ತನ್ನದೇ ಟೆಂಪೋದಲ್ಲಿ ಶವವಾಗಿ ಪತ್ತೆಯಾದ ಮಾಲೀಕ: ಸಾವಿನ ಸುತ್ತ ಅನುಮಾನದ ಹುತ್ತ
ಚಿಕ್ಕಬಳ್ಳಾಪುರ, ಏಪ್ರಿಲ್ 01: ಅಶೋಕ್ ಲೇಲ್ಯಾಂಡ್ ಮಿನಿ ಟೆಂಪೋ ಮಾಲೀಕ ಕಂ ಚಾಲಕನೋರ್ವ ತನ್ನ ಟೆಂಪೋವನ್ನು ನಂಬಿಕೊಂಡು ಬಾಡಿಗೆಗೆ ಹೋಗುವುದರ ಮೂಲಕ ಜೀವನ ಸಾಗಿಸುತ್ತಿದ್ದ. ಬಾಡಿಗೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಟೆಂಪೋದಲ್ಲೇ ಶವವಾಗಿ ಪತ್ತೆಯಾಗಿದ್ದು (death), ಕೊಲೆ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಗ್ರಾಮದಲ್ಲಿ ಘಟನೆ ನಡೆದಿದೆ. ನಡೆದಿದ್ದೇನು? ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುರುಬರಕುಂಟೆಯ ಕಾಲೋನಿ ನಿವಾಸಿ 48 ವರ್ಷದ ಸುಬ್ರಮಣಿ, ಶನಿವಾರ…