All posts by nagaraj11081993

Karnataka Weather Forecast: ಕರಾವಳಿಯಲ್ಲಿ ಅಬ್ಬರಿಸಲಿರುವ ವರುಣ, ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್! – Kannada News

ಕರಾವಳಿಯಲ್ಲಿ ಅಬ್ಬರಿಸಲಿರುವ ವರುಣ, ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

ಬೆಂಗಳೂರು, ಜೂನ್ 07: ರಾಜ್ಯದಲ್ಲಿ ಮುಂಗಾರು ಮಳೆ (Weather) ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
  • ರಾಜ್ಯದ ಒಟ್ಟು ಹತ್ತು ಜಿಲ್ಲೆಗಳಲ್ಲಿ ಭಾರಿ ಮಳೆಯ ಯೆಲ್ಲೋ ಅಲರ್ಟ್ ನೀಡಲಾಗಿದೆ.
  • ಉತ್ತರ ಒಳನಾಡಿನಲ್ಲಿ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆ ಇದೆ.

ರಾವಳಿಗೆ ‘ಆರೆಂಜ್ ಅಲರ್ಟ್’ ಭೀತಿ

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿರಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಾರಿ ಇಂದ ಅತಿ ಭಾರಿ ಮಳೆ ಹಾಗೂ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ನಿರಂತರ ಬಲವಾದ ಗಾಳಿ ಬೀಸಬಹುದು. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಈ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.

10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದ ಒಟ್ಟು 10 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಜಾರಿಗೊಳಿಸಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ರಾಯಚೂರು ಸೇರಿದಂತೆ ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಹಾಗೂ ರೈತರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಬಿರುಗಾಳಿ ಮತ್ತು ಗುಡುಗಿನ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಕೋರಲಾಗಿದೆ.

ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆ

ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಮಳೆಯ ಪ್ರಭಾವ ಹೆಚ್ಚಿರಲಿದೆ. ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಬಲವಾದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಬಾಗಲಕೋಟೆ, ಬೀದರ್, ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಅನೇಕ ಕಡೆಗಳಲ್ಲಿ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

K Annamalai: ಬಿಜೆಪಿ ತೊರೆದ 24 ಗಂಟೆಗಳಲ್ಲೇ ಅಣ್ಣಾಮಲೈ ಅವರ ಹೊಸ ಆಂದೋಲನಕ್ಕೆ 14 ಲಕ್ಷ ಜನರ ಸೇರ್ಪಡೆ – Kannada News

ಚೆನ್ನೈ, ಜೂನ್ 07: ತಮಿಳುನಾಡು(Tamil Nadu) ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅದ್ಭುತ ಮತ್ತು ಭರವಸೆಯ ಜನಬೆಂಬಲವೊಂದು ಯುವ ನಾಯಕ ಕೆ. ಅಣ್ಣಾಮಲೈ(K Annamalai) ಅವರಿಗೆ ವ್ಯಕ್ತವಾಗಿದೆ. ಜೂನ್ 5 ರ ಶುಕ್ರವಾರದಂದು ಬಿಜೆಪಿಗೆ ಸೌಹಾರ್ದಯುತವಾಗಿ ರಾಜೀನಾಮೆ ನೀಡಿದ ಕೇವಲ 24 ಗಂಟೆಗಳ ಅವಧಿಯಲ್ಲಿ, ಅಣ್ಣಾಮಲೈ ಅವರು ಆರಂಭಿಸಿರುವ ಹೊಸ ರಾಜಕೀಯ ಆಂದೋಲನಕ್ಕೆ ಬರೋಬ್ಬರಿ 13,85,763 (ಸುಮಾರು 14 ಲಕ್ಷ) ನಾಗರಿಕರು ಸಕ್ರಿಯ ಸದಸ್ಯರಾಗಿ ಸೇರ್ಪಡೆಗೊಳ್ಳುವ ಮೂಲಕ ಭರ್ಜರಿ ಮುನ್ನುಡಿ ಬರೆದಿದ್ದಾರೆ.

ಯುವಕರು ಮತ್ತು ಸಾಮಾನ್ಯ ನಾಗರಿಕರು ಸ್ವಯಂಪ್ರೇರಿತವಾಗಿ ಹರಿದುಬರುತ್ತಿರುವುದು ದಕ್ಷಿಣ ಭಾರತದ ರಾಜಕಾರಣದಲ್ಲಿ ಹೊಸ ಪ್ರಜಾಪ್ರಭುತ್ವದ ಅಲೆಯ ಸಂಕೇತವಾಗಿ ಹೊರಹೊಮ್ಮಿದೆ.

ಸೌಹಾರ್ದಯುತ ನಿರ್ಗಮನ ಮತ್ತು ಹೊಸ ದೃಷ್ಟಿಕೋನ
ಕಳೆದ 18 ತಿಂಗಳಿನಿಂದ ತಮಿಳುನಾಡಿನ ಸಾಂಸ್ಕೃತಿಕ ಹಾಗೂ ಪ್ರಗತಿಪರ ರಾಜಕೀಯದ ಕುರಿತು ಹೈಕಮಾಂಡ್​ನೊಂದಿಗೆ ಚರ್ಚಿಸಿದ್ದ ಅಣ್ಣಾಮಲೈ, ಉನ್ನತ ನಾಯಕತ್ವಕ್ಕೆ ಯಾವುದೇ ಹೊರೆಯಾಗಬಾರದೆಂಬ ಕಾರಣಕ್ಕೆ ಮುಕ್ತವಾಗಿ ಹೊರಬಂದಿದ್ದಾರೆ. ರಾಜೀನಾಮೆಯನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಗೌರವಯುತವಾಗಿ ಅಂಗೀಕರಿಸಿದ್ದಾರೆ.

ತಮಿಳುನಾಡಿನ ಸರ್ವತೋಮುಖ ಬೆಳವಣಿಗೆ ಮತ್ತು ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ನನ್ನ ಆಲೋಚನೆಗಳಿಗಾಗಿ ಈ ಹೆಜ್ಜೆ ಇಟ್ಟಿದ್ದೇನೆ. ಉನ್ನತ ನಾಯಕರೊಂದಿಗೆ ಸಮಾಲೋಚಿಸಿಯೇ ಸೌಹಾರ್ದಯುತವಾಗಿ ಈ ಸ್ವತಂತ್ರ ಹಾದಿಯನ್ನು ಆಯ್ದುಕೊಂಡಿದ್ದೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಮತ್ತಷ್ಟು ಓದಿ: ಬಿಜೆಪಿಗೆ ರಾಜೀನಾಮೆ ನೀಡಿ ಬಂದ ಅಣ್ಣಾಮಲೈಗೆ ಭರ್ಜರಿ ಸ್ವಾಗತ, ಫ್ಯಾನ್ಸ್ ಹರ್ಷೋದ್ಘಾರ ಹೇಗಿದೆ ನೋಡಿ

ಅಣ್ಣಾಮಲೈ ಅವರ ಕರೆಗೆ ಸಿಕ್ಕ ಅಭೂತಪೂರ್ವ ಸ್ಪಂದನೆಯಿಂದಾಗಿ ಅವರ ಆಂದೋಲನದ ಅಧಿಕೃತ ವೆಬ್‌ಸೈಟ್‌ನಲ್ಲಿ ಕೇವಲ ಒಂದು ದಿನದಲ್ಲಿ 14 ಲಕ್ಷಕ್ಕೂ ಹೆಚ್ಚು ಜನ ನೋಂದಾಯಿಸಿಕೊಂಡಿದ್ದಾರೆ. ಸ್ವಯಂಸೇವಕರೇ ನಮ್ಮ ಜೀವಾಳ. ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಯುವ ನಾಯಕತ್ವದ ಮೂಲಕ ತಳಮಟ್ಟದಲ್ಲಿ ನಿಜವಾದ ಬದಲಾವಣೆ ತರುವುದು ನಮ್ಮ ಗುರಿ ಎಂದು ವೆಬ್‌ಸೈಟ್ ಸಂದೇಶ ಸಾರಿದೆ.

ಮುಂದಿನ ಗುರಿ: ತಮಿಳುನಾಡಿನಲ್ಲಿ ಹೊಸ ನಾಯಕತ್ವದ ಉದಯ
ವಂಶಪಾರಂಪರ್ಯ ಮತ್ತು ಗಣ್ಯರ ರಾಜಕಾರಣಕ್ಕೆ ಮುಕ್ತಿ ಹಾಡಿ, ಶಾಶ್ವತ ಶಾಸಕರು ಮತ್ತು ಸಂಸದರ ಸಂಸ್ಕೃತಿಯನ್ನು ಕೊನೆಗೊಳಿಸುವುದಾಗಿ ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಆಂದೋಲನವು ಸಕ್ರಿಯವಾಗಿ ಸ್ಪರ್ಧಿಸಲಿದ್ದು, ಜನಸಾಮಾನ್ಯರ ಮನೆಯ ಮಕ್ಕಳಿಗೆ ನಾಯಕತ್ವದ ಹಕ್ಕು ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

ರಾಜಕೀಯವು ಕೇವಲ ಆಯ್ದ ಕೆಲವರಿಗಷ್ಟೇ ಸೀಮಿತವಲ್ಲ, ಅದು ಸಾಮಾನ್ಯ ನಾಗರಿಕರ ಶಕ್ತಿ ಎಂಬುದನ್ನು ಸಾಬೀತುಪಡಿಸಲು ನನ್ನೊಂದಿಗೆ ಕೈಜೋಡಿಸಿ ಎಂಬ ಅವರ ಆಶಾವಾದಿ ಕರೆಗೆ ಇಡೀ ತಮಿಳುನಾಡು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಭವಿಷ್ಯದ ಪೀಳಿಗೆಗೆ ಭದ್ರ ಬುನಾದಿ ಸಿಕ್ಕಂತಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today: ಇಂದು ಈ ರಾಶಿಯವರು ಅನುಮಾನಗಳನ್ನು ಬದಿಗಿಟ್ಟರೆ ಶುಭ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 07, ಭಾನುವಾರದ ದೈನಂದಿನ ರಾಶಿ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಅಧಿಕ ಜೇಷ್ಠ ಮಾಸದಲ್ಲಿ, ಕುಂಭ ರಾಶಿಯ ಶತಭಿಷಾ ನಕ್ಷತ್ರದಲ್ಲಿ ಚಂದ್ರ ಸಂಚಾರ ಮಾಡಲಿರುವ ಈ ದಿನ, ಸೂರ್ಯ ನಮಸ್ಕಾರಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಗುರೂಜಿ ತಿಳಿಸಿದ್ದಾರೆ. ಇದು ವಿಶ್ವ ಆಹಾರ ಸುರಕ್ಷತಾ ದಿನ ಕೂಡ ಆಗಿದ್ದು, ಮಿತ ಆಹಾರ ಮತ್ತು ಹಸಿದವರಿಗೆ ಅನ್ನ ನೀಡುವ ಮಹತ್ವವನ್ನು ಒತ್ತಿಹೇಳಲಾಗಿದೆ.

 

 

 

Source link

Vastu Guidelines: ಮನೆಗೆ ಅತಿಥಿಗಳು ಬಂದರೆ ಅವರ ರೂಂ ಯಾವ ದಿಕ್ಕಿನಲ್ಲಿ ಇರಬೇಕು? ವಾಸ್ತು ಸಲಹೆ ಇಲ್ಲಿದೆ – Kannada News

ಅತಿಥಿಗಳು ಮನೆಗೆ ಬಂದಾಗ ಅವರಿಗೆ ಸೂಕ್ತವಾದ ಸ್ಥಳಾವಕಾಶ ಕಲ್ಪಿಸುವುದು ಭಾರತೀಯ ಸಂಸ್ಕೃತಿಯಲ್ಲಿ ಅತಿಥಿ ದೇವೋಭವ ಎಂಬ ನಂಬಿಕೆಯ ಭಾಗವಾಗಿದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಅತಿಥಿ ಕೋಣೆಯನ್ನು ಯಾವ ದಿಕ್ಕಿನಲ್ಲಿ ನಿರ್ಮಿಸಬೇಕು ಎಂಬುದು ಬಹಳ ಮುಖ್ಯವಾದ ಅಂಶವಾಗಿದೆ. ಇದು ಮನೆಯ ವಾತಾವರಣ ಮತ್ತು ಅಲ್ಲಿ ವಾಸಿಸುವವರ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ವಾಸ್ತು ತತ್ವಗಳ ಪ್ರಕಾರ, ಮನೆಯ ಪ್ರತಿಯೊಂದು ದಿಕ್ಕು ನಿರ್ದಿಷ್ಟ ಶಕ್ತಿಯನ್ನು ಹೊಂದಿದೆ. ಅತಿಥಿ ಕೋಣೆಗೆ ಕೆಲವು ದಿಕ್ಕುಗಳು ಸಂಪೂರ್ಣವಾಗಿ ಅಶುಭಕರವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಆಗ್ನೇಯ ದಿಕ್ಕಿನಲ್ಲಿ ಅತಿಥಿ ಕೋಣೆ ಇರುವುದು ಅಪಾಯಕಾರಿ. ಈ ದಿಕ್ಕಿನಲ್ಲಿ ಅತಿಥಿ ಕೋಣೆ ಇದ್ದರೆ, ಬಂದು ಹೋಗುವ ಅತಿಥಿಗಳು ಶತ್ರುಗಳಾಗುವ ಸಾಧ್ಯತೆ ಇರುತ್ತದೆ, ಇದರಿಂದ ಮನೆಯ ಸದಸ್ಯರೊಂದಿಗೆ ವೈರತ್ವ ಬೆಳೆಯಬಹುದು. ಇದು ಭವಿಷ್ಯದಲ್ಲಿ ಅನಿರೀಕ್ಷಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಆಗ್ನೇಯ ದಿಕ್ಕಿನಲ್ಲಿ ಅತಿಥಿ ಕೋಣೆಯನ್ನು ತಪ್ಪಿಸುವುದು ಉತ್ತಮ.

ಇನ್ನು, ಈಶಾನ್ಯ ದಿಕ್ಕು ದೈವಿಕ ಶಕ್ತಿಯನ್ನು ಆಕರ್ಷಿಸುವ ಪವಿತ್ರ ಸ್ಥಳವಾಗಿದೆ. ಈಶಾನ್ಯ ಮೂಲೆಯಲ್ಲಿ ಅತಿಥಿ ಕೋಣೆ ನಿರ್ಮಿಸಿದರೆ, ಅದು ಮನೆಯಲ್ಲಿ ದೈವಾಂಶವನ್ನು ಕಡಿಮೆ ಮಾಡಿ ಅಶಾಂತಿ, ಕೋಪ ಮತ್ತು ಮನಸ್ತಾಪಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ಈಶಾನ್ಯ ದಿಕ್ಕನ್ನು ಅತಿಥಿ ಕೋಣೆಗೆ ಸೂಕ್ತವಲ್ಲ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಮಕ್ಕಳು ಈಶಾನ್ಯ ಮೂಲೆಯಲ್ಲಿ ಇರುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.

ಮೂರನೆಯದಾಗಿ, ನೈರುತ್ಯ ದಿಕ್ಕು ಮನೆಯ ಯಜಮಾನನ ಸ್ಥಾನವಾಗಿದೆ. ಈ ದಿಕ್ಕು ಮನೆಯಲ್ಲಿ ಸ್ಥಿರತೆ, ಅಧಿಕಾರ ಮತ್ತು ಸಂಪತ್ತನ್ನು ಸೂಚಿಸುತ್ತದೆ. ನೈರುತ್ಯದಲ್ಲಿ ಅತಿಥಿ ಕೋಣೆ ನಿರ್ಮಿಸಿದರೆ, ಅದು ಮನೆಯ ಯಜಮಾನನ ಸ್ಥಾನಮಾನಕ್ಕೆ ಧಕ್ಕೆ ತರುತ್ತದೆ. ಇದರಿಂದ ಸಂಪತ್ತು ನಾಶ, ಖರ್ಚುಗಳು ಹೆಚ್ಚಾಗುವುದು, ಸಾಲ ಹೆಚ್ಚಾಗುವುದು, ಮನಸ್ತಾಪಗಳು ಉಂಟಾಗುವುದು ಮತ್ತು ಮನೆಯ ಯಜಮಾನನೇ ಮನೆಯನ್ನು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ, ನೈರುತ್ಯ ದಿಕ್ಕಿನಲ್ಲಿ ಅತಿಥಿ ಕೋಣೆಯನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಅತಿಥಿ ಕೋಣೆಗೆ ಅತ್ಯಂತ ಶುಭಕರವಾದ ದಿಕ್ಕು ವಾಯುವ್ಯ (Northwest) ಮೂಲೆಯಾಗಿದೆ. ಈ ದಿಕ್ಕಿನಲ್ಲಿ ಅತಿಥಿ ಕೋಣೆಯನ್ನು ನಿರ್ಮಿಸುವುದು ಅತಿಥಿಗಳಿಗೆ ಮತ್ತು ಮನೆಯ ಸದಸ್ಯರಿಗೆ ಶುಭವನ್ನು ತರುತ್ತದೆ. ವಾಯುವ್ಯ ದಿಕ್ಕು ಸಂಚಾರ ಮತ್ತು ಚಲನೆಯೊಂದಿಗೆ ಸಂಬಂಧಿಸಿದೆ, ಇದು ಅತಿಥಿಗಳು ಬಂದಾಗ ಆರಾಮವಾಗಿ ತಂಗಲು ಮತ್ತು ಅವರ ಪ್ರವಾಸದ ನಂತರ ಸುಗಮವಾಗಿ ಮರಳಲು ಅನುವು ಮಾಡಿಕೊಡುತ್ತದೆ.

ವಾಯುವ್ಯದಲ್ಲಿ ಅತಿಥಿ ಕೋಣೆಯನ್ನು ಸಿದ್ಧಪಡಿಸುವಾಗ, ಕೆಲವು ವಾಸ್ತು ನಿಯಮಗಳನ್ನು ಪಾಲಿಸಬೇಕು. ಹಾಸಿಗೆಯನ್ನು ದಕ್ಷಿಣಕ್ಕೆ ತಲೆ ಮತ್ತು ಉತ್ತರಕ್ಕೆ ಕಾಲುಗಳು ಬರುವಂತೆ ಇಡಬೇಕು. ಅತಿಥಿ ಕೋಣೆಯೊಳಗೆ ಟಿ.ವಿ.ಯನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದು ಉತ್ತಮ. ಕೋಣೆಗೆ ತಿಳಿ ನೀಲಿ ಅಥವಾ ಬಿಳಿ ಬಣ್ಣಗಳನ್ನು ಬಳಸುವುದು ಹೆಚ್ಚು ಸೂಕ್ತ. ಹಸಿರು, ಹಳದಿ ಅಥವಾ ಕೆಂಪು ಬಣ್ಣಗಳನ್ನು ಅತಿಥಿ ಕೋಣೆಗೆ ಬಳಸುವುದನ್ನು ತಪ್ಪಿಸಬೇಕು. ಅತಿಥಿ ಕೋಣೆಯಲ್ಲಿ ಹೆಚ್ಚು ವಸ್ತುಗಳನ್ನು ಇಡಬಾರದು, ಸರಳ ಮತ್ತು ಸ್ವಚ್ಛ ವಾತಾವರಣವನ್ನು ಕಾಪಾಡಿಕೊಳ್ಳುವುದು ಅಗತ್ಯ. ಈ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಅತಿಥಿಗಳು ಆರಾಮವಾಗಿ ನೆಲೆಸಿ ಸಂತೋಷದಿಂದ ಮರಳುತ್ತಾರೆ, ಜೊತೆಗೆ ಮನೆಯಲ್ಲಿಯೂ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಗಾಸ್ಟಾರ್ ಚಿರಂಜೀವಿ ನಟನೆಯ ಹೊಸ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್? – Kannada News

‘ಮೆಗಾಸ್ಟಾರ್’ ಚಿರಂಜೀವಿ (Megastar Chiranjeevi) ಹಾಗೂ ನಿರ್ದೇಶಕ ಬಾಬಿ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಮೆಗಾ 158’ (Mega 158) ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಅಪ್‌ಡೇಟ್‌ಗಳು ಹೊರಬರುತ್ತಿದ್ದು, ಸಿನಿಪ್ರೇಕ್ಷಕರಲ್ಲಿ ಕುತೂಹಲ ದುಪ್ಪಟ್ಟಾಗಿದೆ. ‘ವಾಲ್ಟೇರ್ ವೀರಯ್ಯ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಈ ಜೋಡಿ ಮತ್ತೊಮ್ಮೆ ಒಂದಾಗಿದ್ದು, ಸದ್ಯ ತಮಿಳುನಾಡಿನ ಪ್ರಕೃತಿ ರಮಣೀಯ ತಾಣ ಪೊಳ್ಳಾಚಿಯಲ್ಲಿ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್ (Rachita Ram) ನಟಿಸುತ್ತಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಈಗಾಗಲೇ ಮಲ್ಟಿಸ್ಟಾರರ್ ಸಿನಿಮಾದಂತೆ ಕಾಣಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರಕ್ಕೆ ಈಗ ಕನ್ನಡದ ಖ್ಯಾತ ನಟಿ, ಡಿಂಪಲ್ ಕ್ವೀನ್ ರಚಿತಾ ರಾಮ್ ಎಂಟ್ರಿ ಕೊಟ್ಟಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಹರಿದಾಡುತ್ತಿದೆ. ರಜನಿಕಾಂತ್ ನಟನೆಯ ‘ಕೂಲಿ’ ಚಿತ್ರದ ನೆಗೆಟಿವ್ ಶೆಡ್ ಪಾತ್ರದ ಮೂಲಕ ಧೂಳೆಬ್ಬಿಸಿದ್ದ ರಚಿತಾ ರಾಮ್, ಈಗ ಮೆಗಾಸ್ಟಾರ್ ಚಿತ್ರದಲ್ಲಿ ಅತ್ಯಂತ ಪ್ರಮುಖ ಹಾಗೂ ಬಲಿಷ್ಠ ಪಾತ್ರವೊಂದನ್ನು ಪೋಷಿಸಲಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಈ ವಿಶಿಷ್ಟ ಪಾತ್ರಕ್ಕಾಗಿ ಮೊದಲು ಮಲಯಾಳಂ ಮೂಲದ ನಟಿ ಹನಿ ರೋಸ್ ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು. ಅವರು ಆರಂಭದಲ್ಲಿ ಆಸಕ್ತಿ ತೋರಿಸಿದರೂ, ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಇದೀಗ ಆ ಜಾಗಕ್ಕೆ ರಚಿತಾ ರಾಮ್ ಅವರನ್ನು ಕರೆತರಲಾಗಿದ್ದು, ಶೀಘ್ರದಲ್ಲೇ ಅವರು ಪೊಳ್ಳಾಚಿ ಶೆಡ್ಯೂಲ್‌ನಲ್ಲಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಗಾಸಿಪ್ ಹಬ್ಬಿದೆ.

ನಿರ್ದೇಶಕ ಬಾಬಿ ಈ ಬಾರಿ ಕೇವಲ ಆ್ಯಕ್ಷನ್ ಮಾತ್ರವಲ್ಲದೆ, ಕಥೆಯಲ್ಲಿ ನಾಯಕಿಯರ ಪಾತ್ರಗಳಿಗೂ ಅಷ್ಟೇ ತೂಕ ನೀಡಿದ್ದಾರೆ ಎಂಬುದು ಚಿತ್ರದ ತಾರಾಬಳಗವನ್ನು ನೋಡಿದರೆ ತಿಳಿಯುತ್ತದೆ. ಈಗಾಗಲೇ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಹಾಗೂ ಮಲಯಾಳಂನ ಉದಯೋನ್ಮುಖ ನಟಿ ಅನಸ್ವರ ರಾಜನ್ ಚಿತ್ರದ ಭಾಗವಾಗಿದ್ದಾರೆ. ಚಿತ್ರದಲ್ಲಿ ಅನಸ್ವರ ರಾಜನ್ ಅವರು ಚಿರಂಜೀವಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಖಚಿತವಾಗಿದೆ. ಇದರೊಂದಿಗೆ ಗ್ಲಾಮರಸ್ ನಟಿ ನಿವೇತಾ ಪೆತುರಾಜ್ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್

‘ಟಾಕ್ಸಿಕ್’, ‘ಜನ ನಾಯಗನ್’ ರೀತಿಯ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಕೆವಿಎನ್ ಪ್ರೊಡಕ್ಷನ್ಸ್’ ಈಗ ‘ಮೆಗಾ 158’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದೆ. ವೆಂಕಟ್ ಕೆ. ನಾರಾಯಣ್ ಮತ್ತು ಲೋಕೇಶ್ ಅವರು ಅತ್ಯಂತ ಅದ್ಧೂರಿ ವೆಚ್ಚದಲ್ಲಿ ಈ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ತಮನ್ ಎಸ್. ಸಂಗೀತ ನೀಡುತ್ತಿದ್ದು, ‘ಜೈಲರ್’ ಖ್ಯಾತಿಯ ವಿಜಯ್ ಕಾರ್ತಿಕ್ ಕಣ್ಣನ್ ಅವರ ಛಾಯಾಗ್ರಹಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:14 am, Sun, 7 June 26

Source link

ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..! – Kannada News

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೂವರು ಸ್ಟಾರ್ ಆಟಗಾರರಿಗೆ ಬಿಸಿಸಿಐ (BCCI) ಬಿಗ್ ಶಾಕ್ ನೀಡಿದೆ. ಮುಂಬರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದ ಟಿ20 ಸರಣಿಗಾಗಿ ಪ್ರಕಟಿಸಲಾದ ಭಾರತ ತಂಡದಲ್ಲಿ ರಜತ್ ಪಾಟಿದಾರ್, ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ಅವರಿಗೆ ಸ್ಥಾನ ನೀಡಲಾಗಿಲ್ಲ.

ರಜತ್ ಪಾಟಿದಾರ್‌: ಐಪಿಎಲ್ 2026 ರಲ್ಲಿ ಆರ್‌ಸಿಬಿ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದ ರಜತ್ ಪಾಟಿದಾರ್ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದ್ದರು. ಈ ಸೀಸನ್‌ನಲ್ಲಿ ಆಡಿದ 15 ಪಂದ್ಯಗಳಲ್ಲಿ 41.75 ರ ಸರಾಸರಿಯಲ್ಲಿ 501 ರನ್ ಗಳಿಸಿ ಟಾಪ್ ಫಾರ್ಮ್‌ನಲ್ಲಿದ್ದರು. ಆದಾಗ್ಯೂ, ಭಾರತ ಟಿ20 ತಂಡದ ಮಧ್ಯಮ ಕ್ರಮಾಂಕದಲ್ಲಿ ಪಾಟಿದಾರ್​​ಗೆ ಚಾನ್ಸ್​ ನೀಡಲಾಗಿಲ್ಲ.

ಕೃನಾಲ್ ಪಾಂಡ್ಯ: ಆರ್‌ಸಿಬಿ ಮಧ್ಯಮ ಕ್ರಮಾಂಕ ಹಾಗೂ ಸ್ಪಿನ್ ವಿಭಾಗಕ್ಕೆ ಬಲ ತುಂಬಿದ್ದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಕೂಡ ಆಯ್ಕೆದಾರರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಕೃನಾಲ್ ಕಳೆದ ಎರಡು ಸೀಸನ್​​ಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ 29 ವಿಕೆಟ್ ಪಡೆದಿದ್ದರು. ಈ ವೇಳೆ ಕೇವಲ 8.42 ಸರಾಸರಿಯಲ್ಲಿ ಮಾತ್ರ ರನ್ ನೀಡಿದ್ದಾರೆ. ಇದರ ನಡುವೆ 335 ರನ್​ ಕೂಡ ಕಲೆಹಾಕಿದ್ದಾರೆ. ಇದಾಗ್ಯೂ ಸ್ಪಿನ್ ಆಲ್​ರೌಂಡರ್ ಆಗಿ ಕೃನಾಲ್ ಪಾಂಡ್ಯರನ್ನು ಪರಿಗಣಿಸದೇ ಇರುವುದು ಅಚ್ಚರಿಯೇ ಸರಿ.

ಭುವನೇಶ್ವರ್ ಕುಮಾರ್: ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಈ ಬಾರಿಯ ಐಪಿಎಲ್‌ನಲ್ಲಿ ಬರೋಬ್ಬರಿ ಬರೋಬ್ಬರಿ 28 ವಿಕೆಟ್ ಕಬಳಿಸಿದ್ದರು. ಅಷ್ಟೇ ಅಲ್ಲದೆ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ವೇಗಿ ಎನಿಸಿಕೊಂಡಿದ್ದರು. ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿರುವ ಭುವಿ ಕೇವಲ 7.94 ಎಕಾನಮಿ ರೇಟ್​​ನಲ್ಲಿ ಮಾತ್ರ ರನ್ ನೀಡಿದ್ದರು. ಇದಾಗ್ಯೂ ಅನುಭವಿ ವೇಗಿಯನ್ನು ಆಯ್ಕೆದಾರರು ಕಡೆಗಣಿಸಿದ್ದಾರೆ.

  • ಇಲ್ಲಿ ಕೃನಾಲ್ ಪಾಂಡ್ಯರನ್ನು ಕಡೆಗಣಿಸಿ ಆಯ್ಕೆ ಮಾಡಿರುವುದು ವಾಷಿಂಗ್ಟನ್ ಸುಂದರ್ ಅವರನ್ನು ಎಂಬುದೇ ಅಚ್ಚರಿ.
  • ಭುವನೇಶ್ವರ್ ಕುಮಾರ್ ಬದಲಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವುದು ಹರ್ಷಿತ್ ರಾಣಾ.
  • ರಜತ್ ಪಾಟಿದಾರ್ ಬದಲಿಗೆ ಔಟ್ ಆಫ್ ಫಾರ್ಮ್​ನಲ್ಲಿರುವ ಆಲ್​ರೌಂಡರ್​ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿ ಎಂಟ್ರಿ: ಟೀಮ್ ಇಂಡಿಯಾದ 3 ತಂಡಗಳು ಪ್ರಕಟ

ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ ಇತಿಹಾಸದಲ್ಲೇ ಸತತ ಎರಡು ಬಾರಿ ಟ್ರೋಫಿ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೀರೊಗಳಿಗೆ ಬಿಸಿಸಿಐ ಕೊಟ್ಟ ಬಹುಮಾನ ಮಾತ್ರ ಶೂನ್ಯ! ಇದಕ್ಕೆ ಸಾಕ್ಷಿ ಈ ಮೂವರು ಮ್ಯಾಚ್​ ವಿನ್ನರ್​​ಗಳನ್ನು ನಿರ್ಲಕ್ಷಿಸಿರುವುದು.

Source link

ಕಾಂಗ್ರೆಸ್​​ ಪಾಳಯದಲ್ಲಿ ತೀವ್ರಗೊಂಡ ಸಚಿವಾಕಾಂಕ್ಷಿಗಳ ಲಾಬಿ: ಜಿಲ್ಲೆ ಜಿಲ್ಲೆಯಲ್ಲೂ ಭುಗಿಲೆದ್ದ ಬೆಂಬಲಿಗರ ಆಕ್ರೋಶದ ಜ್ವಾಲೆ – Kannada News

ಬೆಂಬಲಿಗರಿಂದ ಪ್ರತಿಭಟನೆಗಳುImage Credit source: tv9 kannada

ಬೆಂಗಳೂರು, ಜೂನ್​​ 07: ಸಿಎಂ ಡಿಕೆ ಶಿವಕುಮಾರ್ (DK Shivakumar) ಸಂಪುಟದಲ್ಲಿ ಖಾತೆ ಗುದ್ದಾಟ ಜೋರಾಗಿದೆ. ಅದರಲ್ಲೂ  ಬೆಂಬಲಿಗರ ಹೈಡ್ರಾಮಾಗಳು ಒಂದಾ ಎರಡಾ. ಸಚಿವಾಕಾಂಕ್ಷಿಗಳ ಲಾಬಿ, ಒತ್ತಡ ತಂತ್ರಗಳು ತೀವ್ರಗೊಂಡಿವೆ. ತಮ್ಮ ನಾಯಕರ ಪರ ಜಿಲ್ಲೆ ಜಿಲ್ಲೆಯಲ್ಲೂ ಬೆಂಬಲಿಗರು ಆಕ್ರೋಶದ ಜ್ವಾಲೆ ಹೊರ ಹಾಕುತ್ತಿದ್ದಾರೆ. ಬೆಂಗಳೂರಿನಿಂದ ಹಿಡಿದು ಬಾಗಲಕೋಟೆ, ಗದಗದಿಂದ ಹಿಡಿದು ಕೊಪ್ಪಳದವರೆಗೆ ಈಗ ಕಾಂಗ್ರೆಸ್​​ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮುಖ್ಯಾಂಶಗಳು

  • ತೀವ್ರಗೊಂಡ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ
  • ಜಿಲ್ಲೆ ಜಿಲ್ಲೆಗಳಲ್ಲಿ ಬೆಂಬಲಿಗರಿಂದ ಪ್ರತಿಭಟನೆ
  • ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ ಕಸರತ್ತು

ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಖಾತೆ ಹಂಚಿಕೆ ಬಳಿಕ ಅಸಮಾಧಾನ ಸ್ಫೋಟಗೊಂಡಿತ್ತು. ಒಂದೆಡೆ ಸಚಿವ ರಾಮಲಿಂಗಾರೆಡ್ಡಿ, ಮುನಿಯಪ್ಪ ಖಾತೆ ಕ್ಯಾತೆಯ ಮಧ್ಯೆ ಸಿಎಂ ಡಿಕೆ ಶಿವಕುಮಾರ್​ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಗುಪ್ತ್ ಮೀಟಿಂಗ್ ಮಾಡಿದ್ದಾರೆ. ಈ ವೇಳೆ ಇಬ್ಬರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲಹೆ ನೀಡಿದ್ದರು. ಅದರಂತೆ ಈಗ ಇಬ್ಬರು ಸಚಿವರು ಕೂಲ್ ಆಗಿದ್ದಾರೆ. ಆದರೆ ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗದ ಆಕಾಂಕ್ಷಿಗಳ ಆಕ್ರೋಶದ ಕಟ್ಟೆ ಹೊಡೆದಿದೆ.

ಜಮೀರ್​ಗೆ ಸಚಿವ ಸ್ಥಾನ ನೀಡುವಂತೆ ಪಟ್ಟು: ಬೆಂಬಲಿಗರ ಪ್ರತಿಭಟನೆ

ರಾಜ್ಯದಲ್ಲಿ ಅತೀ ಹೆಚ್ಚು ಸದ್ದು ಮಾಡುತ್ತಿರುವ ಹೆಸರು ಜಮೀರ್. ಜಿಲ್ಲೆ ಜಿಲ್ಲೆಯಲ್ಲೂ ಜಮೀರ್ ಬೆಂಬಲಿಗರು ಬೀದಿಗಿಳಿದಿದ್ದರು. ನಿನ್ನೆ ಕೂಡ ಬೆಂಗಳೂರು, ಚಿತ್ರದುರ್ಗ, ರಾಯಚೂರು, ರಾಮನಗರ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಮೀರ್ ಬೆಂಬಲಿಗರು, ಮುಸ್ಲಿಂ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದ್ದರು. ಮುಸ್ಲಿಂ ಪ್ರಭಾವಿ ನಾಯಕನಿಗೆ ಡಿಸಿಎಂ ಪಟ್ಟ ಹಾಗೂ ಸಚಿವ ಸ್ಥಾನ ಕೊಡಬೇಕು ಅಂತಾ ಆಗ್ರಹಿಸಿದ್ದರು.

ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್​​​ ಹೇಳಿದ ಆ ಒಂದು ಮಾತು ನನ್ನ ನಿರ್ಧಾರ ಬದಲಿಸಿದೆ ಎಂದ ರಾಮಲಿಂಗಾರೆಡ್ಡಿ

ಬಾಗಲಕೋಟೆ, ಚಿತ್ರದುರ್ಗದಲ್ಲಿ ಜಮೀರ್ ಆಡಿಯೋ ವೈರಲ್ ಹಿಂದೆ ದೊಡ್ಡ ಷಡ್ಯಂತ್ರ ಅಂತಾ ಜಮೀರ್ ಬೆಂಬಲಿಗರು ಕಿಡಿಕಾರಿದ್ದಾರೆ. ಕಾಂಗ್ರೆಸ್ 134 ಸೀಟ್ ಗೆಲ್ಲೋದಕ್ಕೆ ಜಮೀರ್ ಕೂಡ ಕಾರಣ ಅಂತಾ ರಾಮನಗರದಲ್ಲಿ ಬೆಂಬಲಿಗರು ಜೈಕಾರ ಕೂಗಿದರು. ಜಮೀರ್ 85 ಲಕ್ಷ ಮುಸ್ಲಿಂ ಸಮುದಾಯವನ್ನ ಪ್ರತಿನಿಧಿಸುತ್ತಾರೆ. ಕ್ಯಾಬಿನೆಟ್‌ನಲ್ಲಿ ಅವಕಾಶ ಸಿಗದಿದ್ದರೆ ಮುಂದೆ ಕಾಂಗ್ರೆಸ್‌ಗೆ ಪಾಠ ಕಲಿಸೋದಾಗಿ ಬೆಂಬಲಿಗರು ಎಚ್ಚರಿಸಿದ್ದಾರೆ.

ಜಮೀರ್​ಗೆ ತಾಳ್ಮೆ, ನಿಷ್ಠೆ, ಬದ್ಧತೆ ಬಗ್ಗೆ ಖಾದರ್ ಪಾಠ! 

ಅತ್ತ ಜಮೀರ್​ಗೆ ಪರೋಕ್ಷವಾಗಿ ಟಾಂಗ್ ನೀಡಿದ ಸಚಿವ ಯು.ಟಿ.ಖಾದರ್‌, ತಾಳ್ಮೆ, ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ ಅಂತೆಲ್ಲ ಪಾಠ ಮಾಡಿದ್ದಾರೆ.

ಇನ್ನು ಸಚಿವ ಸ್ಥಾನಕ್ಕಾಗಿ ಲಾಬಿ ಇಷ್ಟಕ್ಕೆ ಮುಗಿಯಲಿಲ್ಲ. ಗದಗದಲ್ಲಿ ಶಾಸಕ ಜಿ.ಎಸ್.ಪಾಟೀಲ್ ಬೆಂಬಲಿಗರು ಉರುಳು ಸೇವೆ ಮಾಡಿದರು. ಗಜೇಂದ್ರಗಢ ತಾಲೂಕಿನ ನರೇಗಲ್ ಪಟ್ಟಣದಲ್ಲಿ 101 ಟೆಂಗಿನಕಾಯಿ ಒಡೆದು ಹರಕೆ ಕಟ್ಟಿಕೊಂಡರು.

ಡಿಕೆ ಶಿವಕುಮಾರ್​ ಕೊಟ್ಟ ಮಾತು ನೆನಪಿಸಿಕೊಂಡ ಲಕ್ಷ್ಮಣ ಸವದಿ

ಶಿವಮೊಗ್ಗದಲ್ಲಿ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಸಿದ್ದರಾಮಯ್ಯ ಸರ್ಕಾರದಲ್ಲಿ ನನಗೆ ಅವಕಾಶ ಸಿಗಲಿಲ್ಲ. ಈಗಲಾದರೂ ಕೊಡಿ ಅಂದ್ರೆ, ಬಳ್ಳಾರಿಯಲ್ಲಿ ಸಂಸದ ತುಕಾರಾಂ, ಪರೋಕ್ಷವಾಗಿ ಮಾಜಿ ಸಚಿವ ನಾಗೇಂದ್ರಗೆ ಮಂತ್ರಿಗಿರಿ ಬೇಡ. ಕ್ಲೀನ್ ಇಮೇಜ್ ಇರೋರಿಗೆ ಕೊಡಿ ಅಂತಾ ಹೇಳಿದ್ದಾರೆ. ಇನ್ನು ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ ಅಂತಾ ಲಕ್ಷ್ಮಣ ಸವದಿ ಕೊಟ್ಟ ಮಾತು ನೆನಪಿಸಿದರು.

ಇದನ್ನೂ ಓದಿ: ತಣ್ಣಗಾಯ್ತು ಮುನಿಯಪ್ಪ ಮುನಿಸು, ನಿಲ್ಲದ ಜಮೀರ್‌ ಬೆಂಬಲಿಗರ ಆಕ್ರೋಶ: ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ

ಕೊಪ್ಪಳದಲ್ಲಿ ಶಾಸಕ ಹಿಟ್ನಾಳ್ ಬೆಂಬಲಿಗರು ಸಭೆ ಸೇರಿ, ಸೋಮವಾರ ಪ್ರತಿಭಟನೆಗೆ ಕರೆ ನೀಡಿದ್ದರು. ಗಂಗಾವತಿ ನಗರದ ಶ್ರೀ ಕೃಷ್ಣ ದೇವರಾಯ ಸರ್ಕಲ್​ನಲ್ಲಿ ಶಿವರಾಜ ತಂಗಡಗಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಒಟ್ಟಿನಲ್ಲಿ ಖಾತೆ ಹಂಚಿಕೆ ಕಗ್ಗಂಟು ಈಗಷ್ಟೇ ಕ್ಲಿಯರ್ ಆಗಿದೆ. ಸಂಪುಟ ವಿಸ್ತರಣೆಯಾದರೆ ಸಂಪುಟ ಕಿಚ್ಚು ಮತ್ತಷ್ಟು ಹೊತ್ತಿ ಉರಿರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ವರದಿ: ಬ್ಯುರೋ ರಿಪೋರ್ಟ್ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Daily Devotional: ಯಾವ್ಯಾವ ಜಪಮಾಲೆಯಿಂದ ಜಪ ಮಾಡಿದ್ರೆ ಏನೇನು ಫಲ ಗೊತ್ತಾ? – Kannada News

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಯಾವ್ಯಾವ ಜಪಮಾಲೆಯಿಂದ ಜಪ ಮಾಡಿದ್ರೆ ಏನೇನು ಫಲ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ನಮ್ಮ ಜೀವನದಲ್ಲಿ ದೈವಿಕ ಅನುಗ್ರಹ ಪಡೆಯಲು ಜಪ ಒಂದು ವಿಶೇಷ ಮಾರ್ಗವಾಗಿದೆ. ಕಲಿಯುಗದಲ್ಲಿ ಇದು ಅತ್ಯಂತ ಪ್ರಮುಖವಾದ ಸಾಧನ. ಪೂಜೆ, ಹೋಮಗಳಂತಹ ಕಠಿಣ ವಿಧಿಗಳಿಗಿಂತ ಜಪ ಸುಲಭ ಮತ್ತು ಹೆಚ್ಚು ಫಲಕಾರಿ. ಭಗವಂತನಿಗೆ ಬೇಕಾಗಿರುವುದು ನಮ್ಮ ಪ್ರೀತಿ ಮತ್ತು ಭಕ್ತಿ ಮಾತ್ರ.

ಜಪ ಮಾಡಲು ಹಲವು ಮಾಲೆಗಳಿದ್ದರೂ, ಕಲಿಯುಗದಲ್ಲಿ ನಾಲ್ಕು ಮಾಲೆಗಳಿಗೆ ವಿಶೇಷ ಪ್ರಾಶಸ್ತ್ಯವಿದೆ: ತುಳಸಿ ಮಾಲೆ, ರುದ್ರಾಕ್ಷಿ ಮಾಲೆ, ಸ್ಪಟಿಕ ಮಾಲೆ, ಮತ್ತು ಕಮಲದ ಮಾಲೆ. ಈ ಮಾಲೆಗಳು ಏಕಾಗ್ರತೆಯನ್ನು ಹೆಚ್ಚಿಸಿ, ನಮ್ಮ ನಂಬಿಕೆಯನ್ನು ಬಲಪಡಿಸುತ್ತವೆ. ರುದ್ರಾಕ್ಷಿ ಮಾಲೆಯು ಶಿವನ ನೇರ ಅನುಗ್ರಹವನ್ನು ನೀಡಿ ಅಕಾಲ ಮೃತ್ಯುವನ್ನು ದೂರ ಮಾಡುತ್ತದೆ. ತುಳಸಿ ಮಾಲೆಯು ವಿಷ್ಣುವಿಗೆ ಪ್ರಿಯವಾಗಿದ್ದು, ಅದನ್ನು ಧಾರಣೆ ಮಾಡುವುದರಿಂದ ಅಶ್ವಮೇಧ ಯಜ್ಞದ ಫಲ ಸಿಗುತ್ತದೆ ಎಂದು ಗುರೂಜಿ ಹೇಳಿದ್ದಾರೆ.

 

 

 

Source link

Domestic LPG Cylinder Price Hike: ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಶಾಕ್! ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 29 ರೂ. ಹೆಚ್ಚಳ – Kannada News

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 29 ರೂ. ಹೆಚ್ಚಳ

ನವದೆಹಲಿ, ಜೂನ್ 07: ಪೆಟ್ರೋಲ್, ಡೀಸೆಲ್ ಮತ್ತು ಸಿಎನ್​ಜಿ ಬೆಲೆ ಏರಿಕೆಯ ಬೆನ್ನಲ್ಲೇ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಬಂದೊದಗಿದ್ದು, ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ 29 ರೂ. ಹೆಚ್ಚಳ ಮಾಡಲಾಗಿದೆ. ಕಳೆದ ಮೂರು ತಿಂಗಳಲ್ಲಿ ನಡೆದಿರುವ ಎರಡನೇ ದರ ಏರಿಕೆ ಇದಾಗಿದೆ. ಈ ಹೊಸ ಪರಿಷ್ಕರಣೆಯೊಂದಿಗೆ, ದೆಹಲಿಯಲ್ಲಿ 14.2 ಕೆಜಿ ತೂಕದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 913 ರೂಪಾಯಿಯಿಂದ 942 ರೂಪಾಯಿಗೆ ಏರಿಕೆಯಾಗಿದೆ. ಪರಿಷ್ಕೃತ ದರಗಳು ಜೂನ್ 7 ರಿಂದಲೇ ಜಾರಿಗೆ ಬಂದಿವೆ ಎಂದು ಉದ್ಯಮದ ಮೂಲಗಳನ್ನು ಉಲ್ಲೇಖಿಸಿ ಪಿಟಿಐ (PTI) ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಖ್ಯಾಂಶಗಳು

  • ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 29 ರೂಪಾಯಿ ಹೆಚ್ಚಳವಾಗಿದೆ.
  • ದೆಹಲಿಯಲ್ಲಿ ಸಿಲಿಂಡರ್ ಬೆಲೆ 942 ರೂಪಾಯಿಗೆ ಭಾರಿ ಏರಿಕೆ ಕಂಡಿದೆ.
  • ತೈಲ ಕಂಪನಿಗಳ ಅಂಡರ್-ರಿಕವರಿ ವೆಚ್ಚ ಇನ್ನು 700 ರೂಪಾಯಿ ಇದೆ.

ಜಾಗತಿಕ ಬಿಕ್ಕಟ್ಟಿನ ಎಫೆಕ್ಟ್

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ನಿರಂತರ ಸಂಘರ್ಷದಿಂದಾಗಿ ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ಮೇಲೆ ಭಾರಿ ಒತ್ತಡ ಉಂಟಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಗಗನಕ್ಕೇರಲು ಪ್ರಮುಖ ಕಾರಣವಾಗಿದೆ.

ಇದಕ್ಕೂ ಮುನ್ನ, ಮಾರ್ಚ್ 7 ರಂದು ಪ್ರತಿ ಸಿಲಿಂಡರ್ ಬೆಲೆಯನ್ನು 60 ರೂ. ಹೆಚ್ಚಿಸಲಾಗಿತ್ತು. ಪ್ರಸ್ತುತ ಮಾಡಲಾದ ದರ ಏರಿಕೆಯು ತೈಲ ಕಂಪನಿಗಳಿಗೆ ದೇಶೀಯ ಎಲ್‌ಪಿಜಿ ಮಾರಾಟದಲ್ಲಿ ಆಗುತ್ತಿರುವ ನಷ್ಟವನ್ನು ಭಾಗಶಃ ಮಾತ್ರ ಸರಿದೂಗಿಸಿದೆ ಎಂದು ಮೂಲಗಳು ತಿಳಿಸಿವೆ.ಈ ದರ ಪರಿಷ್ಕರಣೆಯು ದೇಶಾದ್ಯಂತ ಅನ್ವಯವಾಗಲಿದ್ದರೂ, ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ವೆಚ್ಚಗಳ ವ್ಯತ್ಯಾಸದಿಂದಾಗಿ ಪ್ರತಿ ನಗರದಲ್ಲೂ ಸಿಲಿಂಡರ್‌ನ ಅಂತಿಮ ಬೆಲೆಯಲ್ಲಿ ವ್ಯತ್ಯಾಸವಿರಲಿದೆ.

ಸುಜಾತಾ ಶರ್ಮಾ ಹೇಳಿದ್ದೇನು?

ಗುರುವಾರದಂದು ನಡೆದ ಅಂತರ-ಸಚಿವಾಲಯದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಆಮದನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಎಲ್‌ಪಿಜಿ ಲಭ್ಯತೆಯನ್ನು ಸಮರ್ಪಕವಾಗಿ ಕಾಯ್ದುಕೊಳ್ಳಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಇದನ್ನೂ ಓದಿ Commercial LPG cylinder Price Hike: ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ

ಗೃಹಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ಮೇಲಿನ ಅಂಡರ್-ರಿಕವರಿ (ತೈಲ ಕಂಪನಿಗಳಿಗೆ ಆಗುತ್ತಿರುವ ನಷ್ಟದ ಕೊರತೆ ಭರ್ತಿ ವೆಚ್ಚ) ಕುರಿತು ಹೇಳುವುದಾದರೆ, ಇದು ಇಂದಿಗೂ ಪ್ರತಿ ಸಿಲಿಂಡರ್‌ಗೆ ಸುಮಾರು 700 ರೂಪಾಯಿಗಳ ಆಸುಪಾಸಿನಲ್ಲೇ ಇದೆ ಎಂದು ಶರ್ಮಾ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಇತರರ ತಪ್ಪಿಗೆ ತಮ್ಮನ್ನು ತಾವೇ ಶಪಿಸಿಕೊಳ್ಳುವರು – Kannada News

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಐಂದ್ರ, ಕರಣ : ಬವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:14 – 18:50, ಯಮಗಂಡ ಕಾಲ 12:23 – 14:00, ಗುಳಿಕ ಕಾಲ 15:37 – 17:14.

ಮೇಷ ರಾಶಿ: ಅಂಧಕಾರದಿಂದ ಇಂದು ಅತಿಯಾಗಿ ಭಯಗೊಳ್ಳುವಿರಿ. ಮನಸ್ಸು ಶಾಂತವಾಗಿರುವುದು. ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿ. ಸಕಾರಾತ್ಮಕವಾಗಿರಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಸಂಪತ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ನೀವು ಪಡೆಯುತ್ತೀರಿ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಗಟ್ಟಿಯಾಗುತ್ತದೆ.

ವೃಷಭ ರಾಶಿ: ಪಿತ್ರಾರ್ಜಿತ ಸಂಪತ್ತಿನಿಂದ ಸುಖವು ಇರುವುದು. ಸಹೋದರ ಜೊತೆ ಕಲಹವು ಆಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಯತ್ನಗಳನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಉತ್ಸಾಹವನ್ನು ನಿಯಂತ್ರಿಸಿ, ಆರ್ಥಿಕವಾಗಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ಇಂದು, ವ್ಯವಹಾರ ಸಂಬಂಧಿತ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ. ಪರಿಚಯವಿಲ್ಲದ ಜನರಿಂದ ನೀವು ಅಂತರವನ್ನು ಕಾಯ್ದುಕೊಳ್ಳುವಿರಿ. ವೃತ್ತಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳ ನಿರೀಕ್ಷೆಯಲ್ಲಿ ಇರುವಿರಿ.

ಮಿಥುನ ರಾಶಿ: ಕುಟುಂಬದಲ್ಲಿ ನೆಮ್ಮದಿ ಸಿಗದೆಂದು ಮತ್ತೇನನ್ನೋ ಮಾಡಲು ಹೋಗುವುದು ಬೇಡ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಹಿರಿಯ ವ್ಯಕ್ತಿತ್ವಕ್ಕೆ ಶರಣಾಗುವಿರಿ. ನಿಮ್ಮ ಕಾರ್ಯಗಳ ಮೇಲೆ ಕೇಂದ್ರೀಕರಿಸಿ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸ್ನೇಹಿತರ ಜೊತೆ ಸಂಬಂಧದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯವು ಪರಿಹರಿಸಲ್ಪಡುತ್ತದೆ. ಭೂಮಿಯ ವ್ಯವಹಾರದಲ್ಲಿ ಬೇಸರ ಬರಬಹುದು.

ಕರ್ಕಾಟಕ ರಾಶಿ: ನವೀನ ಆಲೋಚನೆಗಳು ಮತ್ತು ಸೃಜನಶೀಲತೆಯೊಂದಿಗೆ ಮಾಡಿದ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ವ್ಯಾಪಾರ ಬೆಳವಣಿಗೆಗೆ ಹೊಸ ಅವಕಾಶಗಳ ಮೇಲೆ ಕಣ್ಣಿಡಿ. ರಾಜಕಾರಣಿಗಳಿಗೆ ಇಂದು ಶುಭ ದಿನವಾಗಿರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಬೆಳವಣಿಗೆಗೆ ಅವಕಾಶವಿರುತ್ತದೆ. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು.

ಸಿಂಹ ರಾಶಿ: ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ವೃತ್ತಿ ಜೀವನದಲ್ಲಿ ಹೊಸ ಬದಲಾವಣೆಗಳಾಗಲಿವೆ. ಬಿರುಕನ್ನು ಜೋಡಿಸುವ ಕೆಲಸ ಮಾಡಲಾಗದು. ಎಲ್ಲಾ ಕಾರ್ಯಗಳಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಸಂಬಂಧಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ ನೀವು ಹಿರಿಯರ ಮಾತನ್ನು ಕೇಳಬೇಕು ಮತ್ತು ಅನುಸರಿಸುವದೂ ಮುಖ್ಯ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು.

ಕನ್ಯಾ ರಾಶಿ: ಕೆಲಸವು ಮಧ್ಯಂತರವಾಗಿ ಮುಂದುವರಿಯುತ್ತದೆ. ಒಳ್ಳೆಯ ವಿಚಾರವನ್ನೇ ನಿರಂತರ ಸ್ಮರಿಸುವಂತೆ ಬುದ್ಧಿಯನ್ನು ಮಾಡುವಿರಿ. ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕೆಲವು ಕಾರ್ಯಗಳಲ್ಲಿ ನೀವು ಅಡೆತಡೆಗಳನ್ನು ಎದುರಿಸಬಹುದು. ಅತಿಯಾದ ಕೋಪವನ್ನು ತಪ್ಪಿಸಿ. ಆದಾಯದ ಸ್ವಲ್ಪ ಭಾಗವನ್ನು ಉಳಿಸಲು ಬೇಕಾದ ಚಿಂತನೆ ಇರಲಿದೆ. ಯಾವುದಾರೂ ಅಪ್ರಬುದ್ಧ ವಿವಾದಕ್ಕೆ ಸಿಲುಕಿಕೊಂಡು ಮನಸ್ತಾಪವಾಗುವುದು.

ತುಲಾ ರಾಶಿ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಾಣುವುದು. ನೀವು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ, ಇಲ್ಲದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು. ಉದ್ಯಮಿಗಳಿಗೆ ಸಮಯ ಉತ್ತಮವಾಗಿಲ್ಲ. ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. ಕೆಲವರಿಗೆ ಮಿತ್ರರ ನೆರವಿನಿಂದ ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ಸಿಗಲಿವೆ. ಪ್ರಣಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಇದು ನಿಮ್ಮ ಪ್ರಚಾರದ ಮೇಲೂ ಪರಿಣಾಮ ಬೀರಬಹುದು.

ವೃಶ್ಚಿಕ ರಾಶಿ: ಇಂದು ಅಕಾರಣ ಹಾಗೂ ಶೀಘ್ರ ಕೋಪಿಗಳಾಗುವಿರಿ. ನಿಮ್ಮ ಆಯ್ಕೆಯ ಹೊಸ ಯೋಜನೆಯಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಕೆಲಸದ ಬಗ್ಗೆ ಜಾಗರೂಕರಾಗಿರಿ. ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಪ್ರಣಯ ಜೀವನವನ್ನು ಸುಧಾರಿಸಲು ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು. ಇಂದು ನೀವು ಜನರನ್ನು ಆಕರ್ಷಿಸುವಿರಿ. ಜನರು ನಿಮ್ಮ ಆಲೋಚನಾ ವಿಧಾನವನ್ನು ಇಷ್ಟಪಡುತ್ತಾರೆ.

ಧನು ರಾಶಿ: ನಿಮಗೆ ಬಂದ ಕಾರ್ಯಗಳನ್ನು ನೀವೇ ಮಾಡಿ. ವ್ಯವಹಾರ ಸಂಬಂಧಿತ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ. ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಿ. ಇಂದು ನೀವು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಇಂದು ನೀವು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ವಿರೋಧಿಗಳನ್ನು ತತ್ಸಾರ ಮಾಡುವ ಅವಶ್ಯಕತೆ ಇಲ್ಲ. ನೀವು ಯೋಜಿಸಿದ ನಿಮ್ಮ ಕೆಲಸವೂ ಪೂರ್ಣಗೊಳ್ಳುವುದಿಲ್ಲ.

ಮಕರ ರಾಶಿ: ಈ ದಿನವನ್ನು ಕಳೆಯಲು ನಿಮಗೆ ಕಷ್ಟವಾಗುವುದು. ಹೊಸ ಆರ್ಥಿಕ ವ್ಯವಹಾರಗಳನ್ನು ಇಂದು ನೀವು ಮಾಡಿರಿ. ಹಣದ ಒಳಹರಿವಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧವು ಬಲವಾಗಿರುತ್ತದೆ. ನೀವು ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಕೆಲವು ಉತ್ತಮ ಅವಕಾಶಗಳನ್ನು ಪಡೆಯಬಹುದು.

ಕುಂಭ ರಾಶಿ: ವೃತ್ತಿ ಜೀವನದಲ್ಲಿ ಪರಿಚಯಗಳು ಹೆಚ್ಚಾಗುತ್ತವೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಕೆಲವು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬಹುದು. ಹಣವನ್ನು ಎರವಲು ಪಡೆಯುವುದನ್ನು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ನಿಮ್ಮ ದೇಹದ ಬಗ್ಗೆ ಹೆಚ್ಚು ಗಮನ ಕೊಡುವಿರಿ. ಒಂಟಿ ಜನರು ಇಂದು ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ನಿಮ್ಮ ಆದಾಯದ ಜೊತೆಗೆ ನಿಮ್ಮ ಖರ್ಚುಗಳೂ ಹೆಚ್ಚಾಗುತ್ತವೆ.

ಮೀನ ರಾಶಿ: ಆಪ್ತರ ಭೇಟಿ ಹಾಗೂ ಮಾರ್ಗದರ್ಶನದ ಸುತ್ತಾಟದಲ್ಲಿ ಈ ದಿನ ಮುಕ್ತಾಯಗೊಳ್ಳಲಿದೆ‌. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಲಿದೆ. ನಿಮ್ಮ ಸಂಗಾತಿಯ ಜೊತೆಗೆ ಇಂದು ಸುಂದರ ಕ್ಷಣಗಳನ್ನು ಕಳೆಯುತ್ತೀರಿ. ಆರ್ಥಿಕವಾಗಿ ದಿನವು ಉತ್ತಮವಾಗಿರುತ್ತದೆ.ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ವಿಶೇಷ ವ್ಯಕ್ತಿಯ ಬಗ್ಗೆ ಒಂಟಿ ಜನರ ಆಸಕ್ತಿ ಹೆಚ್ಚಾಗುತ್ತದೆ. ಇಂದು ನಿಮ್ಮ ಭಾವನೆಗಳನ್ನು ನಿಮ್ಮ ಪ್ರೇಮಿಗೆ ಮುಕ್ತವಾಗಿ ವ್ಯಕ್ತಪಡಿಸಿ.

ಲೋಹಿತ್ ಹೆಬ್ಬಾರ್-8762924271 (what’s app only)

Source link