ಭಿನ್ನ ಪಾತ್ರದಲ್ಲಿ ಸಾಯಿ ಪಲ್ಲವಿ, ಮೊದಲ ಬಾರಿ ರಗಡ್ ಲುಕ್ – Kannada News
ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾವಂತ ಮತ್ತು ಬಲು ಬೇಡಿಕೆಯ ನಟಿ. ಇತರೆ ನಟಿಯರಿಗಿಂತಲೂ ಬಹಳ ಭಿನ್ನ ನಟಿಯಾಗಿರುವ ಸಾಯಿ ಪಲ್ಲವಿ, ಸಿನಿಮಾಗಳ ಆಯ್ಕೆ ವಿಷಯದಲ್ಲಿ ಬಲು ಚ್ಯೂಸಿ. ತಮ್ಮ ಪಾತ್ರಕ್ಕೆ ತೂಕವಿದ್ದರಷ್ಟೆ ಅವರು ಒಪ್ಪಿಕೊಳ್ಳುವುದು. ದೊಡ್ಡ ಸ್ಟಾರ್ ಜೊತೆಗಿನ ಸಿನಿಮಾ ಆಗಿದ್ದರೂ ಸರಿಯೇ ರೀಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಸಂದೇಶವುಳ್ಳ ಚಿತ್ರಗಳಿಗೆ ಮೊದಲ ಆದ್ಯತೆ. ಜಾಹೀರಾತುಗಳಲ್ಲಿ ಯಾವ ಕಾರಣಕ್ಕೂ ನಟಿಸುವುದಿಲ್ಲ, ಸಿನಿಮಾನಲ್ಲಿ ಉಡುವ ಉಡುಗೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ. ಇದೇ ಕಾರಣಕ್ಕೆ…