Headlines

nagaraj11081993

8ನೇ ವೇತನ ಆಯೋಗ; ಜನವರಿ 1ರಿಂದ ಯಾರಿಗೆಲ್ಲ ಸಂಬಳ ಹೆಚ್ಚಾಗಲಿದೆ? – Kannada News | 8th Pay Commission Who will get the maximum salary hike after 2026 January 1

ನವದೆಹಲಿ, ಡಿಸೆಂಬರ್ 30: ಇನ್ನೇನು ಹೊಸ ವರ್ಷದ (New Year 2026) ಆರಂಭಕ್ಕೆ ಒಂದೇ ದಿನ ಉಳಿದಿದೆ. 2026ರ ಆರಂಭದೊಂದಿಗೆ 8ನೇ ವೇತನ ಆಯೋಗವು (8th Pay Commission) ಜನವರಿ 1ರಿಂದ ಜಾರಿಗೆ ಬರಲಿದೆ ಎನ್ನಲಾಗಿದೆ. ಹೀಗಾಗಿ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ಸಿಪಿಸಿ, 7ನೇ ವೇತನ ಆಯೋಗದ ಸಿಂಧುತ್ವವು ಡಿಸೆಂಬರ್ 31ರಂದು ಮುಕ್ತಾಯಗೊಳ್ಳುತ್ತದೆ. ಜನವರಿ 1ರಿಂದ 8ನೇ ವೇತನ ಆಯೋಗದ ಇನ್ನೂ ಘೋಷಿಸದ ನಿಬಂಧನೆಗಳು ಜಾರಿಗೆ ಬರುತ್ತವೆ. ಈ ವರ್ಷದ…

Read More

ಹಿಂದಿ ಚಿತ್ರರಂಗಕ್ಕೆ ಹೊಸ ಡಾನ್ ಆಗ್ತಾರಾ ಹೃತಿಕ್ ರೋಷನ್? – Kannada News | Farhan Akhtar reportedly in talks with Hrithik Roshan for Don 3 after Ranveer Singh exit

ಈ ಮೊದಲು ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಅವರು ಡಾನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಆ ಬಳಿಕ ಡಾನ್ ಆಗುವ ಅವಕಾಶ ರಣವೀರ್ ಸಿಂಗ್ (Ranveer Singh) ಅವರಿಗೆ ಸಿಕ್ಕಿತ್ತು. ಆದರೆ ಅವರು ಡಾನ್ ಆಗಲು ಮನಸ್ಸು ಮಾಡುತ್ತಿಲ್ಲ. ಹಾಗಾಗಿ ಹೃತಿಕ್ ರೋಷನ್ (Hrithik Roshan) ಅವರು ಮುಂದಿನ ಡಾನ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ಹೃತಿಕ್ ರೋಷನ್ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಆದರೆ ‘ಡಾನ್ 3’ (Don 3) ಚಿತ್ರತಂಡದಿಂದಲೇ…

Read More

ಹೊಸ ವರ್ಷಕ್ಕೆ ಆನ್‌ಲೈನ್ ಆಹಾರ ವಿತರಕರಿಗೆ ಭರ್ಜರಿ ಬಿಸಿನೆಸ್ ನಿರೀಕ್ಷೆ, ಆದರೆ ಡೆಲಿವರಿ ಬಾಯ್ಸ್​​ಗೆ ಸಂಕಷ್ಟ! – Kannada News | Delivery Challenges in Bengaluru: High Traffic, Strict Timelines, and Low Pay Plague Riders

ಬೆಂಗಳೂರು, ಡಿ.30: ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಆನ್‌ಲೈನ್ ಆಹಾರ ವಿತರಣೆ  ಭರ್ಜರಿ ಬಿಸಿನೆಸ್ ನಡೆಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಆದರೆ, ಈ ಅವಧಿಯಲ್ಲಿ ಆಹಾರ ತಲುಪಿಸುವ ಡೆಲಿವರಿ ಬಾಯ್‌ಗಳ ಸಂಕಷ್ಟಗಳು ಹೆಚ್ಚಾಗುತ್ತಿವೆ. ವಿತರಣಾ ಕಂಪನಿಗಳು ಗ್ರಾಹಕರಿಗೆ ತ್ವರಿತ ವಿತರಣೆಯ ಭರವಸೆ ನೀಡುವುದರಿಂದ, ಡೆಲಿವರಿ ಬಾಯ್‌ಗಳು ಕಠಿಣ ಸಮಯ ಮಿತಿಯ ಒತ್ತಡಕ್ಕೆ ಸಿಲುಕಿದ್ದಾರೆ. ಇದೀಗ ಹೊಸ ವರ್ಷಕ್ಕೂ ಮುನ್ನವೇ ಹೆಚ್ಚು ಹೆಚ್ಚು ಫುಡ್​​​ ಆರ್ಡರ್ ಮಾಡಲು ಶುರುವಾಗಿದೆ.​​​​​​  ಬೆಂಗಳೂರಿನಲ್ಲಿ ವಿಪರೀತ ಸಂಚಾರ ದಟ್ಟಣೆ ಮತ್ತು ಹದಗೆಟ್ಟ ರಸ್ತೆಗಳಿಂದಾಗಿ…

Read More

ಮೋದಿ 2025ರ ಸುಧಾರಣೆಗಳು: GST, ಉದ್ಯೋಗ, ಶಿಕ್ಷಣ ಕ್ಷೇತ್ರದ ಪ್ರಮುಖ ಬದಲಾವಣೆಗಳು – Kannada News | PM Modi’s 2025 Vision: India’s Major Reforms in GST, Jobs & Education

2025ರ ವರ್ಷದಲ್ಲಿ ಭಾರತದಲ್ಲಿ ಬಹಳ ವ್ಯಾಪಕವಾದ ಮತ್ತು ದೊಡ್ಡದೊಡ್ಡ ಸುಧಾರಣೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೆಯೇ ತಮ್ಮ ಲಿಂಕ್ಡ್​ಇನ್​ನಲ್ಲಿ ಒಂದು ಬ್ಲಾಗ್ ಬರೆದಿದ್ದು, 2025ರಲ್ಲಿ ಸರ್ಕಾರ ಕೈಗೊಂಡ ವಿವಿಧ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತವು ಸುಧಾರಣೆ ಎಕ್ಸ್​ಪ್ರೆಸ್ ಗಾಡಿ ಹತ್ತಿದೆ. ಈ ದೇಶದ ಜನರೇ ಈ ಎಕ್ಸ್​ಪ್ರೆಸ್​ನ ಎಂಜಿನ್ ಎಂದು ಪ್ರಧಾನಿಗಳು ವ್ಯಾಖ್ಯಾನಿಸಿದ್ದಾರೆ. ಅವರು ಈ ವರ್ಷ ಜಾರಿಯಾದ ಕೆಲ ಸುಧಾರಣೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜಿಎಸ್​ಟಿ…

Read More

ವರ್ಷಗಳ ಕಾಲ ನೆನಪುಳಿವ ಸಿನಿಮಾ: ‘ಫಾದರ್’ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತು – Kannada News | Darling Krishna talks about his upcoming movie Father

ಡಾರ್ಲಿಂಗ್ ಕೃಷ್ಣ (Darling Krishna) ಕಳೆದ ಕೆಲ ವರ್ಷಗಳಿಂದ ಗಮನ ಸೆಳೆಯುವ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. ‘ಕೌಸಲ್ಯ ಸುಪ್ರಬಾ ರಾಮ’, ‘ಬ್ರಾಟ್’ ಇನ್ನೂ ಕೆಲ ಒಳ್ಳೆಯ ಸಿನಿಮಾಗಳನ್ನು ಡಾರ್ಲಿಂಗ್ ಕೃಷ್ಣ ಮಾಡುತ್ತಾ ಬರುತ್ತಿದ್ದಾರೆ. ಇದೀಗ ‘ಫಾದರ್’ ಹೆಸರಿನ ಭಿನ್ನ ರೀತಿಯ ಸಿನಿಮಾನಲ್ಲಿ ನಟಿಸಿದ್ದಾರೆ. ಪ್ರಕಾಶ್ ರೈ ಅವರು ಸಿನಿಮಾನಲ್ಲಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿರುವ ಡಾರ್ಲಿಂಗ್ ಕೃಷ್ಣ, ‘ಫಾದರ್’ ಸಿನಿಮಾ ಬಹಳ ಭಿನ್ನವಾದ ಆದರೆ ಮನಸ್ಸಿಗೆ ತಾಗುವ ಸಿನಿಮಾ, ಬಹಳ ವರ್ಷಗಳ ಕಾಲ ಈ…

Read More

Bhagavad Gita: ಭಗವದ್ಗೀತೆಯನ್ನು ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ? – Kannada News | Bhagavad Gita: Do you know how many benefits there are from reading the Bhagavad Gita?

ಶ್ರೀಮದ್ ಭಗವದ್ಗೀತೆ (Bhagavad Gita) ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿದೆ. 18 ಅಧ್ಯಾಯಗಳು ಮತ್ತು 700 ಶ್ಲೋಕಗಳನ್ನು ಒಳಗೊಂಡಿರುವ ಭಗವದ್ಗೀತೆ  ಅಪಾರ ಮಹತ್ವವನ್ನು ಹೊಂದಿದೆ. ಈ ಪ್ರತಿ ಅಧ್ಯಾಯಗಳು ಆತ್ಮ, ಪರಮಾತ್ಮ, ಭಕ್ತಿ, ಕರ್ಮ ಮತ್ತು ಜೀವನದ ಸಾರವನ್ನು ಒಳಗೊಂಡಿದೆ. ಇಂತಹ ಪವಿತ್ರ ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ ನಮ್ಮ ಜೀವನಕ್ಕೆ ಮಾರ್ಗಸೂಚಿಯಿದ್ದಂತೆ. ಹೌದು ಪ್ರತಿನಿತ್ಯ ಗೀತೆಯನ್ನು ಓದುವ ಮೂಲಕ ಯಶಸ್ವಿ, ಸಂತೋಷದಾಯಕ ಜೀವನವನ್ನು ಹೇಗೆ ನಡೆಸುವುದು ಎಂಬುದನ್ನು ಕಲಿಯುವುದರ ಜೊತೆಗೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಈ…

Read More

ಮೋಹನ್​ಲಾಲ್ ತಾಯಿ ಶಾಂತಕುಮಾರಿ ನಿಧನ; ಅಂತಿಮ ನಮನ ಸಲ್ಲಿಸಿದ ಮಮ್ಮುಟಿ – Kannada News | Mohanlal Mother Shanthakumari dies due to illness at the age of 90 in Ernakulam

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್​ಲಾಲ್ (Mohanlal) ಅವರಿಗೆ ಈ ವರ್ಷದ ಕೊನೆಯಲ್ಲಿ ನೋವಿನ ಸಂದರ್ಭ ಎದುರಾಗಿದೆ. ಅವರ ತಾಯಿ ಶಾಂತಕುಮಾರಿ ನಿಧನರಾಗಿದ್ದಾರೆ. ಮಂಗಳವಾರ (ಡಿಸೆಂಬರ್ 30) ಶಾಂತಕುಮಾರಿ (Shanthakumari) ಅವರು ಎರ್ನಾಕಲಮ್ ನಿವಾಸದಲ್ಲಿ ಕೊನೆಯುಸಿರು ಎಳೆದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಶಾಂತಕುಮಾರಿ ಅವರು ನಿಧನರಾಗುವ ವೇಳೆಗೆ ಮೋಹನ್​​ಲಾಲ್ ಅವರು ಮನೆಯಲ್ಲಿ ಇರಲಿಲ್ಲ. ಚಿತ್ರೀಕರಣದ ಸಲುವಾಗಿ ಅವರು ಹೊರಗಡೆ ಹೋಗಿದ್ದರು. ತಾಯಿಯ ನಿಧನದ (Mohanlal Mother Death) ಸುದ್ದಿ ತಿಳಿದು ಕೂಡಲೇ ಮನೆಗೆ ವಾಪಸ್ಸಾದರು. ಶಾಂತಕುಮಾರಿ…

Read More

WPL 2026: ಆರ್​ಸಿಬಿಗೆ ಆಘಾತ; 2026 ರ ಡಬ್ಲ್ಯುಪಿಎಲ್​ನಿಂದ ಹಿಂದೆ ಸರಿದ ಎಲ್ಲಿಸ್ ಪೆರ್ರಿ – Kannada News | Ellyse Perry Exits WPL 2026: RCB Faces Major Setback Before Season Start

ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್ (Women’s Premier League) ಮುಂದಿನ ವರ್ಷ ಅಂದರೆ 2026 ರ ಜನವರಿ 9 ರಿಂದ ಆರಂಭವಾಗಲಿದೆ. ಈ ಆವೃತ್ತಿಯ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಡುವೆ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಚಾಂಪಿಯನ್ ಆಟಗಾರ್ತಿ ಆಸ್ಟ್ರೇಲಿಯಾದ ಸ್ಟಾರ್ ಆಲ್​ರೌಂಡರ್ ಎಲ್ಲಿಸ್ ಪೆರ್ರಿ (Ellyse Perry) ಮುಂದಿನ ಆವೃತ್ತಿಯ ಡಬ್ಲ್ಯುಪಿಎಲ್​ನಿಂದ ಹಿಂದೆ…

Read More

ವಿಜಯಪುರ PSI ಜೊತೆಗೆ ವಿವಾಹಿತ ಮಹಿಳೆ ಪರಾರಿ ಕೇಸ್​ಗೆ ಟ್ವಿಸ್ಟ್: ಸತ್ಯ ಬಿಚ್ಚಿಟ್ಟ ಸಂತ್ರಸ್ತೆ – Kannada News | Vijayapura Police Officer Illicit Affair Case: Victim Clarifies Rumours

ವಿಜಯಪುರ, ಡಿಸೆಂಬರ್​​ 30: ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದವಳ ಜೊತೆ ಪೊಲೀಸ್ ಅಧಿಕಾರಿ ಸಂಬಂಧ ಆರೋಪ ವಿಚಾರವಾಗಿ ಸ್ವತಃ ಮಹಿಳೆಯೇ ಟವಿ9 ಕನ್ನಡದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಭೀಮಾಶಂಕರ ಪತ್ನಿ ಅನುರಾಧಾ ತನಗಾದ ಸಮಸ್ಯೆಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದು, ಗಂಡನ ಕಿರುಕುಳದಿಂದ ನಾನು ಆತನಿಂದ ದೂರವಾಗಿದ್ದೇನೆ. ಕುಡಿದು ಬಂದು ಹಲ್ಲೆ ಜೊತೆಗೆ ಕೊಲೆಗೂ ಆತ ಯತ್ನಿಸಿದ್ದ. ಹೀಗಾಗಿ ಗಂಡನಿಂದ ದೂರವಾಗಿ 4 ವರ್ಷಗಳು ಕಳೆದಿವೆ ಎಂದು ತಿಳಿಸಿದ್ದಾರೆ. ಊರಲ್ಲಿದ್ದ ಜಮೀನು ಮಾರಿ ಬೆಂಗಳೂರಿನಲ್ಲಿ ನಿವೇಶನ ಖರೀದಿ…

Read More

ಬೆಂಗಳೂರು: ಬಯೋಕಾನ್ ಕಂಪನಿಯ 3ನೇ ಮಹಡಿಯಿಂದ ಜಿಗಿದು ಉದ್ಯೋಗಿ ಆತ್ಮಹತ್ಯೆ – Kannada News | Bengaluru: Biocon Employee Dies by Suicide After Jumping From Third Floor

ಬೆಂಗಳೂರು, ಡಿಸೆಂಬರ್​ 30: ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದಲ್ಲಿರುವ ಬಯೋಕಾನ್ ಕಂಪನಿಯ (biocon company) ಉದ್ಯೋಗಿ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಅನಂತ್ ಭಟ್(35) ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಸದ್ಯ ಅನಂತ್ ಮೃತದೇಹವನ್ನು ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅನಾರೋಗ್ಯ: ಮನನೊಂದು ಆಟೋ ಡ್ರೈವರ್ ಆತ್ಮಹತ್ಯೆ ಅನಾರೋಗ್ಯದ ಹಿನ್ನೆಲೆ ಮನನೊಂದು ಆಟೋ…

Read More