ಬೆಂಗಳೂರು, ಜೂನ್ 07: ಸಿಎಂ ಡಿ.ಕೆ. ಶಿವಕುಮಾರ್ ಇಂದು ಬೆಂಗಳೂರು ದಕ್ಷಿಣ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಆದ ಬಳಿಕ ಸ್ವಕ್ಷೇತ್ರ ಕನಕಪುರಕ್ಕೆ ಮೊದಲ ಭಾರಿಗೆ ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್ ಹಾರೋಹಳ್ಳಿ ಮತ್ತು ಕನಕಪುರ ತಾಲೂಕಿನಲ್ಲಿ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾದಲಿದ್ದಾರೆ. ವಿಧಾನಸೌಧದ ಮೆಟ್ರೋ ಸ್ಟೇಷನ್‌ನಿಂದ ಕನಕಪುರ ರಸ್ತೆವರೆಗೂ ಮೆಟ್ರೋದಲ್ಲಿ ಸಿಎಂ ಪ್ರಯಾಣಿಸಲಿದ್ದಾರೆ. ಜೀರೋ ಟ್ರಾಫಿಕ್ನಿಂದ ವಾಹನ ಸವಾರರಿಗೆ ಆಗುವ ತೊಂದರೆಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾರೆ. ಕನಕಪುರ ರಸ್ತೆ ತಲುಪಿದ ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ತಮ್ಮ ಪ್ರವಾಸ ಮುಂದುವರೆಸಲಿದ್ದಾರೆ. ಪ್ರವಾಸ ಮುಗಿಸಿ ಇಂದು ರಾತ್ರಿ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಸಿಎಂ ಭೇಟಿ ಹಿನ್ನೆಲೆ ಕ್ಷೇತ್ರಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಲೀಂ ಕುಮಾರ್ (Salim Kumar) ಶನಿವಾರ (ಜೂನ್ 6) ರಾತ್ರಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ನ್ಯುಮೋನಿಯಾ ಹಾಗೂ ಲಿವರ್ (Liver) ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಶನಿವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ 10.43ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಸಲೀಂ ಕುಮಾರ್ ಅವರು ಪತ್ನಿ ಸುನಿತಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪುತ್ರ ಚಂದು ಇತ್ತೀಚೆಗೆ ಸೂಪರ್ ಹಿಟ್ ಆದ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದಲ್ಲಿ ನಟಿಸಿದ್ದರು ಎಂಬುದು ಉಲ್ಲೇಖನೀಯ. ಸಲೀಂ ಕುಮಾರ್ ನಿಧನಕ್ಕೆ ಮಾಲಿವುಡ್ ಚಿತ್ರರಂಗದ ದಿಗ್ಗಜರು ಕಂಬನಿ ಮಿಡಿದಿದ್ದಾರೆ. ಸೂಪರ್ ಸ್ಟಾರ್ ಮಮ್ಮುಟ್ಟಿ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅತ್ಯಂತ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
‘ಬೇರೆಯವರನ್ನು ನಗಿಸುತ್ತಾ, ಯೋಚಿಸುವಂತೆ ಮಾಡುತ್ತಾ, ಕೆಲವೊಮ್ಮೆ ತಾವೂ ಅತ್ತು ಬೇರೆಯವರನ್ನೂ ಅಳಿಸುತ್ತಿದ್ದ ಸಲೀಂ. ಈಗ ನೀನು ಕೇವಲ ನನ್ನನ್ನು ಕಣ್ಣೀರಿಡುವಂತೆ ಮಾಡಿ ಹೊರಟುಹೋಗಿದ್ದೀಯ. ನಿನ್ನ ಈ ಅಗಲಿಕೆ ಎಂದಿಗೂ ಮುಗಿಯದ ಮೌನ ಮತ್ತು ಅಪಾರ ದುಃಖವನ್ನು ತಂದಿದೆ ಸಹೋದರ’ ಎಂದು ಮಮ್ಮುಟ್ಟಿ ಕಣ್ಣೀರು ಹಾಕಿದ್ದಾರೆ.
#WATCH | Kochi, Keralam | Renowned Malayalam actor and National Award winner Salim Kumar passes away at the age of 56.
90ರ ದಶಕದ ಕೊನೆಯಲ್ಲಿ ಮಿಮಿಕ್ರಿ ಮತ್ತು ಹಾಸ್ಯ ಕಲಾವಿದರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಸಲೀಂ ಕುಮಾರ್, ಕೇವಲ ಕಾಮಿಡಿ ಪಾತ್ರಗಳಿಗೆ ಸೀಮಿತವಾಗದೆ ಅದ್ಭುತ ಪೋಷಕ ನಟನಾಗಿ ಗುರುತಿಸಿಕೊಂಡರು. 2005ರಲ್ಲಿ ‘ಅಚ್ಚನುರಂಗತ ವೀಡು’ ಚಿತ್ರದ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಇನ್ನು 2010ರಲ್ಲಿ ತೆರೆಕಂಡ ‘ಆದಾಮಿಂತೆ ಮಕನ್ ಅಬು’ ಚಿತ್ರದ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿದಿತ್ತು.
ಕೇರಳದ ಸಿಎಂ ವಿ.ಡಿ. ಸತೀಶನ್ ಸೇರಿದಂತೆ ಹಲವು ಗಣ್ಯರು ಸಲೀಂ ಕುಮಾರ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ‘ಅವರು ಕೇವಲ ಒಬ್ಬ ಚಿತ್ರನಟನಷ್ಟೇ ಅಲ್ಲ, ನಮಗೆ ಕುಟುಂಬದ ಸದಸ್ಯರಂತಿದ್ದರು’ ಎಂದು ಸತೀಶನ್ ಸ್ಮರಿಸಿದ್ದಾರೆ. ಸಲೀಂ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಲಯಾಳಂ ಚಿತ್ರರಂಗದ ನಟ ದಿಲೀಪ್ ಸೇರಿದಂತೆ ಹಲವು ತಾರೆಯರು ಆಸ್ಪತ್ರೆಗೆ ಧಾವಿಸಿದ್ದಾರೆ.
ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಎರಡು ಕಾರಣಗಳಿಂದ ಸುದ್ದಿಯಾಗಿದ್ದಾರೆ. ಮೊದಲಿಗೆ ಡಿಆರ್ಎಸ್ನಿಂದ ಪಾರಾಗಿ ಸುದ್ದಿಯಾಗಿದ್ದ ರಾಹುಲ್, ಆ ಬಳಿಕ ಸೆಂಚುರಿ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೀಗೆ ಡಿಆರ್‌ಎಸ್ ಹಾಗೂ ಸೆಂಚುರಿಗಳಿಂದ ಸುದ್ದಿಯಾಗಲು ಮುಖ್ಯ ಕಾರಣ 11ನೇ ಓವರ್ನಲ್ಲೇ ಸಿಕ್ಕ ಜೀವದಾನ!
11ನೇ ಓವರ್‌ನಲ್ಲಿ ಅಫ್ಘಾನಿಸ್ತಾನ್ ವೇಗಿ ಝಿಯಾವುರ್ ರೆಹಮಾನ್ ಶರೀಫಿ ಎಸೆದ ಚೆಂಡನ್ನು ರಾಹುಲ್ ಕಟ್ ಮಾಡಲು ಪ್ರಯತ್ನಿಸಿದ್ದರು. ಆದರೆ ಚೆಂಡು ಅವರ ಬ್ಯಾಟ್‌ನ ತುದಿಗೆ ಸವರಿ ನೇರವಾಗಿ ವಿಕೆಟ್ ಕೀಪರ್ ಅಫ್ಸರ್ ಜಜಾಯ್ ಕೈ ಸೇರಿತು.
ಅಫ್ಘಾನಿಸ್ತಾನದ ಆಟಗಾರರು ಔಟ್ ಎಂದು ಜೋರಾಗಿ ಅಪೀಲ್ ಮಾಡಿದರೂ, ಅಂಪೈರ್ ಅದನ್ನು ನಾಟೌಟ್ ಎಂದು ಘೋಷಿಸಿದರು. ಈ ವೇಳೆ ಕೆಎಲ್ ರಾಹುಲ್ ಯಾವುದೇ ಆತಂಕವಿಲ್ಲದೆ, ತಮಗೇನೂ ತಿಳಿಯದಂತೆ ಅತ್ಯಂತ ಶಾಂತವಾಗಿ ತಲೆಯಾಡಿಸಿದರು.
ಅಷ್ಟೇ ಅಲ್ಲದೆ ಅಫ್ಘಾನ್ ಆಟಗಾರರು ಡಿಆರ್‌ಎಸ್ ತೆಗೆದುಕೊಳ್ಳಲು ಕೆಎಲ್ ರಾಹುಲ್ ಅವರ ಹಾವಭಾವನ್ನು ಗಮನಿಸಿದ್ದಾರೆ. ಈ ವೇಳೆ ಅವರು ಬ್ಯಾಟ್‌ನ ಹ್ಯಾಂಡಲ್ನಿಂದ ಸೌಂಡ್ ಬಂದಂತೆ ಪರೀಕ್ಷಿಸುತ್ತಿದ್ದ ನಿಂತಿದ್ದರು.
ಇದಾಗ್ಯೂ ಸ್ಲಿಪ್‌ನಲ್ಲಿದ್ದ ರಹಮಾನುಲ್ಲಾ ಗುರ್ಬಾಝ್ ರಿವ್ಯೂ ತೆಗೆದುಕೊಳ್ಳುವಂತೆ ನಾಯಕ ಹಶ್ಮತುಲ್ಲಾ ಶಾಹಿದಿಗೆ ಒತ್ತಾಯಿಸಿದರು. ಆದರೆ ರಾಹುಲ್ ಅವರ ಮುಖದ ಹಾವಭಾವ ನೋಡಿ ಗೊಂದಲಕ್ಕೊಳಗಾದ ಕೀಪರ್ ಮತ್ತು ನಾಯಕ ರಿವ್ಯೂ ಬೇಡ ಎಂದು ನಿರ್ಧರಿಸಿದರು.
ಮುಂದಿನ ಕೆಲವು ನಿಮಿಷಗಳಲ್ಲಿ ಟಿವಿ ರಿಪ್ಲೇನಲ್ಲೇ ಬ್ಯಾಟ್‌ಗೆ ಚೆಂಡು ಸ್ಪಷ್ಟವಾಗಿ ತಗುಲಿರುವುದು ದೊಡ್ಡ ಸ್ಪೈಕ್ ಮೂಲಕ ಸಾಬೀತಾಯಿತು. ಇದನ್ನು ನೋಡಿ ಅಫ್ಘಾನ್ ಆಟಗಾರರು ತಲೆಮೇಲೆ ಕೈ ಹೊತ್ತು ಕುಳಿತುಕೊಂಡರು. ಅಂದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಅಫ್ಘಾನ್ ಆಟಗಾರರು ವಿಫಲರಾದರು.
ಈ ಎಲ್ಲಾ ಸನ್ನಿವೇಶಗಳನ್ನು ಗಮನಿಸುತ್ತಿದ್ದ ಮಾಜಿ ಇಂಗ್ಲೆಂಡ್ ಸ್ಪಿನ್ನರ್ ಗ್ರೇಮ್ ಸ್ವಾನ್ ಈ ಬಗ್ಗೆ ಲೈವ್ ಕಾಮೆಂಟರಿಯಲ್ಲಿ ಮಾತನಾಡುತ್ತಾ, “ಕೆ.ಎಲ್. ರಾಹುಲ್ ಇಲ್ಲಿ ಅದ್ಭುತ ಆಟ ಆಡಿದ್ದಾರೆ. ನಾಯಕ ಮತ್ತು ಕೀಪರ್ ರಾಹುಲ್ ಮುಖ ನೋಡಿದಾಗ ಅವರು ಏನೂ ಆಗಿಲ್ಲ ಎಂಬಂತೆ ತಲೆಯಾಡಿಸಿದರು. ಎದುರಾಳಿಗಳು ಅದನ್ನು ನಂಬಿಯೇ ಬಿಟ್ಟರು. ರಾಹುಲ್ ಅವರ ಈ ನಟನೆಗೆ ಆಸ್ಕರ್ ಪ್ರಶಸ್ತಿ ನಾಮನಿರ್ದೇಶನ ಮಾಡಬೇಕು” ಎಂದು ಲೇವಡಿ ಮಾಡಿದ್ದಾರೆ.
ಅಂದರೆ ಗ್ರೇಮ್ ಸ್ವಾನ್ ಪ್ರಕಾರ, ಕೆಎಲ್ ರಾಹುಲ್ ತಮ್ಮ ನಟನೆಯ ಮೂಲಕ ಅಫ್ಘಾನಿಸ್ತಾನ್ ಆಟಗಾರರು ಡಿಆರ್‌ಎಸ್ ತೆಗೆದುಕೊಳ್ಳುದಂತೆ ಮಾಡಿದ್ದಾರೆ. ಸಿನಿಮಾಗಳಲ್ಲಿ ಅತ್ಯುತ್ತಮವಾಗಿ ನಟಿಸುವ ನಟ-ನಟಿಯರಿಗೆ ವಿಶ್ವದ ಅತ್ಯುನ್ನತ ‘ಆಸ್ಕರ್ ಪ್ರಶಸ್ತಿ’ ನೀಡಲಾಗುತ್ತದೆ. ಇಲ್ಲಿ ಕೆ.ಎಲ್. ರಾಹುಲ್ ಮೈದಾನದಲ್ಲಿ ಒಬ್ಬ ವೃತ್ತಿಪರ ನಟನಿಗಿಂತಲೂ ಅದ್ಭುತವಾಗಿ ನಟಿಸಿ ಎದುರಾಳಿ ತಂಡವನ್ನು ದಾರಿ ತಪ್ಪಿಸಿದ್ದಾರೆ ಎಂದು ಗ್ರೇಮ್ ಸ್ವಾನ್ ವ್ಯಂಗ್ಯವಾಡಿದ್ದಾರೆ.
ಕೇವಲ 16 ರನ್ ಗಳಿಸಿದ್ದಾಗ ಸಿಕ್ಕ ಈ ಜೀವದಾನವನ್ನು ಪೂರ್ಣವಾಗಿ ಬಳಸಿಕೊಂಡ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 165 ಎಸೆತಗಳಲ್ಲಿ ಭರ್ಜರಿ ಶತಕ (100 ರನ್) ಬಾರಿಸಿದರು. ಇವರೊಂದಿಗೆ ನಾಯಕ ಶುಭ್‌ಮನ್ ಗಿಲ್ (103*) ಕೂಡ ಶತಕ ಸಿಡಿಸಿದರು. ಪರಿಣಾಮ, ಭಾರತ ತಂಡವು ಮೊದಲ ದಿನದ ಆಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 368 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.
ಭಾರತೀಯ ಸಂಸ್ಕೃತಿಯಲ್ಲಿ, ಪ್ರತಿದಿನ ಮನೆಯಲ್ಲಿ ದೀಪ ಹಚ್ಚುವುದನ್ನು ಅತ್ಯಂತ ಪವಿತ್ರ ಆಚರಣೆ ಎಂದು ಪರಿಗಣಿಸಲಾಗುತ್ತದೆ. ದೀಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುವುದಲ್ಲದೆ, ಮನಸ್ಸಿಗೆ ಶಾಂತಿ ಮತ್ತು ಕುಟುಂಬಕ್ಕೆ ಅದೃಷ್ಟ ಬರುತ್ತದೆ ಎಂಬುದು ಶತಮಾನಗಳ ನಂಬಿಕೆ. ಆದಾಗ್ಯೂ, ವಾಸ್ತು ಶಾಸ್ತ್ರಗಳ ಪ್ರಕಾರ, ದೀಪ ಪೂಜೆಯಲ್ಲಿ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಅದರ ಆಧ್ಯಾತ್ಮಿಕ ಪ್ರಯೋಜನಗಳನ್ನು ಕಡಿಮೆ ಮಾಡಬಹುದು. ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂಪತ್ತನ್ನು ವೃದ್ಧಿಸಿಕೊಳ್ಳಲು ದೀಪ ಹಚ್ಚುವಾಗ ಪಾಲಿಸಬೇಕಾದ ಆ ಪ್ರಮುಖ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ದೀಪ ಬೆಳಗಿಸುವ ದಿಕ್ಕು ಅತ್ಯಂತ ಪ್ರಮುಖವಾದುದು:
ವಾಸ್ತು ಶಾಸ್ತ್ರದಲ್ಲಿ ದೀಪವನ್ನು ಇರಿಸುವ ಮತ್ತು ಅದು ಉರಿಯುವ ದಿಕ್ಕಿಗೆ ವಿಶೇಷ ಪ್ರಾಮುಖ್ಯತೆ ಇದೆ. ಸಾಮಾನ್ಯವಾಗಿ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ದೀಪವನ್ನು ಬೆಳಗಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ದಿಕ್ಕುಗಳು ಜ್ಞಾನ, ಸಂಪತ್ತು ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಶಕ್ತಿ ಹೊಂದಿವೆ ಎಂದು ನಂಬಲಾಗಿದೆ. ಆದರೆ, ಸಾಮಾನ್ಯ ಪೂಜೆಗಳ ಸಮಯದಲ್ಲಿ ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಬಾರದು ಎಂದು ಆಧ್ಯಾತ್ಮಿಕ ಗ್ರಂಥಗಳು ಸ್ಪಷ್ಟವಾಗಿ ಸೂಚಿಸುತ್ತವೆ.
ಹಳೆಯ ಬತ್ತಿ ಮತ್ತೆ ಬಳಸುವ ತಪ್ಪು ಮಾಡಬೇಡಿ:
ದೀಪ ಪೂಜೆಯಲ್ಲಿ ಬಳಸುವ ಹತ್ತಿಯ ಬತ್ತಿಯು ಯಾವಾಗಲೂ ಸ್ವಚ್ಛ ಮತ್ತು ಹೊಸದಾಗಿರಬೇಕು. ಕೆಲವರು ನಿನ್ನೆಯ ಸುಟ್ಟ ಬತ್ತಿಗೆ ಮತ್ತಷ್ಟು ಎಣ್ಣೆ ಹಾಕಿ ಅದನ್ನೇ ಮತ್ತೆ ಬೆಳಗಿಸುತ್ತಾರೆ, ಆದರೆ ಇದು ಶಾಸ್ತ್ರೋಕ್ತವಲ್ಲ ಮತ್ತು ವೈಜ್ಞಾನಿಕವಾಗಿಯೂ ಸೂಕ್ತವಲ್ಲ. ಪ್ರತಿದಿನ ಹೊಸ ಬತ್ತಿಯಿಂದ ದೀಪ ಹಚ್ಚುವುದರಿಂದ ಪೂಜಾ ಕೋಣೆಯ ಪರಿಶುದ್ಧತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಇದು ದೇವತಾ ಅನುಗ್ರಹವನ್ನು ತರಲು ಸಹಕಾರಿಯಾಗುತ್ತದೆ.
ತುಪ್ಪ ಮತ್ತು ಎಣ್ಣೆ ಒಟ್ಟಿಗೆ ಬೆರೆಸಬೇಡಿ:
ಪೂಜಾ ಕೋಣೆಯಲ್ಲಿ ಶುದ್ಧ ಹಸುವಿನ ತುಪ್ಪದ ದೀಪವನ್ನು ಹಚ್ಚುವುದು ಅತ್ಯಂತ ಶ್ರೇಷ್ಠ ಹಾಗೂ ಮಂಗಳಕರ ಎಂದು ಪರಿಗಣಿಸಲಾಗಿದೆ. ಆದರೆ ಅನೇಕರು ಒಂದೇ ದೀಪದಲ್ಲಿ ತುಪ್ಪ, ಸಾಸಿವೆ ಎಣ್ಣೆ ಅಥವಾ ಇನ್ಯಾವುದೇ ಎಣ್ಣೆಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ದೀಪ ಹಚ್ಚುವ ತಪ್ಪು ಮಾಡುತ್ತಾರೆ. ಸಂಪ್ರದಾಯಗಳ ಪ್ರಕಾರ, ನೀವು ಯಾವ ದ್ರವ್ಯವನ್ನು ಬಳಸುತ್ತೀರೋ (ತುಪ್ಪ ಅಥವಾ ಎಣ್ಣೆ), ಅದನ್ನು ಪ್ರತ್ಯೇಕವಾಗಿಯೇ ಬಳಸಿ ದೀಪ ಹಚ್ಚಬೇಕು ಮತ್ತು ಅದನ್ನು ಸಂಪೂರ್ಣವಾಗಿ ಬಳಸುವುದು ಉತ್ತಮ.
ಕೆಲವೊಮ್ಮೆ ಭಾವನಾತ್ಮಕ ಕಾರಣಗಳಿಂದ ಅಥವಾ ನಿರ್ಲಕ್ಷ್ಯದಿಂದ ಮನೆಯಲ್ಲಿ ಹಳೆಯ, ಬಿರುಕು ಬಿಟ್ಟ ಹಿತ್ತಾಳೆ ಅಥವಾ ಜೇಡಿಮಣ್ಣಿನ ದೀಪಗಳನ್ನು ಬಳಸುವುದನ್ನು ನೋಡಿರುತ್ತೀರಿ. ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಪೂಜೆಗೆ ಭಿನ್ನವಾದ ಅಥವಾ ಹಾನಿಗೊಳಗಾದ ವಸ್ತುಗಳನ್ನು ಬಳಸುವುದು ಮನೆಯಲ್ಲಿ ನಕಾರಾತ್ಮಕತೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ಬಿರುಕು ಬಿಟ್ಟ ದೀಪಗಳನ್ನು ತಕ್ಷಣವೇ ಬದಲಾಯಿಸಿ, ಹೊಸ ಮತ್ತು ದೋಷರಹಿತ ದೀಪಗಳನ್ನು ಬಳಸುವುದು ಅತ್ಯಗತ್ಯ.
ದೀಪವನ್ನು ಎಂದಿಗೂ ನೇರವಾಗಿ ನೆಲದ ಮೇಲೆ ಇಡಬೇಡಿ:
ಶಾಸ್ತ್ರಗಳ ಪ್ರಕಾರ ದೀಪವನ್ನು ಎಂದಿಗೂ ಬರಿ ನೆಲದ ಮೇಲೆ ನೇರವಾಗಿ ಇಡಬಾರದು. ದೀಪದ ಕೆಳಗೆ ಒಂದು ಸಣ್ಣ ತಟ್ಟೆ, ಮರದ ಪೀಠ (ಮಣೆ) ಅಥವಾ ಕನಿಷ್ಠ ಪಕ್ಷ ಒಂದು ವೀಳ್ಯದ ಎಲೆಯನ್ನಾದರೂ ಆಸನವಾಗಿ ಇಡುವುದು ಅತ್ಯಂತ ಶುಭ ತರುತ್ತದೆ. ಇದರೊಂದಿಗೆ, ದೀಪವನ್ನು ಎಂದಿಗೂ ಬಾಯಿಯಿಂದ ಊದಿ ನಂದಿಸಬಾರದು ಎಂದು ಹಿರಿಯರು ಹೇಳುತ್ತಾರೆ. ದೀಪವನ್ನು ಶಾಂತಗೊಳಿಸಬೇಕಾದಾಗ, ಹೂವಿನಿಂದ ಅಥವಾ ಎಣ್ಣೆಯಲ್ಲಿ ಬತ್ತಿಯನ್ನು ನಿಧಾನವಾಗಿ ಹಿಮ್ಮುಖವಾಗಿ ಎಳೆಯುವ ಮೂಲಕ ನಂದಿಸುವುದು ಶಾಸ್ತ್ರಬದ್ಧ ವಿಧಾನವಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೋಲ್ಕತ್ತಾ, ಜೂನ್ 07: ಮಮತಾ ಬ್ಯಾನರ್ಜಿ(Mamata Banerjee)ಯಾಗಲಿ ಅಥವಾ ಯಾವುದೇ ಟಿಎಂಸಿ ನಾಯಕರು ನನ್ನ ಬಳಿ ರಾಜೀನಾಮೆ ನೀಡುವಂತೆ ಕೇಳಿಲ್ಲ ಎಂದು ಬಹರಾಮ್‌ಪುರ ಲೋಕಸಭಾ ಕ್ಷೇತ್ರದ ಸಂಸದ ಯೂಸುಫ್ ಪಠಾಣ್ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮಗೆ ರಾಜೀನಾಮೆ ನೀಡುವಂತೆ ಕೇಳಿದ್ದಾರೆ ಎಂಬುದೆಲ್ಲ ಕೇವಲ ಅನಧಿಕೃತ ವದಂತಿಗಳಾಗಿದ್ದು, ಪಕ್ಷದಲ್ಲಿ ಎಲ್ಲವೂ ಅತ್ಯಂತ ಸೌಹಾರ್ದಯುತವಾಗಿದೆ ಎಂದು ಅವರು ದೃಢಪಡಿಸಿದ್ದಾರೆ.
ಈ ಸ್ಪಷ್ಟನೆಯು ಟಿಎಂಸಿ ಪಕ್ಷದ ಆಂತರಿಕ ಒಗ್ಗಟ್ಟು ಮತ್ತು ನಾಯಕರ ನಡುವಿನ ದೃಢವಾದ ಪರಸ್ಪರ ನಂಬಿಕೆಯನ್ನು ಜಗತ್ತಿಗೆ ಸಾಬೀತುಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಅಧಿಕೃತ ವೀಡಿಯೊ ಸಂದೇಶದಲ್ಲಿ ಮಾಜಿ ಸ್ಟಾರ್ ಕ್ರಿಕೆಟಿಗ ಹಾಗೂ ಸಂಸದ ಯೂಸುಫ್ ಪಠಾಣ್ ಅವರು ಮಾಧ್ಯಮಗಳ ತಪ್ಪು ಮಾಹಿತಿಯನ್ನು ಅತ್ಯಂತ ಪ್ರಬುದ್ಧವಾಗಿ ನಿರಾಕರಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಬಹರಂಪುರ ಸ್ಥಾನದಿಂದ ಸ್ಪರ್ಧಿಸಲು ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದಾರೆ ಎಂಬ ಸುದ್ದಿ ಸಂಪೂರ್ಣವಾಗಿ ಸುಳ್ಳು. ನಮ್ಮ ಕೊನೆಯ ಅಧಿಕೃತ ಸಭೆಯಲ್ಲಿಯೂ ಅವರು ಈ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಪಕ್ಷದ ಯಾವುದೇ ಹಿರಿಯ ನಾಯಕರೂ ಇಂತಹ ಪ್ರಸ್ತಾಪವನ್ನು ನನ್ನ ಮುಂದೆ ಇಟ್ಟಿಲ್ಲ ಎಂದು ಪಠಾಣ್ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ನಾಯಕರ ನಡುವೆ ಉತ್ತಮ ಸಂವಹನವಿದ್ದು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಕೋರಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಅವರ ಪರವಾಗಿ ತಾವು ಯೂಸುಫ್ ಪಠಾಣ್ ಅವರನ್ನು ಸಂಪರ್ಕಿಸಿ ಸಂದೇಶ ತಲುಪಿಸಿದ್ದೆ ಎಂಬ ಸುದ್ದಿಯನ್ನು ಭಾರತದ ಹೆಮ್ಮೆಯ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ಲಿಖಿತ ಹೇಳಿಕೆಯ ಮೂಲಕ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ವಿಡಿಯೋ
Former Captain of the Indian Cricket Team, Sourav Ganguly, says, “…It was alleged that I had contacted Mr Yusuf Pathan on behalf of Mamta Banerjee, the former Chief Minister of West Bengal and had carried her message that he should step down/resign from his Constitutional post… pic.twitter.com/0RkRsRhYfo
ಭವಿಷ್ಯದ ಸುಭದ್ರ ಮುನ್ನಡೆಗೆ ಹಾದಿ ಸುಗಮ
ಯೂಸುಫ್ ಪಠಾಣ್ ಮತ್ತು ಸೌರವ್ ಗಂಗೂಲಿ ಅವರ ಈ ತ್ವರಿತ ಹಾಗೂ ಸಕಾರಾತ್ಮಕ ಪ್ರತಿಕ್ರಿಯೆಗಳು ರಾಜಕೀಯ ವಲಯದಲ್ಲಿದ್ದ ಅನಗತ್ಯ ಗೊಂದಲಗಳನ್ನು ಕ್ಷಣಾರ್ಧದಲ್ಲಿ ಬಗೆಹರಿಸಿವೆ. ಬಹರಂಪುರ ಕ್ಷೇತ್ರದ ಚುನಾಯಿತ ಪ್ರತಿನಿಧಿಯಾಗಿ ಯೂಸುಫ್ ಪಠಾಣ್ ಅವರು ಯಾವುದೇ ಅಡೆತಡೆಯಿಲ್ಲದೆ ಜನರ ಸೇವೆಯಲ್ಲಿ ಮುಂದುವರಿಯಲಿದ್ದು, ಮಮತಾ ಬ್ಯಾನರ್ಜಿ ಅವರ ಮಾರ್ಗದರ್ಶನದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಿ ಹಾಗೂ ಸೌಹಾರ್ದಯುತವಾಗಿ ಮುನ್ನಡೆಯಲಿದೆ ಎಂಬ ಆಶಾವಾದ ಮೂಡಿದೆ.
ಬೆಂಗಳೂರಿನಲ್ಲಿ ಉತ್ತಮ ವಾಯು ಗುಣಮಟ್ಟ: ಸಿಲ್ಕ್ ಬೋರ್ಡ್‌ನಲ್ಲಿ ಮಾತ್ರ ಕೊಂಚ ಏರಿಕೆ
ಬೆಂಗಳೂರು, ಜೂನ್ 07: ರಾಜ್ಯದಲ್ಲಿ ಮುಂಗಾರು ಮಳೆಯ ಆರಂಭದ ಬೆನ್ನಲ್ಲೇ ವಾಯು ಮಾಲಿನ್ಯದ (AQI) ಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಆಶಾದಾಯಕವಾಗಿದ್ದು, ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯ ಕಾರಣದಿಂದಾಗಿ ಗಾಳಿಯ ಗುಣಮಟ್ಟ ಗಣನೀಯವಾಗಿ ಸುಧಾರಿಸಿದೆ. ಒಟ್ಟಾರೆ ಬೆಂಗಳೂರಿನ ಸರಾಸರಿ AQI ಪ್ರಸ್ತುತ 11 ರಿಂದ 17 ರ ಆಸುಪಾಸಿನಲ್ಲಿದ್ದು, ಇದು ಅತ್ಯಂತ ಉತ್ತಮ (Good) ವಿಭಾಗಕ್ಕೆ ಸೇರುತ್ತದೆ.
ಮುಖ್ಯಾಂಶಗಳು
ಜೂನ್ 7 ರಂದು ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಅತ್ಯಂತ ಉತ್ತಮವಾಗಿದೆ.
ಕರಾವಳಿಯ ಮಂಗಳೂರು ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಮುನ್ನೂರಕ್ಕಿಂತ ಕೆಳಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ವಾಯು ಮಾಲಿನ್ಯದ ಪ್ರಮಾಣ ಕೊಂಚ ಹೆಚ್ಚಾಗಿದೆ.
ನಗರದ ಪ್ರಮುಖ ಪ್ರದೇಶಗಳ ಇಂದಿನ AQI ವಿವರ
ಜಯನಗರ (5ನೇ ಬ್ಲಾಕ್): 33 AQI (ಉತ್ತಮ)
ಪೀಣ್ಯ (ಶಿವಪುರ): 28 AQI (ಉತ್ತಮ)
ಸಿಲ್ಕ್ ಬೋರ್ಡ್: ಇಲ್ಲಿ ವಾಹನ ಸಂಚಾರದ ಒತ್ತಡದಿಂದಾಗಿ AQI ಮಟ್ಟ 72 ರಷ್ಟಿದ್ದು, ಇದು ಸಾಧಾರಣ (Moderate) ವಿಭಾಗದಲ್ಲಿದೆ. ಅಸ್ತಮಾ ಅಥವಾ ಉಸಿರಾಟದ ಸಮಸ್ಯೆಯಿರುವವರು ಈ ಭಾಗದಲ್ಲಿ ಕೊಂಚ ಜಾಗ್ರತೆ ವಹಿಸುವುದು ಒಳಿತು. ಉಳಿದಂತೆ ಇಡೀ ರಾಜಧಾನಿಯಲ್ಲಿ ಹೊರಾಂಗಣ ಚಟುವಟಿಕೆಗಳಿಗೆ ವಾತಾವರಣ ಪೂರಕವಾಗಿದೆ.
ಕರ್ನಾಟಕದ ಇತರ ನಗರಗಳ ಇಂದಿನ ಸ್ಥಿಗತಿ
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಮುಂಗಾರು ಮಾರುತಗಳ ಪ್ರಭಾವದಿಂದಾಗಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ. ಆದರೆ ಕೈಗಾರಿಕಾ ಪ್ರದೇಶ ಹಾಗೂ ವಾಹನ ದಟ್ಟಣೆ ಹೆಚ್ಚಿರುವ ಕೆಲವು ನಗರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ.
ಚಿಕ್ಕಮಗಳೂರು ಮತ್ತು ಮಡಿಕೇರಿ: ಗಿರಿಧಾಮಗಳಾದ ಚಿಕ್ಕಮಗಳೂರಿನಲ್ಲಿ AQI ಮಟ್ಟ 30 ಹಾಗೂ ಮಡಿಕೇರಿಯಲ್ಲಿ 37 ದಾಖಲಾಗಿದ್ದು, ಅತ್ಯಂತ ಶುದ್ಧ ಹಾಗೂ ಆರೋಗ್ಯಕರ ಗಾಳಿ ಇಲ್ಲಿದೆ.
ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಇಲ್ಲಿನ ವಾಯು ಗುಣಮಟ್ಟ ಸೂಚ್ಯಂಕ 37 ರಷ್ಟಿದ್ದು, ಹಸಿರು ವಲಯದಲ್ಲಿದೆ.
ರಾಮನಗರ: ಇಲ್ಲಿನ ವಾಯು ಗುಣಮಟ್ಟವೂ ಸುಧಾರಿಸಿದ್ದು 37 AQI ದಾಖಲಾಗಿದೆ.
ಬೆಳಗಾವಿ: ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಬೆಳಗಾವಿಯಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಇಲ್ಲಿ ಇಂದಿನ AQI 127 ರಷ್ಟಿದ್ದು, ಇದನ್ನು ಕಳಪೆ ಎಂದು ವರ್ಗೀಕರಿಸಲಾಗಿದೆ. ಇಲ್ಲಿನ ನಿವಾಸಿಗಳು ಮಾಸ್ಕ್ ಧರಿಸುವುದು ಸೂಕ್ತ.
ಒಟ್ಟಾರೆಯಾಗಿ ಹೇಳುವುದಾದರೆ, ಮುಂಗಾರು ಮಳೆಯ ಆರಂಭದಿಂದಾಗಿ ಇಂದು ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯ ತಗ್ಗಿ ವಾತಾವರಣ ಸ್ವಚ್ಛವಾಗಿದೆ. ಮುಂಬರುವ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದ್ದು, ಗಾಳಿಯ ಗುಣಮಟ್ಟ ಇನ್ನಷ್ಟು ಸುಧಾರಿಸುವ ಸಾಧ್ಯತೆಯಿದೆ.
ಆಸ್ಟ್ರೇಲಿಯಾದ ಪ್ರತಿಷ್ಠಿತ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್ನ (BBL) ಎರಡು ತಂಡಗಳು ವಿಲೀನಗೊಂಡಿವೆ. ಮೆಲ್ಬೋರ್ನ್ ನಗರದ ಸಾಂಪ್ರದಾಯಿಕ ಎದುರಾಳಿಗಳಾದ ‘ಮೆಲ್ಬೋರ್ನ್ ಸ್ಟಾರ್ಸ್’ (Melbourne Stars) ಮತ್ತು ‘ಮೆಲ್ಬೋರ್ನ್ ರೆನೆಗೇಡ್ಸ್’ (Melbourne Renegades) ತಂಡಗಳು ಈಗ ಒಂದಾಗಿದ್ದು, ಮುಂಬರುವ ಸೀಸನ್ನಲ್ಲಿ ಒಂದೇ ತಂಡವಾಗಿ ಕಣಕ್ಕಿಳಿಯಲಿದೆ.
ವಿಲೀನದ ಹಿಂದಿನ ಮುಖ್ಯ ಉದ್ದೇಶವೇನು?
ಬಿಬಿಎಲ್ ಟೂರ್ನಿಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಎರಡು ಪ್ರತ್ಯೇಕ ತಂಡಗಳನ್ನು ನಡೆಸಿ ಸಂಪನ್ಮೂಲಗಳನ್ನು ವ್ಯರ್ಥ ಮಾಡುವ ಬದಲು, ಆಡಳಿತವನ್ನು ಸುಗಮಗೊಳಿಸಲು ಕ್ರಿಕೆಟ್ ವಿಕ್ಟೋರಿಯಾ ಈ ನಿರ್ಧಾರ ಮಾಡಿದೆ.
ಈ ಮೂಲಕ ಒಂದು ಬಲಿಷ್ಠ ತಂಡವನ್ನು ರೂಪಿಸಿ ಖಾಸಗಿ ಹೂಡಿಕೆದಾರರಿಗೆ (ಮುಖ್ಯವಾಗಿ ಐಪಿಎಲ್ ಫ್ರಾಂಚೈಸಿಗಳಿಗೆ) ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುವುದು ಇದರ ಹಿಂದಿನ ತಂತ್ರವಾಗಿದೆ.
ಹೊಸ ತಂಡದ ರೂಪರೇಷೆ ಹೇಗಿರಲಿದೆ?
ಹೊಸ ಹೆಸರು ಮತ್ತು ಬಣ್ಣ: ಸ್ಟಾರ್ಸ್‌ನ ಹಸಿರು ಮತ್ತು ರೆನೆಗೇಡ್ಸ್‌ನ ಕೆಂಪು ಬಣ್ಣದ ಜರ್ಸಿಗಳು ಇನ್ಮುಂದೆ ಇರುವುದಿಲ್ಲ. ಹೊಸದಾಗಿ ರೂಪುಗೊಳ್ಳುವ ‘ಸೂಪರ್ ಟೀಮ್’ಗೆ ಕೇವಲ ‘ಮೆಲ್ಬೋರ್ನ್’ ಎಂದು ಹೆಸರಿಡಲಾಗುವುದು. ಇದು ವಿಕ್ಟೋರಿಯಾ ರಾಜ್ಯದ ಸಾಂಪ್ರದಾಯಿಕ ಗಾಢ ನೀಲಿ (Navy Blue) ಬಣ್ಣದ ಜರ್ಸಿಯನ್ನು ಧರಿಸಲಿದೆ. ತಂಡದ ಉಪನಾಮವನ್ನು (Nickname) ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತದೆ.
ಹೋಮ್ ಗ್ರೌಂಡ್: ಈ ಹೊಸ ಸಂಯೋಜಿತ ತಂಡವು ಜಗತ್ತಿನ ಐತಿಹಾಸಿಕ ಕ್ರೀಡಾಂಗಣವಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನವನ್ನು (MCG) ತನ್ನ ಪ್ರಮುಖ ತವರೂಡನ್ನಾಗಿ ಮಾಡಿಕೊಳ್ಳಲಿದೆ.
ಮುಖ್ಯಸ್ಥರು: ರೆನೆಗೇಡ್ಸ್ ತಂಡದ ಜನರಲ್ ಮ್ಯಾನೇಜರ್ ಆಗಿದ್ದ ಜೇಮ್ಸ್ ರೋಸೆನ್‌ಗಾರ್ಟನ್ ಅವರು ಈ ಹೊಸ ಮೆಲ್ಬೋರ್ನ್ ತಂಡದ ಜಿಎಂ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಆಟಗಾರರ ಒಪ್ಪಂದಗಳ ಕಥೆಯೇನು?
ಮುಂಬರುವ 2026-27ರ ಬಿಬಿಎಲ್ ಸೀಸನ್‌ಗಾಗಿ ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಆಟಗಾರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲಾಗಿದೆ. ಮೆಲ್ಬೋರ್ನ್ ಸ್ಟಾರ್ಸ್ ಪರ ಆಡುತ್ತಿದ್ದ ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್ ಮತ್ತು ರೆನೆಗೇಡ್ಸ್ ಪರ ಆಡುತ್ತಿದ್ದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರಂತಹ ಸ್ಟಾರ್ ಆಟಗಾರರು ಸದ್ಯಕ್ಕೆ ತಮ್ಮ ತಮ್ಮ ಒಪ್ಪಂದದ ಪಟ್ಟಿಯಲ್ಲೇ ಮುಂದುವರಿಯಲಿದ್ದಾರೆ. ಖಾಸಗಿ ಹೂಡಿಕೆದಾರರು ಸಿಗುವವರೆಗೂ ಈ ಒಪ್ಪಂದಗಳು ಬದಲಾಗುವುದಿಲ್ಲ.
ಆಸ್ಟ್ರೇಲಿಯನ್ ಕ್ರಿಕೆಟ್‌ನಲ್ಲಿ ಗೊಂದಲ!
ಕ್ರಿಕೆಟ್ ವಿಕ್ಟೋರಿಯಾದ ಈ ದಿಢೀರ್ ಘೋಷಣೆ ಬಿಬಿಎಲ್ ಆಟಗಾರರು ಮತ್ತು ಇತರೆ ರಾಜ್ಯಗಳ ಕ್ರಿಕೆಟ್ ಮಂಡಳಿಗಳಿಗೆ ತೀವ್ರ ಆಘಾತ ನೀಡಿದೆ. ತಮಗೆ ಯಾವುದೇ ಮುನ್ಸೂಚನೆ ನೀಡದೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತ ನ್ಯೂ ಸೌತ್ ವೇಲ್ಸ್, ಕ್ವೀನ್ಸ್‌ಲ್ಯಾಂಡ್ ಮತ್ತು ಸೌತ್ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಗಳು ಈ ವಿಲೀನದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ತುರ್ತು ಸಭೆಗೆ ಆಗ್ರಹಿಸಿವೆ.
ಮೆಲ್ಬೋರ್ನ್ ಡರ್ಬಿ ಮಿಸ್:
ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ಎರಡೂ ತಂಡಗಳು ಶುರುವಾಗಿ 15 ವರ್ಷಗಳು ಆಗಿವೆ.ಅಂದರೆ ಕಳೆದ ಹದಿನೈದು ವರ್ಷಗಳಿಂದ ಎರಡೂ ತಂಡಗಳ ಅಭಿಮಾನಿಗಳು ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ನಡುವಣ ಪಂದ್ಯವನ್ನು ಪ್ರತಿಷ್ಠಿತೆಯಾಗಿ ಪರಿಗಣಿಸಿದ್ದರು.
ಇದೀಗ ಮೆಲ್ಬೋರ್ನ್ ತಂಡಗಳ ವಿಲೀನದಿಂದಾಗಿ ಮೆಲ್ಬೋರ್ನ್ ಡರ್ಬಿ ಪಂದ್ಯಗಳು ಮಿಸ್ ಆಗಲಿವೆ. ಅಲ್ಲದೆ ಒಂದು ದಶಕದಿಂದ ಬೆಂಬಲಿಸುತ್ತಾ ಬಂದಿದ್ದ ಅಭಿಮಾನಿಗಳೂ ಕೂಡ ಈ ವಿಲೀನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಲೀನದಿಂದಾಗಿ ಬಿಬಿಎಲ್‌ನ ಅತ್ಯಂತ ರೋಮಾಂಚಕ ‘ಮೆಲ್ಬೋರ್ನ್ ಡರ್ಬಿ’ ಪಂದ್ಯಗಳು ಇನ್ಮುಂದೆ ಇರುವುದಿಲ್ಲ ಎನ್ನುವುದು ಕಹಿ ಸತ್ಯ. ಕಳೆದ 15 ವರ್ಷಗಳಿಂದ ತಮ್ಮ ನೆಚ್ಚಿನ ತಂಡಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ, ಬೆಂಬಲಿಸುತ್ತಾ ಬಂದಿದ್ದ ಅಭಿಮಾನಿಗಳಿಗೆ ಈ ದಿಢೀರ್ ಬದಲಾವಣೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.
ಕೇರಳಂಗೆ ಮುಂಗಾರು ಪ್ರವೇಶವಾಗಿದ್ದು, ರಾಜ್ಯದಲ್ಲೂ ಮಳೆ ಚುರುಕುಗೊಂಡಿದೆ. ನಿನ್ನೆಯಷ್ಟೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ ಜೋರಾಗಿದ್ದು, ಅಲ್ಲಲ್ಲಿ ಭಾರೀ ಸಮಸ್ಯೆಗಳು ಕಂಡು ಬಂದಿವೆ. ಜೂನ್ 9ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ.
ಕೇರಳಂನ ಕಾಸರಗೋಡು ಜಿಲ್ಲೆಯಾದ್ಯಂತ ಭಾರೀ ಮಳೆ ಆಗಿದೆ. ಅಡೂರು ಎಂಬಲ್ಲಿ ನಿರಂತರ ಮಳೆಗೆ ಮಣ್ಣು ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮನೆ ಸಮೀಪ ಆಟವಾಡುತ್ತಿದ್ದಾಗ ಆವರಣದ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಮಣ್ಣಿನಡಿ ಮೂವರು ಮಕ್ಕಳು ಸಿಲುಕಿದ್ದು ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ. ಅಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಧಾರಕಾರ ಮಳೆಗೆ ಬಳ್ಳಾರಿ ನಗರದಲ್ಲಿ ಭಾರೀ ಅಧ್ವಾನ ಆಗಿದೆ. ತಡರಾತ್ರಿ ಸತತವಾಗಿ ಎರಡು ಗಂಟೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿದ್ದ ದವಸ, ಧಾನ್ಯಗಳೆಲ್ಲಾ ನೀರುಪಾಲಾಗಿದೆ. ಮನೆಯಲ್ಲಿನ ನೀರು ಹೊರಹಾಕಲು ಮನೆ ಮಂದಿ ಹರಸಾಹಸ ಪಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲೂ ಮಳೆ ಆರ್ಭಟ ಜೋರಾಗಿದೆ. ಚಿಂಚೋಳಿ ತಾಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಊರಿಗೆ ಊರೇ ಕೆರೆಯಂತಾಗಿದೆ. ಜನರು ಮನೆಯಿಂದ ಹೊರಬರಲಾಗದೇ ಸಂಕಷ್ಟ ಅನುಭವಿಸ್ತಿದ್ರೆ, ಮತ್ತಷ್ಟು ಮಂದಿ ಮನೆ ತೊರೆದು ಬೇರೆ ಕಡೆ ಸ್ಥಳಾಂತರವಾಗಿದ್ದಾರೆ. ಚಿಮ್ಮನಚೋಡ ಗ್ರಾಮದ ಬಳಿ ಸೇತುವೆ ಕುಸಿದ ಹಿನ್ನೆಲೆ ಚಿಂಚೋಳಿ – ಭಾಲ್ಕಿ ನಡುವಿನ ರಸ್ತೆ ಸಂಪರ್ಕ ಬಂದ್ ಆಗಿದೆ.
ಗದಗದಲ್ಲಿ ಮಳೆ ಹೊಡೆತಕ್ಕೆ ರಸ್ತೆಗಳೇ ಕೆರೆಯಂತಾಗಿವೆ. ಧೋ ಅಂತ ಸುರಿದ ಮಳೆಯಿಂದಾಗಿ ಪಂಚರಹೊಂಡದ ಬಳಿ ಚರಂಡಿ ನೀರು ರಸ್ತೆ ತುಂಬೆಲ್ಲಾ ಹರಿದು ಬಂದಿದೆ. ರಸ್ತೆ ಜಲಮಯ ಆಗಿದ್ರಿಂದ ಮಾರ್ಕೆಟ್ಗೆ ಹೋಗುವ ಜನರು ಹೈರಾಣಾಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲೂ ವರ್ಷಧಾರೆಯ ಅಬ್ಬರ ಜೋರಾಗಿದೆ. ಅಗಡಿ, ಯತ್ನಿನಹಳ್ಳಿ, ಬಸವನಕಟ್ಟಿ ಸೇರಿದಂತೆ ಹಲವು ಕಡೆ ಧಾರಾಕಾರ ಮಳೆ ಆಗಿದೆ. ಮಳೆ ಹೊಡೆತಕ್ಕೆ ಮನೆಗಳಂತೂ ಚರಂಡಿ ನೀರಿನಿಂದ ಆವರಿಸಿವೆ. ಮನೆಯಲ್ಲಿನ ನೀರು ಹೊರ ಹಾಕೋಕೆ ನಿವಾಸಿಗಳು ಹರಸಾಹಸಪಟ್ಟಿದ್ದಾರೆ.
ಬಿಸಿಲಿಗೆ ಬೆಂದು ಹೋಗಿದ್ದ ಬಾಗಲಕೋಟೆ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಅರ್ಧಗಂಟೆಗೂ ಹೆಚ್ಚು ಕಾಲ ಸರಿದ ಮಳೆಗೆ ನವನಗರದ ರಸ್ತೆಗಳು ಜಲಾವೃತವಾಗಿವೆ. ಜಿಲ್ಲಾ ಕ್ರೀಡಾಂಗಣದ ಬಳಿಯ ರಸ್ತೆಗಳು ಕೂಡ ಕಂಪ್ಲೀಟ್ ಮುಳುಗಿವೆ.
ಭುವನೇಶ್ವರ, ಜೂನ್ 07: ದೇಶಾದ್ಯಂತ ಸರ್ಕಾರಿ ವಲಯದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ಜವಾಬ್ದಾರಿ ಆಡಳಿತವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಒಡಿಶಾ ರಾಜ್ಯ ವಿಜಿಲೆನ್ಸ್ ಇಲಾಖೆಯು ಕಾರ್ಯಾಚರಣೆಯೊಂದನ್ನು ನಡೆಸಿದೆ. ಕಂಧಮಾಲ್ ಜಿಲ್ಲೆಯ ಬಾಲಿಗುಡದ ಸಮಗ್ರ ಬುಡಕಟ್ಟು ಅಭಿವೃದ್ಧಿ ಸಂಸ್ಥೆಯ ಸಹಾಯ ಕಾರ್ಯನಿರ್ವಾಹಕ ಎಂಜಿನಿಯರ್ ವೈಕುಂಠನಾಥ್ ಬೆಹೆರಾ ವಿರುದ್ಧ ಬಂದ ಸಾರ್ವಜನಿಕ ದೂರುಗಳಿಗೆ ತಕ್ಷಣವೇ ಸ್ಪಂದಿಸಿರುವ ಅಧಿಕಾರಿಗಳು, ಬೃಹತ್ ಮಟ್ಟದ ಆಸ್ತಿ ಶೋಧ ನಡೆಸಿದ್ದಾರೆ.
ಜೂನ್ 6, 2026 ರಂದು ಭುವನೇಶ್ವರದ ವಿಶೇಷ ವಿಜಿಲೆನ್ಸ್ ನ್ಯಾಯಾಲಯದ ಶೋಧ ವಾರಂಟ್ ಮೇರೆಗೆ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಐದು ಡಿಎಸ್‌ಪಿಗಳು ಮತ್ತು ಆರು ಇನ್ಸ್‌ಪೆಕ್ಟರ್‌ಗಳನ್ನೊಳಗೊಂಡ ದಕ್ಷ ಅಧಿಕಾರಿಗಳ ತಂಡವು ಈ ಆಪರೇಷನ್ ಅನ್ನು ಅತ್ಯಂತ ವ್ಯವಸ್ಥಿತವಾಗಿ ಪೂರ್ಣಗೊಳಿಸಿದೆ.
ಕಟ್ಟುನಿಟ್ಟಿನ ತನಿಖೆ ಮತ್ತು ಪಾರದರ್ಶಕ ಆಸ್ತಿ ಪತ್ತೆ
ಸಾರ್ವಜನಿಕ ಹಣದ ಪಾವತಿ ಹಾಗೂ ಆಡಳಿತದಲ್ಲಿ ಉತ್ತರದಾಯಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಒಡಿಶಾದ ಭುವನೇಶ್ವರ, ಬರಿಪಾದ, ಧರ್ಮಶಾಲಾ ಮತ್ತು ಬಾಲಿಗುಡ ಸೇರಿದಂತೆ ಒಟ್ಟು ಒಂಬತ್ತು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದರು. ಈ ಪಾರದರ್ಶಕ ಶೋಧದ ವೇಳೆ ತನಿಖಾಧಿಕಾರಿಗಳು ಭ್ರಷ್ಟಾಚಾರದ ಮೂಲಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಭುವನೇಶ್ವರದ ಪ್ರಮುಖ ವಾಣಿಜ್ಯ ಮತ್ತು ವಸತಿ ವಲಯಗಳಾದ ನೀಲಾದ್ರಿ ವಿಹಾರ್, ಶೈಲಶ್ರೀ ವಿಹಾರ್ ಮತ್ತು ಕಾನನ್ ವಿಹಾರ್‌ಗಳಲ್ಲಿ ಸುಸಜ್ಜಿತವಾದ 5 ಬೃಹತ್ ಕಟ್ಟಡಗಳು ಹಾಗೂ ವಿವಿಧ ಜಿಲ್ಲೆಗಳಲ್ಲಿ ಹರಡಿರುವ 13 ಉನ್ನತ ಮೌಲ್ಯದ ಭೂ ಪ್ಲಾಟ್‌ಗಳನ್ನು ವಿಜಿಲೆನ್ಸ್ ಇಲಾಖೆ ಕಣ್ಗಾವಲಿಗೆ ತಂದಿದೆ.
ತನಿಖೆಯ ಅತ್ಯಂತ ಪ್ರಮುಖ ಮೈಲಿಗಲ್ಲಾಗಿ, ಭುವನೇಶ್ವರದ ಆಕ್ಸಿಸ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿ ಆರೋಪಿಯ ಪತ್ನಿಯ ಹೆಸರಿನಲ್ಲಿದ್ದ ಬ್ಯಾಂಕ್ ಲಾಕರ್‌ಗಳನ್ನು ತೆರೆದ ಅಧಿಕಾರಿಗಳು, ಅಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 2 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
1999 ರಲ್ಲಿ ಕೇವಲ 6,000 ರೂ. ಮಾಸಿಕ ವೇತನಕ್ಕೆ ಜೂನಿಯರ್ ಎಂಜಿನಿಯರ್ ಆಗಿ ಸೇವೆಗೆ ಸೇರಿ, ಇತ್ತೀಚೆಗೆ 2026 ರ ಫೆಬ್ರವರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಬಡ್ತಿ ಪಡೆದಿದ್ದ ವೈಕುಂಠ ನಾಥ್ ಬೆಹೆರಾ ಅವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆಯ ಇಡೀ ಜಾಲವನ್ನು ತಾಂತ್ರಿಕ ವಿಭಾಗದ ನೆರವಿನೊಂದಿಗೆ ನಿಖರವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಒಡಿಶಾ ವಿಜಿಲೆನ್ಸ್ ಇಲಾಖೆ ನಡೆಸಿದ ಅತ್ಯಂತ ಯಶಸ್ವಿ ಮತ್ತು ಅತಿ ದೊಡ್ಡ ಆಪರೇಷನ್‌ಗಳಲ್ಲಿ ಇದು ಒಂದಾಗಿದೆ. ಸಾರ್ವಜನಿಕರ ಹಿತ ಕಾಯುವಲ್ಲಿ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಇಲಾಖೆ ತೋರಿಸಿರುವ ಈ ತ್ವರಿತ ನಡೆ ಇಡೀ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ.
ಪ್ರಸ್ತುತ ಪತ್ತೆಯಾಗಿರುವ ಎಲ್ಲಾ ದಾಖಲೆಗಳು ಹಾಗೂ ಹೂಡಿಕೆಗಳನ್ನು ನ್ಯಾಯಾಲಯದ ನಿಯಮಾವಳಿಗಳ ಪ್ರಕಾರ ಪರಿಶೀಲಿಸಲಾಗುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಕಾನೂನು ಶಿಕ್ಷೆ ಖಾತರಿಪಡಿಸುವ ಮೂಲಕ ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಇಡೀ ಸರ್ಕಾರಿ ಇಲಾಖೆಗೆ ಸ್ಪಷ್ಟ ಹಾಗೂ ಭರವಸೆಯ ಸಂದೇಶವನ್ನು ರವಾನಿಸಲಾಗಿದೆ.
ಭಾರತದ ಮೊದಲ ಸೂಪರ್ ಹೀರೋ ‘ಶಕ್ತಿಮಾನ್’ (Shaktimaan) ಮತ್ತೆ ಸುದ್ದಿಯಲ್ಲಿದೆ. ಈ ಐಕಾನಿಕ್ ಕಥೆಯನ್ನು ಬಿಗ್ ಸ್ಕ್ರೀನ್ ಮೇಲೆ ತರಲು ಬಾಲಿವುಡ್‌ನಲ್ಲಿ ಪ್ರಯತ್ನ ನಡೆಯುತ್ತಿರುವುದು ಹಳೆಯ ವಿಷಯವಾದರೂ, ಶಕ್ತಿಮಾನ್ ಪಾತ್ರಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿಯೇ ಸದ್ಯದ ದೊಡ್ಡ ಚರ್ಚೆ. ಶಕ್ತಿಮಾನ್ ಪಾತ್ರಧಾರಿ ಹಾಗೂ ನಿರ್ಮಾಪಕ ಮುಖೇಶ್ ಖನ್ನಾ (Mukesh Khanna) ಅವರು ರಣವೀರ್ ಸಿಂಗ್ ಆಯ್ಕೆಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಆದರೆ, ಈಗ ಈ ಇಡೀ ವಿವಾದದ ಹಿಂದೆ ಪ್ರಚಾರದ ಗಿಮಿಕ್ ಅಡಗಿದೆ ಎಂದು ಸಹನಟ ಲಲಿತ್ ಪರಿಮೂ ಹೇಳಿದ್ದಾರೆ.
‘ರಣವೀರ್ ಸಿಂಗ್ ಅವರು ಮುಖೇಶ್ ಖನ್ನಾ ಆಫೀಸ್‌ಗೆ ಬಂದು, ಶಕ್ತಿಮಾನ್ ಪಾತ್ರ ನೀಡುವಂತೆ ಮೂರು ಗಂಟೆಗಳ ಕಾಲ ಕಾಡಿ ಬೇಡಿದರೂ ಮುಖೇಶ್ ಒಪ್ಪಲಿಲ್ಲ’ ಎಂದು ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಲಲಿತ್ ಪರಿಮೂ ಅವರಿಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನಾನು ಮುಖೇಶ್ ವಿರುದ್ಧ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ ಇವತ್ತಿನ ಕಾಲ ಪಬ್ಲಿಸಿಟಿ ಜಮಾನಾ. ಸಿನಿಮಾ ಅಥವಾ ಟಿವಿ ಶೋಗಳಿಗಾಗಿ ಜನ ಬೇಕಂತಲೇ ಇಂತಹ ಪಬ್ಲಿಸಿಟಿ ಗಿಮಿಕ್‌ಗಳನ್ನು ಮಾಡುತ್ತಾರೆ. ಜನಮನದಲ್ಲಿ ಸುದ್ದಿ ಸೃಷ್ಟಿಸಲು ಏನಾದರೊಂದು ಮಾಡಬೇಕಾಗುತ್ತದೆ. ಮುಖೇಶ್ ಖನ್ನಾ ಕೂಡ ಅದೇ ಹಾದಿಯಲ್ಲಿ ಯೋಚಿಸುತ್ತಿದ್ದಾರೆ ಅನ್ನಿಸುತ್ತಿದೆ’ ಎಂದಿದ್ದಾರೆ.
‘ಅಲ್ಲಿ ನಡೆದ ನಿಜವಾದ ಸತ್ಯ ಏನೆಂಬುದು ಯಾರಿಗೂ ಗೊತ್ತಿಲ್ಲ, ಅದನ್ನು ಕಾಲವೇ ನಿರ್ಧರಿಸಬೇಕು’ ಎಂದು ಲಲಿತ್ ಮಾರ್ಮಿಕವಾಗಿ ನುಡಿದಿದ್ದಾರೆ. ಇದೇ ವೇಳೆ ರಣವೀರ್ ಸಿಂಗ್ ಅವರ ನಟನೆಯನ್ನು ಲಲಿತ್ ಪರಿಮೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇತ್ತೀಚೆಗಷ್ಟೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್’ ಸಿನಿಮಾದಲ್ಲಿ ರಣವೀರ್ ನಟನೆಯನ್ನು ಕೊಂಡಾಡಿದ ಅವರು, ‘ರಣವೀರ್ ಅದ್ಭುತ ನಟ, ಅವರಿಗೆ ಶಕ್ತಿಮಾನ್ ಪಾತ್ರವನ್ನು ನಿಭಾಯಿಸುವ ಎಲ್ಲಾ ಶಕ್ತಿ ಇದೆ’ ಎಂದಿದ್ದಾರೆ ಲಲಿತ್ ಪರಿಮೂ.
ಆದರೆ, ಟಿವಿ ಶೋ ನೀಡಿದ ಮ್ಯಾಜಿಕ್ ಅನ್ನು ಸಿನಿಮಾ ನೀಡಬಲ್ಲದೇ ಎಂಬ ಅನುಮಾನವನ್ನೂ ಲಲಿತ್ ಪರಿಮೂ ಅವರು ವ್ಯಕ್ತಪಡಿಸಿದ್ದಾರೆ. ‘ಶಕ್ತಿಮಾನ್ 350 ಎಪಿಸೋಡ್‌ಗಳಲ್ಲಿ ಸಾಕಷ್ಟು ಕಥೆಯನ್ನು ಹೇಳಿದೆ. ಇಂದಿನ ಜನರೇಷನ್ ಸೂಪರ್ ಹೀರೋ ಸಿನಿಮಾವನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರೀಕ್ಷಿಸುತ್ತದೆ. ತಾಂತ್ರಿಕವಾಗಿ ಸಿನಿಮಾ ಅತಿ ಉನ್ನತ ಮಟ್ಟದಲ್ಲಿ ಮೂಡಿಬರದಿದ್ದರೆ, ಹಳೆಯ ಮ್ಯಾಜಿಕ್ ಮರುಸೃಷ್ಟಿಸುವುದು ಕಷ್ಟ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಮುಖೇಶ್ ಖನ್ನಾ ಯೂಟ್ಯೂಬ್ ಸಂದರ್ಶನವೊಂದರಲ್ಲಿ ರಣವೀರ್ ಸಿಂಗ್ ವಿರುದ್ಧ ಕಿಡಿಕಾರಿದ್ದರು. ‘ಆ ಪಾಪದ ಹುಡುಗ ರಣವೀರ್ ನನ್ನ ಎದುರು ಮೂರು ಗಂಟೆ ಕುಳಿತಿದ್ದ ಎಂಬುದು ನಿಜ. ಆದರೆ ಆತನ ಮುಖದಲ್ಲಿ ಶಕ್ತಿಮಾನ್ ಪಾತ್ರಕ್ಕೆ ಬೇಕಾದ ತೇಜಸ್ಸು ಇಲ್ಲ. ಆತನನ್ನು ನೋಡಿದರೆ ಯಾರನ್ನೋ ಮೋಸ ಮಾಡುವ ಚಂಚಲ ಸ್ವಭಾವದವನಂತೆ ಕಾಣುತ್ತಾನೆ. ಬೇಕಿದ್ದರೆ ಆತ ವಿಲನ್ ಪಾತ್ರ ಮಾಡಲಿ, ಶಕ್ತಿಮಾನ್ ಆಗಲು ಸಾಧ್ಯವಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದರು.