Headlines

nagaraj11081993

ಬ್ಲೈಂಡ್ ಸ್ಪಾಟ್, ಎಡ ತಿರುವಿನಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ಟ್ರಕ್, ಹೊತ್ತಿಕೊಂಡ ಬೆಂಕಿ, ಒದ್ದಾಡಿದ ಬೈಕ್ ಸವಾರ

ಅಗಲವಾದ ರಸ್ತೆಯಲ್ಲಿ ಎಡ ತಿರುವು ಪಡೆಯುವಾಗ ಟ್ರಕ್ ಒಂದು ಬೈಕ್ ಸವಾರನ ಮೇಲೆ ಹರಿದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ, ಎಡ ತಿರುವು ಪಡೆಯುವಾಗ ಬೈಕ್ ಸವಾರ ಕೂಡ ಏಕಾ ಏಕಿ ಟ್ರಕ್​ನ ಎಡ ಬದಿಗೆ ಬಂದ ಪರಿಣಾಮ ಅದು ಬ್ಲೈಂಡ್​ಸ್ಪಾಟ್ ಆಗಿದ್ದ ಕಾರಣ ಟ್ರಕ್ ಚಾಲಕನಿಗೆ ಕಾಣದೆ ಬೈಕ್ ಮೇಲೆ ಹರಿಸಿದ್ದಾನೆ. ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಆ ಬೆಂಕಿಯಲ್ಲಿ ಬೈಕ್ ಸವಾರ ಸಿಲುಕಿ ಒದ್ದಾಡಿರುವ ವಿಡಿಯೋ…

Read More

ಡಾ. ಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮದಿನೋತ್ಸವ: ಬೆಳ್ಳಂ ಬೆಳಿಗ್ಗೆ ಮಠಕ್ಕೆ ಭಕ್ತರ ದಂಡು

ತುಮಕೂರು, ಏಪ್ರಿಲ್​​ 01: ನಡೆದಾಡುವ ದೇವರು ಎಂದು ಪ್ರಸಿದ್ಧರಾದ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವವನ್ನು ಇಂದು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಗದ್ದುಗೆಯನ್ನು ಫಲಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಬೆಳಗಿನ ಜಾವ 5 ಗಂಟೆಯಿಂದಲೇ ಭಕ್ತಾದಿಗಳು ಆಗಮಿಸಿ ಗದ್ದುಗೆಯ ದರ್ಶನ ಪಡೆಯುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಮಠದ ಆವರಣದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಎಸ್ಎಸ್ಎಲ್‌ಸಿ ಪರೀಕ್ಷೆಗಳು ನಡೆಯುತ್ತಿರುವ ಕಾರಣ ಕಾರ್ಯಕ್ರಮವನ್ನು…

Read More

ಈ ಕೂಪರ್ ಕೊನೊಲಿ ಯಾರು ಗೊತ್ತಾ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಕೂಪರ್ ಕೊನೊಲಿ (Cooper Connolly) ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅದು ಕೂಡ ಅಜೇಯ ಇನಿಂಗ್ಸ್​ನೊಂದಿಗೆ ಪಂಜಾಬ್ ಕಿಂಗ್ಸ್​ ತಂಡಕ್ಕೆ ಗೆಲುವು ತಂದು ಕೊಡುವ ಮೂಲಕ. ಇದರ ಬೆನ್ನಲ್ಲೇ ಯಾರು ಈ ಕೂಪರ್ ಕೊನೊಲಿ ಎಂಬ ಗೂಗಲ್ ಹುಡುಕಾಟ ಶುರುವಾಗಿದೆ. ಅಷ್ಟಕ್ಕೂ ಯಾರು ಈ ಕೊನೊಲಿ? ಕೂಪರ್ ಕೊನೊಲಿ ಆಸ್ಟ್ರೇಲಿಯಾದ ಭರವಸೆಯ ಯುವ ಆಲ್​ರೌಂಡರ್. ಸ್ಪಿನ್ ಬೌಲಿಂಗ್ ಹಾಗೂ ಅತ್ಯುತ್ತಮ ಬ್ಯಾಟಿಂಗ್ ಮಾಡಬಲ್ಲ 22…

Read More

Bengaluru Air Quality: ರಾಜ್ಯದ ಹಲವೆಡೆ ವಾಯು ಗುಣಮಟ್ಟದಲ್ಲಿ ಸುಧಾರಣೆ

ಬೆಂಗಳೂರು, ಏಪ್ರಿಲ್ 01: ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ಬಳ್ಳಾರಿ, ಮಂಗಳೂರಿನ ವಾಯುಗುಣಮಟ್ಟವೂ (Bengaluru Air Quality) ಹದಗೆಟ್ಟಿತ್ತು. ಆದರೆ ಇಂದು ಸ್ವಲ್ಪ ಮಟ್ಟಿಗೆ ಏರ್ ಕ್ವಾಲಿಟಿ ಸುಧಾರಿಸಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಆದರೂ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 133ಕ್ಕೆ ತಲುಪಿದೆ. ಬೆಂಗಳೂರಿನ…

Read More

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಕೊನೆ ಆಗುತ್ತಿದೆ ಮಾಯಾ ಪಾತ್ರ?

ಜೀ ಕನ್ನಡದ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಮಾಟ-ಮಂತ್ರದ ಕಥೆಯನ್ನು ಹೊಂದಿರುವ ಈ ಚಿತ್ರವು ಈಗ ಸಾಕಷ್ಟು ತಿರುವುಗಳನ್ನು ಪಡೆದು ಸಾಗುತ್ತಿರುವುದು ಗೊತ್ತೇ ಇದೆ. ಹೀಗಿರುವಾಗಲೇ ಮಾಯಾ ಪಾತ್ರವು ಕೊನೆ ಆಯಿತೇ ಎಂಬ ಪ್ರಶ್ನೆಯೂ ಮೂಡುವಂತೆ ಆಗಿದೆ. ಎಪಿಸೋಡ್​​ ಅಲ್ಲಿ ನಡೆದ ಘಟನೆಗಳು ಆ ರೀತಿಯ ಅನುಮಾನಗಳನ್ನು ಹುಟ್ಟುಹಾಕಿತು. ಆ ಬಗ್ಗೆ ಇಂದು ನಾವು ಹೇಳುತ್ತಿದ್ದೇವೆ. ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಾಳವಿಕಾ ತುಂಬಾನೇ ಕೆಟ್ಟವಳು. ಅವಳು ಮನೆಯಲ್ಲಿ ಹಿರಿಯವಳು ಮತ್ತು ಎಲ್ಲರ…

Read More

ದಾವಣಗೆರೆ ಬೈ ಎಲೆಕ್ಷನ್​​: ಮುಸ್ಲಿಂ ಸಮುದಾಯದ ಆಕ್ರೋಶವೇ ಕಾಂಗ್ರೆಸ್​​ಗೀಗ ಟೆನ್ಷನ್​!

ದಾವಣಗೆರೆ, ಏಪ್ರಿಲ್ 01: ಉಪ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪಕ್ಷಗಳ ಪ್ರಚಾರವೂ ಭರದಿಂದ ಸಾಗಿದೆ. ಆದರೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿ ಆಡಳಿತಾರೂಢ ಕಾಂಗ್ರೆಸ್​​ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಅಸಮಾಧಾನವೇ ಈಗ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ. ಸಮುದಾಯಕ್ಕೆ ಟಿಕೆಟ್​​ ಕೈ ತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿದ್ದ ಕೆಲ ನಾಯಕರನ್ನು ಸ್ವತಃ ಸಿಎಂ ಮತ್ತು ಡಿಸಿಎಂ ಅವರೇ ಖುದ್ದು ಅಖಾಡಕ್ಕಿಳಿದು ಸಮಾಧಾನಪಡಿಸಿದ್ದರೂ, ಕೆಲ ಮುಖಂಡರ ಆಕ್ರೋಶದ ಕಿಚ್ಚು ಮಾತ್ರ ಇನ್ನೂ ಆರಿಲ್ಲ. ಹೀಗಾಗಿ ಮುಸ್ಲಿಂ ಮುಖಂಡರ ಮನೆಗಳಿಗೆ…

Read More

Black Cat omen: ಶುಭ ಕಾರ್ಯಗಳಿಗೆ ಹೊರಟಾಗ ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅಶುಭವೇ?

ಕಪ್ಪು ಬಣ್ಣವನ್ನು ಶನಿಯ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಇದು ನಿಧಾನಗತಿ, ಅಜ್ಞಾನ ಮತ್ತು ಅಂಧಕಾರವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಯಾವುದೇ ಬೆಕ್ಕು ದಾರಿಗೆ ಅಡ್ಡ ಬಂದರೆ, ಎಡಕ್ಕೆ ಹೋಗಲಿ ಅಥವಾ ಬಲಕ್ಕೆ ಹೋಗಲಿ, ನಮ್ಮ ಹಿರಿಯರು ವಾಹನವನ್ನು ನಿಲ್ಲಿಸಿ ಸ್ವಲ್ಪ ಸಮಯದ ನಂತರ ಮುಂದೆ ಸಾಗಲು ಸೂಚಿಸುತ್ತಾರೆ. ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅದು ಅದೃಷ್ಟವೋ ದುರದೃಷ್ಟವೋ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ…

Read More

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯ ಸಾಧ್ಯತೆ!

ಬೆಂಗಳೂರು, ಏಪ್ರಿಲ್ 01: ಹಲವು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾರ್ಭಟ  (Weather Forecast) ಕಾಣಸಿಗುತ್ತಿದೆ. ಅಂತೆಯೇ ಇಂದೂ ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​? ​ ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು…

Read More

ಕ್ರೈಮಿಯಾದಲ್ಲಿ ಬಂಡೆಗೆ ಅಪ್ಪಳಿಸಿದ ರಷ್ಯಾದ ಮಿಲಿಟರಿ ವಿಮಾನ, 29 ಮಂದಿ ಸಾವು

ಮಾಸ್ಕೋ, ಏಪ್ರಿಲ್ 1: ರಷ್ಯಾ(Russia)ದ ಮಿಲಿಟರಿ ಸಾರಿಗೆ ವಿಮಾನವು ಕ್ರೈಮಿಯಾದಲ್ಲಿ ಬಂಡೆಗೆ ಅಪ್ಪಳಿಸಿದೆ, ಅದರಲ್ಲಿದ್ದ ಎಲ್ಲಾ 29 ಜನರು ಸಾವನ್ನಪ್ಪಿದ್ದಾರೆ. ಸಂಪರ್ಕ ಕಳೆದುಕೊಂಡಿದ್ದ ಆನ್ -26 ವಿಮಾನವು 2014 ರಲ್ಲಿ ರಷ್ಯಾ ಉಕ್ರೇನ್‌ನಿಂದ ಸ್ವಾಧೀನಪಡಿಸಿಕೊಂಡ ಕಪ್ಪು ಸಮುದ್ರ ಬಳಿಯ ದ್ವೀಪದಲ್ಲಿ ಪತನಗೊಂಡಿದೆ. ರಕ್ಷಣಾ ಸಚಿವಾಲಯವು 23 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ. ಯಾರೂ ಬದುಕುಳಿದ ಬಗ್ಗೆ ವರದಿಯಾಗಿಲ್ಲ. ತಾಂತ್ರಿಕ ಸಮಸ್ಯೆಗಳು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ ಎಂದು ಆರ್‌ಐಎ ಸುದ್ದಿ…

Read More

‘ಧುರಂಧರ್ 2’ ಬಳಿಕ ಬರ್ತಿದೆ ಏಳೂವರೆ ಗಂಟೆ ಸಿನಿಮಾ; ಎರಡು ಇಂಟರ್​​ವಲ್

‘ಧುರಂಧರ್’ (Dhurandhar) ಸಿನಿಮಾದ ಅವಧಿ 3 ಗಂಟೆ 34 ನಿಮಿಷ ಇತ್ತು. ಅದೇ ರೀತಿ, ‘ಧುರಂಧರ್ 2’ ಸಿನಿಮಾ 3 ಗಂಟೆ 49 ನಿಮಿಷ ಇತ್ತು. ಇಷ್ಟು ದೀರ್ಘ ಅವಧಿ ಇದ್ದರೂ ಸಿನಿಮಾ ಯಶಸ್ಸು ಕಂಡಿತ್ತು. ಇದಾದ ಬೆನ್ನಲ್ಲೇ ಏಳು ಗಂಟೆ 30 ನಿಮಿಷಗಳ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ! ಇದು ಅಚ್ಚರಿ ಎನಿಸಿದರೂ ನಿಜ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ಸೆನ್ಸಾರ್ ಪ್ರಮಾಣಪತ್ರ ವೈರಲ್ ಆಗಿದೆ. ಈ ಮೊದಲು ‘ಬಾಹುಬಲಿ’ ಹಾಗೂ ‘ಬಾಹುಬಲಿ 2’…

Read More