್ಟು ಬೆಳೆಯಬಹುದು. ಒಮ್ಮೆ ಮಾತ್ರ ರಾಸಾಯನಿಕ ಗೊಬ್ಬರ ನೀಡಿದರೆ ಸಾಕು. ಸ್ಥಳಿಯ ವಾತಾವರಣಕ್ಕೆ ಬೆಳೆಯಬಹುದಾದ ಬೆಳೆ ಇದಾಗಿದ್ದು ಹೀಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಕರಬೂಜ ಬೆಳೆದಿದ್ದರು. ಆದರೆ ಯುದ್ಧದಿಂದ ದರದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು ಕಟಾವು ಮಾಡದೆ ಹಾಗೆಯೇ ಹೊಲದಲ್ಲಿ ಬಿಟ್ಟಿದ್ದಾರೆ. ಲಾಭದ ನಿರಿಕ್ಷೇಯಲ್ಲಿದ್ದ ರೈತರಿಗೆ ಕರಬೂಜ ಬೆಳೆ ಕೈಕೊಟ್ಟಿದ್ದು, ಸಾಲದ ಸುಳಿಗೆ ಸಿಲುಕುವಂತಾಗಿದೆ ಎಂದು ರೈತ ಅವಿನಾಶ ಅಳಲು ತೋಡಿಕೊಂಡದ್ದಾರೆ.
ಜಿಲ್ಲೆಯ ಬಹುತೇಕ ರೈತರು ಕಲ್ಲಂಗಡಿ ಹಾಗೂ ಕರಬೂಜ ಕೃಷಿಯಲ್ಲಿ ತೊಡಗಿದ್ದಾರೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆಯುವ ಬೆಳೆ ಇದಾಗಿದೆ. ಆದರೆ ಯುದ್ದದಿಂದಾಗಿ ದರ ಕುಸಿತವಾಗಿದ್ದು, ರೈತರನ್ನ ಕಂಗಾಲು ಮಾಡಿದೆ.
ಮನೆಯಲ್ಲಿ ಹಿರಿಯರಿದ್ದರೆ ಮನೆ ಮಂದಿಗೆಲ್ಲಾ ಒಂದು ರೀತಿಯ ಸಂತೋಷ. ಆದರೆ ಅವರ ಜೊತೆ ಕಾಲಕಳೆಯುವುದರ ಜೊತೆಗೆ ಅವರ ಆರೋಗ್ಯದ ಕಡೆ ವಿಶೇಷ ಗಮನ ನೀಡುವುದು ಅತ್ಯಂತ ಮುಖ್ಯವಾಗುತ್ತದೆ. ಏಕೆಂದರೆ ವಯಸ್ಸು ಹೆಚ್ಚಾಗುತ್ತಿದ್ದಂತೆ ಹಲವಾರು ರೀತಿಯ ಕಾಯಿಲೆಗಳು ಬರುವ ಅಪಾಯ ಕೂಡ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಹಿರಿಯರ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದರ ಕುರಿತು ತಿಳಿದುಕೊಂಡಿರುವುದು ಬಹಳ ಮುಖ್ಯವಾಗುತ್ತದೆ. ವಯೋವೃದ್ಧರಲ್ಲಿ ಹೈ ಬಿಪಿ (Hypertension), ಶುಗರ್, ಎಲುಬಿನ ನೋವು ಮತ್ತು ನೆನಪಿನ ಶಕ್ತಿ ಕುಂದುವುದು ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ. ವೈದ್ಯರ ಪ್ರಕಾರ, ಕೆಲವು ಸರಿಯಾದ ಅಭ್ಯಾಸಗಳನ್ನು ಅನುಸರಿಸಿದರೆ ಹಿರಿಯರು ದೀರ್ಘಕಾಲ ಆರೋಗ್ಯಕರ ಜೀವನ ನಡೆಸಬಹುದು ಮತ್ತು ಹಲವು ಕಾಯಿಲೆಗಳಿಂದ ದೂರವಿರಬಹುದು. ಹಾಗಾದರೆ ಅವರ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು, ಎಷ್ಟು ದಿನಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು ಎಂಬುದರ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸರಿಯಾದ ಆಹಾರ ಅತ್ಯಾವಶ್ಯಕ:
ಡಾ. ಪ್ರಸೂನ್ ಅವರ ಪ್ರಕಾರ, ಹಿರಿಯರನ್ನು ಕಾಯಿಲೆಗಳಿಂದ ರಕ್ಷಿಸುವುದಷ್ಟೇ ಅಲ್ಲ, ಇದ್ದ ಕಾಯಿಲೆಗಳ ಸರಿಯಾದ ನಿರ್ವಹಣೆಯೂ ಮುಖ್ಯವಾಗುತ್ತದೆ. ಎಲ್ಲವೂ ಔಷಧಿಗಳಿಂದ ಮಾತ್ರ ಸರಿಯಾಗಬೇಕೆಂದಿಲ್ಲ. ಹಲವಾರು ಸಂದರ್ಭಗಳಲ್ಲಿ ಸರಿಯಾದ ಆಹಾರ ಪದ್ಧತಿ ಆರೋಗ್ಯದಲ್ಲಿ ಮಹತ್ವದ ಬದಲಾವಣೆ ತರುತ್ತದೆ. ಅದರಲ್ಲಿಯೂ ಹಿರಿಯರ ಆಹಾರದಲ್ಲಿ ಪ್ರೋಟೀನ್, ಫೈಬರ್ ಮತ್ತು ವಿಟಮಿನ್‌ಗಳು ಸಮರ್ಪಕವಾಗಿ ಇರಬೇಕು. ಹಸಿರು ತರಕಾರಿ, ಹಣ್ಣು ಮತ್ತು ಬೇಳೆಗಳನ್ನು ಆಹಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಬೆಳಗಿನ ಉಪಾಹಾರವನ್ನು ಸಮಯಕ್ಕೆ ಸರಿಯಾಗಿ ನೀಡಬೇಕು ಮತ್ತು ರಾತ್ರಿ ತಡವಾಗಿ ಊಟ ಕೊಡಬಾರದು.
ಹಿರಿಯರ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಆದ್ದರಿಂದ ಅವರೊಂದಿಗೆ ಸಮಯ ಕಳೆಯುವುದು ಅಗತ್ಯ. ಅವರ ಮಾತುಗಳನ್ನು ಕೇಳಿ, ನಿಮ್ಮ ಮಾತುಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಅವರಿಗೆ ಏಕಾಂಗಿ ಭಾವನೆ ಉಂಟಾಗದಂತೆ ನೋಡಿಕೊಳ್ಳಿ. ಏಕಾಂಗಿಯಾಗಿದ್ದೇನೆ ಎನಿಸುವುದು ಮಾನಸಿಕ ಒತ್ತಡ ಮತ್ತು ಡಿಪ್ರೆಶನ್ ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಾಗಾಗಿ ಕುಟುಂಬದ ಸದಸ್ಯರು ಅವರೊಂದಿಗೆ ಮಾತನಾಡಬೇಕು.
ನಿಯಮಿತ ಆರೋಗ್ಯ ತಪಾಸಣೆ ಅಗತ್ಯ:
ಹಿರಿಯರಲ್ಲಿ ಕಂಡುಬರುವ ಯಾವುದೇ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆ ಪಡೆಯಬೇಕು ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಇದರಿಂದ ಕಾಯಿಲೆಗಳನ್ನು ಆರಂಭದಲ್ಲೇ ಗುರುತಿಸಿ ಸರಿಯಾದ ಚಿಕಿತ್ಸೆ ಪಡೆಯಬಹುದು. ಮನೆದಲ್ಲಿ ಹಿರಿಯರ ಸುರಕ್ಷತೆ ಅತ್ಯಂತ ಮುಖ್ಯ. ಸರಿಯಾದ ಆಹಾರ, ಪ್ರೀತಿ ಮತ್ತು ಕಾಳಜಿ, ಹಾಗೂ ಸುರಕ್ಷಿತ ಪರಿಸರದಿಂದ ಹಿರಿಯರ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.
ದಾವಣಗೆರೆ, (ಮೇ 01): ಕರ್ನಾಟಕದಲ್ಲಿ ಎರಡು ವಿಧಾನಭಾ ಕ್ಷೇತ್ರಗಳ ಉಪಚುನಾವಣೆ ರಂಗೇರಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿ ಗೆಲುವಿಗೆ ಬಿರು ಬಿಸಿಲಿನಲ್ಲೂ ಗಲ್ಲಿ ಗಲ್ಲಿ ಸುತ್ತುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಬಾಗಲಕೋಟೆಯಲ್ಲಿ ಮೂರು ದಿನ ತಮ್ಮ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಭರ್ಜರಿ ಪ್ರಚಾರ ಮಾಡಿ ಇದೀಗ ದಾವಣೆಗೆರೆ ಅಖಾಡಕ್ಕಿಳಿದಿದ್ದಾರೆ. ಹೌದು…ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಗಲಕೋಟೆ ಮುಗಿಸಿಕೊಂಡು ಇಂದು (ಮೇ 01) ದಾವಣಗೆರೆಗೆ ಕಾಲಿಟ್ಟಿದ್ದು, ತಮ್ಮ ಅಭ್ಯರ್ಥಿ ಸಮರ್ಥ್ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದ್ರೆ, ಕಾರ್ಯಕರ್ತರು ಸಿಎಂ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಪಟಾಕಿ ಹಚ್ಚಲು ರೆಡಿ ಮಾಡಿಕೊಂಡಿದ್ದರು. ಆದ್ರೆ, ಪಟಾಕಿ ಹಚ್ಚಲು ಅವಕಾಶ ಸಿಗದಿದಕ್ಕೆ ಯುವರು ಕೊಂಚ ಅಸಮಧಾನಗೊಂಡಿದ್ದು, ನಮ್ಮೂರಲ್ಲಿ ಜಾಸ್ತಿ ಹೊತ್ತು ಭಾಷಣ ಮಾಡಿಲ್ಲ ಎಂದು ಅಭಿಮಾನಿಯೋರ್ವ ಪ್ರೀತಿಯಿಂದ ಸಿದ್ದರಾಮಯ್ಯನವರಿಗೆ ಹೇಳಿದ ಪ್ರಸಂಗ ನಡೆದಿದೆ.
ಬೆಂಗಳೂರು, ಏಪ್ರಿಲ್ 1: ಮದುವೆಯಾದರೂ ಡೇಟಿಂಗ್ ಆ್ಯಪ್ (Dating App) ಬಳಸುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನು ಸಮೀಕ್ಷೆಯೊಂದು ಬೆಳಕಿಗೆ ತಂದಿದೆ. ಮದುವೆಯಾದರೂ ತಮ್ಮ ಅಕ್ರಮ ಸಂಬಂಧಕ್ಕಾಗಿ ಡೇಟಿಂಗ್ ಆ್ಯಪ್ ಮೂಲಕ ಸಂಗಾತಿಯನ್ನು ಹೊಂದುವವರ ಸಂಖ್ಯೆಯಲ್ಲಿ ಬೆಂಗಳೂರು (Bengaluru) ಭಾರತದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದರಲ್ಲಿ 30-45 ವರ್ಷ ವಯಸ್ಸಿನ ಬಳಕೆದಾರರ ಸಂಖ್ಯೆ ಗಣನೀಯವಾಗಿದೆ. ಗ್ಲೀಡೆನ್ ಎಂಬ ಆ್ಯಪ್ ಮಾಡಿರುವ ಸಮೀಕ್ಷೆ ಈ ವಿಷಯವನ್ನು ಬಹಿರಂಗಪಡಿಸಿದೆ. ತಂತ್ರಜ್ಞಾನ ಮುಂದುವರೆದಂತೆ ಅದರಿಂದಾಗುವ ಅಡ್ಡಪರಿಣಾಮಗಳೂ ಕಡಿಮೆಯೇನಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ. ಈ ಅಧ್ಯಯನ ಕೆಲಸದ ಸ್ಥಳದಲ್ಲಿ ಹೆಚ್ಚಿನ ಸಂವಹನ, ಭಾವನಾತ್ಮಕ ಅತೃಪ್ತಿ ಮತ್ತು ಸ್ವಾತಂತ್ರ್ಯದ ಬಯಕೆ ಈ ರೀತಿ ವಿವಾಹೇತರ ಸಂಬಂಧಕ್ಕಾಗಿ ಹಪಹಪಿಸಲು ಕಾರಣವಾಗುತ್ತವೆ ಎಂದು ಸೂಚಿಸುತ್ತವೆ. ಏಕೆಂದರೆ, ನಗರ ಪ್ರದೇಶಕ್ಕೆ ಹೋಲಿಸಿದರೆ ಹಳ್ಳಿಗಳಲ್ಲಿ ಈ ರೀತಿಯ ಆ್ಯಪ್ಗಳ ಬಳಕೆ ತೀರಾ ಇಲ್ಲವೇ ಇಲ್ಲ ಎನ್ನಬಹುದು.
ಗ್ಲೀಡೆನ್ ಎಂಬುದು ಒಂದು ವಿವಾಹೇತರ ಡೇಟಿಂಗ್ ಪ್ಲಾಟ್ಫಾರ್ಮ್. ಗ್ಲೀಡೆನ್‌ನ 2025ರ ಸಮೀಕ್ಷೆಯ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 1.35 ಲಕ್ಷ ಬಳಕೆದಾರರು ಈ ಆ್ಯಪ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಹೆಚ್ಚಿನ ಪ್ರಮಾಣದಲ್ಲಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹೆಚ್ಚಾಗಿ ದೈಹಿಕ ಅನ್ಯೋನ್ಯತೆಗಿಂತ ಭಾವನಾತ್ಮಕತೆಯನ್ನು ಬಯಸುತ್ತಾರೆ ಎಂದು ಈ ಅಧ್ಯಯನ ಸೂಚಿಸಿದೆ.
ಬೆಂಗಳೂರು ನಗರದಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ, ಈ ಆ್ಯಪ್ ಬಳಕೆದಾರರು ಸಾಮಾನ್ಯವಾಗಿ ತಮ್ಮ ಸಂಗಾತಿಯ ಜೊತೆ ಭಾವನಾತ್ಮಕ ಸಂಬಂಧ ಇಲ್ಲದಿರುವುದು, ಅನ್ಯೋನ್ಯತೆಯ ಕೊರತೆಯ ಕಾರಣದಿಂದ ಈ ಆ್ಯಪ್ ಬಳಸುತ್ತಿರುವುದಾಗಿ ಹೇಳಕೊಂಡಿದ್ದಾರೆ.
2025ರ ಅಂತ್ಯದ ವೇಳೆಗೆ ಗ್ಲೀಡೆನ್‌ನ ಭಾರತೀಯ ಬಳಕೆದಾರರ ಸಂಖ್ಯೆಯನ್ನು ಬೆಂಗಳೂರಿನ ಬಳಕೆದಾರರು ಸರಿಸುಮಾರು ಶೇ. 17 ರಷ್ಟಿದ್ದಾರೆ. ಇವರಲ್ಲಿ ಹೆಚ್ಚಿನ ಬಳಕೆದಾರರು ಹಣಕಾಸು, ಕಾನೂನು, ಎಂಜಿನಿಯರಿಂಗ್ ಮತ್ತು ಉದ್ಯಮಶೀಲತೆಯಂತಹ ಶ್ರೀಮಂತ ಹಿನ್ನೆಲೆಯಿಂದ ಬಂದ 30ರಿಂದ 45 ವರ್ಷ ವಯಸ್ಸಿನ ವೃತ್ತಿಪರರು.
ವಿವಾಹೇತರ ಡೇಟಿಂಗ್ ವೇದಿಕೆಯಾದ ಗ್ಲೀಡೆನ್ ತನ್ನ ಭಾರತೀಯ ಬಳಕೆದಾರರ ನೆಲೆಯಿಂದ ಸಮೀಕ್ಷೆಯ ಡೇಟಾವನ್ನು ಬಿಡುಗಡೆ ಮಾಡಿದೆ. ಇದು 2026ರಲ್ಲಿ ಭಾರತೀಯರು ಸಂಬಂಧಗಳು, ಅನ್ಯೋನ್ಯತೆ ಮತ್ತು ಒಂಟಿತನವನ್ನು ಹೇಗೆ ಹೆಚ್ಚಾಗಿ ಅನುಭವಿಸುತ್ತಿದ್ದಾರೆ ಎಂಬುದರ ವಿವರವಾದ ಚಿತ್ರಣವನ್ನು ನೀಡುತ್ತಿದೆ. ಈ ವೇದಿಕೆಯು ಭಾರತದಲ್ಲಿ 4 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಶೇ. 54ರಷ್ಟು ಬೆಂಗಳೂರಿನ ಬಳಕೆದಾರರು ಎಐ ಲೈಂಗಿಕ ಪಾರ್ಟನರ್ ಅನ್ನು ಕೂಡ ಹೊಂದಿದ್ದಾರೆ ಎಂದು ಸಮೀಕ್ಷೆ ಸೂಚಿಸಿದೆ. ಬೆಂಗಳೂರು ಗ್ಲೀಡೆನ್‌ನಲ್ಲಿ ಬೇರೆ ಭಾರತೀಯ ನಗರಕ್ಕಿಂತ ಅತಿ ಹೆಚ್ಚು ಸೈನ್-ಅಪ್‌ಗಳನ್ನು ಹೊಂದಿದೆ. ಇದು ಪ್ರಮುಖ ಮೆಟ್ರೋ ನಗರಗಳಾದ ಹೈದರಾಬಾದ್ ಮತ್ತು ದೆಹಲಿಗಿಂತ ಮೇಲ್ಭಾಗದಲ್ಲಿದೆ.
ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ ಟೈಯರ್-2 ನಗರದ ದತ್ತಾಂಶ. ಲಕ್ನೋ, ನೋಯ್ಡಾ, ಚಂಡೀಗಢ, ಸೂರತ್, ಕೊಯಮತ್ತೂರು, ಭುವನೇಶ್ವರ, ಪಾಟ್ನಾ, ಗುವಾಹಟಿ ಮತ್ತು ರಾಯ್‌ಪುರಗಳು ಈ ಆ್ಯಪ್ ಬಳಸುವವರ ಗಮನಾರ್ಹ ಹೆಚ್ಚಳವನ್ನು ತೋರಿಸುತ್ತಿವೆ. ಹಾಗೇ, ಕಳೆದ 2 ವರ್ಷಗಳಲ್ಲಿ ಮಹಿಳಾ ಬಳಕೆದಾರರ ಸಂಖ್ಯೆ ಶೇ. 148ರಷ್ಟು ಹೆಚ್ಚಾಗಿದೆ ಎಂಬುದು ಇನ್ನಷ್ಟು ಮುಖ್ಯವಾದ ಸಂಗತಿ. ಇವೆಲ್ಲವೂ ಭಾರತದಲ್ಲಿ ಆಧುನಿಕತೆ ಹೆಚ್ಚಾದಂತೆ ಅದು ಸಂಬಂಧಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದರ ಎಚ್ಚರಿಕೆಯ ಗಂಟೆಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚೆಗಿನ ದಿನಗಳಲ್ಲಿ ಕೆಲಸ ಉಳಿಸಿಕೊಳ್ಳೋದು ಕಷ್ಟದ ಕೆಲಸ. ಕಂಪನಿಗಳಲ್ಲಿ (company) ವಿವಿಧ ಕಾರಣಗಳಿಂದಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೀಗಾಗಿ ಖಾಸಗಿ ಕಂಪನಿಗಳಿಗೆ ಕೆಲಸಕ್ಕೆ ಸೇರಿಕೊಂಡರೆ ಉದ್ಯೋಗ ಭದ್ರತೆಯಂತೂ ಇಲ್ಲವೇ ಇಲ್ಲ. ಯಾವಾಗ ಹೇಗೆ ಕೆಲಸ ಹೋಗುತ್ತದೆ ಎಂದು ಹೇಳಲು ಅಸಾಧ್ಯ. ಇದೀಗ ಉದ್ಯೋಗಿಯೊಬ್ಬರು ತಮ್ಮ ಕಚೇರಿಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಒಂದಲ್ಲ ಎರಡಲ್ಲ, ಬರೋಬ್ಬರಿ ಎಂಟು ವರ್ಷಗಳಿಂದ ಒಂದೇ ಕಂಪನಿಯಿಂದ ಕೆಲಸ ಮಾಡುತ್ತಿದ್ದ ತನ್ನ ಬಾಸ್‌ನ್ನು (Boss) ಹೆಚ್ ಆರ್ ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಉದ್ಯೋಗ ಭದ್ರತೆ ಮತ್ತು ಕಾರ್ಪೊರೇಟ್ ನಿಷ್ಠೆಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬಂಜಿ ಅಲೋ (Banji Alo) ಹೆಸರಿನ ಉದ್ಯೋಗಿಯೊಬ್ಬರು ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಎಂಟು ವರ್ಷಗಳ ಕಾಲ ಕಂಪನಿಯಲ್ಲಿ ನಿಷ್ಠೆಯಿಂದ ದುಡಿಯುತ್ತಿದ್ರೂ ಬಾಸ್‌ನ್ನು ಯಾವುದೇ ಸೂಚನೆ ನೀಡದೇ ವಜಾಗೊಳಿಸಿದ್ದಾರೆ ಎಂದು ವಿವರಿಸಿದ್ದಾರೆ. ನನ್ನ ಮಾಜಿ ಬಾಸ್ ಕಂಪನಿಯಲ್ಲಿ 8 ವರ್ಷಗಳ ಕಾಲ ದುಡಿದರೂ ಕೆಲಸದಿಂದ ತೆಗೆದುಹಾಕಲಾಯಿತು. ಅವರು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಬಂದರು.
ವೈರಲ್ ಪೋಸ್ಟ್ ಇಲ್ಲಿದೆ
My former boss was laid off after 8 years at a company.
They arrived at work in the morning to start their day as normal.
A few hours in, HR called them into a meeting and told them it was their last day.
The company made the role redundant effective immediately.
ಆದರೆ ಕೆಲವು ಗಂಟೆಗಳ ನಂತರ, ಹೆಚ್ ಆರ್ ಅವರನ್ನು ಮೀಟಿಂಗ್ ಕರೆದು ಇದು ಅವರ ಕೊನೆಯ ದಿನ ಎಂದು ಹೇಳಿದರು. ಆದರೆ ನನ್ನ ಬಾಸ್ ರಾತ್ರಿ ಮತ್ತು ವಾರಾಂತ್ಯದಲ್ಲಿ ಕೆಲಸ ಮಾಡುತ್ತಿದ್ದ, ಯಾವಾಗಲೂ ಕಂಪನಿಗೆ ಮೊದಲ ಆದ್ಯತೆ ನೀಡುವ ಸಹೋದ್ಯೋಗಿ. ಹೆಚ್ ಆರ್ ಅವರು ಹೇಳಿದ ಮಾತು ಕೇಳಿ ಅವರು ತಮ್ಮ ಲ್ಯಾಪ್‌ಟಾಪ್ ಮತ್ತು ಎಂಟ್ರಿ ಕಾರ್ಡ್‌ನ್ನು ಹಸ್ತಾಂತರಿಸಿದರು. ಈ ಸುದ್ದಿ ಆಘಾತಕಾರಿಯಾಗಿತ್ತು, ಆದ್ದರಿಂದ ಅವರು ವ್ಯವಹಾರ ಮುಗಿಯುವ ಮೊದಲೇ ಹೊರಡಲು ನಿರ್ಧರಿಸಿದರು. ಕಂಪನಿಗಳು ತಮ್ಮನ್ನು ತಾವು ನೋಡಿಕೊಳ್ಳುತ್ತವೆ ಎಂದು ಬರೆದಿದ್ದಾರೆ.
ಮಾರ್ಚ್ 31 ರಂದು ಮಾಡಲಾದ ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ ತುಂಬಾ ದುಃಖಕರ ಮತ್ತು ಹೃದಯವಿದ್ರಾವಕ. ಇಂತಹ ನಿರ್ಧಾರದಿಂದ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ನೀವು ಕೆಲಸದಲ್ಲಿ ಎಷ್ಟೇ ಒಳ್ಳೆಯವರಾಗಿದ್ದರೂ ಪರವಾಗಿಲ್ಲ, ಸರದಿ ಬಂದಾಗ ನೀವು ಹೊರಡಲೇ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತುಂಬಾ ಕರುಣಾಜನಕ ಘಟನೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಾಷಿಂಗ್ಟನ್, ಏಪ್ರಿಲ್ 1: ಡೊನಾಲ್ಡ್ ಟ್ರಂಪ್ ವಿಧಿಸಿರುವ ಟ್ಯಾರಿಫ್ ಕ್ರಮವನ್ನು ಅಮೆರಿಕದ ಸುಪ್ರೀಮ್ ಕೋರ್ಟ್ ಅಮಾನ್ಯಗೊಳಿಸಿದೆ. ಈ ಟ್ಯಾರಿಫ್ ಸಂಗ್ರಹ ಅಕ್ರಮವಾಗಿದೆ ಎಂದು ಹೇಳಿ ಟ್ಯಾರಿಫ್ ಅನ್ನು (US Tariffs) ರದ್ದುಗೊಳಿಸಿದೆ. ಆದರೆ, ಅಷ್ಟರಲ್ಲಾಗಲೇ ಅಮೆರಿಕ ಸಾಕಷ್ಟು ಟ್ಯಾರಿಫ್ ಅನ್ನು ಸಂಗ್ರಹಿಸಿದ್ದಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸುಂಕ ಪ್ರಾಧಿಕಾರವು ಟ್ಯಾರಿಫ್ ಪಾವತಿಸಿದವರಿಗೆ ರೀಫಂಡ್ ಮಾಡಲು ವ್ಯವಸ್ಥೆ ಮಾಡಿದೆ. ಒಂದು ಅಂದಾಜು ಪ್ರಕಾರ 166 ಬಿಲಿಯನ್ ಡಾಲರ್ನಷ್ಟು ಟ್ಯಾರಿಫ್ ಸಂಗ್ರಹವಾಗಿದ್ದು, ಅವೆಲ್ಲವನ್ನೂ ಹಂತ ಹಂತವಾಗಿ ರೀಫಂಡ್ ಮಾಡಲಾಗಬಹುದು. ಈ ಪ್ರಕ್ರಿಯೆಗೆ ಸುಮಾರು 45 ದಿನಗಳು ತಗುಲಬಹುದು.
ಈಗಾಗಲೇ ಪೋರ್ಟಲ್ ಇತ್ಯಾದಿ ಟ್ಯಾರಿಫ್ ರೀಫಂಡ್ ಸಿಸ್ಟಂ ಮುಕ್ಕಾಲು ಪಾಲು ಪೂರ್ಣಗೊಂಡಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಅರ್ಜಿ ಸಲ್ಲಿಕೆ ನಂತರ ವಿವಿಧ ಪ್ರಕ್ರಿಯೆ ಪೂರ್ಣಗೊಳಿಸಲು 45 ದಿನಗಳ ಗುರಿ ಇಡಲಾಗಿದೆ. ಅರ್ಜಿ ಸಲ್ಲಿಕೆ ಯಾವಾಗ ಆರಂಭವಾಗುತ್ತದೆ ಎಂಬುದು ಗೊತ್ತಾಗಿಲ್ಲ. ಏಪ್ರಿಲ್ ಅಂತ್ಯದೊಳಗೆ ಈ ಪೋರ್ಟಲ್ ಸಾರ್ವತ್ರಿಕಗೊಳ್ಳಬಹುದು ಎನ್ನಲಾಗಿದೆ.
ಟ್ಯಾರಿಫ್ ವಿದೇಶಗಳಿಂದ ಸರಬರಾಜು ಮಾಡಲಾಗುವ ಸರಕುಗಳಿಗೆ ವಿಧಿಸುವ ಸುಂಕ. ಇದನ್ನು ಆಮದುಗಾರರು ಪಾವತಿಸುತ್ತಾರೆ. ಉದಾಹರಣೆಗೆ, ಭಾರತದ ಸರಕುಗಳ ಮೇಲೆ ಟ್ರಂಪ್ ಅವರು ಶೇ. 50ರಷ್ಟು ಟ್ಯಾರಿಫ್ ಹಾಕಿದ್ದಾರೆ ಎಂದಿಟ್ಟುಕೊಳ್ಳಿ. ಭಾರತೀಯ ಕಂಪನಿಯೊಂದು ತನ್ನ ಸರಕುಗಳನ್ನು ಅಮೆರಿಕದ ಕಂಪನಿಯೊಂದಕ್ಕೆ ಮಾರುತ್ತದೆ. ಆ ಸರಕುಗಳಿಗೆ ಶೇ. 50ರಷ್ಟು ಟ್ಯಾರಿಫ್ ಇರುತ್ತದೆ. ಈ ಟ್ಯಾರಿಫ್ ಅನ್ನು ಅಮೆರಿಕದ ಕಂಪನಿಯು ಸುಂಕ ಏಜೆನ್ಸಿಗೆ ಪಾವತಿಸಿ, ಸರಕುಗಳನ್ನು ಪಡೆಯಬೇಕು. ಹೀಗಾಗಿ, ಟ್ರಂಪ್ ಹಾಕಿದ ಟ್ಯಾರಿಫ್ ಅನ್ನು ಅಮೆರಿಕದ ಕಂಪನಿಗಳೇ ಪಾವತಿಸುವಂತಾಗುತ್ತದೆ.
ಕೋರ್ಟ್ನಲ್ಲಿ ಸಲ್ಲಿಕೆಯಾದ ದಾಖಲೆಗಳ ಪ್ರಕಾರ, ಟ್ರಂಪ್ರ ಟ್ಯಾರಿಫ್ ನೀತಿ ಬಂದ ಮೇಲೆ 3.3 ಲಕ್ಷಕ್ಕೂ ಅಧಿಕ ಆಮದುಗಾರರು ಒಟ್ಟು 166 ಬಿಲಿಯನ್ ಡಾಲರ್ನಷ್ಟು ಟ್ಯಾರಿಫ್ ಅನ್ನು ಪಾವತಿಸಿರುವುದು ತಿಳಿದುಬಂದಿದೆ.
ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಏಜೆನ್ಸಿಯು ಹೊಸ ಆನ್ಲೈನ್ ರೀಫಂಡ್ ಕ್ಲೇಮ್ಸ್ ಪೋರ್ಟಲ್ ರಚಿಸುತ್ತಿದೆ. ಇದಾದ ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಆ ನಂತರ ಇತರ ಪ್ರಕ್ರಿಯೆಗಳು 45 ದಿನದಲ್ಲಿ ಆಗಬಹುದು. ಮೊದಲಿಗೆ ಬಹಳ ಸುಲಭ ಮತ್ತು ಸರಳ ಇರುವ ಪ್ರಕರಣಗಳನ್ನು ತೆಗೆದುಕೊಂಡು ಇತ್ಯರ್ಥಪಡಿಸಿ, ರೀಫಂಡ್ ಮಾಡಲಾಗುತ್ತದೆ. ರೀಫಂಡ್ ಅನ್ನು ಬಡ್ಡಿಸಮೇತ ನೀಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಮೀನ ರಾಶಿಯಲ್ಲಿ ಮಂಗಳ ಮತ್ತು ಶನಿಯರ ಸಂಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ದ್ವಂದ್ವ ಯುದ್ಧದಂತೆ ಭಾಸವಾಗುತ್ತದೆ. ಶನಿಯು ಶಿಸ್ತು, ನಿಧಾನಗತಿ ಮತ್ತು ಕರ್ಮದ ಸಂಕೇತವಾದರೆ, ಮಂಗಳನು ವೇಗ, ಆವೇಶ ಮತ್ತು ಶಕ್ತಿಯ ಪ್ರತೀಕ. ಈ ಎರಡು ಶಕ್ತಿಗಳು ಮೀನ ಎಂಬ ಜಲತತ್ವದ ರಾಶಿಯಲ್ಲಿ ಸಂಧಿಸಿದಾಗ ಉಂಟಾಗಲಿದೆ.
ಜಾಗತಿಕ ಮತ್ತು ಸಾಮಾಜಿಕ ಪ್ರಭಾವಗಳು
ಮೀನ ರಾಶಿಯು ಸಮುದ್ರ ಮತ್ತು ಜಲಮೂಲಗಳನ್ನು ಪ್ರತಿನಿಧಿಸುವುದರಿಂದ, ಈ ಯುತಿಯು ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತದೆ.
ನೈಸರ್ಗಿಕ ಬದಲಾವಣೆ: ಸಮುದ್ರದಲ್ಲಿ ಚಂಡಮಾರುತ, ಸುನಾಮಿ ಅಥವಾ ಅನಿರೀಕ್ಷಿತ ಮಳೆ ಹೆಚ್ಚಾಗಬಹುದು. ನೌಕಾಪಡೆ ಅಥವಾ ಜಲಸಾರಿಗೆ ಕ್ಷೇತ್ರದಲ್ಲಿ ತಾಂತ್ರಿಕ ಅಡಚಣೆಗಳು ಎದುರಾಗಬಹುದು.
ರಾಜಕೀಯ ಅಸ್ಥಿರತೆ: ಗಡಿ ವಿವಾದಗಳು ತಾರಕಕ್ಕೇರಬಹುದು. ವಿಶೇಷವಾಗಿ ದಕ್ಷಿಣ ಅಥವಾ ನೈಋತ್ಯ ದಿಕ್ಕಿನ ದೇಶಗಳಲ್ಲಿ ಆಂತರಿಕ ಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಔಷಧೀಯ ಕ್ಷೇತ್ರ: ಹೊಸ ರೋಗಗಳ ಉಗಮ ಅಥವಾ ಇರುವ ರೋಗಗಳಿಗೆ ಹೊಸ ಔಷಧಗಳ ಸಂಶೋಧನೆಯಲ್ಲಿ ಈ ಗ್ರಹಗತಿಗಳು ವೇಗ ನೀಡುತ್ತವೆ.
ಲಾಭದಾಯಕ ಸ್ಥಿತಿ
ಆರ್ಥಿಕ ಸ್ಥಿರತೆ: ಇವರಿಗೆ ಅನಿರೀಕ್ಷಿತವಾಗಿ ಸಿಗಬೇಕಾದ ಹಣಕಾಸು ಸೌಲಭ್ಯಗಳು ದೊರೆಯಲಿವೆ. ಹಳೆಯ ಆಸ್ತಿ ವಿವಾದಗಳು ಇವರ ಪರವಾಗಿ ತೀರ್ಪು ಬರಬಹುದು.
ಧೈರ್ಯ ಮತ್ತು ಸಾಹಸ: ಮಂಗಳನ ಪ್ರಭಾವದಿಂದ ಹೊಸ ಉದ್ಯಮ ಆರಂಭಿಸಲು ಬೇಕಾದ ಧೈರ್ಯ ಸಿಗುತ್ತದೆ, ಶನಿಯು ಅದಕ್ಕೆ ದೀರ್ಘಕಾಲದ ಭದ್ರತೆಯನ್ನು ನೀಡುತ್ತಾನೆ.
ಸವಾಲಿನ ಸ್ಥಿತಿ
ಮಾನಸಿಕ ದ್ವಂದ್ವ: ಮಾಡಬೇಕೋ ಬೇಡವೋ ಎಂಬ ಗೊಂದಲ ಇವರನ್ನು ಕಾಡಬಹುದು. ಶನಿಯು ತಡೆಹಿಡಿದರೆ ಮಂಗಳನು ತಳ್ಳುತ್ತಾನೆ, ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.
ಅಪಘಾತದ ಭಯ: ವಾಹನ ಚಾಲನೆ ಮಾಡುವಾಗ ಅತೀವ ಜಾಗರೂಕತೆ ಇರಲಿ. ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಕಾಯಿಲೆಗಳು ಬಾಧಿಸಬಹುದು.
ಸಂಬಂಧಗಳಲ್ಲಿ ಬಿರುಕು: ಕುಟುಂಬದಲ್ಲಿ ಹಿರಿಯರೊಂದಿಗೆ ವಾಗ್ವಾದ ಉಂಟಾಗಬಹುದು. ಮಾತಿನ ಮೇಲೆ ನಿಗಾ ಇಡುವುದು ಅನಿವಾರ್ಯ.
ವೃತ್ತಿ ಮತ್ತು ಆರ್ಥಿಕತೆಯ ಮೇಲೆ ಪ್ರಭಾವ
ಕಬ್ಬಿಣ ಮತ್ತು ಯಂತ್ರೋಪಕರಣ: ಈ ಕ್ಷೇತ್ರದಲ್ಲಿ ಇರುವವರಿಗೆ ಲಾಭದ ಜೊತೆಗೆ ಹೆಚ್ಚಿನ ಕೆಲಸದ ಒತ್ತಡವಿರುತ್ತದೆ.
ರಿಯಲ್ ಎಸ್ಟೇಟ್: ಭೂಮಿ ಖರೀದಿ ಅಥವಾ ಮಾರಾಟ ಪ್ರಕ್ರಿಯೆಯಲ್ಲಿ ಕಾನೂನು ತೊಡಕುಗಳು ಎದುರಾಗಬಹುದು. ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಉತ್ತಮ.
ಷೇರು ಮಾರುಕಟ್ಟೆ: ಪೆಟ್ರೋಲಿಯಂ, ರಾಸಾಯನಿಕ ಮತ್ತು ರಕ್ಷಣಾ ವಲಯದ ಷೇರುಗಳಲ್ಲಿ ಏರಿಳಿತ ಕಂಡುಬರಬಹುದು.
ಆಧ್ಯಾತ್ಮಿಕ ಮತ್ತು ಮಾನಸಿಕ ಪರಿಣಾಮ
ಮೀನ ರಾಶಿಯು ಆಧ್ಯಾತ್ಮದ ನೆಲೆ. ಇಲ್ಲಿ ಈ ಎರಡು ಪಾಪ ಗ್ರಹಗಳ ಭೇಟಿಯು ವ್ಯಕ್ತಿಯಲ್ಲಿ ವೈರಾಗ್ಯ ಅಥವಾ ತೀವ್ರ ಜಿಜ್ಞಾಸೆಯನ್ನು ಹುಟ್ಟಿಸುತ್ತದೆ. ಕೆಟ್ಟ ಹವ್ಯಾಸಗಳಿಂದ ದೂರವಿರಲು ಇದು ಸುಸಮಯ. ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಮಂಗಳನ ಆವೇಶವನ್ನು ಶಾಂತಗೊಳಿಸಿ ಶನಿಯ ಸ್ಥಿರತೆಯನ್ನು ಪಡೆಯಬಹುದು.
ಪರಿಣಾಮಕಾರಿ ಪರಿಹಾರಗಳು ಸುಬ್ರಹ್ಮಣ್ಯ ಆರಾಧನೆ: ಮಂಗಳನ ದೋಷ ನಿವಾರಣೆಗೆ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಅಥವಾ ಷಷ್ಠಿ ಪಾರಾಯಣ ಮಾಡುವುದು ಶ್ರೇಯಸ್ಕರ. ಶನಿವಾರದಂದು ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪ ಹಚ್ಚುವುದು ಮತ್ತು ಬಡವರಿಗೆ ಅನ್ನದಾನ ಮಾಡುವುದು ಶುಭ ತರುತ್ತದೆ.
– ಲೋಹಿತ ಹೆಬ್ಬಾರ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ‘ಭೂತ್ ಬಂಗ್ಲಾ’ (Bhooth Bangla) ಸಿನಿಮಾದ ಬಿಡುಗಡೆಯ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ಈ ಚಿತ್ರ ರಿಲೀಸ್ ಆಗಲಿದೆ. ಬಿಡುಗಡೆಗೂ ಮುನ್ನ ಅವರು ದೇವರ ಮೊರೆಹೋಗಿದ್ದಾರೆ. ಬುಧವಾರ (ಏಪ್ರಿಲ್ 1) ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನಿಯ ಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ (Akshay Kumar) ಜೊತೆ ಅವರ ಅತ್ತೆ, ಹಿರಿಯ ನಟಿ ಡಿಂಪಲ್ ಕಪಾಡಿಯಾ ಸಾಥ್ ನೀಡಿದರು. ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಕ್ಷಯ್ ಕುಮಾರ್, ‘ದರ್ಶನ ತುಂಬಾ ಚೆನ್ನಾಗಿ ಆಯಿತು. ಇಡೀ ದೇಶ ಮತ್ತು ನನ್ನ ಕುಟುಂಬದ ಏಳಿಗೆಗಾಗಿ ನಾನು ಪ್ರಾರ್ಥಿಸಿದ್ದೇನೆ. ನಮ್ಮ ದೇಶವು ಯಾವಾಗಲೂ ಉನ್ನತ ಮಟ್ಟಕ್ಕೆ ಏರಲಿ ಮತ್ತು ಸದಾ ಪ್ರಗತಿ ಹೊಂದಲಿ ಅಂತ ಶಿವನಲ್ಲಿ ಬೇಡಿಕೊಂಡಿದ್ದೇನೆ’ ಎಂದು ತಿಳಿಸಿದರು.
ಶಿಪ್ರಾ ನದಿಯ ದಡದಲ್ಲಿರುವ ಈ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿದ ವೇಳೆ ಅಕ್ಷಯ್ ಕುಮಾರ್ ಬಿಳಿ ಬಣ್ಣದ ಕುರ್ತಾ-ಪೈಜಾಮ ಧರಿಸಿದ್ದರು. ಡಿಂಪಲ್ ಕಪಾಡಿಯಾ ಅವರು ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದರು. ‘ಎಎನ್‌ಐ’ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವಿಡಿಯೋದಲ್ಲಿ ಇಬ್ಬರೂ ತಾರೆಯರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂದಿದೆ.
#WATCH | Ujjain, MP: After the prayers, actor Akshay Kumar says, “It was really good…I prayed for the entire country and my family. I prayed that may our country always excel and progress.” https://t.co/xUwoYsIfWlpic.twitter.com/rpZMgroK1E
ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಸುಮಾರು 14 ವರ್ಷಗಳ ಸುದೀರ್ಘ ಬಿಡುವಿನ ನಂತರ ‘ಭೂತ್ ಬಂಗ್ಲಾ’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಹಿಂದೆ ‘ಹೇರಾ ಫೇರಿ’, ‘ಭೂಲ್ ಭುಲಯ್ಯ’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಈ ಜೋಡಿಯ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾರರ್-ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.
‘ಭೂತ್ ಬಂಗ್ಲಾ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಟಬು, ಪರೇಶ್ ರಾವಲ್, ರಾಜ್‌ಪಾಲ್ ಯಾದವ್, ಜಿಸ್ಸು ಸೇನ್‌ಗುಪ್ತಾ, ಅಸ್ರಾನಿ ಮತ್ತು ವಾಮಿಕಾ ಗಬ್ಬಿ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಕೇಪ್ ಆಫ್ ಗುಡ್ ಫಿಲ್ಮ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ.
ಜೂ ಎನ್ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ (Prashant Neel) ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ‘ಡ್ರ್ಯಾಗನ್’, ‘ವಾರಣಾಸಿ’, ‘ಪೆದ್ದಿ’ ಇನ್ನಿತರೆ ಕೆಲ ಸಿನಿಮಾಗಳ ರೀತಿ ದೊಡ್ಡ ಸದ್ದು ಮಾಡುತ್ತಿಲ್ಲ ಆದರೆ ಸದ್ದಿಲ್ಲದೇ ಬೃಹತ್ ಆದ, ಭಾರಿ ಬಜೆಟ್ನ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಸಿನಿಮಾವನ್ನು ತಯಾರು ಮಾಡುತ್ತಿದೆ ಚಿತ್ರತಂಡ. ಪ್ರಶಾಂತ್ ನೀಲ್ ತಮ್ಮ ಈ ವರೆಗಿನ ಸಿನಿಮಾಗಳನ್ನು ಸೆಟ್ಗಳಲ್ಲಿಯೇ ನಿರ್ಮಿಸಿರುವುದು ಹೆಚ್ಚು. ಆದರೆ ಇದೇ ಮೊದಲ ಬಾರಿಗೆ ನೀಲ್ ಅವರು ಹೊರದೇಶಕ್ಕೆ ಸಹ ಹೋಗಿದ್ದು, ಅಲ್ಲಿ ಆಕ್ಷನ್ ದೃಶ್ಯಗಳ ಚಿತ್ರೀಕರಣ ಮಾಡಿದ್ದಾರೆ. ಮಾತ್ರವಲ್ಲದೆ ಸಿನಿಮಾಕ್ಕೆ ಖ್ಯಾತ ಹಾಲಿವುಡ್ ತಂಡದ ನೆರವನ್ನು ಸಹ ಪಡೆದಿದ್ದಾರೆ.
ಇತ್ತೀಚೆಗಷ್ಟೆ ಇಡೀ ಚಿತ್ರತಂಡ ಜೋರ್ಡನ್ಗೆ ಹೋಗಿದ್ದು ಅಲ್ಲಿ ಅದ್ಧೂರಿ ಆಕ್ಷನ್ ಮತ್ತು ಚೇಸ್ ದೃಶ್ಯಗಳ ಚಿತ್ರೀಕರಣವನ್ನು ಮಾಡಿದೆ. ಈ ವೇಳೆ ಜೋರ್ಡನ್ ಎಸ್ಎಫ್ಎಕ್ಸ್ ಹೆಸರಿನ ಖ್ಯಾತನಾಮ ತಂಡದ ನೆರವನ್ನು ಚಿತ್ರತಂಡ ಪಡೆದುಕೊಂಡಿದೆ. ಜೋರ್ಡನ್ ಎಸ್ಎಫ್ಎಕ್ಸ್ ತಂಡವು ಸಿನಿಮಾ ತಂತ್ರಜ್ಞರ ತಂಡವಾಗಿದ್ದು, ವಿಶೇಷವಾಗಿ ಸಿನಿಮಾಗಳ ಆಕ್ಷನ್ ದೃಶ್ಯ, ವಿಎಫ್ಎಕ್ಸ್ ಮತ್ತು ಸೌಂಡ್ ಡಿಸೈನ್ಗಳಲ್ಲಿ ಪರಿಣಿತಿ ಪಡೆದುಕೊಂಡಿದೆ.
ಆಸ್ಕರ್ ವಿಜೇತ ‘ಡ್ಯೂನ್’, ‘ಜಾನ್ ವಿಕ್’ ಇನ್ನೂ ಹತ್ತು ಹಲವು ಅದ್ಧೂರಿ ಹಾಲಿವುಡ್ ಆಕ್ಷನ್ ಸಿನಿಮಾಗಳಿಗೆ ಜೋರ್ಡನ್ ಎಸ್ಎಫ್ಎಕ್ಸ್ ತಂಡ ಕೆಲಸ ಮಾಡಿದೆ. ಇದೀಗ ಇದೇ ತಂಡ ಜೂ ಎನ್ಟಿಆರ್-ನೀಲ್ ಸಿನಿಮಾಕ್ಕೂ ಕೆಲಸ ಮಾಡಿದೆ. ಪ್ರಶಾಂತ್ ನೀಲ್ ಚಿತ್ರೀಕರಣ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಸಾಮಾನ್ಯವಾದ ಸಿನಿಮಾ ಅಲ್ಲ, ಭಾರಿ ದೊಡ್ಡ ಆಕ್ಷನ್ ಸಿನಿಮಾ ಎಂಬುದಕ್ಕೆ ಆ ಚಿತ್ರ ಸಾಕ್ಷಿಯಾಗಿದೆ.
ಜೂ ಎನ್ಟಿಆರ್ ಹಾಗೂ ನೀಲ್ ಅವರ ಸಿನಿಮಾಕ್ಕೆ ರುಕ್ಮಿಣಿ ವಸಂತ್ ನಾಯಕಿ. ಸಿನಿಮಾನಲ್ಲಿ ಮಲಯಾಳಂನ ಟೊವಿನೊ ಥಾಮಸ್ ಅವರೂ ಸಹ ನಟಿಸಬೇಕಿತ್ತು. ಆದರೆ ಅವರು ಅವಕಾಶ ಒಲ್ಲೆ ಎಂದಿದ್ದು, ಅವರ ಜಾಗಕ್ಕೆ ಯಾವ ನಟ ಆಯ್ಕೆ ಆಗಲಿದ್ದಾರೆ ಎಂಬ ಕುತೂಹಲ ಇದೆ. ಸಿನಿಮಾದ ಚಿತ್ರೀಕರಣ ತುಸು ನಿಧಾನ ಗತಿಯಲ್ಲಿಯೇ ಸಾಗಿದೆ. ಸಿನಿಮಾವನ್ನು ಕರ್ನಾಟಕ, ಹೈದರಾಬಾದ್, ಜೋರ್ಡನ್ ಇನ್ನೂ ಕೆಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.