ಚಿಯಾ, ಕಲ್ಲಂಗಡಿ ಬೆನ್ನಲ್ಲೇ ಕರಬೂಜಕ್ಕೂ ತಟ್ಟಿದ ಯುದ್ಧದ ಬಿಸಿ: ದರ ಕುಸಿತ, ಹೊಲದಲ್ಲೇ ಕೊಳೆಯುತ್ತಿರುವ ಹಣ್ಣು
ಬೀದರ್, ಏಪ್ರಿಲ್ 01: ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಸದ್ಯ ಕರಬೂಜ ಹಣ್ಣು (muskmelon) ಬೆಳೆಗಾರರಿಗೂ ತಟ್ಟಿದೆ. ಹೀಗಾಗಿ ಏಕಾಏಕಿ ಕರಬೂಜ ಹಣ್ಣಿನ ದರ ಕುಸಿತವಾಗಿದ್ದು, ರೈತರಿಗೆ ಸಂಕಷ್ಟ ತಂದೊಡ್ಡಿದೆ. ಉತ್ತಮ ಗುಣಮಟ್ಟದ ಕರಬೂಜ ಹಣ್ಣು ಮಾರಾಟವಾಗದೇ ಹೊಲದಲ್ಲಿಯೇ ಕೊಳೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಕರಬೂಜ ಹಣ್ಣು ಮಾರಾಟದಲ್ಲಿ ಭಾರೀ ಕುಸಿತ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ಬೀದರ್ ಜಿಲ್ಲೆಯ ಕರಬೂಜ ಹಣ್ಣು ಬೆಳೆಗಾರರಿಗೆ ತಟ್ಟಿದೆ. ಯುದ್ಧದ ಪರಿಣಾಮವಾಗಿ ರಫ್ತು ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ಕರಬೂಜ…