All posts by nagaraj11081993

ಸಿಎಂ ಡಿಕೆ ಶಿವಕುಮಾರ್​​​ ಹೇಳಿದ ಆ ಒಂದು ಮಾತು ನನ್ನ ನಿರ್ಧಾರ ಬದಲಿಸಿದೆ ಎಂದ ರಾಮಲಿಂಗಾರೆಡ್ಡಿ – Kannada News

ಬೆಂಗಳೂರು, ಜೂ.6 : ನೂತನ ಸಚಿವರಾದ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಜಟಾಪಟಿಯು ಬಹುತೇಕ ಇತ್ಯರ್ಥಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ಕುರಿತು ಟಿವಿ9 ಜೊತೆ ಮಾತನಾಡಿರುವ ರಾಮಲಿಂಗಾರೆಡ್ಡಿ, “ನೆನ್ನೆ ರಾತ್ರಿ ನಾನು ಮತ್ತು ಮುಖ್ಯಮಂತ್ರಿಗಳು ಭೇಟಿಯಾಗಿ ಮಾತುಕತೆ ನಡೆಸಿದೆವು. ನನ್ನ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ತಗೊಳ್ಳೋದಿಲ್ಲ, ನಾನು ಅದನ್ನು ಸ್ವೀಕರಿಸುವುದಿಲ್ಲ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ಎರಡು ವರ್ಷ ಕಾಲ ನಮ್ಮ ಜೊತೆ ಇದ್ದು ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ” ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ರಾಜೀನಾಮೆಯನ್ನು ಸ್ವೀಕರಿಸದಿರುವುದರಿಂದ ಅದು ತಿರಸ್ಕೃತಗೊಂಡಿದೆ ಎಂದೇ ಅರ್ಥ. ಖಾತೆ ವಿಚಾರದ ಬಗ್ಗೆ ಮುಂದಕ್ಕೆ ಮುಖ್ಯಮಂತ್ರಿಗಳು ಮತ್ತು ವರಿಷ್ಠರು ನೋಡಿಕೊಳ್ಳುತ್ತಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಯಾವುದೇ ನಿರ್ದಿಷ್ಟ ಬೇಡಿಕೆಗಳನ್ನು ಇಟ್ಟಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರಣ್‌ದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಹಿರಿಯ ನಾಯಕರು ತಮ್ಮ ನಿರ್ಧಾರವನ್ನು ವಾಪಸ್ ಪಡೆಯುವಂತೆ ಕರೆ ಮಾಡಿ ಮನವಿ ಮಾಡಿದ್ದರು ಎಂದು ರೆಡ್ಡಿ ವಿವರಿಸಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ತಾವು ವರಿಷ್ಠರ ಮಾತಿಗೆ ಬದ್ಧರಾಗಿರುವುದಾಗಿ ತಿಳಿಸುವ ಮೂಲಕ ರಾಜೀನಾಮೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಯಗೊಂಡಾಗ ಕೈ ಕಾಲುಗಳು ನಡುಗುವುದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ? – Kannada News

ಚಳಿಯಾದಾಗ ಮಾತ್ರವಲ್ಲ ಭಯಗೊಂಡಾಗಲು ದೇಹದಲ್ಲಿ ನಡುಕ (trembling) ಉಂಟಾಗುತ್ತವೆ. ಹೌದು ಯಾವುದೋ ದುಸ್ವಪ್ನ ಕಂಡಾಗ, ಕತ್ತಲಲ್ಲಿ ಓಡಾಡಿದಾಗ ಅಥವಾ ಸಡನ್‌ ಆಗಿ ಏನಾದ್ರು ಸಂಗತಿಯನ್ನು ಕಂಡಾಗ ನಾವು ತಕ್ಷಣಕ್ಕೆ ಭಯಗೊಳ್ಳುತ್ತೇವೆ. ಭಯ ಎನ್ನುವಂತಹದ್ದು ಮನಸ್ಸಿನ ಭಾವನೆಯಾಗಿದ್ದು, ಈ ರೀತಿ ಭಯಗೊಂಡಾಗ ದೇಹ, ಕೈ ಕಾಲು ನಡುಗಲು ಪ್ರಾರಂಭವಾಗುತ್ತದೆ. ಈ ರೀತಿ ಭಯಗೊಂಡಾಗ ಕೈಕಾಲುಗಳಲ್ಲಿ ನಡುಕ ಉಂಟಾಗುವುದರ ಹಿಂದೆಯೂ ವೈಜ್ಞಾನಿಕ ಕಾರಣವಿದೆಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.

ಭಯಗೊಂಡಾಗ ಕೈಕಾಲು ನಡುಗುವುದೇಕೆ?

ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿಯು ಬೆದರಿಕೆಯನ್ನು ಅನುಭವಿಸಿದಾಗ, ಅವರ ಮೆದುಳಿನ ‘ಅಮಿಗ್ಡಾಲಾ’ ಭಾಗವು ಸಕ್ರಿಯಗೊಳ್ಳುತ್ತದೆ. ಈ ಭಾಗವು ಸಕ್ರಿಯಗೊಂಡ ತಕ್ಷಣ, ದೇಹವು ಸಕ್ರಿಯಗೊಳ್ಳುತ್ತದೆ, ಇದು ಸ್ವಯಂ ಸಂರಕ್ಷಣೆಯ ಪ್ರತಿಕ್ರಿಯೆಯಾಗಿದೆ.  ಇದಲ್ಲದೆ, ಭಯ ಅನುಭವಿಸಿದಾಗ, ದೇಹದಲ್ಲಿ ಅಡ್ರಿನಾಲಿನ್ ಹಾರ್ಮೋನ್ ವೇಗವಾಗಿ ಹೆಚ್ಚಾಗುತ್ತದೆ. ಈ ಹೆಚ್ಚಳವು ದೇಹದಲ್ಲಿ ವಿವಿಧ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು, ಉದಾಹರಣೆಗೆ ತ್ವರಿತ ಹೃದಯ ಬಡಿತ, ತ್ವರಿತ ಉಸಿರಾಟ ಅಥವಾ ಸ್ನಾಯುಗಳ ಒತ್ತಡ. ಈ ಒತ್ತಡವು ದೇಹವನ್ನು ನಡುಗಿಸಲು ಕಾರಣವಾಗಬಹುದು.   ಒಬ್ಬ ವ್ಯಕ್ತಿಯ ದೇಹವು ನಡುಗುತ್ತದೆ ಎಂದಾದರೆ, ದೇಹವು ಅಪಾಯವನ್ನು ಎದುರಿಸಲು ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ ಎಂದರ್ಥ. ಇದು ದೇಹದಲ್ಲಿ ಶಕ್ತಿಯನ್ನು ವೇಗವಾಗಿ ಸಕ್ರಿಯಗೊಳಿಸುತ್ತದೆ.

ಅಡ್ರಿನಾಲಿನ್ ಹಾರ್ಮೋನ್‌ ಭಯಗೊಂಡಾಗ ದೇಹ ನಡುಗಲು ಕಾರಣ:

ನಾವು ಭಯಭೀತರಾದಾಗ, ದೇಹದಲ್ಲಿ ‘ಅಡ್ರಿನಾಲಿನ್’ ಎಂಬ ಹಾರ್ಮೋನ್ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. ಈ ಹಾರ್ಮೋನ್ ಹೆಚ್ಚಳದಿಂದಾಗಿ, ಹೃದಯ ಬಡಿತ ವೇಗವಾಗಿ ಬಡಿಯಲು ಪ್ರಾರಂಭಿಸುತ್ತದೆ, ಉಸಿರಾಟದ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಸ್ನಾಯುಗಳಲ್ಲಿ ಸಾಕಷ್ಟು ಒತ್ತಡ ಉಂಟಾಗುತ್ತದೆ. ಸ್ನಾಯುಗಳಲ್ಲಿನ ಈ ಹಠಾತ್ ಒತ್ತಡದ ಹೆಚ್ಚಳದಿಂದಾಗಿ, ದೇಹವು ನಡುಗಲು ಪ್ರಾರಂಭಿಸುತ್ತದೆ. ಈ ನಡುಕವು ದೇಹವು ಸಂಭಾವ್ಯ ಬೆದರಿಕೆಯ ವಿರುದ್ಧ ಹೋರಾಡಲು ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ ಎಂಬುದರ ಸಂಕೇತವಾಗಿದೆ. ಇದರಿಂದಾಗಿ ದೇಹದಲ್ಲಿ ಬಹಳಷ್ಟು ಶಕ್ತಿಯು ಸಕ್ರಿಯಗೊಳ್ಳುತ್ತದೆ.

ಭಯದ ಮಟ್ಟವು ತುಂಬಾ ಹೆಚ್ಚಾದಾಗ, ಮಾನಸಿಕ ಮತ್ತು ದೈಹಿಕ ಪ್ರತಿಕ್ರಿಯೆಗಳು ಹೆಚ್ಚು ತೀವ್ರವಾಗುತ್ತವೆ. ಅಂತಹ ಸಮಯದಲ್ಲಿ, ಅತಿಯಾದ ಬೆವರುವುದು, ತಲೆತಿರುಗುವಿಕೆ ಅಥವಾ ಹೆಚ್ಚಿದ ಚಡಪಡಿಕೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರು ತೀವ್ರ ಭಯಗೊಂಡಾಗ ಮೂರ್ಛೆ ಹೋಗುವ ಸಾಧ್ಯತೆಯೂ ಇರುತ್ತದೆ.

ಇದನ್ನೂ ಓದಿ: ಮಹಿಳೆಯರೇ… ಗಾಜಿನ ಧರಿಸೋದು ಎಷ್ಟು ಪ್ರಯೋಜನಕಾರಿ ಗೊತ್ತೇ?

ಭಯವಾದಾಗ ಏನು ಮಾಡಬೇಕು?

ಒಬ್ಬ ವ್ಯಕ್ತಿಯು ತೀವ್ರವಾದ ಭಯವನ್ನು ಅನುಭವಿಸಿದಾಗ, ಅವನ ದೇಹವು ಒಂದು ನಿರ್ದಿಷ್ಟ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಇದರಲ್ಲಿ  ದೇಹದ ನಡುಕವೂ ಒಂದು. ಅಂತಹ ಪರಿಸ್ಥಿತಿಯಲ್ಲಿ, ಮನಸ್ಸನ್ನು ನಿಯಂತ್ರಿಸುವುದು ಅಥವಾ ಮನಸ್ಸನ್ನು ಶಾಂತವಾಗಿರಿಸುವುದು ತುಂಬಾನೇ ಮುಖ್ಯ. ನೀವು ಭಯವನ್ನು ಅನುಭವಿಸಿದರೆ, ಭಯಭೀತರಾಗಬೇಡಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ನಿಮ್ಮ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ ಮತ್ತು ಸಕಾರಾತ್ಮಕ ಆಲೋಚನೆಗಳೊಂದಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿ. ಇದು ಭಯವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಆದ ಮೊದಲ ಬಾರಿಗೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ: ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್​ – Kannada News

ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್​

ತುಮಕೂರು, ಜೂನ್​​ 06: ಗಂಗಾಧರನ ಅಜ್ಜನ ಹೆಸರಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದ ಡಿ.ಕೆ ಶಿವಕುಮಾರ್‌ (DK Shivakumar), ಇಂದು ಅದೇ ಅಜ್ಜನ ಸನ್ನಿಧಿಗೆ ಮುಖ್ಯಮಂತ್ರಿ ಆದ ಬಳಿಕ ಮೊದಲ ಭಾರಿಗೆ ಭೇಟಿ ನೀಡಿದರು. ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿಕೆರೆಯಲ್ಲಿರುವ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ಕೊಟ್ಟು ಅಜ್ಜಯ್ಯನ ಆಶೀರ್ವಾದ ಪಡೆದರು. ಶಿವಯೋಗೀಶ್ವರ ಶ್ರೀಗಳ ಸಮ್ಮುಖದಲ್ಲಿ ಮಠದ ಗದ್ದುಗೆಯಲ್ಲಿ 20 ನಿಮಿಷ ವಿಶೇಷ ಪೂಜೆ ನೆರವೇರಿತು. ಇದಕ್ಕೂ ಮುನ್ನ ತುಮಕೂರಿನ ಮಲ್ಲಾಘಟ್ಟ ಕೆರೆ ಬಳಿಯಲ್ಲಿರುವ ಗಂಗಾಧರೇಶ್ವರ ದೇಗುಲಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸದರು.

ಮುಖ್ಯಾಂಶಗಳು

  • ಸಿಎಂ ಡಿಕೆ ಶಿವಕುಮಾರ್​ ಮೊದಲ ತುಮಕೂರು ಕ್ಷೇತ್ರ ದರ್ಶನ
  • ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ
  • ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್​

ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್​ ನೇರವಾಗಿ ಗವಿ ಬಳಿ ತೆರಳಿ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳ ಸಮ್ಮುಖದಲ್ಲಿ ಅಜ್ಜಯ್ಯನಿಗೆ 20 ನಿಮಿಷ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ಈಡುಗಾಯಿ ಹೊಡೆದರು. ಬಳಿಕ ಆನೆ ಲಕ್ಷ್ಮೀಯಿಂದ ಆಶಿರ್ವಾದ ಪಡೆದರು. ಕೆಲಕಾಲ ಮಠದ ಆವರಣದಲ್ಲಿ ಓಡಾಡಿದ ಸಿಎಂ, ಬಂದ ಅಭಿಮಾನಿಗಳತ್ತ ಕೈಬೀಸಿದರು.

ಮುಖ್ಯಮಂತ್ರಿ ಆಗಿ ಬಂದಿಲ್ಲ, ಭಕ್ತನಾಗಿ ಬಂದಿದ್ದೇನೆ: ಡಿಕೆ ಶಿವಕುಮಾರ್

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ಮಠಕ್ಕೆ ಮುಖ್ಯಮಂತ್ರಿ ಆಗಿ ಬಂದಿಲ್ಲ, ಭಕ್ತನಾಗಿ ಬಂದಿದ್ದೇನೆ. ಮಠದ ಭಕ್ತನಾಗಿ ಬಂದು ನಾನು ಪ್ರಾರ್ಥನೆ ಮಾಡಿದ್ದೇ‌ನೆ. ಭಕ್ತನಿಗೂ ಹಾಗೂ ಭಗವಂತನಿಗೂ ಇರುವ ಸಂಬಂಧವಿದು. 24 ವರ್ಷದಿಂದ ನಾನು ಕಾಡಸಿದ್ದೇಶ್ವರ ಮಠಕ್ಕೆ ಬರ್ತಿದ್ದೇನೆ. ಮಠಕ್ಕೆ ಬಂದು ದರ್ಶನ, ಮಾರ್ಗದರ್ಶನವನ್ನ ಪಡೆದಿದ್ದೇನೆ. ನನಗೂ ಸೇರಿದಂತೆ ರಾಜ್ಯಕ್ಕೆ ಒಳ್ಳೆದಾಗಲೆಂದು ಪ್ರಾರ್ಥಿಸಿದ್ದೇನೆ ಎಂದರು.

ಸಿಎಂ ಆದ ನಂತರ ಮೊದಲ ಬಾರಿಗೆ ಈ ಸನ್ನಿಧಿಗೆ ಭೇಟಿ ನೀಡಿದ್ದೇನೆ

ಇನ್ನು ಇದಕ್ಕೂ ಮುನ್ನ ತುಮಕೂರಿನ ಮಲ್ಲಾಘಟ್ಟ ಕೆರೆ ಬಳಿಯಲ್ಲಿರುವ ಗಂಗಾಧರೇಶ್ವರ ದೇಗುಲಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ಸಿಎಂ ಆದ ನಂತರ ಮೊದಲ ಬಾರಿಗೆ ಈ ಸನ್ನಿಧಿಗೆ ಭೇಟಿ ನೀಡಿದ್ದೇನೆ. ಐತಿಹಾಸಿಕ  ಮತ್ತು ಪವಿತ್ರ ಮಲ್ಲಘಟ್ಟ ಕೆರೆಗೆ 3-4 ಬಾರಿ ಬಂದಿದ್ದೇನೆ. ಎಲ್ಲಾ ದೇವರನ್ನು ಇಲ್ಲಿಗೆ ಕತೆರಂದು ಸ್ನಾನಮಾಡಿಸಿ ಪೂಜೆ ಮಾಡಿತ್ತಾರೆ. ನಮ್ಮ ಗೃಹಪ್ರವೇಶದ ವೇಳೆ ಮಲ್ಲಘಟ್ಟ ಕೆರೆ ಸೇರಿದಂತೆ 5 ಕಡೆಯಿಂದ ನೀರು ತಂದಿದ್ದೆವು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೂತನ ಸಿಎಂ ಡಿಕೆ ಶಿವಕುಮಾರ್​​ಗೆ ಶುಭ ಹಾರೈಸಿದ ಲಿಂಗಾಯತ ಸ್ವಾಮೀಜಿಗಳು

ಮಲ್ಲಘಟ್ಟ ಕೆರೆ ಯಾವಾಗಲೂ ತುಂಬಿತುಳುಕುತ್ತಾ ಇರುತ್ತದೆ. ಕಳೆದ 25 ವರ್ಷಗಳಿಂದ ನಾನು ಈ ಜಾಗ ಗಮನಿಸುತ್ತಾ ಇದ್ದೀನಿ. ಈ ಪವಿತ್ರ ಕ್ಷೇತ್ರಕ್ಕೆ ಬಂದರೆ ಬಹಳ ಸಂತಸ, ನೆಮ್ಮದಿ ಸಿಗುತ್ತದೆ. ಈ ಭಾಗದಲ್ಲಿ 35 ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಯುತ್ತಿದೆ. ಸೋಪಾನ ಮಂಟಪ, ಗೆಸ್ಟ್ ಹೌಸ್ ಸೇರಿ ಸುಮಾರು ಖರ್ಚುಮಾಡಿದೆ. ಅಕ್ಕಪಕ್ಕದ ರೈತರಿಗೆ ಅನುಕೂಲವಾಗಲಿ ಎಂದು ಕಾಲುವೆ ನಿರ್ಮಿಸಲಾಗುವುದು. ಅಜ್ಜಯ್ಯನವರು, ಸ್ಥಳೀಯ ಸಂಸ್ಥೆಯನ್ನು ಕೇಳಿ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ.

ಹರಕೆ ಏನಿಲ್ಲ, ನನ್ನ ಭಾವನೆ ನನ್ನ ಭಕ್ತಿ ಎಂದ ಸಿಎಂ

ಇನ್ನು ಹರಕೆ ವಿಚಾರವಾಗಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ಮಲ್ಲಘಟ್ಟದ ಗಂಗಾಧರೇಶ್ವರನಿಗೆ ಹರಕೆ ಏನಿಲ್ಲ, ನನ್ನ ಭಾವನೆ ನನ್ನ ಭಕ್ತಿ. ಲೋಕಕಲ್ಯಾಣಕ್ಕಾಗಿ ಜನರಿಗೆ ಒಳ್ಳೆಯದಾಗಲಿ ಎಂದು ಬಂದಿದ್ದೇನೆ. ನನಗೆ ಸಿಕ್ಕಿರುವ ಅಧಿಕಾರ ಜನರಿಗೆ ಸಮರ್ಪಿಸಬೇಕೆಂದು ಬಂದಿರುವೆ. ಜನರು ನೆಮ್ಮದಿ, ಶಾಂತಿಯಿಂದ ಇರಬೇಕು, ಮಳೆ ಬೆಳೆ ಆಗಬೇಕು. ಈ ಭಾಗದ ಕೆರೆ ಕಟ್ಟೆಗಳು ಯಾವಾಗಲೂ ತುಂಬಿ ತುಳುಕಬೇಕು ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:26 pm, Sat, 6 June 26

Source link

ಮೊದಲ ಮಳೆಗೆ ಕೊಚ್ಚಿಹೋಯ್ತು ರಾಷ್ಟ್ರೀಯ ಹೆದ್ದಾರಿ!: ಮೂಡುಬಿದಿರೆ ಮಿಜಾರಿನಲ್ಲಿ NH-169 ರಸ್ತೆ ಕುಸಿತ – Kannada News

ಮಂಗಳೂರು, ಜೂ.6: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಈ ಮೊದಲು ಮಳೆಗೆ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ-169ರ (NH-169) ಅಭಿವೃದ್ಧಿ ಕಾಮಗಾರಿಯ ಅಸಲಿ ಗುಣಮಟ್ಟ ಬಯಲಾಗಿದೆ. ಮಂಗಳೂರಿನ ಮೂಡುಬಿದಿರೆ ಸಮೀಪದ ಮಿಜಾರು ಎಂಬಲ್ಲಿ ನೆನ್ನೆ (ಜೂ.5) ಸುರಿದ ಮಳೆಗೆ ಹೆದ್ದಾರಿಯ ಒಂದು ಭಾಗ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು, ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಕಾಮಗಾರಿಯು ತೀರಾ ಕಳಪೆ ಹಾಗೂ ಅವೈಜ್ಞಾನಿಕವಾಗಿ ನಡೆದಿರುವುದೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸ್ಥಳೀಯರ ಪ್ರಕಾರ, ಮಳೆನೀರಿನ ಭಾರಿ ಹರಿವನ್ನು ತಡೆದುಕೊಳ್ಳಲು ಈ ಸ್ಥಳದಲ್ಲಿ ದೊಡ್ಡ ಕಲ್ವರ್ಟ್ (ಚರಂಡಿ ಸೇತುವೆ) ನಿರ್ಮಿಸಬೇಕಾಗಿತ್ತು. ಆದರೆ, ಗುತ್ತಿಗೆ ಸಂಸ್ಥೆಯು ನಿಯಮಗಳನ್ನು ಗಾಳಿಗೆ ತೂರಿ ಅತ್ಯಂತ ಸಣ್ಣ ಕಲ್ವರ್ಟ್ ಅಳವಡಿಸಿದ್ದರಿಂದ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದಂತಾಗಿದೆ. ಪರಿಣಾಮವಾಗಿ, ಅಪಾರ ಪ್ರಮಾಣದ ಮಳೆನೀರು ರಸ್ತೆಯ ಪಕ್ಕದಲ್ಲಿ ಶೇಖರಣೆಗೊಂಡು, ಹೆದ್ದಾರಿಯ ಅಡಿಯಲ್ಲಿದ್ದ ಮಣ್ಣು ಮತ್ತು ಜಲ್ಲಿಕಲ್ಲುಗಳನ್ನು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದರಿಂದಾಗಿ ರಸ್ತೆಯ ಒಂದು ಭಾಗ ಕುಸಿದು ಬಿದ್ದಿದೆ. ತೆಂಕಮಿಜಾರು ಭಾಗದ ಇನ್ನು ಮೂರು ಕಡೆಗಳಲ್ಲಿ ಇಂತಹದ್ದೇ ಗಂಭೀರ ಸಮಸ್ಯೆಗಳು ಸೃಷ್ಟಿಯಾಗಿದ್ದು, ಹೆದ್ದಾರಿ ಕಾಮಗಾರಿಯ ಗುಣಮಟ್ಟದ ವಿರುದ್ಧ ದೊಡ್ಡ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಮಳೆರಾಯನ ಆರ್ಭಟ!: ಮಲ್ಲೇಶ್ವರಂ, ವಿಜಯನಗರದಲ್ಲಿ ಧಾರಾಕಾರ ಮಳೆ: ಜೂನ್ 11ರವರೆಗೆ ಈ ಭಾಗದಲ್ಲೂ ಭಾರಿ ಮಳೆ

ಮುಖ್ಯಾಂಶಗಳು:

  • ಮಂಗಳೂರಿನಲ್ಲಿ ಅಭಿವೃದ್ಧಿ ಕಾಮಗಾರಿಯ ಅಸಲಿ ಗುಣಮಟ್ಟ ಬಯಲಾಗಿದೆ
  • ನೆನ್ನೆ ಸುರಿದ ಮಳೆಗೆ ಹೆದ್ದಾರಿಯ ಒಂದು ಭಾಗ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ
  • ಈ ಅವೈಜ್ಞಾನಿಕ ಕಾಮಗಾರಿಗೆ ಹೆದ್ದಾರಿ ನಿರ್ಮಾಣದ ಉಸ್ತುವಾರಿ ಹೊತ್ತಿರುವ ‘ಡಿಬಿಎಲ್ ಕಂಪನಿ
  • ಹೆದ್ದಾರಿ ಕಾಮಗಾರಿಯ ಗುಣಮಟ್ಟದ ವಿರುದ್ಧ ದೊಡ್ಡ ಪ್ರಶ್ನೆಗಳು ಎದ್ದಿವೆ

ರಸ್ತೆಯ ಪಾಯವೇ ಕೊಚ್ಚಿಹೋಗಿ ಹೆದ್ದಾರಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದರೂ, ಅದೇ ಮಾರ್ಗದಲ್ಲಿ ಲಘು ಹಾಗೂ ವಾಣಿಜ್ಯ ವಾಹನಗಳ ಸಂಚಾರ ಮುಂದುವರಿದಿದೆ. ಹರಿಯುವ ನೀರಿನ ಮಧ್ಯೆಯೇ ಸವಾರರು ಪ್ರಾಣದ ಹಂಗು ತೊರೆದು ವಾಹನ ಚಲಾಯಿಸುತ್ತಿದ್ದಾರೆ. ಮಳೆ ಹೀಗೆಯೇ ಮುಂದುವರಿದರೆ ಈ ರಸ್ತೆಯಲ್ಲಿ ದೊಡ್ಡ ದುರಂತ ನಡೆಯಲಿದೆ. ಈ ಅವೈಜ್ಞಾನಿಕ ಕಾಮಗಾರಿಗೆ ಹೆದ್ದಾರಿ ನಿರ್ಮಾಣದ ಉಸ್ತುವಾರಿ ಹೊತ್ತಿರುವ ‘ಡಿಬಿಎಲ್ ಕಂಪನಿ’ಯೇ ನೇರ ಹೊಣೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು, ಮಳೆಗಾಲದ ಅವಧಿಯಲ್ಲಿ ಸಂಭವಿಸಬಹುದಾದ ಭೀಕರ ಅಪಘಾತಗಳನ್ನು ತಪ್ಪಿಸಲು ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಣ್ಣಾಮಲೈ ನಮ್ಮ ಪಕ್ಷದ ಕಾರ್ಯಕರ್ತರ ಬ್ರೈನ್ ವಾಶ್ ಮಾಡುತ್ತಿದ್ದಾರೆ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಆರೋಪ – Kannada News

ಚೆನ್ನೈ, ಜೂನ್ 6: ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಮಾಜಿ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ (Annamalai) ಅವರು ಬಿಜೆಪಿಗೆ ರಾಜೀನಾಮೆ ನೀಡಿದ ಮರುದಿನವೇ ತಮಿಳುನಾಡು ಬಿಜೆಪಿ ನೂತನ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ತೀವ್ರ ಆಪಾದನೆ ಮಾಡಿದ್ದಾರೆ. ಅಣ್ಣಾಮಲೈ ಬಿಜೆಪಿಯ ಕೆಲವು ಸದಸ್ಯರ ಬ್ರೈನ್‌ವಾಶ್ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಮಾಜಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ರಾಜೀನಾಮೆಯ ನಂತರ ಯಾರೊಬ್ಬರಿಗೂ ಪಕ್ಷ ತೊರೆಯಲು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೈನಾರ್ ನಾಗೇಂದ್ರನ್, ಬಿಜೆಪಿ ಕಾರ್ಯಕರ್ತರು ಯಾವುದೇ ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿದರು. “ಅಣ್ಣಾಮಲೈ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದು, ಅದನ್ನು ಪಕ್ಷವು ಅಂಗೀಕರಿಸಿದೆ. ಆದರೆ, ತಮಗೆ ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಅವರ ಆಶೀರ್ವಾದವಿದೆ ಎಂದು ಹೇಳಿಕೊಂಡು ರಾಜೀನಾಮೆ ನೀಡುವಂತೆ ನಮ್ಮ ಪಕ್ಷದ ಕೆಲವು ಸದಸ್ಯರ ಬ್ರೈನ್ ವಾಶ್ ಮಾಡಲಾಗುತ್ತಿದೆ. ಆದರೆ, ಯಾರೊಬ್ಬರಿಗೂ ರಾಜೀನಾಮೆ ನೀಡಲು ಹೈಕಮಾಂಡ್ ಅನುಮತಿ ನೀಡಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ರಾಜೀನಾಮೆ ನೀಡಿ ಬಂದ ಅಣ್ಣಾಮಲೈಗೆ ಭರ್ಜರಿ ಸ್ವಾಗತ, ಫ್ಯಾನ್ಸ್ ಹರ್ಷೋದ್ಘಾರ ಹೇಗಿದೆ ನೋಡಿ

ಬಿಜೆಪಿ ಕಾರ್ಯಕರ್ತರು ಯಾರ ಮಾತಿಗೂ ಮರುಳಾಗದೆ ರಾಜೀನಾಮೆ ನೀಡುವುದರಿಂದ ದೂರವಿರಬೇಕು ಎಂದು ನಾಗೇಂದ್ರನ್ ಮನವಿ ಮಾಡಿದ್ದಾರೆ. “ಬೇರೆ ಯಾವುದೇ ಮೂವ್‌ಮೆಂಟ್ ಅಥವಾ ಪಕ್ಷದ ಭಾಗವಾಗುವವರು ಬಿಜೆಪಿಯ ಸದಸ್ಯರಾಗಿ ಮುಂದುವರಿಯಲು ಸಾಧ್ಯವಿಲ್ಲ. ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ಹಿನ್ನಡೆಯಾಗಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೇನೂ ನಷ್ಟವಿಲ್ಲ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಲೇವಡಿ

ಬಿಜೆಪಿ ಮುಖಂಡ ನಿತಿನ್ ನಬಿನ್ ಅವರು ಅಣ್ಣಾಮಲೈ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವದ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಅಣ್ಣಾಮಲೈ ಅವರು ಇಷ್ಟು ವರ್ಷಗಳ ಕಾಲ ತಮಗೆ ಬೆಂಬಲ ನೀಡಿದ ಬಿಜೆಪಿ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ತಮಿಳುನಾಡಿನ ಹಿತಾಸಕ್ತಿಗಳ ಕುರಿತು ಪಕ್ಷದೊಂದಿಗೆ ಹೊಂದಿದ್ದ ಭಿನ್ನಾಭಿಪ್ರಾಯಗಳೇ ತಾವು ಪಕ್ಷದಿಂದ ಹೊರಬರಲು ಪ್ರಮುಖ ಕಾರಣ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೂಂ ಬಿಲ್ ಪಾವತಿಸಲು ಹಣವಿರಲಿಲ್ಲ; ಅರ್ಹತಾ ಸುತ್ತನ್ನಾಡಿ ಫೈನಲ್​ಗೇರಿದ ಚ್ವಾಲಿನ್ಸ್ಕ ಯಶೋಗಾಥೆ – Kannada News

2026 ರ ಫ್ರೆಂಚ್ ಓಪನ್ (French Open 2026) ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ನಡೆಯಲಿರುವ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ 24 ವರ್ಷದ ಪೋಲಿಷ್ ಟೆನಿಸ್ ಆಟಗಾರ್ತಿ ಮಜಾ ಚ್ವಾಲಿನ್ಸ್ಕ (Maja Chwalinska), ರಷ್ಯಾದ ಮೀರಾ ಆಂಡ್ರೀವಾ ಅವರನ್ನು ಎದುರಿಸಲಿದ್ದಾರೆ. ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ರಷ್ಯಾದ ಡಯಾನಾ ಶ್ನೈಡರ್ ಅವರನ್ನು 7-6(4), 6-4 ಸೆಟ್‌ಗಳಿಂದ ಸೋಲಿಸುವ ಮೂಲಕ ತಮ್ಮ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್​ಗೇರಿರುವ ಚ್ವಾಲಿನ್ಸ್ಕ, ತಮ್ಮ ಅದ್ಭುತ ಪ್ರದರ್ಶನದ ಮೂಲಕ ಟೆನಿಸ್ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅರ್ಹತಾ ಪಂದ್ಯಗಳನ್ನಾಡುವ ಮೂಲಕ ಫ್ರೆಂಚ್ ಓಪನ್‌ಗೆ ಅರ್ಹತೆ ಪಡೆದಿದ್ದ ಚ್ವಾಲಿನ್ಸ್ಕ ಈ ಹಂತಕ್ಕೆ ಬರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಕೆ ತನ್ನ ವೃತ್ತಿಜೀವನದಲ್ಲಿ ನಡೆದು ಬಂದ ಹಾದಿ ಸಾಧನೆಯ ಹಾದಿಯಲ್ಲಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ.

ಯಾರು ಪ್ರಾಯೋಜಕರಿರಲಿಲ್ಲ

ಫ್ರೆಂಚ್ ಓಪನ್ ಆಡುವ ಸಲುವಾಗಿ ಕಳೆದ ವಾರವಷ್ಟೆ ಪ್ಯಾರಿಸ್​ಗೆ ಬಂದಿಳಿದಿದ್ದ 114ನೇ ಶ್ರೇಯಾಂಕಿತ ಚ್ವಾಲಿನ್ಸ್ಕ ಅವರಿಗೆ ಯಾರು ಪ್ರಾಯೋಜಕರಿರಲಿಲ್ಲ. ಒಂದೊಳ್ಳೆ ಆದಾಯದ ಮೂಲವೂ ಇರಲಿಲ್ಲ. ಇದೆಲ್ಲದರಕ್ಕಿಂತ ಮಿಗಿಲಾಗಿ ಆಕೆಯ ಬಳಿ ತಾನು ತಂಗುವ ಹೋಟೆಲ್​ ರೂಮ್​ನ ಬಿಲ್ ಪಾವತಿಸಲು ಸಹ ಹಣವಿರಲಿಲ್ಲ. ಈ ಎಲ್ಲಾ ತೊಂದರೆಗಳ ನಡುವೆ ಚ್ವಾಲಿನ್ಸ್ಕ ಫ್ರೆಂಚ್ ಓಪನ್ ಕಣಕ್ಕಿಳಿಯಬೇಕಾದರೆ, ಅರ್ಹತಾ ಪಂದ್ಯಗಳನ್ನು ಗೆಲ್ಲಲೇಬೇಕಿತ್ತು. ಈ ಅರ್ಹತಾ ಪಂದ್ಯಗಳನ್ನು ಗೆದ್ದರೂ ಆಕೆಗೆ ಪಂದ್ಯಾವಳಿ ಮುಗಿದ ಬಳಿಕವಷ್ಟೇ ಬಹುಮಾನದ ಹಣ ಸಿಗುತ್ತಿತ್ತು. ಹೀಗಾಗಿ ಹೋಟೆಲ್​ ರೂಮ್ ಬಿಲ್ ಪಾವತಿಸಲು ಕಷ್ಟಪಡುತ್ತಿದ್ದ ಚ್ವಾಲಿನ್ಸ್ಕ ನೆರವಿಗೆ ಬಂದಿದ್ದ ಪೋಲಿಷ್ ಕ್ರೀಡಾ ಪಾನೀಯ ಬ್ರ್ಯಾಂಡ್ ಹೋಟೆಲ್ ಬಿಲ್ ಪಾವತಿಸಿತ್ತು.

ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಚ್ವಾಲಿನ್ಸ್ಕ

ಈ ಪಂದ್ಯಾವಳಿಗೂ ಮೊದಲು ತಮ್ಮ ಇಡೀ ವೃತ್ತಿಜೀವನದಲ್ಲಿ ಚ್ವಾಲಿನ್ಸ್ಕ, ಏಕೈಕ ಗ್ರ್ಯಾಂಡ್ ಸ್ಲ್ಯಾಮ್ ಮುಖ್ಯ ಡ್ರಾ ಪಂದ್ಯವನ್ನು ಗೆದ್ದಿದ್ದರು. 2021 ರಲ್ಲಿ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಚ್ವಾಲಿನ್ಸ್ಕ, 2022 ರಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆ ಬಳಿಕ ತನ್ನ ವೃತ್ತಿಜೀವನವನ್ನು ಕಟ್ಟಿಕೊಳ್ಳುವ ಸಲುವಾಗಿ ಯುರೋಪಿನಾದ್ಯಂತ ಸಣ್ಣ ಪಂದ್ಯಾವಳಿಗಳನ್ನು ಆಡುತ್ತಿದ್ದ ಚ್ವಾಲಿನ್ಸ್ಕ ಇದೀಗ ಪ್ಯಾರಿಸ್ ನೆಲದಲ್ಲಿ ಇತಿಹಾಸ ಸೃಷ್ಟಿಸುವ ಸನಿಹದಲ್ಲಿದ್ದಾರೆ.

ಈ ಸಾಧನೆ ಮಾಡಿದ ಎರಡನೇ ಆಟಗಾರ್ತಿ

ಈ ಪಂದ್ಯಾವಳಿಯಲ್ಲಿ ಚ್ವಾಲಿನ್ಸ್ಕ ಇದುವರೆಗೆ ಒಟ್ಟು ಒಂಬತ್ತು ಪಂದ್ಯಗಳನ್ನು ಗೆದ್ದಿದ್ದಾರೆ. ಇದರಲ್ಲಿ ಅರ್ಹತಾ ಸುತ್ತಿನಲ್ಲಿ ಮೂರು ಪಂದ್ಯಗಳು ಮತ್ತು ಮುಖ್ಯ ಡ್ರಾದಲ್ಲಿ ಆರು ಪಂದ್ಯಗಳು ಸೇರಿವೆ. ಈ ಮೂಲಕ ಚ್ವಾಲಿನ್ಸ್ಕ ಅರ್ಹತಾ ಪಂದ್ಯಗಳನ್ನಾಡುವ ಮೂಲಕ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ತಲುಪಿದ ಎರಡನೇ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಇವರಿಗಿಂತ ಮೊದಲು, ಬ್ರಿಟನ್‌ನ ಎಮ್ಮಾ ರಾಡುಕಾನು 2021 ರ ಯುಎಸ್ ಓಪನ್‌ನಲ್ಲಿ ಈ ಸಾಧನೆ ಮಾಡುವುದರ ಜೊತೆಗೆ ಪ್ರಶಸ್ತಿಯನ್ನು ಗೆದ್ದಿದ್ದರು.

14 ನೇ ಸ್ಥಾನಕ್ಕೇರುವ ಅವಕಾಶ

ಇದೀಗ ಫೈನಲ್ ಪಂದ್ಯದಲ್ಲಿ ಚ್ವಾಲಿನ್ಸ್ಕ ಎಂಟನೇ ಶ್ರೇಯಾಂಕದ ಮೀರಾ ಆಂಡ್ರೀವಾ ಅವರನ್ನು ಎದುರಿಸಲಿದ್ದಾರೆ. ಇದು ಇಬ್ಬರು ಆಟಗಾರ್ತಿಯರ ನಡುವಿನ ಮೊದಲ ಮುಖಾಮುಖಿಯಾಗಲಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಚ್ವಾಲಿನ್ಸ್ಕ, 2026 ರ ಫ್ರೆಂಚ್ ಓಪನ್ ಪ್ರಾರಂಭವಾಗುವ ಮೊದಲು ಮಹಿಳಾ ಸಿಂಗಲ್ಸ್ ವಿಶ್ವ ಶ್ರೇಯಾಂಕದಲ್ಲಿ 114 ನೇ ಸ್ಥಾನದಲ್ಲಿದ್ದರು. ಇದೀಗ ಅವರು ಫ್ರೆಂಚ್ ಓಪನ್ ಗೆದ್ದರೆ, ತಮ್ಮ ಶ್ರೇಯಾಂಕದಲ್ಲಿ 100 ಸ್ಥಾನಗಳನ್ನು ಜಿಗಿದು 14 ನೇ ಸ್ಥಾನಕ್ಕೇರಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:10 pm, Sat, 6 June 26

Source link

ಗಂಡ-ಹೆಂಡತಿ ಪರಸ್ಪರ ಈ ವಿಷಯಗಳನ್ನು ಮುಚ್ಚಿಡಲೇಬಾರದು; ಏಕೆ ಗೊತ್ತಾ? – Kannada News

ಗಂಡ ಹೆಂಡತಿಯ ಸಂಬಂಧ (Relationship) ಪ್ರೀತಿ, ನಂಬಿಕೆ, ಗೌರವ, ಪ್ರಾಮಾಣಿಕತಯ ಮೇಲೆ ನಿಂತಿರುವ ಪವಿತ್ರ ಬಂಧ. ಈ ಸಂಬಂಧ ಶಾಶ್ವತವಾಗಿ ಗಟ್ಟಿಯಾಗಿರಬೇಕೆಂದರೆ ಪತಿ ಪತ್ನಿಯರ ನಡುವೆ ಯಾವುದೇ ರೀತಿಯ ಮುಚ್ಚುಮರೆ ಎನ್ನುವಂತಹದ್ದು ಇರಬಾರದು. ಯಾವುದೇ ವಿಚಾರಗಳನ್ನು ಒಬ್ಬರಿಗೊಬ್ಬರು ರಹಸ್ಯವಾಗಿಡಬಾರದು. ಮನಸ್ಸಿನಲ್ಲಿರುವ ಎಲ್ಲವನ್ನೂ  ಮುಕ್ತವಾಗಿ ಹಂಚಿಕೊಳ್ಳಬೇಕು. ಬಹಳಷ್ಟು ವಿಷಯಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡರೆ ಅಥವಾ ಸುಳ್ಳು ಹೇಳಿದರೆ ಕಾಲ ಕಳೆದಂತೆ ಸಂಬಂಧದಲ್ಲಿ ಬಿರುಕು ಮೂಡಲು ಪ್ರಾರಂಭವಾಗುತ್ತದೆ. ಹಾಗಾಗಿ ಯಾವುದೇ ಸಮಸ್ಯೆಗಳಿದ್ದರೂ, ಏನನ್ನೂ ಮರೆಮಾಡದೆ ಎಲ್ಲವನ್ನೂ ಸಂಗಾತಿಯೊಂದಿಗೆ ಹಂಚಿಕೊಳ್ಳಬೇಕು. ಅದರಲ್ಲೂ ಈ ಕೆಲವು ವಿಚಾರಗಳನ್ನು ಗಂಡ ಹೆಂಡತಿ ಪರಸ್ಪರ ಮರೆಮಾಡಲೇಬಾರದು.

ದಂಪತಿಗಳು ಯಾವ ಸಂಗತಿಗಳನ್ನು ಪರಸ್ಪರ ಮುಚ್ಚಿಡಬಾರದು?

ಆರ್ಥಿಕ ಪರಿಸ್ಥಿತಿ ಅಥವಾ ಸಾಲಗಳು: ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನಿಮ್ಮ ಸಂಗಾತಿಯಿಂದ ಮರೆಮಾಡುವುದು ದೊಡ್ಡ ತಪ್ಪಾಗಿರಬಹುದು. ನೀವು ಯಾವುದೇ ಉದ್ದೇಶಕ್ಕಾಗಿ ಬೇರೆಯವರಿಂದ ಹಣವನ್ನು ಸಾಲ ಪಡೆದರೆ, ನೀವು ಅದನ್ನು ನಿಮ್ಮ ಸಂಗಾತಿಗೆ ಬಹಿರಂಗವಾಗಿ ಹಂಚಿಕೊಳ್ಳಿ. ಅನೇಕ ಜನರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸುಳ್ಳು ಹೇಳುತ್ತಾರೆ. ಆದರೆ ಸತ್ಯ ಹೊರಬಂದಾಗ, ಸಂಗಾತಿಯ ಮೇಲಿನ ನಂಬಿಕೆ ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಆರ್ಥಿಕ ಪರಿಸ್ಥಿತಿಯ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುವುದರಿಂದ ನಿಮ್ಮ ಸಂಗಾತಿಯೂ ನಿಮಗೆ ಹೆಗಲಾಗಿ ನಿಲ್ಲುತ್ತಾರೆ. ಇದು ನಿಮ್ಮ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುತ್ತದೆ.

ಆರೋಗ್ಯ ಸಂಬಂಧಿತ ಸಮಸ್ಯೆಗಳು: ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳು ಅಥವಾ ಭಯಗಳಿದ್ದರೆ, ನೀವು ಖಂಡಿತವಾಗಿಯೂ ನಿಮ್ಮ ಸಂಗಾತಿಗೆ ಅವುಗಳ ಬಗ್ಗೆ ಹೇಳಬೇಕು. ಉದಾಹರಣೆಗೆ, ನಿಮಗೆ ದೀರ್ಘಕಾಲದ ಕಾಯಿಲೆ, ಅಲರ್ಜಿಗಳು ಅಥವಾ ಇನ್ನಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ನೀವು ಅವುಗಳನ್ನು ನಿಮ್ಮ ಸಂಗಾತಿಯಿಂದ ಮರೆಮಾಡಬಾರದು. ನಿಮ್ಮ ಸಂಗಾತಿಗೆ ನಿಮ್ಮ ಬಗ್ಗೆ ತಿಳಿದಿದ್ದರೆ, ಅವರು ನಿಮ್ಮನ್ನು ಸರಿಯಾಗಿ ನೋಡಿಕೊಳ್ಳಬಹುದು, ಇದು ನಿಮ್ಮ ಆರೋಗ್ಯ ಸುಧಾರಿಸಲು ಮತ್ತಷ್ಟು ಸಹಾಯ ಮಾಡುತ್ತದೆ.

ಮಾನಸಿಕ ಸ್ಥಿತಿಗತಿ: ಹೆಚ್ಚಿನವರು ತಮಗಾಗುವ ಒತ್ತಡ, ಮಾನಸಿಕ ಹಿಂಸೆಯ ಬಗ್ಗೆ ತಮ್ಮ ಸಂಗಾತಿಯ ಬಳಿ ಹಂಚಿಕೊಳ್ಳುವುದಿಲ್ಲ. ಇದು ಒತ್ತಡ ಮತ್ತಷ್ಟು ಹೆಚ್ಚಲು ಕಾರಣವಾಗುತ್ತದೆ. ಅದೇ ಗಂಡ ಹೆಂಡತಿ ಚಿಂತೆ ಮತ್ತು ಒತ್ತಡಗಳನ್ನು ಪರಸ್ಪರ ಹಂಚಿಕೊಂಡಾಗ ಮನಸ್ಸು ನಿರಾಳವಾಗುತ್ತದೆ. ಅಲ್ಲದೆ ಬೆಂಬಲಕ್ಕೆ ಸಹಾಯಾಸ್ತವು ಸಿಕ್ಕಂತಾಗುತ್ತದೆ. ಅಲ್ಲದೆ ಇಂತಹ ಕಠಿಣ ಪರಿಸ್ಥಿತಿಗಳು ಗಂಡ ಹೆಂಡತಿಯ ನಡುವಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸುತ್ತದೆ.

ಇದನ್ನೂ ಓದಿ: ಗಂಡ ಹೆಂಡತಿ ನಡುವಿನ ಜಗಳಗಳಿಗೆ ನಿಜವಾದ ಕಾರಣವೇ ಅಂಶಗಳು

ನಿರೀಕ್ಷೆಗಳು, ಅಭ್ಯಾಸಗಳು: ಸಂಗಾತಿಯಿಂದ ನೀವು ಏನು ನಿರೀಕ್ಷಿಸುತ್ತೀರಿ ಮತ್ತು ಮುಖ್ಯವಾಗಿ ನಿಮ್ಮ ನಿರೀಕ್ಷೆಗಳೇನು ಅದನ್ನು ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ಇದಲ್ಲದೆ ಡ್ರಿಂಕ್ಸ್‌, ಸ್ಮೋಕ್‌ ಯಾವುದೇ ನಿಮ್ಮ ಅಭ್ಯಾಸಗಳಿದ್ದರೂ ಅದರ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಿ. ಇದು ಮೂರನೇ ವ್ಯಕ್ತಿಯ ಮೂಲಕ ನಿಮ್ಮ ಸಂಗಾತಿಗೆ ತಿಳಿದರೆ ಮನಸ್ತಾಪ ಎರ್ಪಡಲು ಕಾರಣವಾಗುತ್ತದೆ.

ಅಭದ್ರತೆ: ನಿಮ್ಮ ಸಂಗಾತಿಯ ನಡವಳಿಕೆಯು ನಿಮಗೆ ಅಸುರಕ್ಷಿತ ಭಾವನೆಯನ್ನುಂಟುಮಾಡಿದರೆ, ಅದರ ಬಗ್ಗೆ ಮೌನವಾಗಿರುವುದು ತಪ್ಪು. ಅನೇಕ ಜನರು ಈ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ. ಇದು ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಅಭದ್ರತೆಯ ಭಾವನೆ ಮೂಡಿದರೆ ಈ ಬಗ್ಗೆ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ, ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಿ.

ನಿಮ್ಮ ಕನಸಿನ ಬಗ್ಗೆ ಹೇಳಿಕೊಳ್ಳಿ: ನಿಮ್ಮ ಸಂಗಾತಿಗೆ ನೀವು ಜೀವನದಲ್ಲಿ ಏನನ್ನು ಕನಸು ಕಾಣುತ್ತಿದ್ದೀರಿ ಅಥವಾ ಏನನ್ನು ಸಾಧಿಸಲು ಬಯಸುತ್ತೀರಿ ಎಂಬುದನ್ನು ಹೇಳುವುದು ಮುಖ್ಯ. ನಿಮ್ಮ ಕನಸುಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಂಡಾಗ ಅವರು ಆ ಕನಸುಗಳನ್ನು ನನಸಾಗಿಸಲು ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ.

ಇದಲ್ಲದೆ ಹಿಂದಿನ ಸಂಬಂಧ, ಕುಟುಂಬ ಪರಿಸ್ಥಿತಿ, ಆರ್ಥಿಕ ಸ್ಥಿತಿ ಇವೆಲ್ಲವನ್ನೂ ಮೊದಲೇ ಸಂಗಾತಿ ಹೇಳಬೇಕು. ಇಲ್ಲದಿದ್ದರೆ ಈ ಕಾರಣದಿಂದ ಭವಿಷ್ಯದಲ್ಲಿ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹರಿಹರ ಪಂಚಮಸಾಲಿ ಮಠಕ್ಕೆ ಭಕ್ತರು ನೀಡಿದ್ದ 1 ಕೆ.ಜಿ ಚಿನ್ನ ನಾಪತ್ತೆ: ಟ್ರಸ್ಟಿಗಳ ಮೇಲೆ ಸೋಮಣ್ಣ ಬೇವಿನಮರ ಗಂಭೀರ ಆರೋಪ – Kannada News

ದಾವಣಗೆರೆ, ಜೂ.6: ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿ ಬಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಗಡಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಸೋಮಣ್ಣ ಬೇವಿನಮರದ ಅವರು ಹರಿಹರ ಪಂಚಮಸಾಲಿ ಮಠದ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಠಕ್ಕೆ ಸೇರಿದ ಸುಮಾರು ಒಂದೂವರೆ ಕೆಜಿ ಚಿನ್ನಾಭರಣಗಳ ಲೆಕ್ಕವೇ ನಾಪತ್ತೆಯಾಗಿದ್ದು, ಟ್ರಸ್ಟಿಗಳು ಈ ಸತ್ಯವನ್ನು ಮುಚ್ಚಿಟ್ಟಿದ್ದಾರೆ ಎಂದು ಅವರು ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಣ್ಣ ಬೇವಿನಮರದ, “2008ರ ಫೆಬ್ರವರಿ 18ರಂದು ಹರಿಹರದ ಪಂಚಮಸಾಲಿ ಮಠ ಸ್ಥಾಪನೆಯಾಗಿತ್ತು. ಆ ದಿನ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಮಠದ ಶ್ರೀಗಳಿಗೆ ಚಿನ್ನದ ಉಂಗುರ, ಚಿನ್ನದ ಕಡಗ ಹಾಗೂ ಭವ್ಯವಾದ ಚಿನ್ನದ ಕಿರೀಟ ಸೇರಿದಂತೆ ಸುಮಾರು ಒಂದೂವರೆ ಕೆಜಿ ಚಿನ್ನಾಭರಣಗಳನ್ನು ದಾನವಾಗಿ ನೀಡಿದ್ದರು. ಇತ್ತೀಚೆಗೆ ನಾವು ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡಾಗ ಅಂದು ದಾನ ನೀಡಿದ್ದ ಭಕ್ತರು ಈ ವಿಷಯವನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಸ್ವಾಮೀಜಿಯವರಿಗೆ ನೀಡಲಾಗಿದ್ದ ಈ ಎಲ್ಲ ಆಭರಣಗಳನ್ನು ಸದ್ಯ ಮಠದ ಟ್ರಸ್ಟ್‌ನವರೇ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಮುಖ್ಯಾಂಶಗಳು:

  • ಮಠಕ್ಕೆ ಸೇರಿದ ಸುಮಾರು ಒಂದೂವರೆ ಕೆಜಿ ಚಿನ್ನಾಭರಣಗಳ ಲೆಕ್ಕವೇ ನಾಪತ್ತೆ
  • ಭಕ್ತರು ಮಠದ ಶ್ರೀಗಳಿಗೆ ಚಿನ್ನದ ಉಂಗುರ, ಚಿನ್ನದ ಕಡಗ ಹಾಗೂ ಭವ್ಯವಾದ ಚಿನ್ನದ ಕಿರೀಟ
  • ಟ್ರಸ್ಟ್‌ನವರು ಸದ್ಯ ಕೇವಲ 27 ಕೋಟಿ ರೂಪಾಯಿಗಳ ನಗದು ಲೆಕ್ಕವನ್ನು ಮಾತ್ರ ಸಮಾಜದ ಮುಂದೆ ಇಟ್ಟಿದ್ದಾರೆ.

ಇದನ್ನೂ ಓದಿ:ವಚನಾನಂದ ಶ್ರೀಗಳಿಗೆ ಹೆಚ್ಚಿದ ಬಂಧನದ ಭೀತಿ: ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರ್ಟ್‌ಗೆ ಹರಿಹರ ಪೊಲೀಸರ ಅರ್ಜಿ!

ಮಠದ ಆಸ್ತಿ ವಿವರಗಳ ಕುರಿತು ಅಸಮಾಧಾನ ಹೊರಹಾಕಿದ ಅವರು, “ಈಗಾಗಲೇ ಪಂಚಮಸಾಲಿ ಮಠದ ಆಂತರಿಕ ವಿಚಾರವಾಗಿ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಪ್ರಮುಖ ಸಭೆಗಳು ನಡೆದಿವೆ. ಟ್ರಸ್ಟ್‌ನವರು ಸದ್ಯ ಕೇವಲ 27 ಕೋಟಿ ರೂಪಾಯಿಗಳ ನಗದು ಲೆಕ್ಕವನ್ನು ಮಾತ್ರ ಸಮಾಜದ ಮುಂದೆ ಇಟ್ಟಿದ್ದಾರೆ. ಆದರೆ, ಈ ಬಂಗಾರದ ವಿಚಾರವನ್ನು ಸಂಪೂರ್ಣವಾಗಿ ಮುಚ್ಚಿಟ್ಟಿದ್ದಾರೆ. ಮಠದ ಹೆಸರಿನಲ್ಲಿರುವ ಒಟ್ಟು ಬೆಳ್ಳಿ, ಬಂಗಾರ ಎಷ್ಟು? ಮಠಕ್ಕೆ ಸೇರಿದ ಜಮೀನು ಎಲ್ಲೆಲ್ಲಿದೆ? ಈ ಎಲ್ಲ ಅಧಿಕೃತ ದಾಖಲೆಗಳನ್ನು ಟ್ರಸ್ಟ್‌ನವರು ತಕ್ಷಣವೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು” ಎಂದು ಆಗ್ರಹಿಸಿದ್ದಾರೆ. ಈ ಸ್ಪೋಟಕ ಹೇಳಿಕೆಯು ಪಂಚಮಸಾಲಿ ಸಮುದಾಯ ಹಾಗೂ ಧಾರ್ಮಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಬ್ಲೂ ಸ್ಟಾರ್ ವರ್ಷಾಚರಣೆ; ಗೋಲ್ಡನ್ ಟೆಂಪಲ್​ನಲ್ಲಿ ಖಲಿಸ್ತಾನ್ ಪರ ಘೋಷಣೆ, ಪೋಸ್ಟರ್ ಪ್ರದರ್ಶನ – Kannada News

ಅಮೃತಸರ, ಜೂನ್ 6: ಅಮೃತಸರದ ಸುವರ್ಣ ಮಂದಿರದಲ್ಲಿ (Golden Temple) ಇಂದು ಆಚರಿಸಲಾದ ‘ಆಪರೇಷನ್ ಬ್ಲೂ ಸ್ಟಾರ್’ನ 42ನೇ ವರ್ಷಾಚರಣೆಯ ಸಂದರ್ಭದಲ್ಲಿ ಖಲಿಸ್ತಾನ್ ಪರ ಘೋಷಣೆಗಳು ಮತ್ತು ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗಿದೆ. ಗೋಲ್ಡನ್ ಟೆಂಪಲ್ ಸಂಕೀರ್ಣದಲ್ಲಿ ನೆರೆದಿದ್ದ ನೂರಾರು ಸಿಖ್ ಧರ್ಮದವರು ‘ಖಲಿಸ್ತಾನ್ ಜಿಂದಾಬಾದ್’ ಎಂಬ ದೇಶವಿರೋಧಿ ಘೋಷಣೆಗಳನ್ನು ಕೂಗಿದರು. 1984ರ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತನಾದ ಉಗ್ರಗಾಮಿ ಸಂಘಟನೆ ದಮ್ದಮಿ ತಕ್ಸಾಲ್‌ನ ಮುಖ್ಯಸ್ಥ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ, ಭಾಯ್ ಅಂಬ್ರಿಕ್ ಸಿಂಗ್ ಮತ್ತು ಮೇಜರ್ ಜನರಲ್ ಶಬೇಗ್ ಸಿಂಗ್ ಅವರ ಪೋಸ್ಟರ್‌ಗಳನ್ನು ಹಿಡಿದು ಪ್ರದರ್ಶಿಸಲಾಯಿತು ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು.

ಈ ಘೋಷಣೆ ಕೂಗುವ ವೇಳೆ ಕೆಲವು ಯುವಕರು ಸಾಂಪ್ರದಾಯಿಕ ಖಡ್ಗಗಳನ್ನು ಗಾಳಿಯಲ್ಲಿ ಬೀಸಿ ಪ್ರದರ್ಶನ ನಡೆಸಿದರು. ಅಕಾಲ ತಖ್ತ್‌ನ ಜತೇದಾರ್ ಆಗಿರುವ ಗಿಯಾನಿ ಕುಲದೀಪ್ ಸಿಂಗ್ ಗರಗಜ್ ಅವರು ಈ ಸಂದರ್ಭದಲ್ಲಿ ಸಿಖ್ ಸಮುದಾಯವನ್ನುದ್ದೇಶಿಸಿ ಸಂದೇಶ ನೀಡಿದರು. ವಿದೇಶಗಳಲ್ಲಿ ನೆಲೆಸಿರುವ ಸಿಖ್ ಸಮುದಾಯದವರು ಪಂಜಾಬ್‌ನೊಂದಿಗೆ ತಮ್ಮ ಸಂಪರ್ಕವನ್ನು ಕಾಯ್ದುಕೊಳ್ಳಬೇಕು ಮತ್ತು ಬೇರೆಡೆ ನೆಲೆಸಿದ್ದರೂ ಪಂಜಾಬ್‌ನಲ್ಲಿರುವ ತಮ್ಮ ಜಮೀನುಗಳನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಆಪರೇಷನ್ ಬ್ಲೂ ಸ್ಟಾರ್ ಒಂದು ಮಿಸ್ಟೇಕ್, ಇಂದಿರಾ ಗಾಂಧಿ ತಮ್ಮ ಜೀವವನ್ನೇ ತೆತ್ತರು; ಪಿ. ಚಿದಂಬರಂ

1984ರಲ್ಲಿ ಭಾರತೀಯ ಸೇನೆಯು ಗೋಲ್ಡನ್ ಟೆಂಪಲ್ ಒಳಗೆ ಟ್ಯಾಂಕ್ ಮತ್ತು ಆಯುಧಗಳನ್ನು ಬಳಸಿ ದಾಳಿ ನಡೆಸಿದ್ದು ಸಿಖ್ ಇತಿಹಾಸದ ಕಪ್ಪು ಅಧ್ಯಾಯ ಎಂದು ಆರೋಪಿಸಿದರು

ಆಪರೇಷನ್ ಬ್ಲೂ ಸ್ಟಾರ್ ಎಂದರೇನು?:

ಜೂನ್ 1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆದೇಶದ ಮೇರೆಗೆ ಭಾರತೀಯ ಸೇನೆಯು ಅಮೃತಸರದ ಸುವರ್ಣ ಮಂದಿರದೊಳಗೆ ಅಡಗಿದ್ದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಆತನ ಸಶಸ್ತ್ರ ಉಗ್ರಗಾಮಿಗಳನ್ನು ಹೊರಹಾಕಲು ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆ ನಡೆಸಿತ್ತು. ಭಿಂದ್ರನ್‌ವಾಲೆ ಸುವರ್ಣ ಮಂದಿರದ ಆವರಣದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದನೆಂದು ವರದಿಯಾಗಿತ್ತು. ಈ ಕಾರ್ಯಾಚರಣೆಯ ಸಮಯದಲ್ಲಿ ಆತ ಮತ್ತು ಆತನ ಸಶಸ್ತ್ರ ಬೆಂಬಲಿಗರು ಹತರಾಗಿದ್ದ. ಆದರೆ, ಈ ದಾಳಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಇದನ್ನೂ ಓದಿ: Watch ಆಪರೇಷನ್ ಬ್ಲೂಸ್ಟಾರ್​​ನ 38ನೇ ವಾರ್ಷಿಕೋತ್ಸವ ವೇಳೆ ಸ್ವರ್ಣ ಮಂದಿರದಲ್ಲಿ ಖಲಿಸ್ತಾನ್ ಪರ ಘೋಷಣೆ

ಈ ಜೂನ್ 6ರಂದು ಭಿಂದ್ರನ್‌ವಾಲೆ ಹತನಾಗಿದ್ದ ದಿನವನ್ನು ಪ್ರತಿ ವರ್ಷ ಸಿಖ್ ಹಾರ್ಡ್‌ಲೈನರ್‌ಗಳು ಆಚರಿಸುತ್ತಾ ಬಂದಿದ್ದಾರೆ. ಇದಾಗಿ ಕೆಲವೇ ತಿಂಗಳುಗಳ ನಂತರ, ಅಂದರೆ ಅಕ್ಟೋಬರ್ 31, 1984ರಂದು ಪ್ರಧಾನಿ ಇಂದಿರಾ ಗಾಂಧಿ ಅವರನ್ನು ನವದೆಹಲಿಯ ಅವರ ಅಧಿಕೃತ ನಿವಾಸದಲ್ಲಿ ಅವರದೇ ಇಬ್ಬರು ಸಿಖ್ ಅಂಗರಕ್ಷಕರಾದ ಬೀಯಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮ್ಯಾಂಗೊ ಪಚ್ಚ’ ಕಟೌಟ್​​ನಲ್ಲಿ ನಟ ದರ್ಶನ್ ಚಿತ್ರ: ಸುದೀಪ್ ಹೇಳಿದ್ದೇನು?

ಸುದೀಪ್ (Sudeep) ಅವರ ಅಕ್ಕನ ಮಗ ಸಂಚಿತ್ ಸಂಜಯ್ ನಟನೆಯ ‘ಮ್ಯಾಂಗೊ ಪಚ್ಚ’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾದ ಕಟೌಟ್​​ನಲ್ಲಿ ಕನ್ನಡ ಚಿತ್ರರಂಗದ ಎಲ್ಲ ಪ್ರಮುಖ ನಟರ ಚಿತ್ರಗಳನ್ನು ಹಾಕಲಾಗಿದ್ದು, ಕಟೌಟ್​​ನಲ್ಲಿ ದರ್ಶನ್ ಜೊತೆಗೆ ಸುದೀಪ್ ಅವರ ಚಿತ್ರವೂ ಇದೆ. ಈ ಕುರಿತು ನಟ ಸುದೀಪ್ ಅವರಿಗೆ ಪ್ರಶ್ನೆ ಎದುರಾಯ್ತು. ಉತ್ತರ ನೀಡಿದ ಸುದೀಪ್, ಕಟೌಟ್​​ನಲ್ಲಿ ದರ್ಶನ್ ಚಿತ್ರ ಹಾಕಬೇಕೆಂಬುದು ತಮ್ಮದೇ ಐಡಿಯಾ ಎಂದರು. ಮತ್ತು ಏಕೆ ಕಟೌಟ್​​ನಲ್ಲಿ ದರ್ಶನ್ ಮಾತ್ರವಲ್ಲದೆ ಎಲ್ಲರ ಚಿತ್ರಗಳನ್ನೂ ಹಾಕಿಸಿದ್ದು ಎಂಬುದಕ್ಕೂ ಸಹ ಸೂಕ್ತ ವಿವರಣೆಯನ್ನು ನೀಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link