All posts by nagaraj11081993

ನನ್ನೊಂದಿಗೆ ಫೋಟೋ ಬೇಕೆಂದು ಮೆಲೋನಿ ಬೇಡಿಕೊಂಡಿದ್ದರು; ಟ್ರಂಪ್ ಹೇಳಿಕೆಗೆ ಸಿಡಿದೆದ್ದ ಇಟಲಿ ಪ್ರಧಾನಿ – Kannada News | Donald Trump Claims Meloni Begged For A Photo with him At G7 Summit Italian PM fights back

ನವದೆಹಲಿ, ಜೂನ್ 19: ಜೂನ್ 15ರಿಂದ 17ರವರೆಗೆ ಫ್ರಾನ್ಸ್‌ನ ಎವಿಯಾನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit) ಅಮೆರಿಕ ಮತ್ತು ಇಟಲಿಯ ನಾಯಕರು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ಇಟಲಿಯ ‘La7 ಟಿವಿ’ ವಾಹಿನಿಗೆ ನೀಡಿದ ವಿಶೇಷ ಫೋನ್ ಸಂದರ್ಶನದಲ್ಲಿ ಟ್ರಂಪ್ (Donald Trump) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಮೆಲೋನಿ ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಅಕ್ಷರಶಃ ಬೇಡಿಕೊಂಡರು. ಆಕೆಗೆ ನನ್ನೊಂದಿಗೆ ಫೋಟೋ ಬೇಕೇ ಬೇಕಿತ್ತು. ನನಗೇನೂ ಆಕೆಯೊಂದಿಗೆ ಫೋಟೋ ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಆದರೆ, ಆಕೆಯನ್ನು ನೋಡಿ ಪಾಪ ಅನಿಸಿದ್ದರಿಂದ ನಾನು ಫೋಟೋ ಕ್ಲಿಕ್ಕಿಸಿಕೊಳ್ಳಲು ಒಪ್ಪಿಕೊಂಡೆ” ಎಂದಿದ್ದರು.

“ಮೆಲೋನಿ ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಬೇಡಿಕೊಂಡಿದ್ದರು” ಎಂದು ಟ್ರಂಪ್ ನೀಡಿರುವ ಹೇಳಿಕೆಯನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತೀವ್ರವಾಗಿ ಖಂಡಿಸಿದ್ದು, “ಇದು ಸಂಪೂರ್ಣ ಸುಳ್ಳು, ಇಟಲಿ ಯಾರ ಬಳಿಯೂ ಬೇಡುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ. ಈ ವಿವಾದದ ಹಿನ್ನೆಲೆಯಲ್ಲಿ ಇಟಲಿಯ ಉಪಪ್ರಧಾನಿ ತಮ್ಮ ಅಮೆರಿಕ ಪ್ರವಾಸವನ್ನೇ ರದ್ದುಗೊಳಿಸಿದ್ದಾರೆ.

ಇತ್ತೀಚೆಗೆ ಈ ರೀತಿ ಅಸಂಬದ್ಧವಾಗಿ ಹೇಳಿಕೆ ನೀಡುತ್ತಾ ವಿವಾದಕ್ಕೀಡಾಗುತ್ತಿರುವ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. “ನಾನು ಮೆಲೋನಿ ಜೊತೆ ಫೋಟೋ ತೆಗೆಸಿಕೊಂಡು, ಮಾತನಾಡಿದ್ದಕ್ಕೇ ಆಕೆ ಧನ್ಯಳಾಗಿರಬೇಕು. ಆಕೆಯೊಂದಿಗೆ ಮಾತನಾಡುವ ಯಾವುದೇ ಅಗತ್ಯ ನನಗಿರಲಿಲ್ಲ” ಎಂದು ಟ್ರಂಪ್ ಲೇವಡಿ ಮಾಡಿದ್ದರು.

ಇದನ್ನೂ ಓದಿ: ಭಾರತದ ಮೇಲೆ ದಾಳಿಯಾದರೆ ಅಮೆರಿಕ ರಕ್ಷಣೆಗೆ ಧಾವಿಸುತ್ತದೆ; ಮೋದಿಗೆ ಟ್ರಂಪ್ ಭರವಸೆ

ಈ ಹೇಳಿಕೆ ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಟ್ರಂಪ್ ಅವರ ಈ ಹೇಳಿಕೆಗೆ ಇಟಲಿ ಪ್ರಧಾನಿ ಮೆಲೋನಿ ಕೂಡ ತಿರುಗೇಟು ನೀಡಿದ್ದಾರೆ. “ಇಟಲಿ ಎಂದಿಗೂ ಯಾರ ಬಳಿಯೂ ಬೇಡುವುದಿಲ್ಲ” ಎಂದು ಟ್ರಂಪ್‌ಗೆ ಮೆಲೋನಿ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ಟ್ರಂಪ್ ಅವರ ಈ ಅಹಂಕಾರದ ಹೇಳಿಕೆಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಸಂಪೂರ್ಣ ಕಟ್ಟುಕಥೆ. ಅಮೆರಿಕ ಅಧ್ಯಕ್ಷರು ತಮ್ಮದೇ ಮಿತ್ರರಾಷ್ಟ್ರಗಳ ನಾಯಕರೊಂದಿಗೆ ಈ ರೀತಿ ನಡೆದುಕೊಳ್ಳುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಅವರು ತಮ್ಮ ಮಿತ್ರರನ್ನು ಅವಮಾನಿಸುತ್ತಿರುವುದು ಇದೇ ಮೊದಲೇನಲ್ಲ. ಪಾಶ್ಚಿಮಾತ್ಯ ದೇಶಗಳ ಮತ್ತು ಅಮೆರಿಕದ ನಿಜವಾದ ಶತ್ರುಗಳ ಮುಂದೆ ಮಣಿಯುವ ಟ್ರಂಪ್ ತನ್ನ ಮಿತ್ರರ ಮುಂದೆ ಈ ರೀತಿ ದರ್ಪ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿ. ಟ್ರಂಪ್ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ನಾನು ಮತ್ತು ಇಟಲಿ ದೇಶ ಎಂದಿಗೂ ಯಾರ ಬಳಿಯೂ ಬೇಡುವುದಿಲ್ಲ” ಎಂದು ಮೆಲೋನಿ ಸಿಡಿದೆದ್ದಿದ್ದಾರೆ.

ಇದನ್ನೂ ಓದಿ: ಸಿಗರೇಟ್ ಬಿಟ್ಟ ಮೆಲೋನಿ, ವಾಚ್ ಮರೆತ ಮ್ಯಾಕ್ರನ್, ಮತ್ತೆ ಮೆಲೋಡಿ ಮೋಡಿ; ಜಿ7 ಶೃಂಗಸಭೆಯ ವೈರಲ್ ಕ್ಷಣಗಳಿವು

ಇನ್ನು, ಟ್ರಂಪ್ ಅವರ ಈ ಹೇಳಿಕೆಯನ್ನು “ಇಡೀ ಇಟಲಿ ದೇಶಕ್ಕೆ ಮಾಡಿದ ಅಪಮಾನ” ಎಂದು ಟೀಕಿಸಿರುವ ಇಟಲಿಯ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಆಂಟೋನಿಯೊ ತಾಜಾನಿ ಟ್ರಂಪ್ ವರ್ತನೆಗೆ ಪ್ರತಿರೋಧವಾಗಿ ಜೂನ್ 21 ಮತ್ತು 22ರಂದು ನಿಗದಿಯಾಗಿದ್ದ ತಮ್ಮ ಅಧಿಕೃತ ಅಮೆರಿಕ ಪ್ರವಾಸವನ್ನು ತಕ್ಷಣವೇ ರದ್ದುಗೊಳಿಸಿದ್ದಾರೆ.

ಅಂದಹಾಗೆ, ಒಂದಾನೊಂದು ಕಾಲದಲ್ಲಿ ಜಾರ್ಜಿಯಾ ಮೆಲೋನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಾಗಿದ್ದರು. ಅಷ್ಟೇ ಅಲ್ಲದೆ, 2025ರಲ್ಲಿ ನಡೆದ ಟ್ರಂಪ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಏಕೈಕ ಯುರೋಪಿಯನ್ ನಾಯಕಿ ಇವರಾಗಿದ್ದರು. ಆದರೆ, ಇತ್ತೀಚೆಗೆ ಪೋಪ್ ಲಿಯೋ ವಿರುದ್ಧ ಟ್ರಂಪ್ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಮತ್ತು ಇರಾನ್ ಯುದ್ಧದ ವಿಷಯದಲ್ಲಿ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಪ್ರಸ್ತುತ ಜಿ7 ಶೃಂಗಸಭೆಯ ಈ ಇಬ್ಬರು ನಾಯಕರ ನಡುವಿನ ಬಿರುಕು ಮತ್ತಷ್ಟು ದೊಡ್ಡದಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Jio Intelligence: ಜಿಯೋದಿಂದ ಡಾಟಾ ಕ್ರಾಂತಿಯಾದಂತೆ ರಿಲಯನ್ಸ್ ಇಂಟೆಲಿಜೆನ್ಸ್​ನಿಂದ ಎಐ ಕ್ರಾಂತಿ- ಆಕಾಶ್ ಅಂಬಾನಿ – Kannada News | Jio’s AI Leap: India’s Sovereign AI Backbone & Multi Lingual Future with Reliance Intelligence

ಮುಂಬೈ, ಜೂನ್ 19: ಜಿಯೋ ಸಂಸ್ಥೆಯ ಮುಂದಿನ ದೊಡ್ಡ ಹೆಜ್ಜೆ ಅಥವಾ ಜಿಗಿತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI- Artificial Intelligence) ವಲಯದಲ್ಲಿ ಇರಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 49ನೇ ವಾರ್ಷಿಕ ಮಹಾಸಭೆಯಲ್ಲಿ (AGM) ಮಾತನಾಡಿದ ಕಂಪನಿಯ ಛೇರ್ಮನ್ ಮುಕೇಶ್ ಅಂಬಾನಿ, ವಿದೇಶಗಳಲ್ಲಿ ತಯಾರಾಗುವ ಎಐಗೆ ಕೇವಲ ಗ್ರಾಹಕ ದೇಶವಾಗಿ ಭಾರತವು ಉಳಿಯಬಾರದು; ಬದಲಿಗೆ ಭಾರತವು ಎಐ ಸೃಷ್ಟಿಕರ್ತ ಮತ್ತು ಜಾಗತಿಕ ನಾಯಕ ಆಗಬೇಕು. ಇದೇ ಆಲೋಚನೆಯೊಂದಿಗೆ ರಿಲಯನ್ಸ್ ಇಂಟೆಲಿಜೆನ್ಸ್ ಅನ್ನು ಕಂಪನಿಯ ಹೊಸ ಬೆಳವಣಿಗೆಯ ಇಂಜಿನ್ ಆಗಿ ಮುನ್ನಡೆಸಲಾಗುತ್ತಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದರು.

ಗ್ರಾಹಕರು, ಉದ್ಯಮಗಳು ಮತ್ತು ಸರ್ಕಾರಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಎಐ ಮೂಲಸೌಕರ್ಯ, ಪ್ಲಾಟ್‌ಫಾರ್ಮ್‌ಗಳು ಮತ್ತು ಸೇವೆಗಳ ಲಾಭದಾಯಕ ವ್ಯವಹಾರವನ್ನು ಸಿದ್ಧಪಡಿಸುವುದು ರಿಲಯನ್ಸ್ ಇಂಟೆಲಿಜೆನ್ಸ್‌ನ ಉದ್ದೇಶ ಎಂದು ಅವರು ಹೇಳಿದರು.

ಜಾಮ್​ನಗರದಲ್ಲಿ ಸಾವರಿನ್ ಎಐ ಬೆನ್ನೆಲುಬು

ಜಿಯೋ ಮುಖ್ಯಸ್ಥ ಆಕಾಶ್ ಅಂಬಾನಿ ಅವರು ರಿಲಯನ್ಸ್ ಇಂಟೆಲಿಜೆನ್ಸ್‌ನ ಸೇವೆಗಳು ಮತ್ತು ಎಐ ಉತ್ಪನ್ನಗಳ ವಿವರವಾದ ಮಾಹಿತಿ ನೀಡಿದರು. ರಿಲಯನ್ಸ್ ಇಂಟೆಲಿಜೆನ್ಸ್ ಜಾಮ್ ನಗರದಲ್ಲಿ ಭಾರತದ ಸಾವರಿನ್ ಎಐ (Sovereign AI Backbone) ಬೆನ್ನೆಲುಬನ್ನು ನಿರ್ಮಿಸುತ್ತಿದೆ ಎಂದು ಅವರು ತಿಳಿಸಿದರು. ಈ ಮೂಲಸೌಕರ್ಯವು ರಿಲಯನ್ಸ್‌ನ ಸ್ವಂತ ಸೌರಶಕ್ತಿಯಿಂದ ಕಾರ್ಯ ನಿರ್ವಹಿಸಲಿದೆ. ಇದರ ಮೊದಲ 120 ಮೆಗಾವಾಟ್ ಸಾಮರ್ಥ್ಯವನ್ನು 2026ರ ಕೊನೆಯ ವೇಳೆಗೆ ಪ್ರಾರಂಭಿಸಲು ಯೋಜಿಸಲಾಗಿದೆ. ಇದು ಸಂಪೂರ್ಣವಾಗಿ ಕಾರ್ಯಗತಗೊಂಡಾಗ, ಈ ಸಾಮರ್ಥ್ಯವು ಎರಡು ಲಕ್ಷಕ್ಕೂ ಹೆಚ್ಚು H100-ಇಕ್ವಿವಲೆಂಟ್ ಜಿಪಿಯುಗಳವರೆಗೆ (GPU) ಹೆಚ್ಚಾಗಬಹುದು.

ಇದನ್ನೂ ಓದಿ: ಜಿಯೋ ಐಪಿಒಗೆ ಸಜ್ಜು; 27 ಕೋಟಿ ಹೊಸ ಈಕ್ವಿಟಿ ಷೇರುಗಳ ಹಂಚಿಕೆ; ಆರ್​​ಐಎಲ್ ಎಜಿಎಂ ಸಭೆಯಲ್ಲಿ ಅಂಬಾನಿ ಮಾಹಿತಿ

ಆಕಾಶ್ ಅಂಬಾನಿ ಮಾತನಾಡಿ, “ವಿಶ್ವದ ಎಐ ಪ್ಲಾಟ್‌ಫಾರ್ಮ್‌ಗಳು ಮೊದಲು ಇಂಗ್ಲಿಷ್‌ನಲ್ಲಿ ತಯಾರಾಗುತ್ತವೆ ಮತ್ತು ನಂತರ ಅವುಗಳನ್ನು ಭಾಷಾಂತರಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಜಿಯೋ ಭಾರತೀಯ ಭಾಷೆಗಳಲ್ಲೇ ಸ್ಥಳೀಯ ಎಐ ಅನ್ನು ನಿರ್ಮಿಸುತ್ತಿದೆ. ಭಾರತದ ಎಐ ಭಾರತೀಯ ಭಾಷೆಯಲ್ಲೇ ಮಾತನಾಡಲಿದೆ, ಭಾರತದ ಹೃದಯಗಳನ್ನು ಜೋಡಿಸಲಿದೆ ಹಾಗೂ ಭಾರತದ ಚಿತ್ರಣ ಮತ್ತು ಹಣೆಬರಹವನ್ನು ಬದಲಾಯಿಸಲಿದೆ” ಎಂದು ಹೇಳಿದರು.

ವಿವಿಧ ಭಾರತೀಯ ಭಾಷೆಗಳಲ್ಲಿ ಎಐ ಸೇವೆ

ರಿಲಯನ್ಸ್ ಇಂಟೆಲಿಜೆನ್ಸ್ 22 ಭಾರತೀಯ ಭಾಷೆಗಳಲ್ಲಿ ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಬಹುಭಾಷಾ ಎಐ ಸೇವೆಗಳನ್ನು ನೀಡಲು ಸಿದ್ಧತೆ ನಡೆಸುತ್ತಿದೆ. ಇವುಗಳಲ್ಲಿ ಜಿಯೋಭಾರತ್‌ಐಕ್ಯೂ (JioBharatIQ), ಎಐ ವ್ಯಾಪಾರ, ಜಿಯೋಹೆಲ್ತ್‌ಐಕ್ಯೂ, ಜಿಯೋಲರ್ನ್‌ಐಕ್ಯೂ ಮತ್ತು ಜಿಯೋಕೃಷಿಐಕ್ಯೂನಂತಹ ಸೇವೆಗಳು ಸೇರಿವೆ. ಈ ಸೇವೆಗಳ ಉದ್ದೇಶ ರೈತರು, ವಿದ್ಯಾರ್ಥಿಗಳು, ವರ್ತಕರು, ಕುಟುಂಬಗಳು ಮತ್ತು ಸಣ್ಣ ಉದ್ಯಮಿಗಳಿಗೆ ಎಐ ಉಪಯುಕ್ತತೆಯನ್ನು ತಲುಪಿಸುವುದಾಗಿದೆ ಎಂದು ಮುಕೇಶ್ ಅಂಬಾನಿ ಅವರ ಹಿರಿಯ ಪುತ್ರ ತಿಳಿಸಿದರು.

ಜಿಯೋ ತನ್ನ ನೆಟ್‌ವರ್ಕ್‌ನಲ್ಲೂ ಎಐ ಅನ್ನು ನೇರವಾಗಿ ಜೋಡಿಸುತ್ತಿದೆ. ಕಂಪನಿಯು ‘ಜಿಯೋ ಕಾಲ್ ಏಜೆಂಟ್’ (Jio Call Agent) ಮೇಲೆ ಕೆಲಸ ಮಾಡುತ್ತಿದೆ. ಇದರ ಮೂಲಕ ಪ್ರತಿ ಜಿಯೋ ಕರೆಯಲ್ಲಿಯೂ ಗ್ರಾಹಕರ ಅನುಮತಿಯೊಂದಿಗೆ ಎಐ ಏಜೆಂಟ್ ಜೋಡಣೆಯಾಗಬಹುದು. ಇದು ಕರೆಯನ್ನು ಟ್ರಾನ್ಸ್‌ಕ್ರೈಬ್ (ಬರಹ ರೂಪಕ್ಕೆ ಪರಿವರ್ತಿಸುವುದು) ಮಾಡಬಲ್ಲದು, ಅದರ ಸಾರಾಂಶವನ್ನು ಸಿದ್ಧಪಡಿಸಬಲ್ಲದು ಮತ್ತು ಅಗತ್ಯವಿದ್ದಾಗ ಆಹಾರ ಆರ್ಡರ್ ಮಾಡುವುದು, ಕ್ಯಾಬ್ ಬುಕ್ ಮಾಡುವುದು, ಟೇಬಲ್ ಕಾಯ್ದಿರಿಸುವುದು ಅಥವಾ ಮೀಟಿಂಗ್ ನಿಗದಿಪಡಿಸುವ ಕೆಲಸಗಳನ್ನೂ ಮಾಡಬಹುದು ಎಂದರು ಆಕಾಶ್ ಅಂಬಾನಿ.

ಭಾರತದ ತಂತ್ರಜ್ಞಾನವನ್ನು ಜಗತ್ತಿಗೆ ಕೊಂಡೊಯ್ಯುವುದು ಜಿಯೋದ ಬದ್ಧತೆಗಳಲ್ಲೊಂದು. 5ಜಿ, ಫಿಕ್ಸ್ಡ್ ವೈರ್‌ಲೆಸ್ ಆಕ್ಸೆಸ್ (FWA) ಮತ್ತು ಎಐ ಸೇವೆಗಳಿಗಾಗಿ ಜಿಯೋದಲ್ಲಿಯೇ ಸಿದ್ಧಪಡಿಸಲಾದ ಸ್ವಂತ ಡೀಪ್-ಟೆಕ್ ಸ್ಟ್ಯಾಕ್ (Deep-tech stack) ಈಗ ಆಯ್ದ ದೇಶಗಳಲ್ಲಿ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಬಳಕೆಗೆ ಸಿದ್ಧವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Reliance AGM 2026: ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಭರ್ಜರಿ ಬಂಡವಾಳ ವೆಚ್ಚ; ಒಂದು ವರ್ಷದಲ್ಲಿ 1.44 ಲಕ್ಷ ಕೋಟಿ ರೂ ವೆಚ್ಚ

ಜಾಗತಿಕ ಟೆಕ್ ದೈತ್ಯರೊಂದಿಗೆ ರಿಲಯನ್ಸ್ ಸಹಭಾಗಿತ್ವ

ರಿಲಯನ್ಸ್ ಸಂಸ್ಥೆಯು ಗೂಗಲ್, ಮೆಟಾ ಮತ್ತು ಎನ್‌ವಿಡಿಯಾ (Nvidia) ಜೊತೆಗಿನ ಪಾಲುದಾರಿಕೆಯನ್ನು ಉಲ್ಲೇಖಿಸಿದೆ. ಈ ಪಾಲುದಾರಿಕೆಗಳ ಮೂಲಕ ಜಾಗತಿಕ ತಂತ್ರಜ್ಞಾನವನ್ನು ಭಾರತೀಯ ಅನುಷ್ಠಾನ, ಭಾರತೀಯ ಮೂಲಸೌಕರ್ಯ ಮತ್ತು ಭಾರತ-ಪ್ರಥಮ ಆಡಳಿತದೊಂದಿಗೆ (India-first governance) ಜೋಡಿಸಲಾಗುವುದು ಎಂದು ಕಂಪನಿ ಹೇಳಿದೆ.

ಜಿಯೋದ ಡಾಟಾ ಕ್ರಾಂತಿಯಂತೆ ರಿಲಯನ್ಸ್ ಇಂಟೆಲಿಜೆನ್ಸ್​ನಿಂದಲೂ ಎಐ ಕ್ರಾಂತಿ

ಜಿಯೋ ಹೇಗೆ ಪ್ರತಿ ಭಾರತೀಯನಿಗೆ ಡೇಟಾವನ್ನು ಕೈಗೆಟುಕುವಂತೆ ಮಾಡಿತ್ತೋ ಅದೇ ರೀತಿ ರಿಲಯನ್ಸ್ ಇಂಟೆಲಿಜೆನ್ಸ್ ಈಗ ಎಐ ಅನ್ನು ಸುಲಭ, ವಿಶ್ವಾಸಾರ್ಹ ಮತ್ತು ಕೈಗೆಟುಕುವಂತೆ ಮಾಡಲು ಸಿದ್ಧತೆ ನಡೆಸುತ್ತಿದೆ. ಎಐ ಎಲ್ಲರಿಗೂ ಸುಲಭವಾಗಿ ಲಭ್ಯವಾದಾಗ, ಭಾರತವು ಕೇವಲ ಎಐ ಯುಗದ ಭಾಗೀದಾರನಾಗಿ ಉಳಿಯದೆ, ಅದರ ನೇತೃತ್ವವನ್ನು ವಹಿಸಲಿದೆ ಎಂದು ಆರ್​ಎಲ್ ಛೇರ್ಮನ್ ಮುಕೇಶ್ ಅಂಬಾನಿ ತಿಳಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್​​​ಗೆ ಹೈಕೋರ್ಟ್ ಬಿಗ್ ರಿಲೀಫ್: ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಕೇಸ್​ ರದ್ದು – Kannada News | Karnataka high court quashes CM DK Shivakumar of bjp poster morphing case

ಬೆಂಗಳೂರು, (ಜೂನ್ 19): ಬಿಜೆಪಿಯ ನಾನು ಕರಸೇವಕ, ನನ್ನನ್ನೂ ಬಂಧಿಸಿ ಅಭಿಯಾನದ ಪೋಸ್ಟರ್ ತಿರುಚಿ ಕಾಂಗ್ರೆಸ್​​​​ನಿಂದ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ  (DK Shivakumar) ಬಿಗ್ ರಿಲೀಫ್ ಸಿಕ್ಕಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಅವಹೇಳನಕಾರಿ ಪೋಸ್ಟ್ ಪ್ರಕರಣವನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ (karnataka high court)​ ಮಹತ್ವದ ಆದೇಶ ಹೊರಡಿಸಿದೆ. ಫೋರ್ಜರಿ, ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸಿದ ಆರೋಪ ಮಾಡಿ ವಕೀಲ ಯೋಗೇಂದ್ರ ಹೊಡಘಟ್ಟ ಎಂಬುವರು ದಾಖಲಿಸಿದ್ದ ಪ್ರಕರಣವನ್ನು ರದ್ದು ಕೋರಿ ಡಿಕೆ ಶಿವಕುಮಾರ್, ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.

ಮುಖ್ಯಾಂಶಗಳು

  • ಬಿಜೆಪಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಕೇಸ್​​ನಲ್ಲಿ ಸಿಎಂಗೆ ರಿಲೀಫ್
  • ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶ
  • ಬಿಜೆಪಿಯ ನಾನು ಕರಸೇವಕ, ನನ್ನನ್ನೂ ಬಂಧಿಸಿ ಅಭಿಯಾನ
  • ಅಭಿಯಾನದ ಪೋಸ್ಟರ್ ತಿರುಚಿ ಎಕ್ಸ್​ನಲ್ಲಿ ಕಾಂಗ್ರೆಸ್​ನಿಂದ ಪೋಸ್ಟ್
  • ವಕೀಲ ಯೋಗೇಂದ್ರ ಹೊಡಘಟ್ಟ ಖಾಸಗಿ ದೂರು ದಾಖಲಿಸಿದ್ದರು

ಸಿಎಂ ಡಿ.ಕೆ.ಶಿವಕುಮಾರ್ ಪರ ವಕೀಲ ಹೆಚ್.ವಿ.ಪ್ರವೀಣ್ ಗೌಡ ವಾದ ಮಾಡಿದ್ದು, ಡಿ.ಕೆ.ಶಿವಕುಮಾರ್ ಸ್ವತಃ ಈ ಪೋಸ್ಟ್ ಮಾಡಿಲ್ಲವೆಂದು ಎಂದು ವಾದ ಮಂಡಿಸಿದರು.

ಇದನ್ನೂ ಓದಿ: ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಕೇಸ್​: ಡಿಕೆಶಿಗೆ ಕೋರ್ಟ್ ಬಿಗ್ ರಿಲೀಫ್

ಪ್ರಕರಣದ ಹಿನ್ನೆಲೆ

ಹುಬ್ಬಳ್ಳಿಯಲ್ಲಿ 1992ರಲ್ಲಿ ನಡೆದ ರಾಮ ಜನ್ಮಭೂಮಿ ಕುರಿತ ಹೋರಾಟದಲ್ಲಿ ಭಾಗಿಯಾಗಿದ್ದ ಕರಸೇವಕ ಶ್ರೀಕಾಂತ ಪೂಜಾರಿಯನ್ನು 31 ವರ್ಷಗಳ ಬಳಿಕ ಅಂದರೆ ರಾಮ ಮಂದಿರ ಉದ್ಘಾಟನೆಗೆ ಸಮಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂಧಿಸಿ ಜೈಲಿಗಟ್ಟಿತ್ತು. ಕಾಂಗ್ರೆಸ್​ ಸರ್ಕಾರ ಉದ್ದೇಶ ಪೂರ್ವಕವಾಗಿ ಬಂಧಿಸಿದ್ದಾರೆ. ಹೀಗಾಗಿ ಇದನ್ನು ಖಂಡಿಸಿ ಬಿಜೆಪಿ ನಾಯಕರು ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಎಂದು ವಿಭಿನ್ನ ಅಭಿಯಾನ ಮಾಡಿದ್ದರು. ಇದಕ್ಕೆ  ಡಿಕೆ ಶಿವಕುಮಾರ್​​ ಸೇರಿದಂತೆ ಕಾಂಗ್ರೆಸ್​​ ನಾಯಕರು ತಿರುಚಿ ಪೋಸ್ಟರ್​​ಗಳನ್ನು ಹಾಕಿದ್ದರು. ಬಳಿಕ ವಕೀಲ ಯೋಗೇಂದ್ರ ಹೊಡಘಟ್ಟ ಖಾಸಗಿ ದೂರು ದಾಖಲಿಸಿದ್ದರು.

ಕಾಂಗ್ರೆಸ್​​ ತಿರುಚಿದ ಪೋಸ್ಟರ್​​ಗಳು ಫೋರ್ಜರಿ ಮತ್ತು ಎರಡು ಗುಂಪುಗಳ‌ ನಡುವೆ ದ್ವೇಷ ಮೂಡಿಸಿದ ಆರೋಪಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಖಾಸಗಿ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಹೈಗ್ರೌಂಡ ಪೊಲೀಸರು ಡಿಸಿಎಂ ಡಿಕೆ ಶಿವಕುಮಾರ್​​ ಮತ್ತು ಬಿಆರ್​ ನಾಯ್ಡು ವಿರುದ್ಧ ಎಫ್​ಐಆರ್​​ ದಾಖಲಾಗಿತ್ತು. ಅರ್ಜಿ ಪರಿಶೀಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸಿತ್ತು. ಬಳಿಕ ಇದಕ್ಕೆ ಹೈಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:12 pm, Fri, 19 June 26

Source link

ಶಿಕ್ಷಕನ ಸಾವಿಗೆ ಕಾರಣರಾದ ಐವರು ಶಿಕ್ಷಕರು ಮತ್ತೆ ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು – Kannada News | Davangere: Villagers Demand Five Teachers Accused in Colleague’s Death Never Return to School

ದಾವಣಗೆರೆ, ಜೂನ್​​ 19: ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ(54) ಆತ್ಮಹತ್ಯೆ ಕೇಸ್​​​ಗೆ ಸಂಬಂಧಿಸಿದಂತೆ ನಿನ್ನೆ 11 ಜನರ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಜಯಪ್ಪ ಪತ್ನಿ ದೂರು ಆಧರಿಸಿ ಮಲೇಬೆನ್ನೂರು ಠಾಣೆಯಲ್ಲಿ ಮಾನಸಿಕ ಹಿಂಸೆ, ಕಿರುಕಳ ಹಾಗೂ ಜಾತಿನಿಂದನೆ ಆರೋಪದಡಿ ಶಿಕ್ಷಕರಾದ ಶ್ರೀಕಾಂತಚಾರಿ, ವೆಂಕಟೇಶ, ರಂಜನಿ, ಚೇತನಾ, ಮಹಾಂತೇಶಗೌಳಿ ಮತ್ತು ಅಡುಗೆ ಸಹಾಯಕಿಯರಾದ ಸುಮಾ, ಚೆನ್ನಮ್ಮ, ವಿಜಯಮ್ಮ, ರೂಪಾ ಹಾಗೂ ಸಿಆರ್​ಪಿ ಮತ್ತು ಬಿಆರ್​ಪಿ ಸೇರಿ ಒಟ್ಟು 11 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಅತ್ತ ದೂರು ದಾಖಲಾಗುತ್ತಿದ್ದಂತೆ ಇತ್ತ ಶಿಕ್ಷಕರು ಮತ್ತು ಅಡುಗೆ ಸಹಾಯಕಿಯವರು ತಲೆಮರೆಸಿಕೊಂಡಿದ್ದಾರೆ. ಇನ್ನು ಶಿಕ್ಷಕನ ಸಾವಿಗೆ ಕಾರಣರಾದ 5 ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

‘ಕಾಕ್​​ಟೇಲ್ 2’: ಕೃತಿಯೇ ಎಲ್ಲ, ರಶ್ಮಿಕಾ-ಶಾಹಿದ್ ಲೆಕ್ಕಕ್ಕಿಲ್ಲ – Kannada News | Cocktail 2 twitter review: Rashmika Hindi criticized badly

ರಶ್ಮಿಕಾ ಮಂದಣ್ಣ (Rashmika Mandanna), ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟಿಸಿರುವ ‘ಕಾಕ್​​ಟೇಲ್ 2’ ಹಿಂದಿ ಸಿನಿಮಾ ಇಂದು (ಜೂನ್ 19) ಬಿಡುಗಡೆ ಆಗಿದೆ. ಭಾರಿ ಬಜೆಟ್​​ನಲ್ಲಿ ನಿರ್ಮಿಸಿ, ಭಾರಿ ಪ್ರಚಾರದೊಂದಿಗೆ ಸಿನಿಮಾ ಬಿಡುಗಡೆ ಆಗಿದೆ. ಆದರೆ ಮೊದಲ ದಿನವೇ ಸಿನಿಮಾಕ್ಕೆ ಭರಪೂರ ಋಣಾತ್ಮಕ ವಿಮರ್ಶೆಗಳು ಎದುರಾಗಿವೆ. ಸಿನಿಮಾನಲ್ಲಿ ಗ್ಲಾಮರ್ ಹೊರತಾಗಿ ಇನ್ನೇನೂ ಇಲ್ಲ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ. ಕೆಲವರಂತೂ ಇದೊಂದು ‘ಅನವಶ್ಯಕ’ ಸೀಕ್ವೆಲ್ ಎಂದು ಸಹ ಕರೆದಿದ್ದಾರೆ.

ಸಿನಿಮಾ ನೋಡಿದ ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಬಹುತೇಕರು ಸಿನಿಮಾ ಚೆನ್ನಾಗಿಲ್ಲವೆಂದೇ ಹೇಳಿದ್ದಾರೆ. ಅದರಲ್ಲೂ ರಶ್ಮಿಕಾ ನಟನೆ ನಿರೀಕ್ಷಿತ ಮಟ್ಟದಲ್ಲಿಲ್ಲವೆಂದು, ರಶ್ಮಿಕಾರನ್ನು ತಪ್ಪು ಪಾತ್ರಕ್ಕೆ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. ವಿಶ್ವಜಿತ್ ಪಟೇಲ್ ಎಂಬುವರು ಟ್ವೀಟ್ ಮಾಡಿ, ‘ಈ ಸಿನಿಮಾ ಒಂದು ಕೆಟ್ಟ ಕನಸಿನಂತಿದೆ. ಆತ್ಮವೇ ಇಲ್ಲದ ಸೀಕ್ವೆಲ್ (ಎರಡನೇ ಭಾಗ)ಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಇದೊಂದು ಬೋರು ಹೊಡೆಸುವ, ಟೊಳ್ಳಾದ ಅನುಭವ ನೀಡುವ ಸಿನಿಮಾ ಎಂದಿದ್ದಾರೆ. ರಶ್ಮಿಕಾ ನಟನೆಯನ್ನು ಟೀಕಿಸಿರುವ ವಿಶ್ವಜಿತ್, ರಶ್ಮಿಕಾರ ಹಿಂದಿ ಸಹ ಬಲು ಕೆಟ್ಟದಾಗಿದೆ’ ಎಂದಿದ್ದಾರೆ.

ಮಿಸ್ಟರ್ ಎಸ್​​ಪಿ ಎಂಬುವರು ಟ್ವೀಟ್ ಮಾಡಿ ಸಿನಿಮಾ ಚೆನ್ನಾಗಿದೆ ಎಂದಿದ್ದಾರಾದರೂ ರಶ್ಮಿಕಾರ ನಟನೆ ಕೆಟ್ಟದಾಗಿದೆ ಎಂದಿದ್ದಾರೆ. ಸಿನಿಮಾ ಸ್ಟೈಲಿಷ್ ಆಗಿದೆ, ದೃಶ್ಯಗಳು ರಿಚ್ ಆಗಿವೆ. ಹಾಡುಗಳು, ಸಂಗೀತ ಚೆನ್ನಾಗಿದೆ. ಕೆಲವು ಕಡೆ ಮೆಲೋಡ್ರಾಮಾ ಚೆನ್ನಾಗಿದೆ ಎಂದಿದ್ದಾರೆ. ಆದರೆ ರಶ್ಮಿಕಾ ನಟನೆ ಚೆನ್ನಾಗಿಲ್ಲ, ಅವರ ಪಾತ್ರ ಪೋಷಣೆ ಚೆನ್ನಾಗಿಲ್ಲ. ಅವರ ಸಂಭಾಷಣೆ ಬಲು ನಾಟಕೀಯವಾಗಿದೆ ಎಂದಿದ್ದಾರೆ.

ನಿತೀಷ್ ಶಾ ಎಂಬುವರು ಟ್ವೀಟ್ ಮಾಡಿ, ‘ತು ಜೂಟಿ ಮೇ ಮಕ್ಕಾರ್’ ಸಿನಿಮಾದ ಒಂದು ದೃಶ್ಯವನ್ನು ಇರಿಸಿಕೊಂಡು ಪೂರ್ತಿ ಸಿನಿಮಾವನ್ನು ಮಾಡಿದಂತೆ ‘ಕಾಕ್​​ಟೇಲ್ 2’ ಭಾಸವಾಗುತ್ತದೆ. ಸಿನಿಮಾದ ತುಂಬ ಬಹಳ ಅನವಶ್ಯಕ ದೃಶ್ಯಗಳು ಇವೆ. ಸಿನಿಮಾದ ಎರಡನೇ ಅರ್ಧವಂತೂ ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವರ್ಷದ ಹಿಂದೆಯೇ ತನ್ನ ಗುರಿ ಬಗ್ಗೆ ಹೇಳಿದ್ದ ಶ್ರೇಯಾಂಕ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದ್ದು ದುರಾದೃಷ್ಟಕರ – Kannada News | Shreyanka Patil’s World Cup Dream Shattered by Injury: A Recurring Cricket Nightmare

2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup 2026) ಸತತ ಎರಡು ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿದ್ದ ಭಾರತ ವನಿತಾ ಪಡೆಗೆ ತಂಡದ ಸ್ಟಾರ್ ಆಟಗಾರ್ತಿ ಶ್ರೇಯಾಂಕ ಪಾಟೀಲ್ (Shreyanka Patil) ಅವರ ಇಂಜುರಿ ಸಮಸ್ಯೆ ಬರ ಸಿಡಿಲಿನಂತೆ ಬಂದೆರಗಿದೆ. ಹೆಡಿಂಗ್ಲಿಯಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್ ಪಾದದ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ಟಿ20 ವಿಶ್ವಕಪ್‌ನಿಂದಲೇ ಹೊರಗುಳಿದಿದ್ದಾರೆ. ಅವರ ಬದಲಿಯಾಗಿ ಪ್ರೇಮಾ ರಾವತ್​ ತಂಡಕ್ಕೆ ಆಯ್ಕೆಯಾಗಿದ್ದರೂ, ಶ್ರೇಯಾಂಕ ಅವರ ಸ್ಥಾನವನ್ನು ತುಂಬುವುದು ಕಷ್ಟಕರ. ಏಕೆಂದರೆ ತಂಡದ ಪ್ರಮುಖ ಸ್ಪಿನ್ನರ್​ಗಳಲ್ಲಿ ಒಬ್ಬರಾಗಿದ್ದ ಶ್ರೇಯಾಂಕ ಕೆಳಕ್ರಮಾಂಕದಲ್ಲಿ ಬ್ಯಾಟ ಬಲವನ್ನು ಹೆಚ್ಚಿಸುತ್ತಿದ್ದರು. ಹೀಗಾಗಿ ಅವರ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

ದುರಾದೃಷ್ಟಕರ ಸಂಗತಿಯೆಂದರೆ ಶ್ರೇಯಾಂಕ ಪಾಟೀಲ್ ಈ ಹಿಂದಿನ ಗಾಯಗಳಿಂದಾಗಿ ಕ್ರಿಕೆಟ್ ತೊರೆಯುವ ಬಗ್ಗೆ ಮಾತನಾಡಿ ಎರಡು ದಿನಗಳು ಕಳೆಯುವ ಮುನ್ನವೇ ಅವರು ಮತ್ತೆ ಗಾಯಕ್ಕೆ ತುತ್ತಾಗಿ ಪ್ರಮುಖ ಪಂದ್ಯಾವಳಿಯಿಂದಲೇ ಹೊರಬಿದಿದ್ದಾರೆ. ವಾಸ್ತವವಾಗಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದ ಶ್ರೇಯಾಂಕ, ಈ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದಿದ್ದರೂ, 3 ಓವರ್​ಗಳಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟು ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದರು.

ಶ್ರೇಯಾಂಕ ಪಾಟೀಲ್​ಗೆ ಗಂಭೀರ ಗಾಯ..! ಕಣ್ಣೀರಿಡುತ್ತ ಮೈದಾನ ತೊರೆದ ಕನ್ನಡತಿ

ಕ್ರಿಕೆಟ್ ಬಿಡಲು ಚಿಂತಿಸಿದ್ದ

ಈ ಪಂದ್ಯದ ಬಳಿಕ ಜಿಯೋಸ್ಟಾರ್‌ನ ಅಡಿಡಾಸ್ ಮ್ಯಾಚ್ ಸೆಂಟರ್ ಲೈವ್ ಕಾರ್ಯಕ್ರಮದಲ್ಲಿ ಗಾಯಗಳಿಂದಾಗಿ ದೀರ್ಘಕಾಲದವರೆಗೆ ಆಟದಿಂದ ಹೊರಗುಳಿದಿದ್ದ ಬಗ್ಗೆ ಮಾತನಾಡಿದ್ದ ಶ್ರೇಯಾಂಕ ಪಾಟೀಲ್, ‘ಪದೇ ಪದೇ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದಾಗ ನಾನು ಖಿನ್ನತೆಗೆ ಒಳಗಾಗಿಲ್ಲ ಅಥವಾ ಕ್ರಿಕೆಟ್ ಅನ್ನು ತ್ಯಜಿಸುವ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದರೆ ಅದು ನಾನು ಸುಳ್ಳು ಹೇಳುತ್ತಿದ್ದೇನೆ ಎಂದಾಗುತ್ತದೆ. ಗಾಯಕ್ಕೆ ತುತ್ತಾದಾಗ ನಾನು ಆರಂಭದಲ್ಲಿ ಕ್ರಿಕೆಟ್​ನಿಂದ ದೂರ ಉಳಿಯುವ ಬಗ್ಗೆ ಚಿಂತಿಸಿದ್ದೆ. ಆದರೆ ನನ್ನೊಳಗೆ ಒಂದು ಧ್ವನಿ ಇತ್ತು, ಆ ಧ್ವನಿ, ಏನೇ ಆಗಲಿ, ಇದು ನನ್ನಿಷ್ಟದ ಕ್ರೀಡೆ, ಈ ಕ್ರೀಡೆಯನ್ನು ಆಡಲು ಇಷ್ಟವಿರುವ ಕಾರಣದಿಂದಲೇ ನಾನು ಇಲ್ಲಿರುವುದು ಎಂಬುದನ್ನು ಪದೇ ಪದೇ ಹೇಳುತಿತ್ತು. ಹಾಗಾಗಿ, ನಾನು ಇಷ್ಟಪಡುವ ಕೆಲಸವನ್ನು ಬಿಟ್ಟುಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಧೃಡ ಸಂಕಲ್ಪ ಮಾಡಿದೆ. ಆ ಸಮಯದಲ್ಲಿ ನನ್ನ ತಂದೆ ಮತ್ತು ನನ್ನ ಕುಟುಂಬ ನನ್ನ ಬೆಂಬಲಕ್ಕೆ ನಿಂತಿತು. ಹೀಗಾಗಿ ನಾನು ಗಾಯಗಳಿಂದ ಚೇತರಿಸಿಕೊಂಡು ಇಲ್ಲಿದ್ದೇನೆ’ ಎಂದಿದ್ದರು.

ವರ್ಷದ ಹಿಂದೆಯೇ ತನ್ನ ಗುರಿ ಬಗ್ಗೆ ಹೇಳಿದ್ದ ಶ್ರೇಯಾಂಕ

ಆದರೆ ಶ್ರೇಯಾಂಕ ಈ ರೀತಿಯ ಹೇಳಿಕೆ ನೀಡಿದ ಕೇವಲ ಎರಡು ದಿನಗಳ ನಂತರ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ಈ ಗಾಯದಿಂದಾಗಿ ಅವರು ಇಡೀ ವಿಶ್ವಕಪ್​ನಿಂದಲೇ ಹೊರಬಿದಿದ್ದಾರೆ. ಬೇಸರದ ಸಂಗತಿಯೆಂದರೆ ಇದೇ ಶ್ರೇಯಾಂಕ ಕಳೆದ ವರ್ಷ ಲಾರ್ಡ್ಸ್‌ ಅಂಗಳದಲ್ಲಿ ನಿಂತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು, ‘ಬಹುಶಃ ಇಲ್ಲಿಂದ ಸರಿಯಾಗಿ ಒಂದು ವರ್ಷದ ನಂತರ ನಾನು ಇದೇ ಲಾರ್ಡ್ಸ್‌ ಕ್ರೀಡಾಂಗಣದ ಬಾಲ್ಕನಿಯಲ್ಲಿ ಟಿ20 ವಿಶ್ವಕಪ್​ ಹಿಡಿದು ನಿಂತಿರುತ್ತೇನೆ’ ಎಂದು ಬರೆದುಕೊಂಡಿದ್ದರು. ಆದರೆ ಶ್ರೇಯಾಂಕರ ಈ ಕನಸು ಆರಂಭದಲ್ಲೇ ಕಮರಿ ಹೋಗಿದೆ. ಆದಾಗ್ಯೂ ಶ್ರೇಯಾಂಕ ತಂಡದಿಂದ ಹೊರಗುಳಿದಿದ್ದರೂ, ಭಾರತ ವನಿತಾ ಪಡೆ ಟಿ20 ವಿಶ್ವಕಪ್ ಗೆದ್ದು ಶ್ರೇಯಾಂಕರ ಕನಸನ್ನು ನನಸು ಮಾಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:49 pm, Fri, 19 June 26

Source link

Vastu Clock Placement: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ಗಡಿಯಾರ ಇಡಬೇಡಿ; ಹೆಚ್ಚಾಗುತ್ತೆ ಸಂಕಷ್ಟ! – Kannada News | Vastu Clock Placement: Attract Prosperity and Positive Energy – Avoid Negative Vibes!

ಗಡಿಯಾರಗಳನ್ನು ಕೇವಲ ಸಮಯ ನೋಡಲು ಮಾತ್ರವಲ್ಲ, ವಾಸ್ತು ಶಾಸ್ತ್ರದಲ್ಲಿ ಅವುಗಳನ್ನು ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯನ್ನು ನಿಯಂತ್ರಿಸುವ ಪ್ರಮುಖ ಅಂಶವೆಂದು ಪರಿಗಣಿಸಲಾಗುತ್ತದೆ. ವಾಸ್ತು ತಜ್ಞರ ಪ್ರಕಾರ, ಗಡಿಯಾರವು ಮನೆಯ ಒಟ್ಟಾರೆ ಶಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿದೆ. ಸರಿಯಾದ ದಿಕ್ಕಿನಲ್ಲಿ ಗಡಿಯಾರವನ್ನು ನೇತುಹಾಕುವುದರಿಂದ ಮನೆಯಲ್ಲಿ ಸುಖ, ಶಾಂತಿ, ಮತ್ತು ಸಮೃದ್ಧಿ ನೆಲೆಸುತ್ತದೆ. ಆದರೆ ತಪ್ಪು ದಿಕ್ಕಿನಲ್ಲಿಟ್ಟರೆ ಮಾನಸಿಕ ಒತ್ತಡ ಹಾಗೂ ಆರ್ಥಿಕ ನಷ್ಟ ಎದುರಾಗಬಹುದು.

ದಕ್ಷಿಣ ದಿಕ್ಕಿನಲ್ಲಿ ಗಡಿಯಾರ ಇಡುವುದು ಅಶುಭ ಏಕೆ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದಕ್ಷಿಣ ಭಾಗದ ಗೋಡೆಯ ಮೇಲೆ ಗಡಿಯಾರವನ್ನು ಇಡುವುದು ಅತ್ಯಂತ ಅಶುಭ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ದಕ್ಷಿಣ ದಿಕ್ಕಿನ ಅಧಿಪತಿ ಸಾವಿನ ದೇವನಾದ ಯಮರಾಜ. ಈ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದರಿಂದ ಕುಟುಂಬದ ಸದಸ್ಯರ ಪ್ರಗತಿಗೆ ಅಡೆತಡೆಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೆ, ಇದು ಮನೆಯಲ್ಲಿ ಅನಗತ್ಯ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಹಿರಿಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಸಕಾರಾತ್ಮಕತೆ ಹೆಚ್ಚಿಸುವ ಪೂರ್ವ ಮತ್ತು ಉತ್ತರ ದಿಕ್ಕುಗಳು:

ಮನೆಯಲ್ಲಿ ಗಡಿಯಾರವನ್ನು ಇಡಲು ಪೂರ್ವ ದಿಕ್ಕನ್ನು ಅತ್ಯಂತ ಶ್ರೇಷ್ಠ ಮತ್ತು ಶುಭವೆಂದು ಪರಿಗಣಿಸಲಾಗುತ್ತದೆ. ಪೂರ್ವವು ಸೂರ್ಯೋದಯದ ದಿಕ್ಕಾಗಿದ್ದು, ದೇವತೆಗಳ ರಾಜನಾದ ಇಂದ್ರ ಇದರ ಅಧಿಪತಿಯಾಗಿದ್ದಾನೆ. ಈ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಮನೆಯಲ್ಲಿ ಧನಾತ್ಮಕ ಕಂಪನಗಳು ಸೃಷ್ಟಿಯಾಗಿ, ಕೌಟುಂಬಿಕ ಬಾಂಧವ್ಯ ಗಟ್ಟಿಯಾಗುತ್ತದೆ. ಇನ್ನು ಉತ್ತರ ದಿಕ್ಕನ್ನು ಸಂಪತ್ತಿನ ಅಧಿಪತಿಯಾದ ಕುಬೇರನ ದಿಕ್ಕೆಂದು ಕರೆಯಲಾಗುತ್ತದೆ. ಉತ್ತರ ಗೋಡೆಯ ಮೇಲೆ ಗಡಿಯಾರವನ್ನು ನೇತುಹಾಕುವುದರಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ, ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ನಿಂತುಹೋದ ಮತ್ತು ಒಡೆದ ಗಡಿಯಾರಗಳನ್ನು ತಕ್ಷಣವೇ ತೆಗೆಯಿರಿ:

ಮನೆಯಲ್ಲಿ ಎಂದಿಗೂ ಕೆಟ್ಟುಹೋದ, ನಿಂತುಹೋದ ಅಥವಾ ಒಡೆದ ಗಡಿಯಾರಗಳನ್ನು ಇಟ್ಟುಕೊಳ್ಳಬಾರದು. ವಾಸ್ತು ಪ್ರಕಾರ, ನಿಂತ ಗಡಿಯಾರವು ಬದುಕಿನ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಒಂದು ವೇಳೆ ಗಡಿಯಾರ ಹಾಳಾಗಿದ್ದರೆ ಅದನ್ನು ತಕ್ಷಣವೇ ದುರಸ್ತಿ ಮಾಡಿಸಿ ಅಥವಾ ಮನೆಯಿಂದ ಹೊರಹಾಕಿ. ಜೊತೆಗೆ, ಗಡಿಯಾರದ ಗ್ಲಾಸ್ ಮೇಲೆ ಧೂಳು ಕೂರದಂತೆ ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ.

ಗಡಿಯಾರ ಬಳಸುವಾಗ ನೆನಪಿನಲ್ಲಿಡಬೇಕಾದ ಪ್ರಮುಖ ನಿಯಮಗಳು:

ವಾಸ್ತು ತಜ್ಞರು ಯಾವಾಗಲೂ ಗಡಿಯಾರದ ಸಮಯವನ್ನು ನಿಗದಿತ ಸಮಯಕ್ಕಿಂತ ಒಂದು ಅಥವಾ ಎರಡು ನಿಮಿಷ ಮುಂಚಿತವಾಗಿ (ಫಾಸ್ಟ್) ಇಟ್ಟುಕೊಳ್ಳಲು ಶಿಫಾರಸು ಮಾಡುತ್ತಾರೆ. ಸಮಯಕ್ಕಿಂತ ಹಿಂದೆ ಇರುವುದು ಜೀವನದಲ್ಲಿ ಹಿನ್ನಡೆಯನ್ನು ಸೂಚಿಸುತ್ತದೆ. ಇದಲ್ಲದೆ, ಮನೆಯ ಮುಖ್ಯ ಬಾಗಿಲಿನ ಮೇಲೆ ಗಡಿಯಾರವನ್ನು ತೂಗುಹಾಕುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು, ಇದು ನಕಾರಾತ್ಮಕ ಶಕ್ತಿಯನ್ನು ಮನೆಗೆ ಆಹ್ವಾನಿಸುತ್ತದೆ. ಮಲಗುವ ಕೋಣೆಯಲ್ಲಿ ವಿಚಿತ್ರ ಆಕಾರದ ಗಡಿಯಾರಗಳನ್ನು ಬಳಸಬೇಡಿ ಮತ್ತು ಲೋಲಕ (Pendulum) ಇರುವ ಗಡಿಯಾರಗಳನ್ನು ಲಿವಿಂಗ್ ರೂಮ್‌ನ ಪೂರ್ವ ಗೋಡೆಯ ಮೇಲೆ ಇಡುವುದು ಅತ್ಯಂತ ಮಂಗಳಕರವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಗಲಾಟೆ ಮಾಡ್ತಿದ್ದ ಪುಟಾಣಿ ಕೈಗೆ ಐಫೋನ್ ಕೊಟ್ಟ ತಾಯಿ, ಮುಂದೇನಾಯ್ತು ಗೊತ್ತಾ? – Kannada News | Mother gives iPhone to fussing toddler, little boy throws phone into river

ಹುಟ್ಟಿದ ಮಕ್ಕಳು (little kids) ಕೂಡ ಮೊದಲು ಈ ಮೊಬೈಲ್ ನ್ನೇ ಹುಡುಕುತ್ತಾರೆ. ಇನ್ನು ಮಕ್ಕಳು ಅತ್ತರೆ, ಊಟ ಮಾಡಲ್ಲ ಅಂತ ಹಠ ಮಾಡಿದ್ರೆ ಪೋಷಕರು ಮೊಬೈಲ್ ಕೊಟ್ಟು ಸಮಾಧಾನ ಪಡಿಸ್ತಾರೆ. ನೀವು ನಿಮ್ಮ ಮಕ್ಕಳಿಗೆ ಫೋನ್ ಕೊಟ್ಟು ಸಮಾಧಾನ ಪಡಿಸುವ ಮುನ್ನ ಈ ಸ್ಟೋರಿ ಓದೋದು ಒಳ್ಳೆಯದು. ಹೌದು, ಬೋಟಿಂಗ್ ಗೆ ಹೋಗಿದ್ದ ವೇಳೆ ಮಹಿಳೆ ಪುಟಾಣಿಯನ್ನು ಸಮಾಧಾನ ಪಡಿಸಲು ತನ್ನ ಕೈಯಲ್ಲಿದ್ದ ಐಫೋನ್ ಕೊಟ್ಟಿದ್ದಾಳೆ. ಆದರೆ ಪುಟ್ಟ ಹುಡುಗನು ತನ್ನ ಕೈಯಲ್ಲಿದ್ದ ಫೋನ್ ನೀರಿಗೆ ಎಸೆದಿರುವ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಒಂದು ಕ್ಷಣ ಶಾಕ್ ಆಗಿದ್ದಾರೆ.

ಯಜ್ಞಶ್ರೀ (@yajnashri) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಬೋಟಿಂಗ್‌ಗೆ ತೆರಳಿದ್ದ ತಾಯಿ ತನ್ನ ಪುಟ್ಟ ಮಗುವನ್ನು ಸಮಾಧಾನಪಡಿಸಲು ಐಫೋನ್ ಕೈಗೆ ಕೊಡುವುದನ್ನು ಕಾಣಬಹುದು. ಕೈಯಲ್ಲಿ ಫೋನ್ ಹಿಡಿದು ಆಟವಾಡುತ್ತಿದ್ದ ಪುಟ್ಟ ಕಂದಮ್ಮ ನೋಡ ನೋಡುತ್ತಿದ್ದಂತೆ ನದಿಗೆ ಎಸೆದಿದೆ.  ಮಹಿಳೆ ಮೊಬೈಲ್‌ನ್ನು ಕೈಯಲ್ಲಿ ಹಿಡಿಯಲು ಪ್ರಯತ್ನಿಸುತ್ತಿದ್ದಂತೆ ನೀರಿಗೆ ಬಿದ್ದಿದೆ. ಮಗನ ಕೆಲಸ ನೋಡಿ ಮಹಿಳೆ ಕೆಲ ಕಾಲ ಗಾಬರಿಗೊಂಡು ಕುಳಿತಿರುವ ದೃಶ್ಯವನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಚಪಾತಿ ಮಾಡಲು ಹೋಗಿ ಮೈ ತುಂಬಾ ಹಿಟ್ಟು ಮೆತ್ತಿಕೊಂಡ ಪುಟಾಣಿ

ಈ ವಿಡಿಯೋ 1.2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮೊಬೈಲ್ ಗೆ ದಾಸರಾಗಿರುವ ಹೆತ್ತವರಿಗೆ ಈ ರೀತಿಯೇ ಬುದ್ಧಿ ಕಲಿಸಬೇಕು ಎಂದಿದ್ದಾರೆ. ಮತ್ತೊಬ್ಬರು, ಮಗುವಿಗೆ ಲೈಫ್ ಜಾಕೆಟ್ ಹಾಕಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಬೋಟಿಂಗ್ ಗೆ ಹೋಗುವಾಗ ಲೈಫ್ ಜಾಕೆಟ್ ನಂತಹ ಸುರಕ್ಷತಾ ಸಾಧನಗಳನ್ನು ಬಳಸುವುದು ಕಡ್ಡಾಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರಿ ಮಳೆಗೆ ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ! – Kannada News | Darjeeling Siliguri route closed after Dudhia bridge washed away due to Heavy Rainfall

ಡಾರ್ಜಿಲಿಂಗ್, ಜೂನ್ 19: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಸುತ್ತಮುತ್ತಲಿನ ಬೆಟ್ಟ ಪ್ರದೇಶಗಳಲ್ಲಿ ದಿಢೀರ್ ಪ್ರಕೃತಿ ವಿಕೋಪ ಸಂಭವಿಸಿದೆ. ಒಂದೇ ಸಮನೆ ಸುರಿದ 200 ಮಿಮೀ ಭಾರಿ ಮಳೆಯಿಂದಾಗಿ (Rain Updates) ಗುಡ್ಡಗಾಡು ಪ್ರದೇಶದ ನದಿಗಳು ಮತ್ತು ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನೀರಿನ ತೀವ್ರ ರಭಸಕ್ಕೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಿಲಿಗುರಿ ಮತ್ತು ಮಿರಿಕ್-ಡಾರ್ಜಿಲಿಂಗ್ ಅನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿರುವ ಪ್ರಮುಖ ‘ದುಧಿಯಾ ಸೇತುವೆ’ ಪ್ರವಾಹಕ್ಕೆ ಸಿಲುಕಿ ಸಂಪೂರ್ಣವಾಗಿ ಕೊಚ್ಚಿಹೋಗಿದೆ.

ಸೇತುವೆ ಕೊಚ್ಚಿಹೋಗಿರುವುದು ಮತ್ತು ಹೆದ್ದಾರಿಯ ಹಲವೆಡೆ ಭಾರಿ ಭೂಕುಸಿತ ಸಂಭವಿಸಿರುವುದರಿಂದ ಡಾರ್ಜಿಲಿಂಗ್-ಸಿಲಿಗುರಿ ನಡುವಿನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಮಾರ್ಗದಲ್ಲಿ ನೂರಾರು ವಾಹನಗಳು ಮತ್ತು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಅಧಿಕಾರಿಗಳು ಪ್ರವಾಸಿಗರಿಗೆ ಸದ್ಯಕ್ಕೆ ಈ ಮಾರ್ಗದಲ್ಲಿ ಪ್ರಯಾಣಿಸದಂತೆ ಮುನ್ನೆಚ್ಚರಿಕೆ ನೀಡಿದ್ದಾರೆ.

(Video Source: ANI) 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ; ಇಲ್ಲಿದೆ ಮಾಹಿತಿ – Kannada News | MLC Elections: Several Factors Behind JDS MLAs’ Cross Voting

ಬೆಂಗಳೂರು, ಜೂನ್​​ 19: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಡ್ಡಮತದಾನದಿಂದ ತೀವ್ರ ಆಘಾತ ಎದುರಾಗಿದೆ.  ನಾಲ್ಕರಿಂದ ಐದು ಜೆಡಿಎಸ್ ಶಾಸಕರು ಅಡ್ಡಮತದಾನ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದ್ದು, ಇದು ಪಕ್ಷದ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದೆ.ಈ ಅಡ್ಡಮತದಾನಕ್ಕೆ ಹಲವು ಆಂತರಿಕ ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ಪಕ್ಷದೊಳಗಿನ ಗುಂಪುಗಾರಿಕೆ, ನಾಯಕತ್ವದ ಕೊರತೆ, ಹಿರಿಯ ನಾಯಕರ ಮನವೊಲಿಕೆಯಲ್ಲಿನ ವಿಫಲತೆ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ಶಾಸಕರ ಅಸಮಾಧಾನ ಪ್ರಮುಖವಾಗಿವೆ. ಹೆಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾದ ನಂತರ ರಾಜ್ಯದಲ್ಲಿ ನಾಯಕತ್ವದ ಕೊರತೆಯೂ ಎದ್ದುಕಾಣುತ್ತಿರುವ ಬಗ್ಗೆ ಮಾತುಗಳು ಕೇಳಿಬಂದಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link