ಹೊಸ ವರ್ಷದ ವೇಳೆಯೂ ಮದ್ಯಕ್ಕಿಲ್ಲ ಡಿಮ್ಯಾಂಡ್: ದಾಖಲೆ ಮಟ್ಟದಲ್ಲಿ ಬೇಡಿಕೆ ಕುಸಿತ – Kannada News | Chikkaballapur Records a Fifty Eight Percent Drop in Alcohol Sales During New Year Celebrations
ಚಿಕ್ಕಬಳ್ಳಾಪುರ, ಡಿಸೆಂಬರ್ 31: ಹೊಸ ವರ್ಷದ ಪಾರ್ಟಿ ಅಂದ್ರೆ ಅಲ್ಲಿ ಮದ್ಯ ಇರಲೇ ಬೇಕು. ಎಣ್ಣೆ ಇಲ್ಲದಿದ್ರೆ ಅದೆಂತಾ ಪಾರ್ಟಿ ಗುರೂ ಎಂದು ಮೂಗು ಮುರಿಯೋರ ನಡುವೆಯೂ ಮದ್ಯದ ಬೇಡಿಕೆ ಕುಸಿದಿದೆ ಎಂಬುದನ್ನು ನೀವು ನಂಬಬೇಕಿದೆ. ನ್ಯೂ ಇಯರ್ ಸಂಭ್ರಮದ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿಯೇ ಮದ್ಯದ ಬೇಡಿಕೆ ಶೇ.58ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಕಳೆದ ವರ್ಷದ ಅಂಕಿ ಅಂಶಗಳಿಗೆ ಹೋಲಿಸದರೆ ಇದು ಭಾರಿ ಪ್ರಮಾಣದ ಇಳಿಕೆಯಾಗಿದೆ. ಹೌದು, 2024ರ ಡಿಸೆಂಬರ್ 31ಕ್ಕೆ ಹೋಲಿಸಿದರೆ ಈ ವರ್ಷ ಡಿಸೆಂಬರ್…