All posts by nagaraj11081993

ಹಿಂದೂ ಯುವತಿ ಅಪಹರಣ ಕೇಸ್​​ಗೆ ಟ್ವಿಸ್ಟ್: ಮುಸ್ಲಿಂ ಯುವಕನ ವಿರುದ್ಧ ಕೇಸ್ ಬುಕ್, ಆಗಿದ್ದೇನು? – Kannada News | Twist in Hindu girl Alleged Kidnapping Case: Police Register Case Against Muslim Youth, What Happened

ಪೊಲೀಸ್​ ಠಾಣೆ ಮುಂದೆ ಹಿಂದೂ ಕಾರ್ಯಕರ್ತರ ಪ್ರತಿಭಟನೆImage Credit source: tv9 kannada

ಕಾರವಾರ, ಜೂನ್​​ 19: ಮುರಿನ ಕಟ್ಟೆ ವಿವಾದ ತನ್ನಗಾಯಿತು ಎನ್ನುವಷ್ಟರಲ್ಲಿ, ಮುಸ್ಲಿಂ ಯುವಕನಿಂದ (Muslim Boy) ಹಿಂದೂ ಯುವತಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾರಂಭದಲ್ಲಿ ಪೊಲೀಸರ ಗಮನಕ್ಕೆ ತಂದಿದ್ದ ಹಿಂದೂ ಮುಖಂಡರ ಮೇಲೇ ಕೇಸ್ ದಾಖಲಿಸಲಾಗಿತ್ತು. ಆದರೆ ಹಿಂದೂ ಮುಖಂಡರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತಿದ್ದಂತೆ ಪ್ರತಿ ದೂರು ದಾಖಲಿಸಿಕೊಂಡು ಇದೀಗ ಮುಸ್ಲಿಂ ಯುವಕನನ್ನ ಬಂಧಿಸಲಾಗಿದೆ (Arrested).

ಮುಖ್ಯಾಂಶಗಳು

  • ಠಾಣೆಗೆ ಮುತ್ತಿಗೆ ಹಾಕುತ್ತಿದ್ದಂತೆ ಕೌಂಟರ್ ಕೇಸ್ ದಾಖಲು
  • ಯುವಕನ ವಿರುದ್ಧ ಯುವತಿ ದೂರು
  • ಲೈಂಗಿಕ ದೌರ್ಜನ್ಯ ಕೇಸ್​ ದಾಖಲು

ನಡೆದಿದ್ದೇನು?

ಭಟ್ಕಳದ ಅನಪಾಲ್ ಸೂಪರ್ ಮಾರ್ಕೆಟ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಿಂದೂ ಯುವತಿಯನ್ನು ಅದೇ ಸೂಪರ್ ಮಾರ್ಕೆಟ್​ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಶಾಹೀದ್ ಪ್ರೀತಿಸುತ್ತಿದ್ದ. ನಿನ್ನೆ ಮಾತನಾಡಬೇಕು ಎಂದು ಯುವತಿಯನ್ನು ಸೂಪರ್ ಮಾರ್ಕೆಟ್​​ನಿಂದ ಕಾರಿನಲ್ಲಿ ಕೂರಿಸಿಕೊಂಡು ಸಾಗರ ರಸ್ತೆಯತ್ತ ತೆರಳಿದ್ದ. ಈ ವೇಳೆ ಕಾರು ಕೈಕೊಟ್ಟಿದ್ದು, ಅಲ್ಲಿ ಬರುತ್ತಿದ್ದ ಹಿಂದೂ ಕಾರ್ಯಕರ್ತರು ಕಾರಿನಲ್ಲಿ ಕುಳಿತಿರುವ ಯುವತಿಯನ್ನ ಗಮನಿಸಿದ್ದಾರೆ. ವಿಚಾರಿಸಿದಾಗ ಆತ ಬಲವಂತವಾಗಿ ಕರೆತಂದಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಪೊಲೀಸರನ್ನ ಕರೆಸಿ ಇಬ್ಬರನ್ನ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ತಣ್ಣಗಾಗಿದ್ದ ಭಟ್ಕಳದಲ್ಲಿ ಮತ್ತೆ ಕೊಮು ಸಂಘರ್ಷ: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

ಇತ್ತ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಶಾಹೀದ್ ತಮ್ಮ ಮೇಲೆ ಹಿಂದೂ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದಾನೆ. ಈ ಸಂಬಂಧ ಹಿಂದೂ ಕಾರ್ಯಕರ್ತರಾದ ಶ್ರೀಕಾಂತ್ ನಾಯ್ಕ ಸೇರಿ ನಾಲ್ಕು ಜನರ ಮೇಲೆ ಪ್ರಕರಣ ದಾಖಲಾಗಿದೆ. ಇನ್ನು ಈ ವೇಳೆ ಯುವತಿ ದೂರನ್ನ ಸ್ವೀಕರಿಸದೇ ಠಾಣೆಯ ಸಿಪಿಐ ಕೇವಲ ಯುವಕನ ದೂರು ಮಾತ್ರ ಸ್ವೀಕರಿಸಿದ್ದು, ಹಿಂದೂ ಕಾರ್ಯಕರ್ತರಲ್ಲಿ ಅಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರ ಈ ನಿರ್ಧಾರವನ್ನ ಖಂಡಿಸಿ ಹಿಂದೂಪರ ಕಾರ್ಯಕರ್ತರು ಠಾಣೆಯಲ್ಲಿ ರಾತ್ರೋರಾತ್ರಿ ಪ್ರತಿಭಟಿಸಿ ಪ್ರಕರಣವನ್ನ ಹಿಂಪಡೆಯುವಂತೆ ಆಗ್ರಹಿಸಿದರು.

ಯುವಕನ ವಿರುದ್ಧವೇ ಯುವತಿ ದೂರು

ಇನ್ನು ಕೇವಲ ಮುಸ್ಲಿಂ ಯುವಕನ ದೂರನ್ನ ಮಾತ್ರ ತೆಗೆದುಕೊಂಡದ್ದಕ್ಕೆ ಹಿಂದೂಪರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರಕರಣಕ್ಕೆ ಬಿಗ್ ಟ್ಟಿಸ್ಟ್ ಸಿಕ್ಕಿದೆ. ಶಾಹೀದ್ ತನ್ನನ್ನು ಬಲವಂತವಾಗಿ ಅಪಹರಣ ಮಾಡಿ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಇದೀಗ ಈ ದೂರು ಆಧರಿಸಿ ಆರೋಪಿ ಶಾಹೀದ್​ನನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಎರಡು ಕಡೆ ದೂರು, ಪ್ರತಿ ದೂರುಗಳು ದಾಖಲಾಗಿವೆ.

ಇದನ್ನೂ ಓದಿ: ಪೊಲೀಸರ ಕೊರಳ ಪಟ್ಟಿ ಹಿಡಿದು ರಂಪಾಟ: ಜೀಪ್​​​​​​​ನಿಂದ ಇಳಿಯದ PSI ಸಸ್ಪೆಂಡ್, 8 ಜನ ಸಿಬ್ಬಂದಿ ಎತ್ತಂಗಡಿ

ಸದ್ಯ ಶಾಹೀದ್ ಹಿಂದೂ ಸಂಘಟನೆ ವಿರುದ್ಧ ದೂರು ನೀಡಿದರೆ, ಯುವತಿ ಶಾಹೀದ್ ವಿರುದ್ಧ ದೂರು ನೀಡಿದ್ದು, ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾಳೆ. ಸದ್ಯ ಪ್ರಕರಣ ಎರಡು ಕೋಮು ಗುದ್ದಾಟಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Optical Illusion: ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್; ಈ ಮೂವರಲ್ಲಿ ಬಾಸ್ ಯಾರೆಂದು ಹೇಳಬಲ್ಲಿರಾ – Kannada News | Optical Illusion: Can you identify who is the boss among the three people

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: kizlarsoruyor.com

ಈಗಂತೂ ಆಪ್ಟಿಕಲ್‌ ಇಲ್ಯೂಷನ್‌ (Optical Illusion), ಬ್ರೈನ್‌ ಟೀಸರ್‌ನಂತಹ ಒಗಟಿನ ಆಟಗಳು ಟ್ರೆಂಡಿಂಗ್‌ನಲ್ಲಿದೆ. ಬುದ್ಧಿವಂತಿಕೆಗೆ ಸವಾಲೊಡ್ಡುವಂತಹ ಇಂತಹ ಆಟಗಳನ್ನು ಆಡುವುದೆಂದರೆ ಹಲವರಿಗೆ ಇಷ್ಟ, ಇನ್ನು ಕೆಲವರಿಗೆ ಕಷ್ಟ. ಇದೀಗ ವೈರಲ್ ಆಗಿರುವ ಆಪ್ಟಿಕಲ್‌ ಇಲ್ಯೂಷನ್‌ ಮೂವರು ವ್ಯಕ್ತಿಗಳಿದ್ದಾರೆ. ಈ ಮೂವರಲ್ಲಿ ಬಾಸ್ ಯಾರೆಂದು ಗುರುತಿಸುವುದೇ ಇಲ್ಲಿರುವ ಸವಾಲು. ಈ ಒಗಟನ್ನು ಹತ್ತು ಸೆಕೆಂಡುಗಳೊಳಗೆ ಬಿಡಿಸಿ ನೋಡೋಣ.

ಈ ಚಿತ್ರದಲ್ಲಿ ಏನು ಕಾಣಿಸಿತು?

ಈ ಇಲ್ಯೂಷನ್ ಚಿತ್ರ ಕೇವಲ ಬುದ್ಧಿವಂತಿಕೆಗೆ ಸವಾಲು ನೀಡುವುದು ಮಾತ್ರವಲ್ಲದೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಈ ಇಲ್ಯೂಷನ್ ಚಿತ್ರದಲ್ಲಿ ಆಫೀಸಿನ ರೂಮ್ ಇರುವುದನ್ನು ಗಮನಿಸಬಹುದು. ಇಲ್ಲಿ ಮೂವರು ವ್ಯಕ್ತಿಗಳಿದ್ದಾರೆ. ಒಬ್ಬ ವ್ಯಕ್ತಿ ಬಾಸ್ ಕುಳಿತುಕೊಳ್ಳುವ ಮೇಜಿನ ಬಳಿ ನಿಂತಿದ್ದಾನೆ. ಇನ್ನೊಬ್ಬ ಟೇಬಲ್ ಬಳಿ ಕುಳಿತುಕೊಂಡಿದ್ದಾನೆ. ಮೂರನೇಯವನು ನಿಂತುಕೊಂಡಿದ್ದಾನೆ. ಮೇಜಿನ ಬಳಿ ಇರುವ ವ್ಯಕ್ತಿ ಏನನ್ನೋ ಹೇಳುತ್ತಿದ್ದು, ಉಳಿದ ಇಬ್ಬರು ಕೇಳಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಾಸ್ ಯಾರೆಂದು ಗುರುತಿಸಬೇಕು. ಈ ಒಗಟು ಬಿಡಿಸಲು ರೆಡಿ ಇದ್ದರೆ ಇದೀಗ ನಿಮ್ಮ ಸಮಯ ಆರಂಭವಾಗುತ್ತದೆ. ನೀವು ಈ ಟ್ರಿಕ್ಕಿ ಒಗಟಿನ ಸವಾಲನ್ನು ಸ್ವೀಕರಿಸಿದ್ದೀರಾ ಎಂದರ್ಥ.

ಇದನ್ನೂ ಓದಿ: ನಿಮಗೊಂದು ಸವಾಲ್; ಈ ಚಿತ್ರದಲ್ಲಿರುವ ಕಳ್ಳ ಬೆಕ್ಕನ್ನು ಜಸ್ಟ್ 10 ಸೆಕೆಂಡುಗಳಲ್ಲಿ ಗುರುತಿಸಿ

ಬಾಸ್‌ನ್ನು ಗುರುತಿಸಲು ಸಾಧ್ಯವಾಯಿತೇ?

ಎಷ್ಟೇ ತಲೆ ಉಪಯೋಗಿಸಿದ್ರು ಬಾಸ್ ಯಾರೆಂದು ಗುರುತಿಸಲು ಸಾಧ್ಯವಾಗುತ್ತಿಲ್ಲವೇ. ನಿಮಗೆ ಮಾತ್ರವಲ್ಲ, ನೂರರಲ್ಲಿ ತೊಂಭತ್ತು ಜನರು ಈ ಒಗಟು ಬಿಡಿಸುವಲ್ಲಿ ವಿಫಲರಾಗುತ್ತಾರೆ. ಈ ಒಗಟಿನ ಉತ್ತರವನ್ನು ನಾವೇ ಉತ್ತರ ಹೇಳುತ್ತೇವೆ. ಬಿಳಿ ಶರ್ಟ್ ಧರಿಸಿದ ವ್ಯಕ್ತಿಯ ಬ್ಲೇಜರ್ ಬಾಸ್ ಮೇಜಿನ ಬಳಿಯಿರುವ ಕುರ್ಚಿಯ ಮೇಲೆ ಇದೆ. ಹೀಗಾಗಿ ಬಿಳಿ ಶರ್ಟ್ ಧರಿಸಿ ನಿಂತಿರುವ ವ್ಯಕ್ತಿಯೇ ಬಾಸ್.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಡಾಖ್​​ಗೆ ಪ್ರವಾಸ ಹೋಗುತ್ತೀರಾ? ಪ್ಲಾಸ್ಟಿಕ್ ಬಳಸಿದರೆ, ಕಸ ಎಸೆದರೆ ದಂಡ ಕಟ್ಟಬೇಕು! – Kannada News | Ladakh imposes Complete ban on single use plastic sets Rs 10,000 fine for Violation

ಲಡಾಖ್, ಜೂನ್ 19: ಲಡಾಖ್‌ನಲ್ಲಿ ಪರಿಸರ ಸಂರಕ್ಷಣೆಗಾಗಿ ಏಕಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ಭಾರಿ ಮೊತ್ತದ ದಂಡ ವಿಧಿಸಲು ನಿರ್ಧರಿಸಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ (Ladakh) ಸೂಕ್ಷ್ಮ ಹಿಮಾಲಯನ್ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಅಲ್ಲಿನ ಆಡಳಿತ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. ಗುರುತಿಸಲಾದ ಎಲ್ಲಾ ರೀತಿಯ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ಬರೋಬ್ಬರಿ 10,000 ರೂ.ವರೆಗೆ ಭಾರಿ ದಂಡ ವಿಧಿಸಲು ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ.

ಲಡಾಖ್ ಅತ್ಯಂತ ಸೂಕ್ಷ್ಮ ಪರಿಸರ ವಲಯವನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಪ್ಲಾಸ್ಟಿಕ್ ಬಾಟಲಿಗಳು, ಕ್ಯಾರಿ ಬ್ಯಾಗ್‌ಗಳು ಮತ್ತು ತಿಂಡಿಗಳ ಪ್ಯಾಕೆಟ್‌ಗಳು ಎಲ್ಲೆಂದರಲ್ಲಿ ಬಿದ್ದಿರುವುದು ಅಲ್ಲಿನ ನೈಸರ್ಗಿಕ ಸೌಂದರ್ಯ ಮತ್ತು ಜೀವವೈವಿಧ್ಯತೆಗೆ ಮಾರಕವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಣಾಯಕ ಆದೇಶ ಹೊರಡಿಸಲಾಗಿದೆ. ಹೊಸ ಆದೇಶದ ಪ್ರಕಾರ ಕೆಳಗಿನ ವಸ್ತುಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು, ಪ್ಲಾಸ್ಟಿಕ್ ಚಮಚ, ಕಪ್ ಮತ್ತು ಪ್ಲೇಟ್‌ಗಳು, ಪ್ಲಾಸ್ಟಿಕ್ ಕಡ್ಡಿಗಳನ್ನು ಹೊಂದಿರುವ ಇಯರ್-ಬಡ್ಸ್ ಮತ್ತು ಬಲೂನ್‌ಗಳು, ಸಿಗರೇಟ್ ಪ್ಯಾಕೆಟ್‌ಗಳು ಮತ್ತು ಸಿಹಿ ತಿಂಡಿಗಳ ಪೆಟ್ಟಿಗೆಗಳ ಸುತ್ತ ಸೀಲ್ ಮಾಡುವ ಪ್ಲಾಸ್ಟಿಕ್ ಫಿಲ್ಮ್‌ಗಳು, 100 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‌ಗಳನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿ ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬಾಟಲ್ ಬಳಕೆ ಬ್ಯಾನ್: ಸಿಎಂ ಮಹತ್ವದ ಆದೇಶ

ಹೊಸ ನಿಯಮಾವಳಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಸ್ಥಳಗಳು, ನದಿ ತೀರಗಳು ಮತ್ತು ಪ್ರವಾಸಿ ತಾಣಗಳಲ್ಲಿ ಕಸ ಎಸೆಯುವ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಸ್ಥಳದಲ್ಲೇ ಭಾರಿ ಮೊತ್ತದ ದಂಡ ವಿಧಿಸಲಾಗುತ್ತದೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವ ಅಥವಾ ಬಳಸುವ ಹೋಟೆಲ್, ರೆಸ್ಟೋರೆಂಟ್ ಮತ್ತು ಅಂಗಡಿಕಾರರಿಗೆ ಭಾರಿ ದಂಡದ ಜೊತೆಗೆ ಅವರ ಪರವಾನಗಿಯನ್ನು ರದ್ದುಗೊಳಿಸುವ ಎಚ್ಚರಿಕೆ ನೀಡಲಾಗಿದೆ. ಪದೇ ಪದೇ ನಿಯಮ ಉಲ್ಲಂಘಿಸುವವರಿಗೆ ದಂಡದ ಪ್ರಮಾಣವನ್ನು ದುಪ್ಪಟ್ಟುಗೊಳಿಸಲಾಗುತ್ತದೆ.

ಲಡಾಖ್‌ಗೆ ಬರುವ ಪ್ರವಾಸಿಗರು ತಮ್ಮೊಂದಿಗೆ ಯಾವುದೇ ರೀತಿಯ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ತರದಂತೆ ಸೂಚಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದ್ದು, ಪರ್ಯಾಯವಾಗಿ ಬಿದಿರು ಅಥವಾ ಬಟ್ಟೆಯ ಬ್ಯಾಗ್‌ಗಳು ಮತ್ತು ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ಬಳಸಲು ಉತ್ತೇಜಿಸಲಾಗುತ್ತಿದೆ. ಲಡಾಖ್‌ನ ಹಿಮಭರಿತ ಬೆಟ್ಟಗಳು ಮತ್ತು ಶುದ್ಧವಾದ ಪರಿಸರವನ್ನು ಮುಂದಿನ ಪೀಳಿಗೆಗಾಗಿ ಉಳಿಸಲು ಈ ಕಠಿಣ ನಿರ್ಧಾರ ಅಗತ್ಯವಾಗಿದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು ಇದಕ್ಕೆ ಪೂರ್ಣ ಸಹಕಾರ ನೀಡಬೇಕು ಎಂದು ಸ್ಥಳೀಯ ಆಡಳಿತ ಮನವಿ ಮಾಡಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ; ಪಾಕಿಸ್ತಾನ-ಚೀನಾಗೆ ವಿದೇಶಾಂಗ ಸಚಿವಾಲಯ ಚಾಟಿ

ಲಡಾಖ್ ಜಾಗತಿಕ ಮಟ್ಟದ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಪ್ಲಾಸ್ಟಿಕ್ ಕಸದಿಂದಾಗಿ ಇಲ್ಲಿನ ನದಿಗಳು, ಕಣಿವೆಗಳು ಮತ್ತು ಅಪರೂಪದ ವನ್ಯಜೀವಿಗಳ ಆವಾಸಸ್ಥಾನಗಳು ಕಲುಷಿತಗೊಳ್ಳುತ್ತಿವೆ. ನೈಸರ್ಗಿಕ ಸೌಂದರ್ಯ ಹಾಗೂ ಶುದ್ಧ ಗಾಳಿಯನ್ನು ಉಳಿಸಲು ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಡಾಖ್‌ಗೆ ಪ್ರಯಾಣಿಸುವ ಪ್ರವಾಸಿಗರು ತಮ್ಮೊಂದಿಗೆ ಯಾವುದೇ ರೀತಿಯ ಏಕಬಳಕೆ ಪ್ಲಾಸ್ಟಿಕ್ ಅಥವಾ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ತರದಂತೆ ವಿನಂತಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದ್ದು, ಪರ್ಯಾಯವಾಗಿ ಬಟ್ಟೆಯ ಬ್ಯಾಗ್‌ಗಳು ಮತ್ತು ಮರುಬಳಕೆ ಮಾಡಬಹುದಾದ ಸ್ಟೀಲ್ ಅಥವಾ ತಾಮ್ರದ ಬಾಟಲಿಗಳನ್ನು ಬಳಸಲು ಕೋರಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಮೊಬೈಲ್ ಹುಷಾರು… ಮಾಜಿ ಪ್ರಧಾನಿ ಪುತ್ರನಿಗೆ ಕೋಟಿಗಟ್ಟಲೆ ಹಣ ಪಂಗನಾಮ; ಕಾಂಟ್ಯಾಕ್ಟ್ ಲಿಸ್ಟ್​ನಲ್ಲೇ ನಂಬರ್ ಬದಲಿಸಿದ್ದ ಖದೀಮರು – Kannada News | Ex PM’s son loses over Rs 7 crore to cybercriminals who hacked employee’s phone

ಸೈಬರ್ ಕ್ರೈಮ್Image Credit source: Philip Dulian via Getty Images

ನವದೆಹಲಿ, ಜೂನ್ 19: ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರ ಪುತ್ರ ಹಾಗೂ ಮಾಜಿ ರಾಜ್ಯಸಭಾ ಸಂಸದರಾದ ನರೇಶ್ ಗುಜ್ರಾಲ್ (Naresh Gujral) ಅವರು ಸೈಬರ್ ವಂಚನೆಗೆ ತುತ್ತಾಗಿದ್ದಾರೆ. ಗಾರ್ಮೆಂಟ್ಸ್ ಫ್ಯಾಕ್ಟರಿ ನಡೆಸುತ್ತಿರುವ ನರೇಶ್ ಗುಜ್ರಾಲ್ ಅವರ ಅಕೌಂಟ್​ನಿಂದ 7.8 ಕೋಟಿ ರೂ ಹಣ ಲಪಟಾಯಿಸಿದ್ದಾರೆ. ಈ ವಂಚನೆ ಆಗಿರುವುದು ದೆಹಲಿಯಲ್ಲಿ ಜೂನ್ 12ರಿಂದ 16ರ ಅವಧಿಯಲ್ಲಿ. ಪೊಲೀಸರು ಸದ್ಯಕ್ಕೆ 4 ಕೋಟಿ ರೂ ಹಣವನ್ನು ರಿಕವರ್ ಮಾಡಲು ಯಶಸ್ವಿಯಾಗಿದ್ದಾರೆ. ಆದರೆ, ವಂಚಕರು ನರೇಶ್ ಗುಜ್ರಾಲ್ ಅವರ ಹಣ ಲಪಟಾಯಿಸಲು ಬಳಸಿದ ತಂತ್ರ ಮತ್ತು ಮಾರ್ಗ ನಿಜಕ್ಕೂ ಬೆಚ್ಚಿಬೀಳಿಸುವಂಥದ್ದು. ಇದು ಯಾರಿಗೆ ಬೇಕಾದರೂ ಆಗಬಹುದಾದ ವಂಚನೆ.

ಉದ್ಯೋಗಿಯ ಮೊಬೈಲ್ ನಂಬರ್ ಹ್ಯಾಕ್ ಮಾಡಿದ್ರು

ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರ ಮಗ ನರೇಶ್ ಗುಜ್ರಾಲ್ ಅವರು ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದನ್ನು ಇಟ್ಟಿದ್ದಾರೆ. ವಂಚಕರು ಈ ಫ್ಯಾಕ್ಟರಿಯ ಉದ್ಯೋಗಿಯೊಬ್ಬರಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿದ್ದಾರೆ. ಅದನ್ನು ಒತ್ತಿದ್ದೇ ಆಯ್ತು, ಆ ಉದ್ಯೋಗಿಯ ಫೋನ್ ಅನ್ನು ವಂಚಕರು ಹ್ಯಾಕ್ ಮಾಡಿದ್ದಾರೆ.

ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿ ನಂಬರನ್ನೇ ಬದಲಿಸಿದ್ರು…

ಹ್ಯಾಕ್ ಮಾಡಿದ ನಂತರ, ಆ ಉದ್ಯೋಗಿಯ ಮೊಬೈಲ್​ನಲ್ಲಿರುವ ಕಾಂಟ್ಯಾಕ್ಟ್ ಲಿಸ್ಟ್​ಗೆ ಹೋಗಿ ನರೇಶ್ ಗುಜ್ರಾಲ್ ಅವರ ಫೋನ್ ನಂಬರ್​ಗೆ ಹೋಗಿ ಎಡಿಟ್ ಮಾಡಿದ್ದಾರೆ. ಅಲ್ಲಿ ವಂಚಕರು ಗುಜ್ರಾಲ್ ನಂಬರ್ ಜಾಗಕ್ಕೆ ತಮ್ಮ ಮೊಬೈಲ್ ನಂಬರ್ ಸೇರಿಸಿದ್ದಾರೆ. ಆ ನಂಬರ್​ನ ಪ್ರೊಫೈಲ್ ಚಿತ್ರ, ಹೆಸರು ಎಲ್ಲವೂ ನರೇಶ್ ಗುಜ್ರಾಲ್ ಅವರದ್ದೇ ಹಾಕಲಾಗಿತ್ತು. ಹೀಗಾಗಿ, ಯಾರಿಗೂ ಅನುಮಾನ ಬಾರದಂತಾಗಿತ್ತು.

ಇದನ್ನೂ ಓದಿ: ಅಕ್ಸೆಂಚರ್ ಕೊಟ್ಟ ಒಂದು ರಿಪೋರ್ಟ್​ಗೆ ಭಾರತದ ಷೇರುಬಜಾರು ಅಲ್ಲೋಲಕಲ್ಲೋಲ; ಶುಕ್ರವಾರ 2 ಲಕ್ಷ ಕೋಟಿ ರೂ ನಷ್ಟ

ಹಣ ವರ್ಗಾಯಿಸುವ ಮೆಸೇಜ್​ಗಳು

ಈಗ ವಂಚಕರು ಉದ್ಯೋಗಿಗೆ ಮೆಸೇಜ್ ಕಳುಹಿಸತೊಡಗುತ್ತಾರೆ. ಅಕೌಂಟ್ ನಂಬರ್ ಕೊಟ್ಟು ಅದಕ್ಕೆ ತುರ್ತಾಗಿ ಆರ್​ಟಿಜಿಎಸ್ ಮಾಡುವಂತೆ ಸೂಚಿಸುತ್ತಾರೆ. ಯಾವುದೋ ಬ್ಯುಸಿನೆಸ್​ಗೆ ಸಂಬಂಧಿಸಿದ್ದಿರಬಹುದು ಎಂದು ಉದ್ಯೋಗಿಯು ಹಣವನ್ನು ಆರ್​ಟಿಜಿಎಸ್ ಮಾಡುತ್ತಾರೆ. ಹೀಗೆ ನಾಲ್ಕು ಬಾರಿ ಆರ್​ಟಿಜಿಎಸ್ ಮೂಲಕ ಹಣ ಟ್ರಾನ್ಸ್​ಫರ್ ಮಾಡಲಾಗುತ್ತದೆ. ಟ್ರಾನ್ಸ್​ಫರ್ ಆದ ಒಟ್ಟು ಹಣ 7.8 ಕೋಟಿ ರೂ ಆಗಿದೆ.

ಕುತೂಹಲ ಎಂದರೆ, ಇಷ್ಟು ದೊಡ್ಡ ಮಟ್ಟದ ಟ್ರಾನ್ಸಾಕ್ಷನ್ ನಡೆಯುತ್ತಿರುವಾಗ ಬ್ಯಾಂಕಿನವರಿಗೆ ಅನುಮಾನ ಬರುತ್ತದೆ. ಫ್ಯಾಕ್ಟರಿಯ ಸಿಎಫ್​ಒ ಅವರಿಗೆ ತಿಳಿಸುತ್ತಾರೆ. ಹಣ ವರ್ಗಾವಣೆಗೆ ಖುದ್ದು ಗುಜ್ರಾಲ್ ಅವರೇ ಮೆಸೇಜ್ ಕಳುಹಿಸಿದ್ದೆಂದು ಗ್ರಹಿಸಿ ಸಿಎಫ್​ಒ ಕೂಡ ಬ್ಯಾಂಕಿನವರಿಗೆ ದೃಢೀಕರಿಸುತ್ತಾರೆ.

ವಂಚನೆ ಬಯಲಾಗಿದ್ದು ಹೇಗೆ?

ಆದರೆ, ಕಂಪನಿಯ ಅಧಿಕಾರಿಯೊಬ್ಬರಿಗೆ ಏನೋ ಸಂದೇಹ ಬಂದು, ನರೇಶ್ ಗುಜ್ರಾಲ್ ಅವರ ಮಗಳನ್ನು ಸಂಪರ್ಕಿಸಿ, ಈ ಪೇಮೆಂಟ್​ಗಳನ್ನು ಪರಿಶೀಲಿಸಬೇಕೆಂದು ಕೇಳುತ್ತಾರೆ. ಆಗ ಈ ವಂಚನೆ ಪ್ರಕರಣ ಬಯಲಿಗೆ ಬರುತ್ತದೆ. ಆಕೆ ತನ್ನ ತಂದೆಯನ್ನು ಸಂಪರ್ಕಿಸಿ ಈ ಪೇಮೆಂಟ್​ಗಳ ಬಗ್ಗೆ ಕೇಳಿದಾಗ, ತಾನು ಅಂಥ ಯಾವುದನ್ನೂ ಕೇಳಿಲ್ಲವೆಂದು ತಿಳಿಸುತ್ತಾರೆ. ಆಗ ಗುಜ್ರಾಲ್ ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುತ್ತಾರೆ.

ಇದನ್ನೂ ಓದಿ: ಇನ್ಸ್​ಟಾ ಸ್ಕ್ರೋಲ್ ಮಾಡುವಾಗ ಬೇಡದ್ದು ಬರುತ್ತಿವೆಯಾ? ನೀವಿಚ್ಛಿಸುವವೇ ಫೀಡ್​ನಲ್ಲಿ ಬರುವಂತೆ ಮಾಡುತ್ತದೆ ಈ ಹೊಸ ಮೆಟಾ ಫೀಚರ್

ವಂಚಕರು ಕೊಟ್ಟಿದ್ದ ನಾಲ್ಕು ಅಕೌಂಟ್​ಗಳು ಬೇರೆ ಬೇರೆ ರಾಜ್ಯಗಳಲ್ಲಿ ಇರುವಂಥವು. ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು (IFSO ಘಟಕ), ವಂಚಕರು ವರ್ಗಾಯಿಸಿಕೊಂಡಿದ್ದ ಹಣದಲ್ಲಿ ಸುಮಾರು ₹4 ಕೋಟಿಗೂ ಅಧಿಕ ಮೊತ್ತವನ್ನು ಆಯಾ ಬ್ಯಾಂಕ್‌ಗಳಲ್ಲಿ ಫ್ರೀಜ್ (Freeze) ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಪೊಲೀಸರು ಈ ಹಣವನ್ನು ವರ್ಗಾಯಿಸಿದ ಖಾತೆಗಳನ್ನು ಪತ್ತೆ ಹಚ್ಚುತ್ತಿದ್ದು, ತನಿಖೆ ಮುಂದುವರಿದಿದೆ. ಸಾರ್ವಜನಿಕರು ಇಂತಹ ಸಂದೇಶಗಳು ಬಂದಾಗ ನೇರವಾಗಿ ಸಂಬಂಧಪಟ್ಟ ವ್ಯಕ್ತಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳುವುದು ಸೂಕ್ತ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಪ್ರಿಯಾಂಕಾ ಉಪೇಂದ್ರಗೂ ಆಗಿತ್ತು ಸೈಬರ್ ಫ್ರಾಡ್

ಪ್ರಿಯಾಂಕಾ ಉಪೇಂದ್ರ ಅವರಿಗೂ ಕಳೆದ ವರ್ಷ ಸೈಬರ್ ವಂಚನೆಯಾಗಿ ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದರು. ಪ್ರಿಯಾಂಕಾ ಅವರ ಮೊಬೈಲ್ ಅನ್ನೇ ಹ್ಯಾಕ್ ಮಾಡಿದ್ದ ದುರುಳರು, ವಿವಿಧ ಜನರಿಗೆ ಹಣ ಕಳುಹಿಸುವಂತೆ ಮೆಸೇಜ್ ಹಾಕಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:40 pm, Fri, 19 June 26

Source link

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ – Kannada News | Guarantee Scheme Revisions: HM Revanna Clarifies, Assures Continuity and Addresses Fund Recovery

ಹಾಸನ, ಜೂನ್​​ 19: ಕರ್ನಾಟಕದಲ್ಲಿ ಜಾರಿಯಲ್ಲಿರುವ ಐದು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಉಂಟಾಗಿರುವ ಆತಂಕವನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ ನಿವಾರಿಸಿದ್ದಾರೆ. ಈ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಅವರು ಹೇಳಿದ್ದು, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಮತ್ತು ಯುವನಿಧಿ ಸೇರಿದಂತೆ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಈವರೆಗೂ ಗೃಹಲಕ್ಷ್ಮಿ ಅಡಿಯಲ್ಲಿ 29 ಕಂತುಗಳನ್ನು ನೀಡಲಾಗಿದ್ದು, ಉಚಿತ ಬಸ್ ಸೇವೆ 600 ಕೋಟಿ ಟ್ರಿಪ್‌ಗಳನ್ನು ದಾಟಿದೆ. ಇದರಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬ ವಿರೋಧ ಪಕ್ಷಗಳ ಆರೋಪ ಸುಳ್ಳಾಗಿದೆ. ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಪ್ಪಾಗಿ ಜಮೆಯಾದ ಸುಮಾರು 114 ಕೋಟಿ ರೂ.ಗಳ ಹಣವನ್ನು ವಸೂಲಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದು ಪರಿಷ್ಕರಣೆಯ ಭಾಗವಾಗಿದ್ದು, ನ್ಯೂನತೆಗಳನ್ನು ಸರಿಪಡಿಸುವ ಗುರಿಯನ್ನು ಹೊಂದಿದೆ. ಯಾರೊಬ್ಬರಿಗೂ ಹಣ ನಿಲ್ಲುವುದಿಲ್ಲ ಎಂದು ರೇವಣ್ಣ ಭರವಸೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2027: ಮರಳಿ ಡೆಲ್ಲಿಗೆ ರಿಷಭ್ ಪಂತ್, ಲಕ್ನೋ ಸೇರಲಿದ್ದಾರೆ ಕುಲ್ದೀಪ್..!

Source link

ಬಸ್‌ನಲ್ಲಿ ಎಸಿ ವ್ಯವಸ್ಥೆ ವೈಫಲ್ಯ: ಪ್ರಯಾಣಿಕನಿಗೆ 13 ಸಾವಿರ ಪರಿಹಾರ ನೀಡಲು ಕೆಎಸ್‌ಆರ್‌ಟಿಸಿಗೆ ಗ್ರಾಹಕ ನ್ಯಾಯಾಲಯ ಆದೇಶ – Kannada News | Bus AC Failure: Consumer Court Orders KSRTC to Pay 13,000 Rupees Compensation to Passenger

ಮಡಿಕೇರಿ, ಜೂನ್​​ 19: ಹಣಕೊಟ್ಟು ಟಿಕೆಟ್​​ ಖರೀದಿಸಿ ಪ್ರಯಾಣಿಸುವ ವೇಳೆ ಬಸ್​​ಗಳ ದುಃಸ್ತಿತಿಯ ಕಾರಣ ಪ್ರಯಾಣಿಕರು ಅನಾನುಕೂಲ ಎದುರಿಸುವ ಪ್ರಕರಣಗಳು ಮೇಲಿಂದ ಮೇಲೆ ಮಡೆಯುತ್ತಲೇ ಇರುತ್ತವೆ. ಆದರೆ ಈ ಬಗ್ಗೆ ಯಾರೂ ಅಷ್ಟೊಂದು ತಲೆ ಕೆಡಸಿಕೊಳ್ಳಲು ಹೋಗುವುದಿಲ್ಲ. ಒಮ್ಮೆ ಆಕ್ರೋಶಗೊಂಡು ಸುಮ್ಮನಾಗುವವರ ಸಂಖ್ಯೆಯೇ ಹೆಚ್ಚು. ಹೀಗಿರುವಾಗ ತನಗಾದ ಅಸೌಕರ್ಯವನ್ನು ಪ್ರಶ್ನಿಸಿದ ಪ್ರಯಾಣಿಕರೋರ್ವರ ಪರ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶ ನೀಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಭರವಸೆ ನೀಡಿದ್ದ ಸೇವೆಯನ್ನು ಇವಿ ಪವರ್ ಪ್ಲಸ್ (EV Power Plus) ಬಸ್‌ನಲ್ಲಿ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ, ಪ್ರಯಾಣಿಕನಿಗೆ 13,000 ಪರಿಹಾರ ಹಾಗೂ ಬಡ್ಡಿ ಪಾವತಿಸುವಂತೆ ಕೊಡಗು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಕೆಎಸ್‌ಆರ್‌ಟಿಸಿಗೆ ಆದೇಶಿಸಿದೆ. ಮಡಿಕೇರಿ ತಾಲೂಕಿನ ಬಿಳಿಗೇರಿ ನಿವಾಸಿ ಸಚಿತ್ ಕೆ.ಎಚ್. ಅವರು 2025ರ ನವೆಂಬರ್ 6ರಂದು ಮಡಿಕೇರಿಯಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಇವಿ ಪವರ್ ಪ್ಲಸ್ ಬಸ್‌ನಲ್ಲಿ ಪ್ರಯಾಣಿಸಿದ್ದರು. ಪ್ರಯಾಣದ ವೇಳೆ ಬಸ್‌ನ ಹವಾನಿಯಂತ್ರಣ (ಎಸಿ) ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಪ್ರಯಾಣಿಕರಿಗೆ ತೀವ್ರ ಅಸೌಕರ್ಯ ಉಂಟಾಗಿತ್ತು. ಈ ಕುರಿತು ಅವರು ಬಸ್ ನಿರ್ವಾಹಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಎಸಿ ಬಸ್​​ ಆಗಿದ್ದ ಕಾರಣ ಕಿಟಕಿಗಳೂ ತೆರೆಯಲು ಬಾರದ ಕಾರಣ ಭಾರಿ ಸಮಸ್ಯೆಯಾಗಿತ್ತು.

ಇದನ್ನೂ ಓದಿ: ವಿದೇಶಿ ಮಹಿಳೆ ಮೇಲೆ ಅತ್ಯಾಚಾರವಾಗಿದ್ದರೆ ಅದು ಬಹಳ ಗಂಭೀರ ವಿಷಯ; ಕರ್ನಾಟಕ ಹೈಕೋರ್ಟ್​​

‘ಸೂಕ್ತ ಪರಿಹಾರ ಒದಗಿಸುವುದು ನಿಗಮದ ಜವಾಬ್ದಾರಿ’

ಈ ಸಂಬಂಧ ಪರಿಹಾರ ಕೋರಿ ಸಚಿತ್​​ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೊಡಗು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ, ಎಸಿ ಬಸ್ ಸೇವೆಗಾಗಿ ಪ್ರಯಾಣಿಕರು ಹೆಚ್ಚುವರಿ ದರ ಹಾಗೂ ತೆರಿಗೆ ಪಾವತಿಸುತ್ತಾರೆ. ಹೀಗಾಗಿ ಎಸಿ ವ್ಯವಸ್ಥೆ ವಿಫಲವಾದರೆ, ಮೈಸೂರು ಬಸ್ ನಿಲ್ದಾಣದಲ್ಲಿ ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸುವುದು ಅಥವಾ ಸೂಕ್ತ ಪರಿಹಾರ ಒದಗಿಸುವುದು ನಿಗಮದ ಜವಾಬ್ದಾರಿಯಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಜೊತೆಗೆ ಪ್ರಯಾಣಿಕನಿಗೆ 13 ಸಾವಿರ ರೂಪಾಯಿ ಪರಿಹಾರ ಮೊತ್ತವನ್ನು ವಾರ್ಷಿಕ 9 ಶೇಕಡಾ ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:48 pm, Fri, 19 June 26

Source link

ಸೆನ್ಸಾರ್ ನಿಯಮ ಉಲ್ಲಂಘನೆ: ‘ಮಾಲಿವುಡ್ ಟೈಮ್ಸ್’ ಚಿತ್ರತಂಡದ ವಿರುದ್ಧ ಎಫ್‌ಐಆರ್ ದಾಖಲು – Kannada News | FIR against Mollywood Times movie makers after CBFC Censor Violations Unapproved Content Screening

ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ್ದ ದೃಶ್ಯಗಳನ್ನು ಚಿತ್ರಮಂದಿರಗಳಲ್ಲಿ ಅಕ್ರಮವಾಗಿ ಪ್ರದರ್ಶಿಸಿದ ಆರೋಪದ ಮೇಲೆ ‘ಮಾಲಿವುಡ್ ಟೈಮ್ಸ್’ (Mollywood Times) ಮಲಯಾಳಂ ಸಿನಿಮಾದ ನಿರ್ಮಾಪಕರು, ನಿರ್ದೇಶಕರು ಮತ್ತು ವಿತರಕರ ವಿರುದ್ಧ ಕೇರಳ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಪ್ರಾದೇಶಿಕ ಕಚೇರಿ ನೀಡಿದ ಅಧಿಕೃತ ದೂರು ಆಧರಿಸಿ ತಿರುವಲ್ಲಂ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ನಂತರ, ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಸಿನಿಮಾದ ಆವೃತ್ತಿಯಲ್ಲಿ ಮಾರ್ಪಾಡು ಮಾಡಿ, ಅನುಮೋದನೆ ಇಲ್ಲದ ದೃಶ್ಯಗಳನ್ನು ಸೇರಿಸಲಾಗಿದೆ ಎಂದು ಮಂಡಳಿ ಆರೋಪಿಸಿದೆ.

ನಸ್ಲೆನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮಾಲಿವುಡ್ ಟೈಮ್ಸ್’ ಚಿತ್ರಕ್ಕೆ ಕೆಲವು ನಿರ್ದಿಷ್ಟ ದೃಶ್ಯಗಳನ್ನು ಕತ್ತರಿಸಲು ಮತ್ತು ಆಕ್ಷೇಪಾರ್ಹ ಸಂಭಾಷಣೆಗಳನ್ನು ಮ್ಯೂಟ್ ಮಾಡಲು ಸೂಚಿಸಿದ ಬಳಿಕವಷ್ಟೇ ಈ ಚಿತ್ರಕ್ಕೆ ‘ಯು/ಎ 16+’ ರೇಟಿಂಗ್ ನೀಡಿತ್ತು. ಆದರೆ, ಚಿತ್ರಮಂದಿರಗಳಲ್ಲಿ ಪ್ರಸಾರ ಆಗುತ್ತಿರುವ ಪ್ರಿಂಟ್‌ಗಳಲ್ಲಿ ಸೆನ್ಸಾರ್ ಮಂಡಳಿಯ ಆದೇಶವನ್ನು ಗಾಳಿಗೆ ತೂರಲಾಗಿದೆ.

ಕತ್ತರಿಸಲಾಗಿದ್ದ ದೃಶ್ಯಗಳನ್ನು ಮತ್ತು ಮ್ಯೂಟ್ ಮಾಡಲಾಗಿದ್ದ ಅಶ್ಲೀಲ ಪದಗಳನ್ನು ಮರುಸೇರ್ಪಡೆ ಮಾಡಿ ಪ್ರದರ್ಶಿಸಲಾಗುತ್ತಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಚಿತ್ರಮಂದಿರಗಳಿಗೆ ಬೇರೆಯದೇ ಆದ ಅನ್-ಸೆನ್ಸಾರ್ಡ್ ಆವೃತ್ತಿಯನ್ನು ವಿತರಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸಿನಿಮಾಟೋಗ್ರಾಫ್ ಕಾಯ್ದೆಯ ಸೆಕ್ಷನ್ 7(1)(a)(ii) ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.

ಭಾರತದಲ್ಲಿ ಸೆನ್ಸಾರ್ ನಿಯಮಗಳನ್ನು ಉಲ್ಲಂಘಿಸುವುದು ಗಂಭೀರ ಅಪರಾಧವಾಗಿದೆ. ಈ ಕಾಯ್ದೆಯಡಿ, ಸೆನ್ಸಾರ್ ಆಗದ ಚಿತ್ರವನ್ನು ಪ್ರದರ್ಶಿಸುವುದು ಅಥವಾ ಪ್ರಮಾಣೀಕರಣದ ನಂತರ ಚಿತ್ರದಲ್ಲಿ ಕಾನೂನುಬಾಹಿರವಾಗಿ ಬದಲಾವಣೆ ಮಾಡಿದರೆ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೆ, ನಿಯಮ ಉಲ್ಲಂಘಿಸಿದ ಚಿತ್ರದ ಪ್ರಿಂಟ್‌ಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ನ್ಯಾಯಾಲಯಕ್ಕಿದೆ.

ಇದನ್ನೂ ಓದಿ: ‘ಅದಕ್ಕೂ ನಮಗೂ ಸಂಬಂಧವಿಲ್ಲ’; ‘ಟಾಕ್ಸಿಕ್’ ಟೀಸರ್ ದೂರಿಗೆ ಸೆನ್ಸಾರ್ ಮಂಡಳಿಯ ಪ್ರತಿಕ್ರಿಯೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೀಘ್ರದಲ್ಲೇ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಯಲಿದ್ದಾರೆ. ಎಫ್‌ಐಆರ್‌ನಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕ ಅಭಿನವ್ ಸುಂದರ್ ನಾಯಕ್, ವಿತರಕರು, ಡಿಜಿಟಲ್ ಸರ್ವೀಸ್ ಪ್ರವೈಡರ್ ಮತ್ತು ಚಿತ್ರಮಂದಿರಗಳ ಮಾಲೀಕರ ಹೆಸರನ್ನು ಸೇರಿಸಲಾಗಿದೆ. ‘ಮಾಲಿವುಡ್ ಟೈಮ್ಸ್’ ಸಿನಿಮಾದಲ್ಲಿ ಚಿತ್ರರಂಗದ ಒಳಗಿನ ಕರಾಳ ಮುಖವನ್ನು ಅನಾವರಣಗೊಳಿಸುವ ಕಥೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು – Kannada News | Vinay Gowda and Rajath talks about Balaramana Dinagalu movie

ವಿನೋದ್ ಪ್ರಭಾಕರ್ (Vinod Prabhakar) ನಟಿಸಿ, ಕೆಎಂ ಚೈತನ್ಯ ನಿರ್ದೇಶನ ಮಾಡಿರುವ ‘ಬಲರಾಮನ ದಿನಗಳು’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್, ಹಾಡುಗಳು ಒಂದೊಂದಾಗಿ ಬಿಡುಗಡೆ ಆಗುತ್ತಿವೆ. ಇತ್ತೀಚೆಗಷ್ಟೆ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಿನಿಮಾನಲ್ಲಿ ವಿನೋದ್ ಪ್ರಭಾಕರ್ ಜೊತೆಗೆ ಬಿಗ್​​ಬಾಸ್ ಗೆಳೆಯರಾದ ವಿನಯ್ ಗೌಡ ಮತ್ತು ಬುಜ್ಜಿ ಸಹ ನಟಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿನಯ್ ಮತ್ತು ಬುಜ್ಜಿ ಒಟ್ಟಿಗೆ ವೇದಿಕೆ ಏರಿ ಸಿನಿಮಾದ ಬಗ್ಗೆ, ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ರಜತ್ (ಬುಜ್ಜಿ) ಸಹ ಸಿನಿಮಾದ ಹಾಡುಗಳನ್ನು ಮೆಚ್ಚಿ ಮಾತನಾಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನನ್ನೊಂದಿಗೆ ಫೋಟೋ ಬೇಕೆಂದು ಮೆಲೋನಿ ಬೇಡಿಕೊಂಡಿದ್ದರು; ಟ್ರಂಪ್ ಹೇಳಿಕೆಗೆ ಸಿಡಿದೆದ್ದ ಇಟಲಿ ಪ್ರಧಾನಿ – Kannada News | Donald Trump Claims Meloni Begged For A Photo with him At G7 Summit Italian PM fights back

ನವದೆಹಲಿ, ಜೂನ್ 19: ಜೂನ್ 15ರಿಂದ 17ರವರೆಗೆ ಫ್ರಾನ್ಸ್‌ನ ಎವಿಯಾನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit) ಅಮೆರಿಕ ಮತ್ತು ಇಟಲಿಯ ನಾಯಕರು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ಇಟಲಿಯ ‘La7 ಟಿವಿ’ ವಾಹಿನಿಗೆ ನೀಡಿದ ವಿಶೇಷ ಫೋನ್ ಸಂದರ್ಶನದಲ್ಲಿ ಟ್ರಂಪ್ (Donald Trump) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಮೆಲೋನಿ ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಅಕ್ಷರಶಃ ಬೇಡಿಕೊಂಡರು. ಆಕೆಗೆ ನನ್ನೊಂದಿಗೆ ಫೋಟೋ ಬೇಕೇ ಬೇಕಿತ್ತು. ನನಗೇನೂ ಆಕೆಯೊಂದಿಗೆ ಫೋಟೋ ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಆದರೆ, ಆಕೆಯನ್ನು ನೋಡಿ ಪಾಪ ಅನಿಸಿದ್ದರಿಂದ ನಾನು ಫೋಟೋ ಕ್ಲಿಕ್ಕಿಸಿಕೊಳ್ಳಲು ಒಪ್ಪಿಕೊಂಡೆ” ಎಂದಿದ್ದರು.

“ಮೆಲೋನಿ ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಬೇಡಿಕೊಂಡಿದ್ದರು” ಎಂದು ಟ್ರಂಪ್ ನೀಡಿರುವ ಹೇಳಿಕೆಯನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತೀವ್ರವಾಗಿ ಖಂಡಿಸಿದ್ದು, “ಇದು ಸಂಪೂರ್ಣ ಸುಳ್ಳು, ಇಟಲಿ ಯಾರ ಬಳಿಯೂ ಬೇಡುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ. ಈ ವಿವಾದದ ಹಿನ್ನೆಲೆಯಲ್ಲಿ ಇಟಲಿಯ ಉಪಪ್ರಧಾನಿ ತಮ್ಮ ಅಮೆರಿಕ ಪ್ರವಾಸವನ್ನೇ ರದ್ದುಗೊಳಿಸಿದ್ದಾರೆ.

ಇತ್ತೀಚೆಗೆ ಈ ರೀತಿ ಅಸಂಬದ್ಧವಾಗಿ ಹೇಳಿಕೆ ನೀಡುತ್ತಾ ವಿವಾದಕ್ಕೀಡಾಗುತ್ತಿರುವ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. “ನಾನು ಮೆಲೋನಿ ಜೊತೆ ಫೋಟೋ ತೆಗೆಸಿಕೊಂಡು, ಮಾತನಾಡಿದ್ದಕ್ಕೇ ಆಕೆ ಧನ್ಯಳಾಗಿರಬೇಕು. ಆಕೆಯೊಂದಿಗೆ ಮಾತನಾಡುವ ಯಾವುದೇ ಅಗತ್ಯ ನನಗಿರಲಿಲ್ಲ” ಎಂದು ಟ್ರಂಪ್ ಲೇವಡಿ ಮಾಡಿದ್ದರು.

ಇದನ್ನೂ ಓದಿ: ಭಾರತದ ಮೇಲೆ ದಾಳಿಯಾದರೆ ಅಮೆರಿಕ ರಕ್ಷಣೆಗೆ ಧಾವಿಸುತ್ತದೆ; ಮೋದಿಗೆ ಟ್ರಂಪ್ ಭರವಸೆ

ಈ ಹೇಳಿಕೆ ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಟ್ರಂಪ್ ಅವರ ಈ ಹೇಳಿಕೆಗೆ ಇಟಲಿ ಪ್ರಧಾನಿ ಮೆಲೋನಿ ಕೂಡ ತಿರುಗೇಟು ನೀಡಿದ್ದಾರೆ. “ಇಟಲಿ ಎಂದಿಗೂ ಯಾರ ಬಳಿಯೂ ಬೇಡುವುದಿಲ್ಲ” ಎಂದು ಟ್ರಂಪ್‌ಗೆ ಮೆಲೋನಿ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ಟ್ರಂಪ್ ಅವರ ಈ ಅಹಂಕಾರದ ಹೇಳಿಕೆಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಸಂಪೂರ್ಣ ಕಟ್ಟುಕಥೆ. ಅಮೆರಿಕ ಅಧ್ಯಕ್ಷರು ತಮ್ಮದೇ ಮಿತ್ರರಾಷ್ಟ್ರಗಳ ನಾಯಕರೊಂದಿಗೆ ಈ ರೀತಿ ನಡೆದುಕೊಳ್ಳುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಅವರು ತಮ್ಮ ಮಿತ್ರರನ್ನು ಅವಮಾನಿಸುತ್ತಿರುವುದು ಇದೇ ಮೊದಲೇನಲ್ಲ. ಪಾಶ್ಚಿಮಾತ್ಯ ದೇಶಗಳ ಮತ್ತು ಅಮೆರಿಕದ ನಿಜವಾದ ಶತ್ರುಗಳ ಮುಂದೆ ಮಣಿಯುವ ಟ್ರಂಪ್ ತನ್ನ ಮಿತ್ರರ ಮುಂದೆ ಈ ರೀತಿ ದರ್ಪ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿ. ಟ್ರಂಪ್ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ನಾನು ಮತ್ತು ಇಟಲಿ ದೇಶ ಎಂದಿಗೂ ಯಾರ ಬಳಿಯೂ ಬೇಡುವುದಿಲ್ಲ” ಎಂದು ಮೆಲೋನಿ ಸಿಡಿದೆದ್ದಿದ್ದಾರೆ.

ಇದನ್ನೂ ಓದಿ: ಸಿಗರೇಟ್ ಬಿಟ್ಟ ಮೆಲೋನಿ, ವಾಚ್ ಮರೆತ ಮ್ಯಾಕ್ರನ್, ಮತ್ತೆ ಮೆಲೋಡಿ ಮೋಡಿ; ಜಿ7 ಶೃಂಗಸಭೆಯ ವೈರಲ್ ಕ್ಷಣಗಳಿವು

ಇನ್ನು, ಟ್ರಂಪ್ ಅವರ ಈ ಹೇಳಿಕೆಯನ್ನು “ಇಡೀ ಇಟಲಿ ದೇಶಕ್ಕೆ ಮಾಡಿದ ಅಪಮಾನ” ಎಂದು ಟೀಕಿಸಿರುವ ಇಟಲಿಯ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಆಂಟೋನಿಯೊ ತಾಜಾನಿ ಟ್ರಂಪ್ ವರ್ತನೆಗೆ ಪ್ರತಿರೋಧವಾಗಿ ಜೂನ್ 21 ಮತ್ತು 22ರಂದು ನಿಗದಿಯಾಗಿದ್ದ ತಮ್ಮ ಅಧಿಕೃತ ಅಮೆರಿಕ ಪ್ರವಾಸವನ್ನು ತಕ್ಷಣವೇ ರದ್ದುಗೊಳಿಸಿದ್ದಾರೆ.

ಅಂದಹಾಗೆ, ಒಂದಾನೊಂದು ಕಾಲದಲ್ಲಿ ಜಾರ್ಜಿಯಾ ಮೆಲೋನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಾಗಿದ್ದರು. ಅಷ್ಟೇ ಅಲ್ಲದೆ, 2025ರಲ್ಲಿ ನಡೆದ ಟ್ರಂಪ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಏಕೈಕ ಯುರೋಪಿಯನ್ ನಾಯಕಿ ಇವರಾಗಿದ್ದರು. ಆದರೆ, ಇತ್ತೀಚೆಗೆ ಪೋಪ್ ಲಿಯೋ ವಿರುದ್ಧ ಟ್ರಂಪ್ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಮತ್ತು ಇರಾನ್ ಯುದ್ಧದ ವಿಷಯದಲ್ಲಿ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಪ್ರಸ್ತುತ ಜಿ7 ಶೃಂಗಸಭೆಯ ಈ ಇಬ್ಬರು ನಾಯಕರ ನಡುವಿನ ಬಿರುಕು ಮತ್ತಷ್ಟು ದೊಡ್ಡದಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link